ಮಿತ್ರರಾದ ಮಲ್ಲಿಕಾರ್ಜುನ ತಂಕದ್ ಪರಿಚಯಿಸಿದ್ದ ಪೋಲೆಂಡ್ ದೇಶದ ಖ್ಯಾತ ಸಂಶೋಧಕ, ಯುರೋಪಿಯನ್ ರಿಸರ್ಚ್ ಕೌನ್ಸಿಲ್, ಕೋರ್ ಕಾನ್ಸೆಪ್ಟ್ಸ್ ಆಫ್ ಹಿಸ್ಟಾರಿಕಲ್ ಥಿಂಕಿಂಗ್ ನ ಪ್ರಿನ್ಸಿಪಾಲ್ ಇನ್ವೆಸ್ಟಿಗೇಟರ್ ಆಗಿರುವ ಪ್ರೊ. ಕ್ರಾಗ್ ನನ್ನ ಭಾರತ ಒಂದು ಮರುಶೋಧನೆಯ ಇಂಗ್ಲಿಷ್ ಕರಡನ್ನು ಓದಿ ಬರೆದದ್ದು.
"ನಾನು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೆಮಿನಾರ್ ಕೊಟ್ಟಾಗ ನನ್ನೊಟ್ಟಿಗೆ ಮೆಥಾಡಿಕಲ್ ಮತ್ತು ಸೈದ್ಧಾಂತಿಕ ಚೌಕಟ್ಟಿನಲ್ಲಿ ಕೆಲಸ ಮಾಡಬಲ್ಲ ಸ್ಕಾಲರ್ಸ್ ಸಿಗುವರೇ ಎಂದು ನೋಡುತ್ತಿದ್ದೆ. ಮೂಲತಃ ನಾನು ಸ್ಕಾಲರ್ಗಳೊಂದಿಗೆ ಸುದೀರ್ಘವೂ, ಕಠಿಣವೂ ಆದ ಚರ್ಚೆ/ಸಂವಾದ, ಆಕರ/ಪರಿಕರಗಳ ಪರೀಕ್ಷೆ, ಮತ್ತವುಗಳ ದಾಖಲಾತಿ, ಚರಿತ್ರೆ ಮತ್ತು ವಾಸ್ತವಗಳ ನಡುವಿನ ಕೊಂಡಿಗಳ ಸುದೀರ್ಘ ವಿಶ್ಲೇಷಣೆ, ಟಿಪ್ಪಣಿ ಬರೆದಿಡುವುದು ಮುಂತಾದ ಒಂದು ಕಠಿಣತಮ ಆದರೆ ಕುತೂಹಲಕರವಾದ ಸಂಶೋಧನೆಗಳಿಗೆ ತಮ್ಮನ್ನು ಒಗ್ಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮಂಡಿಸಬಹುದಾದ ಗುಣಮಟ್ಟದ ಸಂಶೋಧನೆಗೆ ಸಹಕಾರಿಯಾಗಬಲ್ಲ ಭಾರತೀಯ ಮೂಲದ ಪಂಡಿತರಿಗಾಗಿ ಹುಡುಕುತ್ತಿರುವೆ.
ನಿಮ್ಮ ಭಾರತ ಒಂದು ಮರುಶೋಧನೆಯ ಇಂಗ್ಲಿಷ್ ಕರಡು ಓದಿದ ನಂತರ ನೀವು ನನ್ನೊಟ್ಟಿಗೆ ಕೆಲವು ಸಂಶೋಧನೆಗಳ ಮೇಲೆ ಕೆಲಸ ಮಾಡಲು ಅರ್ಹ ವ್ಯಕ್ತಿಯೆನಿಸಿದ್ದೀರಿ. ನಿಮ್ಮ ಭಾಷಾ ಪರಿಣಿತಿ, ಸಂಶೋಧನಾ ಆಸಕ್ತಿ, ಮತ್ತು ತಮ್ಮ ನಿತ್ಯದ ಕೆಲಸದ ನಡುವೆಯೂ ಬರೆಯಲು ತೋರುವ ಬದ್ಧತೆ ನನ್ನ ಗಮನ ಸೆಳೆದಿವೆ. ಆದರೆ ನೀವು ನಾನು ಕೊಡುವ ಪ್ರಾಜೆಕ್ಟ್ ಕುರಿತಾದ ವಿಷಯಗಳ ಪಾಂಡಿತ್ಯದ ಮಜಲುಗಳನ್ನು ಮೊದಲು ನನ್ನಿಂದ ಕಲಿಯಬೇಕೆಂದು ನಿಷ್ಠುರವಾಗಿ ಹೇಳಬಯಸುವೆ.
ಮೇಲೆ ತಿಳಿಸಿದ ವಿಷಯಗಳು, ನಾನು ಕೊಡುವ ವಿಷಯದ ಬಗ್ಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಬದ್ಧತೆ ಮತ್ತು ನನ್ನೊಟ್ಟಿಗೆ ಸಂಶೋಧನೆಯ ಹೊಸ ಹೊಳಹುಗಳನ್ನು ಕಲಿಯಬೇಕೆಂದು ತಮಗೆ ಆಸಕ್ತಿಯಿದ್ದರೆ ತಿಳಿಸಿ."
ಇದು ನನ್ನ ಕನಸಿನ ಇಷ್ಟದ ಕೆಲಸ! ಆದರೆ ಈಗಿರುವ ನನ್ನ ಸಾಂಸಾರಿಕ ಒತ್ತಡಗಳ ನಡುವೆ ಇದು ಒಪ್ಪಿಕೊಳ್ಳಲಾಗದ ಕೆಲಸವಾದರೂ ನನ್ನಂತಹ ಶೈಕ್ಷಣಿಕೇತರ ಕುತೂಹಲಿಗೆ ಇದು ಬಹು ದೊಡ್ಡ ಗೌರವ!
No comments:
Post a Comment