ಕನ್ನಡದ ಎಲ್ಲ ದಡ್ಡ-ದಡ್ಡಿಯರ ಬುದ್ಧಿಗೆ ಗ್ರಾಸವಾಗುವಂತಹ ಕರಿಬೇವಿನ ಕಹಿ ಮೇವು (Kannada Thoughts from Lincoln's Land!)
ಗ್ರೇಟಾ ಬಾಟಾ!
ಒಂದೇ ದಿನದ ಅಂತರದಲ್ಲಿ ಗ್ರೇಟಾ ಟ್ವೀಟಿಸಿದ ಗೂಗಲ್ ಡಾಕು ಕಣ್ಮರೆಯಾಯಿತು. ರಿಹಾನಾಳ ಟ್ವೀಟಿಗೆ 2.5 ಮಿಲಿಯನ್ ಡಾಲರ್ ಎಂದು ಬೆಲೆ(ಳೆ) ಕಟ್ಟಿಯಾಯಿತು. ಹಿಂದಿನ ಸಿದ್ಧ ಸರ್ಕಾರದಲ್ಲಿ ಬೆತ್ತಲಾಗಿದ್ದ ಸಾಹಿತ್ಯ ದಂತಕಥೆಗಳು ಈಗ ಆಟೋಟದ ದಂತಕಥೆಗಳೆಲ್ಲಾ ಬೆತ್ತಲಾದವೆಂದು ಹಲುಬುವುದು "ತಮ್ಮಂತೆಯೇ ಪರರು" ಎಂಬ ಅದೇ ಹಳೇ "ಶೀಘ್ರ ಸ್ಖಲನಂ ಅಪೂರ್ಣ ಮಿಲನಂ" ಕತೆಯನ್ನು ಅಪೂರ್ವ ಮಿಲನಂ ಎಂದು ಹೇಳುತ್ತಿವೆ.
ಉದಾರವಾದದ ಸೋಗಿನ ಎಡಪಂಥೀಯ ಚಿಂತಕರೇ, "ತೋಳ ಬಂತು ತೋಳ", "ಕರುಳು ಹಿಂಡುವ ಕರುಣಾಜನಕ ಬಕೆಟ್ ಕಣ್ಣೀರು", "ಬ್ರಾಹ್ಮಣ-ಶೂದ್ರ-ದಲಿತ" "ಕುಡುಗೋಲು-ಸುತ್ತಿಗೆ", "ಕಾರ್ಪೊರೇಟ್-ಸಹಕಾರಿ-ಸರ್ಕಾರಿ", "ಟ್ರೋಲ್-ಡೋಲ್" ಎಂಬಂತಹ ತಗಡು ಸ್ಟ್ರ್ಯಾಟೆಜಿಗಳನ್ನು ಬಿಟ್ಟು ಒಂದೊಳ್ಳೆ ಸ್ಟ್ರ್ಯಾಟೆಜಿ ಇಂದೋ ನಾಳೆಯೋ ಹಾಕಿಕೊಳ್ಳುತ್ತೀರೆಂದು ಏಳು ವರ್ಷಗಳಿಂದ ನಾನು ಕಾದದ್ದೇ ಬಂತು. ನೀವುಗಳು ಎಚ್ಚೆತ್ತುಕೊಳ್ಳಲಿ ಎಂದು ತಿವಿದೂ ತಿವಿದು ಕತ್ತಿ ಮೊಂಡಾಯಿತು. ಹೀಗೆಯೇ ಮುಂದುವರಿದರೆ ಟೋಟಲಿಟೇರಿಯನ್ನೇ ಗತಿ!
ಹೋಗಲಿ, ನನ್ನ ಬಳಿ ಒಂದು ಸ್ಟ್ರ್ಯಾಟೆಜಿ ಇದೆ. ರಿಹಾನಾಳ ಅರ್ಧ ದುಡ್ಡು ಅಡ್ವಾನ್ಸ್ ಕೊಟ್ಟು ನನ್ನ ಸಲಹೆಗಾರನಾಗಿ ಮಾಡಿಕೊಳ್ಳಿ, ಟೋಟಲಿಟೇರಿಯನ್ ತಪ್ಪಿಸುವೆ. ಕೆಲಸ ಒಪ್ಪಿಗೆಯಾದರೆ, ಮುಂದಿನ ಕಾಂಟ್ರಾಕ್ಟ್!
ನೋಡಿ. ಗ್ರೇಟಾ, ಬಾಟಾ, ಕೊರೋನಾ, ಖಲೀಫಾ, ರಿಹಾನಾ ಸಾಕು. ಹಂಜ್ ಫಾರ್ ಬಿಂಜ್ ಬದಲಾವಣೆಗೆ ಬೇಕು!
But under one condition, ಗೂಗಲ್ ಪೇ, ರೂಪೇ ಇವೆಲ್ಲಾ ನನ್ನ ಹತ್ರ ನಡೆಯೋಲ್ಲ, ಏನಿದ್ರೂ ಬ್ಯಾಂಕ್ ಅಕೌಂಟ್ ಟ್ರಾನ್ಸ್ಫರ್ ಮಾತ್ರ!
ನನ್ನ ಕಂಡೀಷನ್ ಕೇಳಿ ದೇಶಭಕ್ತಿ, ಧರ್ಮ, ಸಮಾಜ ಎಂದೆಲ್ಲಾ ಪುಂಗಿ ಊದಲು ಬರಬೇಡಿ. ಅದೆಲ್ಲಾ ಹೋಲ್ಸೇಲ್ ಆಗಿ ಸೋಲ್ಡ್ ಔಟ್ ಆಗಿದೆ.
ನನ್ನದೇನಿದ್ದರೂ ಗುರು ಅಲ್ಲಮನ ವಾಸ್ತವ ತತ್ವ!
ಜಲವಿಲ್ಲದ ಕೆರೆ, ಫಲವಿಲ್ಲದ ಬನ, ಭಕ್ತನಿಲ್ಲದ ಗ್ರಾಮ ಸುಡುಗಾಡಯ್ಯ! ಅಲ್ಲಿ ಶಿವನಿಲ್ಲ, ಪ್ರೇತಜದಾರಣ್ಯದಲ್ಲಿ ಹೋಗಬಹುದೇ ಗುಹೇಶ್ವರಾ?
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ
ಮೆಸೆಂಜರ್ ಪೀಡನೆ
ಮೆಸೆಂಜರಿನಲ್ಲಿ ಚರ್ಚೆಗೆ ಬರುವ, ಚಂದಾ ಕೇಳುವ, ನನ್ನ ಬ್ಯಾಲೆನ್ಸ್ ಶೀಟ್ ಬಯಸುವ, ಪ್ರೇಮ ನಿವೇದಿಸುವ ಎಲ್ಲಾ ರೀತಿಯ ಉಮೇದುವಾರರಿಗೆ:
ನಾನು ನನ್ನ ಔದ್ಯೋಗಿಕ ಕಾರ್ಯಗಳಲ್ಲಿ ಮುಳುಗಿರುವುದರಿಂದ ಯಾವುದೇ ಫೇಸ್ಬುಕ್ ಕರೆ, ಮೆಸೇಜುಗಳಿಗೆ ಸ್ಪಂದಿಸುವುದಿಲ್ಲ. ಕಾಯಕವೇ ಕೈಲಾಸವೆಂಬಂತೆ ಕೆಲಸದಲ್ಲಿ ಮುಳುಗಿರುವ ನನಗೆ ನಿಮ್ಮ ಕರೆಗಳಷ್ಟೇ ಅಲ್ಲದೆ ನನ್ನ ಆತ್ಮದ ಕರೆಗಳೂ ಕೇಳವು!
ಹಾಗೆಂದೊಡನೆ ನಾನೊಬ್ಬ ತತ್ವನಿಷ್ಠಿ, ಬದ್ಧಪುರುಷ, ಕಾಯಕಯೋಗಿ ಎಂದಲ್ಲ. ಅಂತಹ ಯಾವುದೇ ಗುಣವಿಶೇಷಣಗಳಾಗಲಿ, ಆದರ್ಶಗಳಾಗಲಿ ನನ್ನಲ್ಲಿ ಇಲ್ಲ. ಆದರೆ ನನಗೆ ನನ್ನದೇ ಆದ ಆರ್ಥಿಕ ಜವಾಬ್ದಾರಿಗಳಿವೆ. ಹಾಗಾಗಿ ನಾನಷ್ಟು ಕಟ್ಟುನಿಟ್ಟಿನಿಂದ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆಯಿದೆ. ಉದ್ಯೋಗದ ಅವಲಂಬನೆಯಿಲ್ಲದೆ ಚರ್ಚೆ, ಸಾಹಿತ್ಯ, ಸಂಗೀತ, ಪ್ರೇಮ, ಕಾಮ ಇತ್ಯಾದಿ ಚರ್ಚೆಗಳಲ್ಲಿ ತೊಡಗಿಕೊಳ್ಳವಷ್ಟು ಮತ್ತು ಶುಭೋಧಯ, ಶುಭರಾತ್ರಿ, ಊಟವಾಯಿತೇ ಇತ್ಯಾದಿ ನಜರು ಸ್ವೀಕರಿಸುವಷ್ಟು ರಾಜಪೋಷಣೆ ಯಾ ಸರ್ಕಾರಿ ಆದಾಯ, ಉಂಬಳಿ, ಪಿತ್ರಾರ್ಜಿತಗಳು ನನಗಿಲ್ಲ.
ಇಂತಹ ಆರ್ಥಿಕ ದಿಗ್ಬಂಧನದಲ್ಲಿರುವ ನನ್ನ ಸಂಕಷ್ಟವನ್ನು ಅರ್ಥ ಮಾಡಿಕೊಂಡು ನಿಮ್ಮ ಫೇಸ್ಬುಕ್ ಮೆಸೇಜ್, ಕರೆಗಳನ್ನು ಸ್ವೀಕರಿಸಲಾಗದ ಅನಿವಾರ್ಯತೆಯನ್ನು ಅರಿತುಕೊಂಡು ನನ್ನನ್ನು ಮನ್ನಿಸಿ. ಇದಕ್ಕೆ ಯಾವುದೇ ವಿಶೇಷಾರ್ಥವನ್ನು ನೀವು ಕಲ್ಪಿಸಿಕೊಂಡಲ್ಲಿ ಅಥವಾ ಹಾಗೆ ಕಲ್ಪಿಸಿಕೊಳ್ಳುವಂತೆ ನಾನು ಕಾರಣವಾಗಿದ್ದರೆ, ಕ್ಷಮೆ ಕೋರುವೆ.
ಇನ್ನು ನನಗೆ ಪ್ರೀತಿಪಾತ್ರರಾದ ಎಲ್ಲಾ ಪ್ರೇಮ ನಿವೇದಕಿ ಗೆಳತಿಯರಲ್ಲಿ ಒಬ್ಬರು ಹೆಚ್ಚು ಒಬ್ಬರು ಕಡಿಮೆ ಎನ್ನದೆ ಎಲ್ಲರನ್ನೂ ಅಷ್ಟೇ ಪ್ರೀತಿ ವಿಶ್ವಾಸ, ಹೃದಯಾಂತರಾಳದಿಂದ ನಿಷ್ಕಲ್ಮಶವಾಗಿ ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ. ಹಾಗೆ ಪ್ರೀತಿಸುವುದು ನನ್ನ ಅನುಷಂಗಿಕ ಚಿರಯೌವ್ವನಿಗ ಗುಣ. ಆ ಗುಣವನ್ನು ತಿದ್ದಿ ಒಬ್ಬರನ್ನು ಮಾತ್ರ ಪ್ರೀತಿಸುವೆ ಎಂದು ನಾನು ಯಾರಿಗೂ ಹೇಳುವುದಿಲ್ಲ. ಏಕೆಂದರೆ ನಾನು ಹುಟ್ಟು ಚಂಚಲಿ, ಜಂಗಮಚಿತ್ತ, ಉದಾರವಾದಿ! ಹಾಗೆಂದು ಆದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲವೇ? ಆದರೆ ಸದ್ಯಕ್ಕೆ ನಿಮಗೂ ಉತ್ತರಿಸಲಾಗದು.
ಹಾಗಾಗಿ ನನಗೆ ಯಾವುದಾದರೂ ರಾಜಪೋಷಣೆ ಯಾ ಸರ್ಕಾರಿ ಆದಾಯ, ಉಂಬಳಿ, ಪಿತ್ರಾರ್ಜಿತಗಳ ಬಳುವಳಿ ದಯಪಾಲಿಸಿ ದಯವಿಟ್ಟು ಮೆಸೆಂಜರಿನಲ್ಲಿ ಬನ್ನಿ, ಮಾತನಾಡೋಣ!
ವಿಶೇಷ ಸೂಚನೆ: ಭಾರತದ ಕಾಲಮಾನ ರಾತ್ರಿಯ ಹೊತ್ತು ಆನ್ಲೈನಿನಲ್ಲಿರುವವರೆಲ್ಲಾ ವಿರಹದ ಬೇಗೆಯಲ್ಲಿ ಬೇಯುತ್ತಿರುವ ಸಲಿಂಗಕಾಮಿಗಳೆಂದು ಬಗೆದು ನಮ್ಮಂತಹ ಬೇರೆ ದೇಶಗಳ ಕಾಲಮಾನಗಳಲ್ಲಿ ಎಚ್ಚರವಿರುವ ಮತ್ತು ಅನಿಯಮಿತ ಡೇಟಾ ಪ್ಲ್ಯಾನುಗಳ ಕಾರಣ 24/7 ಹಸಿರು ಚುಕ್ಕಿಯಿರುವವರನ್ನು ತಮ್ಮಂತೆಯೇ ಪರರು ಎಂದು ಪೀಡಿಸುವ ಸಲಿಂಗಕಾಮಿಗಳೇ, ನಿಮ್ಮವ ನಾನಲ್ಲ!
ಭಾರತ ಒಂದು ಮರುಶೋಧನೆ - ದೀಪಾ ದೇವಕತೆ ವಿಮರ್ಶೆ
ಲೇಖಕರಾದ ಶ್ರೀ ರವಿ ಹಂಜ್ ರವರು ಬರೆದ 'ಭಾರತ-ಒಂದು ಮರುಶೋಧನೆ' ಪುಸ್ತಕದ ಕುರಿತು ನನ್ನ ಅನಿಸಿಕೆಗಳು.
ಕೃತಿಯು ಹೊಂದಿರುವ ಆಲೋಚನೆಗಳ spontaneity ಮತ್ತು ತಾರ್ಕಿಕವಾಗಿ ವಿಶ್ಲೇಷಿಸಿದ ರೀತಿ ವರ್ಣನೀಯ. ಬಿಡಿಯಾಗಿ ಅಧ್ಯಯನ ಮಾಡುವ ಬದಲು ಸಮಗ್ರವಾಗಿ ಹೋಲಿಕೆಯೊಡನೆ, ಪರಾಮರ್ಶನಗಳೊಂದಿಗೆ, ಸೂಕ್ತ ಪುರಾವೆಗಳನ್ನು ಸಮರ್ಥನೀಯವಾಗಿ ಚಿತ್ರಿಸಿ ಬರೆದ ಪರ್ವಗಳು ಅಧ್ಯಯನಶೀಲತೆಯೊಂದಿಗೆ ಓದಿಗೆ ಹಚ್ಚುತ್ತದೆ.
ಈ ಪುಸ್ತಕವು ತನ್ಮಯತೆಯಿಂದ ಓದುವಂತಾಗಿ ಬೇಸರ ಉಂಟುಮಾಡದೆ, ನಾನು ಪದವಿ ಹಂತದಲ್ಲಿ ಇಂತಹ ಪಠ್ಯವನ್ನು ಓದಿದ್ದೇ ಆದರೆ ಇತಿಹಾಸದೆಡೆಗಿನ ಆಸಕ್ತಿ ಹೆಚ್ಚುತ್ತಿತ್ತು ಎನಿಸುತ್ತದೆ ಮತ್ತು ಲೇಖಕರ ಸಾಹಿತ್ಯಿಕ ಭಾಷೆಯು ಸುಂದರವೆನಿಸುವಂತಹದು.
'ಭಾರತ ಒಂದು ಮರುಶೋಧನೆ'ಯು -
"ಅಸಂಖ್ಯ ಆಧಾರಗಳೊಂದಿಗೆ ಭಾರತದ ಚರಿತ್ರೆಯ ಕುರಿತು ಕಾಲ - ಮನುಷ್ಯ - ವ್ಯವಸ್ಥೆಗಳನ್ನು ವಸ್ತುನಿಷ್ಠ ದೃಷ್ಠಿಕೋನದಿಂದ ನೋಡುವ ಹೊಸ ರೂಪದ ಹೊತ್ತಿಗೆ ಆಗಿದೆ."
• ಒಂದು ದೇಶದ ಚರಿತ್ರೆಯನ್ನು ಒಂದು ರಾಜವಂಶದ ದೃಷ್ಠಿಕೋನದಿಂದ ಅಧ್ಯಯನ ಮಾಡುವುದು ರೂಢಿಗತ. ಆದರೆ ಈ ಪುಸ್ತಕವು ಸಮಕಾಲೀನವಷ್ಟೇ ಅಲ್ಲದೇ, ಪ್ರಾಚೀನ ಅರಸರುಗಳು, ಆಳ್ವಿಕೆಗಳ ಪರಿಣಾಮ, ಸಂಸ್ಕೃತಿಯು ವಿಕಸನ ಹೊಂದಿದ ಹೆಜ್ಜೆಗುರುತುಗಳನ್ನು, ಸಾಧ್ಯಾಸಾಧ್ಯತೆಗಳನ್ನು ನಿರ್ದಿಷ್ಟ ಆಧಾರಗಳೊಂದಿಗೆ ಪ್ರತಿಬಿಂಬಿಸುತ್ತದೆ.
• ವೈಜ್ಞಾನಿಕ ದೃಷ್ಟಿಕೋನದಿಂದಲೂ ಕೂಡ ಒಂದು ಜನಾಂಗದ, ಸಮುದಾಯದ ಬೆಳವಣಿಗೆಗಳನ್ನು ಸಾಹಿತ್ಯಿಕ ಆಕರಗಳು, ಪಳಯುಳಿಕೆಗಳ ಪುರಾತತ್ತ್ವ ಆಧಾರಗಳನ್ನು ಜೈವಿಕ ತಂತ್ರಜ್ಞಾನದ ಸಾಕ್ಷ್ಯಗಳೊಂದಿಗೆ ಒರೆಗೆ ಹಚ್ಚುವ ವಿಧಾನಗಳನ್ನು ಗಮನಿಸಲಾಗಿ ಇದೊಂದು ಸತ್ಯಾನ್ವೇಷಣೆಯ ಚರಿತೆಯೆನಿಸುತ್ತದೆ.
•ಮಾನವನ ಚಿಂತನೆಗಳಿಂದಾದ ಏಕಕಾಲದ ಆವಿಷ್ಕಾರಗಳು Cosmic waveಗಳ ಮೂಲಕ mystical touch ಕೊಡುವಂತಹವುಗಳು.
ಉದಾಹರಣೆಗೆ: ಟೆಲಿಫೋನ್, ಗ್ರಾಮಫೋನ್, ಜೆಟ್ ಇಂಜಿನ್ ಇವುಗಳ ಆವಿಷ್ಕಾರಗಳು ಪರಸ್ಪರ ದೂರದ ದೇಶದಲ್ಲಿದ್ದು ಪರಿಚಯವಿಲ್ಲದ ಇವರುಗಳ ಆವಿಷ್ಕಾರಗಳಲ್ಲಿನ ಸಾಮ್ಯತೆ ಮಾತ್ರ ಅಸಾಧಾರಣವೂ ಆಶ್ಚರ್ಯಕಾರಿಯೂ ಆಗಿದ್ದುದು ಏಕಕಾಲದಲ್ಲಿ ಸಂಶೋಧಿಸಲ್ಪಟ್ಟದ್ದು ವಿಸ್ಮಯವೆನಿಸುವಂತೆ ವಿವರಣೆ ನೀಡುತ್ತದೆ ಈ ಹೊತ್ತಿಗೆ.
• ಲೇಖಕರ ಇತಿಹಾಸದ ವಿಶ್ಲೇಷಣೆಯು "ವಸುದೈವ ಕುಟುಂಬಕಂ" ಎನ್ನುವ ಉಕ್ತಿಯಂತೆ ಜಾಗತಿಕವಾಗಿ ಭಾರತವು ಹೇಗೆ ಅಸ್ತಿತ್ವವನ್ನು ಹೊಂದಿದೆ ಎಂಬುದನ್ನು ಸಮರ್ಥಿಸುವಂತಿದೆ.
• ಇತಿಹಾಸ ಅಗೋಚರ. ಆದ್ದರಿಂದ ನಿಖರವಾಗಿ ಕಾಲ ಮತ್ತು ಘಟನೆಗಳನ್ನು ಕುರಿತು ಹೇಳುವುದು ಯಾರಿಂದಲೂ ಸಾಧ್ಯವಿಲ್ಲ; ಆದಾಗ್ಯೂ ಆಧಾರಗಳ ಮಾಹಿತಿಗಳೊಂದಿಗೆ ಪ್ರಾಕಲ್ಪಿತ ಸಂಭವನೀಯ ಘಟನೆಗಳು ಮತ್ತು ಕಾಲಮಾನದ ಕುರಿತು ಮಾಹಿತಿ ಸ್ಪಷ್ಟವಾಗುತ್ತದೆ.
• ಇತಿಹಾಸದ ಪುಟಗಳಿಂದ ದೂರ ಉಳಿದ 'ಲಲಿತಾದಿತ್ಯ ಮುಕ್ತಿಪಿದ'ನೆಂಬ ಕಾಶ್ಮೀರ ರಾಜನ ಕುರಿತು ಸ್ವಾರಸ್ಯಕರವಾಗಿ ಬರೆಯಲಾಗಿದೆ. ಲೇಖಕರು ಲಲಿತಾದಿತ್ಯನ ಭಾರತದ ಸಾಮ್ರಾಜ್ಯ ವಿಸ್ತಾರ ನೀತಿಯ ಹಿಂದೆ ಟ್ಯಾಂಗ್ ಮನೆತನದ ಸಹಾಯ ಇವೆಲ್ಲವುಗಳ ಉಲ್ಲೇಖವಿರುವ ಕಲ್ಹಣನ 'ರಾಜತರಂಗಿಣಿ'ಯ ಕುರಿತು ತಿಳಿದು, ರಾಜನು ಪರಾಕ್ರಮ-ಹೃದಯವಂತಿಕೆಯ ಕುರಿತು ಸವಿವರವಾಗಿ ವಿವರಿಸಿದ್ದು ಕೌತುಕವೆನಿಸುತ್ತದೆ.
• ಕೆಲವು ಪರಿಕಲ್ಪನೆಗಳ ಸತ್ಯಾಂಶ, ಮೂಲಸತ್ವವನ್ನು ತರ್ಕಿಸಿದ ವಿಧಾನ ಇಲ್ಲಿಯವರೆಗಿನ ಇತಿಹಾಸದ ಅರಿವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವಂತೆ ಲೇಖಕರ ಆಧಾರಸಹಿತ ಸಮರ್ಥನೆಗಳು ಪ್ರಭಾವ ಬೀರುತ್ತವೆ.
ಉದಾಹರಣೆಗೆ: ಮಂದಗಾಮಿಗಳು ಮತ್ತು ತೀವ್ರಗಾಮಿಗಳ ಕುರಿತಾದ ನಿಜಾರ್ಥಗಳು.
•'Carbon dating' ನಂತಹ ಪ್ರಾಚ್ಯವಸ್ತು ಅಧ್ಯಯನದ ವೈಜ್ಞಾನಿಕ ಪರಿಕಲ್ಪನೆಗಳೊಂದಿಗೆ ಸ್ಮಾರಕಗಳ(ಶಿಲ್ಪಗಳ) ಕಾಲವನ್ನು ಒರೆಗೆ ಹಚ್ಚಬಹುದೆಂಬುದರ ಲೇಖಕರ ಸತ್ಯಾನ್ವೇಷಣೆಯೆಡೆಗಿನ ತುಡಿತ ಕೃತಿಯನ್ನು ವಸ್ತುನಿಷ್ಠವಾಗಿಸುತ್ತದೆ.
•ಕೆಲವು ಪ್ರಾಕಲ್ಪಿತ ಮಾಹಿತಿಗಳು ಹೌದು/ಇಲ್ಲದಿರುವಿಕೆಗಳ ನಡುವೆ ಪ್ರಶ್ನಿಸಲ್ಪಟ್ಟಿವೆ. ಗತಿಸಿಹೋದ ಚರಿತ್ರೆಯ ಆಗುಹೋಗುಗಳನ್ನು ಸಮರ್ಥನೀಯವಾಗಿ ವಿವರಣೆ ಮಾಡಲಾಗಿದೆ. (Because 'justification' word itself meant as proves 'to be' right or reasonable.)
• ಶರಣರ ಕ್ರಾಂತಿಯ ಕುರಿತು ಸುದೀರ್ಘ ವಚನ-ವಿವರಣೆಯೊಂದಿಗೆ ೧೧ನೇ ಶತಮಾನದ ಕಲ್ಯಾಣ ಕ್ರಾಂತಿಯನ್ನು ಪುನಃ ಓದುವಂತಾಯಿತು. ವಿವರಣೆಗಿಂತ ವಚನಗಳ ಯಥಾವತ್ತಾದ ಸಮರ್ಥನೆ ಈ ಅಧ್ಯಾಯದ ವಿಶೇಷತೆಯೆನಿಸುತ್ತದೆ. ಓದುಗನಿಗೆ/ಓದುಗಳಿಗೆ ವಚನಗಳ ಆಧಾರವು ಸೂಕ್ತ ಇತಿಹಾಸದ ಕುರುಹುಗಳೆಸುತ್ತವೆ.
• ಇತಿಹಾಸದ ನಿರೂಪಣೆಯಂತಿರುವ, ಲೇಖಕರ ವಿಶ್ಲೇಷಣೆ ಶೈಲಿಯನ್ನು ನೋಡಲಾಗಿ, ಆಯಾ ಕಾಲಘಟ್ಟದಲ್ಲಿ ಅವರಿದ್ದಲ್ಲಿ ಎಲ್ಲವನ್ನು ಸರಿಪಡಿಸಿ ಚೊಕ್ಕವಾಗಿಸುತ್ತಿದ್ದರೇನು!? ಅನ್ನಿಸುವಷ್ಟು ತೀಕ್ಷ್ಣತೆಯಿಂದ/ತನ್ಮಯತೆಯಿಂದ ಘಟನಾವಳಿಗಳನ್ನು ವಿಮರ್ಶಿಸುತ್ತಾರೆ. (ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದ ಕುರಿತು) ಅದಕ್ಕೆ ಅದನ್ನು ಗತಿಸಿದ, ಗತಕಾಲದ ಇತಿಹಾಸ ಎಂದು ಕರೆಯಲಾಗುತ್ತದೆ ಅಥವಾ ಯಾವುದನ್ನೂ ಬದಲಿಸಲಾಗದ, ಆದರೆ ಅದರಿಂದ ಪಾಠವನ್ನು ಕಲಿಯಲು ಈ ವಿಮರ್ಶೆ ದಾರಿದೀಪವೆನಿಸುತ್ತದೆ.
•ಹ್ಯೂಯನ್ ತ್ಸಾಂಗ್ ಭಾರತೀಯ ಇತಿಹಾಸಕ್ಕೆ ನೀಡಿರುವ ಕೊಡುಗೆಗಳು ಅಪಾರ. ಅವನು ದಾಖಲಿಸಿದ ಸಂಗತಿಗಳು ಭಾರತದ ಚರಿತ್ರೆಯ ಕುರಿತು ವಸ್ತುನಿಷ್ಠವಾಗಿಯೂ, ನಿಖರವಾಗಿಯೂ, ಸ್ಥಿತಪ್ರಜ್ಞೆಯೂ ಅವನನ್ನು ವಿಶಿಷ್ಟವೆನಿಸುವ ಚೀನಿ ಯಾತ್ರಿಕ/ಇತಿಹಾಸಕಾರನನ್ನಾಗಿಸುತ್ತವೆ. ಲೇಖರು ತಮ್ಮ ಇನ್ನೆರಡು ಕೃತಿಗಳಲ್ಲಿ('ಅಗಣಿತ ಅಲೆಮಾರಿ' & 'ಹ್ಯೂಯನ್ ತ್ಸಾಂಗ್ ನ ಮಹಾಪಯಣ') ಉಲ್ಲೇಖಿಸಿದ್ದು, ಮತ್ತೆ ಪುನಃ ಓದುವಂತಾಗಿದ್ದು ಇತಿಹಾಸದ ವಿಶ್ವಸನೀಯತೆಯನ್ನು ತೋರುತ್ತದೆ.
•ಚರಿತ್ರೆಯ ಪರಿಣಾಮದಿಂದ ಪ್ರಚಲಿತ ವಿದ್ಯಮಾನಗಳು/ಪ್ರಸ್ತುತ ವ್ಯವಸ್ಥೆಯು ಹೇಗೆ ಪ್ರಭಾವಿತಗೊಳ್ಳಬಲ್ಲವು ಎಂಬುದರ ಕುರಿತು ಆಲೋಚನೆಗೆ ಹಚ್ಚುವ ವಿಶಿಷ್ಟತೆಯನ್ನು ಈ ಕೃತಿ ಹೊಂದಿದೆ.
•ಈ ಕೃತಿಯಲ್ಲಿ ಹೇರಳವಾದ derivations ಇದ್ದು ಶಬ್ದಗಳ ಮೂಲವು ಆಸಕ್ತಿಕರ ಓದಿಗೆ ತನ್ನನ್ನು ಒಡ್ಡಿಕೊಳ್ಳುತ್ತದೆ. ಉದಾಹಣೆಗೆ: ಬಿಷ್ನಾಗರ್-ವಿಜಯನಗರ, ಯವನರು-ಗ್ರೀಕರು, ಪಹಲ್ವ-ಪಲ್ಲವ, ಶಾಕ್ಯ-ಶಕ, ಕನ್ಯಾಕುಬ್ಜ-ಕಾನ್ಪುರ, ವಿದೀಶಾ-ಸಾಂಚಿ, ಯೋನ-ಯವನ, ಭಟ್ಟೇಕಳ-ಭಟ್ಕಳ, ಜಾಂಬೂರು-ಸೊಂಡೂರು, ಯಾದಲ್ಕಾವ್-ಬಿಜಾಪುರ, ಓಜೊಮುಲ್ಲಕಾವ್-ಬಹುಮನಿ ಸುಲ್ತಾನ, ದಿಗ್ನಾಗ-ದಿಜ್ಞಾನ, ಮೆನೆಂದರ್-ಮಿಲಿಂದ ಇನ್ನೂ ಅನೇಕ ಪದಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
As usual whenever I read a book feel to express it in English language to know about my writing skill from the author or others. Here are my views as I have opinion on the Book 'A Rediscovery of India' by Ravi Hanj.
_*A Rediscovery of India*__ cannot be read sitting all at once but it's like a study because the author has written with studious study, reference and with the logic and scientific vision.
When we talk of History, it's ever dealt with hopeful possibilities, hypothesis and recorded with archeological sites, documents, artifacts but here in this book reader finds resources with many derivations of peculiar words which might tell the history behind ancestral Indian populations called Aryans-Dravidian.
As a reader, I felt as if watching to the Discovery/History channel when there is the scientific research behind it. That is the excavation in Haryana's Rakhigarhi where we find the 4500-yr-old Indus valley era's male skeleton's DNA doesn't contain genes with the Northern Indian i.e Aryans. But they proves to be Dravidian that is 'mix of two populations' that is genetic material from a central Asian countries which spread out four millenia ago(4500-yrs).
The peculiarity of this book is it's like referential resource to study the Indian History thoroughly and logically.
History itself is the fact that we cannot recaptulate without any queries but it seeks evidential facts. So reader can find such a vast references for each concepts, population, footprints of the human with particular era till we have got freedom which has contemporary analysis with it.
-Felt as if narrator narrating history with the constructive criticism. Ironical facts have been analyzed with the comparison of the era where the political, lingual, social circumstances to prevailing situations.
•Ancient names of few places like Vidisha for Sanchi, Yona for Yavana , Kanyakubja for Kanpur, Bhattekala for Bhatkala, Jamburu for Sonduru, Yadalkav for Bijapur, Pahalva for Pallava, Bishnagar for Vijayanagara, Shakya for Shaka etc proves that there is diligence in writing by author.
•This rediscovery of India has been done with the enormous references with the critical analysis of the history which has an impact on present era.
#ARediscoveryOfIndia-By-RaviHanj #LogicProvokesThinking #ZealToKnowUnknownFacts #StraightFromHeart #LongLastingHappyReading
#DistinctVision
#comparativeAnalysisOnPastPresentAndFuture
#InnumerableGiftsByDakshaDear #SeekingForJugariCross
#IAmThankfulToAuthorForUniqueWorkOfHistory
✍🏻ದೀಪಾ.ದೇವಕತೆ, 31-01-2021, 7:34am