ಗ್ರೇಟಾ ಬಾಟಾ!

 ಒಂದೇ ದಿನದ ಅಂತರದಲ್ಲಿ ಗ್ರೇಟಾ ಟ್ವೀಟಿಸಿದ ಗೂಗಲ್ ಡಾಕು ಕಣ್ಮರೆಯಾಯಿತು. ರಿಹಾನಾಳ ಟ್ವೀಟಿಗೆ 2.5 ಮಿಲಿಯನ್ ಡಾಲರ್ ಎಂದು ಬೆಲೆ(ಳೆ) ಕಟ್ಟಿಯಾಯಿತು.  ಹಿಂದಿನ ಸಿದ್ಧ ಸರ್ಕಾರದಲ್ಲಿ ಬೆತ್ತಲಾಗಿದ್ದ ಸಾಹಿತ್ಯ ದಂತಕಥೆಗಳು ಈಗ ಆಟೋಟದ ದಂತಕಥೆಗಳೆಲ್ಲಾ ಬೆತ್ತಲಾದವೆಂದು ಹಲುಬುವುದು "ತಮ್ಮಂತೆಯೇ ಪರರು" ಎಂಬ ಅದೇ ಹಳೇ "ಶೀಘ್ರ ಸ್ಖಲನಂ ಅಪೂರ್ಣ ಮಿಲನಂ" ಕತೆಯನ್ನು ಅಪೂರ್ವ ಮಿಲನಂ ಎಂದು ಹೇಳುತ್ತಿವೆ.

ಉದಾರವಾದದ ಸೋಗಿನ ಎಡಪಂಥೀಯ ಚಿಂತಕರೇ, "ತೋಳ ಬಂತು ತೋಳ", "ಕರುಳು ಹಿಂಡುವ ಕರುಣಾಜನಕ ಬಕೆಟ್ ಕಣ್ಣೀರು", "ಬ್ರಾಹ್ಮಣ-ಶೂದ್ರ-ದಲಿತ" "ಕುಡುಗೋಲು-ಸುತ್ತಿಗೆ", "ಕಾರ್ಪೊರೇಟ್-ಸಹಕಾರಿ-ಸರ್ಕಾರಿ", "ಟ್ರೋಲ್-ಡೋಲ್"  ಎಂಬಂತಹ ತಗಡು ಸ್ಟ್ರ್ಯಾಟೆಜಿಗಳನ್ನು ಬಿಟ್ಟು ಒಂದೊಳ್ಳೆ ಸ್ಟ್ರ್ಯಾಟೆಜಿ ಇಂದೋ ನಾಳೆಯೋ ಹಾಕಿಕೊಳ್ಳುತ್ತೀರೆಂದು ಏಳು ವರ್ಷಗಳಿಂದ ನಾನು ಕಾದದ್ದೇ ಬಂತು. ನೀವುಗಳು ಎಚ್ಚೆತ್ತುಕೊಳ್ಳಲಿ ಎಂದು ತಿವಿದೂ ತಿವಿದು ಕತ್ತಿ ಮೊಂಡಾಯಿತು. ಹೀಗೆಯೇ ಮುಂದುವರಿದರೆ ಟೋಟಲಿಟೇರಿಯನ್ನೇ ಗತಿ!

ಹೋಗಲಿ, ನನ್ನ ಬಳಿ ಒಂದು ಸ್ಟ್ರ್ಯಾಟೆಜಿ ಇದೆ. ರಿಹಾನಾಳ ಅರ್ಧ ದುಡ್ಡು ಅಡ್ವಾನ್ಸ್ ಕೊಟ್ಟು ನನ್ನ ಸಲಹೆಗಾರನಾಗಿ ಮಾಡಿಕೊಳ್ಳಿ, ಟೋಟಲಿಟೇರಿಯನ್ ತಪ್ಪಿಸುವೆ. ಕೆಲಸ ಒಪ್ಪಿಗೆಯಾದರೆ, ಮುಂದಿನ ಕಾಂಟ್ರಾಕ್ಟ್!

ನೋಡಿ. ಗ್ರೇಟಾ, ಬಾಟಾ, ಕೊರೋನಾ, ಖಲೀಫಾ, ರಿಹಾನಾ ಸಾಕು. ಹಂಜ್ ಫಾರ್ ಬಿಂಜ್ ಬದಲಾವಣೆಗೆ ಬೇಕು!

But under one condition, ಗೂಗಲ್ ಪೇ, ರೂಪೇ ಇವೆಲ್ಲಾ ನನ್ನ ಹತ್ರ ನಡೆಯೋಲ್ಲ, ಏನಿದ್ರೂ ಬ್ಯಾಂಕ್ ಅಕೌಂಟ್ ಟ್ರಾನ್ಸ್ಫರ್ ಮಾತ್ರ!

ನನ್ನ ಕಂಡೀಷನ್ ಕೇಳಿ ದೇಶಭಕ್ತಿ, ಧರ್ಮ, ಸಮಾಜ ಎಂದೆಲ್ಲಾ ಪುಂಗಿ ಊದಲು ಬರಬೇಡಿ. ಅದೆಲ್ಲಾ ಹೋಲ್ಸೇಲ್ ಆಗಿ ಸೋಲ್ಡ್ ಔಟ್ ಆಗಿದೆ. 

ನನ್ನದೇನಿದ್ದರೂ ಗುರು ಅಲ್ಲಮನ ವಾಸ್ತವ ತತ್ವ!

ಜಲವಿಲ್ಲದ ಕೆರೆ, ಫಲವಿಲ್ಲದ ಬನ, ಭಕ್ತನಿಲ್ಲದ ಗ್ರಾಮ ಸುಡುಗಾಡಯ್ಯ! ಅಲ್ಲಿ ಶಿವನಿಲ್ಲ, ಪ್ರೇತಜದಾರಣ್ಯದಲ್ಲಿ ಹೋಗಬಹುದೇ ಗುಹೇಶ್ವರಾ?

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments:

Post a Comment