ಜೀ ವನ! A Soul Search Song.

 ಜೀ ವನ!


ಕೊಂಡಗಳೇರಿದ್ದೇನೆ, ಕಣಿವೆಗಳಿಳಿದಿದ್ದೇನೆ,
ಮೈದಾನಗಳ ಕ್ರಮಿಸಿದ್ದೇನೆ,
ಸಪ್ತಸಾಗರಗಳ ದಾಟಿದ್ದೇನೆ
ಓಡಿದ್ದೇನೆ, ತೆವಳಿದ್ದೇನೆ, ಈಜಿದ್ದೇನೆ,
ಮುಳುಗಿದ್ದೇನೆ, ತೇಲಿದ್ದೇನೆ...
ಕೇವಲ ಕೇವಲ ನಿನ್ನೊಂದಿಗಿರಲೆಂದು.

ಮುಗಿಲೆತ್ತರದ ಕಟ್ಟಡಗಳ ಏರಿದ್ದೇನೆ,
ರೈಲಸುರಂಗಗಳ ಕ್ರಮಿಸಿದ್ದೇನೆ,
ಹಗಲು ರಾತ್ರಿ ಒಂದು ಮಾಡಿ ದುಡಿದಿದ್ದೇನೆ
ಕಂಡ ಕಂಡ ಬಾರುಗಳ ತಿರುಗಿದ್ದೇನೆ...
ಕೇವಲ ಕೇವಲ ನಿನ್ನೊಂದಿಗಿರಲೆಂದು.

ಆದರೂ ಗೊತ್ತಿಲ್ಲ ನೀನಾರೆಂದು
ಗೊತ್ತಿಲ್ಲ ಹುಡುಕುತ್ತಿರುವುದು ಏನೆಂದು
ತಿಳಿದಿಲ್ಲ ಬೇಕಾದ್ದು ಎಲ್ಲಿಹುದೆಂದು
ಅರಿವಿಲ್ಲ ನನಗೆ ಬೇಕಾದುದು ಏನೆಂದು!

ಜೇನದುಟಿಗಳ ಸವಿಯ ಹೀರಿದ್ದೇನೆ,
ಮುದಗೊಳಿಸುವ ಮಾನಿನಿಯರ ಬೆರಳ ಹಿಡಿದಿದ್ದೇನೆ,
ಮನದಾಳ, ಒಡಲಾಳ, ಗುಹ್ಯಗಳಾಳವ ತೋಡಿದ್ದೇನೆ,
ಆದರೂ ನಂದಿಲ್ಲ ಕುತೂಹಲದ ಕಿಚ್ಚು
ನಿನ್ನ ಹುಡುಕುವ ಈ ಅಪರಿಮಿತ ಹುಚ್ಚು.

ಅಪ್ಸರೆಯರ ನಾಲಿಗೆಗಳೊಂದಿಗೆ ಸಲ್ಲಾಪಿಸಿದ್ದೇನೆ,
ರಾತ್ರಿ ರಂಭೆಯರೊಂದಿಗೆ ಬೆಚ್ಚಗೆ ಸ್ಖಲಿಸಿದ್ದೇನೆ,
ದೆವ್ವಗಳ ಕೈಹಿಡಿದು ಬೆದರಿ ಕೊರೆಯುವ
ಕಲ್ಲಿನಂತೂ ಆಗಿದ್ದೇನೆ,
ಕಳ್ಳರ ನಡುವೆ ಕಳ್ಳನಂತಿದ್ದೇನೆ.

ಆದರೂ ಗೊತ್ತಿಲ್ಲ ನೀನಾರೆಂದು
ಗೊತ್ತಿಲ್ಲ ಹುಡುಕುತ್ತಿರುವುದು ಏನೆಂದು
ತಿಳಿದಿಲ್ಲ ಬೇಕಾದ್ದು ಎಲ್ಲಿಹುದೆಂದು
ಅರಿವಿಲ್ಲ ನನಗೆ ಬೇಕಾದುದು ಏನೆಂದು!

ರಾಜ್ಯಗಳೆದ್ದವು ರಾಜ್ಯಗಳುದುರಿದವು
ಎಲ್ಲಾ ಬಣ್ಣಗಳು ಸೇರಿ ಬಿಳಿಯಾದವು
ಎಲ್ಲಾ ನದಿಗಳು ಹರಿದು ಕಡಲಾದವು
ಹಕ್ಕಿಗಳೆಲ್ಲವೂ ಗೂಡ ಸೇರಿದವು.

ಹೌದು ಓಡುತ್ತಲೇ ಇರುವೆ ನಾನಿನ್ನೂ
ಕೊಟ್ಟ ಮಾತುಗಳ ಮುರಿಯುತ್ತಲೇ ಇನ್ನೂ
ಬಂಧಿಸಲಾರೆ ನೀನು ಭಾಷೆಗಳ ಬಂಧದಿ ನನ್ನನ್ನೆಂದೆಂದೂ,
ಉಂಗುರ, ಚೈನುಗಳ ನೆಪದಲ್ಲಿ ನೆನಪಲ್ಲಿ ಇನ್ನೆಂದು.

ನಾನು ಏರಲೇ ಬೇಕು ಇಳಿಯಲೇಬೇಕು
ಮತ್ತೆ ಈಜುತ್ತಾ ಓಡಲೇಬೇಕು
ತೇಲುತ್ತ ಹಾರುತ್ತ ಬರಲೇಬೇಕು
ಕೇವಲ ಕೇವಲ ನಿನ್ನೊಂದಿಗಿರಲೆಂದು.

ಆದರೂ ಗೊತ್ತಿಲ್ಲ ನೀನಾರೆಂದು
ಗೊತ್ತಿಲ್ಲ ಹುಡುಕುತ್ತಿರುವುದು ಏನೆಂದು
ತಿಳಿದಿಲ್ಲ ಬೇಕಾದ್ದು ಎಲ್ಲಿಹುದೆಂದು
ಅರಿವಿಲ್ಲ ನನಗೆ ಬೇಕಾದುದು ಏನೆಂದು!

ಕೊಂಡಗಳೇರುತ್ತಿದ್ದೇನೆ, ಕಣಿವೆಗಳಿಳಿಯುತ್ತಿದ್ದೇನೆ ಮೈದಾನಗಳ ಕ್ರಮಿಸುತ್ತಿದ್ದೇನೆ,
ಸಪ್ತಸಾಗರಗಳ ದಾಟುತ್ತಲೇ ಇದ್ದೇನೆ
ಓಡುತ್ತಿದ್ದೇನೆ, ತೆವಳುತ್ತಿದ್ದೇನೆ, ಈಜುತ್ತಿದ್ದೇನೆ,
ಮುಳುಗುತ್ತಿದ್ದೇನೆ, ತೇಲುತ್ತಿದ್ದೇನೆ,
ಗಿರಗಿರನೆ ಸುತ್ತುವಾ ಗ್ರಹವ ಸುತ್ತುತ್ತಲೇ ಇದ್ದೇನೆ,
ಕೇವಲ ಕೇವಲ ನಿನ್ನೊಂದಿಗಿರಲೆಂದು!

- ರವಿ ಹಂಜ್

No comments:

Post a Comment