ಹಣಕಾಸು ಆಯೋಗ ಯಾನೆ वित्त आयोग ಯಾನೆ Finance Commission

 ರಾಜ್ಯದಲ್ಲಿ ಸಂಗ್ರಹಿಸುವ GST ಯ ೫೦% ರಾಜ್ಯದ್ದಾದರೆ, ೫೦% ಕೇಂದ್ರದ್ದು. ಕೇಂದ್ರದ ಭಾಗದ ೪೨% ಭಾಗ ಎಲ್ಲಾ ರಾಜ್ಯಗಳ ಅಭಿವೃದ್ಧಿಗೆ ಹಣಕಾಸು ಆಯೋಗದ ನಿರ್ದೇಶನದಂತೆ ಒಂದು ಸಾಮೂಹಿಕ ಖಾತೆಗೆ ಹೋಗುತ್ತದೆ. ಇದನ್ನು ಹೇಗೆ ವ್ಯಯಿಸಬೇಕು ಎಂಬುದನ್ನು ನಿರ್ಧರಿಸುವುದು ಸಹ ಅದೇ ಹಣಕಾಸು ಆಯೋಗ ಯಾನೆ वित्त आयोग ಯಾನೆ Finance Commission. ಇದು ಒಂದು ಸಾಂವಿಧಾನಿಕ ಸಂಸ್ಥೆ.

 

ಅಂಬೇಡ್ಕರ್ ಹೇಗೆ ಹಿಂದುಳಿದವರಿಗೆ ಮೀಸಲಾತಿ ಕೊಟ್ಟು ಸಮಾನತೆ ತಂದರೋ, ಸಿದ್ಧರಾಮಯ್ಯ ಹೇಗೆ ಅಹಿಂದದವರಿಗೆ ಸೌಭಾಗ್ಯಗಳನ್ನು ಕೊಟ್ಟರೋ ಅದೇ ರೀತಿ ಹಣಕಾಸು ಆಯೋಗ ರಾಜ್ಯಗಳಿಗೆ ತನ್ನ "ಹಿಂದುಳಿದ/ಮುಂದುವರಿದ" ಸೂತ್ರದ ಅನ್ವಯ ಹಣ ಕೊಡಿಸುತ್ತದೆ. ಇದನ್ನು ಸಿದ್ದರಾಮಯ್ಯ ಅಂಡ್ ಕಂಪೆನಿ ಮತ್ತು ಅವರ ಪಕ್ಷದ ಭಾವಿ ಪ್ರಧಾನಿ ಎನ್ನುವ ರಾಹುಲ್ ಹೇಗೆ ರಾಜ್ಯದ ನೂರು ರುಪಾಯಿ ತೆರಿಗೆಯಲ್ಲಿ ಕೇವಲ ೧೩ ರುಪಾಯಿ ಅಷ್ಟೇ ವಾಪಸ್ ಬರುತ್ತಿದೆ ಎನ್ನುತ್ತಿದ್ದಾರೆ?!?! 


ಅಂದರೆ "ಹಿಂದುಳಿದ/ಮುಂದುವರಿದ" ಎಂದು ನೋಡದೆ ಹಣಕಾಸು ಆಯೋಗ ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಹಂಚಬೇಕು ಎನ್ನುವುದು ಇವರ ವಾದವಾದರೆ, ಅದು ಅಂಬೇಡ್ಕರ್ ಅವರ ಸಾಂವಿಧಾನಿಕ ಮೀಸಲಾತಿ ಮತ್ತು ಇವರದೇ ಪಕ್ಷದ ಸಿದ್ಧಾಂತಗಳಿಗೆ ತದ್ವಿರುದ್ಧ.


ಈ ವಾಸ್ತವಿಕ ಅಂಶದ ಮೂಲಕ ನೋಡಿದರೆ, ಯಾರು ಸಂವಿಧಾನ ವಿರೋಧಿಗಳು? ಯಾರು ಮೀಸಲಾತಿ ವಿರೋಧಿಗಳು? ಯಾರು ಅಹಿಂದ ವಿರೋಧಿಗಳು? 


ಹೀಗೆ ರಾಜಾರೋಷವಾಗಿ ಸುಳ್ಳನ್ನು ನೂರು ಬಾರಿ ಸತ್ಯವೆಂದು ಹೇಳುವ, ಬುದ್ಧಿಜೀವಿಗಳು ಹೀಯಾಳಿಸುವ "ಗೋಬೆಲ್ಸ್" ತಂತ್ರವನ್ನು ಅವರ ಆರಾಧ್ಯ ದೈವವೇ ಬಳಸಿ ಇತರರ ಮೇಲೆ ಗೂಬೆ ಕೂರಿಸುತ್ತಿರುವಾಗ,  ಇದನ್ನೆಲ್ಲಾ ವಿವರಿಸುವ ಜಾಣತನ ಬಿಜೆಪಿಗರಲ್ಲಿ ಇದೆಯೇ?!?!


ಖಂಡಿತವಾಗಿ ಇಲ್ಲ. ಏಕೆಂದರೆ ರಾಜ್ಯದ ಕಾಂಗ್ರೆಸ್ಸಿಗರು ಬಿಜೆಪಿಗರು ಎಲ್ಲರೂ ಕೇವಲ ಪಂಚಾಯಿತಿ ಸದಸ್ಯರಾಗಬಲ್ಲ ಅರ್ಹತೆ ಉಳ್ಳವರು. ಇಂಥವರು ರಾಜ್ಯದ ಮುಖ್ಯಮಂತ್ರಿ, ಮಂತ್ರಿ ಎಲ್ಲಾ ಆದರೆ ಏನಾಗುವುದೋ ಅದೇ ರಾಜ್ಯದಲ್ಲಿ ಕಳೆದ ಐವತ್ತು ವರ್ಷದಿಂದ ಆಗುತ್ತಿರುವುದು. ಇನ್ನು ಬುದ್ದಿಜೀವಿಗಳ ಗೋಬೆಲ್ಸ್, ನೆರೂಡ, ಕಾಫ್ಕಾ ಉಲ್ಲೇಖ..... ವಾಡ್ಕಾ (ವೋಡ್ಕಾ - ಅವಾರ್ಡು) ಅಂಡ್ ಸಿಲೋಡ್ಕಾ(ಮೀನು - ಪ್ರಾಧಿಕಾರ)!


ಏಕೆಂದರೆ,


ಶಿವನಿಗೈದು ಮುಖ, ಭಕ್ತನಿಗೈದು ಮುಖ.

ಆವುವಾವುವೆಂದರೆ:

ಗುರುವೊಂದು ಮುಖ, ಲಿಂಗವೊಂದು ಮುಖ, ಜಂಗಮವೊಂದು ಮುಖ,

ಪಾದೋದಕವೊಂದು ಮುಖ, ಪ್ರಸಾದವೊಂದು ಮುಖ.

ಇಂತೀ ಪಂಚಮುಖವನರಿಯದ

ವೇಶಿ, ದಾಸಿ, ಸುಂಕಿಗ, ಮಣಿಹಗಾರ, ವಿದ್ಯಾವಂತ

ಇಂತೀ ಐವರಿಗೆ ಲಿಂಗವ ಕಟ್ಟಿದಡೆ

ಗುಡಿಯ ಮುಂದಣ ಶೃಂಗಾರದ ಗಂಟೆ, ಎಮ್ಮೆಯ ಕೊರಳಗಂಟೆ

ಕೊಟ್ಟಿಯ ಮೆಳೆಯೊಳಗೆ ಇಟ್ಟು ಸಿಕ್ಕಿದ ಕಲ್ಲು !

ಲಿಂಗ ವಿಭೂತಿ ರುದ್ರಾಕ್ಷಿ ಇವ ಮಾರಾಟಕ್ಕೆ ಹೇರಿಕೊಂಡು ತಿರುಗುವ

ಎತ್ತು ಕತ್ತೆಗೆ ಮುಕ್ತಿಯುಂಟೆ ? ಕೂಡಲಚೆನ್ನಸಂಗಮದೇವಾ

--- ಚನ್ನಬಸವಣ್ಣ


ಇಷ್ಟೇ, ಇಷ್ಟೇ, ಇಷ್ಟೇ, ಭಾರತೀಯ ಪ್ರಜಾಪ್ರಭುತ್ವ!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments:

Post a Comment