ಕೆಂಪೇಗೌಡರ ವಿಷಯವಾಗಿ ನಾನು ಐತಿಹಾಸಿಕ ವಿಷಯಗಳನ್ನು ಮಂಡಿಸಿ, ಕೆಂಪೇಗೌಡರಿಗಿಂತ ಹೆಚ್ಚಾಗಿ ಕನ್ನಡ/ಕರ್ನಾಟಕಕ್ಕೆ ಆಗಿಹೋದ ಸರದಾರರು, ಸಾಮಂತರು, ರಾಜರುಗಳು ಮತ್ತು ಚಕ್ರವರ್ತಿಗಳ ಹೆಸರುಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚು ಸಮಂಜಸವೆಂದು ಹೇಳಿದ್ದೆ. ರಾಜ್ಯಕ್ಕೊಂದೇ ಇರುವಂತಹ ವಿಮಾನನಿಲ್ದಾಣ ಇದಾಗಿರುವುದರಿಂದ ಇಡೀ ರಾಜ್ಯ ಒಪ್ಪುವಂತಹ ಹೆಸರನ್ನು ಇಡಬೇಕೆಂಬುದು ನನ್ನ ಅಭಿಪ್ರಾಯ. ಈ ಅಭಿಪ್ರಾಯ ರಾಜ್ಯದೆಲ್ಲೆಡೆಯ ಕನ್ನಡಿಗರ ಅಭಿಪ್ರಾಯವಾಗಿರುವುದರಿಂದಲೇ ಜನ ವಿವಿಧ ಹೆಸರುಗಳನ್ನು ಸೂಚಿಸುತ್ತಿದ್ದಾರೆ. ಬಸ್ ನಿಲ್ದಾಣಗಳಂತೆ ಎಲ್ಲಾ ಊರುಗಳಲ್ಲೂ ಅಂತರ್ರಾಷ್ಟ್ರೀಯ ವಿಮಾನನಿಲ್ದಾಣಗಳಿದ್ದರೆ ಈ ಹೆಸರಿನ ಸಮಸ್ಯೆಯೇ ಬರುತ್ತಿರಲಿಲ್ಲ. ದುರದೃಷ್ಟವಶಾತ್ ಈ ಮಟ್ಟದ ವಿಮಾನನಿಲ್ದಾಣ ಒಂದೇ ಇರುವುದು!
ಇನ್ನು ಬೆಂಗಳೂರಿನ ಭದ್ರ ಬುನಾದಿಯ ಬಗ್ಗೆ ಬಿಡಿಸಿ ಹೇಳಬೇಕೆಂದರೆ ಅದನ್ನು ನನ್ನ ಲೇಖನಕ್ಕೆ ಬಂದ ಅನಾಮಧೇಯ ಈಮೈಲ್ ಗಳ ಶೈಲಿಯಲ್ಲಿ ಹೇಳುವುದಾದರೆ "ಕೃಷ್ಣದೇವರಾಯನ ಬಳಿ ತಮಗೊಂದು ಊರು ಕಟ್ಟಿಕೊಳ್ಳಲು ಐದು ಹೋಬಳಿಗಳ ಉಂಬಳಿ ಬೇಡಿ, ನಾಲ್ಕು ಗೋಪುರಗಳ ಗೂಟ ನೆಟ್ಟು, ಬೆಂದಗಾಳೂರೆಂದು ಬೋರ್ಡ್ ಕೆತ್ತಿಸಿ, ಹತ್ತಾರು ಕೆರೆಕಟ್ಟೆಗಳನ್ನು ಕಟ್ಟಿಸಿದಾಕ್ಷಣ ಕೆಂಪೇಗೌಡ ಬೆಂಗಳೂರು ನಿರ್ಮಾತೃವೇ? ಬಿಜಾಪುರದ ಆದಿಲ್ ಶಾಹಿಯ ಸೈನಿಕ ಸರದಾರ ಶಹಾಜಿ (ಛತ್ರಪತಿ ಶಿವಾಜಿಯ ತಂದೆ) ದಾಳಿಗೆ ಸೋತು ಸುಣ್ಣವಾಗಿ ಹೋದ ಕೆಂಪೇಗೌಡರೊಂದಿಗೇ ಬೆಂದಗಾಳೂರಿನ ಬೋರ್ಡು ಮುರಿದು ಬಿದ್ದಿತ್ತು." ಎಷ್ಟೋ ವರ್ಷಗಳ ನಂತರ ಮೈಸೂರು ಅರಸರು ಬೆಂದಗಾಳೂರನ್ನು ಕೊಂಡು ಅದಕ್ಕೆ ಒಂದು ಪಟ್ಟಣದ ಸ್ವರೂಪವನ್ನು ಕೊಟ್ಟು "ಬೆಂಗಳೂರು" ಎಂಬ ಭದ್ರ ಬುನಾದಿಯನ್ನು ಹಾಕುವವರೆಗೂ ಅದು ಬೆಂದಗಾಳೂರೆಂಬ ಹಳ್ಳಿಯೇ ಆಗಿದ್ದಿತು. ಹಾಗೆಯೇ ಬ್ರಿಟಿಷರು ತಮ್ಮ ಮದ್ರಾಸ್ ಪ್ರಾಂತ್ಯ ಮತ್ತು ತಮ್ಮ ಮಿತ್ರ ಮೈಸೂರು ಸಂಸ್ಥಾನದ ಮಧ್ಯದಲ್ಲಿದೆಯೆಂದೂ, ಮದ್ರಾಸಿನ ಬೇಸಿಗೆಯ ಬವಣೆಯಿಂದ ತಪ್ಪಿಸಿಕೊಳ್ಳಲೂ ಕಾರಣವಾಗಿ ಬೆಂಗಳೂರನ್ನು "ನಗರ"ವಾಗಿ ಪರಿವರ್ತಿಸಿದರು. ಒಟ್ಟಾರೆ "ಬೆಂದಗಾಳೂರು" ಎಂಬ ಹಳ್ಳಿ "ಬೆಂಗಳೂರು" ಎಂಬ ಪಟ್ಟಣ/ನಗರವಾಗಲು ಕಾರಣ ನಾಲ್ಮಡಿ ಕೃಷ್ಣರಾಜ ಒಡೆಯರ್, ಬ್ರಿಟಿಷರು ಮತ್ತು ಇತರೆ ಮೈಸೂರು ಅರಸರು. ಇನ್ನು ಕರ್ನಾಟಕ ರಾಜ್ಯ ಸ್ಥಾಪನೆಯನಂತರ ಕರ್ನಾಟಕದ ರಾಜಧಾನಿಯಾಗಿ ಇದು ಬೆಳೆದಿದ್ದನ್ನು ನಾವ್ಯಾರು ಹೇಳಬೇಕಿಲ್ಲ.
ಇನ್ನು ಇನ್ನೋರ್ವ ಓದುಗರು ಹೇಳಿರುವಂತೆ, ಹೊಯ್ಸಳನ ಸಾಹಸ, ಪುಲಕೇಶಿಯ ಧೈರ್ಯ, ಮಯೂರವರ್ಮನ ಛಲ, ಕೃಷ್ಣದೇವರಾಯನ ಸಾಹಿತ್ಯಾಸಕ್ತಿ, ಮೈಸೂರು ಅರಸರ ದೂರಗಾಮಿತ್ವ, ಚೆನ್ನಮ್ಮನ ಸ್ವಾಭಿಮಾನ, ಓಬವ್ವನ ನಿಷ್ಟೆಯಂತಹ ಕತೆಗಳಂತೇ ಅದ್ಯಾವ ಐತಿಹಾಸಿಕ ಕತೆಗಳನ್ನು ಐತಿಹಾಸಿಕ ಪುಟಗಳಿಂದ ಹೆಕ್ಕಿ ಕೆಂಪೇಗೌಡರ ಕುರಿತಾಗಿ ನಮ್ಮ ಮುಂದಿನ ಜನಾಂಗಕ್ಕೆ ಹೇಳುವುದಿದೆ?
ಸತ್ಯಾಗ್ರಹ, ಬಂದ್, ಮುಷ್ಕರಗಳು "ಸ್ವಾತಂತ್ರ್ಯ ಚಳುವಳಿಯ ಬೈಪ್ರಾಡಕ್ಟ್"ಗಳಾದರೆ, ಓಲೈಕೆ, ಜಾತೀಯತೆಗಳು "ಸ್ವಾತಂತ್ರ್ಯದ ಬೈಪ್ರಾಡಕ್ಟ್"ಗಳಾಗಿವೆ. ಮಹಾತ್ಮ ಗಾಂಧಿಯವರು ಅಂದು ಧರ್ಮಾಧರಿತ ದೇಶ ವಿಭಜನೆಗೆ ಒಪ್ಪಿಗೆ ನೀಡಿ, ನಂತರ ನಿಷ್ಟುರ ನಿರ್ಧಾರವನ್ನು ತೆಗೆದುಕೊಳ್ಳದೆ ಓಲೈಕೆಗೆ ಮುನ್ನುಡಿ ಬರೆದು ಸ್ವಾತಂತ್ರ್ಯವನ್ನಷ್ಟೇ ಅಲ್ಲದೆ, ಸ್ವಾತಂತ್ರ್ಯವನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ "ಸತ್ಯಾಗ್ರಹ"ವೆಂಬ ಅಸ್ತ್ರವನ್ನೂ ಕೊಟ್ಟು ಹೋಗಿದ್ದಾರೆ! ಅಂದಿನ ಮಹಾತ್ಮ ಗಾಂಧಿಯಿಂದ ಇಂದಿನ ಸೋನಿಯಾ ಗಾಂಧಿಯವರೆಗೆ ಆಗಿಹೋದ ಎಲ್ಲಾ ನಾಯಕರುಗಳು ಧರ್ಮಕ್ಕಷ್ಟೇ ನಿಯಮಿತವಾಗಿದ್ದ ಒಲೈಕೆಯನ್ನು ಜಾತಿಗಳಿಗೆ, ಉಪಜಾತಿಗಳಿಗೆ, ವಿವಿಧ ಸಮಾಜ ವರ್ಗಗಳಿಗೆ ವಿಂಗಡಿಸುತ್ತ ಇಂದು ಜಾತಿಗಳನ್ನು ಮತಬ್ಯಾಂಕುಗಳಾಗಿ ಪರಿವರ್ತಿಸಿದ್ದಾರೆ.
ಈ ಮತಬ್ಯಾಂಕ್ ಬಲವಾಗಿದ್ದರಷ್ಟೇ ಆಯಾ ಜಾತಿಯವರಿಗೆ ಪ್ರಾಶಸ್ತ್ಯ, ಇಲ್ಲದಿದ್ದರೆ ಕೇಳುವವರೇ ಇಲ್ಲ! ಹಾಗಾಗಿಯೇ ಇಂದು ಬೆಂಗಳೂರು ಪಟ್ಟಣದ ನಿಜ ನಿರ್ಮಾತೃ; ಬ್ರಿಟಿಷರಿಂದ "ಆಧುನಿಕ ಅಶೋಕ"; ಗಾಂಧೀಜಿಯವರಿಂದ "ರಾಜರ್ಷಿ" ಎಂದು ಕರೆಸಿಕೊಂಡಿದ್ದ, ಇಡೀ ವಿಶ್ವವೇ ಇವರೆಡೆಗೆ ಬೆರಗಾಗಿ ನೋಡುವಂತೆ ಮಾಡಿದ್ದ ನಾಲ್ಮಡಿ ಕೃಷ್ಣರಾಜ ಒಡೆಯರರ ಅಲ್ಪಸಂಖ್ಯಾತ "ಅರಸು" ಜಾತೀವರ್ಗ, ಈ ಐತಿಹಾಸಿಕ ಸಂಗತಿಯನ್ನು ಸ್ಪಷ್ಟೀಕರಿಸುವ ಪ್ರಯತ್ನಕ್ಕೆ ಕೈಹಾಕದೇ ಸುಮ್ಮನಿರುವುದು. ಸಂಖ್ಯಾಬಲವಿಲ್ಲದವರ ಕೂಗನ್ನು ಯಾರು ಕೇಳುತ್ತಾರೆ? ಸುಮ್ಮನೆ ಬೆದರಿಸಿ ಬಾಯ್ಮುಚ್ಚಿಸುವವರೇ ಎಲ್ಲ. ಅಂತಹ ಪ್ರಾಮಾಣಿಕ ಪ್ರಯತ್ನವನ್ಯಾರಾದರೂ ಮಾಡಿದರೆ ಅವರನ್ನು "ಸಮಾಜದ್ರೋಹಿ"ಗಳೆಂದು ಬ್ರ್ಯಾಂಡಿಸುವುದು, ಮುಷ್ಕರಗಳಿಂದ ಹೆದರಿಸುವುದು ಇದ್ದದ್ದೇ. ಇಂದು ಇತಿಹಾಸಕಾರ ಚಿದಾನಂದಮೂರ್ತಿಗಳನ್ನು "ಚೆಡ್ಡಿ" ಎಂದು ಬ್ರ್ಯಾಂಡಿಸಿರುವಂತೆ! ಮೂರ್ತಿಗಳು ಬ್ರಾಹ್ಮಣ ಮಹಿಳೆಯಾಗಿದ್ದರೆ "ಬ್ರಾ" ಎನ್ನುತ್ತಿದ್ದರೇನೋ!!! ಕೆಂಪೇಗೌಡರಿಗೆ ಅಂಟಿದ ಜಾತಿಯ ಬಲವಿರದಿದ್ದರೇ ಇಂದು ಕೆಂಪೇಗೌಡರನ್ನು ಕೇಳುವವರೇ ಇರುತ್ತಿರಲಿಲ್ಲ ಎಂಬುದನ್ನು ನಮ್ಮ ವಿದ್ಯಾವಂತ ಸಮಾಜ ಅರಿಯದೇ? ಈ ಬಹುಸಂಖ್ಯಾತ ಕೆಂಪೇಗೌಡರ ವರ್ಗದ ಲಾಬಿಯ ಮೇಲ್ಪಂಕ್ತಿಯನ್ನು ಅನುಕರಿಸುತ್ತ ಇಂದು ಕುರುಬ ಸಮಾಜ ಸಂಗೊಳ್ಳಿ ರಾಯಣ್ಣನನ್ನು, ವೀರಶೈವ ಉಪಜಾತಿಯ ಪಂಚಮಸಾಲೀ ಸಮಾಜ ಕಿತ್ತೂರು ಚೆನ್ನಮ್ಮನನ್ನೂ ತಮ್ಮ ತಮ್ಮ ಜಾತಿಯ ರತ್ನಗಳೆಂದು ಬಿಂಬಿಸುತ್ತ ಈ ಈರ್ವರ ಚರಿತ್ರೆಗೆ ಜಾತಿಯ ಹೊದಿಕೆಯನ್ನು ಹೊದಿಸುತ್ತಿದ್ದಾರೆ.
ಆದರೆ ಹೊಯ್ಸಳ, ಮಯೂರವರ್ಮ ಮತ್ತಿತರೇ ಕನ್ನಡ ಕಲಿಗಳ ಜಾತಿಗಳು, ಇಂದು ಪ್ರಭಾವಶಾಲೀ ಜಾತಿಗಳಾಗಿಲ್ಲದ ಕಾರಣ ಅವರುಗಳನ್ನು ಕೇಳುವವರೇ ಇಲ್ಲದೇ ಅವರುಗಳೆಲ್ಲಾ "ಬಾರ್ ಅಂಡ್ ರೆಸ್ಟೋರಂಟ್"ಗಳಲ್ಲಿ (ಅವರವರ ಹೆಸರಿನ) ತಮ್ಮ ತಮ್ಮ ಗೋಳನ್ನು ಮರೆಯುತ್ತಿದ್ದಾರೆ! ಇಂದು ಗೌರವ, ಘೋಷಣೆಗಳ ಮರ್ಯಾದೆ ಏನಿದ್ದರೂ ಅವರವರ ಜಾತಿಬಲದ ಮೇಲೆಯೇ ಹೊರತು, ಮಹಾತ್ಮರುಗಳ ಸೇವಾ ಕೊಡುಗೆಗಳ ಬಲದ ಮೇಲಲ್ಲ. ಹಾಗಾಗಿಯೇ ಈ ಹೆಸರುಗಳಲ್ಲಿ ಬಲಶಾಲಿಯಾದ ಬಸವಣ್ಣನನ್ನು "ಇವ ನಮ್ಮವ, ಇವ ನಮ್ಮವ" ಎಂದು ಹಲವು ಜಾತಿಗಳು, ಬಸವನ ಜಾತಿಯ ಕುರಿತಾಗಿ ಸಂಶೋಧನೆಗಳನ್ನೂ ಮತ್ತು ಆ ಸಂಶೋಧನೆಗಳ ವಿರುದ್ಧ ಪ್ರತಿಭಟನೆಗಳನ್ನೂ ಮಾಡುತ್ತಿವೆ. ಇತಿಹಾಸ ಪ್ರಸಿದ್ಧರನ್ನು ಬಿಡಿ, ಇತ್ತೀಚಿನವರಾದ ದಾರ್ಶನಿಕ, ಕವಿ, ಜಾತಿಗಳನ್ನು ಮೆಟ್ಟಿನಿಂತ, "ಗುಡಿ, ಚರ್ಚು, ಮಸಜೀದಿಗಳ ಬಿಟ್ಟು ಹೊರಬನ್ನಿ"ರೆಂದು ಕರೆ ನೀಡಿದ, ಮಂತ್ರಮಾಂಗಲ್ಯದ ಸರಳ ವಿವಾಹ ಸೂತ್ರವನ್ನು ಅವಿಷ್ಕಾರಿಸಿದ ಕುವೆಂಪು ಅವರನ್ನೂ ಈ ಜನ, ಜಾತಿಯ ಶಾಲು ಹೊದಿಸಿ ಸನ್ಮಾನಿಸುತ್ತಿದ್ದಾರೆ!
ನಾವುಗಳು ವಿದ್ಯಾವಂತರಾದಷ್ಟೂ ಜಾತಿ ಜಾಗೃತರಾಗುತ್ತಿದ್ದೇವೆ. ಹೆಚ್ಚು ಹೆಚ್ಚು ಜಾತಿಗಳನ್ನು ಅವುಗಳ ಉಪಜಾತಿಗಳನ್ನು ಸಂಶೋಧಿಸಿ ಪ್ರಚಾರ ಪಡಿಸುತ್ತಿದ್ದೇವೆ. ನಮ್ಮ ಸಾಮಾಜಿಕ ಶಿಕ್ಷಣ ನಮ್ಮನ್ನು ಜಾತಿಪರಿಧಿಯ ಹೊರಕ್ಕೆ ತೆಗೆಯಲಾರದಷ್ಟು ಜಡ್ಡುಗಟ್ಟಿಹೋಗಿದೆ.
ಇನ್ನು ಕೆಂಪೇಗೌಡರ ತೆಲುಗು ಮನೆಮಾತಿನವರೆಂಬ ವಿಷಯವನ್ನು ಎತ್ತಿದ್ದುದು, ಈ ಓರಾಟಗಾರರ ದೆಸೆಯಿಂದಲೇ! ಕನ್ನಡ ಹೋರಾಟವೆಂದರೆ ಅನ್ಯಭಾಷಿಗರನ್ನು ಸದೆಬಡಿಯುವುದು ಎಂದೇ ವಿಶ್ಲೇಷಿಸಿಕೊಂಡಿರುವ ಇವರ ಕುರಿತಾಗಿ ಕಳೆದ ಅಕ್ಟೋಬರ್ ೨೦೦೭ ರ ಕನ್ನಡ ಕುರಿತಾದ ನನ್ನ ಲೇಖನಗಳನ್ನೂ ಮತ್ತು "ಯೇ ಕಚ್ಚ್ರಾ ಲೋಗ್ ಹೈ", ಹೊಗೇನಕಲ್ ಕುರಿತಾದ ಲೇಖನಗಳನ್ನು ಓದಿ, ನನ್ನ ಉದ್ದೇಶ ನಿಮಗೆ ತಿಳಿಯುತ್ತದೆ. ಅದೇ ರೀತಿ ಕನ್ನಡದ ಆರು ಜ್ಞಾನಪೀಠಿಗಳಲ್ಲಿ ಮೂವರು ಅನ್ಯಭಾಷಾ ಮನೆಮಾತಿನ ಕನ್ನಡ ಸಾಹಿತಿಗಳಿದ್ದಾರೆ. ಹಾಗಂತ ಅವರೆಲ್ಲಾ ಕನ್ನಡಿಗರಲ್ಲವೆಂಬುದು ಮೂರ್ಖತನದ ಪರಮಾವಧಿಯೇ ಸರಿ. ಮರಾಠಿ ಪುಲಕೇಶಿ ಕನ್ನಡಕ್ಕೆ ಪ್ರಾಮುಖ್ಯತೆ ಕೊಟ್ಟು ಕನ್ನಡವನ್ನು ಮೆರೆಸಿದಂತೆ, ತೆಲುಗು ಮಾತೃಭಾಷೆಯ ಕೃಷ್ಣದೇವರಾಯ ಖುದ್ದು ಕನ್ನಡ ಸಾಹಿತ್ಯಾಸಕ್ತನಾಗಿ ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸಿ ಬೆಳೆಸಿದಂತಹ ಮಹತ್ವದ ಸಂಗತಿಯಂತೆ ಕನ್ನಡ/ಕರ್ನಾಟಕದ ಸಂಸ್ಕೃತಿಯ ರಾಯಭಾರಿಯಾಗಿ ದಾಖಲಿಸಲು ಕೆಂಪೇಗೌಡರ ಕುರಿತು ಯಾವುದೇ ಸಂಗತಿಗಳಿಲ್ಲ.
ಇದೆಲ್ಲಕ್ಕಿಂತ ಬಹುಮುಖ್ಯವಾಗಿ ಬೆಂಗಳೂರಿಗೆ ಈ ಮಟ್ಟದ ಒಂದು ವಿಮಾನ ನಿಲ್ದಾಣ ಬರಲು ಏಕಮಾತ್ರ ಕಾರಣ ಐ.ಟಿ. ಈ ಐ.ಟಿ. ಎಂಬುದು ಬೆಂಗಳೂರಿನಲ್ಲಿರದಿದ್ದರೆ ಹೇಗಿರುತ್ತಿತ್ತೆಂದು ನೀವೇ ಊಹಿಸಿ. ಇದಕ್ಕೆ ಮೂಲ ಕಾರಣರಾದ ಇನ್ಫೋಸಿಸ್ ನ ನಾರಾಯಣಮೂರ್ತಿಯವರ ಹೆಸರು ಕೂಡ ಸೂಕ್ತವೆನಿಸುತ್ತದೆ. ಅಥವಾ "ಕಮರ್ಷಿಯಲ್ ಬೆಂಗಳೂರಿಗರ" ರೀತಿಯಲ್ಲಿ ಯೋಚಿಸಿದರೆ ಇಂದಿನ ಬೆಂಗಳೂರು ವಿಮಾನ ನಿಲ್ದಾಣ ಅಮೇರಿಕಾದ ಕೊಡುಗೆ. ಅಮೇರಿಕಾದದಿಂದ ಹರಿದು ಬಂದ ಡಾಲರ್ ವ್ಯವಹಾರದ ಮೂಲವಾಗಿಯೇ ಈ ವಿಮಾನ ನಿಲ್ದಾಣ ನಿರ್ಮಾಣವಾದುದು. ಹಾಗಿದ್ದ ಮೇಲೆ ಅಮೇರಿಕಾ ಎಂಬ ಬೆಂಗಳೂರು ಗ್ರಾಹಕನನ್ನು ಸಂತೋಷಪಡಿಸಲು ’ಬಿಲ್ ಗೇಟ್ಸ್’ ಎಂದೋ ಕ್ಲಿಂಟನ್ ಎಂದೋ ಅಥವಾ ಮಾನಿಕಾ ಲೆವಿನ್ಸ್ಕಿ ಎಂದೂ ಕೂಡ ಹೆಸರಿಸಬಹುದಲ್ಲವೆ. ಅವರವರ ಭಾವಕ್ಕೆ, ಅವರವರ ತಾಳಕ್ಕೆ......!
ಇರಲಿ, ಬುದ್ದಿಜೀವಿಗಳು ಈ ಕರವೇ ಹೋರಾಟಗಾರರ ಕಾಲೆಳೆದು ಮೂದಲಿಸದೆ ತೆಪ್ಪಗೆ ಇವರೊಟ್ಟಿಗೆ ಅಷ್ಟೋ/ಇಷ್ಟೋ ಕೈಜೋಡಿಸಿ "ಅಳಿಲುಸೇವೆ" ಮಾಡಬೇಕೆಂದು ಕೂಡ ಕೆಲ ಓದುಗರು ಅಭಿಪ್ರಾಯಿಸಿದ್ದಾರೆ. ಕನ್ನಡ ಧ್ವಜ ಲೇಪಿತ, ಅಂಬೇಡ್ಕರ್ ಶೈಲಿಯ ಪೋಸಿನಲ್ಲಿ ನಿಂತಿರುವ ಕರವೇ ಅಧ್ಯಕ್ಷರ ಚಿತ್ರ ಲೇಪನವಿರುವ ಕರವೇ ಅಧ್ಯಕ್ಷರ ಸ್ಕಾರ್ಪಿಯೋ ವಾಹನ, ಗಾಂಧಿನಗರದ ಕಛೇರಿ ಮತ್ತು ಕನ್ನಡ ಹೋರಾಟವೇ ಫುಲ್ ಟೈಮ್ ಉದ್ಯೋಗವಾಗಿರುವ ಇವರ ಆದಾಯದ ಮೂಲ, ಕರವೇ ಸಂಸ್ಥೆಯ ಹೋರಾಟಕ್ಕೆ ಹಣ ಎಲ್ಲಿಂದ ಹರಿದು ಬರುತ್ತಿದೆ? ಕನ್ನಡಿಗರಾದ ನಾವು ನೀವೆಲ್ಲರೂ ನಮ್ಮ ತಿಂಗಳ ಸಂಬಳದಲ್ಲಿ ಒಂದು ದಿನದ ಸಂಬಳವನ್ನು ಕರವೇಗೆ ಕೊಡುತ್ತಿದ್ದೇವೆಯೇ? ಎಂದೆಲ್ಲ ಪ್ರಾಮಾಣಿಕ ತನಿಖೆಯಾದರೆ ಗಾಂಧಿನಗರದಲ್ಲಲ್ಲಾ, ಪರಪ್ಪನ ಅಗ್ರಹಾರದಲ್ಲಿರಬೇಕಾಗುತ್ತದೆ, ಸ್ವಾಮಿ! ಕನ್ನಡ/ಕರ್ನಾಟಕವೆಂಬುದು ಇವರಿಗೆ ಒಂದು ರಕ್ಷಾ ಕವಚವಷ್ಟೇ. ಈ ಹುಲುಸಾದ ಕನ್ನಡ ಬೆಳೆಯ ಸಂಕ್ರಮಣಕ್ಕಾಗಿಯೇ ಇದು ಎರಡು ಬಣವಾಗಿದ್ದೆಂದು ನಮ್ಮ ವಿದ್ಯಾವಂತ ಸಮಾಜಕ್ಕೆ ಅರಿವಿಲ್ಲವೇ? ಭಾರತದಲ್ಲಿನ ಹೋರಾಟಗಳ ವ್ಯವಹಾರಜ್ಞಾನ, ನನ್ನಂಥಹ ನಯಾಗರ ನಾಡಿನ "ಸೋಷಿಯಲ್ ಲೈಫ್" ಇಲ್ಲದೇ ಬಳಲುತ್ತಿರುವವನಿಗೇ ಕಾಣುತ್ತಿರಬೇಕಾದರೆ, ಭಾರತದಲ್ಲಿ ಸದಾ "ಸೋಷಿಯಲ್ ಲೈಫ್"ನಲ್ಲಿ ಮುಳುಗಿರುವ, ಬೆಂಗಳೂರಿನಲ್ಲೇ ವ್ಯವಹರಿಸುತ್ತ ನಿತ್ಯ ಕಾವೇರೀ ನೀರು ಕುಡಿಯುವ ಹಲವರಿಗೆ ಈ ವ್ಯವಹಾರಜ್ಞಾನ ಅರ್ಥವಾಗದಿದ್ದುದಕ್ಕೇ ಏನು ಹೇಳಬೇಕೋ ನನಗೆ ತೋಚುತ್ತಿಲ್ಲ. ಬಹುಶಃ, ವಾಹನ ಚಾಲನೆ, ಲೈಟ್ ಸ್ವಿಚ್ ಇವುಗಳೆಲ್ಲಾ ಅಮೇರಿಕಾದಲ್ಲಿ ಭಾರತದ ತದ್ವಿರುದ್ಧವಾಗಿರುವಂತೆ "ದೂರದ ಬೆಟ್ಟ, ನುಣ್ಣಗೆ" ಎಂಬ ನಮ್ಮ ನಾಣ್ಣುಡಿ ಕೂಡ ನನಗೆ ವ್ಯತಿರಿಕ್ತವಾಗಿ ದೂರದ ಸಂಗತಿಗಳನ್ನು ಭೂತಾಕಾರವಾಗಿ, ಕ್ಷಕಿರಣಗಳ ರೂಪದಲ್ಲಿ ಕಾಣಿಸುವಂತೆ ಕೆಲಸ ಮಾಡುತ್ತಿದೆಯೇನೋ!
ಇನ್ನು ಹಲವರು ಕರವೇಯ ಹದಿಮೂರು ಅಂಶಗಳಲ್ಲಿ ಕೊನೆಯದಾದ ಈ ಹೆಸರಿಸುವ ಅಂಶವನ್ನು ಬೇಕೆಂದೇ ಎತ್ತಿ ನನ್ನ ಬಾಯ್ಚಟವನ್ನು ತೀರಿಸಿಕೊಂಡು ನನ್ನನ್ನು ನಾನೇ ಒಬ್ಬ ಬುದ್ದಿಜೀವಿ ಎಂದು ಮೆರೆಸಿಕೊಂಡಿದ್ದೇನೆಂದು ಕೋಪವನ್ನು ತೋರಿದ್ದಾರೆ. ಇದನ್ನು "ಜಾಣಕುರುಡು", "ಜಾಣಕಿವುಡು" ಎನ್ನದೇ ಇನ್ನೇನು ಹೇಳಬೇಕೋ ತಿಳಿಯದು. ಕರವೇ ಹೋರಾಟದ ಕುರಿತಾಗಿ ಬಂದಿದ್ದ ಪತ್ರಿಕಾ ವರದಿಗಳನ್ನು ಓದಿ ನೋಡಿ, ಈ ಹೆಸರಿನ ವಿಷಯವನ್ನು ಯಾರು ಏಕಾಂಶವಾಗಿ ಮಾಡಿದರೆಂದು! ಅಂದು ಸದುದ್ದೇಶವೆಂದುಕೊಂಡು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ನನ್ನ ಅನೇಕ ಮಿತ್ರರು ನಂತರ ಪಾಶ್ಚಾತ್ತಾಪ ಪಟ್ಟಿದ್ದಾರೆ. "ಅಂದು ಕೆಂಪೇಗೌಡ, ಇಂದು ನಾರಾಯಣಗೌಡ" ಎಂಬ ಮುಗಿಲು ಮುಟ್ಟಿತ್ತಿದ್ದ ಅಂದಿನ ಘೋಷಣೆಗಳು ಏನು ಸಾರಿದವು? ಅದನ್ನೇ ನಾನು "ಮತ್ತೊಬ್ಬ ಒಕ್ಕಲಿಗ ನಾಯಕನ ಉದಯ" ಎಂದು ಕರೆದಿದ್ದು. ಯಾವಾಗ ತಮ್ಮ ಬಾಣ ತಮಗೇ ತಿರುಗಿ ಬರುತ್ತಿದೆಯೆಂದು ತಿಳಿಯಿತೋ ಕೂಡಲೇ ನಾರಾಯಣಗೌಡರು "ಇದೆಲ್ಲಾ ಪತ್ರಿಕೆಯವರ ಹುನ್ನಾರ"ವೆಂದು ಹೇಳಿಕೆ ಕೊಟ್ಟರು. ಅಂದರೆ ಮೇಲಿನ ಘೋಷಣೆಗಳನ್ನು ಮಾಡಿದ್ದುದು ಪತ್ರಕರ್ತರೇ? ಹಾಗಾದರೆ ಕೆಂಪೇಗೌಡರಿಗೆ ನಾರಾಯಣಗೌಡರು ಸರಿಸಮಾನರೇ? ಇದಕ್ಕೆ ಪೂರಕವಾಗಿ ನನ್ನ ಯುವ ಮಿತ್ರ ಸುಪ್ರೀತ್ ಅವರ ಅಭಿಪ್ರಾಯವನ್ನು ಗಮನಕ್ಕೆ ಇಲ್ಲಿ ಕೊಟ್ಟಿದ್ದೇನೆ. ದಯವಿಟ್ಟು ಪರಾಂಭರಿಸಿ.
ಸ್ವಾತಂತ್ರ್ಯ ಹೋರಾಟದ ಫಲಕ್ಕಿಂತ ಅದರ ಬೈಪ್ರಾಡಕ್ಟ್ ಗಳಾದ ಜಾತೀಯತೆ, ಓಲೈಕೆಗಳ ದೆಸೆಯಿಂದಾಗಿ ಭವ್ಯ ಭಾರತದ ಇತಿಹಾಸ ಕುಲಗೆಟ್ಟು ಹೋಗುತ್ತಿದೆ. ವಿದೇಶೀ ಆಳ್ವಿಕೆಯನ್ನು ವಿರೋಧಿಸಿ ಸ್ವಾತಂತ್ರ್ಯ ಗಳಿಸಿದ ಭಾರತ, ತನ್ನ ನೈಜ ಇತಿಹಾಸವನ್ನರಿಯಲು ವಿದೇಶೀ ಇತಿಹಾಸಕಾರರ ಮೊರೆ ಹೋಗಬೇಕೇನೋ!
ಅಣಕ:
ಒಂದೊಮ್ಮೆ ಬೆಂಗಳೂರಿನಲ್ಲಿದ್ದ ಡ್ಯಾನ್ಸ್ ಬಾರಿನಲ್ಲಿ ಕನ್ನಡ ಓರಾಟಗಾರರು "ಎಲ್ಲೋ ಜೋಗಪ್ಪ ನಿನ್ನರಮಾನೆ" ಎಂಬ ಕನ್ನಡ ಪಾಪಿ (ಇಂಗ್ಲಿಷ್ ಪಾಪ್ ನ ಕನ್ನಡ ರೂಪಾಂತರ) ಸಂಗೀತವನ್ನು ಕೇಳುತ್ತ ನೃತ್ಯವನ್ನು ನೋಡುತ್ತಿದ್ದರು. ಬೆಚ್ಚನೆಯ ನೃತ್ಯಕ್ಕೆ ಜಾಗೃತಗೊಂಡ ಓರಾಟಗಾರನೊಬ್ಬ ತನ್ನ ಓರಾಟದ ಧಣಿಗೆ "ಅಣ್ಣಾ, ಈ ಡ್ಯಾನ್ಸ್ ಬಾರಿಗೆ ’ಸಿಂಡ್ರೆಲ್ಲಾ’ ಅಂತ ಇಂಗ್ಲಿಸ್ ಎಸ್ರಿಟ್ಟವ್ರೇ! ಒಂದು ಸ್ಕೆಚ್ ಆಕಿ ’ನೃತ್ಯರಾಣಿ ಶಾಂತಲೆ’ ಅಂತ ಕನ್ನಡಾ ಎಸ್ರು ಮಡಗ್ಸದಾ?" ಎಂದು ಪ್ರಶ್ನಿಸಿದನು.
"ಅದ್ಯಾರ್‍ಲಾ ಶಾಂತ್ಲಾ?"
"ಯಿಷ್ಣುವರ್ಧನನ ಎಣ್ತಿ, ಒಳ್ಳೇ ಡ್ಯಾನ್ಸರ್ ಆಗಿದ್ಲಂತೆ, ಅಂಗಂತ ಯಾವ್ದೋ ಸಿನುಮಾದಾಗೆ ನೋಡಿದ್ದೆ ಕಣಣ್ಣಾ"
"ಸಾಅಸಸಿಮ್ಮ ಯಿಷ್ಣುವರ್ಧನನ ಎಣ್ತಿ, ಭಾರ್‍ತಿ ಕಣಲೇ ಅಲ್ಕ. ಅಣ್ಣಾವ್ರ ಜತೆ ಭಾರೀ ಕುಣೀತಿದ್ಲು. ಅವ್ಳೆಸ್ರಿಟ್ರೆ ಎಡವಟ್ಟಾಯ್ತದೆ."
"ಯೇ, ಅಷ್ಟೂ ಗೊತ್ತಿಲ್ವ ನಂಗೆ. ಇದು ಅವನ್ಯಾವನೊ ಯಿಷ್ಣುವರ್ಧನ ಅನ್ನ ರಾಜನಿದ್ದ್ನಂತೆ. ಅವನೆಂಡ್ತಿ"
"ಔದಾ, ಅಂಗಾರೆ ಆ ಎಸ್ರು ಮಡುಗ್ಸ್ ಬೇಕಾದ್ದೆ. ಸ್ಕೆಚ್ ರೆಡಿ ಮಾಡು"
ಸದ್ಯ, ನೃತ್ಯರಾಣಿ ಶಾಂತಲೆಯ ಅದೃಷ್ಟ, ಡ್ಯಾನ್ಸ್ ಬಾರುಗಳು ಬಂದ್ ಆಗಿವೆ!
ಸುಪ್ರೀತ್ ಅವರ ಅಭಿಪ್ರಾಯ:
"ರವಿಯವರೇ,ನಿಮ್ಮ ಹಿಂದಿನ ಲೇಖನಕ್ಕೆ ನಾನು ಬರೆದ ಪ್ರತಿಕ್ರಿಯೆಯಲ್ಲಿ ಕರವೇ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಹಾಗೆ ಮಾಡುತ್ತಿರುವ ಹೋರಾಟಗಳಲ್ಲಿ ಉಳಿದೆಲ್ಲಾ ಬೇಡಿಕೆಗಳನ್ನು ಬಿಟ್ಟು ಕೇವಲ ಕೆಂಪೇಗೌಡರ ಹೆಸರಿಡಬೇಕು ಎಂಬ ಬೇಡಿಕೆಯನ್ನು ಹಿಡಿದುಕೊಂಡು ಟೀಕಿಸಿದ್ದರ ವಿರುದ್ಧ ನನ್ನ ಅಭಿಪ್ರಾಯ ದಾಖಲಿಸಿದ್ದೆ. ಅಲ್ಲದೆ ಬಹಳಷ್ಟು ಮಂದಿ ಕನ್ನಡಿಗರು ಹೋರಾಟಗಳನ್ನು ಸಾಂಕೇತಿಕ ಎಂದು ಭಾವಿಸಿ ನಿಜವಾಗಿ ಬೀದಿಗಿಳಿಯಬೇಕಾದ ಸಂದರ್ಭದಲ್ಲೂ ಮೌನರಾಗಿರುವ ಸ್ವಭಾವದವರಾದ್ದರಿಂದ ಅವರಿಗೆ ಕರವೇಯಂಥ ಸಂಘಟನೆಗಳು ಪುಂಡರ ಗುಂಪಾಗಿ ಕಾಣುತ್ತದೆ ಎಂದು ಚಿಂತಿಸಿ ಹಾಗೆ ಬರೆದಿದ್ದೆ.ಆದರೆ ಯಾವಾಗ ಪತ್ರಿಕೆಗಳಲ್ಲಿ ಜವರೇಗೌಡರು, ಒಕ್ಕಲಿಗೆ ಮಠದ ಸ್ವಾಮೀಜಿ ಹಾಗೂ ಕರವೇ ‘ಕೆಂಪೇಗೌಡರ ಹೆಸರಿಡದಿದ್ದರೆ ನಿಲ್ದಾಣದ ಉದ್ಘಟನೆಗೆ ಬಿಡುವುದಿಲ್ಲ’ ಎಂದು ಆರ್ಭಟಿಸಿರುವ ವರದಿ ಓದಿದೆನೋ ಆಗ ನಿಮ್ಮ ಲೇಖನ ಚೆನ್ನಾಗಿ ಅರ್ಥವಾಯಿತು! ಈ ಲೇಖನದಲ್ಲಿ ನೀವು ವಿವರಿಸಿರುವ ಹಾಗೆ ಕನ್ನಡಿಗರಿಗೆ ಪ್ರಾತಿನಿಧ್ಯ ಮುಂತಾದ ಸಂಗತಿಗಳೆಲ್ಲಾ ನಡೆಯಬೇಕಾದ್ದು ಸರಕಾರದ ಮಟ್ಟದಲ್ಲಿ. ಅಲ್ಲಿ ತೆರೆ ಮರೆಯ ಕೆಲಸ ನಡೆಯುವಾಗ ಮೌನದಿಂದಿರುವ ಹೋರಾಟಗಾರರು ಭಾವುಕವಾಗಿ ಜನರನ್ನು ಕೆರಳಿಸಲು ಹೊರಡುವುದು ನಿಜಕ್ಕೂ ಆಕ್ಷೇಪಾರ್ಹ. ಸುಪ್ರೀತ್"
ನನ್ನ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿರುವುದಕ್ಕೆ ಧನ್ಯವಾದಗಳು.
ReplyDeleteಸುಪ್ರೀತ್
Lets not pretend to be too innocent. We all know where the money comes from. Be it KaRaVe, RSS, Alkaida or even any elected government for that matter!
ReplyDeleteThe important thing is how and for what cause the money is spent. This is where you separate Alkaida from RSS.
ಹೇಳಿ, ಇವರು ಜಾತಿವಾದಿಗಳೇ ?
ReplyDeleteಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಮಯ ವಾತಾವರಣವಿರಬೇಕು, ಈ ಯೋಜನೆಗಾಗಿ ಭೂಮಿ ಕಳೆದುಕೊಂಡ ೩೦೦೦ ಬಡ ರೈತರ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಕಲ್ಪಿಸಬೇಕು, ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕು ಎಂದು ಕ.ರ.ವೇ ಹೋರಾಟ ನಡೆಸುತ್ತಲೇ ಬಂದಿದೆ. ಆದ್ರೆ ಕೆಂಪೇಗೌಡರ ಹೆಸರಿಡಬೇಕು ಅನ್ನುವ ಕೂಗು ಕೇಳಿದ್ದೆ ತಡ, ಕನ್ನಡಿಗರನ್ನು ಜಾತಿ ಆಧಾರದ ಮೇಲೆ ಒಡೆಯುವ ಸುವರ್ಣ ಅವಕಾಶ ಸಿಕ್ಕಿತು ಅಂತ ಕೆಲವರು ಕಪೋಲಕಲ್ಪಿತ ವರದಿ ಬರೆದು, ಕನ್ನಡಿಗರನ್ನು ಜಾತಿ ಆಧಾರದ ಮೇಲೆ ಒಡೆಯುವ ಎಲ್ಲ ಪ್ರಯತ್ನ ಮಾಡಿದರು. ಕೆಂಪೇಗೌಡರ ಹೆಸರಿಗೆ ಒತ್ತಾಯಿಸುವ ಮೂಲಕ ಕ.ರ.ವೇ ಒಂದು ಒಕ್ಕಲಿಗರ ಸಂಘಟನೆ, ಜಾತಿವಾದಿ ಎಂದು ಸಾಬಿತಾಗಿದೆ, ಅವರಿಗೆ ನಾಡು ನುಡಿಯ ಬಗ್ಗೆ ಯಾವ ದೂರ ದೃಷ್ಟಿಯೂ ಇಲ್ಲ ಎಂಬ ಒಕ್ಕಣಿಕೆಯ ಬರಹಗಳು ಅಲ್ಲಲ್ಲಿ ಬಂದಿವೆ. ಕಳೆದ ಕೆಲ ವರ್ಷದಿಂದ ನಾರಾಯಣ ಗೌಡರನ್ನು,ಕ.ರ.ವೇ ಹೋರಾಟವನ್ನು ನೋಡಿ ಬಲ್ಲ ನಾನು ಈ ಸಂದರ್ಭದಲ್ಲಿ ಕೆಲ ಮಾತು ಬರೆಯೋಣ ಅಂತ ಈ ಉತ್ತರ .
ಮೊದಲಿಗೆ ಕಳೆದ ೫ ವರ್ಷದಲ್ಲಿ ಕ.ರ.ವೇ ಮಾಡಿರುವ ಕೆಲವು ಪ್ರಮುಖ ಹೋರಾಟಗಳನ್ನು, ಅವುಗಳ ಪರಿಣಾಮವನ್ನು ನೋಡೋಣ:
ಕಾವೇರಿ ನ್ಯಾಯ ಮಂಡಳಿ ತೀರ್ಪು ಬಂದಾಗ, ಈ ಕರುನಾಡಿನ ಒಬ್ಬೆ ಒಬ್ಬ ರಾಜಕಾರಣಿ ಬಾಯಿ ಬಿಟ್ಟು ನಮ್ಮ ರೈತರ ಪರ ಮಾತಾಡದೆ ಹೋದಾಗ, ೨೫೦೦೦ ರೈತರನ್ನ ಸಂಘಟಿಸಿ ದೆಹಲಿಗೆ ಕರ್ಕೊಂಡು ಬಂದು ದೆಹಲಿಯ ಜಂತರ ಮಂತರ್ ಭಾಗದಲ್ಲಿ ಕನ್ನಡದ ಮಣ್ಣಿನ ಮಕ್ಕಳ ಪ್ರತಿಭಟನೆಯ ಬಿಸಿಯನ್ನು ಪ್ರಧಾನಿಗೆ ತಲುಪಿಸಿದ್ದು ನಾರಾಯಣ್ ಗೌಡರ ಕ.ರ.ವೇ.. ಅವತ್ತು ಆ ಪ್ರತಿಭಟನೆ ಆಗದೆ ಹೋಗಿದ್ರೆ ಇವತ್ತಿಗಾಗ್ಲೆ ಕಾವೇರಿ ನ್ಯಾಯ ಮಂಡಳಿ ತೀರ್ಪು ಕಾನೂನು ಆಗಿ, ಕನ್ನಡಿಗರೆಲ್ಲ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕೊಂಡು ಮಲ್ಕೊಬೇಕಿತ್ತು. ಹೇಳಿ, ಕಾವೇರಿ ನೀರು ಬರಿ ಒಕ್ಕಲಿಗರು ಕುಡಿಯುತ್ತಾರೆ ಅಂತ ಕ.ರ.ವೇ ಹೋರಾಟ ಮಾಡಿತೇ??
ಮೈಸೂರು, ಬೆಂಗಳೂರು, ಹುಬ್ಬಳ್ಳಿ ಕೇಂದ್ರಗಳಿಗಾಗಿ ನಡೆದ ರೈಲ್ವೆಯ ಗ್ರೂಪ್ ಡಿ ಹುದ್ದೆಗಳ ನೇಮಕದಲ್ಲಿ ಬಿಹಾರಿಗಳನ್ನೂ ಟ್ರೈನ್ ನಲ್ಲಿ ತಂದು ತುಂಬುವ ಕ್ರಮವನ್ನು ಪ್ರಶ್ನಿಸಿ, ಕನ್ನಡದ ಮಕ್ಕಳಿಗೆ ಆ ಹುದ್ದೆಗಳು ಸಿಗಬೇಕು ಅಂಥ ಪೊಲೀಸ್ ಲಾಠಿ ಏಟು ತಿಂದು ಆಯ್ಕೆ ಪ್ರಕ್ರಿಯೆ ನಿಲಿಸಿದ್ದು ಮತ್ತದೇ ನಾರಾಯಣ ಗೌಡರ ಕ.ರ.ವೇ. ಹೇಳಿ, ಗ್ರೂಪ್ ಡಿ ಹುದ್ದೆಗಳು ಬರಿ ಒಕ್ಕಲಿಗರಿಗೆ ಸಿಗಲಿವೆ ಎಂದು ಕ.ರ.ವೇ ಹೋರಾಟ ಮಾಡಿತ್ತೆ??
ಬಹಳ ಹಿಂದೇನು ಅಲ್ಲ, ಕೇವಲ ೬-೭ ವರ್ಷಗಳ ಹಿಂದೆ ಬೆಳಗಾವಿಯ ನಿಪ್ಪಾಣಿ ಭಾಗದಲ್ಲಿ ಕನ್ನಡ ಪತ್ರಿಕೆಗಳನ್ನು ಮರಾಠಿ ಪತ್ರಿಕೆಗಳ ಮಧ್ಯೆ ಇರಿಸಿ ತಂದು ಓದುವಂತ ಪರಿಸ್ಥಿತಿ ಇತ್ತು. ಅಂತ ಪರಿಸ್ಥಿತಿಯಲ್ಲಿ ಅಲ್ಲಿನ ಕನ್ನಡಿಗರನ್ನು ಸಂಘಟಿಸಿ, ಅವರಲ್ಲಿ ಆತ್ಮವಿಶ್ವಾಸ ತುಂಬಿ, ೧೮ ವರ್ಷದ ನಂತರ ಕನ್ನಡತಿಯೊಬ್ಬರು ಬೆಳಗಾವಿ ಪಾಲಿಕೆಯ ಮೇಯರ್ ಆಗುವಂತೆ ಮಾಡಿದ್ದು ಬೇರಾರು ಅಲ್ಲ, ನಾರಾಯಣ ಗೌಡರ ಕ.ರ.ವೇ. ಬೆಳಗಾವಿಯಲ್ಲಿ ಹುಡುಕಿದರೂ ಒಬ್ಬೆ ಒಬ್ಬ ಒಕ್ಕಲಿಗ ಸಿಗಲಾರ, ಹಾಗಿದ್ದಲ್ಲಿ ಜಾತಿವಾದಿ ಕ.ರ.ವೇ, ಒಕ್ಕಲಿಗರ ಕ.ರ.ವೇ ಅಲ್ಯಾಕೆ ಹೋರಾಟ ಮಾಡಿದರು?
ಒಂದು ಊರಿನ ಭಾಷೆ, ಸಂಸ್ಕುತಿಯನ್ನು ವಲಸಿಗರಿಗೆ ಪರಿಚಯಿಸುವಲ್ಲಿ ಸಮೂಹ ಮಾಧ್ಯಮಗಳ ಜವಾಬ್ದಾರಿ ಗುರುತರವಾದದ್ದು. ಬೆಂಗಳೂರೆಂಬ ವಲಸಿಗರ ಸ್ವರ್ಗದಲ್ಲಿ ಶುರುವಾದ ಎಫ್.ಎಂ ರೇಡಿಯೋ ವಾಹಿನಿಗಳು ಇಲ್ಲಿನ ಭಾಷೆಗೆ ನಯಾ ಪೈಸೆ ಬೆಲೆ ಕೊಡದೆ, ನಮ್ಮದಲ್ಲದ ಹಿಂದಿ ಭಾಷೆಯಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾಗ ಕನ್ನಡ ಕಾರ್ಯಕ್ರಮಕ್ಕಾಗಿ ಆಗ್ರಹಿಸಿ, ಪ್ರತಿಭಟಿಸಿ ಇವತ್ತು ಎಲ್ಲ ಎಫ್.ಎಂ ವಾಹಿನಿಗಳು ಕನ್ನಡವನ್ನು ಅಪ್ಪಿಕೊಳ್ಳುವಂತೆ ಮಾಡುವಲ್ಲಿ ಕ.ರ.ವೇ ಪಾತ್ರವು ಮಹತ್ವದ್ದು. ಇಂದು, ಎಫ್.ಎಂ ವಾಹಿನಿಗಳ ಮೂಲಕ ಬೆಂಗಳೂರಿನ ಮೂಲೆ ಮೂಲೆಯಲ್ಲಿ ಕನ್ನಡದ ಕಂಪು ಹರಡುತ್ತಿದ್ದರೆ ಅದರ ಹಿಂದೆ ಕ.ರ.ವೇ ಪಾತ್ರವಿರುವುದನ್ನು ಮರೆಯಬಾರದು. ಹೇಳಿ, ಒಕ್ಕಲಿಗರು ಮಾತ್ರ ಕನ್ನಡ ಹಾಡು ಕೇಳುತ್ತಾರೆ ಎಂದು ಕ.ರ.ವೇ ಈ ಹೋರಾಟ ಮಾಡಿತೇ?
ಹುಬ್ಬಳ್ಳಿಯಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಟಾನಕ್ಕೆ ಒತ್ತಾಯಿಸಿ ಕ.ರ.ವೇ ಸಂಘಟಿಸಿದ್ದ ಸಭೆಯಲ್ಲಿ ಸೇರಿದ್ದು ಸುಮಾರು ೧೦ ಸಾವಿರ ಜನ. ಅಂದು ಮಾತಾಡಿದ ಹುಬ್ಬಳ್ಳಿ ಭಾಗದ ಪ್ರಭಾವಿಗಳು, ಏಕೀಕರಣ ಹೋರಾಟಗಾರರು ಆದ ಪಾಟೀಲ್ ಪುಟ್ಟಪ್ಪ ಹೇಳಿದ್ದು" ಕ.ರ.ವೇ ಅಂದ್ರೆ ಯಾವುದೋ ಬೆಂಗಳೂರು ಮೂಲದ ಹೋರಾಟಗಾರರು, ಅವರಿಗೆ ಇಡೀ ಕರ್ನಾಟಕದ ಬಗ್ಗೆ ಕನಸಾಗಲಿ, ಸಮಸ್ಯೆಗಳ ಬಗ್ಗೆ ಹೋರಾಡೋ ಸಾಮರ್ಥ್ಯ ಆಗಲಿ ಇಲ್ಲ ಅನ್ಕೊಂಡಿದ್ದೆ, ಆದರೆ ಇಲ್ಲಿ ಸೇರಿರುವ ಜನರು ನನ್ನ ಮಾತನ್ನು ಸುಳ್ಳಾಗಿಸಿದ್ದಾರೆ. ಇವರ ಮೇಲೆ, ಇವರ ಹೋರಾಟದ ಮೇಲೆ ನನಗೆ ನಂಬಿಕೆ ಬಂದಿದೆ." ಹೇಳಿ, ಹುಬ್ಬಳ್ಳಿ ಭಾಗದಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಟಾನದಿಂದ ಮೈಸೂರು, ಮಂಡ್ಯ ಭಾಗದಲ್ಲಿರುವ ಒಕ್ಕಲಿಗರಿಗೆ ಹೇಗೆ ಉಪಯೋಗವಾದಿತು? ಹಾಗಿದ್ದಲ್ಲಿ, ಜಾತಿವಾದಿ ಕ.ರ.ವೇ ಯಾಕೆ ಹೋರಾಟ ಮಾಡಿತು ?
ಇಂತ ಉದಾಹರಣೆಗಳು ನೂರಿವೆ. ಜಾತಿಯ ಸೊಂಕಿಲ್ಲದೆ, ಕನ್ನಡವೇ ಜಾತಿ, ಕನ್ನಡವೇ ಧರ್ಮ ಎಂದು ಹೋರಾಟ ಮಾಡುತ್ತಾ ಬಂದಿರುವ ಕ.ರ.ವೇ ಅವರ ಬದ್ಧತೆಯನ್ನು ಇಲ್ಲಿ ಕೆಲವರು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ. ಕಣ್ಣ ಮುಂದೆ ಕೋಟಿ ಕೋಟಿ ನುಂಗಿ, ಮತ್ತೆ ಮತ್ತೆ ವಿಧಾನಸೌಧಕ್ಕೆ ಒಕ್ಕರಿಸಿ, ನಾಡು ನುಡಿಗಾಗಿ ನಯಾ ಪೈಸೆ ಕೆಲಸ ಮಾಡದ ಒಬ್ಬೆ ಒಬ್ಬ ರಾಜಕಾರಣಿಯನ್ನು ಪ್ರಶ್ನಿಸದ ನಾವು, ಪೊಲೀಸರಿಂದ ಲಾಠಿ ಏಟು ತಿಂದು, ಕೇಸ್ ಮೇಲೆ ಕೇಸ್ ಹಾಕಿಸಿಕೊಂಡು ನಾಡು-ನುಡಿಗಾಗಿ ಹೋರಾಡುವ ಈ ಧೀರರ ಬದ್ಧತೆಯನ್ನೇ ಪ್ರಶ್ನಿಸುವುದನ್ನು ಕಂಡಾಗ ಅನಿಸೋದು " ಕನ್ನಡಿಗರಿಗೆ ಕನ್ನಡಿಗರೇ ಮೊದಲ ಹಾಗೂ ಕೊನೆಯ ಶತ್ರು ಎಂದು"
ಸರಿಯಾಗಿ ಹೇಳಿದ್ದಿರ ಶೋಭ, ಕರವೇಯವರು ಕಳೆದ ಸುಮಾರು ೭-೮ ವರ್ಷಗಳಿಂದ ಕನ್ನಡ ನಾಡು, ನುಡಿ ಮತ್ತು ಕನ್ನಡಿಗರ ಏಳಿಗೆಗಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಕನ್ನಡಿಗನ ಮೇಲೆ ಯಾವುದೇ ಮೂಲೆಯಲ್ಲಿ ಅನ್ಯಾಯವಾದರೂ ಅದರ ವಿರುದ್ದ ಪ್ರತಿಭಟಿರುತ್ತಿದ್ದಾರೆ, ಅಂತಹ ಸಂಘಟನೆಯನ್ನು ಜಾತಿವಾದಿಗಳೆಂದು ಕರೆಯುವುದು ಸೂಕ್ತವಲ್ಲದ್ದು, ಕರವೇ ಅಂತಹ ಸಂಘಟನೆಯಾಗಿದ್ದಿದ್ದಲ್ಲಿ ಅದು ಇಟ್ಷರ ಮಟ್ಟಿಗೆ ದೊಡ್ಡದಾಗಿ ಬೆಳೆಯಲೂ ಸಾಧ್ಯವಾಗುತ್ತಿರಲಿಲ್ಲ. ದಯವಿಟ್ಟು ಲೇಖನಗಳನ್ನು ಬರೆಯುವ ಮೊದಲು ಪೂರ್ಣ ಪ್ರಮಾಣದ ಮಾಹಿತಿಯನ್ನು ತಿಳಿದು ಬರೆಯುವುದು ಸೂಕ್ತ.
ReplyDeleteThen nobody should object if it is named as "KaRaVe Narayangouda International Airport"
ReplyDeleteಅಲ್ಲಾಪ್ಪ ರವೀ ಮತ್ತು ಚಿಳ್ಳೆ ಹುಡುಗರಾ ...
ReplyDeleteನಿಮಗೆ ಗೊತ್ತಿಲ್ಲದ ವಿಷಯವನ್ನು ಯಾಕೆ ಅಷ್ಟು ದೊಡ್ಡದಾಗಿ ಮಾಡುತ್ತ ಇದ್ದೀರಾ ?. ನೀವು ಆ ಉಗ್ರ ಪ್ರತಾಪನ ಲೇಖನಗಳನ್ನು ಓದಿ, ಅವನ ತರ ನಾವು ಕುರಿ ಹಳ್ಳಕ್ಕೆ ಬಿದ್ದಿದೆ ಕಲ್ಲು ಹೋಡೆಯೋಣ ಅಂತ ಹೊರಟರೆ ನಗೆಪಾಡಲು ಆಗುತ್ತಿರಾ ಅಷ್ಟೆ. ಅದೇ ಉಗ್ರಪ್ರತಾಪನ ಕೇಸನಲ್ಲು ಆಗಿದ್ದು, ಗೊತ್ತಿಲ್ಲದೆ ತಾನೂ ಎನೇ ಬರೆದರೂ ಜನ ಓದುತ್ತಾರೆ, ಶಭಾಶ್ ಅನ್ನುತ್ತಾರೆ ಅನ್ನೋ ಭ್ರಮೆಯಲ್ಲಿ ಬಾಯಿಗೆ ಬಂದ ಹಾಗೆ ಬರೆದು, ಕನ್ನಡಿಗರನ್ನು, ಹಿಂದುಗಳನ್ನು ಮುರಿಯುವ ಕೆಲ್ಸಕ್ಕೆ ಕೈ ಹಾಕಿದ್ದ. ಪುಣ್ಯ ಅವನಿಗೆ ಅವನ ತಪ್ಪಿನ ಅರಿವಾಗಿದೆ. ಆದರೆ ನಿಮ್ಮಂತ ಚಿಲ್ಟೆಗಳಿಗೆ ಅರಿವಾಗುವುದು ಯಾವಾಗ ?
ಇದೇ ಫಾರಂನಲ್ಲಿ ನಿಮಗೆ ನಾನು ಚಾಲೆಂಜ್ ಮಾಡುತ್ತೆನೆ, ಹೆಸರನ್ನು ಪಕ್ಕಕ್ಕೆ ಇಟ್ಟು, ಅಲ್ಲಿ ಉದ್ಯೋಗಗಳ ಅನ್ಯಾಯ, ರೈತರಿಗೆ ಆದ ಅನ್ಯಾಯದ ಬಗ್ಗೆ ಬರೀ ನೋಡೋಣ. ಆಗೊಲ್ಲ ಅಲ್ವಾ ..
ಹೇಗೆ ಆಗುತ್ತದೆ, ನಿನಗೆ ಇಲ್ಲಿ ವಿಷ್ಯ ತಿಳಿಬೇಕು ಅಂದರೆ ಅದು ಯಾವುದೋ ಈ-ಪೇಪರ್ ಇಲ್ಲಾ ವೆಬಸೈಟ್ ನಲ್ಲಿ ಬಂದಿರುವದನ್ನು ಓದಿ, ನಂದು ಒಂದು ಮಾತು ಹೇಳೋಣ ಅಂತ ಹೋಗುತ್ತಿರಿ ಅಲ್ಲೇ ನೀವು ಎಡುವುದು.
ಎಕೆಂದರೆ ನೀವು ಓದುವ ಯಾವುದೇ ಸಾಮಗ್ರಿಯಲ್ಲಿ ನಿಜವಾದ ಇರುವದಿಲ್ಲ, ತಮಗೆ ಎನು ಬೇಕೋ ಹಾಗೆ ಬರೆಯುತ್ತಾರೆ, ಇಲ್ಲಾ ಬರೆಸುತ್ತಾರೆ.
ಇನ್ನ ಇಲ್ಲಿ ನಿನಗೆ ಉಘೇ ಹೇಳುವ ಹುಡಗರದು ಬೇರಲ್ಲ, ಹಾಯಿ-ಬಾಯಿ ಓದಿಕೊಂಡು ಅಣ್ಣಾ ಹೇಳಿದ್ದೆ ಸರಿ ಅನ್ನುವ ಬಚ್ಚಾಗಳು.
ಮೇಲೆ ಯಾರೋ ಶೋಬಾ ಅವರು ಹೇಳಿದ ಹಾಗೆ, ನಿನಗೆ ಮತ್ತು ಬೆಂಗಳೂರಿನಲ್ಲಿ ಮಜಾ ಮಾಡಿಕೊಂಡು ಇರುವ ಜನರಿಗೆ ಉತ್ತರ ಕರ್ನಾಟಕದ ಸಮಸ್ಯೆ ಅರಿವಿಲ್ಲ, ಕಳಸಾ ಬಂಡೂರಿ ಬಗ್ಗೆ ಒಂದು ಮಾತು ಆದ್ರು ಆಡಿದೀರಾ , ಆ ಹೆಸರನ್ನು ಕೇಳಿರದ ಕನ್ನಡಿಗರು ನೀವು.
ನಿಮಗೆ ಬರಿ ಮೊಸರನ್ನದಲ್ಲಿ ಕಲ್ಲು ಹುಡುಕುವ ಕೆಲ್ಸ, ಅದೇ ಕಾಯಕವನ್ನು ನಿಮ್ಮ ಗುರುಗಳಾದ ಮಾಧ್ಯಮಗಳು ಮಾಡುತ್ತ ಇವೆ.
ನಾವು ಕುರಿತನವನ್ನು ಬಿಟ್ಟು ಘರ್ಜಿಸುವುದನ್ನು ಕಲಿತಿದ್ದೆವೆ, ನಿಮ್ಮ ನಾವು ಘರ್ಜಿಸಬಾರದು, ನಾವು ಮೇ.. ಅಂತ ಮಾತ್ರ ಅನ್ನಬೇಕು ಅನ್ನೋ ಒಣ ಉಪದೇಶಗಳನ್ನು ಪಕ್ಕಕ್ಕೆ ಇಡಿ.
ಇಲ್ಲಿ ಬಗ್ಗೆ ಗೊತ್ತಿಲ್ಲದೆ ಬರೆದು, ಛೀ ಅಂತ ಅನಿಸಿಕೊಳ್ಳುವ ಬದಲು
ಅಲ್ಲಿ ಕುಳಿತುಕೊಂಡು ಅಲ್ಲಿನ ಬಗ್ಗೆ ಬರಿಯಿರಿ, ಇಲ್ಲಿನ ಬಗ್ಗೆ ಬರೆಯೊಕ್ಕೆ ನಾವು ಇದ್ದೇವೆ.
ನಿಮ್ಮ
ಮಹಂತೇಷ್
ಅನಾಮಿಕರಿಗೆ,
ReplyDeleteಕನ್ನಡಕ್ಕೆ ಬೆಂಕಿ ಬಿದ್ದಿದೆ ಅಂದರೆ, ತಡೀ ಒಂದು ದಮ್ ಹಚ್ಚಿಕೊಳ್ತಿನಿ ಅನ್ನೋ ಜಾಯಮಾನದವರು. ಇಂತಹವರು ಟಾಯ್ಲೆಟನಲ್ಲಿ ಬರಹಗಳನ್ನು ಬರೆಯುತ್ತಿದವರು, ಇವಾಗ ಬ್ಲಾಗಿಗೆ ಬಂದು ಬರೆಯುತ್ತಾರೆ.
ಎದೆಯಲ್ಲಿ ಬಗೆದರೂ ಧೈರ್ಯ ಇಲ್ಲ, ಸುಮ್ಮನೆ ಕಾಲು ಕೆರೆಯುವ ಈ ಮಂದಿ ನಮ್ಮಲ್ಲಿ ತುಂಬಾ ಇದ್ದಾರೆ..
ಈ ರವಿ ಹಂಜ್, ಪ್ರತಾಪ ಸಿಂಹ ಅಂತವರು ಮಾಡೋ ವಾದಗಳನ್ನು ವಿಶ್ಲೇಶಿಸಿದರೆ ಹೊಳೆಯುವುದಿಷ್ಟು. ಇವರಿಗೆ ಒಂದಲ್ಲಾ ಒಂದು ಕಾರಣಕ್ಕೆ ಕೆಂಪೇಗೌಡರ ಹೆಸರು ಇಷ್ಟ ಇಲ್ಲ. ಆದ್ದರಿಂದ ಕೆಂಪೇಗೌಡರ ಹೆಸರನ್ನು ಒತ್ತಾಯಿಸುತ್ತಿರುವ ಕರವೇ ಬಗ್ಗೆ ಕೆಟ್ಟ ಅಭಿಪ್ರಾಯ ಬರುವ ಹಾಗೆ ಒಂದು ಲೇಖನ ಬರೆಯುತ್ತಿದ್ದಾರೆ. ಇದೇ ಕಾರಣಕ್ಕೆ ಕರವೇ ಮಾಡಿರುವ ಅನೇಕ ಕನ್ನಡಪರ ಕೆಲಸಗಳ ಬಗ್ಗೆ ಜಾಣಕುರುಡರಾಗಿ, “ಗೌಡರು ಸ್ಕಾರ್ಪಿಯೋದಲ್ಲಿ ಓಡಾಡುತ್ತಾರೆ” ಅಂತ ಅವರ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ನೆಟ್ಟಗೆ ಎರಡು ಲೈನ್ ಜಾವಾ ಕೋಡ್ ಬರಿಯೋಕೆ ಬರದೇ ಇರೋರೆಲ್ಲಾ ಅಮೆರಿಕಾಗೆ ಬಂದು ಟಯೋಟಾ ಕಾರಿನಲ್ಲಿ ಹೋಗ್ತಿರಬೇಕಾದ್ರೆ, ಒಂದು ನಯಾಪೈಸ ಜನಪರ ಕೆಲಸ ಮಾಡದ ರಾಜಕಾರಣಿಗಳು ಹೆಲಿಕಾಪ್ಟರ್‌ನಲ್ಲಿ ಹೋಗ್ತಿರಬೇಕಾದ್ರೆ, ಹಗಲೂ ಇರುಳು ಹೋರಾಟದಲ್ಲಿ ತೊಡಗಿಸಿಕೊಂಡಿರೋ ಗೌಡರು ಕಾರಿನಲ್ಲಿ ಹೋದರೆ ಇವರಿಗೆ ಕಣ್ಣು ಕೆಂಪಾಗುತ್ತೆ!
ReplyDeleteಒಬ್ಬ ಮನುಷ್ಯನ ಯೋಗ್ಯತೆ ಅವನು ಮಾಡುತ್ತಿರುವ ಕೆಲಸ ನೋಡಿದರೆ ಗೊತ್ತಾಗುತ್ತೆ.
ಶೋಭಾ ಕೊಪ್ಪಳ ಅವರಿಗೆ ಧನ್ಯವಾದಗಳು. ಸೊಗಸಾಗಿ ಉತ್ತರಿಸಿದ್ದೀರಿ.
ReplyDeleteರವಿ ಅವರೆ, ನೀವು ಪ್ರಾಮಾಣಿಕ ಬರಹಗಾರರಾಗಿದ್ದರೆ ಶೋಭಾ ಅವರ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡುತ್ತೀರಿ. ಆದರೆ ನಿಮ್ಮ ಲೇಖನ ಓದಿದ ಮೇಲೆ ನಿಮ್ಮಲ್ಲಿ ಆ ನಿಷ್ಪಕ್ಷಪಾತ ಗುಣ ಇದೆಯಾ ಎಂಬ ಸಂದೇಹ ಕಾಡುತ್ತೆ.
-ಗುರು
ಸ್ವಾಮಿಗಳೇ... ಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕಿದ ಅನ್ನೋ ಗಾದೆ ನಿಮ್ಮನ್ನು ನೋಡಿದ ಮೇಲೇ ಮಾಡಿರಬೇಕು.
ReplyDeleteಯಾವುದೇ ಹೋರಾಟದಲ್ಲಿ ತಮ್ಮ ನಾಯಕನ ಬಗ್ಗೆ ಘೋಷಣೆಗಳನ್ನು ಕೂಗುವುದು ಸಹಜವಾದ ಕ್ರಿಯೆ. "ಭಾರತ್ ಮಾತಾಕೀ ಜೈ, ಮಹಾತ್ಮಾ ಗಾಂಧೀಕಿ ಜೈ", "ಗೋಕಾಕ್ ವರದಿ ಜಾರಿಗೆ ಬರಲಿ, ಡಾ. ರಾಜ್‌ಕುಮಾರ್ ಗೆ ಜೈ", "ನಾರಾಯಣ ಗೌಡರಿಗೆ ಜೈ" ಇಂತಹ ಮಾತುಗಳು ಹೋರಾಟಗಾರರಲ್ಲಿ ಹುಮ್ಮಸ್ಸನ್ನು ತುಂಬುತ್ತೆ.
ನಿಮ್ಮ ಕಪ್ಪೆಚಿಪ್ಪಿನಿಂದ ಸ್ವಲ್ಪ ಹೊರಗೆ ಬನ್ರೆಲಾ...
ಕ.ರ.ವೇ ಕಚೇರಿ ಪರಪ್ಪನ ಅಗ್ರಹಾರದಲ್ಲಿರಬೇಕು ಅಂತ ಹೇಳಿದರೆ ವಿಧಾನಸೌಧದ ಜೊತೆಗೆ ನಾವು ನೀವು ಕೆಲಸ ಮಾಡುವ ಆಫೀಸು ಗಳನ್ನೂ ಅಲ್ಲಿಗೇ ವರ್ಗಾಯಿಸಬೇಕಾಗುತ್ತೆ. ನಮ್ಮ ಚುನಾವಣೆಗಳಿಗೆ ಅಷ್ಟೊಂದು ಅಪಾರ ಹಣ ಯಾರು ಕೊಡ್ತಾರೆ? ಎಲ್ಲಿಂದ ಬರುತ್ತೆ? ಅದರ ಮೂಲದ ಬಗ್ಗೆ ತಿಳಿದುಕೊಳ್ಳಲು ನಿಮಗೆ ಆಸಕ್ತಿಯಿದೆಯಾ? ಟ್ಯಾಕ್ಸ್ ಟೈಮಿನಲ್ಲಿ ನಾವುಗಳು ಕೆಲಸ ಮಾಡುವ ಕಂಪನಿಗಳು ಯಾವ್ಯಾವುದೋ ಕಳ್ಳ ಲೆಕ್ಕಗಳನ್ನು ತೋರಿಸಿ ಟ್ಯಾಕ್ಸ್ ವಂಚಿಸುತ್ತಾರೆ. ದೊಡ್ಡ ದೊಡ್ಡ ಕಂಪನಿಗಳು ತಮಗೆ ಬೇಕಾದ ಕಾಂಟ್ರಾಕ್ಟುಗಳನ್ನು ಪಡೆಯಲು ಲಂಚಗಳನ್ನು ನೀಡುವುದುಂಟು. ಮೈಕ್ರೋಸಾಫ್ಟ್, ಸನ್ ಮುಂತಾದ ಕಂಪನಿಗಳು ತನ್ನ ಉತ್ಪಾದನೆಗಳನ್ನು ಮಾರುವ ಸಲುವಾಗಿ ತನ್ನ ಕೆಲವು ಸಭೆಗಳಲ್ಲಿ ಭಾಗವಹಿಸುವ ತಂತ್ರಜ್ಞರಿಗೆ ಉಡುಗೊರೆಗಳನ್ನು ಕೊಡುತ್ತವೆ. ಇದು ನಮ್ಮ ದೇಶದ ಚುನಾವಣೆಗಳಲ್ಲಿ ಹಂಚುವ ಸೀರೆ, ಟೀವಿ, ಹೆಂಡಗಳಿಗಿಂತ ಹೇಗೆ ಉತ್ತಮ?
ReplyDeleteನೀವು ಕನ್ನಡಿ ಮುಂದೆ ನಿಂತುಕೊಂಡು ಎದೆ ಮುಟ್ಟಿಕೊಂಡು ಹೇಳಿ. "ನಾನು ಇದುವವರೆಗೂ ಒಂದು ರೂಪಾಯಿಯಷ್ಟು ಟ್ಯಾಕ್ಸ್ ವಂಚನೆ ಮಾಡಿಲ್ಲ. ನಾನು ಯಾವುದೇ ಪಾಪ ಮಾಡಿಲ್ಲ. " "1 ರೂಪಾಯಿ ಕದ್ದರೂ ಕಳ್ಳನೇ. ಕೋಟಿ ರೂಪಾಯಿ ಕದ್ದರೂ ಕಳ್ಳನೇ" ಈ ವಾದವನ್ನು ಮುಂದಿಟ್ಟುಕೊಂಡರೆ ನೀವೂ ಕೆಲವು ನಿಮಿಷಗಳಷ್ಟಾದರೂ ಪರಪ್ಪನ ಅಗ್ರಹಾರದಲ್ಲಿರಬೇಕು ಅಲ್ಲವಾ.
ನಮ್ಮಲ್ಲಿರುವ ನೂರಾರು ಮಠಗಳಿಗೆ, ನೂರಾರು ದೇವಸ್ಥಾನಗಳಿಗೆ ಹಣ ಎಲ್ಲಿಂದ ಬರುತ್ತೆ? ವಿದೇಶೀ ಕಾರುಗಳಲ್ಲಿ ಓಡಾಡುವ ಸ್ವಾಮಿಗಳು ಆ ಕಾರಿನ ಹಣ ನ್ಯಾಯಮಾರ್ಗದಿಂದ ಸಂಪಾದಿಸಿದ್ದು ಅಂತ ಗ್ಯಾರಂಟಿ ಕೊಡುತ್ತಾರಾ? ತಿರುಪತಿ ಹುಂಡಿಯಲ್ಲಿ ಬಂದು ಬೀಳುವ ನೋಟಿನ ಕಂತೆಗಳಿಗೆ ಯಾವುದೇ ಪಾಪದ ಸೋಂಕಿಲ್ಲ ಎಂದು ಆ ತಿಮ್ಮಪ್ಪ ಗ್ಯಾರಂಟಿ ಕೊಡಬಲ್ಲನಾ? ಇದರ ಬಗ್ಗೆ ತನಿಖೆ ನಡೆಸಿ ತಿಮ್ಮಪ್ಪನನ್ನೇ ಎದುರು ಹಾಕಿಕೊಳ್ಳುವ ಧೈರ್ಯ ನಿಮಗಿದೆಯಾ?
ಕರವೇ ಹೇಗೆ ಹಣ ಸಂಗ್ರಹ ಮಾಡುತ್ತೆ ಅನ್ನೋದಕ್ಕಿಂತ ಸಂಗ್ರಹ ಆದ ಹಣ ಎಲ್ಲಿ, ಹೇಗೆ ಖರ್ಚಾಗುತ್ತಿದೆ ಅಂತ ಮಾತ್ರ ಎಲ್ಲಾರಿಗೂ ಗೊತ್ತಿದೆ. ಅದರ ನಿದರ್ಶನಗಳು ನಮ್ಮ ಕಣ್ಣ ಮುಂದೇ ಇದೆ. ಅದಕ್ಕಾಗಿ ಕಾರ್ಯಕರ್ತರು ಬಿಸಿಲು ನೆರಳೆನ್ನದೆ ಓಡಾಡುತ್ತಾರೆ. ನಮಗೆ ಕಾವೇರಿ ನೀರು ಕುಡಿಯಲು ಬೇಕು. ಎಫ್.ಎಂ ನಲ್ಲಿ ಕನ್ನಡ ಹಾಡುಗಳು ಕೇಳಬೇಕು. ಬೆಳಗಾವಿಯಲ್ಲಿ ಕನ್ನಡ ಮೊಳಗಬೇಕು. ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಈ ಕಾರ್ಯ ಸಾಧನೆಗೆ ನಮಗೆ ಹೋರಾಡುವವರು ಬೇಕು. ಅಂತಹ ಸಾವಿರಾರು ಜನರನ್ನು ಸೇರಿಸಿ ರ್ಯಾಲಿ ಮಾಡಿಸಿದಾಗ ಅವರಿಗೆ ಊಟ ತಿಂಡಿ ಹಾಕಿಸಬೇಡ ಎಂದರೆ ನೀವು ಎಂತಹ ಸ್ವಾರ್ಥಿಗಳು
ಒಂದು ಮಠದ ಸ್ವಾಮಿಗಳು ಆಯಾ ಜಾತಿ ವರ್ಗಗಳಿಗೆ ಮಾತ್ರ ಹೋರಾಡಬಲ್ಲುದು. ಕರವೇ ಇಡೀ ಕನ್ನಡ ಜಾತಿಗಾಗಿ ಹೋರಾಡುತ್ತೆ. ಹೀಗಾಗಿ ಮಠದ ಸ್ವಾಮಿಗಳಿಗಿಂತ ಒಂದು ತೂಕ ಹೆಚ್ಚಿನ ಸಾಮಾಜಿಕ ಬದ್ಧತೆ ಇರುವ ಗುಂಪಿನ ನಾಯಕ ಸ್ಕಾರ್ಪಿಯೋದಲ್ಲಿ ಓಡಾಡಬಾರದು ಎಂದರೆ ಯಾವುದೇ ಮಠದ ಸ್ವಾಮೀಜಿಗಳು ಕಾರಲ್ಲಿ ಹೋಗಬಾರದು ಅಂತ ವಾದಿಸಿದಂತೆ!
ಭಗತ್ ಸಿಂಗ್, ಆಜಾದ್ ಕ್ರಾಂತಿಕಾರಿಗಳು ಮದ್ದುಗುಂಡುಗಳನ್ನು ಕೊಳ್ಳುವ ಸಲುವಾಗಿ ಕೆಲವು ದರೋಡೆಗಳನ್ನೂ ಮಾಡಿದರು. ಶ್ರೀಮಂತ ವ್ಯಾಪಾರಿಗಳನ್ನು ದೋಚಿದರು. ಅಂತಹ ದೇಶಭಕ್ತರನ್ನು ಕಳ್ಳರೆಂದು ಕರೆಯಲು ನಿಮ್ಮ ಮನಸ್ಸು ಹೇಗೆ ಒಪ್ಪುತ್ತದೆ?
-ಗುರು
ಇವ್ನಿಗೆ ಚಿದಾನಂದಮೂರ್ತೀನಾ "ಚೆಡ್ಡಿ" ಅಂದ್ರೆ ಕೋಪ ಬರುತ್ತೆ. ಆದ್ರೆ ಇವ್ನು ಮಾತ್ರ "ಓರಾಟಗಾರ" ಅನ್ನೋ ಪದ ಉಪಯೋಗಿಸಬೌದು! ಇವನಿಗೆ ಕನ್ನಡಕ್ಕಿಂತ ಹಿಂದುತ್ವ ಹೆಚ್ಚು. ಕ್ಲಿಂಟನ್ ಸೂಳೆ ಮೋನಿಕಾ ಲೆವಿನ್ಸ್ಕಿ, ಬೆಂಗಳೂರನ್ನ ದೆಹಲಿಗೆ ಉಂಬಳಿ ಬರೆದುಕೊಡೋ ಉತ್ಸಾಹದಲ್ಲಿರೋ ನಾರಾಯಣ ಮೂರ್ತಿಇವರ ಹೆಸರನ್ನ ಏರ್ಪೋರ್ಟಿಗೆ ಇಡಬೇಕು ಅಂತ ಹೇಳ್ತಿರೋ ಇವರ ಕನ್ನಡಪ್ರೇಮ ಎಲ್ಲರಿಗೂ ಗೊತ್ತಾಗುತ್ತೆ ಬಿಡಿ.
ReplyDelete-ಪ್ರವೀಣ್
ಪ್ರಿಯ ಶೋಭಾರವರೆ,
ReplyDeleteವಿಶದವಾಗಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನನ್ನ ಬರಹದ ಉದ್ದೇಶ ಜನಪರ ಹೋರಾಟಗಳು ಸಮಸ್ಯೆಯ ಮೂಲೋಚ್ಚಾಟನೆಯತ್ತ ಗುರಿಯಾಗಿದ್ದರೆ ಅರ್ಥಪೂರ್ಣವಾಗಿರುತ್ತವೆ ಇಲ್ಲದಿದ್ದರೆ ಸದುದ್ದೇಶವಿದ್ದರೂ ಸಂಶಯವನ್ನು ಹುಟ್ಟುಹಾಕುತ್ತವೆ ಎಂಬುದು.
ಕರವೇ ಸರ್ವ ಸಂಸದರ ಸಭೆಯನ್ನು ಕರೆದಾಗ ಅದಕ್ಕೆ ಬಂದವರು ಮೂರು ನಾಲ್ಕು ಸಂಸದರು ಮಾತ್ರ. ಹಾಗಿದ್ದಾಗ ನಮ್ಮ ಈ ಸಂಸದರ ವಿರುದ್ಧ ಹೋರಾಟವನ್ನು ಮಾಡಿ, ಕರ್ನಾಟಕವನ್ನು ಸರಿಯಾಗಿ ಸಂಸತ್ತಿನಲ್ಲಿ ಪ್ರತಿನಿಧಿಸಿ ಎಂದು ತಾಕೀತು ಮಾಡಬೇಕಾಗಿತ್ತೇ ವಿನಃ ಅನ್ಯಥಾ ಇಪ್ಪತೈದು ಸಾವಿರ ಜನಗಳನ್ನು "ಟಿಕೇಟು ರಹಿತ ದೆಹಲಿ ಪ್ರಯಾಣ" ಮಾಡಿಸಬೇಕಿತ್ತೆ ನೀವೇ ಹೇಳಿ. ಕಳಸಾ ಬಂಡೂರ್‍ಇ ಯೋಜನೆಗಳಾಗಲೀ, ಭದ್ರಾ ಮೇಲ್ದಂಡೆ ಯೋಜನೆಯಾಗಲೀ, ಕಾವೇರಿಯಾಗಲೀ, ಅಥವಾ ಇನ್ಯಾವುದೇ ಸಮಸ್ಯೆಗೆ ಪರಿಹಾರ ನಮ್ಮನ್ನು, ನಮ್ಮ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಪ್ರತಿನಿಧಿಸಬಲ್ಲ ಜನಪ್ರತಿನಿಧಿಗಳು. ಈ ಜನಪ್ರತಿನಿಧಿಗಳನ್ನು ಚೊಕ್ಕವಾಗಿಡುವತ್ತ ಯಾವುದೇ ಹೋರಾಟ ಸಂಸ್ಥೆಗಳು ಮುಖ ಮಾಡಬೇಕೇ ವಿನಃ ಅನ್ಯಥಾ ಸಾರ್ವಜನಿಕ ಆಸ್ತಿಯ ನಷ್ಟದತ್ತಲ್ಲ. ಈ ಸಾಮಾನ್ಯ ವಿಚಾರ ಕರವೇದಂತಹ ಹೋರಾಟ ಸಂಘಟನೆಯಷ್ಟೇ ಅಲ್ಲದೇ ಇನ್ಯಾವುದೇ ಸಂಘಟನೆಗಳಿಗೆ ತಿಳಿಯದೇ? ಖಂಡಿತವಾಗಿಯೂ ತಿಳಿದಿದೆ. ಆದರೆ ನಮ್ಮ ದುರಾದೃಷ್ಟ, ಈ ಜನಪ್ರತಿನಿಧೀ ರಾಜಕಾರಣಿಗಳೇ ಇಂತಹ ಹೋರಾಟಗಳ ಸಂಪನ್ಮೂಲಗಳು!! ಕರ್ನಾಟಕದ ಸಮಸ್ಯೆ ನಮ್ಮ ಜನಪ್ರತಿನಿಧಿಗಳು! ಅವರನ್ನು ಹದ್ದುಬಸ್ತಿನಲ್ಲಿಟ್ಟು, ಜವಾಬ್ದಾರಿಯುತರನ್ನಾಗಿ ಮಾಡಿದರೇ ಅಷ್ಟೇ ಸಾಕು, ನಮ್ಮ ರಾಜ್ಯ ಉದ್ದಾರವಾಗಲು. ಹೇಳಿ ಕರವೇ ತನ್ನ ಸಭೆಗೆ ಬಾರದ ಸಂಸದರ ವಿರುದ್ಧ ಮುಷ್ಕರ, ಮುತ್ತಿಗೆ, ಹೋರಾಟಗಳನ್ನು ಮಾಡಿತೇ ಎಂದು. ನಮಗೆ ಹೋರಾಟಗಳು ಬೇಕಿರುವುದು ನಮ್ಮ ಜನಪ್ರತಿನಿಧಿಗಳನ್ನು ಜವಾಬ್ದಾರಿಯುರನ್ನಾಗಿಸುವುದು ಎಂಬುದು ನನ್ನ ಈ ಲೇಖನಗಳ ಸರಮಾಲೆಯ ತಿರುಳು. ಆದರೆ ಇಂದು ನಾಡು ನುಡಿಗೆ ಹೋರಾಡುವ ಕರವೇ ಆಗಲೀ, ಕೋಮು ಭಾವನೆಗಳಿಗೆ ಹೋರ್‍ಆಡುವ ಭಜರಂಗೀ ದಳಗಳಾಗಲಿ, ಅಥವಾ ಇನ್ಯಾವುದೇ ಸಂಘಟನೆಗಳಾಗಲಿ, ಎಲ್ಲವೂ ರಾಜಕೀಯ ಪಕ್ಷಗಳ ರೀತಿಯಲ್ಲಿ ಹೋರಾಟಗಳನ್ನು ಮಾಡುತ್ತಿವೆ!
ಇನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡ/ಕನ್ನಡಿಗರಿಗೆ ಪ್ರಾಶಸ್ತ್ಯ....ಇವುಗಳಿಗೂ ಕೂಡ ನಾನು ಈ ಮೊದಲೇ ಬರೆದಿರುವುದನ್ನು ನಿಮ್ಮ ಗಮನಕ್ಕೆ ತರುತ್ತಾ, ಇಲ್ಲಿಗೆ ನಿಲ್ಲಿಸುತ್ತೇನೆ. ದಯವಿಟ್ಟು ಬರೆಯುತ್ತಿರಿ.
ಧನ್ಯವಾದಗಳೊಂದಿಗೆ,
ರವಿ ಹಂಜ್.
"’ಕಟ್ಟು-ನಡೆಸು-ಬಿಟ್ಟುಕೊಡು’ (ಬಿ.ಒ.ಟಿ) ಒಪ್ಪಂದದಂತೆ ಕಟ್ಟಿರುವ ನೂತನ ವಿಮಾನನಿಲ್ದಾಣದ ಕಂಟ್ರಾಕ್ಟುದಾರರಿಗೆ ಅಂದಿನ ವಿಗ್ಗಿನ ಸುಂದರಾಂಗನ ಸರ್ಕಾರ ಕನ್ನಡಕ್ಕೆ/ಕನ್ನಡಿಗರಿಗೆ ಮಾನ್ಯತೆ, ಉದ್ಯೋಗ ಇತ್ಯಾದಿಗಳನ್ನು ಒಪ್ಪಂದದಲ್ಲಿ ಮಂಡಿಸಿ ಮೂಗುದಾರವನ್ನು ಹಾಕಿದ್ದರೆ ಇಂದು ಹೋರಾಡುವ ಅಗತ್ಯವೇ ಇರುತ್ತಿರಲಿಲ್ಲ. ಈಗ ಹೇಳಿ ಯಾರ ವಿರುದ್ಧ ಹೋರಾಡಬೇಕೆಂದು! ಹೈದರಾಬಾದಿನಲ್ಲಿ ಕಟ್ಟಿದ ನೂತನ ವಿಮಾನನಿಲ್ದಾಣದ ಕಂಟ್ರ್‍ಆಕ್ಟ್ ಅನ್ನು ಫಾರಿನ್ ಸಂಸ್ಥೆ ಬಿಡಿ, ರಿಲೈಯನ್ಸ್ ಸಂಸ್ಥೆಗೂ ಕೂಡ ಕೊಡದೇ ಅಚ್ಚ ತೆಲುಗು ಬಿಡ್ಡನಿಗೆ ಆಂಧ್ರ ಸರ್ಕಾರ ಕೊಟ್ಟಿದ್ದಿತು. ಹೋರಾಟಗಳ ಗುರಿ ತಾರ್ಕಿಕವಾಗಿ ಮೂಲೋಚ್ಚಾಟನೆಯತ್ತ ಮುಖ ಮಾಡಿದ್ದರೆ ಯಶಸ್ವಿಯಾಗುತ್ತವೆ. ಇಲ್ಲದಿದ್ದರೆ ಅವು ಸದ್ದುದ್ದೇಶಗಳಿದ್ದರೂ ಅನುಮಾನಿಸುವಂತಾಗುತ್ತವೆ".
ಪ್ರೀತಿಯ ಚಿಂತನಾ ತೊಟ್ಟಿ,
ReplyDeleteನಿಮ್ಮ ಹರಿತವಾದ ನಾಲಗೆಯನ್ನು ಹದ ತಪ್ಪದ ಹಾಗೆ ಬಳಸಿ. ಇತಿಹಾಸದ ಸರಿಯಾದ ಅಧ್ಯಯನದ ಆಧಾರವಿಲ್ಲದೆ ಮಾಹಿತಿಯನ್ನು ಬರೆಯಬೇಡಿ. ಕೃಷ್ಣದೇವರಾಯನನ್ನು ತೆಲುಗು ಮಾತೃಭಾಷಿಕನೆನ್ನುವುದು ತಪ್ಪು ಮಾಹಿತಿ. ಕೆಂಪೇಗೌದರ ಕೊಡುಗೆ ನಗಣ್ಯ ಎನ್ನುವಂತೆ, ಅವರೊಬ್ಬ ಸಾಮಾನ್ಯ ಅನ್ನುವಂತೆ ಬರೆದಿದ್ದೀರಾ, ಅದು ನಿಮ್ಮ ಅಯೋಗ್ಯತನವನ್ನು ತೋರಿಸುತ್ತದೆ. ನೀವು ಯಾರ್ಯಾರನ್ನು ಮಹಾನುಭಾವರೆಂದುಕೊಂಡಿದ್ದೀರೋ ಅವರುಗಳ ಕೊಡುಇಗೆಯನ್ನೂ ಹೀಗೇ ಹೀಗಳೆಯಬಹುದು. ದಯಮಾಡಿ ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಅವರ ಕೊಡುಗೆಯ ಬಗ್ಗೆ ಅವಹೇಳನ ಮಾಡಬೇಡಿ. So called ಚಿಂತನಾ ಟ್ಯಾಂಕು ಕಸದ ತೊಟ್ತಿ ಅನ್ನೋದ್ರಲ್ಲಿ ಎರಡು ಮಾತಿಲ್ಲ.
"ಜನಪರ ಹೋರಾಟಗಳು ಸಮಸ್ಯೆಯ ಮೂಲೋಚ್ಚಾಟನೆಯತ್ತ ಗುರಿಯಾಗಿದ್ದರೆ ಅರ್ಥಪೂರ್ಣವಾಗಿರುತ್ತವೆ ಇಲ್ಲದಿದ್ದರೆ ಸದುದ್ದೇಶವಿದ್ದರೂ ಸಂಶಯವನ್ನು ಹುಟ್ಟುಹಾಕುತ್ತವೆ "
ReplyDeleteನೀವೂ ಅಷ್ಟೆ. ನಿಮಗೆ ನಿಜವಾಗಿಯೂ ಕನ್ನಡ, ಕರ್ನಾಟಕದ ಕಾಳಜಿ ಇದ್ದಿದ್ದರೆ ಕನ್ನಡ ಹೋರಾಟಗಾರರ ಬಗ್ಗೆ ಇಷ್ಟು ಕೀಳಾಗಿ ಬರೀತಿರಲಿಲ್ಲ. ನಿಮ್ಮ ಲೇಖನ ನಿಮ್ಮ ಕನ್ನಡತನದ ಬಗೆಯೂ ಸಂಶಯ ಹುಟ್ಟಿಸುತ್ತೆ
"ಕರ್ನಾಟಕದ ಸಮಸ್ಯೆ ನಮ್ಮ ಜನಪ್ರತಿನಿಧಿಗಳು! ಅವರನ್ನು ಹದ್ದುಬಸ್ತಿನಲ್ಲಿಟ್ಟು, ಜವಾಬ್ದಾರಿಯುತರನ್ನಾಗಿ ಮಾಡಿದರೇ ಅಷ್ಟೇ ಸಾಕು"
ಎಷ್ಟು ಸುಲಭವಾಗಿ ಹೇಳಿಬಿಟ್ಟೆ ಮಾರಾಯ! ಬೆಕ್ಕಿನ ಕತ್ತಿಗೆ ಗಂಟೆ ಕಟ್ಟಿದಷ್ಟೆ ಸುಲಭವಾಗಿದೆ ನಿನ್ನ ಉಪಾಯ.
ಸಂಸದರ ವಿರುದ್ಧವೂ ಕರವೇ ಪ್ರತಿಭಟನೆ ಮಾಡಿದ ವಿಷಯ ‘ಜಾಣಕುರುಡ‘ರಿಗೆ ಗೊತ್ತಿಲ್ಲದೇ ಇರೊದ್ರಲ್ಲಿ ಆಶ್ಚರ್ಯ ಇಲ್ಲ.
ನಾರಾಯಣ ಗೌಡರು ಈ ಬಗ್ಗೆ ಏನು ಹೇಳಿದ್ದರೆ ಗೊತ್ತಾ?
"ಯಾವ ಸಂಸದರು ನಮ್ಮಿಂದ ಆರಿಸಿ ಹೋಗಿ ನಮ್ಮ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತಬೇಕಾಗಿದೆಯೋ, ಅಂತಹವರುಗಳು ನಮ್ಮ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ ನಾಚಿಕೆ ಬಿಟ್ಟು ಸುಮ್ಮನಿರುವುದು ನಮ್ಮ ನಾಡಿನ ದೌರ್ಭಾಗ್ಯವಾಗಿದೆ. ರಾಜ್ಯಕ್ಕೆ ಅನ್ಯಾಯವಾದಾಗಲೆಲ್ಲಾ ಇವರುಗಳು ಒಂದಾಗಿ ಹೋರಾಡಿ ನ್ಯಾಯ ಒದಗಿಸಿಕೊಟ್ಟಿದ್ದರೆ ಇಂದು ಕನ್ನಡಿಗ ಬೀದಿಗಿಳಿಯುವ ಪರಿಸ್ಥಿತಿಯೇ ಹುಟ್ಟುತ್ತಿರಲಿಲ್ಲ. ಕೃಷ್ಣಾ ನೆರೆಯ ಪರಿಹಾರ ವಿತರಣೆ, ಕೃಷ್ಣಾ ನೀರಾವರಿ, ಕಾವೇರಿ ನದಿ ನೀರು ಹಂಚಿಕೆ, ಮಹದಾಯಿ ಯೋಜನೆ, ಬೆಳಗಾವಿ ಕಾಸರಗೋಡು ಗಡಿ ಸಮಸ್ಯೆಗಳು, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿಕೆ, ಪ್ರತಿ ಮುಂಗಡಪತ್ರದಲ್ಲಿ ಕನ್ನಡನಾಡಿಗೆ ಹಂಚಿಕೆಯಾಗುವ ಯೋಜನೆಗಳು... ಯಾವುದರ ಬಗ್ಗೆಯೂ ನಾಡಿಗರ ಆಶಯಗಳಿಗೆ ಸ್ಪಂದಿಸದ ಸಂಸದರ ನಿರ್ವಿಣ್ಣತೆಯಿಂದ "
http://www.karnatakarakshanavedike.org/modes/view/61/karave-railway-horata.html
-ಗುರುಪ್ರಸಾದ್
"ಜನಪರ ಹೋರಾಟಗಳು ಸಮಸ್ಯೆಯ ಮೂಲೋಚ್ಚಾಟನೆಯತ್ತ ಗುರಿಯಾಗಿದ್ದರೆ ಅರ್ಥಪೂರ್ಣವಾಗಿರುತ್ತವೆ ಇಲ್ಲದಿದ್ದರೆ ಸದುದ್ದೇಶವಿದ್ದರೂ ಸಂಶಯವನ್ನು ಹುಟ್ಟುಹಾಕುತ್ತವೆ "
ReplyDeleteನೀವೂ ಅಷ್ಟೆ. ನಿಮಗೆ ನಿಜವಾಗಿಯೂ ಕನ್ನಡ, ಕರ್ನಾಟಕದ ಕಾಳಜಿ ಇದ್ದಿದ್ದರೆ ಕನ್ನಡ ಹೋರಾಟಗಾರರ ಬಗ್ಗೆ ಇಷ್ಟು ಕೀಳಾಗಿ ಬರೀತಿರಲಿಲ್ಲ. ನಿಮ್ಮ ಲೇಖನ ನಿಮ್ಮ ಕನ್ನಡತನದ ಬಗೆಯೂ ಸಂಶಯ ಹುಟ್ಟಿಸುತ್ತೆ
"ಕರ್ನಾಟಕದ ಸಮಸ್ಯೆ ನಮ್ಮ ಜನಪ್ರತಿನಿಧಿಗಳು! ಅವರನ್ನು ಹದ್ದುಬಸ್ತಿನಲ್ಲಿಟ್ಟು, ಜವಾಬ್ದಾರಿಯುತರನ್ನಾಗಿ ಮಾಡಿದರೇ ಅಷ್ಟೇ ಸಾಕು"
ಎಷ್ಟು ಸುಲಭವಾಗಿ ಹೇಳಿಬಿಟ್ಟೆ ಮಾರಾಯ! ಬೆಕ್ಕಿನ ಕತ್ತಿಗೆ ಗಂಟೆ ಕಟ್ಟಿದಷ್ಟೆ ಸುಲಭವಾಗಿದೆ ನಿನ್ನ ಉಪಾಯ.
ಸಂಸದರ ವಿರುದ್ಧವೂ ಕರವೇ ಪ್ರತಿಭಟನೆ ಮಾಡಿದ ವಿಷಯ ‘ಜಾಣಕುರುಡ‘ರಿಗೆ ಗೊತ್ತಿಲ್ಲದೇ ಇರೊದ್ರಲ್ಲಿ ಆಶ್ಚರ್ಯ ಇಲ್ಲ.
ನಾರಾಯಣ ಗೌಡರು ಈ ಬಗ್ಗೆ ಏನು ಹೇಳಿದ್ದರೆ ಗೊತ್ತಾ?
"ಯಾವ ಸಂಸದರು ನಮ್ಮಿಂದ ಆರಿಸಿ ಹೋಗಿ ನಮ್ಮ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತಬೇಕಾಗಿದೆಯೋ, ಅಂತಹವರುಗಳು ನಮ್ಮ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ ನಾಚಿಕೆ ಬಿಟ್ಟು ಸುಮ್ಮನಿರುವುದು ನಮ್ಮ ನಾಡಿನ ದೌರ್ಭಾಗ್ಯವಾಗಿದೆ. ರಾಜ್ಯಕ್ಕೆ ಅನ್ಯಾಯವಾದಾಗಲೆಲ್ಲಾ ಇವರುಗಳು ಒಂದಾಗಿ ಹೋರಾಡಿ ನ್ಯಾಯ ಒದಗಿಸಿಕೊಟ್ಟಿದ್ದರೆ ಇಂದು ಕನ್ನಡಿಗ ಬೀದಿಗಿಳಿಯುವ ಪರಿಸ್ಥಿತಿಯೇ ಹುಟ್ಟುತ್ತಿರಲಿಲ್ಲ. ಕೃಷ್ಣಾ ನೆರೆಯ ಪರಿಹಾರ ವಿತರಣೆ, ಕೃಷ್ಣಾ ನೀರಾವರಿ, ಕಾವೇರಿ ನದಿ ನೀರು ಹಂಚಿಕೆ, ಮಹದಾಯಿ ಯೋಜನೆ, ಬೆಳಗಾವಿ ಕಾಸರಗೋಡು ಗಡಿ ಸಮಸ್ಯೆಗಳು, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿಕೆ, ಪ್ರತಿ ಮುಂಗಡಪತ್ರದಲ್ಲಿ ಕನ್ನಡನಾಡಿಗೆ ಹಂಚಿಕೆಯಾಗುವ ಯೋಜನೆಗಳು... ಯಾವುದರ ಬಗ್ಗೆಯೂ ನಾಡಿಗರ ಆಶಯಗಳಿಗೆ ಸ್ಪಂದಿಸದ ಸಂಸದರ ನಿರ್ವಿಣ್ಣತೆಯಿಂದ "
http://www.karnatakarakshanavedike.org/modes/view/61/karave-railway-horata.html
-ಗುರುಪ್ರಸಾದ್
ಅಯ್ಯಾ, ನಿನ್ನ ಬ್ಲಾಗ್ ಅನ್ನು ಕನ್ನಡ ಥಿಂಕ್ ಟ್ಯಾಂಕ್ ಅಂತ ಕರಿಯೋ ಬದಲು ಅಮೆರಿಕಾದ ಕಸದ ಡಬ್ಬ ಅಂತ ಕರಿಯೋದು ಒಳ್ಳೇದು. americangarbagebin.blogspot.com ಅಂತ ಬದಲಾಯಿಸಿಕೊ.
ReplyDeleteಶೋಬಕ್ಕ ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ಕೊಡು. ಸುಮ್ಮನೇ ಏನೇನೋ ಬರೆದು ಓದುಗರ ದಿಕ್ಕು ತಪ್ಪಿಸಬೇಡ.
ಅಲ್ಲಾಪ್ಪ ರವೀ..
ReplyDeleteಆ ಶೋಭಕ್ಕಾ ಕೇಳಿದ ಒಂದು ಪ್ರಶ್ನೆಗೆ ಉತ್ತರ ಕೊಡೊಕ್ಕೆ ನಿನಗೆ ಆಗಲಿಲ್ಲ, ನೀನು ಹೇಗೆ ಇಡಿ ಕನ್ನಡ ಪ್ರತಿನಿಧಿಯಾಗಿ
"ಕನ್ನಡ ತಿಂಕ್ ಟ್ಯಾಂಕ್" ಅಂತ ಹೆಸರು ಇಟ್ಟುಕೊಂಡಿದ್ದೀಯಾ ?. ಖಾಲಿ ಟ್ಯಾಂಕ್ ಅಂತ ಇಟ್ಟುಕೊಂಡರೆ ಸ್ವಲ್ಪ ಅನ್ವರ್ಥನಾಮ ಅನಿಸುತ್ತದೆ.
ಒಂದು ಕಡೆ ಆ ಚಡ್ದಿಗಳ ಭಜರಂಗದಳವನ್ನು ಕ.ರ.ವೇ ಜೊತೆ ಸಮೀಕರಿಸುತ್ತಿದ್ದಿಯಾ, ರಾಜಕೀಯ ಮಾಡುತ್ತ ಇದ್ದಾರೆ ಅಂತ ಹೇಳುತ್ತೀಯಾ, ಒಟ್ಟಿನಲ್ಲಿ ನಿನ್ನ ಎಲ್ಲಾ ಬರೆದಿರುವ ಸಾರಂಶಕ್ಕೆ ಒಂದು ಹಿನ್ನಲೆ ಇಲ್ಲ, ಆಧಾರ ತುಂಬಾ ದೂರ.
ನಿನಗೆ ಚಿಂತನೆ ಮಾಡಲು ಅದ್ರು ಸಾಮಗ್ರಿ ಕೊರತೆ ಇದೆ ಅಂತ ಅನಿಸುತ್ತದೆ, ಅದಕ್ಕೆ ನಿನ್ನ ವಾದವನ್ನು ಸಮರ್ಥಿಸಲು ನಿನಗೆ ಹಿಂದೆ ಗೊತ್ತಿರುವ ಒಂದು ವಿಷ್ಯದ ಬಗ್ಗೆ ಸಮೀಕರಿಸುತ್ತಿಯಾ, ಆಮೇಲೆ ಲೇಖನ ದಾರಿ ತಪ್ಪುತ್ತದೆ. ಇದನ್ನು ನೋಡುತ್ತಿದ್ದರೆ, ನನಗೆ ಒಂದು ಗುಂಡನ ಜೋಕ್ ಜ್ಞಾಪಕ ಬರುತ್ತದೆ.
ಗುಂಡ ಪರೀಕ್ಷೆಗೆ essayಗೆ ಹಸು ಬಗ್ಗೆ ಮಾತ್ರ ಓದಿರುತ್ತಾನೆ, ಆದರೆ ಪರೀಕ್ಷೆಯಲ್ಲಿ ಅದನ್ನು ಬಿಟ್ಟು ಮನೆ, ಆಕಾಶ ಅಂತ ಬಂದಿರುತ್ತದೆ, ಸರಿ ಜಾಣ ಗುಂಡ ಶುರು ಮಾಡುತ್ತಾನೆ, ನಮ್ಮ ಮನೆ ಪಕ್ಕ ಹುಲ್ಲು ಇದೆ,ಅಲ್ಲಿ ಹಸು ಮೇಯಲು ಬರುತ್ತದೆ, ಮುಂದಿನದು ಬರೀ ತಾನು ಓದಿದ್ದ ಹಸುವಿನ ಬಗ್ಗೆ ಪ್ರಭಂದ. ಹಾಗೇ ಇದೆ ನಿನ್ನ ಲೇಖನ ಕೂಡ...
ಆದರೆ ಕ ರ ವೇ ಯವರು ಹೆಸರಿಡುವುದಕ್ಕೆ "ಒಬ್ಬ ಸಮರ್ಥ ಕನ್ನಡಿಗನ" ಹೆಸರನ್ನು ಇಡಲು ಒತ್ತಾಯಿಸಿದ್ದಾರೆ ಅದು ಪರಿಪೂರ್ಣ ಕನ್ನಡ ಹೋರಾಟವಾಗುತ್ತಿತ್ತು. ಅದು ಕೆಂಪೇಗೌಡ ಕೂಡ ಆಗಬಹುದು ... ಕನ್ನಡಕ್ಕಾಗಿ ಹೋರಾಡಿದರೆ ನನ್ನ ಬೆಂಬಲ ಇದೆ. ಅದರ ಜೊತೆಗೇ ಹೆಸರಿನ ರಾಜಕಾರಣ ಯಾಕೋ ಸರಿ ಅನ್ನಿಸುತ್ತಿಲ್ಲ. ಎಲ್ಲ ಕನ್ನಡಿಗರ ಅಭಿಪ್ರಾಯ ಕೇಳಿ (ವರ್ಷದ ಉತ್ತಮ ನಟ, ನಟಿ ಏನೇನೋ ಎಂದು ಈಗೀಗ ಜನಾಭಿಪ್ರಾಯ ಸಂಗ್ರಹಣೆ ನಡೆಯುವಾಗ ಇದೇನೂ ಅಸಾಧ್ಯವಾದುದಲ್ಲ) ಹೆಸರನ್ನು ಇಟ್ಟರೆ ಒಳ್ಳೆಯದು. ಈ ಜಗಳ ನೋಡಿದರೆ ನಮ್ಮ ನಾಡಿನಲ್ಲಿ ಒಮ್ಮತದಿಂದ ಜನ ಒಪ್ಪುವ ಯಾರೂ ಇಲ್ಲವಾ ಎಂದು ಹೆದರಿಕೆಯಾಗುತ್ತದೆ. ಕೆಂಪೆ ಗೌಡರ ಹೆಸರಲ್ಲಿ ಸಾಕಷ್ಟು ಸ್ಥಳಗಳು ಬೆಂಗಳೂರಿನಲ್ಲಿ ಇವೆ ... ಅಷ್ಟೇ ಏಕೆ ಬೆಂಗಳೂರು ಎಂದರೆ ಕೆಂಪೆ ಗೌಡ ಎಂದರೂ ಅಡ್ಡಿ ಇಲ್ಲ. ವಿಮಾನ ನಿಲ್ದಾಣದ ಹೆಸರನ್ನು ಮತ್ತೊಬ್ಬ ಸ್ಮರಣೀಯರನ್ನು (ಕರ್ಣಾಟಕದ ಎಕೈತೆಗಾಗಿ ದುಡಿದ / ಹೋರಾಡಿದವರ) ಗೌರವಿಸಲು ಬಳಸಿದರೆ ಒಳ್ಳೆಯದು ... ಕರ್ನಾಟಕವೆಂದರೆ ಬರೀ ಬೆಂಗಳೂರು ಅಲ್ಲ ... ಬೆಂಗಳೂರು ಎಂದರೆ ಕರ್ನಾಟಕ ... - ಸತ್ಯ
ReplyDeleteಈ ಇಂಟರ್ನೆಟ್ ಬಂದಮೇಲೆ ಕನ್ನದದಲ್ಲಿ ಬರೆಯೋರ ಸಂಖ್ಯೆ ಜಾಸ್ತಿಯಾಗಿದೆ! ಸ್ವಲ್ಪ ಕನ್ನಡ ಬರಿಯೋಕೆ ಗೊತ್ತಿದ್ರೆ ಸಾಕು. ಗೂಗಲ್ ನಲ್ಲಿ ಚಕಚಕ ಹುಡುಕಿ ಒಂದೆರೆಡು ಗಂಟೆಗಳಲ್ಲಿ ಏನಾದರೊಂದು ಲೇಖನ ಬರೀಬಹುದು. ನೆನ್ನೆ ಮೊನ್ನೆ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು ಫೋಟೋಗಳ ಆಧಾರದ ಮೇಲೆ ಬರೆದ ಇಂತಹ ಲೇಖನದಲ್ಲಿ ಸುಲಭವಾಗಿ ಮಾಡಬಹುದಾದ್ದು ಅಂದ್ರೆ ಯಾರನ್ನಾದ್ರೂ ಬಯ್ದು ಮಾನ ಕಳಿಯೋದು!
ReplyDeleteಪಾ.ವೆಂ ಆಚಾರ್ಯರಂತಹ ಪತ್ರಕರ್ತರನ್ನು ತಂಪುಹೊತ್ತಿನಲ್ಲಿ ನೆನೆಯಬೇಕು. "ಬ್ರಾಹ್ಮಣರೇನು ಮಾಡಬೇಕು" ಅನ್ನೋ ಒಂದು ಕ್ಲಿಷ್ಟವಾದ ವಿಷಯವನ್ನು ಕೈಗೆತ್ತಿಕೊಂಡು ಭಾವನೆಗಳಿಗಿಂತ ವಿಷಯಕ್ಕೆ ಪ್ರಾಧಾನ್ಯವನ್ನು ಕೊಟ್ಟು, ಬರೆದಿರುವ ಈ ವಿಮರ್ಶಾ ಲೇಖನ ಇಂದಿನ ಬರಹಗಾರರಿಗೆ ಮಾದರಿಯಾಗಬೇಕು. ಬರಹಗಾರರು ಎಂದೂ ಸೌಜನ್ಯದ ಎಲ್ಲೆಯನ್ನು ಮೀರಬಾರದು. ಇಲ್ಲದಿದ್ದರೆ ಅದು ಅಕ್ಷರ ವ್ಯಭಿಚಾರವಾಗುತ್ತೆ.
http://pratikriye.blogspot.com/2007/06/blog-post.html
-ಅರ್.ಎನ್. ಜೋಯೀಸ್
[Most of the articles by Ravi Hanj are written in the air or the airports of USA as he finds some free time during his busy schedules.
ReplyDeletehttp://www.ourkarnataka.com/ravihanj/ravi_hanj.htm
]
May be his head is full of air when he writes articles. Sometimes there will be shortage of oxygen in the plane. This could explain why he wrote such crappy illogical articles.
:)
Truth is BITTER. Who can't digest will constipate like these comments.
ReplyDeleteTruth is HARDER. Who can't digest will vomit like the above article.
ReplyDeleteರವಿಯವರಿಗೆ....
ReplyDeleteಕನ್ನಡ ಓರಾಟಗಾರರ "ಕೆಂಪೇಗೌಡ" ಹೆಸರಿನ ಜಾಡಿನಲ್ಲಿ.... ಬರಹದ ಬಗ್ಗೆ
ಕೆಂಪೇಗೌಡರು ಮಣ್ಣಿನ ಕೋಟೆ ಕಟ್ಟಿದ್ದಾರೆ, ಅದಕ್ಕಿಂತ ಕಲ್ಲಿನ ಕೋಟೆ ಕಟ್ಟಿದೋರೇ ಬೇಕಾದಷ್ತು ಜನರಿದ್ದಾರೆ, ಕೆಂಪೇಗೌಡರೊಬ್ಬ ಸಾಮಾನ್ಯ ಸಾಮಂತ, ಇಂಥಾ ಸಾವಿರಾರು ಜನ ಆಗಿಹೋಗಿದ್ದಾರೆ... ಇತ್ಯಾದಿ ಅಭಿಪ್ರಾಯ ಕೊಟ್ಟಿದ್ದೀರ. ಕೆಂಪೇಗೌಡರು ನೀಡಿದ ಕೊಡುಗೆಗಳ ಬಗ್ಗೆ ತಮ್ಮ ಅಭಿಪ್ರಾಯ ನೀಡಲು ಮುಂದಾಗಿರುವುದೇ ಬಾಲಿಶತನ. ಇತಿಹಾಸದಲ್ಲಿ ಆಗಿಹೋದ ನಾನಾ ವ್ಯಕ್ತಿಗಳಿದ್ದಾರೆ. ಅವರ ಕೊಡುಗೆಗಳ ಆಧಾರದ ಮೇಲೆ ಇವರು ಹೆಚ್ಚು ಇವರು ಕಡಿಮೆ ಎನ್ನುವುದು ತಪ್ಪು. ಪುಲಿಕೇಶಿ ಸಾರ್ವಭೌಮ - ರಾಯಣ್ಣ ಸೈನಿಕ ಎಂದು ರಾಯಣ್ಣನನ್ನು ಹೀಗಳೆಯಲಾದೀತೆ? ಚನ್ನಮ್ಮ ರಾಣಿ - ಓಬವ್ವ ಸಾಮಾನ್ಯ ಹೆಣ್ಣು ಎಂದು ಹೀಗಳೆಯಲಾಗುತ್ತದೆಯೇ? ಕೃಷ್ಣದೇವರಾಯ ಚಕ್ರವರ್ತಿ - ಎಚ್ಚಮ ನಾಯಕ ಸಾಮಣ್ತ ಎಂದು ಅವನ ದೇಶಭಕ್ತಿಯನ್ನು ಅಲ್ಲಗಳೆಯಲಾದೀತೆ? ಕೆಂಪೇಗೌಡರನ್ನು ಬೇರೆಬೇರೆ ಚಕ್ರವರ್ತಿಗಳ ಜೊತೆ ಇಟ್ಟು ತುಲನೆ ಮಾಡುವುದೂ ಇಂಥಾ ಒಂದು ಮೂರ್ಖತನದ ಪ್ರತೀಕ. ಕೆಂಪೇಗೌಡರನ್ನು ಐತಿಹಾಸಿಕ ವ್ಯಕ್ತಿಯಲ್ಲ ಅನ್ನುವ ತಮ್ಮ ನಿಲುವು ಯಾವರೀತಿಯಿಂದ ನೋಡಿದರೂ ಅಪ್ರಬುದ್ಧವಾದುದಾಗಿದೆ.
ಕೆಂಪೇಗೌಡರ ಬಗ್ಗೆಯೇ ಹೇಳುವುದಾದರೆ, ದಯಮಾಡಿ ತಾವು ಅವರ ಇತಿಹಾಸವನ್ನೊಮ್ಮೆ ಓದಿ.(ಸರಿಯಾಗಿ) ಕೋರಮಂಗಲದ ದೇವಸ್ಥಾನದಲ್ಲಿರುವ ಕೆಂಪೇಗೌಡರ ಸೊಸೆ ಲಕ್ಷ್ಮವ್ವನ ತ್ಯಾಗದ ಕಥೆ ತಿಳಿಯಿರಿ. ಒಂದು ನಗರವನ್ನು ಕಟ್ಟಿ, ಅಲ್ಲಿನ ಜನತೆಗೆ ಅನುಕೂಲವಾಗುವಂತೆ 114 ಕೆರೆಗಳನ್ನು ಕಟ್ಟಿದ್ದು, ಎಲ್ಲ ಜನಾಂಗದ ಕುಲಕಸುಬಿಗೆ ಪೂರಕವಾಗುವಂತೆ 70ಕ್ಕೂ ಹೆಚ್ಚು ಕೆರೆಗೆಳನ್ನು ಕಟ್ಟಿದ್ದು, ವಿಜಯನಗರದ ಕೃಷ್ಣದೇವರಾಯನ ಅಳಿಯ ತಿರುಮಲರಾಯನನ್ನು ಮಲ್ಲಯುದ್ಧದಲ್ಲಿ ಸೋಲಿಸಿದ್ದು ಮೈಸೂರಿನ ರಣಧೀರ ಕಂಠೀರವ ತಿರುಚನಾಪಳ್ಳಿಯಲ್ಲಿ ಗೆದ್ದದ್ದೂ ಒಂದೇ ತೆರನಾದ ಸಾಹಸವಲ್ಲವೇ? ಗುರು ಮಾಧವ ಭಟ್ಟರ ಆಸೆ ಅಣತಿಯಂತೆ ಹಂಪೆಯಂತಹ ರಾಜಧಾನಿಯೊಂದನ್ನು ಕಟ್ಟಲು ಮುಂದಾಗಿ ಬೆಂಗಳೂರನ್ನು ಕಟ್ಟಿದ್ದೂ, ಇದೇ ಕಾರಣಕ್ಕೆ ಕೃಷ್ಣದೇವರಾಯನ ಬಂಧಿಯಾಗಿ ಐದು ವರ್ಶ ಸೆರೆವಾಸ ಅನುಭವಿಸಿದ್ದೂ, ನಂತರ ತನ್ನ ಕೃಷ್ಣದೇವರಾಯನಿಂದ ತಪ್ಪೊಪ್ಪಿಗೆ ಪಡೆದು ಸನ್ಮಾನಿತರಾಗಿದ್ದು... ಇವರ ಇತಿಹಾಸದ ಪುಟಗಳಲ್ಲಿವೆ. ಕಣ್ಣು ಕಾಲದ ಪೂರ್ವಾಗ್ರಹ ಪೀಡಿತ ಗಾವಿಲರಾಗದೆ ಇವನ್ನು ಗುರುತಿಸಿ. ಇಷ್ಟಕ್ಕೂ ಮಿಗಿಲಾಗಿ ಇಡೀ ಬೆಂಗಳೂರು ಪ್ರಾಂತ್ಯ (ಮಾಗಡಿ, ಯೆಲಹಂಕ...ಇತ್ಯಾದಿಗಳೂ ಸೇರಿದ ಭಾಗ) ಕೆಂಪೇಗೌಡರನ್ನು ತಮ್ಮ ನಾಡ ಪ್ರಭು ಎಂದು ಮನ್ನಿಸಿ ಐನೂರು ವರ್ಷಗಳಿಂದಲೂ ಅವರ ಹೆಸರು ಚಿರಸ್ಥಾಯಿಯಾಗುವಂತೆ ಗೌರವಿಸುತ್ತಿರುವುದು ನಿಮಗೆ ಕಾಣುತ್ತಿಲ್ಲವೇ? ಹಾಗಿರುವಾಗ ಇವರ ಬಗ್ಗೆ ಕೀಳಾಗಿ "ಕೆಂಪೇಗೌಡರು ಐತಿಹಾಸಿಕ ವ್ಯಕ್ತಿಯಲ್ಲ" ಅನ್ನೋದು ಸರೀನಾ?
ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಗಾರರನ್ನು ತಾವು ಯಾವ ಕಾರಣದಿಂದ "ಓರಾಟಗಾರರು" ಎಂದು ಮೂದಲಿಸಿದ್ದೀರಾ? ಅವರ ಕನ್ನಡ ಉಚ್ಚರಣೆಯಿಂದಲೇ? ಕನ್ನಡದ ಸರಿಯಾದ ಸ್ವರೂಪ ತಿಳಿಯದೆ ತಾವು ಹೀಗೆ ಹ-ಅ ಕಾರಗಳ ಭೇದವನ್ನು ಮೇಲು ಕೀಳಾಗಿ ವಿಂಗಡಿಸಲು ಬಳಸಿರುವುದು ತಮಗಿರುವ ಅರಿವಿನ ಕೊರತೆಯನ್ನು ಸಾರುತ್ತಿದೆ. ದಯಮಾಡಿ ಕನ್ನಡ ಪರ ಬದ್ಧತೆಗೂ, ಉಚ್ಚರಣೆಗೂ ತಳುಕು ಹಾಕಬೇಡಿ. ಅದು ನಾಡಪರವಾಗಿ ಚಿಂತಿಸಲು ಮುಂದಾಗಿರುವ ತಮ್ಮನ್ನು ಹಗುರವನ್ನಾಗಿಸಿಬಿಡುತ್ತದೆ. ಇದಕ್ಕೆ ಬದಲಾಗಿ ಅಂತಹ ವ್ಯಕ್ತಿಗಳು ಮಾಡುತ್ತಿರುವ ಕೆಲಸಗಳನ್ನು ವಿಶ್ಲೇಷಿಸಿ, ತಪ್ಪು ಅನಿಸಿದ್ದನ್ನು ಅವರ ಗಮನಕ್ಕೆ ತನ್ನಿ. ಹಾಗಿಲ್ಲದೆ ಹೀಗೆ ಬರೆಯುವುದು ತಾವು ಚಿಂತಕ ಎಂದು ಕರೆದುಕೊಳ್ಳಲು ಮಾತ್ರಾ ಸೀಮಿತರಾಗಿದ್ದೀರಾ ಮತ್ತು ಆ ಚಿಂತಕನ ಜವಾಬ್ದಾರಿಯನ್ನು ಅರಿತಿಲ್ಲವೆಂದು ಸಾರುತ್ತಿದೆ.
ಇದಕ್ಕಿಂತ ಹೆಚ್ಚಿನದಾಗಿ ರಕ್ಷಣಾ ವೇದಿ ಬೆಂಗಳೂರಿಗೆ ಸೀಮಿತವಾಗಿದೆ, ಅವರ ಹೋರಾಟ ಬೆಂಗಳೂರಿಗೆ ಸೀಮಿತವಾಗಿದೆ ಎಂದೂ, ಬೆಂಗಳೂರು ಕನ್ನಡವೇ ಶ್ರೇಷ್ಟವೆಂಬ ಸಿದ್ಧಾಂತ ಹೊಂದಿರುವವರೂ ಎಂದೆಲ್ಲಾ ಬರೆದಿರುವುದು ತಮ್ಮ ಅವಿವೇಕಕ್ಕೆ ಹಿಡಿದ ಕನ್ನಡಿಯಾಗಿದೆ. ಚಿತ್ರಾವತಿ, ಕಾರವಾರ, ಕಾವೇರಿ, ಬೆಳಗಾವಿ, ಬಳ್ಳಾರಿ, ನೈಋತ್ಯ ವಲಯದ ಹುಬ್ಬಳ್ಳಿ ಕೇಂದ್ರಿತ ರೈಲ್ವೇ ನೇಮಕಾತಿಯ ಹೋರಾಟಗಳು ಯಾವುದೂ ತಮ್ಮ ಕಣ್ಣಿಗೆ ಕಾಣದಿರುವುದು ತಮ್ಮ ಚಿಂತನೆಯ ಕಣ್ಣಿಗೆ ಕವಿದಿರೋ ಕುರುಡುತನವನ್ನು ತೋರಿಸುತ್ತಿದೆ. ಕನ್ನಡ ಹೋರಾಟಗಾರರನ್ನು ಬೆಂಗಳೂರಿನಲ್ಲಿ ಕನ್ನಡದ ದುಸ್ಥಿತಿಗೆ ಹೊಣೆಗಾರರನ್ನಾಗಿ ಮಾಡುವುದೂ, ಅವರ ಹೋರಾತಗಳು ತತ್ವನಿಷ್ಟವಾಗಿದ್ದರೆ ಅದು ಅವರ ಪ್ರಾಯಶ್ಚಿತ್ತವೆನ್ನುವುದು ವಿಕೃತಿಯ ಪರಮಾವಧಿ.
ಕಡೆಯಲ್ಲಿ ತಾವು ಬರೆದ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಬಗೆಗಿನ ಕಲ್ಪಿತ ಕಥೆ ತಮ್ಮ ಇಡೀ ಚಿಂತನೆ ಯಾವ ತಳಹದಿಯ ಮೇಲೆ ನಿಂತಿದೆ ಎಂದು ತೋರಿಸುತ್ತದೆ. ಮಿತ್ರರೇ, ಕನ್ನಡ ಚಿಂತಕರಿಗೆ "ಕನ್ನಡ-ಕರ್ನಾಟಕ-ಕನ್ನಡಿಗ" ಎನ್ನುವುದರ ಏಳಿಗೆಯೊಂದೇ ಮೊದಲ ಆದ್ಯತೆ ಆಗಿರಬೇಕು. ಉಳಿದದ್ದೆಲ್ಲಾ ಅದು ದೇಶ, ವಿದೇಶ ಯಾವುದೇ ಆಗಿರಲಿ ಪೂರಕವಾದರೆ ಕೈಮುಗೀತಿವಿ, ಮಾರಕವಾದರೆ ಕಾಲಲ್ಲಿ ಒದೀತೀವಿ ಅನ್ನೋ ಮನಸ್ಥಿತಿ ಇರಬೇಕಾದ್ದು ಅತ್ಯಗತ್ಯ ಅಂತ ನನ್ನ ಭಾವನೆ.
ಮುಂದಿನ ಬರಹದ ಬಗ್ಗೆ ಮತ್ತೆ ಬರೀತೀನಿ...
ವಿಶ್ವಾಸಿ
ಮತ್ತೊಮ್ಮೆ ನಮಸ್ಕಾರ ರವಿಯವರೇ,
ReplyDeleteಚುನಾವಣೆ ಬಗ್ಗೆ ಬರೀತಾ ರವಿಕೃಷ್ಣಾ ರೆಡ್ಡಿ, ಲೋಕ ಪರಿತ್ರಾಣ ಇತ್ಯಾದಿಗಳ ಬಗ್ಗೆ, ಮಹಿಮಾ ಪಟೇಲ್, ಗೆಳೆಯ ಚಂದ್ರಶೇಖರ್ ಬಗ್ಗೆ ಎಲ್ಲಾ ಬರೆದಿದ್ದೀರಿ. ಜೊತೆಯಲ್ಲಿ ಅತೀವವಾದ ಹತಾಶೆ ತೋರಿಸಿದ್ದೀರಾ! ಮಿತ್ರರೇ, ಚಿಂತಕನೆನಿಸಿಕೊಳ್ಳುವವನಿಂದ ಹತಾಶೆ ದೂರವಿರಬೇಕು ಅನ್ನೋದು ನಿಮಗೆ ನನ್ನ ಕಿವಿಮಾತು. ಚುನಾವಣೆ ಬಗ್ಗೆ ಬರೀತ ಪ್ರಾಮಾಣಿಕತೆ ಎನ್ನೋದು ಎಲ್ಲೋ ಚಿಕ್ಕ ಊರುಗಳಲ್ಲಿವೆ, ಬೆಂಗಳೂರಿನಲ್ಲಿಲ್ಲ ಅನ್ನುತ್ತೀರಲ್ಲಾ, ಸರೀನಾ? ಇಡೀ ವಿಧಾನ ಸಭೆಯ 224 ಸ್ಥಾನಗಳಲ್ಲಿ ನೀವು ಹೇಳಿದಂತೆ ಪ್ರಾಮಾಣಿಕತೆ ತುಂಬಿ ತುಳುಕುತ್ತಿರುವ ಕ್ಷೇತ್ರಗಳ ಸಂಖ್ಯೆ ಬೆಂಗಳೂರು, ಮತ್ತು ಬೆಂಗಳೂರಿನಂತಹ ಕೆಟ್ಟುಹೋದ ಊರುಗಳಿಗಿಂತ ಹೆಚ್ಚಿಲ್ಲವೇ? ರವಿಕೃಷ್ಣಾ ರೆಡ್ಡಿಯವರ ಪ್ರಯತ್ನಗಳನ್ನು ಪ್ರಾಮಾಣಿಕ ಅನ್ನುವ ತಮಗೆ ವಿಕ್ರಾಂತ ಕರ್ನಾಟಕದ ಅನೇಕ ಬರಹಗಳು ಪಕ್ಷಪಾತ, ಜಾತಿವಾದಗಳನ್ನು, ವೈಯುಕ್ತಿಕ ನಿಂದನೆಗಳನ್ನು ಹೊಂದಿರುವುದು ಕಂಡಿಲ್ಲವೇ? ಎದಪಂಥೀಯ ನಿಲುವಿನ ರವಿರೆಡ್ಡಿಯವರ ಬಗ್ಗೆ ಗೌರವ ಇಟ್ಟುಕೊಂಡೇ ಹೇಳಬೇಕಾದ ಮಾತಿದೆ. ಬಂಡವಾಳಶಾಹಿ, ಊಳಿಗ ಮಾನ ವ್ಯವಸ್ಥೆ, ಸಮಾನತೆ ಅದೂ ಇದೂ ಅಂತ ಮಾತಾಡ್ತಾ ಅಮೇರಿಕಾದ ಆಶ್ರಯದಲ್ಲಿ ತಾವು ಸುಖ ಸವಲತ್ತು ಅನುಭವಿಸೋ ಜನರನ್ನು ಹ್ಯಾಗೆ ಜನತೆ ಬೆಂಬಲುಸ್ತಾರೆ. ಇಷ್ಟಕ್ಕೂ ಬುಡಮಟ್ಟದ ಸಂಘಟನೆಯಿಲ್ಲದೆ, ಕ್ಷೇತ್ರದ ಜನರಿಗೆ ಪರಿಚಿತರಾಗದೆ, ಚುನಾವಣೆಗೆ ನಿಂತರೆ ಹ್ಯಾಗೆ ಗೆಲ್ತಾರೆ ಅಂತ ಸ್ವಲ್ಪ ಯೋಚಿಸಿ. ಇದನ್ನು ಬಿಟ್ಟು ಜನತೆಗೆ ಪ್ರಾಮಾಣಿಕತೆ ಇಲ್ಲ, ಮೌಲ್ಯಗಳಿಗೆ ಬೆಲೆಯಿಲ್ಲ ಅನ್ನೋದು ಬರೀ ಬದಬಡಿಕೆ ಆಗುತ್ತದೆ. ಇದು "ಚಿಂತಕ"ರಿಗೆ ಶೋಭಿಸುವುದಿಲ್ಲ.
ಹೋರಾಟಗಾರರು ಹೋರಾಡಬೇಕಿರುವುದು ಕೃಷ್ಣ ಸರ್ಕಾರದ ವಿರುದ್ಧ, ರಾಜಕಾರಣಿಗಳ ವಿರುದ್ಧ ಎನ್ನುವುದು ಸರಿಯಾದ ಅಭಿಪ್ರಾಯವೆ ಆಗಿದ್ದರೂ ಸಂಬಂಧಿಸಿದ ಸಂಸ್ಥೆಗಳ ಮೇಲೆ, ಸರ್ಕಾರದ ಮೇಲೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡಬಾರದು ಅನ್ನುವಂತೆ ಇದು ಧ್ವನಿಸುತ್ತಿರುವುದು ಸರಿಯಾಗಿಲ್ಲ. ಇನ್ನೆಲ್ಲೋ ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ನೇರವಾಗಿ ಜರಿಯೋ ನೀವು ಅಂಗೈ ಹುಣ್ಣಿನಂತೆ ಕಾಣುತ್ತಿರುವ ರೆಡ್ಡಿ ಸೋದರರ ಬಿಜೆಪಿ ಮೇಲಿನ ಹಿಡಿತವನ್ನು ಕಾಣದವರಂತೆ, ಎಲ್ಲೋ ಕೇಳಿದ ವದಂತಿಯಂತೆ ಬರೆಯೋದು "ನಿಷ್ಪಕ್ಷಪಾತ ನಿಲುವು" ತಮಗಿಲ್ಲ ಅನ್ನೋದನ್ನು ತೋರಿಸುತ್ತಿದೆ.
ಅಣಕದಲ್ಲಿ ಕೆಂಪೇಗೌಡರ ಮೂಲ, ಅವರ ಮಾತೃಭಾಷೆ ಬಗ್ಗೆ ಸಂಶೋಧನೆ ಮಾಡಿ ಬರ್ದಿದೀರಾ, ಅದು ಅಪ್ರಸ್ತುತ ಅಲ್ಲವೇ? ಬೆಂಗಳೂರು ನಗರವನ್ನು ಕಟ್ಟಿದವರು ಅನ್ನುವ ಕಾರಣದಿಂದ ಅವರಿಗೆ ಮನ್ನಣೆಯಿದೆ ಅನೋದನ್ನು ಮಾತ್ರಾ ಅರ್ಥ ಮಾಡಿಕೊಳ್ಳಿ.
ವಿಶ್ವಾಸಿ
ತಿಮ್ಮಯ್ಯ
ಅಲ್ಲಾಪ್ಪ ರವೀ,
ReplyDeleteಮೊನ್ನೆ ಎಲ್ಲೋ ಓದ್ತಾ ಇದ್ದೆ, ಪ್ರಯಾಣದಲ್ಲಿ ಯಾವ ರೀತಿಯ ಟೈಂಪಾಸ್ ಮಾಡಬಹುದು ಅಂತ, ನೀನು ಹೊಸ ಐಡಿರಿಯಾ ಕೊಟ್ಟಿದ್ದೀಯಾ.. ಗೂಗಲ್ ಇಲ್ಲಾ ವೀಕಿಪಿಡೀಯಾನಲ್ಲಿ ವಿಷ್ಯಗಳನ್ನು ತೆಗಿ ಒಂದು ಲೇಖನ ಬರಿ, ಮೊದಲೇ prejudice ಆಗಿ ಹೀಗೆ ಬರೆಯಬೇಕು ಎಂದು ನಿಶ್ಚಯಿಸಿ ಹಾಗೆ ಬರೆದಿರುತ್ತಿಯಾ.
ವೀಕಿಪೀಡಿಯಾದಲ್ಲಿ ಯಾರು ಬೇಕಾದರೂ ಬರೆಯಬಹುದು, ಬೇಕಿದ್ದರೆ ಸರ್.ಎಂ.ವಿ ಅವರನ್ನು ಪಾಕಿಸ್ತಾನ್ ಇಂದ ವಲಸೆ ಬಂದು, ಕರ್ನಾಟಕದಲ್ಲಿ ನೆಲಸಿದರು ಅಂತ ಕ್ಯೂಯಬಹುದು. ಅದನ್ನೇ ನಿಜ ಅಂತ ನಂಬಿಕೊಂಡು ನೀನು, ಪುಲಕೇಶಿನ ಮರಾಠಿ ಮಾಡಿ, ಕೃಷ್ಣದೇವರಾಯನನ್ನು ಗುಲ್ಟಿ ಮಾಡಿ, ಮಯೂರವರ್ಮನ್ನ ತಮಿಳು ಮಾಡಲು ಹಿಂಜರಿಯುವದಿಲ್ಲ.
ಕರ್ನಾಟಕದ ಚರಿತ್ರೆ ನಿನಗೆ ಇರುವ ವಿಕೀಪಿಡೀಯಾದಲ್ಲಿ ಇಲ್ಲಾಪ್ಪ, ನೀನು ಶಾಲೆಯಲ್ಲಿ ಖಂಡಿತಾ ಓದಿರುವದಿಲ್ಲ, ಅದ್ದರಿಂದ ಬರೆಯುವ ಮುಂಚೆ ಸ್ವಲ್ಪ ಯೋಚನೆ ಮಾಡು.
ಕರ್ನಾಟಕದ ಬಗ್ಗೆ ಬರೀಯಬೇಕು ಅಂದರೆ ಬಹಳ ಸುಲಭ ಅಲ್ಲವೇ ?... ಜಾತಿಯ ಎಳೆಯನ್ನು ತಂದು ಅದಪ್ಪಾ ಕನ್ನಡ ಅವರನ್ನು ತೆಗೆಳಿ, ನಿಂದೆ ನಿಜವಾದ ಅನ್ನೋ ಭ್ರಮೆಯಲ್ಲಿ ತೇಲುತ್ತಿರುವ ನಿನಗೆ ಸಿಗುವ ಅಭಿಮಾನಿಗಳು ಕೂಡ ಅವರೇ ಬಿಡಿ.
ನೀನು ಕನ್ನಡಕ್ಕೆ ನಯಾಪೈಸೆ ದುಡ್ಡು ಕೊಟ್ಟಿಲ್ಲ ಅಂದ ಮಾತ್ರಕ್ಕೆ ಎಲ್ಲಾ ಕನ್ನಡಿಗರೂ ನಿನ್ನ ತರಹ ಇರುವದಿಲ್ಲ, ಕನ್ನಡ ಹೋರಾಟಕ್ಕೆ ಸಹಾಯ ಮಾಡಿರುವ ಸುಮಾರು ಜನ ಇದ್ದಾರೆ, ಆವ್ರು ನಿನಗಿಂತ ಹೆಚ್ಚು ಓದಿದವರು.
ಇನ್ನು ನೀನು ದುಡ್ಡು ಕೊಟ್ಟರೆ ಮಾತ್ರ ಒಂದು ಸಂಘಟನೆ ನಡೆಯುತ್ತದೆ, ಅದು ಲೀಗಲ್ ಇಲ್ಲಾ ಅದು ರೋಲಕಾಲ್ ದುಡ್ಡು ಅನ್ನೋ ಭ್ರಮೆ ಇಂದ ಆಚೆ ಬಾ ಮರಿ...
ಅಮೇರಿಕಾದಲ್ಲಿ ಇದ್ದು ಅಮೇರಿಕಾ ಬಗ್ಗೆ ಬರಿ ಸಾಕು, ಅದು ಹೆಚ್ಚು ಸೂಕ್ತ ಅನಿಸುತ್ತದೆ, ಕಣ್ಣಿಗೆ ಕಾಣದ್ದು ಯಾವಗಲೂ ಕತ್ತಲೆಯೆ .. ಹೇಗೆ ನಿನಗೆ ನಿಮ್ಮ ಕರ್ನಾಟಕ ಇದೆಯೋ ಹಾಗೆ.
-ಮಹಂತೇಷ್
ಮನ್ನಿಸಿ,
ReplyDeleteಅದು 72 ಕೆರೆಗಳಲ್ಲ, ಪೇಟೆಗಳು...ಬಳೆ ಪೇಟೆ, ಅಕ್ಕಿಪೇಟೆ, ಉಪ್ಪಾರ ಪೇಟೇ ...ಹೀಗೆ
ತಿಮ್ಮಯ್ಯ
ಮಗದೊಮ್ಮೆ ನಮಸ್ಕಾರ ರವಿಯವರೇ,
ReplyDeleteಕೆಂಪೇಗೌಡರ ಹೆಸರು ಬೇಡ ಅನ್ನೋ ಭರದಲ್ಲಿ ಹ್ಯಾಗೆ ದುಡುಕಿದ್ದೀರಾ ನೋಡಿ. ಶಹಜಿ ದಾಳಿಗೆ ಸಿಕ್ಕಿದೊಡನೆ ಬೆಂಗಳೂರಿನ ಬೋರ್‍ಡು ಮುರಿದು ಬಿತ್ತು ಅಂತ ಓದುಗರು ಅನ್ನುತ್ತಿದ್ದಾರೆ ಅನ್ನುವ ಗುರಾಣಿ ಇಟ್ಟುಕೊಂಡು ಬರೆದಿದ್ದೀರ. ಮಿತ್ರರೇ, ತಾವು ಯಾರ ಹೆಸರಿಡಬೇಕೆಂಬ ಪ್ರತಿಪಾದನೆ ಮಾಡುತ್ತಿದ್ದೀರೋ ಅವರೆಲ್ಲರ ಸಾಧನೆಗಳೂ ಹೀಗೇ ಇತಿಹಾಸದ ಹೊಡೆತದಲ್ಲಿ ಮುಕ್ಕಾಗಿ ಹೋಗಿರುವವೇ ಆಗಿವೆ. ಪುಲಿಕೇಶಿ ಸತ್ತಿದ್ದು ತಮಿಳು ಪಲ್ಲವ ನರಸಿಂಹವರ್ಮನ ದಾಳಿಗೆ ಬಾದಾಮಿ ನಾಶವಾಗಿ ಹೋಗಿದ್ದರಿಂದ, ಕೃಷ್ಣದೇವರಾಯನ ಹಂಪಿ ಸುಲ್ತಾನರ ದಾಳಿಯಿಂದ ಚಿಕ್ಕಾಚೂರಾಗಿದ್ದು ತಮಗೆ ಗೊತ್ತಿದೆ ತಾನೇ? ಮೈಸೂರಿನ ಮಹಾರಾಜರ ಸಂತತಿ ಹೇಗೆ ಆಂಗ್ಲರ ಗುಲಾಮರಾದರು, ಚಿಕ್ಕ ಸರದಾರ ಹೈದರ್ ಹೇಗೆ ಮಹಾರಾಜನಾದ? ಹೇಗೆ ಟಿಪ್ಪುವನ್ನು ಸದೆಬಡಿಯಲಾಯಿತು....ಅನ್ನೋದನ್ನೆಲ್ಲಾ ವಾದಕ್ಕೆ ಎಳೆದು ತಂದು ಆ ಐತಿಹಾಸಿಕ ವ್ಯಕ್ತಿಗಳ ತೇಜೋವಧೆ ಮಾಡೊದು ಒಬ್ಬ ಸೋ ಕಾಲ್ಡ್ ಚಿಂತಕನಿಗೆ ಶೋಭೆ ತರೋದಿಲ್ಲ.
ಜಾತೀಯತೆ ಎನ್ನುವ ಭೂತದ ಬಗ್ಗೆ, ಅದರಿಂದಾಗೋ ಅಪಾಯದ ಬಗ್ಗೆ ನಿಮ್ಮ ನಿಲುವು ಸರಿಯಾಗೇ ಇದೆ. ಆದರೆ ಎಲ್ಲದರಲ್ಲೂ, ಇಲ್ಲದರಲ್ಲೂ ಜಾತಿಯನ್ನು ಹುದುಕೋ ತೀಟೆ ಒಳ್ಳೇದಲ್ಲ.
ಇಡೀ ಪ್ರಕರಣವನ್ನೇ ನೋಡಿ, ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಬರೀ ಗೌಡರುಗಳೇ ಇದ್ದಾರೆಯೆ? ಅದರ ಪದಾಧಿಕಾರಿಗಳೆಲ್ಲ ಗೌಡರೇ? ಬೆಂಗಳೂರು ಕಟ್ಟಿದೋರು ಕೆಂಪೇಗೌಡರು ಮತ್ತು ಕರವೇ ರಾಜ್ಯಾಧ್ಯಕ್ಷರಾದ ನಾರಾಯಣಗೌಡರು ಒಂದೇ ಉಪನಾಮ(?) ಗೌಡ ಅಂತ ಹೊಂದಿರುವುದರಿಂದಲೇ ಇದಕ್ಕೆ ಜಾತಿಯ ಬಣ್ಣ ಬಂದಿರೋದು ಅಲ್ಲವೇ? ಇದನ್ನು ತಂದಿರೋರು ಯಾರು? ಪ್ರತಾಪ ಸಿಂಹನಂತಹ ಕೆಲ ಪತ್ರಕರ್ತರು. ಅಕಸ್ಮಾತ್ ಬೆಂಗಳೂರು ಕಟ್ಟಿದೋರು ಕೆಂಪೇಗೌಡರಲ್ಲದೆ ಬೀರಪ್ಪನಾಗಿದ್ದ್ದು ಆ ಹೆಸರು ಇಡಬೇಕು ಅಂತ ನಾರಾಯಣ ಗೌಡರು ಧ್ವನಿ ಎತ್ತಿದ್ದರೆ, ಅಥವಾ ನಾರಾಯಣ ಗೌಡರು ನಾರಾಯಣಾಚಾರ್ ಆಗಿದ್ದು ಕೆಂಪೇಗೌಡರ ಹೆಸರಿಗಾಗಿ ಒತ್ತಾಯಿಸಿದ್ದರೆ ಅದು ಜಾತೀಯತೆ ಆಗ್ತಿರಲಿಲ್ಲ ಅಲ್ಲವೇ? ಇನ್ನು ಕರವೇ ಜಾತಿವಾದಿ ಅನ್ನಲು ನಿಮ್ಮ ಬಳಿಯಿರುವ ಆಧಾರ ಅದೇ ಅರ್ಧ ಬೆಂದ ಪ್ರತಾಪಸಿಂಹರ ಲೇಖನ.
ಆ ದಿನ ಬಾಲಗಂಗಾಧರ ನಾಥ ಸ್ವಾಮಿಗಳು ಬಂದಿದ್ದನ್ನು ದೊಡ್ದದಾಗಿ ಚಿತ್ರಿಸಿದ ಪ್ರತಾಪ್ ಜೊತೆಯಲ್ಲಿದ್ದ ಕೊಳದ ಮಠದ ಸ್ವಾಮಿಗಳಂತಹ, ಗೋಸಾಯಿ ಮಠದ ಸ್ವಾಮಿಗಳಂತಹ ಲಿಂಗಾಯಿತ, ಮರಾಠ ಸ್ವಾಮಿಗಳೂ ಇದ್ದುದ್ದನ್ನು ಯಾಕೆ ಮರೆ ಮಾಡುತ್ತಿದ್ದಾರೆ. ಅಂದು ಅಲ್ಲಿ ಇರದೇ ಇದ್ದ ದೇ.ಜ.ಗೌ ಬಗ್ಗೆ ಹೀನಾಯವಾಗಿ ಬರೆದದ್ದೂ. ಅದನ್ನೇ ಸತ್ಯವೆಂಬಂತೆ ತಾವು ಬರೆದಿರೋದೂ ಎಷ್ಟು ಸರಿ. ಪಾಪ, ಆ ದಿನ ನಡೆದ ಪ್ರತಿಭಟನೆಯಲ್ಲಿ ದೇಜಗೌ ಇರಲೇ ಇಲ್ಲ ಅನ್ನೋದನ್ನಾಗಲೀ, ಅಲ್ಪಸಂಖ್ಯಾತರ ಕನ್ನಡ ವೇದಿಕೆಯ ಸಮೀವುಲ್ಲಾ ಖಾನ್ ಥರದ ಮುಸ್ಲಿಮರೂ ಇದ್ದರೆಂಬುದನ್ನಾಗಲೀ ಯಾಕೆ ಮರೆಮಾಚಲಾಯಿತು ಎನ್ನೋದನ್ನು ಸ್ವಲ್ಪ ಯೋಚಿಸಿ. ಅಲ್ರೀ ರವಿಯವರೆ, ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆಗ್ತಿದೆ, ಅದು ಕೆಂಪೇಗೌಡರಾಳಿದ ಯಲಹಂಕದ ಬಳಿಯಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿದೆ. ಹಾಗಾಗಿ ಕೆಂಪೇಗೌಡರ ಹೆಸರಿದಿ ಅನ್ನೋ ಬೇಡಿಕೆ ಇಟ್ಟಿದ್ದಾರೆ ಅವರು. ಇದರಲ್ಲಿ ತಪ್ಪೇನು? ಇದೇ ವಿಮಾನ ನಿಲ್ದಾಣ ಬೆಳಗಾವಿಯಲ್ಲಿದ್ದದ್ದರೆ ಅದು ಚನ್ನಮ್ಮ ಏರ್ ಪೋರ್ಟ್ ಅಗ್ತ್ತಿತ್ತು, ಬಿಜಾಪುರದಲ್ಲಿದ್ದರೆ ಬಸವಣ್ಣ ಆಗ್ತಿತ್ತು, ಅಥವಾ ದುರ್ಗದಲ್ಲಾಗಿದ್ದರೆ ಮದಕರಿ ಏರ್ ಪೋರ್ಟ್ ಆಗ್ತಿತ್ತು ಅಲ್ಲವಾ? ಇಷ್ಟಕ್ಕೂ ಕರವೇ ಕೆಂಪೇಗೌಡರ ಹೆಸರಿನ ಪರವಾಗಿ ಹೋರಾಟ ಮಾಡುವುದು ಸರಿಯಲ್ಲ ಅನ್ನಿಸಿದ್ದರೆ ಇನ್ನೊಂದು ಹೆಸರಿಗೆ ಒತ್ತಾಯಿಸಿ ತಾವೂ ಆ ಕೆಲಸ ಮಾಡಿ. ಅದುಬಿಟ್ಟು ಕರವೇಯ ತೇಜೋವಧೆಗೆ ಯತ್ನಿಸುವುದು ತರವಲ್ಲ ಅಲ್ಲವೇ. ನಿಜವಾಗಿ ಜಾತಿವಾದ ತರುತ್ತಿರುವುದು ಪ್ರತಾಪಸಿಂಹ ಮತ್ತು ತಮ್ಮಂತಹ ಬರಹಗಾರರು. ಇಲ್ಲದಿದ್ದರೆ ಇಲ್ಲದವರನ್ನು ಇರುವಂತೆ, ಇದ್ದವರನ್ನು ಇಲ್ಲದಂತೆ ಬರೆಯುವ ಸಾಹಸಕ್ಕೆ ಹೋಗುತ್ತಿರಲಿಲ್ಲ.
ಕನ್ನಡ ಹೋರಾಟವೆಂದರೆ ಅನ್ಯಭಾಶಿಕರನ್ನು ಸದೆಬಡಿಯುವುದು ಎಂದುಕೊಂಡಿರುವ ಇವರು ಎಂಬುದಾಗಿ ಬರೆದಿದ್ದೀರಲ್ಲಾ, ಯಾಕಿಷ್ಟು ಬೇಜವಾಬ್ದಾರಿಯಿಂದ ಬರೆಯುವಿರಿ? ಇದೇ ರಕ್ಷಣಾ ವೇದಿಕೆಯವರು ಅನ್ಯಭಾಶಿಕರಾದ ಶಾಲಿನಿ ರಜನೀಷ್ ಅವರ ಪರವಾಗಿ, ಮಣಿವಣ್ಣನ್ ಅವರ ಪರವಾಗಿ ದನಿ ಎತ್ತಿರುವುದನ್ನು ಯಾಕೆ ಮರೆತಿದ್ದೀರಿ? ಕನ್ನಡ ಹೋರಾಟ ಕನ್ನಡದ ಕತ್ತು ಹಿಚುಕಲು ಯತ್ನಿಸುವ ಅನ್ಯಭಾಶಿಕರ ವಿರುದ್ಧ, ತನ್ನ ತಾಯ್ನುಡಿ ಕನ್ನಡವೇ ಆಗಿದ್ದರೂ ಕನ್ನಡಿಗರ ವಿರುದ್ಧ ಪಿತೂರಿ ಮಾಡುವವರ ವಿರುದ್ಧ. ಇದಕ್ಕೆ ಕರವೇಯ ಹೋರಾಟಗಳಲ್ಲಿ ನಿಮಗೆ ಸಾಕಷ್ತು ಉದಾಹರಣೆಗಳು ಸಿಗುತ್ತವೆ... ಅಲ್ಲವೇ. ಕರವೇಯ ಆದಾಯ ಮೂಲದ ಬಗ್ಗೆ ತನಿಖೆಯಾದರೆ ಗಾಂಧಿನಗರದಲ್ಲಲ್ಲ, ಪರಪ್ಪನ ಅಗ್ರಹಾರದಲ್ಲಿ ಇರಬೇಕಾಗುತ್ತದೆ ಎಂದು ಹೇಳಲು ತಮ್ಮ ಬಳಿ ಆಧಾರವಿದ್ದರೆ ಪ್ರಕಟಿಸಿ. ಕರವೇ ಕೂಡಾ ಒಂದು ಸಾಮಾಜಿಕ ಸಂಘಟನೆಯಾಗಿದ್ದು ಅದೂ ಕೂಡಾ ಈ ದೇಶದ ಲೆಕ್ಕಪತ್ರ ಶೋಧನೆ ನಿಯಮ, ಸಂಘ ಸಂಸ್ಥೆಗಳ ನಿಯಮದಡಿ ಕಾರ್ಯನಿರ್ವಹಿಸುತ್ತಿದೆ. ಇದರ ಲೆಕ್ಕಪತ್ರಗಳನ್ನೂ ಕಾಲಕಾಲಕ್ಕೆ ತಪಾಸಣೆ ಮಾಡಲಾಗುತ್ತಿದೆ. ತಾನು ಸಂಗ್ರಹಿಸುವ ದೇಣಿಗೆಗೆ ರಸೀತಿ ನೀಡುವ, ಖರ್ಚಿಗೆ ಲೆಕ್ಕವಿಡುವ ಪರಿಪಾಠ ಅಲ್ಲಿದೆ. ಆಧಾರವಿಲ್ಲದ ಆರೋಪ ಮಾಡುವುದು "ಚಿಂತಕ"ರಿಗೆ ಶೋಭೆ ತರದು.
ವಿಶ್ವಾಸಿ
ತಿಮ್ಮಯ್ಯ
ತಿಮ್ಮಯ್ಯ ಅವರೆ, ನಿಮ್ಮ ಪ್ರಾಮಾಣಿಕವಾದ ಮಾತುಗಳು ನನಗೆ ಬಹಳ ಹಿಡಿಸಿದವು. ನಿಮ್ಮ ತೂಕವಾದ ಬರವಣಿಗೆ ಓದುತ್ತಿದ್ದಂತೆ ಒಂದಷ್ಟು ಕಾಲ ಭಾವುಕನಾದೆ. ಕನ್ನಡ ಹೋರಾಟಗಾರರನ್ನು ಅನಾವಶ್ಯಕ ಖಂಡಿಸುವವರಿಗೆ ತಕ್ಕ ಉತ್ತರ ಕೊಟ್ಟಿದ್ದೀರಿ. ಏನ್ಗುರು ಬ್ಲಾಗ್ ನಲ್ಲೂ ನಿಮ್ಮ ಪ್ರತಿಕ್ರಿಯೆ ಓದುತ್ತಿರುತ್ತೇನೆ. ಹೀಗೇ ಬರೆಯುತ್ತಾ ಇರಿ...
ReplyDelete-ಗುರು
timmayya,
ReplyDeleteExcellent writing, This idiot has disappeared now. ha ha ha
ಪ್ರಿಯ ಅನಾಮಧೇಯ,
ReplyDeleteದಯಮಾಡಿ ರವಿ ಅವರನ್ನು ಬಯ್ಯಬೇಡಿ. ಅವರು ಬಹುಶಃ ನನ್ನ ವಾದವನ್ನು ಒಪ್ಪಿದ್ದಾರೆ ಅಥವಾ ಪ್ರತಿವಾದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಏನೇ ಆದರೂ ಕನ್ನಡದ ಒಬ್ಬ ಬರಹಗಾರ ಪಲಾಯನ ಮಾಡಲಾರರು. ಏನಂತೀರಾ ರವಿಯವರೇ?
ತಿಮ್ಮಯ್ಯ
ತಿಮ್ಮಯ್ಯನವರೆ - ಸುಧೀರ್ಘವಾಗಿ ಬರೆದಿದ್ದಕ್ಕೆ ಧನ್ಯವಾದಗಳು. ನನ್ನ ಅನಿಸಿಕೆಗಳನ್ನು ಪ್ರಾಮಾಣಿಕವಾಗಿ ಬರೆದಿದ್ದೇನೆ. ನೀವು ನಿಮ್ಮ ಅನಿಸಿಕೆಗಳನ್ನು ಅಷ್ಟೇ ಪ್ರಾಮಾಣಿಕವಾಗಿ ಬರೆದಿದ್ದೀರಿ. ಇದರ ಬಗ್ಗೆ ವಾದ ಪ್ರತಿವಾದಗಳನ್ನು ಮಹಾ ಕಾದಂಬರಿಯಾಗುವಷ್ಟು ನಾವಿಬ್ಬರೂ ಬರೆಯಬಹುದು. ಒಟ್ಟಿನಲ್ಲಿ ಎಲ್ಲರ ಉದ್ದೇಶ ನಮ್ಮ ಭಾಷೆ/ರಾಜ್ಯದ ಸಮಗ್ರ ಕಾಳಜಿ, ಮಾರ್ಗ ಬೇರೆಯಿರಬಹುದು. ಹಾಗೆಂದುಕೊಳ್ಳುತ್ತ ಇದನ್ನು ಓದುಗರ ಅವಗಾಹನೆಗೆ ಇಲ್ಲಿಗೇ ಬಿಡುತ್ತೇನೆ.
ReplyDeleteಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿ,
ರವಿ ಹಂಜ್.
Enguru Thimmaiah and AmerikeyiMda Ravi - Please focus on guys like below instead of each other. Lets kick some ass. Kannadiga.
ReplyDeleteKannada vs Tamil
ShareThisFeb 9 2006 | Views 1366 | Comments (10)
Puliyai paarthu poonai soodu pottukondathu
**********************************
(A cat tries to get the status of a tiger by jumping into the fire, hoping it will get the fiery stripes of its rival!)
The situation of Kannada fighting for classical status quoting Tamil is best explained by the above Tamil proverb!
To get classical status, Tamil scholars and poets had to fight for over 40 years with the Indian government, which was only interested in Sanskrit and Hindi for obvious reasons. The Govt. even declared a whole year as Sanskrit year, though Sanskrit is only spoken by about 500 people in the whole country (incidentally it is spoken only in Karnataka, it tells me clearly that one of Kannada’s parents is Sanskrit) but despised Tamil.
It is not enough if a language is 1000 years old it becomes classical. It also should have quality and originality. For example, even though I am not a linguist, I know that only Tamil has the letter “zha” and hundreds of words using that letter. (Malayalam uses that letter but it is only a daughter of Tamizh)
In poetry the beginning words rhyme, the ending words also in some cases. We should be proud that Tamizh is the only language in the world which has such type of rhyming scheme. It is a shame that ONLY after a foreigner, Dr.George Hart made it clear that of the modern, living Indian languages, Tamizh and Tamizh only can claim classical status, that Indian Government announced that it is classical.
Now the Kannadigas’ pride has been badly hurt, and although many of them were earlier telling that a living language can never be classical, now they say the Kannada should be made classical. This is hypocrisy.
They try to invent new conditions like Sahitya awards etc to "make" Kannada classical!
Kannada can in no way stand before Tamil. Even with the existing literature, Tamil literature surpasses Kannada in quantity and quality. We do know that thousands of other Tamil literary works have been destroyed by nature, and others in the form of olaichuvadi is being destroyed by insects and cockroaches, thanks to the lack of funds by Indian government, because funds are used to preserve Hindi and Sanskrit! Kannada no doubt is sweet and rich, but it can in no way compare with Tamil.
If Kannada is compared to the Moon, it derives its greatness only from Tamil, the Sun.
I happen to read arguments posed by some Kannada scholars in the site “totalkannada.com” and couldn’t stop laughing. One of them argues that “Palli” is a Kannada word. It is a know fact that Kannada derives many of its words from Tamil by replacing “pa” with “ha”. Hence palli is halli, peyar, is hesaru, pugai is hogai, paal is haal.
Even now we let only foreign countries approve our achievements.
The following article by a U.S. linguist will drive home the point to all Indians that TAMIL and
TAMIL alone can be the living Indian classical language. (There are only 5 other such classical languages. Even Arabic is younger than Tamil. When it is declared classical, why not her elder sister?.. Tamil) Click below or cut and paste in your browser... Kannadigas who want classical stauts for Kannada, especially!
http://tamil.berkeley.edu/Tamil%20Chair/TamilClassicalLanguage/TamilClassicalLgeLtr.html
© amar shildi., all rights reserved.
ಪ್ರಿಯ ಅಜಯ್,
ReplyDeleteನೀವು ಕಳಿಸಿರೋ ಲಿಂಕ್ ನೋಡಿದೆ. ಅದು ಉತ್ತರಿಸಲೂ ಯೋಗ್ಯವಲ್ಲದ ಕೀಳು ದರ್ಜೆಯ, ಕೀಳು ಅಭಿಪ್ರಾಯದ ಲೇಖನ. ಯಾವ ಭಾಷೆಯನ್ನೂ ಅದರಲ್ಲಿರುವ ವಿಶೇಷ ಉಚ್ಚರಣೆಯ ಅಕ್ಷರದಿಂದ ಮೇಲು ಕೀಳು ಅನ್ನಲು ಸಾಧ್ಯವಿಲ್ಲ. ಪ್ರತಿ ಭಾಷೆಯೂ ತನ್ನ ಅಗತ್ಯಕ್ಕೆ ಬೇಕಾದಷ್ಟು ಅಕ್ಷರಗಳನ್ನು ಹೊಂದಿರುತ್ತದೆ. ಸಂಸ್ಕೃತದಲ್ಲಿ ’ಋ’ಕಾರ ಕನ್ನಡದಲ್ಲಿಲ್ಲ. ಕನ್ನಡದ ’ಓ’ ’ಏ’ ಕಾರಗಳು ದೇವನಾಗರಿಯಲ್ಲಿಲ್ಲ. ಖ,ಗ,ಘ, ಛ, ಝ,ಠ. ಢ, ಥ,ದ,ಧ ಇತ್ಯಾದಿ ಅಕ್ಷರಗಳು ತಮಿಳಿನಲ್ಲಿಲ್ಲ. ಆ ಕಾರಣದಿಂದ ತಮಿಳನ್ನು ಕೀಳು ಅನ್ನಲಾಗುವುದಿಲ್ಲ. ಬರೀ ಆದಿಪ್ರಾಸ ಅಂತ್ತ್ಯ ಪ್ರಾಸಗಳಿರುವುದರಿಂದ ಶಾಸ್ತ್ರೀಯ ಸ್ಥಾನ ಸಿಕ್ಕಿದೆ ಅನ್ನೋ ಮಾತು ಕೇಳಿ ನಗು ಬರ್ತಿದೆ. ಕನ್ನಡ ತಮಿಳುಗಳು ಮೂಲದಲ್ಲಿ ಒಂದೇ ಭಾಷೆಯಾಗಿತ್ತು ಎಂದು ಕಲ್ಪಿಸಲಾಗಿದೆ ಮತ್ತು ಅದನ್ನು ಆದಿದ್ರಾವಿಡ ಎಂದು ಕರೆಯಲಾಗಿದೆ.ಹಾಗಾಗಿ ಪಲ್ಲಿ - ಹಲ್ಲಿ ಇತ್ಯಾದಿ ವಾದಗಳೇ ಸರಿಯಿಲ್ಲ. ಆ ಲೇಖನ ಬರೆದಿರೋ ಮಹಾನುಭಾವರು ಹಳೆಯ ತಮಿಳು ಸಾಹಿತ್ಯವೆಲ್ಲಾ ನಿಸರ್ಗದ ವಿಕೋಪದಿಂದ ಹಾಳಾಗಿದೆ ಅನ್ತಾರೆ. ಇದಕ್ಕೆ ಯಾವ ಆಧಾರವೂ ಇಲ್ಲ. ದಯವಿಟ್ಟು ಒಮ್ಮೆ ತಮಿಳು ತಲೆಗಳ ನಡುವೆ ಅನ್ನುವ ಬಿ.ಜಿ.ಎಲ್ ಸ್ವಾಮಿಯವರ ಪುಸ್ತಕವನ್ನೋದಿ. ಎಂಥಾ ಭ್ರಮೆಯಲ್ಲಿ ತಮಿಳರು ಇದ್ದಾರೆ ಅಂತ ತಿಳ್ಯುತ್ತೆ. ಯಾವುದೋ ಎರಡು ವರ್ಷ ಹಳೆಯ ಕಿತ್ತೋಗಿರೋ ಬರಹದಿಂದ ವಿಚಲಿತರಾಗಬೇಡಿ. ಆನೆ ಮುಂದೆ ಹೋಗ್ತಿದ್ದಾಗ ಬೀದಿ ನಾಯಿಗಳು ಬೊಗಳ್ತಾ ಇರೋದು ಸಹಜ. ಆ ಬರಹವನ್ನೂ ಅಂಥದೇ ಒಂದು ಬೊಗಳಿಗೆ ಅನ್ಕೊಂಡು ಕಡೆಗಣಿಸಿ ಅನ್ನೋದು ನನ್ನ ಸಲಹೆ.
ವಿಶ್ವಾಸಿ
ತಿಮ್ಮಯ್ಯ
ಪ್ರಿಯ ರವಿ ಹಂಜ್ ಅವ್ರೇ,
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ನಿಮ್ಮ ನಾಡಪರ ಕಾಳಜಿಯನ್ನು ಗೌರವಿಸುತ್ತೇನೆ. ನಮ್ಮ ಬರಹಗಳನ್ನು ಬರಿಯ ಅಭಿಪ್ರಾಯಗಳು ಅನ್ನಲು ಆಗುವುದಿಲ್ಲ. ಎಷ್ಟೊ ಐತಿಹಾಸಿಕ ವಿಷಯಗಳ ಬಗ್ಗೆ (ಕೆಂಪೇಗೌಡರ ಭಾಷೆ, ಕೃಷ್ಣದೇವರಾಯನ ಮಾತೃಭಾಷೆ) ನೀವು ನೀಡಿರುವ ಮಾಹಿತಿ ತಪ್ಪು ಎಂದಿದ್ದೇನೆ. ಕೆಲವಾರು ಕಡೆ ನಿಮ್ಮ ಆರೋಪಗಳು ಆಧಾರ ರಹಿತ ಅಂದಿದ್ದೇನೆ.(ದೇಜಗೌ ಬಗ್ಗೆ...). ಈ ಎಲ್ಲ ವಿಷಯಗಳ ಬಗೆಗಿನ ನನ್ನ ಆಕ್ಷೇಪಗಳಿಗೂ ಉತ್ತರಿಸುವುದು ಬೇಡ ಎಂದು ನಿಮಗನ್ನಿಸಿದ್ದರೆ ನಾನೇನೂ ಹೇಳಲಾರೆ. ಮುಂದಿನ ದಿನಗಳಲ್ಲಿ ನಿಮ್ಮ ಬರಹ ಆಧಾರ ಸಹಿತವಾಗಿರಲಿ, ತೂಕವಾಗಿರಲಿ ಎಂದಷ್ಟೆ ಹಾರೈಸುತ್ತೇನೆ.
ವಿಶ್ವಾಸಿ
ತಿಮ್ಮಯ್ಯ
Dear Timmayya and Shoba,
ReplyDeleteWell said, I really appreciates your solid response with solid supporting points. Please keep writing and educate, we people away from Our Sweet land Karntaka.
For we people its easier to come to conclusion based on what we read in news papers and hear from friends back at home.
Mr Ravi,
Your article more looks like against Gowda's than any organization or real concerns about our land and language. If your so against about Gowda's, go and fight with specific person you hate, don't write something stupid just because you don't like Gowda's. With your writing I understand your the one who is creating this castism than any Voulntaree Organization. I would be very happy to hear what you have contributed to improve our country and State other than sitting in your rest room/whereever and writing some humiliating articles. Think more before you write and re-read and analyze, how your writing is going to hurt real Kannadiga's.
Hope as Mr. Timmayya suggested you will write responsbily in your next blog.
Best Wishes,
Kempe Gowda
(This is my actual name FYI)
I am unable to use kannada font as this computer does not have a kannada software.
ReplyDeleteThere were many justifications for the name of Kempe Gowda in the above articles, like:
1. Since the Airport happens to be in Bangalore, it should have a name of someone from Bnagalore only. How many of you support this view? Then if it is built in Madya, should be named after any local king or Ambarish?
2. Ravi stated that the 5 villages which is now Bangalore were gifted ( umbali) by Vijayanagar kings. Is this true or false?
3. only a caste with sizable population with some aggression and clout can create such pressue. Do you agree or not?
4. In naming an Airport which belongs to the state, should someone who ruled just the boudary of four towers around Bangalore qualify?
5. I s it just coincedence and not love for the caste that a swamiji of Kempe Gowda`s community showed so much interest in naming the Airport oafter him?
6. Is it democratic or dictatorship to say that" we will not allow any other name " or the Airport?
7. Will the agitators please clarify how will they react if the Aieport is named after some one else? Why not just Bangalore International Airport?
8. Is there no other person qualifying for the Airport? Don`t we have freedom fighters or people who served the society and lived in poverty to be eligible for this? Does kittur Rani Chennamma belong only to her and Sangolli Rayanna only to his province?
9. Are the people supporting Kempe Gowda`s name similarly passionate and aggressive in other personalities like Shivaram Karanth, Bendre,or Mayura Varma,or Nripathunga?
10. Do these people know how the people outside Bangalore and outside the community feel about this issue, as the Airport is as much their`s as it is of the suppoeters of KempeGowda?
I believe you all know the answers by now.
Prabhakar from Bangalore.