ಕೆಂಪೇಗೌಡ, ಚುನಾವಣೆ ಮತ್ತು ರೆಡ್ಡಿಗಳು!

ಕಳೆದ ವಾರದ ಲೇಖನಕ್ಕೆ ಹಲವಾರು ಅಸಹನೆ, ಆಕ್ಷೇಪಗಳು ಬಂದಿದ್ದವು. ಆ ಎಲ್ಲಾ ಆಕ್ಷೇಪಗಳಿಗೆ ಉತ್ತರವಾಗಿ ಹೀಗೆ ಹೇಳಬಲ್ಲೆ -"ನಿಮ್ಮೆಲ್ಲಾ ಅಸಹನೆ, ಆಕ್ಷೇಪಗಳಿಗೆ ಲೇಖನದಲ್ಲಿಯೇ ಸಮಾಧಾನಗಳಿವೆ. ನಿಮ್ಮಗಳ ಪೂರ್ವಾಗ್ರಹಪೀಡಿತ ಮನಸ್ಸಿನಿಂದ ಹೊರಬಂದು ಮತ್ತೊಮ್ಮೆ, ಮಗದೊಮ್ಮೆ ಲೇಖನವನ್ನು ಓದಿ. ನಿಮ್ಮ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ. ಬೆಂಗಳೂರೇತರ ಯಾವುದಾದರೂ ಪಟ್ಟಣಕ್ಕೋ (ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು...ಇತ್ಯಾದಿ) / ಚಿಕ್ಕ ಊರುಗಳಿಗೋ (ಹರಪನಹಳ್ಳಿ, ಹೊಸದುರ್ಗ, ಅರಸೀಕೆರೆ, ಮೂಡಿಗೆರೆ...ಇತ್ಯಾದಿ) ಹೋಗಿ ನೋಡಿ, ಅಲ್ಲಿನ ಮಾರ್ವಾಡಿಗಳು ಕನ್ನಡದಲ್ಲದೇ ಇನ್ಯಾವ ಭಾಷೆಯಲ್ಲಿ ವ್ಯವಹರಿಸುತ್ತಾರೆಂದು! ಬೆಂಗಳೂರೇ ಕರ್ನಾಟಕವಲ್ಲ. ಬೆಂಗಳೂರಿನಲ್ಲಿ ಕಟ್ಟಿರುವ "ಅಂತರ್ರಾಷ್ಟ್ರೀಯ" ವಿಮಾನ ನಿಲ್ದಾಣ ಕೇವಲ ಬೆಂಗಳೂರಿಗೆ ಸೀಮಿತವಲ್ಲ. ಅದು ಕರ್ನಾಟಕದ ಹೆಬ್ಬಾಗಿಲು. ನನ್ನಂಥಹ ಐಟಿ ಗುಲಾಮರಿಗಾಗಿಯೇ ಕಟ್ಟಿರುವ ಈ ವಿಮಾನನಿಲ್ದಾಣ ನನ್ನನ್ನು ಕೇವಲ ಬೆಂಗಳೂರಿಗೆ ಕರೆತರುವುದಿಲ್ಲ. ಅದು ಕರ್ನಾಟಕಕ್ಕೆ ಕರೆತರುತ್ತದೆ".

"ಹಾಗೆಯೇ ಕೆಂಪೇಗೌಡನಾಗಲೀ, ಟಿಪ್ಪೂ ಆಗಲೀ ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವುದಿಲ್ಲ. ಯಾವುದೇ ಜಾತಿ ಸೋಂಕಿಲ್ಲದ, ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವ ಅಮೋಘವರ್ಷ, ಹೊಯ್ಸಳ, ಪುಲಕೇಶಿ, ಪಂಪ...ಮುಂತಾದವರ ಹೆಸರುಗಳು ಹೆಚ್ಚು ಸಮಂಜಸವೆಂಬುದು ಲೇಖನದ ತಿರುಳು. ಕೆಂಪೇಗೌಡ ಐತಿಹಾಸಿಕ ವ್ಯಕ್ತಿಯಾದ್ದರಿಂದ ಅವನಿಗಿಂತ ಪ್ರಮುಖರಾದ ಐತಿಹಾಸಿಕ ವ್ಯಕ್ತಿಗಳನ್ನು ಹೆಸರಿಸಿದ್ದೇನೆ. ಹಾಗೆಯೇ ಸಮಗ್ರ ಕರ್ನಾಟಕದ ಪರಿಕಲ್ಪನೆಯಿಲ್ಲದೇ ಭಾವುಕ ಕನ್ನಡ ಹೋರಾಟ ನಡೆಸುವುದು ಐತಿಹಾಸಿಕ ಚರಿತ್ರೆಗೆ ಅರಿಯದೇ ಮಾಡುವ ಅಪಚಾರವೇ ಆಗಿದೆ. ಹಾಗಂತ ಕನ್ನಡಕ್ಕೆ ಹೋರಾಡಲು ಕನ್ನಡ ಪಂಡಿತನೋ ಅಥವಾ ಕನ್ನಡ ಇತಿಹಾಸಕಾರನೋ ಆಗಬೇಕೆಂದೇನೂ ಅಲ್ಲ! ಕನ್ನಡವೆಂದೊಡನೇ ಥಟ್ಟನೇ ನೆನಪಾಗುವ ಕುವೆಂಪು, ಕನ್ನಡಿಗರನ್ನೆಲ್ಲಾ ಒಂದುಗೂಡಿಸಿದ ಗೋಕಾಕ್ ವರದಿಯ ಗೋಕಾಕರು, ಕನ್ನಡ ಹೋರಾಟಗಾರ ಮುಖಂಡರಿಗೆ ಕನಿಷ್ಟವಾಗಿಯಾದರೂ ನೆನಪಿರಬೇಕು. ಇಲ್ಲಿ ನನ್ನ ಆಕ್ಷೇಪ ಕರವೇ ಮುಖಂಡರ ವರ್ತನೆಯ ಕುರಿತಾಗಿದೆಯೇ ಹೊರತು ಕಳಕಳಿಯ ವಿರುದ್ಧವಲ್ಲ. ಕನಿಷ್ಟ ಐತಿಹಾಸಿಕ ಅರಿವಿಲ್ಲದೇ ಮಾಡುವ ಭಾವುಕ ಹೋರಾಟಗಳು ಎಂತಹ ಅನಾಹುತಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಕೆಳಗಿನ ಅಣಕವನ್ನು ಓದಿ, ಚಿಂತಿಸಿ, ಮಂಥಿಸಿ.

ಕನ್ನಡಕ್ಕೆ ಅಪಚಾರವಾದಾಗ ಕನ್ನಡಿಗರು ಭರ್ಜರಿಯಾಗಿಯೇ ಯಾವ ಸಂಘಟನೆಗಳಿಲ್ಲದೇ ಪ್ರತಿಭಟಿಸಿದ್ದಾರೆ, ಹೋರಾಡಿದ್ದಾರೆ. "ಗೋಕಾಕ್ ವರದಿ ಜಾರಿಗೆ ಬರಲಿ" ಎಂದು ಇಂಗ್ಲಿಷ್ ಪ್ರಶ್ನೆಪತ್ರಿಕೆಯನ್ನು ಕನ್ನಡದಲ್ಲಿ ಉತ್ತರಿಸಿದ್ದ ನಮಗೆ ಅಂದು ಕರವೇಯಂಥಹ ಸಂಘಟನೆಗಳೇನೂ ಇರಲಿಲ್ಲ. "ಕಟ್ಟು-ನಡೆಸು-ಬಿಟ್ಟುಕೊಡು" (ಬಿ.ಒ.ಟಿ) ಒಪ್ಪಂದದಂತೆ ಕಟ್ಟಿರುವ ನೂತನ ವಿಮಾನನಿಲ್ದಾಣದ ಕಂಟ್ರಾಕ್ಟುದಾರರಿಗೆ ಅಂದಿನ ವಿಗ್ಗಿನ ಸುಂದರಾಂಗನ ಸರ್ಕಾರ ಕನ್ನಡಕ್ಕೆ/ಕನ್ನಡಿಗರಿಗೆ ಮಾನ್ಯತೆ, ಉದ್ಯೋಗ ಇತ್ಯಾದಿಗಳನ್ನು ಒಪ್ಪಂದದಲ್ಲಿ ಮಂಡಿಸಿ ಮೂಗುದಾರವನ್ನು ಹಾಕಿದ್ದರೆ ಇಂದು ಹೋರಾಡುವ ಅಗತ್ಯವೇ ಇರುತ್ತಿರಲಿಲ್ಲ. ಈಗ ಹೇಳಿ ಯಾರ ವಿರುದ್ಧ ಹೋರಾಡಬೇಕೆಂದು! ಹೈದರಾಬಾದಿನಲ್ಲಿ ಕಟ್ಟಿದ ನೂತನ ವಿಮಾನನಿಲ್ದಾಣದ ಕಂಟ್ರ್‍ಆಕ್ಟ್ ಅನ್ನು ಫಾರಿನ್ ಸಂಸ್ಥೆ ಬಿಡಿ, ರಿಲೈಯನ್ಸ್ ಸಂಸ್ಥೆಗೂ ಕೂಡ ಕೊಡದೇ ಅಚ್ಚ ತೆಲುಗು ಬಿಡ್ಡನಿಗೆ ಆಂಧ್ರ ಸರ್ಕಾರ ಕೊಟ್ಟಿದ್ದಿತು. ಹೋರಾಟಗಳ ಗುರಿ ತಾರ್ಕಿಕವಾಗಿ ಮೂಲೋಚ್ಚಾಟನೆಯತ್ತ ಮುಖ ಮಾಡಿದ್ದರೆ ಯಶಸ್ವಿಯಾಗುತ್ತವೆ. ಇಲ್ಲದಿದ್ದರೆ ಅವು ಸದ್ದುದ್ದೇಶಗಳಿದ್ದರೂ ಅನುಮಾನಿಸುವಂತಾಗುತ್ತವೆ.

ಇರಲಿ, ಈಗ ಅಂತೂ ಚುನಾವಣೆ ಮುಗಿದು ಬಿಜೆಪಿ ಅಧಿಕಾರ ಹಿಡಿದಿದೆ. ಹಿಂದಿನ ಸಮ್ಮಿಶ್ರ ಸರ್ಕಾರದ ನೆನಹಿಗಾಗಿಯೋ ಏನೋ ಈ ಬಾರಿಯೂ ಪಕ್ಷೇತರರನ್ನೊಳಗೊಂಡು ಸಮ್ಮಿಶ್ರವೆನಿಸಿದರೂ ಏಕಪಕ್ಷೀಯ ಸರ್ಕಾರ ಬಂದಿದೆ. ಹಾಗಂತ ಐದು ವರ್ಷಗಳೂ ಹೀಗೆ ಇರುತ್ತದೆ ಎಂದು ಹೇಳಲಾಗದು. ಮುಂದೆ ಕುಟಿಲ ರಾಜಕಾರಣಿಗಳು ಹೇಗಿರುತ್ತಾರೋ ಬಲ್ಲವರ್‍ಯಾರು? ಐದು ವರ್ಷಗಳ ಸುಭದ್ರತೆಗಾಗಿ ಬಿಜೆಪಿ, ಜೆಡಿಎಸ್ ನ ಹತ್ತು ಹಲವಾರು ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡು ಸ್ಥಿರತೆಯನ್ನು ಸೇಫ್ ಮಾಡಿಕೊಳ್ಳುವತ್ತ ಯೋಚಿಸಬೇಕೆನೋ!

ಇರಲಿ, ಒಟ್ಟಾರೆ "ತಾಯಿ-ಮಗ" ಪಕ್ಷವಾದ ಕಾಂಗ್ರೆಸ್ ಮತ್ತು "ಅಪ್ಪ-ಮಕ್ಕಳ" ಜೆಡಿಎಸ್ ಗಳನ್ನು ವಿರೋಧಿಸಿ ಜನಾದೇಶದಂತೆ ಅಧಿಕಾರ ಹಿಡಿದಿರುವ ಬಿಜೆಪಿ, ಗಣಿ ರೆಡ್ಡಿಗಳನ್ನು ಹದ್ದುಬಸ್ತಿನಲ್ಲಿಟ್ಟು, ತಾನು ಕೂಡ "ರೆಡ್ಡಿ ಸೋದರರ" ಕೌಟುಂಬಿಕ ಪಕ್ಷವಾಗದಂತೆ ತಡೆಗಟ್ಟುವುದು ಸೂಕ್ತ. ಏಕೆಂದರೆ ಅದಾಗಲೇ ಈ ರೆಡ್ಡಿ ಸೋದರರ ಬಗ್ಗೆ ಅಪಸ್ವರಗಳು ಮಾಧ್ಯಮದಲ್ಲಿ ಕೇಳಿ ಬರುತ್ತಿವೆ!

ಅಂದ ಹಾಗೆ ಚುನಾವಣೆ ಮುಂಚೆ ಜೆಡಿಎಸ್ ನ ಜಮೀರ್ ಅಹ್ಮದ್ "ಎಡ್ಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆಯಲ್ಲಿ ಕೆಲಸದಾಳಾಗಿ ದುಡಿಯುವೆ" ಎಂದು ಸಾರ್ವಜನಿಕ ಪಣ ತೊಟ್ಟಿದ್ದ ಈ ಕುಮಾರಸ್ವಾಮಿ ಡ್ರೈವರ್ ಯಾವಾಗಿನಿಂದ ಎಡ್ಯೂರಪ್ಪ ಮನೆಯಲ್ಲಿ ಕೆಲಸಕ್ಕೆ ಹೋಗುವರೋ? ಬಹುಶಃ ಅವರ ಮಾಲೀಕ ಕುಮಾರಸ್ವಾಮಿಯೇ ವಚನಭ್ರಷ್ಟರಾಗಿರುವಾಗ ತಮ್ಮ ವಚನ ಎಲ್ಲಿಯ ಲೆಕ್ಕವೆಂದುಕೊಂಡು ಸುಮ್ಮನಾಗಿರುವರೇನೋ!

ಈ ಚುನಾವಣೆಯನ್ನು ಅವಲೋಕಿಸಿದಾಗ ಕಾಣುವುದು, ಪ್ರತಿ ಕ್ಷೇತ್ರದಲ್ಲಿಯೂ ಜನರು ಅಧಿಕವಾಗಿ ಮೂರು ಪಕ್ಷಗಳಿಗೆ ಮಾತ್ರ ಮತ ಚಲಾಯಿಸಿರುವುದು. ಬಿಎಸ್ಪಿ, ಎಸ್ಪಿ, ಸ್ವರ್ಣಯುಗ, ಜನತಾದಳ (ಯು), ಲೋಕ ಪರಿತ್ರಾಣ......ಮತ್ತಿತರೆ ಪಕ್ಷಗಳಿಗೆ ಬಿದ್ದಿರುವ ಮತಗಳು ಬಹಳಷ್ಟು ಕಡೆ ನೂರರ ಲೆಕ್ಕದಲ್ಲಿಯೇ ಇದೆ. ಮತಗಳು ಹಂಚಿಹೋಗದೇ ಪ್ರಮುಖ ಮೂರು ಪಕ್ಷಗಳಿಗೇ ಬಿದ್ದಿರುವುದೂ ಕೂಡ ಜನ ಹೆಚ್ಚು ಪಕ್ಷಗಳನ್ನು ಬಯಸದೇ ಇರುವ ಮೂರು ಪಕ್ಷಗಳಲ್ಲೇ ನೆಲೆ ಕಂಡುಕೊಳ್ಳಿರೆಂದು ರಾಜಕೀಯ ನಾಯಕರುಗಳನ್ನು ಎಚ್ಚರಿಸಿದಂತಿದೆ ಈ ಬಾರಿಯ ಚುನಾವಣೆ!

ಈ ಬಾರಿ ಚುನಾವಣಾ ಕಣದಲ್ಲಿದ್ದ ಆದರ್ಶವಾದಿಗಳನ್ನು ಜನ ಡೋಂಗೀ ಆದರ್ಶವಾದಿಗಳೆಂದುಕೊಂಡರೋ ಅಥವಾ ಮತಗಳು ಹಂಚಿಹೋಗುತ್ತವೆಂದೋ ಅಥವಾ ಈ ಆದರ್ಶವಾದಿಗಳನ್ನು ಆರಿಸುವುದರಿಂದ ಮತ್ತಷ್ಟು ಅತಂತ್ರ ವಿಧಾನಸಭೆ ಏರ್ಪಡುತ್ತದೆಂದೋ ಒಟ್ಟಾರೆ ಆದರ್ಶವನ್ನು ತಿರಸ್ಕರಿಸಿದ್ದಾರೆ.

ಈ ಹಿಂದೆ ನಾನು ಬರೆದಿದ್ದ ಹೊಳಲ್ಕೆರೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದು, ನನ್ನ ಆದರ್ಶವಾದೀ ಸ್ನೇಹಿತ ಚಂದ್ರಶೇಖರ್ ಒಂದೂವರೆ ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದರೆ, ಮತ್ತದೇ ಗಾಂಧೀ ಪಕ್ಷದ ಮಹಿಮಾ ಪಟೇಲ್ ಚನ್ನಗಿರಿಯಲ್ಲಿ ಹತ್ತಿರ ಹತ್ತಿರ ಹತ್ತು ಸಾವಿರ ಮತಗಳನ್ನು ಪಡೆದಿದ್ದಾರೆ. ಕುಲಗೆಟ್ಟ ಮಾಧ್ಯಮಗಳು ಈ ಅಸಲೀ ಆದರ್ಶವಾದಿಗಳಿಗೆ ಸರಿಯಾದ ಪ್ರಚಾರವನ್ನು ಕೊಡದೆ ಅನ್ಯಾಯ ಮಾಡಿದವು.

ಆದರೆ ಈ ಎಲ್ಲಾ ಆದರ್ಶವಾದಿಗಳಲ್ಲಿ ಬೆಂಗಳೂರಿನ ಜಯನಗರದಲ್ಲಿ ಮೌಲ್ಯಾಗ್ರಹಿಸಿ ಸ್ಪರ್ಧಿಸಿದ್ದ ರವಿಕೃಷ್ಣಾರೆಡ್ಡಿಯವರು ಜಯ ಗಳಿಸಬಹುದೆಂದು ತರ್ಕಿಸಿದ್ದೆ. ಇವರಿಗೆ ದೊರೆತ ಮಾಧ್ಯಮಗಳ ಪ್ರಚಾರ ಮತ್ತು ಚನ್ನಗಿರಿ, ಹೊಳಲ್ಕೆರೆಗಿಂತ ವಿದ್ಯಾವಂತರು ಅಧಿಕವಾಗಿರುವ ಕಾರಣ ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ, ರವಿಕೃಷ್ಣಾರೆಡ್ಡಿ ಜಯ ಗಳಿಸದಿದ್ದರೂ ವಿಜಯಿಯ ಸಮೀಪಸ್ಪರ್ಧಿಯಾಗಿ ಹೊಮ್ಮುತ್ತಾರೆಂದುಕೊಂಡಿದ್ದೆನು. ಆದರೆ ನನ್ನ ನಿರೀಕ್ಷೆ ಕ್ವಚಿತ್ತಾಗುವಂತೆ ಅವರಿಗೆ ೨೪೪ ಮತಗಳು ದೊರೆತಿವೆ. ಬಹುಶಃ ಇದು ಇಂದಿನ ಬೆಂಗಳೂರಿನಲ್ಲಿ ಮೌಲ್ಯಗಳಿಗೆ ಇರುವ ಬೆಲೆಯೇನೋ!!! ಇದ್ದುದರಲ್ಲಿ ಚನ್ನಗಿರಿ, ಹೊಳಲ್ಕೆರೆಗಳಂತ ಸಣ್ಣ ಊರುಗಳಲ್ಲಿಯೇ ಇನ್ನೂ ಪ್ರಾಮಾಣಿಕತೆ, ಮೌಲ್ಯಗಳಿಗೆ ಮೌಲ್ಯವಿದೆಯೆಂದೆನಿಸುತ್ತದೆ. ಅದಕ್ಕೇ ಇರಬೇಕು ಬಾಳಪ್ಪ ಹುಕ್ಕೇರಿ "ನಮ್ಮ ಹಳ್ಳೀ ಊರ ನಮಗ ಪಾಡಾಃ ಯಾತಕ್ಕವ್ವಾ ಹುಬ್ಬಳ್ಳೀ ಧಾರವಾಡಾಃ..." ಎಂದು ಹಾಡಿರುವುದು.

ಇಲ್ಲಾ, ಸಾಕಷ್ಟು ಗಿಮಿಕ್ ಗಳನ್ನು ನೋಡಿ, ಮಾಡಿರುವ ಸೊಫಿಸ್ಟಿಕೇಟೆಡ್ ಬೆಂಗಳೂರಿಗರು ರವಿಕೃಷ್ಣಾರೆಡ್ಡಿಯವರ ಪ್ರಾಮಾಣಿಕ ಪ್ರಯತ್ನವನ್ನು "ಕಿವಿ ಮೇಲೆ ಹೂವು ಇಡ್ತಾ ಅವ್ನೇ" ಎಂದು ಕನ್ನಡದಲ್ಲೋ ಅಥವಾ "ಓಲ್ಡ್ ವೈನ್ ಇನ್ ಎ ನ್ಯೂ ಬಾಟಲ್" ಎಂದು ಇಂಗ್ಲಿಷ್ ನಲ್ಲೋ ಅಂದುಕೊಂಡು ದುಬಾರಿಯಾದರೇನೋ! ಏಕೆಂದರೆ ರವಿಕೃಷ್ಣಾರೆಡ್ಡಿಯವರು ಚುನಾವಣೆಗೆ ಖರ್ಚು ಮಾಡಿದ್ದು ಹತ್ತಿರ ಹತ್ತಿರ ನಾಲ್ಕೂವರೆ ಲಕ್ಷ ಮತ್ತು ಗಳಿಸಿದ್ದು ಇನ್ನೂರ ನಲ್ವತ್ನಾಲ್ಕು ಓಟುಗಳು. ಅಲ್ಲಿಗೆ ಒಂದು ಓಟಿನ ಬೆಲೆ ಹದಿನೆಂಟು ಸಾವಿರ ರೂಪಾಯಿಗಳಿಗೂ ಹೆಚ್ಚು! ಒಂದು ಸುದ್ದಿಯ ಪ್ರಕಾರ ಬಿಜೆಪಿಯ ಕರುಣಾಕರರೆಡ್ಡಿ ಹರಪನಹಳ್ಳಿಯಲ್ಲಿ ಐವತ್ತು ಕೋಟಿ ಖರ್ಚು ಮಾಡಿ ಎಪ್ಪತ್ತು ಸಾವಿರ ಓಟು ಗಳಿಸಿ, ಪ್ರತಿಯೊಂದು ಓಟಿಗೆ ಏಳು ಸಾವಿರ ರೂಪಾಯಿ ಚೆಲ್ಲಿದ್ದಾರೆ. ಅಂದರೆ ರವಿಕೃಷ್ಣಾರೆಡ್ಡಿ ಪ್ರತಿ ಓಟಿಗೆ ಗಣಿ ರೆಡ್ಡಿಗಳು ಖರ್ಚು ಮಾಡಿದ್ದುದಕ್ಕಿಂತ ದುಪ್ಪಟ್ಟು ಹೆಚ್ಚಾಗಿ ಖರ್ಚು ಮಾಡಿದ್ದಾರೆ.

ಯಾಕೋ ಮೌಲ್ಯಗಳು ಭಾರತದಲ್ಲಿ ಅತೀ ದುಬಾರಿಯಾಗುತ್ತಿವೆ!

ಅಣಕ:

ಬೆಂಗಳೂರು ಕೇಂದ್ರಿತ ಕನ್ನಡ ಓರಾಟಗಾರರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ "ಕೆಂಪೇಗೌಡ" ಹೆಸರಿಡಬೇಕೆಂದಿರುವುದು ಏಕೆ ಗೊತ್ತೆ?

ಜಾತಿ ಎಂದಿರಾ? ಅಲ್ಲಾ. ಬೆಂದಗಾಳೂರು ಸ್ಥಾಪಿಸಿದ್ದಕ್ಕೆಂದಿರಾ ಅದೂ ಅಲ್ಲ.

ಕೆಂಪೇಗೌಡರು ಇಂದಿನ ಬೆಂಗಳೂರಿಗನ ನೈಜ ರೂಪ! ಅವರ ಮಾತೃಭಾಷೆ ತೆಲುಗು ಮತ್ತವರ ಮೂಲ ತಮಿಳುನಾಡಿನ ಕಂಚಿ ಪ್ರದೇಶ.

ಇದು ಅಣಕವಲ್ಲ, ಐತಿಹಾಸಿಕ ಸತ್ಯ.

ಹಾಗಿದ್ದರೆ ಇದನ್ನು ಅಣಕದಲ್ಲಿ ಬರೆದಿರುವುದಕ್ಕೆ ಕಾರಣ?

ಚೌ-ಚೌ ಕನ್ನಡದ ಬೆಂಗಳೂರಿಗರು ಇದನ್ನರಿಯದೇ ಅವರ ಹೆಸರಿಗಾಗಿ ಹೋರಾಡುತ್ತಿರುವುದು! ಕಣ್ಣರಿಯದಿರ್ದೊಡೇ ಕರುಳರಿಯದೇ?

"ಆನಾ, ಕೆಂಪೇಗೌಂಡರ್ ನಂಬಳ ಆಳ್" ಎಂದು ತಮಿಳ್ ಪಸಂಗಳ್ ಸಿರಿಕ್ಕಿರುವರ್!

11 comments:

  1. ಇತ್ತೀಚಿನ ವಿದಾನ ಸಬಾ ಚುನಾವಣೆಯಲ್ಲಿ ಮತದಾರರಿಗೆ ಎಲ್ಲ ಅಬ್ಯರ್ಥಿಗಳ ತಿರಸ್ಕರಿಸುವ ಅವಕಾಶ ಕಲ್ಪಿಸಲಾಗಿತ್ತು. ಗುಪ್ತ ಮತದಾನದ ಬದಲಿಗೆ ನಮ್ಮ ನಿಲುವು ಸಾರ್ವಜನಿಕ ತಿಳುವಳಿಕೆ ಆಗಿತ್ತು. ಈ ಪ್ರಕಾರ ನಾವು ಕೆಲವರು ಕಡತದಲ್ಲಿ ಸಹಿ ಹಾಕಿ ಈ ನಿರಾಕರಣ ಮತ ಚಲಾವಣೆ ಮಾಡಿದ್ದೆವು. ಈ ಮತದಾನ ಸುದಾರಣಾ ಹೆಜ್ಜೆ ಮತಗಟ್ಟೆಯಿಂದ ದೂರ ಉಳಿದ ಶೇಕಡ ೪೦ ರಷ್ಟು ಮತದಾರರಲ್ಲಿ ಒಂದಂಶವನ್ನು ಕರೆತರಲು ಸಾದ್ಯ. ಆದರೆ ನನ್ನ ಮತಗಟ್ಟೆಯಲ್ಲಿ ಹಾಕಲ್ಪಟ್ಟ ೧೦೬೪ ಮತಗಳನ್ನು ವಿವಿದ ಅಬ್ಯರ್ಥಿಗಳು ಹಂಚಿಕೊಂಡಿದ್ದಾರೆ. ಹಾಗಾದರೆ ನನ್ನ ಮತ ಏನಾಯಿತು ? ಚುನಾವಣಾ ಆಯೋಗದಿಂದ ಈ ವಿಚಾರದಲ್ಲಿ ಪಾರದರ್ಶಕ ವಿವರಣೆ ಮತದಾರರು ಅಪೇಕ್ಷಿಸುತ್ತಾರೆ.

    ಗೋವಿಂದ ಭಟ್
    ಆನಂತಾಡಿ

    ಮೇಲ್ಕಂಡ ಪತ್ರವನ್ನು ಹಲವು ಪತ್ರಿಕೆಗಳಿಗೆ ಕಳುಹಿಸಿದ್ದೆ. ಯಾರೂ ಪ್ರಕಟಿಸಲಿಲ್ಲ. ಇದಕ್ಕೆ ಪ್ರಚಾರ ಸಿಕ್ಕರೆ ಮತದಾನದ ಶೇಕಡ ಹೆಚ್ಚಾಗಬಹುದೇನೊ. ಈಗ ನಿರಾಕರಣ ಮತಕ್ಕೆ ಸ್ಪಷ್ಟ ಬೆಲೆಯಿಲ್ಲ.

    ವಂದನೆಗಳು

    ಗೋವಿಂದ

    ReplyDelete
  2. ರೀ ಸ್ವಾಮಿ... ಏರ್ಪೋರ್ಟಿಗೆ ಕೆಂಪೇಗೌಡರ ಹೆಸರಿಡಬೇಕೆಂದಿರುವುದು ಆ ಜಾಗದ ಐತಿಹಾಸಿಕ ಕಾರಣಗಳಿಗಾಗಿ ಮಾತ್ರ. ಅದರಲ್ಲಿ ಕೆಂಪೇಗೌಡರ ಜಾತಿಯನ್ನು ಎಳೆದು ತರಬೇಡಿ. ಜಾತಿ ಮುಖ್ಯವಾಗಿದ್ದರೆ ಕುವೆಂಪು ಹೆಸರಿಡಬೇಕೆಂದು ಕರವೇ ಗಲಾಟೆ ಮಾಡುತ್ತಿತ್ತು. ಕೆಂಪೇಗೌಡರ ಮಾತೃಭಾಷೆ ತೆಲುಗು ಆಗಿದ್ದರೇನು? ಅವರು ಆಡಳಿತ ಮಾಡಿದ್ದು ಕನ್ನಡದಲ್ಲಿ. ಕನ್ನಡ ನೆಲದಲ್ಲಿ. ನಿಮ್ಮ ವಾದದ ಪ್ರಕಾರ ತೆಲುಗು ಮೂಲದ ಕನ್ನಡ ಹೋರಾಟಗಾರ ಮ. ರಾಮಮೂರ್ತಿ ಕನ್ನಡಿಗರೇ ಅಲ್ಲ! ತಮಿಳು ನಾಡಿನಲ್ಲಿ ಹುಟ್ಟಿದ ರಾಜಕುಮಾರ್ ಕನ್ನಡದವನಲ್ಲ!

    ಒಂದು ಕಾಲದಲ್ಲಿ ಈಗಿನ ತಮಿಳು, ತೆಲುಗು, ಮರಾಠಿ ರಾಜ್ಯಗಳ ಅನೇಕ ಭಾಗಗಳು ಕನ್ನಡ ದೊರೆಗಳ ಆಡಳಿತಕ್ಕೆ ಸೇರಿದ್ದವು. ಮತ್ತೊಂದು ಕಾಲದಲ್ಲಿ ಕನ್ನಡನಾಡಿನ ಕೆಲವು ಭಾಗಗಳು ಇತರ ಭಾಷಿಕರ ಆಡಳಿತಕ್ಕೆ ಸೇರಿದ್ದವು. ಹೀಗಾಗಿ ಕನ್ನಡಿಗರು ಕಂಚಿ ಇತ್ಯಾದಿ ಪ್ರದೇಶಗಳಲ್ಲೂ ವಾಸಿಸುತ್ತಿದ್ದರು. ಸ್ವಲ್ಪ ಇತಿಹಾಸ ಓದಿದವರಿಗೆ ಇದು ತಿಳಿದಿರುತ್ತೆ. ಇಂತಹ ಸವಕಲು ನುಡಿಗಳನ್ನು ಬರೆದು ಕೆಂಪೇಗೌಡರ ಮೂಲ ತಮಿಳು ಎಂದು ಸೂಚಿಸುತ್ತಿದ್ದೀರಲ್ಲಾ. ನಾಚಿಕೆಯಾಗಬೇಕು ನಿಮಗೆ. (ಇದು ಅಣಕ ಅಲ್ಲ ಐತಿಹಾಸಿಕ ಸತ್ಯ ಎಂದು ಬೇರೆ ಬರೆದಿದ್ದೀರಿ!)

    “ಯಾವುದೇ ಜಾತಿಯ ಸೋಂಕಿಲ್ಲದವನ ಹೆಸರನ್ನು ಇಡಬೇಕು ” ಎಂಬ ನಿಮ್ಮ ವಾದ ವಿಚಿತ್ರವೇ ಸರಿ. ಗೌಡ ಜಾತಿಯಲ್ಲಿ ಹುಟ್ಟಿದ್ದೇ ಕೆಂಪೇಗೌಡರ ತಪ್ಪಾ? ಆ ಕಾರಣಕ್ಕೆ ಅವರು ಬೆಂಗಳೂರಿನ ನಿರ್ಮಾತೃ ಎಂಬ ಸತ್ಯ ಸುಳ್ಳಾಗಬೇಕಾ? ಯಾವುದೇ ಜಾತಿಯ ಸೋಂಕಿಲ್ಲದವನನ್ನು ತರುವುದು ಹೇಗೆ? (ಯಾವುದೇ ಸಾವಿಲ್ಲದ ಮನೆಯಿಂದ ಸಾಸಿವೆ ತಂದ ಹಾಗೆ). ನೀವು ಹೇಳಿದ ವ್ಯಕ್ತಿಗಳೂ ಒಂದಲ್ಲಾ ಒಂದು ಜಾತಿಗೆ ಸೇರಿದವರೇ. ಆ ವ್ಯಕ್ತಿಗಳಂತೆ ಕೆಂಪೇಗೌಡರು ಸಹಾ ತಮ್ಮ ಜಾತಿಯನ್ನು ಉಪಯೋಗಿಸಿಕೊಂಡು ಮುಂದೆ ಬರಲಿಲ್ಲ.

    ನೀವು ಹೇಳುತ್ತಿರುವ ಸಮಗ್ರ ಕರ್ನಾಟಕದ ಪರಿಕಲ್ಪನೆ ಕರವೇ ಗೆ ಇದೆ. ನೆನಪಿರಲಿ ಕರವೇ ಸಂಘಟನೆಯಲ್ಲಿ ಬೀದಿಗಿಳಿಯುವ ಹೋರಾಟಗಾರಷ್ಟೇ ಅಲ್ಲದೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಬುದ್ದಿವಂತರೂ ಇದ್ದಾರೆ. ನೀವಂದುಕೊಂಡಂತೆ ಇದು ಭಾವುಕ ಹೋರಾಟ ಅಲ್ಲ. ತಮ್ಮ ಹಕ್ಕಿಗಾಗಿ ಅವರು ನ್ಯಾಯಬಧ್ಧವಾಗಿ ಹೋರಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಕಾವೇರಿ ಗಲಾಟೆಯಲ್ಲಿ ನಾರಾಯಣಗೌಡರು ನಮ್ಮ ಎಲ್ಲಾ ಎಂ.ಪಿ ಗಳನ್ನು ಸಂಪರ್ಕಿಸಿ “ನೀವು ಮುಂದೆ ನಿಂತು ಹೋರಾಡಿ ನಾವು ನಿಮ್ಮ ಬೆನ್ನ ಹಿಂದೆ ಇರುತ್ತೇವೆ” ಎಂದು ಕೇಳಿಕೊಂಡಿದ್ದರು. ಒಬ್ಬ ರಾಜಕಾರಣಿಯೂ ಆ ಹೋರಾಟದಲ್ಲಿ ಭಾಗವಹಿಸಲಿಲ್ಲ. ಆಗ ನಾರಾಯಣಗೌಡರು ತಾವೇ ಸಾವಿರಾರು ಜನರನ್ನು ದೆಹಲಿಗೆ ಕರೆದುಕೊಂಡು ಹೋಗಿ ಹೋರಾಟ ನಡೆಸಿದ್ದರು. ಕನ್ನಡದ ಸಮಸ್ಯೆಗಳಿಗೆ ನಮ್ಮ ರಾಜಕೀಯ ಪಕ್ಷಗಳು ಸ್ಪಂದಿಸಿದ್ದರೆ ಕರವೇ ನಮಗೇ ಬೇಕಾಗುತ್ತಿರಲಿಲ್ಲ. ಕನ್ನಡ ಬದ್ಧತೆ ಇಲ್ಲದ ರಾಜಕಾರಣಿಗಳು, ರಾಜಕೀಯವಾಗಿ ಕನ್ನಡಬಲ ಇಲ್ಲದಿರುವ ಈ ಸಮಯದಲ್ಲಿ ಕರವೇ ಒಂದೇ ಈಗ ಕನ್ನಡಿಗರ ಆಶಾಕಿರಣವಾಗಿದೆ.

    ಹಿಂದೂ ಧರ್ಮವನ್ನು ಠೀಕಿಸಿಬಿಟ್ಟರೆ ತಾವು ಬುದ್ಧಿಜೀವಿಗಳಾಗಿಬಿಡುತ್ತೇವೆ ಎಂದು ಕೆಲವರು ತಿಳಿದಿದ್ದಾರೆ. ಅದೇ ರೀತಿ ಕನ್ನಡ ಹೋರಾಟಗಾರರನ್ನು “ಹುಗ್ರ ಓರಾಟಗಾರರು” ಎಂದು ಬಯ್ದುಬಿಟ್ಟರೆ ತಾವು “ಸುಶಿಕ್ಷಿತ ಭಾರತೀಯ ಪ್ರಜೆ” ಎಂದು ತಿಳಿದುಕೊಂಡವರೂ ಇದ್ದಾರೆ. ನೀವು ಈ ಎರಡನೇ ಗುಂಪಿಗೆ ಸೇರಿದವರು. ಒಮ್ಮೆ ಆತ್ಮವಿವರ್ಶೆ ಮಾಡಿಕೊಳ್ಳಿ.

    -ಗುರು ಪ್ರಸಾದ

    ReplyDelete
  3. ನಮಸ್ಕಾರ,

    ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರಿಡುವುದಕ್ಕಿಂತ ಮುಖ್ಯವಾದ ಕೆಲಸಗಳು ಮೂಲೆಗುಂಪಾಗಿವೆ, ಜಮೀನು ಕಳೆದುಕೊಂಡ ರೈತರ ಕುಟುಂಬಗಲಿಗೆ ಕೆಲಸ, ಸ್ಥಳಿಯರಿಗೆ ಅಲ್ಲಿನ ಕೆಲಸಗಳಲ್ಲಿ ಪಾಲು ಮತ್ತು ನಿಲ್ದಾಣ ತಲುಪಲು ತಡೆರಹಿತ ಮಾರ್ಗ ಇನ್ನು ಹಲವಾರಿವೆ .... ಎಲ್ಲರೂ ಹೆಸರಿನ ಹಿಂದೆ ತಮ್ಮ ಹೊರಾಟವನ್ನ ಸೀಮಿತಮಾಡಿ ಕೊಂಡಿದ್ದಾರೆ...... ಕನ್ನಡದ ಬಗ್ಗೆ ಕಾಳಜಿ ಇದ್ದವರು ಮೊದಲು ಅಲ್ಲಿನ ಉದ್ಯೊಗವಕಾಶಗಳಲ್ಲಿ ಹೆಚ್ಚು ಕನ್ನಡಿಗರು ಇರುವಂತೆ ಮಾಡಬೇಕಿತ್ತು .... ಎಲ್ಲ ಭರ್ತಿಯಾದಮೇಲೆ ಇವತ್ತು ಹೋತಾಟ ಮಾಡಿ ಏನು ಪ್ರಯೋಜನ.
    -ಅಮರ

    ReplyDelete
  4. You are damn right. KaRaVe should suggest the name that represents 5 crore Kannadigas not mere 50 lakh Bengaloorigaru!!!

    Helloooooo! THERE IS KARNATAKA OUTSIDE BANGALORE!

    ReplyDelete
  5. ಕರೆಕ್ಟಾಗಿ ಯೇಳಿದ್ರಿ. ಹದು ಕರ್ನಾಟಕ ಇಮಾನ ನಿಲ್ದಾಣ ಹಂತ ಹಿರಬೇಕು. ಬೆಂಗಳೂರು ಏರ್ಪೋರ್ಟ್ ಅಂತ ಕರೆಯಲು ಅದು ಬರೀ ಬೆಂಗಳೂರಿಗೆ ಸೇರಿದ್ದಲ್ಲ. ಅಂಗೇ... ‘ಮೈಸೂರು ಅರಮನೆ’ ಅನ್ನೋ ಹೆಸ್ರು ತೆಗೆದು ‘ಕರ್ನಾಟಕ ಅರಮನೆ’ ಅಂತ ಮಾಡಬೇಕು. ಅದು ಇಡೀ ಕರ್ನಾಟಕಕ್ಕೆ ಸೇರಿದ್ದು ಅಲ್ಲವ್ರಾ. ಆಮ್ಯಾಕೆ ಭದ್ರಾವತಿ ಐರನ್ ಅಂಡ್ ಸ್ಟೀಲ್, ಕೋಲಾರ್ ಗೋಲ್ಡ್ ಮೈನ್ಸ್, ಬಳ್ಳಾರಿ ಬೀಚಿ, ಧಾರವಾಡ ಫೇಡ, ಮೈಸೂರು ಪಾಕ್, ಕೊಡಗು ಕಾಫಿ, ಬನ್ನೂರು ಕುರಿ, ಮುಧೋಳ ನಾಯಿ, ಧಾರವಾಡದ ಎಮ್ಮೆ, ಅಥಣಿ ಚಪ್ಲಿ, ಗೂಳೂರು ಗಣೇಶ, ಬೆಳವಾಡಿ ಮಲ್ಲಮ್ಮ, ... ಇಂಗೇ ಎಲ್ಲಾದ್ರಾಗೂ ಕರ್ನಾಟಕ ಅಂತ ಎಸರು ಬರ್ಬೇಕು.

    -ಅಳ್ಳಿಮುಕ

    ReplyDelete
  6. Yeh Allimakha - yen mangyaa adheele! International airport andraa nimmooru busstand ankandyaa magana! Rajyakka ondha irthada. naayi, kuri, chapli, aramani hanga nooraaru, saavraaru iroodhilla. Yella ooraagoo international airport iddhidhra kempegowdara annu karegowdara annu anthidnappa ravi hanja.

    olle allimaka adhi bidle!

    ReplyDelete
  7. ರವಿಯವರೇ,
    ನಿಮ್ಮ ಹಿಂದಿನ ಲೇಖನಕ್ಕೆ ನಾನು ಬರೆದ ಪ್ರತಿಕ್ರಿಯೆಯಲ್ಲಿ ಕರವೇ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಹಾಗೆ ಮಾಡುತ್ತಿರುವ ಹೋರಾಟಗಳಲ್ಲಿ ಉಳಿದೆಲ್ಲಾ ಬೇಡಿಕೆಗಳನ್ನು ಬಿಟ್ಟು ಕೇವಲ ಕೆಂಪೇಗೌಡರ ಹೆಸರಿಡಬೇಕು ಎಂಬ ಬೇಡಿಕೆಯನ್ನು ಹಿಡಿದುಕೊಂಡು ಟೀಕಿಸಿದ್ದರ ವಿರುದ್ಧ ನನ್ನ ಅಭಿಪ್ರಾಯ ದಾಖಲಿಸಿದ್ದೆ. ಅಲ್ಲದೆ ಬಹಳಷ್ಟು ಮಂದಿ ಕನ್ನಡಿಗರು ಹೋರಾಟಗಳನ್ನು ಸಾಂಕೇತಿಕ ಎಂದು ಭಾವಿಸಿ ನಿಜವಾಗಿ ಬೀದಿಗಿಳಿಯಬೇಕಾದ ಸಂದರ್ಭದಲ್ಲೂ ಮೌನರಾಗಿರುವ ಸ್ವಭಾವದವರಾದ್ದರಿಂದ ಅವರಿಗೆ ಕರವೇಯಂಥ ಸಂಘಟನೆಗಳು ಪುಂಡರ ಗುಂಪಾಗಿ ಕಾಣುತ್ತದೆ ಎಂದು ಚಿಂತಿಸಿ ಹಾಗೆ ಬರೆದಿದ್ದೆ.
    ಆದರೆ ಯಾವಾಗ ಪತ್ರಿಕೆಗಳಲ್ಲಿ ಜವರೇಗೌಡರು, ಒಕ್ಕಲಿಗೆ ಮಠದ ಸ್ವಾಮೀಜಿ ಹಾಗೂ ಕರವೇ ‘ಕೆಂಪೇಗೌಡರ ಹೆಸರಿಡದಿದ್ದರೆ ನಿಲ್ದಾಣದ ಉದ್ಘಟನೆಗೆ ಬಿಡುವುದಿಲ್ಲ’ ಎಂದು ಆರ್ಭಟಿಸಿರುವ ವರದಿ ಓದಿದೆನೋ ಆಗ ನಿಮ್ಮ ಲೇಖನ ಚೆನ್ನಾಗಿ ಅರ್ಥವಾಯಿತು! ಈ ಲೇಖನದಲ್ಲಿ ನೀವು ವಿವರಿಸಿರುವ ಹಾಗೆ ಕನ್ನಡಿಗರಿಗೆ ಪ್ರಾತಿನಿಧ್ಯ ಮುಂತಾದ ಸಂಗತಿಗಳೆಲ್ಲಾ ನಡೆಯಬೇಕಾದ್ದು ಸರಕಾರದ ಮಟ್ಟದಲ್ಲಿ. ಅಲ್ಲಿ ತೆರೆ ಮರೆಯ ಕೆಲಸ ನಡೆಯುವಾಗ ಮೌನದಿಂದಿರುವ ಹೋರಾಟಗಾರರು ಭಾವುಕವಾಗಿ ಜನರನ್ನು ಕೆರಳಿಸಲು ಹೊರಡುವುದು ನಿಜಕ್ಕೂ ಆಕ್ಷೇಪಾರ್ಹ.

    ಸುಪ್ರೀತ್

    ReplyDelete
  8. Dear Ravi - Contragulations for a bold article and a great prediction! As you predicted that one day these Oratagaaras might twist the history by calling KG as "Kannada Naada Prabhu", they have already done it!!!

    Here is an excerpt from KaRaVe's website (Adhyakshara Lekhaniyindha):

    "ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ "ಕನ್ನಡಿಗರ ಹೆಮ್ಮೆಯ ದೊರೆ"ಯಾದ ಕೆಂಪೇಗೌಡರ ದೂರದೃಷ್ಟಿಯ ಫಲವಾಗಿಯೇ ಇಂದಿನ ಈ ಬೆಂಗಳೂರು ಇಂತಹ ಮಹಾನಗರವಾಗಿ ಮೈ ತಳೆದು ನಿಂತಿರುವುದು. ಇಡೀ ಪ್ರಪಂಚಕ್ಕೇ ಆ ಮಹಾನ್ ವ್ಯಕ್ತಿಯ ಹೆಸರನ್ನು ಪರಿಚಯಿಸುವುದು ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಆ ಕಾರಣದಿಂದಾಗಿ ದೇವನಹಳ್ಳಿಯ ಈ ಹೊಸ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಡಬೇಕೆಂದು ಆಗ್ರಹಿಸಲಾಯಿತು."

    (Samaanya Samantha Doreyaadha). Jai Kannadambhe.

    ReplyDelete
  9. ಅಲ್ಲಾ ಚಾಮಿ... ಏಲ್ಪೋಲ್ಟು ೫೦ ಲಕ್ಷ ಬೆಂಗಳೂರಿನೋರಿಗೆ ಮಾತ್ರ ಸೇರಿದ್ದಲ್ಲ. ೫ ಕೋಟಿ ಕನ್ನಡಿಗರಿಗೆ ಸೇರಿದ್ದು ಅಂತ ಕ್ವಾಪ ಮಾಡ್ಕೋತಿದೀರಲ್ಲಾ ... ಏಲ್ಪೋಲ್ಟೇನೋ ಬೆಂಗ್ಳೂರ್ನಾಗೆ ಇರಬೋದು. ಆದ್ರೆ ಬೆಂಗ್ಳೂರು ಪಟ್ಟಣಾನೇ ೫ ಕೋಟಿ ಕನ್ನಡಿಗರಿಗೆ ಸೇರಿದ್ದಲ್ಲವ್ರಾ?

    ಅಳ್ಳಿಮುಕ

    ReplyDelete
  10. "Samaanya Samantha ..."

    saamaanu saamaanu anta adenu hodkoteeri. alli thatskannadadallu neeve SID hesaralli chaddi coments bareeteeri!

    ReplyDelete
  11. ishtu dina (varsha) Bengalooru Vimaana Nildaana anta ellaaroo enoo problem iralaarda kareetiddru. Ee hesaru annoo holasu raajakaaranadinda ellaa martu kacchyaata chaloo aatu nodri ... Enara kareeryo maaraaya allenu Vimaana barataavo enu Pushpaka Vimaana (direct swargaarohana) irataavo ... Kempegauda, Pulikeshi, Chennamma yaavoo hesaru shaashwata alla. Naale yavno mattobba prabhaavi manasyaa bandu tanaga bekaadavra hesaru (avirodhavaagi) change maadabahudu. Ex. VT, Sahara Airport etc. Yaaka summa tali kedisikoteeryo maaraya ... modala ellaaroo kannada maataadri, kannada balasri ... yaaka summa jagalaadateeri? Summa "Karnataka Airport" anta andu bidri ... yaavnara koy andra Narayanagoudru nodakotaara hanga andavna ...

    ReplyDelete