ಬದುಕಿನ ಗುರಿ.

ಎಂದೂ ಹೋಗದ ಒಂದು ಹೊಸ ಜಾಗಕ್ಕೆ ಇಂದು ನೀ ಹೋಗು. 

ಇಳಿ-ಮಧ್ಯಾಹ್ನದ ಹೊತ್ತು ಖಾಲಿ ಖಾಲಿಯಿರುವ ಅಲ್ಲಿನ ಬಾರೊಂದರಲ್ಲಿ ತಣ್ಣನೆಯ ಬಿಯರ್ ಹೀರು. ಜೊತೆಗೊಂದು ಮೆಣಸಿನಕಾಯಿ ನೆಂಚಿಕೆಗಿರಲಿ. 

ಬಿಯರು ತಂದಿಟ್ಟ ಪರಿಚಾರಕನಿಗೊಂದು ಶಬ್ಬಾಸಿಯೂ ಇರಲಿ!

ರಾತ್ರಿಯ ಊಟಕ್ಕೆ ಆ ಊರಿನ ಪಕ್ಕಾ ಲೋಕಲ್ ಎನ್ನಿಸುವಂತಹ ಒಂದು ಹೋಟೆಲ್ಲಿಗೆ ಹೋಗು. 

ಚರ್ಬಿ ಇರುವ ಹಂದಿಯ ಮಾಂಸವನ್ನೋ, ಮೀನಿನ ತುಣುಕನ್ನೋ, ಹುರಿದ ಹೋರಿಯ ಬೀಜವನ್ನೋ ಅಥವಾ ಬೇಸಿದ ತರಕಾರಿಯನ್ನೋ ಆರ್ಡರ್ ಮಾಡು. 

ಹಾಂ, ಜೊತೆಗೊಂದು, ಮತ್ತೊಂದು, ಮಗದೊಂದು ಗ್ಲಾಸು ದೇಸಿ ಮದ್ಯವನ್ನು ಸಹ ಆರ್ಡರ್ ಮಾಡು. 

ನಿನಗೆ ಯಾವ ರೀತಿಯಿಂದಲೂ ಹೊಂದಿಕೆಯಾಗದ ವ್ಯಕ್ತಿಯೆನಿಸಿದರೂ ನಿನ್ನ ಟೇಬಲ್ಲಿನ ಸಮೀಪವಿರುವವನ, ಇರುವವರ ಮಾತುಗಳನ್ನು ಆಪ್ತವಾಗಿ ಕೇಳಿಸಿಕೋ. 

ಅವರ ಮಾತು ಅರ್ಥವಾಗದಿದ್ದರೂ ನೀ ಒಪ್ಪದಿದ್ದರೂ ಸಹ ಅವರೊಟ್ಟಿಗೆ ಕಂಠಪೂರ್ತಿ ಕುಡಿ, ಹೂಂಗುಡು, ಅವಸರಿಸದೆ ಮೆಲ್ಲನೆ ತಿನ್ನು.  

ಮರೆಯದೆ ನಿನ್ನೆಲ್ಲ ಸ್ನೇಹಿತರೊಟ್ಟಿಗೆ ಸಂಪರ್ಕದಲ್ಲಿರು, ಹಾಗೆಯೇ ಮರೆಯದೇ ನಿನ್ನೊಟ್ಟಿಗೂ! 

ಮರುದಿನ ಮತ್ತೆ ಹೊಸ ಊರು, ಸ್ಥಳೀಯ ಬಾರು, ತಣ್ಣನೆಯ ಬಿಯರು, ಜನರು!

ಮತ್ತದೇ ಮಾಂಸ, ಮದ್ಯ, ತರಕಾರಿ ಸಾರು. ಅದೃಷ್ಟದೆ ಸಿಕ್ಕರೆ ಮಧ್ಯದಂಗ ಅದೇ ಸತ್ಸಂಗ! ಇಲ್ಲದಿದ್ದರೆ ನಿನ್ನ ಕೈಯಲ್ಲೇ ದಿವ್ಯಾಂಗ! 

ಇಷ್ಟೇ ಜೀವನದ ಸತ್ಯ ಸಂಗ, ಉಳಿದದ್ದೆಲ್ಲಾ ಬರೀ ಭಂಗ!

No comments:

Post a Comment