ಫೇಸ್ಬುಕ್ ವಿಮರ್ಶಕರು ಸಂಶೋಧನ ಕೃತಿಗಳ ವಿಮರ್ಶೆಯನ್ನು ಹೇಗೆ ಬರೆಯಬೇಕು?
೧. ಲೇಖಕ ಯಾ ಸಂಶೋಧಕನ ಸೂಕ್ಷ್ಮ ಪರಿಚಯದೊಂದಿಗೆ ಅವನ ಒಟ್ಟಾರೆ ವಾದ ಯಾ ಸಂಶೋಧನೆಯ ಸ್ವರೂಪವನ್ನು ವರ್ಣಿಸಿ.
೨. ಆ ಸ್ವರೂಪದಲ್ಲಿ ಲೇಖಕನ ಈ ಸಂಶೋಧನೆಯು ಅದೇ ವಿಷಯದ ಹಿಂದಿನ ಇತರೆ ಸಂಶೋಧನೆಗಳಿಗಿಂತ ಭಿನ್ನವೇ ಇಲ್ಲವೇ ಸಂಕ್ಷಿಪ್ತವಾಗಿ ಚರ್ಚಿಸಿ.
೩. ಪುಸ್ತಕದ ವಿಮರ್ಶೆ ಪುಸ್ತಕದ ವರದಿಯಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
೪. ಅಧ್ಯಾಯಗಳು ಮತ್ತವುಗಳ ಉದ್ದೇಶವನ್ನು ಉಲ್ಲೇಖಿಸುತ್ತಾ ಸಂಶೋಧಕನು ಯಾವ ಆಧಾರದಲ್ಲಿ ತನ್ನ ಸಿದ್ಧಾಂತವನ್ನು ಕಟ್ಟಿಕೊಟ್ಟಿದ್ದಾನೆ ಮತ್ತದಕ್ಕೆ ಪೂರಕ ಮಾಹಿತಿ ಕೊಟ್ಟಿದ್ದಾನೆಯೇ ವಿವರಿಸಿ.
೫. ಕೊಟ್ಟಿರುವ ಪೂರಕ ಮಾಹಿತಿಯ ಆಕರಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ.
೬. ಕೊಟ್ಟಿರುವ ಆಕರ ಮತ್ತು ಮಾಹಿತಿ ವಿಷಯಕ್ಕೆ ಪೂರಕವಾಗಿಲ್ಲದಿದ್ದರೆ ಅದನ್ನು ನಿಖರವಾಗಿ ಮತ್ತು ಸಾಕ್ಷ್ಯಗಳೊಂದಿಗೆ ನಿರೂಪಿಸಿ. ಸಾಧ್ಯವಾದಷ್ಟು ಉದಾಹರಣೆಗಳನ್ನು ಕೊಡಿ.
೭. ಅಧ್ಯಾಯದಿಂದ ಅಧ್ಯಾಯಕ್ಕೆ ಸಂಶೋಧನ ಸಿದ್ಧಾಂತವು ಗಟ್ಟಿಯಾಗಿ ನೆಲೆಗಟ್ಟುತ್ತಿದೆಯೇ ಎಂದು ಪರಿಶೀಲಿಸಿ. ಇಲ್ಲಿ ನಿಮ್ಮದು ಭಿನ್ನ ನಿಲುವಿದ್ದರೆ ಅದನ್ನು ಸಾಕ್ಷ್ಯಾಧಾರಗಳ ನೆಲೆಯಿಂದ ತಾರ್ಕಿಕವಾಗಿ ಪ್ರಶ್ನಿಸಿ.
೮. ಆಕರವಾಗಿ ಪುರಾತನ ಕಾವ್ಯ ಯಾ ವಚನಗಳನ್ನು ಬಳಸಿದ್ದರೆ ಸಾಂದರ್ಭಿಕ ಉಲ್ಲೇಖ, ಸಾಕ್ಷ್ಯ ಮತ್ತು ವಿಶ್ಲೇಷಣೆಯನ್ನು ಗಮನಿಸಿ. ಬೇರೆ ಮೀಮಾಂಸಕರು ಅದೇ ಕಾವ್ಯ ಯಾ ವಚನಗಳನ್ನು ಬೇರೆಯ ನೆಲೆಯಲ್ಲಿ ವಿವರಿಸಿದ್ದರೆ ಆ ವಿವರಣೆಯ ಸಾಂದರ್ಭಿಕ ಉಲ್ಲೇಖ, ಸಾಕ್ಷ್ಯ ಮತ್ತು ವಿಶ್ಲೇಷಣೆಯನ್ನು ಗಮನಿಸಿ, ತೂಲಿಸಿ. ಇಲ್ಲಿ ಮೂಲ ಕಾವ್ಯದ ಕವಿ ಯಾ ವಚನದ ವಚನಕಾರನಲ್ಲದೆ ಇತರರ ಅರ್ಥೈಸುವಿಕೆಗಳು ವಿವರಣೆಗಳು ಅವರವರ ಭಾವಕ್ಕೆ ಸೀಮಿತವೆನಿಸುತ್ತವೆಯೇ ಹೊರತು ಅದೇ ಅಂತಿಮವೆನ್ನಲು ಸಾಧ್ಯವಿಲ್ಲ. ಹಾಗಾಗಿ ಅಂತಹ ಇತರರ ಸೂಚ್ಯಗಳು, ವಿವರಣೆಗಳು ಎಲ್ಲವೂ ಸತ್ಯಮಿಥ್ಯವಾಗುತ್ತವೆ. ಆದರೆ ಸಾಂದರ್ಭಿಕ ಸಾಕ್ಷ್ಯವಿದ್ದರೆ ಮಾತ್ರ ಅವು ಸತ್ಯಕ್ಕೆ ಸಮೀಪ ಎಂಬುದನ್ನು ನೆನಪಿಡಿ.
ಉದಾಹರಣೆ: 'ಏಳನೂರ ಎಪ್ಪತ್ತು ಸೇದೆಯ ಬಾವಿ' ಎಂಬುದನ್ನು ಏಳನೂರ ಎಪ್ಪತ್ತು ನರನಾಡಿ, ಏಳನೂರ ಎಪ್ಪತ್ತು ಪಂಚೇಂದ್ರಿಯಗಳ ವಿಸ್ತೃತ ಭಾಗಗಳ ಸಂಖ್ಯೆ, ಮತ್ತು ಏಳನೂರ ಎಪ್ಪತ್ತು ಗಣಂಗಳು ಎಂಬ ಮೂರು ವಿವರಣೆಯಲ್ಲಿ ಗಣಂಗಳು ಎಂಬುದು ಸಾಂದರ್ಭಿಕ ಸಾಕ್ಷಿ ಎನಿಸುತ್ತದೆ. ಮಿಲಿಯನ್ನುಗಟ್ಟಲೆ ನರನಾಡಿಗಳಿರುವುದರಿಂದ ಅವನ್ನು ಕೇವಲ ಏಳನೂರ ಎಪ್ಪತ್ತು ಎನ್ನುವುದು ತಪ್ಪೆನಿಸುತ್ತದೆ. ಅದೇ ರೀತಿ ಇಂದ್ರಿಯ ಭಾಗಗಳ ಕಲ್ಪನೆಯ ಸಂಖ್ಯೆ ಸಹ ಒಪ್ಪೆನಿಸದು. ಹಾಗೊಮ್ಮೆ ನರನಾಡಿಯಾಗಿದ್ದರೆ "ಅಗಣಿತ" ಎಂಬ ಪದವನ್ನು ಮೂಲ ವಚನಕಾರ ಬಳಸುತ್ತಿದ್ದ. ಏಕೆಂದರೆ ಆ ಪದವನ್ನು ಅವನು ಸಾಕಷ್ಟು ಸಾರಿ ತನ್ನ ಇತರೆ ವಚನಗಳಲ್ಲಿ ಬಳಸಿದ್ದಾನೆ. ಇದೇ ತರ್ಕ ಇಂದ್ರಿಯಕ್ಕೂ ಅನ್ವಯ.
೯. ಅಧ್ಯಾಯದಿಂದ ಅಧ್ಯಾಯಕ್ಕೆ ಸಿದ್ಧಾಂತ ಗಟ್ಟಿಗೊಳ್ಳುತ್ತಿದ್ದರೆ ಹೇಗೆಂದು ವಿವರಿಸಿ, ಗಟ್ಟಿಗೊಳ್ಳದಿದ್ದರೂ ಹೇಗೆಂದು ವಿವರಿಸಿ.
೧೦. ಕೇವಲ ಅನಿಸಿಕೆ, ಸೃಜನಶೀಲ ವಿವರಣೆ, ಭಾವನಾತ್ಮಕ ನೆಲೆಯಲ್ಲಿ ಪುರಾವೆಗಳಿಲ್ಲದೆ ವಿಮರ್ಶಿಸುವ ಭಾವೋತ್ಕರ್ಷಕ್ಕೆ ಖಂಡಿತ ಒಳಗಾಗಬೇಡಿ. ಹಾಗೊಮ್ಮೆ ಒಳಗಾದರೆ ಅವಹೇಳನಕ್ಕೆ ಆಹಾರವಾಗುವ ಸಾಧ್ಯತೆಯನ್ನು ನೀವೇ ಸೃಷ್ಟಿಸಿಕೊಳ್ಳುತ್ತೀರಿ ಎಂಬ ಎಚ್ಚರ ನಿಮ್ಮಲ್ಲಿ ಸದಾ ಜಾಗೃತಿಯಲ್ಲಿರಲಿ.
ಸಂಶೋಧನೆಯೆಂದರೆ ಪುರಾವೆ-ಪ್ರತಿಪುರಾವೆ, ಸಾಕ್ಷ್ಯ, ತಾರ್ಕಿಕ ವಿಶ್ಲೇಷಣೆ, ಮಂಥನಗಳಿಂದ ಮಥ(ಮಿಥು)ನಗೊಂಡು ಪರಿಪೂರ್ಣತೆಯೆಡೆ ಸಾಗುವ ನಿರಂತರ ಪ್ರಕ್ರಿಯೆ ಎಂಬುದು ನಿಮ್ಮ ಆದ್ಯ ಗಮನದಲ್ಲಿರಲಿ. ಏಕೆಂದರೆ ಇಲ್ಲಿ ಯಾರೂ ಮುಖ್ಯರಲ್ಲ ಮತ್ತು ಅಮುಖ್ಯರೂ ಅಲ್ಲ!
ಇದೆಲ್ಲಾ ಅಸಾಧ್ಯವೆನಿಸಿದರೆ ಪದ್ಯ ಬರೆದು ಗುನುಗಿಕೊಂಡು ಹಾಯಾಗಿರಿ.
ಹಾಂ, ಇದು ಸಂಶೋಧಕರಿಗೂ ಮತ್ತು ಸೃಜನೇತರ ವಿಷಯಗಳ ಲೇಖಕರಿಗೂ ಅನ್ವಯ!
ಶಬ್ದವೆಂಬೆನೆ? ಶ್ರೋತ್ರದೆಂಜಲು. ಸ್ಪರ್ಶವೆಂಬೆನೆ ತ್ವಕ್ಕಿನೆಂಜಲು.
ರೂಪೆಂಬೆನೆ ? ನೇತ್ರದೆಂಜಲು. ರುಚಿಯೆಂಬೆನೆ? ಜಿಹ್ವೆಯೆಂಜಲು.
ಪರಿಮಳವೆಂಬೆನೆ ? ಘ್ರಾಣದೆಂಜಲು.
"ನಾನೆಂಬೆನೆ? ಅರಿವಿನೆಂಜಲು."
ಎಂಜಲೆಂಬ ಭಿನ್ನವಳಿದ, ಬೆಳಗಿನೊಳಗಣ ಬೆಳಗು
ಗುಹೇಶ್ವರನೆಂಬ ಲಿಂಗವು.
Take it and shove it up your ass if you don't disagree! PERIOD. There is no room for spit n run critics or lame commentators.
No comments:
Post a Comment