The Kannada literary world known only for its leftists has enjoyed an extended autonomous power for more than four decades. It's lieutenants wearing the hat of socialism, the coat of modernisation, and the shoes of liberalism, infact, deeply enjoyed the democratically renewed feudalism. The feudalism that promotes hypnotized sex as depicted in ಪರಸಂಗದ ಗೆಂಡೆತಿಮ್ಮ, obsession of Alcoholism, Narcissism, Appeasement, Nepotism and of course Hegemony!
However, when the information technology exploded, Indian literacy especially became fact-checking literacy. This has downed the autonomous power of those manipulative brainwashing Indo-Libs! It's expected and an inline normal process when the new tools of measurement are introduced or invented. But those tools exposed the facts out of Indo-Libs fictional n factual literature. But it doesn't mean the right-wingers are creating anything new. They are just indulged in renewing what has been said and written. So the nation is just going through the notion of fact-finding and nothing more than that. In this fact-finding process, certainly baked n sweetened many stories to suit the palette of people.
So, in a nutshell, right-wingers are bakers, and left-wingers are jokers. The nation should eat n laugh whole hearted but choose with fully awakened brain!
ಕನ್ನಡ ಅನುವಾದ:
ಕೇವಲ ಎಡಪಂಥೀಯರಿಂದ ಗುರುತಿಸಿಕೊಂಡ ಕನ್ನಡ ಸಾಹಿತ್ಯ ಜಗತ್ತು ನಾಲ್ಕು ದಶಕಗಳಿಗಿಂತಲೂ ಹೆಚ್ಚಿಗೆ ವ್ಯಾಪಿಸಿರುವ ಸ್ವಾಯತ್ತಾಧಿಕಾರವನ್ನು ಅನುಭವಿಸುತ್ತಿದೆ. ಇದರ ಲೆಫ್ಟಿನೆಂಟ್ ಗಳು ಸಮಾಜವಾದದ ಟೋಪಿ, ಆಧುನಿಕತೆಯ ಕೋಟು ಮತ್ತು ಉದಾರವಾದದ ಬೂಟುಗಳನ್ನು ಧರಿಸಿ, ವಾಸ್ತವದಲ್ಲಿ ಪ್ರಜಾಪ್ರಭುತ್ವದ ನವೀಕೃತ ಊಳಿಗಮಾನ್ಯತೆಯನ್ನು ಆಳವಾಗಿ ಅನುಭೋಗಿಸಿದ್ದಾರೆ. ಇವರು ಅನುಸರಿಸುವ ಊಳಿಗಮಾನ್ಯತೆಯು ಪರಸಂಗದ ಗೆಂಡೆತಿಮ್ಮದಲ್ಲಿ ಚಿತ್ರಿಸಿದ ಸಮ್ಮೋಹಿತ ಮೈಥುನ-ವ್ಯಾಮೋಹದಂತೆ, ಮದ್ಯವ್ಯಸನದ, ಆತ್ಮರತಿಯ, ತುಷ್ಟೀಕರಣದ, ಸ್ವಜನ ಪಕ್ಷಪಾತದ ಮತ್ತು ಸಹಜವಾಗಿಯೇ ಅಧಿನಾಯಕತ್ವದ ಗೀಳಿನಿಂದ ಕೂಡಿದೆ!
ಆದಾಗ್ಯೂ, ಮಾಹಿತಿ ತಂತ್ರಜ್ಞಾನವು ಸ್ಫೋಟಗೊಂಡಾಗಿನಿಂದ ಭಾರತೀಯ ಸಾಕ್ಷರತೆಯು ಸತ್ಯ-ಪರಿಶೀಲನೆಯ ಸಾಕ್ಷರತೆಯಾಗಿ ತನ್ನ ವೈಶಿಷ್ಟ್ಯತೆಯನ್ನು ಮೆರೆಯುತ್ತಿದೆ. ಇದರಿಂದಾಗಿ ಮಿದುಳುತೊಳೆತದ ಕುಶಲತೆಯುಳ್ಳ ಭಾರತೀಯ-ಉದಾರವಾದಿಗಳ ಸ್ವಾಯತ್ತಾಧಿಕಾರವನ್ನು ಕೆಳಗಿಳಿಸದಂತಾಗಿದೆ! ಹೊಸ ಮಾಪನಗಳ ಸಾಧನಗಳನ್ನು ಪರಿಚಯಿಸಿದಾಗ ಅಥವ ಕಂಡುಹಿಡಿದಾಗಲೆಲ್ಲ ಸಾಮಾನ್ಯ ಪ್ರಕ್ರಿಯೆಯ ಸಾಲಿನಲ್ಲಿರಬೇಕೆಂದು ನಿರೀಕ್ಷಿಸುವುದು ಸಹಜವಾಗಿದೆ. ಆದರೆ ಈ ಸಾಧನಗಳು ಭಾರತೀಯ-ಉದಾರಿಗಳ ಕಾಲ್ಪನಿಕ ಮತ್ತು ವಾಸ್ತವಿಕ ಸಾಹಿತ್ಯದ ಆಚೆಗಿನ ವಾಸ್ತವಾಂಶಗಳನ್ನು ತೆರೆದಿಡುತ್ತವೆ. ಹೀಗಿರುವಾಗ ಬಲಪಂಥೀಯರು ಹೊಸತನ್ನು ಸೃಷ್ಟಿಸುತ್ತಿರುವರು ಎಂಬುದು ಇದರರ್ಥವಲ್ಲ. ಅವರು ಕೇವಲ ಈ ವರೆಗೆ ಹೇಳಿರುವುದನ್ನು ಮತ್ತು ಬರೆದಿರುವುದನ್ನು ನವೀಕರಣಗೊಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗಾಗಿ ದೇಶವು ಸತ್ಯ-ಪರಿಶೀಲನೆಯ ಹುಡುಕಾಟದ ಕಲ್ಪನೆಯಲ್ಲಿ ಮುಳುಗಿರುವುದೇ ಹೊರತು ಅದಕ್ಕಿಂತ ಹೆಚ್ಚಿನದೇನನ್ನೂ ಸಾಧಿಸಲು ಹೊರಟಿಲ್ಲ. ಹೀಗೆ ಸತ್ಯ-ಹುಡುಕುವ ಪ್ರಕ್ರಿಯೆಯಲ್ಲಿ ಜನರ ರಸನೇಂದ್ರಿಯಗಳಿಗೆ ಸರಿಹೊಂದುವಂತೆ ಬೇಯಿಸಿ, ಸಿಹಿಗೊಳಿಸಿದ ಹಲವಾರು ಕಥೆಗಳನ್ನು ನಿರೂಪಿಸಲಾಗುತ್ತಿದೆ.
ಆದುದರಿಂದ, ಇಲ್ಲಿ ಬಲಪಂಥೀಯರು ಬೇಯಿಸುವವರೂ, ಎಡಪಂಥೀಯರು ಹಾಸ್ಯಗಾರರೂ ಆಗಿದ್ದಾರೆ. ಹಾಗಾಗಿ ದೇಶವು ಮನದುಂಬಿ ತಿಂದು ನಕ್ಕು ಸಂಪೂರ್ಣವಾಗಿ ಜಾಗೃತಗೊಂಡ ಮಿದುಳನ್ನು ಬಳಸಿ ಆಯ್ಕೆ ಮಾಡಬೇಕಿದೆ!