ಮುಂಬೈ ಬರ್ನಿಂಗ್!

ಅಂತೂ ಒಂದು ಮಹಾಯುದ್ಧದ ಮುನ್ನುಡಿ ಮುಂಬೈಯಿಂದ ಶುರುವಾಗಿದೆ. ಈವರೆಗೂ ಎಲ್ಲೋ ಕಾಶ್ಮೀರದ ಕಣಿವೆಯಿಂದಲೋ, ಯಾರೂ ಅರಿಯದ ಕತ್ತಲ ಕೋಣೆಗಳಿಂದಲೋ ಆಕ್ರಮಿಸಿ ಬಾಂಬುಗಳನ್ನು ಹುಗಿದಿಟ್ಟು ಮುಗ್ಧರನ್ನು ಕೊಲ್ಲುತ್ತಿದ್ದ ಭಯೋತ್ಪಾದಕರು ಇಂದು ಮುಂಬಾಗಿಲಾದ ’ಗೇಟ್ ವೇ ಆಫ್ ಇಂಡಿಯಾ’ದಿಂದಲೇ ಆಡಿಯಿಟ್ಟು ಮುಂಬೈಯ ಮುಡಿಯೇರಿದ್ದಾರೆ. ಮುಖ್ಯ ನಮ್ಮಲ್ಲಿ ಸರಿಯಾದ ಕಾನೂನುಗಳೇ ಇಲ್ಲದಿರುವುದು. ಇದ್ದರೂ ಅವುಗಳ ಅನುಷ್ಟಾನ........?

ನಮ್ಮಲ್ಲಿ ಎಂತಹ ದ್ವಂದ್ವಗಳಿವೆಯೆಂದರೆ, ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಸಂವಿಧಾನವನ್ನು ಭೋಧಿಸುತ್ತ, ಅಪರಾಧೀ ಹಿನ್ನೆಲೆಯಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುತ್ತೇವೆ. ಆದರೆ ಇಂದಿನ ಶೇಕಡಾ ೬೦% ನಮ್ಮ ಜನಪ್ರತಿನಿಧಿಗಳು ಅಪರಾಧೀ ಹಿನ್ನೆಲೆಯವರಾಗಿದ್ದಾರೆ. ಅದರಲ್ಲೂ ಅನೇಕರು ಜೈಲಿನಲ್ಲಿ ಕುಳಿತೇ ಚುನಾವಣೆಗಳನ್ನು ಗೆದ್ದಿದ್ದಾರೆ. ಸಂವಿಧಾನದ ಅದ್ಯಾವ ತಿದ್ದುಪಡಿ ಕೊಲೆಗಡುಕರು, ರೌಡಿಗಳು, ಕಳ್ಳರನ್ನೆಲ್ಲಾ ಜನಪ್ರತಿನಿಧಿಗಳಾಗುವಂತೆ ಮಾರ್ಪಾಡಿಸಿತೋ ನಾ ಕಾಣೆ.

ಮುಂಬೈಯ ದಾಳಿಗೆ ಒಂದು ತಿಂಗಳ ಮುಂಚೆಯೇ ಜಲಮಾರ್ಗವಾಗಿ ಭಾರತದ ಮೇಲೆ ಉಗ್ರರು ದಾಳಿ ಮಾಡಬಹುದೆಂದು ಅಮೇರಿಕಾ ಸೂಚನೆ ನೀಡಿದ್ದರೂ ಅದನ್ನು ’ನಾಸ್ಟ್ರಡಾಮಸ್’ನ ಭವಿಷ್ಯವಾಣಿಯೆಂಬಂತೆ ಹಗುರವಾಗಿ ಪರಿಗಣಿಸಿದ್ದುದು, ದಾಳಿಯ ನಂತರವೂ ಪಾಕಿಸ್ತಾನದ ಐ.ಎಸ್.ಐ. ಮುಖ್ಯಸ್ಥನನ್ನು ಬಂದು ನೋಡೆಂದು ಕೇಳಿಕೊಳ್ಳುವುದು, ಸಹಾಯ ಮಾಡಲು ಬಂದ ಅಮೇರಿಕಾದ ಎಫ್.ಬಿ.ಐ.ಯನ್ನು ವಿಮಾನನಿಲ್ದಾಣದಲ್ಲೇ ಕಾಯಿಸಿದ್ದುದು ಭಾರತದ ಘನ ಸರ್ಕಾರದ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆಯೋ ಅಥವಾ ಈ ಘಟನೆಯನ್ನೂ ಕೂಡಾ ಓಲೈಕೆಗೋ, ಮತರಾಜಕೀಯಕ್ಕೋ ಅನ್ವಯಿಸಲು ಸೂತ್ರವನ್ನು ಹುಡುಕುವ ವ್ಯವಧಾನವಾಗಿದೆಯೋ ಅರಿಯೆ. ಒಂದೆಡೆ ಭ್ರಷ್ಟ ಅಧಿಕಾರೀಶಾಹಿಗಳು ದೇಶವನ್ನು ಹಿಂಡಿ ಕೋಟಿ ಕೋಟಿ ದೋಚುತ್ತಿದ್ದರೆ, ನಮ್ಮ ಅಗ್ನಿಶಾಮಕದಳದವರು ಬೂಟುಗಳಿಲ್ಲದೇ ಚಪ್ಪಲಿ ತೊಟ್ಟೇ ಬೆಂಕಿಯೊಂದಿಗೆ ಹೋರ್‍ಆಡುತ್ತಿದ್ದಾರೆ.

ನೀವು ಗಮನಿಸಿದ್ದೀರೋ ಇಲ್ಲವೋ ಅಮೇರಿಕಾದ ಮೇಲೆ ೯೧೧ ದಾಳಿಯ ನಂತರ ಇದುವರೆಗೂ ಒಂದೇ ಒಂದು ಉಗ್ರರ ದಾಳಿ ನಡೆದಿಲ್ಲ. ಆ ಒಂದು ಉಗ್ರರ ದಾಳಿಯಿಂದಾಗಿ ಅಫ್ಘಾನಿಸ್ತಾನವು ಇಂದು ಸ್ಮಶಾನವಾಗಿದೆ. ಅದೇ ಪಾಕಿಸ್ತಾನವು ಹಲವಾರು ದಶಕಗಳಿಂದಲೂ ಭಾರತದ ನೆಲದ ಮೇಲೆ ಸತತ ಉಗ್ರರ ದಾಳಿಯನ್ನು ನಡೆಸುತ್ತಿದೆ. ಇದನ್ನು ಹತ್ತಿಕ್ಕುವುದಿರಲಿ, ಈ ದಾಳಿಯನ್ನು ಕೇವಲ ಕಾಶ್ಮೀರದ ಅಂಚಿಗೆ ಸೀಮಿತಗೊಳಿಸಲು ಕೂಡಾ ಭಾರತ ಹೆಣಗುತ್ತಿದೆ. ಎಲ್ಲಿಯ ಕಾಶ್ಮೀರ ಎಲ್ಲಿಯ ಕಲಘಟಗಿ? ಕಲಘಟಗಿಯಲ್ಲಿಯೂ ಉಗ್ರರನ್ನು ಬಂಧಿಸುವಂತಾಗಿದೆ ಇಂದು. ಭಾರತ ಅದ್ಯಾವ ದಿಕ್ಕಿನಲ್ಲಿ ಮುಂದುವರಿಯುತ್ತಿದೆಯೋ! ಒಂದೆಡೆ ಭಯೋತ್ಪಾದನೆ, ತೀವ್ರ ಹಣದುಬ್ಬರ, ಐ.ಟಿ. ಬೆಳವಣಿಗೆಯನ್ನೇ ಭಾರತದ ಬೆಳವಣಿಗೆಯೆಂಬಂತೆ ತೋರಿಸುತ್ತ, ಕೇವಲ ಬೆಂಗಳೂರೊಂದರಿಂದಲೇ ರಿಯಲ್ ಎಸ್ಟೇಟ್ ರೌಡಿಗಳು ಬಿಲಿಯನ್ ಡಾಲರ್ ಟರ್ನೋವರ್ ಮಾಡುತ್ತಾ ಬುಲೆಟ್ ಪ್ರೂಫ್ ಕಾರುಗಳಲ್ಲಿ ತಿರುಗುತ್ತಿದ್ದರೆ, ಸಿಯಾಚೆನ್ ನಲ್ಲಿ ನಮ್ಮ ಯೋಧರು ಚಳಿಗೆ ಸರಿಯಾಗಿ ಹೊದಿಕೆ ಇಲ್ಲದೇ ದೇಶ ಕಾಯುವಂತಾಗಿದೆ.

ಇಂದು ಸ್ವೇಚ್ಚಾಚಾರೀ ರಾಜಕಾರಣಿಗಳಿಗೆ ಬೇಕಾದ್ದು ಏನು ಎಂಬುದು ನಮ್ಮ ಸರ್ಕಾರೀಯಂತ್ರಕ್ಕೆ ಚೆನ್ನಾಗಿ ತಿಳಿದಿದೆ. ಹಾಗಾಗಿ ಯಾವ ರಾಜಕಾರಣಿ/ಪಕ್ಷಗಳು ಅಧಿಕಾರಕ್ಕೆ ಬಂದರೇನು? ಸರ್ಕಾರೀ ಅಧಿಕಾರಿಗಳ ಸ್ಥಾನ ಖಾಯಂ ತಾನೆ? ಹಾಗಾಗಿ ಭಾರತಕ್ಕೆ ಸರಿ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿಯೇ ಇಲ್ಲವೆನ್ನಬಹುದು, ಸಿಕ್ಕಿರುವುದು "ಭಾರತೀಯ ಆಡಳಿತಶಾಹೀ ಸ್ವಾತಂತ್ರ್ಯ" ಯಾವುದೇ ರಂಗವಾದರೂ ಭ್ರಷ್ಟಾಚಾರ ತುಂಬಿ ಎಲ್ಲೆಲ್ಲೂ ಅರಾಜಕತೆ ಮೆರೆಯುತ್ತಿದೆ. ಇದು ಮಾಧ್ಯಮರಂಗವಿರಬಹುದು ಅಥವಾ ರಾಜಕೀಯರಂಗವಿರಬಹುದು.

ಪಾಪ, ಜನಸಾಮಾನ್ಯರು ಇನ್ನೇನು ಮಾಡಿಯಾರು? ಲಂಗುಲಗಾಮಿಲ್ಲದೆ ಸುದ್ದಿ ಭಿತ್ತರಿಸುವ ಟಿವಿ ಮಾಧ್ಯಮಗಳನ್ನು ನೋಡಿ, ಖಾರಪುರಿ ತಿಂದು, ಲೊಚಗುಟ್ಟುತ್ತ ಮಾತನಾಡಿಕೊಂಡು ಒಂದು ಗಾಳಿಯನ್ನು ತೆಗೆಯುತ್ತಾರೆ. ಅದೇ ರೀತಿ ನಮ್ಮಂಥಹ ಬರಹಗಾರರೂ ಕೂಡ ಒಂದು ಲೇಖನವನ್ನು ಬರೆದು ಶಹಬ್ಬಾಸ್ ಗಿಟ್ಟಿಸಿಕೊಳ್ಳುತ್ತಾರೆ. ಅದೂ ಇಂದಿನ ರಿಸೆಷನ್ ಯುಗದಲ್ಲಿ ಐ.ಟಿ. ಜನಕ್ಕೆ ಇಂಟರ್ನೆಟ್ ಲೇಖನಗಳನ್ನು ಓದಲು ಅವಕಾಶ ಸಿಕ್ಕಿದರೆ, ಇಲ್ಲದಿದ್ದರೆ ನಾವುಗಳು ನಮ್ಮೊಂದು ತೀಟೆಯನ್ನು ತೀರಿಸಿಕೊಂಡೆವೆಂದು ಸಮಾಧಾನಿಸಿಕೊಳ್ಳಬೇಕಾಗುತ್ತದೆ.

ಇದೆಲ್ಲವನ್ನೂ ಮೀರಿದ ಒಂದು ಎತ್ತರಕ್ಕೆ ಸಾಗುವ ಶಕ್ತಿ ಭಾರತಕ್ಕೆ, ಭಾರತದಲ್ಲಿ ಇದೆಯೇ? ಡೆಮಾಕ್ರಸಿಯಿಂದ ಡಿಕ್ಟೇಟರ್ಶಿಪ್, ಡಿಕ್ಟೇಟರ್ಶಿಪ್ ನಿಂದ ಡೆಮಾಕ್ರಸಿಗಳ ಮಧ್ಯೆ ಹೊಯ್ದಾಡುತ್ತಾ, ತನ್ನ ಹಲವು ಪ್ರಾಂತ್ಯಗಳ ಮೇಲೆ ಅಧಿಕಾರವೇ ಇಲ್ಲದಂತೆ ಅತ್ಯಂತ ಅರಾಜಕತೆಯಿಂದ ಕೂಡಿದ ಒಂದು ಅತಿ ಚಿಕ್ಕ ರಾಷ್ಟ್ರ್‍ಅವಾದ ಪಾಕಿಸ್ತಾನದ ಮೇಲೆ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ್‍ಅವಾದ ಭಾರತ ಕ್ರಮ ಕೈಗೊಳ್ಳಲು ಕಳೆದ ನಾಲ್ಕು ದಶಕಗಳಿಂದಲೂ ಹಿಂಜರಿಯುತ್ತಿದೆ. ನಮ್ಮಲ್ಲಿ ಇದುವರೆಗೂ ನಾಯಕತ್ವದ ಪ್ರಥಮ ಗುಣವೆಂದು ಐ.ಐ.ಎಮ್ ನಿಂದ ಹಿಡಿದು ಬಿ.ಬಿ.ಎಮ್ (ಬೀದಿ ಬದಿಯ ಮಾರಿ)ವರೆಗೂ ಎಲ್ಲರೂ ಒಪ್ಪುವ ಗುಣವಾದ "ಗಟ್ಟಿ ನಿರ್ಧರಿಸುವ (ಸ್ಟ್ರಾಂಗ್ ಡಿಸಿಷನ್ ಮೇಕಿಂಗ್)" ಗುಣವಿರುವ ಯಾವೊಬ್ಬ ನಾಯಕನೂ ದೊರೆಯದಂತಿರುವುದು ನಮ್ಮ ಸ್ವಾತಂತ್ರ್ಯದ ಕ್ರೂರ ಅಣಕ!

ಹಾಗಾಗಿಯೇ ಇತ್ತೀಚೆಗೆ ಅಂಕಣ ಲೇಖನವನ್ನು ಬರೆಯುತ್ತಿಲ್ಲ. ವರ್ತಮಾನದ ಸಾಮಾಜಿಕ ಘಟನೆಗಳನ್ನೆತ್ತಿಕೊಂಡು ಈ ಹಿಂದೆ ನಾನು ಬರೆದೆಲ್ಲಾ ಲೇಖನಗಳಲ್ಲಿ ಯಾವುದಾದರೂ ಒಂದು ಲೇಖನ ಹೊಸ ಘಟನೆಗೆ ತಾಳೆಯಾಗಿ, ಮತ್ತದನ್ನೇ ಬರೆದು ಬೋರ್ ಹೊಡೆಸಬೇಕೇ ಎನಿಸುತ್ತದಲ್ಲದೇ ಬರೆಯಲೂ ಬೋರ್ ಎನಿಸುತ್ತದೆ. ಹಾಗಾಗಿ ಇತ್ತೀಚೆಗೆ ಅದೇ ಸಮಯವನ್ನು ಒಂದು ಐತಿಹಾಸಿಕ ಅನ್ವೇಷಣೆಯ ಪುಸ್ತಕವನ್ನು ಬರೆಯಲು ವಿನಿಯೋಗಿಸುತ್ತಿದ್ದೇನೆ. ಏಳನೇ ಶತಮಾನದಲ್ಲಿ ಹುಯೆನ್ ತ್ಸಾಂಗನು ನಡೆದ ರೇಶಿಮೆಯ ಹಾದಿಯಲ್ಲಿ ಕಳೆದ ವರ್ಷ ಟ್ರೆಕ್ಕಿಂಗ್ (ಕಾರಿನಲ್ಲಿ) ಮಾಡಿದ್ದುದರ ಬಗ್ಗೆ ಸ್ವಾರಸ್ಯವಾಗಿ ರಸಿಕ ಅನುಭವಗಳನ್ನೆಲ್ಲಾ ಮುಚ್ಚುಮರೆಯಿಲ್ಲದೆ ಒಂದು ಪ್ರವಾಸಕಥನ ಬರೆಯುವಷ್ಟು ಸರಕಿದ್ದರೂ ಅದನ್ನು ಬದಿಗೊತ್ತಿ ನಾನು ಸಂಗ್ರಹಿಸಿದ ಮಾಹಿತಿ, ಪುಸ್ತಕ, ಚಿತ್ರಗಳ ಸಮೇತ ಹುಯೆನ್ ತ್ಸಾಂಗನ ಕುರಿತಾಗಿ, ಅವನು ಕಂಡ ಭಾರತದ ಕುರಿತಾಗಿ, ಅಂದಿನ ಭಾರತದ ಭೌಗೋಳೇತಿಹಾಸಿಕವನ್ನು ಅವನು ಕಂಡಂತೆಯೇ ಬರೆಯುತ್ತಿದ್ದೇನೆ. ಅತ್ಯಂತ ಕುತೂಹಲಕರ ಅಂಶವೆಂದರೆ ಅವನು ಕಂಡ ಅಂದಿನ ಭಾರತಕ್ಕೂ, ನಾವುಗಳು ಕಾಣುತ್ತಿರುವ ಇಂದಿನ ಭಾರತಕ್ಕೂ ಏನೇನೂ ವ್ಯತ್ಯಾಸವಿಲ್ಲವೆಂಬುದು!! ಇದರ ಕುರಿತಾಗಿ ಮತ್ತೊಮ್ಮೆ ಬರೆಯುತ್ತೇನೆ.

ಅಣಕ:

ಚಂದ್ರೇಗೌಡರ ’ಕಟ್ಟೇಪುರಾಣ’ದಂತಹ ಪಟ್ಟಣಿಗರ ಗುಂಪೊಂದು ’ಅಡ್ಡೇಪುರಾಣ’ದಲ್ಲಿ ತೊಡಗಿದ್ದಿತು. ಒಬ್ಬೊಬ್ಬರೂ ಒಂದೊಂದು ವಿಧವಾದ ಸಲಹೆಗಳನ್ನು ಭಯೋತ್ಪಾದನೆ ನಿವಾರಣೆಯ ಕುರಿತು ಕೊಡುತ್ತಿದ್ದರು. ಬಿಜೆಪಿ ಪ್ರೇರಿತನೊಬ್ಬ ’ಅಲ್ಲಾ, ಹಿಂದೂ ಸಾಧ್ವಿಯನ್ನು ಅನವಶ್ಯಕವಾಗಿ ಬಂಧಿಸಿದ್ದಕಾಗಿಯೇ, ಕರ್ಕರೆ ತನ್ನ ಬುಲೆಟ್ ಪ್ರೂಫ್ ಜಾಕೆಟ್ ಕುರ್ಕುರೆ ಆಗಿ ಸಾಯುವಂತಾಗಿದ್ದು’ ಎಂದು ಜೆಡಿಎಸ್ ನವರಂತೆ ಶಾಸ್ತ್ರ ಹೇಳಿದ್ದೇ ಅಲ್ಲದೇ ಸಾಧ್ವಿಯ ಶಾಪದ ಭರಕ್ಕೆ ಬುಲೆಟ್ ಪ್ರೂಫ್ ಜಾಕೆಟ್ ಚಿಂದಿಯಾಯಿತೆನ್ನುತ್ತ ಸರ್ಕಾರದ ಕಳಪೆ ಜಾಕೆಟ್ಟಿಗೆ ಜಾಕೆಟ್ ತೊಡಿಸಿದ. ಕಾಂಗ್ರೆಸ್ ಪ್ರೇರಿತನೊಬ್ಬ ’ಬಿಜೆಪಿಗಳು ಅನವಶ್ಯಕವಾಗಿ ಕೆಣಕಿ, ಕೆಣಕಿ, ಭಯೋತ್ಪಾದನೆ ಹೆಚ್ಚಿಕೊಂಡಿದೆ’ ಎಂದ. ಇನ್ನೊಬ್ಬ ಜಾತ್ಯಾತೀತ, ಧರ್ಮಾತೀತ, ಬುದ್ಧಿಜೀವಿಗಳಿಂದೆಲ್ಲಾ ಪ್ರೇರಿತನಾದವ ’ಈ ಭಯೋತ್ಪಾದನೆ ವಿಚಾರಣೆಯಲ್ಲಿ ಮುಗ್ಧರಿಗೆ ಪೊಲೀಸ್ ಬ್ರುಟಾಲಿಟಿ ತಟ್ಟದಂತೆ ಎಚ್ಚರವಹಿಸಬೇಕು’ ಎಂದ.

ಇದನ್ನೆಲ್ಲಾ ಕೇಳುತ್ತಿದ್ದ ಪ್ಯಾರೇ ಬೇಟಾ ’ಅರೆ ಇದ್ಕೆಲ್ಲಾ ನಮ್ದು ಕಾನೂನೇ ಅಡ್ಡಿ. ಬರೀ ಮದ್ವೆಗೆ ಮುಸ್ಲಿಂ ಕಾನೂನು, ಹಿಂದೂ ಕಾನೂನ್ ಅಂತ ಬೇರೆ ಮಾಡ್ಬಿಟ್ಟಿ, ಬಾಕಿದ್ಕೆಲ್ಲಾ ಒಂದೇ ಕಾನೂನ್ ಮಾಡ್ಬಿಟ್ರೆ ಆಗ್ತದೆ? ಮುಸ್ಲಿಂಗೆ ಎಲ್ಲಾ ಶರಿಯತ್ ಕಾನೂನು ಅಂತ ಮಾಡ್ಬಿಟ್ಟಿ ಕದ್ದೌನಿಗೆ ಕೈ ಕತ್ರಿಸಿ, ಮರ್ಡರ್ ಮಾಡಿದವ್ನಿಗೆ ಕತ್ತು ಕತ್ರಿಸಿ, ಕೈ ಕೊಟ್ಟೌಂಗೆ ಬೆಂಗ್ಳೂರ್‍ಲಿ ಇತ್ತೀಚ್ಗೆ ಒಬ್ಳು ’ಅದ್ನ’ ಕತ್ರಿಸ್ದಂಗೆ ಹಲಾಲ್ ಮಾಡೋ ಹಂಗೆ ಕಾನೂನ್ ಮಾಡ್ಬಿಟ್ರೆ, ಆಗ ಎಲ್ಲಾ ನಿಯತ್ತು ಇರೋ ನಮ್ ಥರ ಮುಸ್ಲಿಂ ಉಳ್ಕೊತಾರೆ, ಇಲ್ದಿರೋರು ಯಾವ್ದು ಧರ್ಮದ್ದು ಕಾನೂನು ಕಡಿಮೆ ಇದೆ ಅದ್ಕೆ ಮತಾಂತರ ಆಗೋಯ್ತರೆ’ ಎಂದು ಭಯೋತ್ಪಾದನೆಗೆ ಕಾನೂನು ಭಯೋತ್ಪಾದನೆಯೇ ಉತ್ತಮವೆಂದು ಸೂಚಿಸಿದ. ಯಾವ್ದು ಸರಿ ಅಂತೀರಾ?

ಆರ್ಥಿಕತೆ, ಭೈರಪ್ಪ, ಮತ್ತು ಮಾಲೆಗಾಂವ್!

ಈಗ ಎಲ್ಲೆಡೆ ಆರ್ಥಿಕ ಸಂದಿಗ್ದತೆಯ ಬಿಸಿ. ಅಮೇರಿಕಾದಿಂದ ಬೀಸುತ್ತಿರುವ ಈ ಸಂದಿಗ್ಧತೆಯ ಚಂಡಮಾರುತ ಏನೆಲ್ಲಾ ಬದಲಾಯಿಸುವುದೋ! ಈ ಬದಲಾವಣೆಯ ಕಾಣ್ಕಿಯನ್ನು ತೋರುವಂತಹ ಕಳೆದೆರಡು ವಾರಗಳ ಮುಂಚೆಗೆ ನಡೆದ ಎರಡು ಘಟನೆಗಳನ್ನು ಗಮನಿಸಿದ್ದೀರಾ? ನೀವು ಗಮನಿಸಿಯೇ ಇರುತ್ತೀರಿ. ಅದರಲ್ಲಿ ಒಂದು ಇಲ್ಲಿನ ಲಾಸ್ ಏಂಜಲೀಸ್ ನಲ್ಲಿ ಓರ್ವ ಸದ್ಗೃಹಸ್ಥ ತನ್ನಿಡೀ ಸಂಸಾರವನ್ನು ಗುಂಡಿಟ್ಟು ಕೊಂದು ತಾನೂ ಗುಂಡಿಟ್ಟುಕೊಂಡುದು, ಮತ್ತು ಕನ್ನಡನಾಡಿನ "ಮಾದೇಸ" ನಿರ್ಮಾತೃ ಇನ್ನೋರ್ವನನ್ನು ಗುಂಡಿಟ್ಟು ಕೊಂದುದು.

ಭಾರತ ಮೂಲದ ರಾಜಾರಾಮ್ ಎಂಬ ನಲವತ್ತೈದು ವರ್ಷದ ಎಂ.ಬಿ.ಎ. ಸ್ನಾತಕೋತ್ತರ ಪದವಿ ಪಡೆದು ಹಣಕಾಸು ಚಾಣಾಕ್ಷನೆನಿಸಿದ್ದ ಈತ, ಈಗೆದ್ದಿರುವ ಆರ್ಥಿಕ ಸುನಾಮಿಯಲ್ಲಿ ಕೊಚ್ಚಿ ಹೋಗಿದ್ದಾನೆ. ತನ್ನೆಲ್ಲ ಕಷ್ಟಗಳಿಗೆ ಆತ್ಮಹತ್ಯೆಯೇ ದಾರಿಯೆಂದು ಬಗೆದು ತನ್ನ ಕುಟುಂಬದೊಂದಿಗೆ ಸಮಾಲೋಚಿಸಿದ್ದನಂತೆ. ಆದರೆ ಅನ್ಯೋನ್ಯತೆಯಿಂದಿದ್ದ ತನ್ನ ಹೆಂಡತಿ, ಅತ್ತೆ ಮತ್ತು ಮೂರು ಮಕ್ಕಳುಗಳು ಅವನಿಲ್ಲದೇ ತಾವೂ ಇರುವುದಿಲ್ಲವೆಂದು ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ರಾಜಾರಾಮ್ ತನ್ನ ಕುಟುಂಬವನ್ನು ಗುಂಡಿಟ್ಟು ಕೊಂದು ತಾನೂ ಸಾವಿಗೆ ಶರಣಾಗಿದ್ದಾನೆ. ಹೀಗಂತ ಇಲ್ಲಿನ ಪೊಲೀಸ್ ವರದಿ ಹೇಳುತ್ತದೆ.

ದೂರದ ಅಮೇರಿಕಾದ ಈ ಹಣಕಾಸು ಸ್ನಾತಕೋತ್ತರ ಪದವೀಧರ ಗೃಹಸ್ಥನ ಪರಿಸ್ಥಿತಿ ಹೀಗಾದರೆ, ಇದೇ ಅಮೇರಿಕಾದ ಆರ್ಥಿಕತೆಯ ಸುಧಾರಣೆಗೊಳಗಾದ ಬೆಂಗಳೂರಿನಲ್ಲಿ ಈ ಘಟನೆಯ ವ್ಯತಿರಿಕ್ತವಾಗಿ ಮಾದೇಸನ ರಿವಾಲ್ವರ್ ಢಂ ಎಂದಿದೆ. ಅದಕ್ಕೇ ಇರಬಹುದು, ಅಮೇರಿಕಾದಲ್ಲಿ ಬಲಕ್ಕೂ ಭಾರತದಲ್ಲಿ ಎಡಕ್ಕೂ ಚಲಿಸುವ ನಿಯಮಗಳು!

ಇರಲಿ, ಈ ಆರ್ಥಿಕ ಸಂದಿಗ್ಧತೆಯ ನಡುವೆ ನಮ್ಮ ಬುದ್ದಿಜೀವಿಗಳು ತಮ್ಮಷ್ಟಕ್ಕೆ ತಾವು ಯಥಾಸ್ಥಿತಿಯಾಗಿ ಸೆಕ್ಯುಲರಿಸಂ ಪರ ವಿರೋಧವಾಗಿ ವಾಗ್ಯುದ್ಧಗಳನ್ನು ನಡೆಸುತ್ತಿದ್ದಾರೆ. ಮೊನ್ನೆ ಜನಪ್ರಿಯ ಸಾಹಿತಿ ಭೈರಪ್ಪನವರು ಚರ್ಚುಗಳ ಮೇಲಿನ ದಾಳಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಸೆಕ್ಯುಲರ್ ಬುದ್ಧಿಜೀವಿಗಳ ಕಣ್ಣನ್ನು ಕೆಂಪಾಗಿಸಿದೆ. ಲೆಕ್ಕಾಚಾರ ಹಾಕಿ ಯಾವ ಯಾವ ಪಾತ್ರಗಳು ಏನನ್ನು ಹೇಳಬೇಕೆಂದು ಕರಾರುವಾಕ್ಕಾಗಿ ಬರೆಯುವ ಭೈರಪ್ಪ ಕಾದಂಬರಿಕಾರರೇ ಅಲ್ಲವೆಂದು ಈ ಸಂದರ್ಭ ಸಿಕ್ಕೊಡನೆ ಹಿರಿ ಕಿರಿ ಬುದ್ಧಿಜೀವಿಗಳೆಲ್ಲಾ ಅವರ ಮೇಲೆ ಹರಿಹಾಯ್ದಿದ್ದಾರೆ.

ಜಗತ್ತಿನ ಯಾವುದೇ ಕಾದಂಬರಿಕಾರನಾಗಲೀ ಒಂದು ಕಥಾವಸ್ತುವನ್ನಿಟ್ಟುಕೊಂಡು, ಮೂಲಪಾತ್ರಗಳನ್ನು ಸೃಷ್ಟಿಸಿಕೊಂಡೇ ಬರೆಯಲಾರಂಭಿಸುತ್ತಾನೆ. ಬರವಣಿಗೆ ಸಾಗಿದಂತೆ ಕಥೆ ವಿಸ್ತೃತಗೊಳ್ಳುವುದು, ಹೆಚ್ಚು ಪಾತ್ರಗಳು ಸೃಷ್ಟಿಯಾಗುವುದು ಮತ್ತು ಮೂಲ ಕಲ್ಪನೆ ಒಂದು ಸ್ಪಷ್ಟ ರೂಪ ಪಡೆಯುತ್ತಾ ಸಾಗುವುದು ಬರವಣಿಗೆಯ ಪ್ರಕ್ರಿಯೆ. ಆದರೆ ಲೆಕ್ಕಾಚಾರ ಹಾಕಿ ಬರೆಯದೆ ಅದು ಹೇಗೆ ಸಾಹಿತ್ಯವನ್ನು ಸೃಷ್ಟಿಸುವರೋ ಈ ಹರಿಹಾಯ್ದ ಲೇಖಕರು ಅರಿಯದಾಗಿದೆ.

ಜನರಿಗೆ ಹತ್ತಿರವಾದ ಕಥಾವಸ್ತುಗಳನ್ನೆತ್ತಿ ಸಾಮಾಜಿಕ ಚಿತ್ರಣ, ಪಾತ್ರಗಳನ್ನು ಸೃಷ್ಟಿಸಿ ಒಂದು ಯಶಸ್ವೀ ಕಾದಂಬರಿಯನ್ನು ಬರೆಯುವ ಭೈರಪ್ಪನವರು ವೈಯುಕ್ತಿಕವಾಗಿ ನನಗೆ ಅನಿಸುವುದು ಒಬ್ಬ ಪಕ್ಕಾ ಕಮರ್ಷಿಯಲ್ ಕಾದಂಬರಿಕಾರರೆಂದು. ಐತಿಹಾಸಿಕ ಚರಿತ್ರೆಯೂ ಅವರ ಕಥಾವಸ್ತುಗಳಿಗೆ ಸಾಕ್ಷಿಯಾಗಿ ದಾಖಲೆಯನ್ನೊದಗಿಸುವುದು ಅವರ ಅದೃಷ್ಟವೂ ಮತ್ತು ದುರದೃಷ್ಟವೂ ಆಗಿದೆ. ಐತಿಹಾಸಿಕ ಸಾಕ್ಷ್ಯ ಅವರ ಕಾದಂಬರಿಗೆ ಹೆಚ್ಚು ನೈಜತೆಯನ್ನು ತಂದುಕೊಟ್ಟು ಅದೃಷ್ಟವೆನಿಸಿದರೆ, ತಮ್ಮೆಲ್ಲಾ ಬುದ್ಧಿಜೀವಿ ಬಳಗದ ಸೆಕ್ಯುಲರೀಗಳ ತೀವ್ರ ವಿರೋಧ ದುರಾದೃಷ್ಟವೆನಿಸಿದೆ.

ಹಂಪಿ ಜಗತ್ತಿನ ಒಂದು ಐತಿಹಾಸಿಕ ಪರಂಪರೆಯ ಸ್ಥಾನವೆಂದು ಗುರುತಿಸಲ್ಪಟ್ಟಿದೆ. ಈ ಹಂಪಿ ಇತಿಹಾಸವನ್ನೂ ಮತ್ತು ಸಮಕಾಲೀನ ಸಾಮಾಜಿಕ ಕಥೆಯನ್ನೂ ಸಮ್ಮಿಳನಗೊಳಿಸಿ ಭೈರಪ್ಪನವರು ಸೃಷ್ಟಿಸಿದ ’ಆವರಣ’ ಕಮರ್ಷಿಯಲ್ ಆಗಿ ಭಾರೀ ಯಶಸ್ವಿಯಾಯಿತು. ಆಗ ನಮ್ಮ ಅನೇಕ ಬುದ್ಧಿಜೀವಿಗಳು ಹಂಪಿ ಹಾಳಾದದ್ದು ಶೈವರಿಂದಲೇ ಹೊರತು ಇಸ್ಲಾಂ ದಾಳಿಕೋರರಿಂದ ಅಲ್ಲವೆಂದು ತಮ್ಮ ಸಂಶೋಧನೆಗಳನ್ನು ಮಂಡಿಸಿ ಭಾರೀ ವಿರೋಧವನ್ನು ತೋರಿ ’ಆವರಣ’ಕ್ಕೆ ಪ್ರತಿಯಾಗಿ ’ಅನಾವರಣ’ ಎಂದು ಪ್ರತಿ ಪುಸ್ತಕವನ್ನೂ ಬಿಡುಗಡೆಗೊಳಿಸಿದರು.

ಇರಲಿ ಇತಿಹಾಸದ ಸತ್ಯಾಸತ್ಯತೆಗಳನ್ನು ಹೇಗೆ ಬೇಕಾದರೂ ಹಾಗೆ ತಮ್ಮ ತಮ್ಮ ವೈಯುಕ್ತಿಕ ಅಭಿಪ್ರಾಯಗಳಿಗನುಗುಣವಾಗಿ ಪೂರ್ವಾಗ್ರಹಪೀಡಿತ ಮನಸ್ಸುಗಳು ತಮ್ಮ ಸಂಶೋಧನೆಗಳನ್ನು ಬೈಯಾಸ್ಡ್ ಆಗಿ ಹೊರಹೊಮ್ಮಿಸಿಬಿಡುತ್ತವೆ. ಆ ರೀತಿಯ ಸಂಶೋಧನೆಯ ಫ಼ಲವೇ ಇಂದು ಬಸವ, ಅಲ್ಲಮರು ತೀವ್ರ ವ್ಯಭಿಚಾರಿಗಳಾಗಿದ್ದು ಅವರುಗಳ ಹೆಸರಿನಲ್ಲಿ ವಿಜಯನಗರದ ಕಾಲದಲ್ಲಿ ಪ್ರಭಾವಶಾಲಿಗಳಾಗಿದ್ದ ವೀರಶೈವರು ಬಸವ/ಅಲ್ಲಮರ ಹೆಸರಿನಲ್ಲಿ ವಚನಗಳನ್ನು ರಚಿಸಿ ವಿಜಯನಗರದ ಅರಸರುಗಳನ್ನು ಶೈವರನ್ನಾಗಿಸುವ ಪ್ರಯತ್ನವನ್ನು ಮಾಡಿದ್ದರೆಂದೂ ಪ್ರತಿಪಾದಿಸುವ ಸಂಶೋಧನೆಗಳಿವೆ. ಆದುದರಿಂದ ವರ್ತಮಾನವನ್ನು ಪರಿಗಣಿಸೋಣ. ಹಂಪಿಯಲ್ಲಿ ಇಂದು ವಿಜಯ ವಿಠಲನ ಮಂದಿರದ ಆವರಣದಲ್ಲಿ ನಮಾಜುಗಳು ನಡೆಯುತ್ತಿವೆ, ಹಸಿರು ಬಾವುಟಗಳು ಎದ್ದಿವೆ ಮತ್ತು ನಿತ್ಯವೂ ಅಲ್ಲಿನ ಐತಿಹಾಸಿಕ ಸ್ಮಾರಕಗಳು ಹಾಳುಗೆಡವಲ್ಪಡುತ್ತಿವೆ. ಈ ಕುರಿತಾಗಿ ನಾವುಗಳೆಲ್ಲಾ ಆಗಾಗ್ಗೆ ದಿನಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಈ ಕುರಿತಾಗಿ ಇದುವರೆಗೂ ಯಾವುದಾದರೂ ಸೋಕಾಲ್ಡ್ ಬುದ್ದಿಜೀವಿಗಳು ಸೊಲ್ಲೆತ್ತಿದ್ದಾರೆಯೆ? ಭೈರಪ್ಪನವರ ಕಾದಂಬರಿಯ ಐತಿಹಾಸಿಕ ಸಾಕ್ಷ್ಯಕ್ಕೆ ಪ್ರತಿಯಾಗಿ ಸಂಶೋಧನೆಯನ್ನು ಚಳುವಳಿಯ ಮಾದರಿ ಹಮ್ಮಿಕೊಂಡು, ಪ್ರತಿಪುಸ್ತಕವನ್ನು ಪ್ರಕಟಿಸುವ ನಮ್ಮ ಸೆಕ್ಯುಲರ್ ಬುದ್ಧಿಜೀವಿಗಳು, ಐತಿಹಾಸಿಕ ಸ್ಮಾರಕಗಳ ಮೇಲೆ ನಡೆಯುತ್ತಿರುವ ವರ್ತಮಾನದ ಅತ್ಯಾಚಾರಗಳನ್ನು ಯಾವತ್ತಾದರೂ ಖಂಡಿಸಿದ್ದಾರೆಯೇ?

ಇವರ ನಿಜ ಕಾಳಜಿಯಾದರೂ ಏನು?

ಕಂದಾಚಾರ, ಸಾಮಾಜಿಕ ಅಸಮಾನತೆ, ಊಳಿಗಮಾನ್ಯ ಪದ್ಧತಿಗಳ ವಿರುದ್ಧ ಸಿಡಿದೇಳುವ ಉನ್ನತ ವಿಚಾರಗಳೇ ಹಿಂದೊಮ್ಮೆ ಈ ಬುದ್ಧಿಜೀವಿಗಳನ್ನು ಸೃಷ್ಟಿಸಿದ್ದವು. ಕಂದಾಚಾರಗಳನ್ನು ಅನನ್ಯವಾಗಿ ನಂಬಿರುವ ಒಬ್ಬ ಕಥಾನಾಯಕ (ಬ್ರಾಹ್ಮಣ ಅರ್ಚಕನಾಗಿರಬಹುದು, ಮುಸ್ಲಿಂ ಮಹಿಳೆಯಾಗಿರಬಹುದು) ಜೀವನದ ಕಾರ್ಪಣ್ಯಗಳಿಗೆ ಧಾರ್ಮಿಕತೆ ಅಪ್ರಸ್ತುತವೆನ್ನುವುದನ್ನು ಕಥೆಯ ಒಂದು ತಿರುವಿನಲ್ಲಿ ಅನ್ನಿಸಿ, ಧಾರ್ಮಿಕ ವ್ಯವಸ್ಥೆಯ ವಿರುದ್ಧ ಕ್ರಾಂತಿಯೆನಿಸುವಂತಹ ಕಾರ್ಯವನ್ನು ಕೈಗೊಳ್ಳುತ್ತಾನೆ/ಳೆ. ಇಲ್ಲಿನ ಕಥಾವಸ್ತು ಒಬ್ಬ ವ್ಯಕ್ತಿ ವ್ಯವಸ್ಥೆಯ ವಿರುದ್ಧ ಅವನ ಪರಿಮಿತಿಯಲ್ಲೇ ಹೋರಾಡುವುದು ಓದುಗರಿಗೆ ಅಪ್ಯಾಯಮಾನವೆನಿಸಿಬಿಡುತ್ತದೆ. ಆದರೆ ಈ ಕೃತಿಗಳನೇಕವುಗಳಲ್ಲಿ ಕಾಮವೇ ಕ್ರಾಂತಿಯಾಗಿಬಿಟ್ಟುರುತ್ತದೆ! ಅದರಲ್ಲೂ ವಿವಾಹೇತರ/ವಿವಾಹಪೂರ್ವ ಸಂಬಂಧಗಳು, ಧಾರ್ಮಿಕ ವ್ಯವಸ್ಥೆಯಲ್ಲಿ ’ಹಾದರ’ವೆನಿಸುವಂತಹವು.

ವ್ಯವಸ್ಥೆಯ ವಿರುದ್ಧ ಹೋರಾಡುವ ಕಥಾವಸ್ತುಗಳು ಹೆಚ್ಚು ಹೆಚ್ಚು ಸಾಮಾಜಿಕ ಕ್ರಾಂತಿಗೆ ಅತ್ಯಂತ ಅವಶ್ಯಕ. ಆದರೆ ಕಾಮವೇ ಕ್ರಾಂತಿಯೆಂದು ಏಕೆ ಪ್ರತಿಪಾದಿಸಬೇಕೋ ನಾನರಿಯೆ. ನೀವು ವಂಶವೃಕ್ಷ, ಸಂಗ್ಯಾ ಬಾಳ್ಯಾ, ಜೋಕುಮಾರ ಸ್ವಾಮಿ, ಕಲ್ಲು ಕರಗುವ ಸಮಯ........ಇನ್ಯಾವ ಕಥೆಗಳನ್ನಾದರೂ ಓದಿ, ಕಾಮವೇ ಕ್ರಾಂತಿ ಅವುಗಳಲ್ಲಿ, ಅದರಲ್ಲೂ ಹಾದರ! ಕ್ರಾಂತಿ ರೋಮಾಂಚನವೆನಿಸುತ್ತದೆ.

ಇರಲಿ, ಈ ಲೇಖನವು ಭೈರಪ್ಪನವರ ಅಭಿಪ್ರಾಯಗಳನ್ನು ಹೊಗಳಿಯಾಗಲೀ, ಬುದ್ಧಿಜೀವಿಗಳ ವಿಚಾರಗಳನ್ನು ತೆಗಳಿಯಾಗಲೀ ಅಭಿಪ್ರಾಯಿಸುವುದು ಉದ್ದೇಶವಲ್ಲ. ಇಪ್ಪತೊಂದನೇ ಶತಮಾನದ ಭಾರತ ಬುದ್ಧಿಜೀವಿಗಳು ತಮ್ಮ ತಮ್ಮ ವಾದ/ತತ್ವಗಳಿಗೆ ಜೋತುಬಿದ್ದು ಅವುಗಳ ಪರಾಕಾಷ್ಠತೆಗಾಗಿ ಯಾವುದೇ ಮತಾಂಧ ನಿರಕ್ಷರಕುಕ್ಷಿ ಮೂಲಭೂತವಾದೀ ಆಷಾಢಭೂತಿಗಳಿಗಿಂತ ಭಿನ್ನವಿಲ್ಲದೇ ಅಕ್ಷರ ಹೋರಾಟ ನಡೆಸುತ್ತಿರುವುದು ನನ್ನಂಥ ಸಾಮಾನ್ಯಜೀವಿಗಳಲ್ಲಿ ಖೇದವನ್ನುಂಟು ಮಾಡುತ್ತದೆಂಬುದನ್ನು ದಾಖಲಿಸುವುದು ಮಾತ್ರ ಈ ಲೇಖನದ ಉದ್ದೇಶ. ಯಾವ ಕಥೆ/ಕಾದಂಬರಿಗಳು ತಮ್ಮ ಪಾತ್ರಗಳ ಮೂಲಕ ಮಾನವ ಸಹಜ ಕುತೂಹಲವನ್ನು ಕೆದಕುತ್ತ ಜೀವನ ಸಾಕ್ಷಾತ್ಕಾರ, ದರ್ಶನ, ಹುಟ್ಟು ಸಾವುಗಳಿಂದಾಚೆಗೇನಿದೆಯೆಂಬ ಅಲೌಕಿಕತೆಯನ್ನು ಕೆದಕುವಂತೆ ಮಾಡುವವೋ ಅವೇ ಸರ್ವಕಾಲಕ್ಕೂ ಸಲ್ಲುವಂತಹ ಅರ್ಥಪೂರ್ಣ ಸಾಹಿತ್ಯವೆನಿಸುತ್ತವೆ. ಇಲ್ಲದಿದ್ದರೆ ಒಂದಾನೊಂದು ಕಾಲದಲ್ಲಿ ಶ್ರೇಷ್ಟ/ಕ್ರಾಂತಿಕಾರಕವೆನಿಸಿದ್ದ ಕಮ್ಯುನಿಸ್ಟ್ ನಾಯಕರುಗಳ ಬರಹಗಳು ಇಂದಿನ ವರ್ತಮಾನದಲ್ಲಿ ಹೇಗೆ ಹಾಸ್ಯಾಸ್ಪದವೆನಿಸುತ್ತವೆಯೋ ಹಾಗೆಯೇ ಅನಿಸುತ್ತವೆ.

ಯಾವುದೇ ವ್ಯವಸ್ಥೆಯ ಅಸಮಾನತೆಯ ವಿರುದ್ಧ ಹೋರಾಡುವುದು ಸಮಾಜಮುಖಿ ಮಾನವನ ಸಾಮಾಜಿಕ ಧರ್ಮ. ಅಂದು ಬ್ರಿಟಿಷರ ವಿರುದ್ಧ ಹೋರಾಡಿದ ಗಾಂಧಿ, ಬೋಸ್, ಭಗತ್ ಸಿಂಗ್...........ಎಲ್ಲರೂ ಹೋರಾಡಿದ್ದು ವ್ಯವಸ್ಥೆ/ಸಾಮಾಜಿಕ ಅಸಮಾನ್ಯತೆಯ ವಿರುದ್ಧವೆ. ಕೆಲವರು ತೀವ್ರಗಾಮಿತ್ವವನ್ನು ಹೊಂದಿದ್ದರು, ಕೆಲವರು ಮಂದಗಾಮಿತ್ವದವರಾಗಿದ್ದರು. ಯಾವುದೇ ತತ್ವಕ್ಕೆ ಬದ್ಧರಾಗಿದ್ದರೂ ಹೋರಾಟಗಳು ತೀವ್ರವಾಗುತ್ತಾ ಹೋಗುತ್ತವೆ. ಎಲ್ಲಿಯವರೆಗೆ ಹಿಂದೂ ಮ್ಯಾರೇಜ್ ಆಕ್ಟ್/ಮುಸ್ಲಿಂ ಮ್ಯಾರೇಜ್ ಆಕ್ಟ್/ಕ್ರಿಶ್ಚಿಯನ್ ಮ್ಯಾರೇಜ್ ಆಕ್ಟ್ ಎಂಬ ಧಾರ್ಮಿಕ ಆಧಾರದ ಸೆಕ್ಯುಲರ್ ಕಾನೂನುಗಳಿರುತ್ತವೆಯೋ ಅಲ್ಲಿಯವರೆಗೆ ಸಮಾನತೆಯ ಹೋರಾಟಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ಇಂದು ಮಾಲೆಗಾಂವ್ ಸ್ಪೋಟಗಳ ಹಿಂದೆ ಹಿಂದೂ ಸಾಧ್ವಿಯ ಕೈವಾಡವಿದ್ದರೆ ಅದು ಅಸಮಾನತೆಯ ವಿರುದ್ಧ ಹೋರಾಡುತ್ತಿರುವ ಹೋರಾಟಗಾರರ ಹತಾಶ ಭಾವನೆಗಳ ಆಸ್ಪೋಟನೆ ಎನಿಸಿ, ಭವಿಷ್ಯದ ಭಾರತದಲ್ಲಿ ಮುಂದೆ ನಡೆಯಬಹುದಾದ ಬೃಹದಾಕಾರದ ಆಸ್ಪೋಟನೆಯ ಮುನ್ಸೂಚನೆಯೇನೋ ಅನಿಸುತ್ತದೆ!

ಅಣಕ:

ಇದು ನನ್ನ ಹಳೆಯ ಅಣಕ, ಸಾಂದರ್ಭಿಕವಾಗಿ ಇಂದಿನ ಬುದ್ಧಿಜೀವಿಗಳ ಚಿಂತನೆ ಹೀಗೂ ಇರುತ್ತವೆಯೆಂದು ಮತ್ತೊಮ್ಮೆ ಉಲ್ಲೇಖಿಸಿದ್ದೇನೆ.

ಒಬ್ಬ ಬುದ್ದಿಜೀವಿ ತನ್ನ ಮಿತ್ರರೊಂದಿಗೆ ಸಂಜೆಯ ಚರ್ಚಾಕೂಟವನ್ನು ಮುಗಿಸಿಕೊಂಡು ಮನೆಗೆ ಬಂದಾಗ ಅಘಾತವೊಂದು ಕಾದಿತ್ತು. ಅವನ ಹೆಂಡತಿ ’ಆಯ್ಯೋ ಈ ದಿನ ಯಾವನೋ ಮನೆಗೆ ನುಗ್ಗಿ ನನ್ನನ್ನು ಹಾಳು ಮಾಡಿಬಿಟ್ಟ’ ಎಂದು ಗೋಳಾಡಿದಳು. ಅದನ್ನು ಕೇಳಿದ ಬುದ್ದಿಜೀವಿ ಕೋಪಗೊಂಡು "ಯಾರವನು? ಹೇಗಿದ್ದ?" ಎಂದು ತನ್ನ ಹೆಂಡತಿಯನ್ನು ಕೇಳಿದ. ಅದಕ್ಕವಳು "ಮುಲ್ಲಾ ತರಹದ ಟೋಪಿ ಮತ್ತು ಕುರ್ತಾ ಹಾಕಿದ್ದ. ಗಡ್ಡ ಬಿಟ್ಟಿದ್ದ. ಸುನ್ನತಿ ಅಂತಾರಲ್ಲ ಅದು ಕೂಡಾ ಆಗಿತ್ತೆನಿಸಿತು. ಬಹುಶಃ ಸಾಬರವನೇನೋ" ಎಂದಳು. ಅದಾಗಲೇ ಅಲ್ಲಿದ್ದ ಪೊಲೀಸರನ್ನು, ಸುದ್ದಿಗಾರರನ್ನು ಗಮನಿಸಿದ್ದ ಬುದ್ದಿಜೀವಿಯ ಬುದ್ದಿ ಜಾಗೃತಗೊಂಡಿತ್ತು! ಕೂಡಲೇ ಬುದ್ದಿಜೀವಿ "ಛೇ, ಛೇ, ನಿತ್ಯವೂ ಗೋಮಾಂಸವನ್ನು ತಿನ್ನುವ ಅವನು ಹಸುವಿನಂತೆಯೇ ಸಾಧುವಾಗಿರುತ್ತಾನೆ. ಬಹುಶಃ ಈ ದಿನ ಅವನು ಹೋರಿಯ ಮಾಂಸವನ್ನು ತಿಂದಿರಬೇಕು. ಆ ಹೋರಿಯ ಮಾಂಸವೇ ಅವನಿಂದ ಈ ಕೃತ್ಯವನ್ನು ಮಾಡಿಸಿದೆ. ನಿಜದಲ್ಲಿ ಅವನು ಮುಗ್ಧ! ಹಾಗಾಗಿ ಈ ಕೃತ್ಯವನ್ನೆಸಗಿದವನನ್ನು ಕ್ಷಮಿಸಿದ್ದೇನೆ. ಅದೇ ಒಬ್ಬ ಪುಳ್ಚಾರೀ ಬ್ರಾಹ್ಮಣ ಈ ಕೃತ್ಯಕ್ಕೆ ಕೈಹಾಕಿದ್ದರೆ ಅದು ಅವನು ಜಾಗೃತ ಮನಸ್ಸಿನಿಂದಲೇ ಮಾಡಿದ ಹೇಯ ಕೃತ್ಯವಾಗಿರುತ್ತದೆ. ಅಂತಹವರು ಘೋರ ಶಿಕ್ಷೆಗೆ ಅರ್ಹರು" ಎನ್ನುತ್ತ ಪೊಲೀಸರಿಗೆ ಕೇಸಿನ ಅಗತ್ಯವಿಲ್ಲವೆಂದೂ ಮತ್ತು ಸುದ್ದಿಗಾರರಿಗೆ ದಯವಿಟ್ಟು ಈ ಸುದ್ದಿಯನ್ನು ಆದಷ್ಟೂ ಮುಂದಿನ ಪುಟಗಳಲ್ಲಿ ಹಾಕಿರೆಂದೂ ಭಿನ್ನವಿಸುತ್ತ ವಿಶಾಲ ಹೃದಯವನ್ನು ಮೆರೆದರು!

ತೇಜಸ್ವಿ ಮತ್ತವರ ಇನ್ಫ್ಲೂಯೆನ್ಸೂ!


ನಾನು ಈ ಹಿಂದೆ ತಿಳಿಸಿದಂತೆ ತೇಜಸ್ವಿಯವರ ಪರಿಸರದ ಕತೆ ಮತ್ತಿತರೆ ಕಥೆಗಳ ಇಂಗ್ಲಿಷ್ ಅನುವಾದ ಈಗಷ್ಟೇ ಅಮೇಜಾನ್.ಕಾಮ್ ನಲ್ಲಿ "By the Corner of Indian Western Ghats" ಆಗಿ ಪ್ರಕಟಗೊಂಡಿದೆ.

ನಿಮ್ಮೆಲ್ಲರಂತೆಯೇ ನಾನು ಕೂಡಾ ಕೇವಲ ಒಬ್ಬ ಓದುಗನಾಗಿ ಕನ್ನಡ ಸಾಹಿತ್ಯಾಸಕ್ತನಾಗಿದ್ದೆನು. ನಮ್ಮ ಕನ್ನಡದ ಇತ್ತೀಚಿನ ಅಂಕಣಕಾರರ/ ಪತ್ರಕರ್ತರ ಸೋಗು, ಲಂಪಟತನಗಳ ಬರವಣಿಗೆಯಿಂದ ಬೇಸತ್ತು ನಾನೆ ಏಕೆ ಬರೆಯಬಾರದೆಂದು ಆಲೋಚಿಸಿ ಆರಂಭಿಸಿದ್ದುದು ಈ ಲೇಖನಮಾಲೆಯು. ಹಾಗೆಯೇ ಸದಾ ಕನ್ನಡ ಸಾಹಿತ್ಯದ ಮೇರುತನವನ್ನ ವಿಶ್ವಾದ್ಯಂತವಾಗಿ ಬಿಡಿ, ಭಾರತದಾದ್ಯಂತವೂ ಕೂಡ ಪಸರಿಸಲು ಸಾಧ್ಯವಾಗುವಂತಹ ಸಮರ್ಥ ಅನುವಾದಗಳ ಕೊರತೆ ಇದೆಯೇನೋ ಎನ್ನುವ ಸಂಶಯ ನನ್ನನ್ನು ಕಾಡುತ್ತಿತ್ತು. ಏಕೆಂದರೆ ಅಷ್ಟೊಂದು ಜ್ಞಾನಪೀಠ ಪ್ರಶಸ್ತಿಗಳನ್ನು ನಾವು ಗುಡ್ಡೆ ಹಾಕಿದ್ದರೂ ಕೂಡ ಇಂದು ಕನ್ನಡಕ್ಕಾಗಿ ಹೋರಾಡಬೇಕಾದಂತಹ ಪರಿಸ್ಥಿತಿ ನಮ್ಮ ರಾಜ್ಯದಲ್ಲಿಯೇ ಸೃಷ್ಟಿಯಾಗಿದೆ. ನಾನೊಬ್ಬ ಇಂಗ್ಲಿಷ್ ಪಂಡಿತನಾಗಲೀ, ಕನ್ನಡ ಪಂಡಿತನಾಗಲೀ ಅಲ್ಲದಿದ್ದರೂ, ಕನ್ನಡ ಕೃತಿಗಳ ಇಂಗ್ಲಿಷ್ ಅನುವಾದಗಳನ್ನು ಓದಿದಾಗ ನನಗೆ, ಕನ್ನಡ ಆಡುಭಾಷೆಯಲ್ಲಿರುತ್ತಿದ್ದ ನಮ್ಮ ಅನೇಕ ಕಾದಂಬರಿಗಳನ್ನು ಬಹುಪಾಲು ಅನುವಾದಕರು ಇಂಗ್ಲಿಷ್ ಗೆ ಅನುವಾದಿಸುವಾಗ ಗ್ರಾಂಥಿಕವಾಗಿಸಿದ್ದಾರೆನಿಸುತ್ತಿತ್ತು. ಭಾಷಾಂತರಿಸುವಾಗ ಮೂಲಬರಹಗಾರರ ಅನಿಸಿಕೆ, ಉದ್ದೇಶ, ಭಾವನೆಗಳನ್ನು ಯಥಾವತ್ತಾಗಿ ಸೃಷ್ಟಿಸಬೇಕಾದರೆ ನಮಗೆ ಇಂಗ್ಲಿಷ್ ಅನ್ನೂ ಕೂಡಾ ಒಂದು ಆಡುಭಾಷೆಯಾಗಿ ಬಳಸಿದ ಗಾಢ ಅನುಭವ ಬಹುಮುಖ್ಯವೆಂಬುದನ್ನು ಕಂಡುಕೊಂಡೆನು. ಇಂಗ್ಲಿಷ್ ಅನ್ನು ಒಂದು ಆಡುಭಾಷೆಯಾಗಿ ಸುಲಲಿತವಾಗಿ ಬಳಸಿರದ, ಆದರೆ ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಿಮೆಯನ್ನು ಹೊಂದಿದ ಈ ಭಾಷಾಂತರಕಾರರ ಸೃಷ್ಟಿ ಮೂಲಕೃತಿಯಷ್ಟು ಆನಂದವನ್ನು, ಭಾವನೆಯನ್ನು ಮೂಡಿಸಲು ವಿಫಲವಾಗಿವೆಯೆನಿಸುತ್ತಿತ್ತು.

ಹೀಗೆಯೇ ಒಮ್ಮೆ ನನ್ನ ಬರಹಗಾರ ಸ್ನೇಹಿತೆ ಫೀಬೀಯೊಂದಿಗೆ ಹರಟುತ್ತಿರುವಾಗ ಅವಳು ನೀನೇಕೆ ಒಂದು ಕನ್ನಡ ಕೃತಿಯನ್ನು ಅನುವಾದಿಸಬಾರದೆಂದು ಪ್ರಶ್ನಿಸಿ ನಂತರ ನನಗೆ ಸಿಕ್ಕಾಗಲೆಲ್ಲಾ ಆ ವಿಚಾರವಾಗಿ ಕೇಳಲಾರಂಭಿಸಿದಳು. ಹೀಗಿದ್ದಾಗ ಹಠಾತ್ತಾಗಿ ತೇಜಸ್ವಿಯವರ ನಿರ್ಗಮನದ ಸುದ್ದಿಯನ್ನು ಕೇಳಿ ಮ್ಲಾನವದನನಾಗಿ ಫೀಬಿಯ ಸಲಹೆಯನ್ನು ಗಂಭೀರವಾಗಿ ಆಲೋಚಿಸಿದೆನು.

ಆ ಆಲೋಚನೆಯ ಫಲವೇ ಇಂದು ನನ್ನನ್ನು ಒಬ್ಬ ಅನುವಾದಕನನ್ನಾಗಿಸಿದೆ. ಈ ಕೃತಿಯಲ್ಲಿ ತೇಜಸ್ವಿಯವರ ಸರಳ ಆಡುಭಾಷೆಯ ಮೂಲ ಮಾತುಗಳಿಗೆ ಚ್ಯುತಿ ಬಾರದಂತೆ ಯಥಾವತ್ತಾಗಿ ಇಂಗ್ಲಿಷ್ ಆಡುಭಾಷೆಗೆ ಅನುವಾದಿಸಿದ್ದೇನೆ. ಕೆಲವೊಂದು ವಾಕ್ಯಪ್ರಯೋಗಗಳು ಇಂಗ್ಲಿಷ್ ಪಂಡಿತರಿಗೆ ವಿಚಿತ್ರವೆನಿಸಿದರೂ ಅವುಗಳನ್ನು ಇಲ್ಲಿನ ಇಂಗ್ಲಿಷ್ ಆಡುಭಾಷಿಗರು ಆ ರೀತಿಯಾಗಿಯೇ ಪ್ರಯೋಗಿಸುವುದನ್ನು ಮನದಟ್ಟು ಮಾಡಿಕೊಂಡೇ ಬರೆದಿದ್ದೇನೆ.

ನನ್ನ ಈ ಹುಂಬ ಉತ್ಸಾಹಕ್ಕೆ, ಪ್ರೌಢಿಮೆಯ ಪ್ರೊ. ಬಿ.ಎನ್. ಶ್ರೀರಾಮ್ ಅವರು ಪ್ರೋತ್ಸಾಹಿಸುತ್ತ ಈ ಕೃತಿಯನ್ನು ನಾನು ಅಮೇಜಾನ್.ಕಾಮ್ ನವರು ಪ್ರಕಟಿಸುವಲ್ಲಿಯವರೆಗೆ ಬೆನ್ನು ತಟ್ಟುತ್ತಾ ಮುಂದಕ್ಕೆ ತಳ್ಳಿದ್ದಾರೆಂದೇ ಹೇಳಬೇಕು. ಬಹುಶಃ, ಹಲವಾರು ವರ್ಷಗಳ ಹಿಂದೆ ತಾವು ತೇಜಸ್ವಿಯವರು ಹೊಡೆದುರುಳಿಸಿದ ಹಂದಿಯನ್ನು ಪಾಲಾಗಿಸಿಕೊಳ್ಳುವುದರಿಂದ ಉಳಿಸಲು ತಾವೇ ಹೊತ್ತು ಓಡಿದ ಸ್ಫೂರ್ತಿಯನ್ನು ನನಗೆ ಧಾರೆಯೆರೆದಿದ್ದಾರೆನಿಸುತ್ತದೆ :)) ಅದೇ ರೀತಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರೂ ಕೂಡ ನನ್ನನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಹಿರಿಯರಿಗೆ ನಾನು ಚಿರರುಣಿ.

ಇರಲಿ, ಈ ನನ್ನ ಮೊದಲ ಪ್ರಯತ್ನವಾದ "By the Corner of Indian Western Ghats" ಕೃತಿಗೆ ಓದುಗ ಮಿತ್ರರಾದ ನೀವು ಬೆಂಬಲಿಸಿ, ನಾನು ಇನ್ನೂ ಹೆಚ್ಚು ಕನ್ನಡ ಕೃತಿಗಳನ್ನು ಗ್ಲೋಬಲ್ ಲೋಕಕ್ಕೆ ಪರಿಚಯಿಸುವುದಕ್ಕೆ ಪ್ರೋತ್ಸಾಹಿಸುವಿರೆಂದು ಆಶಿಸುತ್ತೇನೆ.

ಅಮೇಜಾನ್.ಕಾಮ್ ನ ನನ್ನ ಪುಸ್ತಕದ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ.

ರವಿ ಹಂಜ್.

ಗೋಕರ್ಣ, ಮತಾಂತರ ಹಾಗೂ ನ್ಯೂ ಲೈಫ್!

ಈಗ ಎಲ್ಲೆಲ್ಲೂ ಮತೀಯ ಗಲಭೆಯ ಸುದ್ದಿ. ಫಾರ್-ಎ-ಚೇಂಜ್ ಎನ್ನುವಂತೆ ಇದು ಹಿಂದೂ-ಮುಸ್ಲಿಂ ಗಲಭೆಯಲ್ಲ, ಇದು ಇಪ್ಪತ್ತೊಂದನೇ ಶತಮಾನ, ಹಿಂದೂ-ಕ್ರಿಶ್ಚಿಯನ್ ಗಲಭೆ! ಇಪ್ಪತೊಂದನೇ ಶತಮಾನದ ಭಾರತಕ್ಕೆ ಇನ್ನೂ ಕಾಲಿಟ್ಟಿಲ್ಲವೇ, ಇದೋ ಸ್ವಾಗತ. ಭಾರತ ಪ್ರಕಾಶಿಸುತ್ತಿದೆ. ಮಠ ಮಾನ್ಯಗಳೂ ಕೂಡ ಕಾರ್ಪೋರೇಟ್ ಕಂಪೆನಿಗಳಾಗುತ್ತಿವೆ.

ಗೋಕರ್ಣಕ್ಕೆ ನೀವು ಹೋಗಿದ್ದೀರೋ ಇಲ್ಲವೋ ಗೊತ್ತಿಲ್ಲ, ನಾನಂತೂ ಎರಡು ವರ್ಷದ ಹಿಂದೆ ಹೋಗಿದ್ದೇನೆ. ಅದಕ್ಕೂ ಮುಂಚೆ ನನ್ನ ಸ್ನೇಹಿತ ಫ್ರ್ಯಾಂಕ್ ಕೂಡಾ ಓಂ ಬೀಚಿಗೆ ಹೋಗಿಬಂದಿದ್ದಾನೆ. ಒಟ್ಟಾರೆ ಆ ಕ್ಷೇತ್ರ ಒಬ್ಬ ಯೋಗ್ಯ ಮಠಾಧಿಪತಿಗಳ ಪಾದಸ್ಪರ್ಶದಿಂದ ಶುಚಿರ್ಭೂತವಾಗಬೇಕಾದ್ದಂತೂ ಅತ್ಯಂತ ಅನಿವಾರ್ಯವಾಗಿದ್ದಿತು ಎಂದು ಹೇಳಬಲ್ಲೆ. ಈ ಕಾರ್ಯಕ್ಕೆ ಈಗೇಕೆ ವಿರೋಧ ವ್ಯಕ್ತವಾಗುತ್ತಿದೆಯೋ, ಆಶ್ಚರ್ಯವೆನಿಸುತ್ತದೆ. ಏಕೆಂದರೆ ಈ ರೀತಿಯ ನಿರ್ವಹಣೆಗಳನ್ನು ಹಿಂದಿನ ಸರ್ಕಾರಗಳೂ ಧಾರ್ಮಿಕ ಸಂಸ್ಥೆಗಳಿಗೆ ವಹಿಸಿವೆ, ಅದೂ ಧಾರ್ಮಿಕವಲ್ಲದ ಕಾರ್ಯಗಳನ್ನು! "ಬಿಜೆಪಿ ಇದ್ದೊಡೆ, ನಾ ಬೊಬ್ಬಿಡೆ" ಎಂಬಂತೆ ಬುದ್ಧಿಜೀವಿಗಳು, ಜಾತ್ಯಾತೀತರು ಬೊಬ್ಬಿಡುವುದು ಅತೀ ರಂಜನೀಯವಾಗಿದೆ. ಏಕೆಂದರೆ ಹಿಂದಿನ ಕಾಂಗ್ರೆಸ್ ಕೃಷ್ಣ ಸರ್ಕಾರ ಬಿಸಿಯೂಟವನ್ನು (ಇದು ಧಾರ್ಮಿಕ ಕಾರ್ಯವಲ್ಲ) ಇಸ್ಕಾನ್ ಸಂಸ್ಠೆಗೆ ವಹಿಸಿಕೊಟ್ಟಾಗ ಏನೇನೂ ವಿರೋಧಿಸದಿದ್ದ ಬುದ್ಧಿಜೀವಿಗಳು, ಇಂದು ಒಂದು ಬ್ರಾಹ್ಮಣ ದೇವಸ್ಥಾನವನ್ನು ಒಂದು ಬ್ರಾಹ್ಮಣ ಮಠಕ್ಕೆ ವಹಿಸಿಕೊಟ್ಟಾಗ ಬೊಬ್ಬಿಡುವುದೇಕೋ?

ಹಾಗೆಯೇ ಒಂದು ಗೋತಳಿಯ ರಕ್ಷಣೆಯನ್ನು ರಾಮಚಂದ್ರಾಪುರ ಮಠಕ್ಕೆ ವಹಿಸಿಕೊಡುವುದನ್ನು ವಿರೋಧಿಸುವುದೂ ಕೂಡ ನಮ್ಮ ಬುದ್ಧಿಜೀವಿಗಳ/ರಾಜಕಾರಣಿಗಳ ಬುದ್ಧಿಮತ್ತೆಗೆ ಹಿಡಿದ ಕೈಗನ್ನಡಿಯಾಗಿದೆ. ಯಾವುದೇ ಅರ್ಥಶಾಸ್ತ್ರಜ್ಞನೂ ತಲೆದೂಗುವಂತೆ ಈ ರಾಮಚಂದ್ರಾಪುರದ ಮಠ, ನೂರೈವತ್ತು ಮಿಲಿಲೀಟರ್ ಗೋಮೂತ್ರವನ್ನು ಐವತ್ತು ರೂಪಾಯಿಗೆ ಮಾರುತ್ತಿದೆ. ಆದು ನಿಮಗೆಷ್ಟು ಬಾಟಲಿ ಬೇಕೋ ಅಷ್ಟೂ ಸಿಗುವುದಿಲ್ಲ, ವೆರಿ ಲಿಮಿಟೆಡ್ ಆರ್ಡರ್‍ಸ್ ಓನ್ಲೀ! ವಿಷಯ ಹೀಗಿರುವಾಗ ನಮ್ಮ ದೇಶೋದ್ಧಾರಕರು, ಬುದ್ಧಿಜೀವಿಗಳು ಕೆ.ಎಂ.ಎಫ್. ಅನ್ನೂ ಕೂಡ ಶ್ರೀರಾಮಚಂದ್ರಾಪುರ ಮಠಕ್ಕೆ ವಹಿಸಿಕೊಡಿ ಎಂದು ಬೊಬ್ಬಿಡುವುದರ ಬದಲು ವಿರೋಧಿಸುವುದರಲ್ಲಿ ಅದ್ಯಾವ ದೂರದೃಷ್ಟಿಯಿದೆಯೋ ನನ್ನಂಥಹ ಅಲ್ಪಬುದ್ಧಿಗೆ ಹೊಳೆಯುತ್ತಿಲ್ಲ.

ಕುತೂಹಲಕ್ಕೆ ನಾನು ಕೂಡ ಕಳೆದ ವರ್ಷ ರಾಮಚಂದ್ರಾಪುರ ಮಠಕ್ಕೆ ಭೇಟಿಕೊಟ್ಟು, ಅಲ್ಲಿನ ಗೋತಳಿಗಳನ್ನು ನೋಡಿಕೊಂಡು, ನಾಲ್ಕು ಬಾಟಲಿ ಗೋಮೂತ್ರವನ್ನು ಖರೀದಿಸಿ, ಅಲ್ಲಿನ ಸಿಬ್ಬಂದಿಯ ಊಟ ಮಾಡಿಕೊಂಡು ಹೋಗಿರೆಂಬ ಒತ್ತಾಯವನ್ನು ತಾಳಲಾರದೇ ನನ್ನ ಶಿವಮೊಗ್ಗೆಯಲ್ಲಿ ಕಾಯುತ್ತಿರುವ ಬಂಟರ ಹೋಟೇಲಿನ ಬಾಂಗುಡೆಯನ್ನು ಬಿಡಲಾರದೇ ತೊಳಲಿ "ಇನ್ನೂ ಹಸಿವಾಗಿಲ್ಲ, ಇನ್ನೊಂದು ರೌಂಡು ನಿಮ್ಮ ಗೋಶಾಲೆಯನ್ನು ಸುತ್ತಿ ಬಂದು ಊಟ ಮಾಡುತ್ತೇನೆಂದು ಕೈಕೊಟ್ಟು ಶಿವಮೊಗ್ಗೆಗೆ ಹಾರಿ ಬಾಂಗುಡೆಯ ದಾಂಗುಡಿಯನ್ನು ಆರಿಸಿಕೊಂಡಿದ್ದೆನು.

ಇದ್ದುದರಲ್ಲಿ ಈ ಚಿಕ್ಕ ಮಠ ಬಂದ ಭಕ್ತರಿಗೆ ಊಟ ಹಾಕಿ, ಆತಿಥ್ಯವನ್ನು ನೀಡುವುದನ್ನು ಕಂಡರೆ ಖುಷಿಯಾಗುತ್ತದೆ. ಇನ್ನು ದೊಡ್ಡ ಮಠಗಳ ಸುತ್ತೂರು, ಆದಿಚುಂಚನಗಿರಿ ಶ್ರೀಗಳು ಸರಸ್ವತೀ ಬಜಾರಿನಲ್ಲಿ ಸಾಕಷ್ಟು ಕಮಾಯಿಸಿ, ಬೀಮರ್, ಮರ್ಸಿಡಿಸ್ ಕಾರುಗಳನ್ನು ಬಿಡಿ, ಹೆಲಿಕಾಪ್ಟರ್ ಗಳನ್ನೇ ಇಟ್ಟುಕೊಂಡಿದ್ದಾರೆ. ಏಕೆಂದರೆ ಇವರಿಗೆ ದುಡ್ಡು ಚೆಲ್ಲಿ ಮತಾಂತರ ಮಾಡಿಸಬೇಕೆಂಬ ನಿಯಮವಿಲ್ಲ. ಹಾಗೆಯೇ ತಮ್ಮ ಭಕ್ತವರ್ಗದ ಕಷ್ಟಗಳಿಗೂ ನೆರವಾಗಬೇಕೆಂಬ ಹಮ್ಮೂ ಇಲ್ಲ. ತಮ್ಮ ತಮ್ಮ ಭಕ್ತರು ತಾವಾಗಿಯೇ ತಮ್ಮ ಮಠಗಳಿಗೆ ಬಂದರೆ, ಈ ಶ್ರೀಗಳಿಗೆ ಬಿಡುವಿದ್ದರೆ ದರ್ಶನ ನೀಡಿ ಆಶೀರ್ವಚನ ನೀಡಿ ಆಶೀರ್ವದಿಸುತ್ತಾರೆ.

ಇರಲಿ, ಭಾರತವೆಂಬುದು ಅತ್ಯಂತ ಪಾರಮಾರ್ಥಿಕರು, ಬುದ್ಧಿವಂತರೂ, ಸಂತರೂ, ವಿಜ್ಞಾನಿಗಳೂ, ಶ್ರೀಮಂತರು, ಕಲಾವಿದರೂ ಇರುವ ದೇಶ. ಹಾಗೆಯೇ ಬಡವರು, ನಿರ್ಗತಿಕರು, ದರೋಡೆಕೋರರು, ಲಂಪಟರು, ದಗಾಕೋರರೂ ಇರುವ ದೇಶ. ಒಂದು ರೀತಿ ಸಕ್ಕರೆ, ಮರಳು ಕಲಸಿ ಇಟ್ಟಿರುವಂತೆ, ಈ ಎಲ್ಲಾ ರೀತಿಯ ಭಾರತೀಯರೂ ಸೇರಿ ಭಾರತವಾಗಿದೆ. ಆದರೆ ಸಕ್ಕರೆ ಪ್ರಮಾಣ ಶೇ. ೨೦ರಷ್ಟಿದ್ದರೆ, ಮರಳಿನ ಪ್ರಮಾಣ ಶೇ.೮೦ರಷ್ಟು. ಇದು ಕೇವಲ ಇಂದಿನ ಭಾರತದ ಅನುಪಾತವಲ್ಲ, ಇದು ಬುದ್ಧನ ಮುಂಚಿನ ಭಾರತದ ಅನುಪಾತವೂ ಕೂಡ! ಭಾರತದ ಇತಿಹಾಸವನ್ನು ಇನ್ನೊಮ್ಮೆ ಭಾರತೀಯ ಪಠ್ಯೇತಿಹಾಸದ ಹೊರಗೆ ಓದಿದಾಗ ಇದು ನಿಮಗೇ ಮನನವಾಗುತ್ತದೆ. ಏಕೆಂದರೆ ನಮ್ಮ ಪಠ್ಯೇತಿಹಾಸದಲ್ಲಿ ವರ್ಣಿಸಿರುವ ಭಾರತ/ಭಾರತೀಯರೆಲ್ಲರೂ ಆ ಶೇ. ೨೦ರ ಅನುಪಾತದವರು. ಈ ಒಂದು ಕಠೋರ ಐತಿಹಾಸಿಕ ಸತ್ಯವನ್ನು ಪರಿಗಣಿಸಿ ಇಂದು ಭಾರತದಲ್ಲಿ ನಡೆಯುತ್ತಿರುವ ಮತಾಂತರ ಮತ್ತು ಅದರ ವಿರೋಧದ ಗಲಭೆಗಳನ್ನೂ ವಿವೇಚಿಸೋಣ.

ಒಬ್ಬ ವ್ಯಕ್ತಿಯ ಧಾರ್ಮಿಕ, ತಾತ್ವಿಕ, ಸೃಷ್ಟಿ ರಹಸ್ಯ, ಜೀವ/ಜೀವನ, ದೇವ, ಮಾನವ, ದಾನವ ವಿಚಾರಗಳ ಹಸಿವನ್ನು ಸಂತೈಸುವ ಒಂದು ಮಾರ್ಗವನ್ನು ಧರ್ಮವೆನ್ನುತ್ತೇವೆ. ಈ ಧಾರ್ಮಿಕ ಹಸಿವನ್ನು ಪಡೆದು, ಅದನ್ನು ಸಂತೈಸುವ ಮಾರ್ಗವನ್ನು ಶೋಧಿಸಿ ಸರಿ ಮಾರ್ಗವನ್ನು ಕಂಡುಕೊಂಡು, ಆ ಧರ್ಮವು ಅನ್ಯಧರ್ಮವಾಗಿದ್ದು, ಆ ಧರ್ಮವನ್ನು ಅನುಸರಿಸುವುದು ನಿಜಾರ್ಥದಲ್ಲಿ ಮತಾಂತರವೆನಿಸುತ್ತದೆ. ಮತಾಂತರವಿರಬೇಕಾದ್ದು ಕೂಡ ಹೀಗೆಯೇ. ಅದನ್ನೇ ನಮ್ಮ ಸಂವಿಧಾನ ಶಿಲ್ಪಿ ಆಂಬೇಡ್ಕರರು ಪ್ರತಿಪಾದಿಸಿ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನಮ್ಮ ಸಂವಿಧಾನದಲ್ಲಿ ಕಲ್ಪಿಸಿದ್ದುದು.

ಇನ್ನು ಈ ರೀತಿಯ ಧಾರ್ಮಿಕ ಹಸಿವು ಯಾರಲ್ಲಿ ಉಂಟಾಗುತ್ತದೆ? ಎಂಬುದನ್ನು ನಿಮ್ಮಗಳ ಅವಲೋಕನಕ್ಕೆ ಬಿಡುತ್ತೇನೆ. ನನ್ನ ವೈಯುಕ್ತಿಕ ಅಭಿಪ್ರಾಯವೆಂದರೆ, ಇದು ಸಕಲ ಮೂಲಭೂತ ಸೌಕರ್‍ಯಗಳು ದೊರೆತು, ಅಂದರೆ ವಿದ್ಯಾಭ್ಯಾಸ, ವಸತಿ, ಉದ್ಯೋಗ ಇನ್ನು ಮುಂತಾದ ಭೌತಿಕ ಸವಲತ್ತುಗಳು ಸಿಕ್ಕು, ಅಂತರಂಗದಲ್ಲಿ ಧಾರ್ಮಿಕ ತರ್ಕಗಳೇರ್ಪಟ್ಟು, ಜ್ಞಾನದ ಹಸಿವುಂಟಾಗಿ, ಧರ್ಮದ ಮಾರ್ಗದರ್ಶನಕ್ಕಾಗಿ ತವಕಿಸಿ, ತನ್ನೆಲ್ಲಾ ಜಿಜ್ಞಾಸೆಗಳಿಗೆ ತಕ್ಕ ಉತ್ತರ ಸಿಕ್ಕು, ಉತ್ತರಿಸಿದ ಆ ಧರ್ಮವನ್ನು ಅಪ್ಪಿಕೊಳ್ಳುವುದು ನಿಜ ಧಾರ್ಮಿಕ ಸ್ವಾತಂತ್ರ್ಯವೆನಿಸುತ್ತದೆ. ಒಂದು ರೀತಿ ನಮ್ಮ ಮೇರುನಟರಾದ ರಾಜಕುಮಾರ್, ವಿಷ್ಣುವರ್ಧನ್ ಫಿಲಾಸಾಫಿಕಲ್ ಆದಂತೆ, ರಜನೀಕಾಂತ್ ಹಿಮಾಲಯಕ್ಕೆ ಹೋದಂತೆ. ಹಾಗೆಯೇ ಮಡೋನ್ನ, ಬೀಟಲ್ಸ್ ಗಳು ಕುಂಭಮೇಳಕ್ಕೆ ಬಂದಂತೆ. ಅಂಬೇಡ್ಕರರು ಬೌದ್ಧರಾದಂತೆ, ಆಂಧ್ರದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿಯಾದಂತೆ. ಇದು ನಿಜಾರ್ಥದ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಬೌದ್ಧಿಕ ಮತಾಂತರ.

ಇನ್ನು ಭಾರತದಲ್ಲಿ ಆಗಿರುವ ಮತಾಂತರಗಳು, ಈ ರೀತಿಯ ಬೌದ್ಧಿಕ ಮತಾಂತರಗಳೇ? ಒಬ್ಬ ಏನೂ ಅರಿಯದ ಅಮಾಯಕ, ನಿರ್ಗತಿಕ ಬಡವನನ್ನು ಅನ್ನ, ಬಟ್ಟೆ ಕೊಟ್ಟು "ಇನ್ನು ಮುಂದೆ ನೀನು ಕ್ರಿಶ್ಚಿಯನ್. ನಿತ್ಯವೂ ಇಲ್ಲಿ ಬಂದು ತಿನ್ನು. ಹಾಗೆಯೇ ನಿನಗೆ ಈ ಉದ್ಯೋಗ"ವೆಂದಾಗ, ಆ ಬಡವ "ಪುಣ್ಯಾತ್ಮರು" ಎಂದುಕೊಳ್ಳುತ್ತಾನೆ. ಅವನಿಗೆ ಅನ್ನ, ಬಟ್ಟೆ ಕೊಟ್ಟ ಯಾವ ಧರ್ಮೀಯನಾದರೂ ಪುಣ್ಯಾತ್ಮನೇ ಆಗುತ್ತಾನೆ. ಆದರೆ ಆ ಬಡವನನ್ನು ನೀನು ಇನ್ನು ಮುಂದೆ "ಈ ಧರ್ಮದವನು" ಎನ್ನುವುದು ಆ ಬಡವನ ಶೋಷಣೆಯಲ್ಲವೇ? ನನಗಂತೂ ಇದು "ಮಕ್ಕಳ ಲೈಂಗಿಕ ಶೋಷಣೆ"ಯಷ್ಟೇ ಮಹಾಪರಾಧವೆನಿಸುತ್ತದೆ. ಹಸಿವಿಗೆ ಧರ್ಮವನ್ನು ಹೊರಿಸುವುದು "ಫೆಡಾಫೈಲ್" ಎನಿಸುತ್ತದೆ. ಇದು ಯಾವುದೇ ಧರ್ಮದವರ ಕಾರ್ಯವಾದರೂ ಸರಿಯೆ ಅವರೆಲ್ಲಾ ಫೆಡಾಫೈಲ್ ಗಳೇ ಹೊರತು ಖಂಡಿತವಾಗಿಯೂ ಸಂತ, ಮಾತೆ, ಬಾಬಾಗಳಲ್ಲ!

ಇನ್ನು ಈ ವಿಚಾರವಾಗಿ ನಮ್ಮ ರಾಜಕೀಯ ನಾಯಕರುಗಳ ಹೇಳಿಕೆಗಳನ್ನು ಗಮನಿಸಿದರೆ ಅತ್ಯಂತ ಹಾಸ್ಯಾಸ್ಪದವೂ ಮತ್ತು ಭಾರತದ ಬಗ್ಗೆ ವ್ಯಥೆಯೂ ಉಂಟಾಗುತ್ತದೆ. ಮೊದಲೆಲ್ಲಾ ಬಹುದೊಡ್ಡ ಪಟ್ಟಣಗಳಲ್ಲಿ ಇರುತ್ತಿದ್ದ ಚರ್ಚುಗಳು ಇಂದು ಹಳ್ಳಿ ಹಳ್ಳಿಗೆ ಬಂದಿವೆಯೆಂದರೆ, ಕ್ರಿಶ್ಚಿಯನ್ನರೆಲ್ಲಾ ಹಳ್ಳಿಗಳಿಗೆ ವಲಸೆ ಬಂದರೆ? ಜನಸಂಖ್ಯೆಯ ಅನುಪಾತವಾಗಿ ಈ ಪ್ರಾರ್ಥನಾ ಮಂದಿರಗಳ ಸಂಖ್ಯೆ ಏರಿದ್ದರೆ ಸರಿ, ಆದರೆ ಇವುಗಳ ಸಂಖ್ಯೆ ಆ ಅನುಪಾತದಲ್ಲಿದೆಯೇ? ಇದಕ್ಕೆಲ್ಲಾ ಪ್ರತಿಕ್ರಿಯಿಸುವ ಮುನ್ನ "ಹೋಂ ವರ್ಕ್" ಕೂಡಾ ಮಾಡಿಕೊಳ್ಳುವುದಿಲ್ಲ ನಮ್ಮ ಅತಿಬುದ್ಧಿಗಳು. ಈ ರೀತಿಯ ಶೋಷಣೆಯ ಮತಾಂತರ ಆಗದೇ ಇದ್ದರೆ ಇಂದು ಈ ಪಾಟಿ ಚರ್ಚುಗಳು ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಕಾಣಸಿಗುತ್ತಿದ್ದವೆ? ಇನ್ನೊಂದು ಧರ್ಮದ ಅವಹೇಳನ ಮಾಡಿ ತಮ್ಮ ಧರ್ಮವನ್ನು ಮೆರೆಸುವುದು ಎಲ್ಲಾ ಧರ್ಮಗಳವರೂ ಮಾಡುತ್ತಾರೆ. ಈ ರೀತಿಯ ಅವಹೇಳನ ಮಾಡಿ ಮತಾಂತರಕ್ಕೆ ಪ್ರಚೋದಿಸುವುದು ಇಂದು ನೆನ್ನೆಯದಲ್ಲ, ಬ್ರಿಟಿಷರ ಕಾಲದಿಂದಲೂ ಇದೆ. ಈ ವಿಷಯ/ಇತಿಹಾಸದ ಅರಿವು ನಮ್ಮ ನಾಯಕರಿಗಿಲ್ಲದಿರುವುದು ಅತ್ಯಂತ ಶೋಚನೀಯ. ನಮ್ಮ ದೇಶದ ನೂರು ವರ್ಷಗಳ ಇತಿಹಾಸವನ್ನೇ ಅರಿಯದ ಇವರು ಇನ್ನೇನನ್ನು ಅರಿಯಲು ಸಾಧ್ಯ?

ನಮ್ಮ ಸಿನಿಕ ಬುದ್ಧಿಜೀವಿಗಳು ದಾವಣಗೆರೆ ಸಮೀಪದ ಬಾಡ/ಉಚ್ಚಂಗಿದುರ್ಗದಲ್ಲಿ ಚರ್ಚುಗಳ ಧ್ವಂಸ ಎಂಬ ಸುದ್ದಿಯನ್ನು ಕೇಳಿ "ಹಿಂದೂ ಉಗ್ರವಾದಿಗಳನ್ನು ಮಟ್ಟಹಾಕಿ" ಎಂದು ಬೊಬ್ಬಿಡುವ ಮುನ್ನ ’ಅರೆ, ಬಾಡ, ಉಚ್ಚಂಗಿದುರ್ಗದಲ್ಲಿ ಚರ್ಚುಗಳು ಹೇಗೆ ಬಂದವು?" ಎಂದು ಪ್ರಶ್ನಿಸಿಕೊಳ್ಳದಿರುವುದು "ಕೋಣ ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು" ಎಂಬಂತಿದೆ. ಏಕೆಂದರೆ ಕನ್ನಡ ಸಾಹಿತ್ಯದ ಮೇರು ಪರ್ವತಗಳಾದ ಕುವೆಂಪು, ಮಾಸ್ತಿಯವರು ಈ ಮತಾಂತರದ ಕುರಿತಾಗಿ ತಮ್ಮ ಮಹಾನ್ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಕುವೆಂಪು ಅವರು ತಮ್ಮ ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಈ ರೀತಿಯ ಮತಾಂತರದ ಕುರಿತಾಗಿ ಪ್ರಸ್ತಾಪಿಸಿದ್ದು, ಮಾಸ್ತಿಯವರು ತಮ್ಮ ’ಚಿಕವೀರ ರಾಜೇಂದ್ರ’ ಕಾದಂಬರಿಯಲ್ಲಿ ಈ ರೀತಿಯ ಮತಾಂತರದ ವಿಚಾರವಾಗಿ ನಡೆವ ವಾಗ್ಯುದ್ಯವನ್ನು ಬರೆದಿದ್ದಾರೆ. ಇವನ್ನೆಲ್ಲಾ ಓದಿದ್ದಾರೋ ಇಲ್ಲವೋ ನಮ್ಮ ಬುದ್ದಿಜೀವಿಗಳು?

ಇನ್ನು ಬಡವರ, ನಿರ್ಗತಿಕರ ಸೇವೆಯನ್ನು ಮಾಡಬೇಕೆಂಬ ನಿಜ ಹಂಬಲವಿದ್ದವರು ಧರ್ಮದ ಲೇಪನವಿಲ್ಲದೇ ಅಂತಹ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲವೇ? ಈ ನಿರ್ಗತಿಕರಿಗಿಂತಲೂ ಹೆಚ್ಚಾಗಿ ಮುಸ್ಲಿಂ ಮಹಿಳೆಯರು ಅಫ್ಘಾನಿಸ್ತಾನ/ಪಾಕಿಸ್ತಾನ ಬಿಡಿ, ನಮ್ಮ ಭಾರತದಲ್ಲಿಯೇ ನರಳುತ್ತಿದ್ದಾರೆ. ಈ ಮಹಿಳೆಯರ ವಿಮೋಚನೆಗೆ ಕೈಹಾಕುವ ಸಾಹಸವನ್ನು ಈ ಸಂಸ್ಥೆಗಳು ಮಾಡುತ್ತವೆಯೇ? ಪರಧರ್ಮಸಹಿಷ್ಣುತೆ ಎಂಬ ಏಕೈಕ "ವಿಶಾಲ ಮನೋಭಾವನೆ"ಯಿರುವ ಒಂದೇ ಕಾರಣದಿಂದ ಹಿಂದೂ ಧರ್ಮ ಇಂದು ಇಂತಹ ಅವಘಡಗಳಿಗೆ ಒಳಗಾಗಿದೆ. ಈ ಧರ್ಮದ ಕುರಿತು ಮಾಹಿತಿಯನ್ನು ನಮ್ಮ ಜಗದ್ಗುರುಗಳು ಸರಿಯಾಗಿ ಪ್ರಚಾರಿಸದೇ, ತಮ್ಮತಮ್ಮ ಭಕ್ತಮಂಡಳಿಯ ಧಾರ್ಮಿಕ, ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸದೇ ಇಂದು ಹಿಂದೂ ಧರ್ಮವೊಂದು ಸನಾತನ ನಿಗೂಢವೂ, ಮೇಲ್ನೋಟಕ್ಕೆ ಕಂದಾಚಾರಗಳ ಆಗರವೂ ಆಗಿ ಕಾಣುತ್ತದೆ. ಈ ಮೇಲ್ನೋಟವನ್ನೇ ನಮ್ಮ ಬುದ್ಧಿಜೀವಿಗಳು ಹಿಂದೂಧರ್ಮವೆಂದು ಪರಿಗಣಿಸಿ ಅವಹೇಳನ ಮಾಡಿದ್ದಾರೆ ಮಾಡುತ್ತಿದ್ದಾರೆ. ಯಾವುದನ್ನೂ ಸುಧೀರ್ಘವಾಗಿ ಅವಲೋಕಿಸಿ ಅನುಸರಿಸುವ ಪಾಶ್ಚಿಮಾತ್ಯರೆಲ್ಲಾ ಹಿಂದೂ ಧರ್ಮವನ್ನು ಅಪ್ಪಿಕೊಳ್ಳುತ್ತಿದ್ದರೆ ನಮ್ಮ ಅರೆಬೆಂದ ಮಠಾಧೀಶರುಗಳು, ಹಿಂದುತ್ವವಾದಿಗಳು, ಬುದ್ಧಿಜೀವಿಗಳು ಹಿಂದೂಧರ್ಮವನ್ನು ಮತಾಂತರಿಗಳಷ್ಟೇ ಕುಲಗೆಡಿಸುತ್ತಿದ್ದಾರೆ.

ಇನ್ನು ವೈಯುಕ್ತಿಕವಾಗಿ ಉಚ್ಚೆ ಹುಯ್ಯಲು ಕೂಡಾ ರಾಹುಕಾಲ/ಗುಳಿಕಕಾಲ ನೋಡುವ ರಾಜಕಾರಣೀ ಸುಪ್ರಿಮೋಗಳು ಸಾರ್ವಜನಿಕವಾಗಿ ಢೋಂಗೀ ಜಾತ್ಯಾತೀತತೆಯನ್ನು ಮೆರೆಯುತ್ತಾರೆ. ಈ ರಾಜಕಾರಣಿಗಳು ಗ್ರಾಮವಾಸ್ತವ್ಯ, ಡಿಸ್ಕವರ್ ಇಂಡಿಯಾ ಎಂದೆಲ್ಲಾ ಹಳ್ಳಿ ಹಳ್ಳಿಗಳನ್ನು ಸುತ್ತಿದಾಗ ಹಳ್ಳಿಗಳಲ್ಲಿ ನಡೆಯುತ್ತಿದ್ದ ಈ ಧರ್ಮಸೂಕ್ಷ್ಮ ಕಾಣಬರದಿದ್ದುದು ಇವರುಗಳ ಜಾಣಕುರುಡೆನಿಸುತ್ತದೆ.

ನಿಜ ಹಿಂದುತ್ವ, ಪವಾಡ/ವರ್ಣಸಂಕರ/ಮೂಢನಂಬಿಕೆಗಳನ್ನೆಲ್ಲಾ ಮೀರಿದ್ದುದಾಗಿದೆ. ಈ ಧರ್ಮವು ತಮಗೆ ಹೇಗೆ ಬೇಕೋ ಹಾಗೆ ತಿದ್ದುವ, ತೀಡುವ ಫ್ಲೆಕ್ಸಿಬಲ್ ಧರ್ಮವಾದುದರಿಂದು ಇಂದು ಈ ಎಲ್ಲಾ ಅವಘಡಗಳೂ ಕಾಲಕಾಲಕ್ಕೆ, ಅವರವರ ಅನುಕೂಲಕ್ಕೆ ಇದರಲ್ಲಿ ಸೇರಿವೆ. ಬೌದ್ಧಧರ್ಮದ ಪ್ರಭಾವವನ್ನು ಹತ್ತಿಕ್ಕಲು ಗೋಮಾಂಸ ವರ್ಜ್ಯವನ್ನು ಹಿಂದೂ ಧರ್ಮಕ್ಕೆ ಸೇರಿಸಿದಂತೆಯೇ, ಕಾಲಕಾಲಕ್ಕೆ ಇಂದಿನ ಬುದ್ಧಿಜೀವಿಗಳಂತಹ ಬುದ್ಧಿವಂತರು ಶತಶತಮಾನಗಳಿಂದ ಹಿಂದೂ ಧರ್ಮವನ್ನು ತಮ್ಮ ಅನುಕೂಲಗಳಿಗೆ ಮಾರ್ಪಾಡಿಸಿಕೊಳ್ಳುತ್ತ ಇಂದಿನ ಹಿಂದೂ ಧರ್ಮ ವಿಕಸಿತಗೊಂಡಿದೆ. ಇದು ಎಷ್ಟೊಂದು ಫ್ಲೆಕ್ಸಿಬಲ್ ಎಂದರೆ ನೀವೇ ಒಂದು ಮಂತ್ರವನ್ನು ತಟ್ಟನೆ ರೂಪಿಸಬಹುದು. ಅದು "ಓಂ ಅಲ್ಲಾಹೋ ನಮಃ" ಅಥವಾ "ಓಂ ಜೀಸಸ್ಸೋ ನಮಃ" ಎಂದೂ ಆಗಬಹುದು! ಸಕಲ ಚರಾಚರಗಳಲ್ಲಿಯೂ ಪರಮಾತ್ಮನಿದ್ದಾನೆ. ಆದುದರಿಂದ ಸಕಲ ಚರಾಚರಗಳನ್ನೂ ಗೌರವಿಸು ಎಂಬ ಸಿಂಪಲ್ ತತ್ವದ ಪರಿಣಾಮವೇ ಹಿಂದೂಗಳು ಕಲ್ಲು, ಮರ, ನದಿ, ಸಾಗರಗಳನ್ನೆಲ್ಲಾ ಪೂಜಿಸುವುದು. ಆದರದಿಂದು ಮೌಢ್ಯವೆನಿಸುವಂತೆ ನಮ್ಮ ಬುದ್ದಿವಂತ ಜನಾಂಗ ಅದನ್ನು ವಿಶ್ಲೇಷಿಸಿದೆ. ಹಾಗಾಗಿಯೇ ಹಿಂದೂ ಧರ್ಮವೂ ಕೂಡಾ ಇಂದು ಮರಳು/ಸಕ್ಕರೆ ಸೇರಿರುವ ಕಲಬೆರಕೆಯಾಗಿದೆ. ಇದರಲ್ಲಿ ಸಕ್ಕರೆಯನ್ನು ಹೆಕ್ಕಿ ಒಂದು ಸಮಗ್ರ ರೂಪವನ್ನು ಕೊಡಬೇಕಾದ ಮಠಾಧೀಶರು "ಪೀಠ ರಾಜಕೀಯ"ದಲ್ಲಿ ಮುಳುಗಿಹೋಗಿದ್ದಾರೆ. ಬಹುಶಃ ಇದನ್ನೆಲ್ಲಾ ಮನಗಂಡೋ ಇಲ್ಲಾ ಮತಾಂತರವನ್ನು ಒಪ್ಪಿಕೊಳ್ಳಿ ಎಂದೋ ಒಟ್ಟಾರೆ ನಮ್ಮ ನಾಡಿನ ಘನ ಬುದ್ಧಿಜೀವಿಗಳು "ಯಾವ ದೇವರಿಗೆ ಕೈಮುಗಿದರೂ ಅದು ಕೇಶವನನ್ನು ತಲುಪುತ್ತದೆಂಬ ನಂಬುಗೆಯೇ ಹಿಂದುತ್ವ"ವೆಂದು ಹಿಂದೂ ಧರ್ಮದ ಅಧಿಪತಿಯ ಖಾಲೀ ಸ್ಥಾನವನ್ನು ತುಂಬುವ ಪ್ರಯತ್ನವನ್ನು ಮಾಡುತ್ತಿದ್ದಾರೋ ಅಥವಾ ಇಂದಿನ ಮತಾಂತರವನ್ನು ಒಪ್ಪಿಕೊಳ್ಳಿ ಎನ್ನುತ್ತಿದ್ದಾರೊ ನಾನರಿಯೆ.

ಇನ್ನು ಈ ನ್ಯೂಲೈಫ್ ಚರ್ಚುಗಳ ಚೈನ್ ಒಂದು ರೀತಿ ಹಿಂದೂ ತತ್ವದ ಮೆರುಗನ್ನು ಹಚ್ಚಿ ತಮ್ಮದೇ "ಕಲ್ಟ್"ನ ತತ್ವಗಳನ್ನು ಪ್ರಚಾರಿಸುವ ಇಸ್ಕಾನ್, ಕಲ್ಕಿ, ಸಾಯಿಬಾಬಾ, ದಾರೂಬಾಬಾ, ಮರ ಹತ್ತಿ ಕುಳಿತಿರುವ ಮಾತೆ.........ಇನ್ನು ಮುಂತಾದ ಕಲ್ಟ್ ಗಳಂತೆಯೇ ಕ್ರಿಶ್ಚಿಯಾನಿಟಿ ಮೆರುಗು ಹೊಂದಿರುವ ಕಲ್ಟ್. ಎಲ್ಲರಂತೆಯೇ ಇವರಿಗೂ ತಮ್ಮ ತಮ್ಮ ಸಂಘದ ಸದಸ್ಯರುಗಳ ಸಂಖ್ಯೆಯನ್ನು ಏರಿಸಿಕೊಳ್ಳಬೇಕೆಂಬ ಭರ. ಆಮ್ ವೇ, ಮನಿ-ಸರ್ಕುಲೇಷನ್...ಇನ್ನು ಮುಂತಾದ ಚೈನ್ ಬ್ಯುಸಿನೆಸ್ ಗಳಂತೆ! ಈ ರೀತಿಯ ಹುಚ್ಚಾಟಗಳಿಗೆ ಅಮಾಯಕರುಗಳು ಬಲಿಯಾಗುತ್ತಿರುವುದನ್ನು ತಡೆಗಟ್ಟಿ, ಜನ ನಿಜಾರ್ಥದ ಧರ್ಮಾನುಚರಣೆಗೆ ಅನುವಾಗುವಂತೆ ಸನಾತನ ಭಾರತ ಎಂದು ಅನುವಾಗುವುದೋ? ಬಹುಶಃ, ಭಾರತಕ್ಕೆ ನ್ಯೂಲೈಫ್ ಬೇಕಾಗಬಹುದೇನೋ!

ಅಣಕ:

ನಮ್ಮ ರೈತ ಪರಮೇಶಪ್ಪ "ಯೂರಿಯಾ" ಗೊಬ್ಬರಕ್ಕೆ "ವೀರ್ಯ" ಎನ್ನುತ್ತಿದ್ದನ್ನು ಓದಿದ್ದೀರಷ್ಟೆ. ಅವನು ಈ ನ್ಯೂಲೈಫ್ ಚರ್ಚಿಗೆ ಸೇರಿ ಪೀಟರ್ ಪರಮೇಶಪ್ಪನಾಗಿ "ಮೇರಿ", "ಜೇಮ್ಸ್", "ಜೀಸಸ್" ರನ್ನು ಏನೆನ್ನುತ್ತಿದ್ದನೋ ನಾ ಕಾಣೆ. ಆದರೂ ತನ್ನ ನೆರೆಮನೆಯ "ಆಂಡ್ರೂ ಆಡಿವೆಪ್ಪ"ನನ್ನು ಮಾತ್ರ "ಆಂಡಿನ ಅಡಿವೆಪ್ಪ" ಎನ್ನುತ್ತಿದ್ದನೆನೋ ಎನಿಸುತ್ತದೆ!

ಅಕ್ಕ, ಯಾಕೆ ಎಲ್ಲರಿಗೂ ಬೇಕು ನಿನ್ನ ಪಕ್ಕ?

ಅಮೇರಿಕಾ ಕನ್ನಡ ಕೂಟಗಳ ಆಗರವೆಂಬ ಹೆಸರಿನ ಈ ಸಂಸ್ಥೆ, ಅಮೇರಿಕಾದಲ್ಲಿರುವ ಎಲ್ಲಾ ಕನ್ನಡ ಕೂಟಗಳನ್ನು ಒಂದೇ ಸೂರಿನಡಿ ತಂದು ಎರಡು ವರ್ಷಗಳಿಗೊಮ್ಮೆ ೨೦೦೦ದೀಚೆಗೆ ಕನ್ನಡ ಸಮ್ಮೇಳನವನ್ನು ಏರ್ಪಡಿಸುತ್ತಿದೆ. ಅಮೇರಿಕಾದಲ್ಲಿ ಸಹಸ್ರಾರು ಕನ್ನಡಿಗರಿದ್ದರೂ ಈ ಸಮ್ಮೇಳನ/ಕನ್ನಡ ಕೂಟಗಳಿಗೆ ಹೋಗುವವರು ಕೇವಲ ಬೆರಳೆಣಿಕೆಯಷ್ಟು ಕನ್ನಡಿಗರು ಮಾತ್ರ. ಇದಕ್ಕೆ ಕಾರಣಗಳು ಭಾರತದ ಕೂಟ/ಸಮ್ಮೇಳನಗಳಲ್ಲಿ ನಡೆಯುವ ಅಂತರಿಕ ವಿಚಾರಗಳಂತೆಯೇ ಈ ಕೂಟ/ಸಮ್ಮೇಳನಗಳೇನೂ ಹೊರತಾಗಿಲ್ಲದಿರುವುದು. ಇಲ್ಲಿನ ಬಹುತೇಕ ಕನ್ನಡಿಗರು ತಮ್ಮ ಮೂರು ದಿನಗಳ ಲಾಂಗ್ ವೀಕೆಂಡ್ ಅನ್ನು ಸ್ಕೂಲುಗಳು ಶುರುವಾಗುವ ಮುಂಚಿನ ಕೊನೆಯ ಪ್ರವಾಸ/ಪಾರ್ಟಿಗಳಿಗೆ ಮೀಸಲಿಟ್ಟಿರುತ್ತಾರೆ. ಅದೇ ರೀತಿ ಏರ್ಪಡುವ ಅನೇಕ ಪಾರ್ಟಿಗಳಂತೆಯೇ ಈ "ಅಕ್ಕ" ಸಮ್ಮೇಳನ ಕೂಡ. ಅವರವರ ಭಾವಕ್ಕೆ, ಅವರವರ ತಾಳಕ್ಕೆ ಹೊಂದುವಂತಹ ಪಾರ್ಟಿಗಳಿಗೆ ನಾವು ನೀವುಗಳು ಹೋಗುವಂತೆಯೇ ಕೆಲವರ್ಗದ ಜನ ಈ "ಅಕ್ಕ" ಪಾರ್ಟಿಗೆ ಹೋಗುತ್ತಾರೆ. ಇದರಲ್ಲಿ ಇಲ್ಲಿನ ಬಹುತೇಕ ಕನ್ನಡಿಗರು ವಿಶೇಷವನ್ನೇನು ಕಾಣುವುದಿಲ್ಲ!

ನಿಮಗೆ ಆಶ್ಚರ್ಯವಾಯಿತೇ, ಇದರಲ್ಲಿ ವಿಶೇಷವೇನೂ ಇಲ್ಲವೆಂಬುದನ್ನು ಕೇಳಿ. ನಿಮಗೆ ಹೇಗೆ ಆಶ್ಚರ್ಯವಾಗುತ್ತಿದೆಯೋ ಹಾಗೆಯೇ ನನಗೂ ಕೂಡಾ ಸಖೇದಾಶ್ಚರ್ಯವಾಗುತ್ತಿದೆ, "ಅಕ್ಕ"ನ ಬಗ್ಗೆ ಕರ್ನಾಟಕದಲ್ಲಿ, ಅಲ್ಲಿನ ಸುದ್ದಿಪತ್ರಿಕೆಗಳಲ್ಲಿ, ವಿಧಾನಸೌಧದಲ್ಲಿ ಆಗುತ್ತಿರುವ ಸುದ್ದಿಯನ್ನು ನೋಡಿ!

ಇಂದಿನ ಮಾಹಿತಿ ಯುಗದಲ್ಲಿಯೂ ಕೂಡಾ ನಮ್ಮ ಸುದ್ದಿ ಮಾಧ್ಯಮಗಳು ವಿಚಾರಗಳನ್ನು ತಿಳಿದು, ಅಳೆದು ಬರೆಯದೇ ಹುಚ್ಚುಚ್ಚಾಗಿ "ಕೇವಲ ಮೂರು ಸಾವಿರ ಜನ ಸೇರುವ ಒಂದು ಸಮ್ಮೇಳನ, ಅದೂ ತಲೆಗೆ ಇನ್ನೂರು ಡಾಲರ್ ತೆತ್ತು" ಕುರಿತು ಇದೊಂದು ಅದ್ಭುತ ಸಮ್ಮೇಳನದಂತೆ, ಈ ಸಮ್ಮೇಳನದಿಂದ ಕನ್ನಡದ ಬಾವುಟ ಶ್ವೇತಭವನದ ಮೇಲೆ ಹಾರಾಡಿತೆಂಬುವಂತೆ, ವಿದೇಶೀ ಬಂಡವಾಳ ಬೆಂಗಳೂರಿಗೆ ಹುಚ್ಚೆದ್ದು ಹರಿಯುತ್ತದಂತೆಂಬುವಂತೆ ನಿತ್ಯವೂ "ಕೌಂಟ್ ಡೌನ್" ಮಾದರಿಯಲ್ಲಿ ಭಿತ್ತಿಸುತ್ತಿರುವುದನ್ನು ನೋಡಿ, ಇದು ನಮ್ಮ ಸುದ್ದಿಮಾಧ್ಯಮಗಳು ಮಾಹಿತಿಯನ್ನು ಬಳಸುವ ಉನ್ನತಿಯೋ, ಅಧಃಪತನವೋ ಎಂದು ದ್ವಂದ್ವಕ್ಕೊಳಗಾಗಿದ್ದೇನೆ.

ಇನ್ನು ಅಕ್ಕನ ಹಿಂದಿನ ಸಮ್ಮೇಳನಗಳಿಗೆ ಬಂದಂತಹ ಮಂತ್ರಿಮಹೋದಯರು ಅದೆಷ್ಟು ವಿದೇಶೀ ಬಂಡವಾಳವನ್ನು ಬೆಂಗಳೂರಿಗೆ ಹರಿಸಿದ್ದಾರೋ ಲೆಕ್ಕವಿಟ್ಟಿರುವರ್‍ಯಾರು? ಇಂತಹ ಸಮ್ಮೇಳನದಿಂದ ಬಂಡವಾಳ ಹರಿಯುತ್ತದೆಂದು ಹೇಳಿಕೊಳ್ಳುವ ಇಂದಿನ ಮುಖ್ಯಮಂತ್ರಿ, ಹಾಗೆಯೇ ಹೇಳಿಕೊಂಡ ಮಾಜೀ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಎಸ್.ಎಮ್.ಕ್ರಿಸ್ (ಕೃಷ್ಣ) ಎಂತಹ "ಬಂಡವಾಳ" ಮೇಧಾವಿಗಳೆಂದು ನೀವೇ ಆಲೋಚಿಸಿ. ಬಂಡವಾಳ ಹರಿಸುವ/ಬೆಳೆಸುವ ಉದ್ದೇಶವಿದ್ದವರೂ ಅಂತರರಾಷ್ಟ್ರೀಯ ವಾಣಿಜ್ಯ ಸಮ್ಮೇಳನಗಳಿಗೋ, ರಾಷ್ಟ್ರನಾಯಕರುಗಳ ಸಮ್ಮೇಳನಗಳಿಗೋ ಹೋಗುತ್ತಾರೆಯೇ ವಿನಃ ಮಧ್ಯಮ ವರ್ಗದ ಸಾಂಸ್ಕೃತಿಕ ಸಮ್ಮೇಳನಕ್ಕೆ ಖಂಡಿತಾ ಹೋಗುವುದಿಲ್ಲ. ಇಲ್ಲಿ ಬಂಡವಾಳ ಹರಿಯುವುದೇನಿದ್ದರೂ ಬೆಂಗಳೂರಿನಲ್ಲಿ ಸೈಟು/ಮನೆ ಕೊಂಡುಕೊಳ್ಳಲು ಮಾತ್ರ! ಅದೂ ಬೆಂಗಳೂರಿನ ಇಂದಿನ ಬೆಲೆಗೆ ಯಾವುದಾದರೂ ಕೆಂಟುಕಿಯ ಕಮಂಗಿವಿಲ್ ನಲ್ಲಿರುವ ಮಿಕ ಮನಸ್ಸು ಮಾಡಿದರೆ.

ಇನ್ನು ಇಲ್ಲಿನ ಭಾರತೀಯರುಗಳ ಸಂಸ್ಕೃತಿಗಳ ವಿಚಾರವಾಗಿ ಈ ಹಿಂದೆಯೇ ನನ್ನ "ಜಾತ್ಯಾತೀತ ಅಮೇರಿಕೆಯಲ್ಲಿ ಜಾತೀಯತೆ" ಮತ್ತು "ಎರಡನೇ ತಲೆಮಾರಿನ ಅಮೇರಿಕನ್ನರು" ಲೇಖನಗಳಲ್ಲಿ ಸವಿವರವಾಗಿ ಬರೆದಿದ್ದೇನೆ, ನೀವೇ ಓದಿಕೊಳ್ಳಿ.

ಇನ್ನು ಈ ಸಮ್ಮೇಳನದಲ್ಲಿ ಸೇರುವವರು ನಿಮ್ಮನ್ಯಾರು ’ಕ್ಯಾರೇ’ ಎನ್ನರು. ಅವರೆಲ್ಲ ತಮ್ಮ ತಮ್ಮ ಪರಿಚಿತ ಬಂಧು-ಮಿತ್ರರೊಟ್ಟಿಗೆ ಸೇರಿ ಉಭಯಕುಶಲೋಪರಿಯಲ್ಲಿ ತೊಡಗಿರುತ್ತಾರೆ. ಅಕಸ್ಮಾತ್, ನಿಮ್ಮನ್ಯಾರಾದರೂ ಮಾತನಾಡಿಸಿದರೋ ಎಂದರೆ ಅವರು ರಿಯಲ್-ಎಸ್ಟೇಟ್ ಏಜೆಂಟರೋ, ಇನ್ಸೂರೆನ್ಸ್ ಏಜೆಂಟರೋ ಅಥವಾ ಬೆಳೆದು ನಿಂತ ಮಗಳ ತಂದೆಯೋ ಆಗಿರುತ್ತಾರೆ. ಇದು ನನ್ನ ಅನುಭವದ ಮಾತು.

ಹತ್ತು ವರ್ಷಗಳ ಹಿಂದೆ ನಾನು ಒಮ್ಮೆ ನನ್ನ ಸ್ನೇಹಿತನ ಒತ್ತಾಯಕ್ಕೆ ಮಣಿದು ಅವನೊಂದಿಗೆ ಒಂದು ಕನ್ನಡ ಕೂಟಕ್ಕೆ ಹೋಗಿದ್ದೆ. ಹೊಸಬರಾದ ನನ್ನನ್ನೂ ನನ್ನ ಸ್ನೇಹಿತನನ್ನೂ ಅಲ್ಲಿ ಕೇಳುವವರೇ ಇರಲಿಲ್ಲ. ಎಲ್ಲರೂ ತಮ್ಮ ತಮ್ಮ ಗುಂಪುಗಳೊಂದಿಗೆ ಬಿಜಿ. ಹೀಗಿದ್ದಾಗ ಒಬ್ಬ ಸಭ್ಯ ವ್ಯಕ್ತಿಯೋರ್ವರು ನನ್ನ ಪಕ್ಕಕ್ಕೆ ಬಂದು ಉಭಯಕುಶಲೋಪರಿಯಲ್ಲಿ ತೊಡಗಿದರು. ಮಾತನಾಡಿಸುವವರು ಒಬ್ಬರು ಸಿಕ್ಕರೆಂದು ನಾನು ಕೂಡ ಅವರೊಂದಿಗೆ ಮಾತಿನಲ್ಲಿ ತೊಡಗಿದೆನು. ನನ್ನ ಚಹರೆಯಿಂದ ನನ್ನನ್ನು ಒಬ್ಬ "ಯೋಗ್ಯ ವರ"ನೆಂದುಕೊಂಡ ಅವರು "ಏಕೆ, ಅಪಾರ್ಟ್ಮೆಂಟಿನಲ್ಲಿ ಒಬ್ಬರೇ ಇದ್ದೀರಿ. ಮದುವೆಯಾಗಬಹುದಲ್ಲವೇ" ಎನ್ನುತ್ತಾ ಅವರ ಮಗಳನ್ನು ಪರಿಚಯಿಸಿದರು! ಅವರಲ್ಲದೇ ಅಲ್ಲಿ ನನ್ನನ್ನು ಮಾತನಾಡಿಸಿದ ಇನ್ನೋರ್ವರೆಂದರೆ, ಒರ್ವ ರಿಯಲ್-ಎಸ್ಟೇಟ್ ಕಂ ಇನ್ಸೂರೆನ್ಸ್ ಏಜೆಂಟ್ "ಕನ್ನಡಿಗ"ರು. ಆ ತೊಂಬತ್ತರ ದಶಕದಲ್ಲಿ ಇಮಿಗ್ರೇಷನ್ ಲಾಯರ್ರುಗಳು ಭಾರೀ ಬಿಜಿಯಾಗಿದ್ದರು, ಈಗ ಅವರುಗಳೂ "ಅಕ್ಕ"ದಲ್ಲಿದ್ದಾರೆಂದು ಬಲ್ಲವರು ಹೇಳುತ್ತಾರೆ!

ಪ್ರಚಾರಪ್ರಿಯತೆ ಆಧುನಿಕ ಪ್ರಪಂಚದಲ್ಲಿ ಮಾನವನಿಗೆ ತಟ್ಟಿರುವ ಬಹುದೊಡ್ಡ ರೋಗ. ಈ ರೋಗದ ಕಾರಣವಾಗಿಯೇ ಈ ಸಮ್ಮೇಳನಗಳು ಏರ್ಪಡುವುದು. ಇಲ್ಲಿನ ಸಾಕಷ್ಟು ಅಮೇರಿಕನ್ನಡಿಗರಿಗೆ "ರಾಜ್ಯಪ್ರಶಸ್ತಿ"ಯ ರೋಗ ತಟ್ಟಿಕೊಂಡಿದೆ. ಕ್ಯಾಪಿಟಲಿಸ್ಟ್ ಅಮೇರಿಕಾದಲ್ಲಿ ಯಾವುದೇ ಕಾರ್ಯಕ್ಕೂ "೧-೮೦೦-ಸಹಾಯ" ಎಂಬ ಟೋಲ್ ಫ್ರೀ ನಂಬರಿನ ಸೇವೆಗಳಿದ್ದಾವೆ. ನಿಮ್ಮ ಮನೆ ಗುಡಿಸಬೇಕೆ, ’೧-೮೦೦-ಗುಡಿಸು’ ಫೋನಾಯಿಸಿ. ಡಾಕ್ಟರ್ ಬೇಕೆ, ’೧-೮೦೦-ಡಾಕ್ಟರ್’ ಫೋನಾಯಿಸಿ. ಹುಡುಗಿ ಬೇಕೆ, ೧-೮೦೦-ಹುಡುಗಿ. ಹುಡುಗ ಬೇಕೆ, ೧-೮೦೦-ಹುಡುಗ! ದುಡ್ಡಿದ್ದರೆ ನಿಮಗೆ ಸೇವೆ. ಈ ರೀತಿಯ ಸೇವೆ ಭಾರತದಲ್ಲಿ ಎಷ್ಟೇ ದುಡ್ಡು ಸುರಿದರೂ ಸಿಕ್ಕದು. ಇಲ್ಲಿನ ಸಂಸ್ಥೆಗಳು ಗ್ರಾಹಕ ಸಂತೃಪ್ತಿಯನ್ನು ಗಂಭೀರವಾಗಿ ಪರಿಗಣಿಸುತ್ತವೆ. ಇದರ ಬಗ್ಗೆ ಇನ್ನೊಂದು ಮಾತಿಲ್ಲ.

ಇರಲಿ, ವಿಷಯ ಹೀಗಿರುವಾಗ ತಲೆಗೆ ಇನ್ನೂರು ಡಾಲರ್ ತೆಗೆದುಕೊಂಡು, ಎಲ್ಲಾ ೧-೮೦೦-ನಂಬರಿನಲ್ಲಿ ಪಾರ್ಟಿ ಅರೇಂಜ್ ಮಾಡುವುದು ಅಂತಹ ಸಂಕಷ್ಟಕರ ಸಂಗತಿಯೆಂದು ನನಗಂತೂ ಅನಿಸದು. ಇಂತಹ ಮಾಹಿತಿಯನ್ನು ತಿಳಿದೂ ಸಹ ನಮ್ಮ ಸುದ್ದಿ ಮಾಧ್ಯಮಗಳು ರಾಜಕಾರಣಿಗಳಿಗೆ ನಾವೇನೂ ಕಮ್ಮಿ ಎಂಬಂತೆ "ಅಕ್ಕ" ಸಮ್ಮೇಳನವನ್ನು ಅದ್ಭುತವೆಂಬಂತೆ ಚಿತ್ರಿಸಿ ಕರ್ನಾಟಕದ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿದುದನ್ನು ನೋಡಲಾರದೆ ಈ ಕುರಿತಾಗಿ ನನ್ನ ಅನಿಸಿಕೆಗಳನ್ನು ಬರೆದಿದ್ದೇನೆ, ಚಿಂತಿಸಿ ಮಂಥಿಸಿ.

ಅಣಕ:

ಈ ಬಾರಿಯ ’ಅಕ್ಕ’ ಸಮ್ಮೇಳನಕ್ಕೆ ನನ್ನ ಫೇವರೈಟ್ ರಾಜಕಾರಣಿ ರೇಣುಕಾಚಾರ್ಯ ಬರುತ್ತಿದ್ದಾರೆ, "ಬಿ ವೇರ್ ಅಮೇರಿಕನ್ನಡತಿಯರೆ!"

"ಡೋಂಟ್ ವರ್ರಿ, ಅಮೇರಿಕನ್ನಡತಿಯರೇ ಅವರೊಂದಿಗೆ ನಾನೂ ಇದ್ದೇನೆ" ಎನ್ನುತ್ತಿದ್ದಾರೆ ಮಿಸೆಸ್.ರೇಣುಕಾಚಾರ್ಯರು, ಕೈಯಲ್ಲಿ ಟೇಸರ್ ಹಿಡಿದು!

ದೇವರಿಂದಲೂ ದೇಶವನ್ನು ಕಾಪಾಡಲಾಗದು!

ಹೀಗೆಂದು ನಮ್ಮ ಸುಪ್ರೀಂ ಕೋರ್ಟ್ ಹೇಳಿದೆ. ಕೊನೆಗೂ ಭಾರತದ ಸರ್ವೋಚ್ಚ ನ್ಯಾಯಾಲಯ ಕಠೋರ ಸತ್ಯವನ್ನು ನಿಷ್ಟುರವಾಗಿ, ಅಸಹಾಯಕವಾಗಿ ಹೇಳಿದೆ.

ಹಿಂದಿನ ಲೇಖನದಲ್ಲಿ ಭಾರತ ಸ್ವಾತಂತ್ರ್ಯಗೊಂಡ ದಿನದಿಂದ ಹೇಗೆ ನಮ್ಮನ್ನಾಳಿದ ನಾಯಕರುಗಳು ಸೆಕ್ಯುಲರಿಸಂ ಅನ್ನು ಓಲೈಕೆಗೆ ತಿರುಚಿ ಯಶಸ್ವಿಯಾಗಿ ಪೋಷಿಸಿಕೊಂಡು ಬರುತ್ತಿದ್ದಾರೆಂದು ನನ್ನ ಅನಿಸಿಕೆಗಳನ್ನು ಬರೆದಿದ್ದೆ. ಅದಕ್ಕೆ ಪೂರಕವೆಂಬುವಂತೆ ಕಾಕತಾಳೀಯವಾಗಿ ಈ ವಾರ ನಮ್ಮ ಸುಪ್ರೀಂ ಕೋರ್ಟ್ ನಮ್ಮ ವಾದವನ್ನು ಒಪ್ಪಿ, ಆ ದೇವರಿಂದಲೂ ಈ ದೇಶವನ್ನು ಕಾಪಾಡುವುದು ಸಾಧ್ಯವಿಲ್ಲವೆಂದು ತೀರ್ಪಿತ್ತಿದೆಯೇನೋ!

ಇರಲಿ, ಈ ದೇಶವನ್ನು ಆ ದೇವರಿಂದಲೂ ಕಾಪಾಡುವುದು ಏಕೆ ಸಾಧ್ಯವಿಲ್ಲವೆಂಬುದನ್ನು ಮೊದಲು ನೋಡೋಣ. ನಾನು ಈ ಹಿಂದೆ ಬರೆದಂತೆ ನಮಗೆ ಸ್ವಾತಂತ್ರ್ಯವಲ್ಲ ಸಿಕ್ಕಿದ್ದು, ಸ್ವೇಚ್ಛಾಚಾರ. ಅಷ್ಟೇ ಅಲ್ಲ ಅದಕ್ಕೆ ಬೋನಸ್ ಆಗಿ "ಸೆಕ್ಯುಲರಿಸಂ", ಮತ್ತು ಬೈಪ್ರಾಡಕ್ಟ್ಸ್ ಆಗಿ ಚಳುವಳಿ, ಬಂದ್,.....ಮುಂತಾದವು.

ಕಳೆದ ವಾರದ ಲೇಖನದಲ್ಲಿ "ಭಾರತೀಯ ಸೆಕ್ಯುಲರಿಸಂ" ನ ಅಧ್ವಾನಗಳನ್ನು, ಅದಕ್ಕೆ ಪೂರಕವಾಗಿರುವ ಕಾನೂನುಗಳನ್ನು ಉಲ್ಲೇಖಿಸಿ, ಬುದ್ದಿಜೀವಿಗಳ ಬಗೆಯನ್ನು ಬಿಡಿಸಿ ಹೇಳಿದ್ದನ್ನು ಓದಿದ್ದೀರಷ್ಟೇ. ಇನ್ನು ಬೇರೆ ’ಸೆಕ್ಯುಲರ್’ ರಾಷ್ಟ್ರ್‍ಅಗಳಲ್ಲಿ ಸೆಕ್ಯುಲರಿಸಂ ಹೇಗಿರುತ್ತದೆ ಎಂಬುದನ್ನು ನೋಡೋಣ. ಅಮೇರಿಕಾ ಕೂಡಾ ಸೆಕ್ಯುಲರ್ ರಾಷ್ಟ್ರ್‍ಅ. ಇಲ್ಲಿ ಎಲ್ಲಾ ಧರ್ಮೀಯರೂ ತಮ್ಮಿಷ್ಟದ ಧರ್ಮವನ್ನು ವೈಯುಕ್ತಿಕವಾಗಿ, ಸಂಘಗಳಲ್ಲಿ ಪಾಲಿಸಿಕೊಳ್ಳಬಹುದು. ಆದರೆ ಈ ಎಲ್ಲಾ ಆಚರಣೆಗಳೂ ವೈಯುಕ್ತಿಕ. ಯಾವುದೂ ಇಲ್ಲಿನ ಕಾನೂನಿನಲ್ಲಿ ಸ್ಥಾನವನ್ನು ಪಡೆದಿಲ್ಲ. ಅಷ್ಟೇ ಏಕೆ ಕ್ರಿಸ್ಮಸ್ ಒಂದೇ ಧಾರ್ಮಿಕ ರಜೆಯಿರುವುದು ಇಲ್ಲಿ! ಅದೂ ಬಹು ಹಿಂದಿನಿಂದಲೂ ಇರುವುದರಿಂದ ಆ ರಜೆಯಿದೆ. ಆದರೆ ಈಗದನ್ನು ’ಕ್ರಿಸ್ಮಸ್’ ಎನ್ನದೇ "ಹಾಲಿಡೇ ಸೀಸನ್’ ಎಂದು ಸೂಚ್ಯವಾಗಿ ಕರೆಯಲಾರಂಭಿಸಿದ್ದಾರೆ. ಇತರೆ ಧರ್ಮದವರಿಗೆ ಕಿರಿಕಿರಿಯಾಗಬಾರದೆಂದು! ಇನ್ನೆಲ್ಲಾ ರಜೆಗಳೂ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತವೆ, ’ಥ್ಯಾಂಕ್ಸ್ ಗಿವಿಂಗ್ ಡೇ’, ’ಮೆಮೋರಿಯಲ್ ಡೇ’, ’ಇಂಡಿಪೆಂಡೆನ್ಸ್ ಡೇ’.....ಮಂತಾದವುಗಳಂತೆ. ಈ ಉದಾಹರಣೆಯನ್ನು ಕೇವಲ ಒಂದು ಸೆಕ್ಯುಲರ್ ರಾಷ್ಟ್ರ್‍ಅ ಹೇಗಿರಬೇಕೆಂದು ಹೇಳುತ್ತಿದ್ದೇನೆಯೇ ಹೊರತು, ಅಮೇರಿಕಾವನ್ನು ಮೆರೆಸಲು ಖಂಡಿತಾ ಅಲ್ಲ!

ಇನ್ನು ಮಹಾತ್ಮರು ಹುಟ್ಟು ಹಾಕಿದ ’ಬಂದ್’, ಮುಷ್ಕರಗಳ ಬಗ್ಗೆ ಬರೆಯದಿರುವುದೇ ವಾಸಿ. ಏಕೆಂದರೆ ಇವುಗಳ ಅನುಭವ ನಿಮಗೆಲ್ಲಾ ಚೆನ್ನಾಗಿಯೇ ಇದೆ. ಬಂದ್/ಮುಷ್ಕರಗಳ ಪ್ರಗತಿ ಎಲ್ಲಿಯವರೆಗೆ ಬಂದಿದೆಯೆಂದರೆ, ಪ್ರೇಮಿ ಕೈಕೊಟ್ಟನೆ? ಅವನ ಮನೆ ಮುಂದೆ ಮುಷ್ಕರ ಹೂಡು, ಸಿನಿಮಾ ನಟಿಯ ಲಂಗ ಚಿಕ್ಕದಾಯಿತೇ? ಮುಷ್ಕರ ಹೂಡು, ರಾಜಕಾರಣಿಗೆ ಅಮೇರಿಕಾ ವೀಸಾ ಸಿಕ್ಕಲಿಲ್ಲವೇ? ಅದಕ್ಕೂ ಮುಷ್ಕರ ಹೂಡು ಎನ್ನುವುದರವರೆಗೂ ಬೆಳೆದಿದೆ. ಈಗಾಗಲೇ ಕಣ್ಣು ತೆರೆಯುವ ಬಾಬಾ, ಹಾಲು ಕುಡಿಯುವ ಗಣಪತಿ, ಅಳುವ ಮೇರಿ ಮುಂತಾದ ಪವಾಡಗಳನ್ನು ನೋಡಿರುವ ಜನ, ಯಾರಾದರೂ ಸತ್ತರೆ ಅವರನ್ನು ಬದುಕಿಸು ಎಂದು ಈ ದೇವರುಗಳ ಮುಂದೆ ಮುಷ್ಕರ ಹೂಡುವುದೊಂದೇ ಬಾಕಿಯಿರುವುದು ಎನಿಸುತ್ತದೆ. ಅಲ್ಲದೇ, ಮುಷ್ಕರಗಳಲ್ಲಿ ಕ್ರಿಯೇಟಿವಿಟಿಯೂ ಸೇರಿದೆ. ಕಪ್ಪುಪಟ್ಟಿ ಧರಿಸಿ, ತಲೆ ಬೋಳಿಸಿ, ಅರೆನಗ್ನರಾಗಿ, ಕಂಬ ಹತ್ತಿ, ಕತ್ತೆ ಸಿಂಗರಿಸಿ..............

ಇನ್ನು ಅಧಿಕಾರಿಗಳು, ಸರ್ಕಾರೀ ನೌಕರರ ಲಂಚದ ಕತೆಗಳನ್ನು ನಮ್ಮ ಮಾಧ್ಯಮಗಳು ಲೋಕಾಯುಕ್ತರೊಡಗೂಡಿ ರೋಚಕವಾಗಿ ಆಗಾಗ್ಗೆ ಪ್ರಕಟಿಸುತ್ತಿರುತ್ತವೆ. ಆದರೆ ಆ ನಂತರ ಆ ಕತೆಗಳ ಅಂತ್ಯ ಹೇಗಾಯಿತೆಂಬುದು ಮಾತ್ರ ಚಿದಂಬರ ರಹಸ್ಯ!

ಅದೇ ರೀತಿ ಕಾನೂನು ಚಾಲನೆಯೂ ತುಂಬಾ ಸೆಕ್ಯುಲರ್ ಆಗಿದೆ. ಯಾವುದೇ ಅಪರಾಧಕ್ಕೆ ಗೊತ್ತಿದ್ದೋ/ಗೊತ್ತಿಲ್ಲದೆಯೋ ಪರೋಕ್ಷವಾಗಿ ಸಹಾಯವೆಸಗಿದ್ದರೆ ಅಂತವರನ್ನು ಬಂಧಿಸಿ ವಿಚಾರಿಸಿ ಶಿಕ್ಷೆಗೆ ಒಳಪಡಿಸುವುದು ನಮ್ಮ ಒಂದು ಕಾನೂನು. ಆದರೆ ಅದರ ಅನುಷ್ಟಾನ ಮಾತ್ರ ಅಜಗಜಾಂತರ. ಉದಾಹರಣೆಗೆ ಕಳೆದ ವರ್ಷ ಗ್ಲಾಸ್ಗೋ ವಿಮಾನನಿಲ್ದಾಣಕ್ಕೆ ಬಾಂಬುಗಳು ತುಂಬಿದ್ದ ಜೀಪನ್ನೋಡಿಸಿದ ಕಫೀಲ, ತನ್ನ ಕಾರ್ಯದ ಮುನ್ನ ಅವನ ತಾಯಿಗೆ ಫೋನಾಯಿಸಿ ’ಇಂದಿನ ದಿನವೇ ಆದಿನ’ ಎಂದು ತಿಳಿಸಿದನೆಂದು ಸುದ್ದಿಗಳಲ್ಲಿ ಓದಿದ್ದೀರಿ ತಾನೆ. ಹಾಗೆ ತನ್ನ ಘನಕಾರ್ಯವನ್ನು ಸ್ವತಃ ತಿಳಿಸಿದರೂ, ಅದನ್ನು ಪೊಲೀಸರಿಗೆ ತಿಳಿಸದ ಆ ತಾಯಿಯನ್ನು ನಮ್ಮ ಪೊಲೀಸರು "ಅಪರಾಧ ಮುಚ್ಚಿಟ್ಟ" ಅಪರಾಧದ ಮೇಲೆ ಕೇಸನ್ನು ಹಾಕಿ ಕೋರ್ಟಿನಲ್ಲಿ ವಿಚಾರಣೆಯಾಯಿತೇ? ವೀರಪ್ಪನ್ ನಿಗೆ ಭಯದಿಂದ ಊಟ ಕೊಟ್ಟವರು, ನೀರು ಕೊಟ್ಟವರು, ಕೇವಲ ಅವನ ಊರಿನವರು ಎಂದೆಲ್ಲಾ ಆ ಹಳ್ಳಿಗರನ್ನು ಹಿಡಿದು ವಿಚಾರಣೆ ಮಾಡಿರುವಾಗ, ದಾಖಲೆ/ಸಾಕ್ಷಿಗಳಿದ್ದರೂ ಕಲೀಫನ ತಾಯಿಯನ್ನು ನಮ್ಮ ಪೊಲೀಸರು ಯಾಕೆ ಬಂಧಿಸಲಿಲ್ಲವೆಂಬುದೂ ನಮ್ಮ ’ಸೆಕ್ಯುಲರಿಸಂ’ ನ ಪರಿಣಾಮ! ಅಷ್ಟೇ ಅಲ್ಲ, ಒಬ್ಬ ಅನಿವಾಸೀ ಭಾರತೀಯ ಸಂಶಿತ ಅಪರಾಧಿ (ಉಗ್ರವಾದ), ಜಾಮೀನು ಪಡೆದು ಭಾರತಕ್ಕೆ ಹಿಂದಿರುಗಿದೊಡನೆ ’ಸೆಕ್ಯುಲರ್’ ಮುಖ್ಯಮಂತ್ರಿ ಖುದ್ದಾಗಿ ಭೇಟಿ ಮಾಡಿ, ಸರ್ಕಾರೀ ಉದ್ಯೋಗದ ಬಹುಮಾನವನ್ನು ಕೊಡುವುದರ ಮಟ್ಟಿಗೆ ನಮ್ಮ ಸೆಕ್ಯುಲರಿಸಂ ಬೆಳೆದಿದೆ. ಆದರೆ ನ್ಯೂಯಾರ್ಕ್ ನ ೯೧೧ ಭಯೋತ್ಪಾದಕರ ದಾಳಿಯಲ್ಲಿ ’ಮಡಿದ’ ಕರ್ನಾಟಕ ಮೂಲದ ಸಾಫ್ಟ್ವೇರ್ ಎಂಜಿನಿಯರರುಗಳಿಗೆ ಏನಾದರೂ ಗೌರವ ಸೂಚಿಸಿತೇ ನಮ್ಮ ಅಂದಿನ "ಸೆಕ್ಯುಲರ್" ಸರಕಾರ?

ಇರಲಿ, ಇದಕ್ಕೆಲ್ಲಾ ಪರಿಹಾರವಿರುವುದು ನಮ್ಮ ನ್ಯಾಯಾಂಗದಲ್ಲಿ ಮಾತ್ರ. ನಮ್ಮ ಸುಪ್ರೀಂ ಕೋರ್ಟ್ ನ್ಯಾಯಾಂಗವನ್ನು ಸರಿಯಾಗಿ ಅನುಷ್ಟಾನಗೊಳಿಸುವಲ್ಲಿ ಚಿತ್ತ ಹರಿಸಿ ರಾಷ್ಟ್ರ್‍ಅವನ್ನು ಸರಿದಾರಿಯಲ್ಲಿ ನಡೆಸುತ್ತದೆಂದು ಆಶಿಸುತ್ತಿರುವಾಗಿ, "ಈ ದೇಶವನ್ನು ಆ ದೇವರಿಂದಲೂ ಕಾಪಾಡಲಾಗದು" ಎಂಬ ಹೇಳಿಕೆ ನಮ್ಮ ನ್ಯಾಯಾಂಗದ ಹತಾಶತೆಯ ಪರಮಾವಧಿಯೆನಿಸುತ್ತದೆ.

ಯಾರಿಗೆ ಗೊತ್ತು? ನ್ಯಾಯಾಂಗವು ಕೂಡ ನಮ್ಮ ಶಾಸಕಾಂಗದ ರೀತಿ "ಪತ್ರಿಕಾ ಪ್ರಚಾರ"ದ ಹಪಹಪಿಗಾಗಿ ಪರಿತಪಿಸುತ್ತ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದೆಯೇನೋ!

ಸ್ವಾತಂತ್ರ್ಯೋತ್ಸವದ ಶುಭಾಶಯಗಳು!

ಅಣಕ:

ಸ್ವಾತಂತ್ರ್ಯ ಹೋರಾಟದ ಸಿಪಾಯಿದಂಗೆ ಬಗ್ಗೆ ಓದಿದ್ದೀರಿ ತಾನೆ! ಇದರ ಬಗ್ಗೆ ನನ್ನ ಅಮೇರಿಕನ್ ಮಿತ್ರನೊಬ್ಬ ಹೇಳಿದ್ದೇನೆಂದರೆ, ಭಾರತೀಯರು ಈಗಿನಿಂದಷ್ಟೇ ಅಲ್ಲದೆ ಬಹು ಹಿಂದಿನಿಂದಲೂ ಗಾಳಿಸುದ್ದಿ ಪ್ರಿಯರಂತೆ. ಅದಕ್ಕೆ ಸಾಕ್ಷ್ಯವಾಗಿ ನಮ್ಮ ಸಿಪಾಯಿದಂಗೆ ಕುರಿತು ಈ ರೀತಿಯಾಗಿ ಹೇಳಿದನು - ಬಂದೂಕನ್ನು ಪಾಲೀಷ್ ಮಾಡಲು ಅಂದು ಯುರೋಪಿನಾದ್ಯಂತ ಪ್ರಾಣಿಜನ್ಯ ಕೊಬ್ಬನ್ನು ಉಪಯೋಗಿಸುತ್ತಿದ್ದರು. ಸಹಜವಾಗಿ ಈ ಕೊಬ್ಬು, ಕೊಬ್ಬುಭರಿತ ದನ/ಹಂದಿಗಳ ಕೊಬ್ಬಿನಿಂದ ಮಾಡಿದ್ದುದು. ಸರಿ, ಇದನ್ನು ತಿಳಿದುಕೊಂಡ ಒಬ್ಬ ಸಿಪಾಯಿ ’ಮಹಾತ್ಮ’ ನಾವುಗಳು ಇಂದು ಇತಿಹಾಸದಲ್ಲಿ ಓದುವಂತೆ "ಹಿಂದೂಗಳಿಗೆ ಹಸುವಿನ ಕೊಬ್ಬನ್ನೂ, ಮುಸ್ಲಿಮರಿಗೆ ಹಂದಿ ಕೊಬ್ಬನ್ನು ಕೊಟ್ಟು ಜಾತಿ ಕೆಡಿಸುತ್ತಿದ್ದಾರೆ" ಎಂಬ ಗಾಳಿಸುದ್ದಿಯನ್ನು ಹಬ್ಬಿಸಿದನಂತೆ! ಆ ಗಾಳಿಸುದ್ದಿಯೇ ಕೂಸೇ ನಮ್ಮ ಸಿಪಾಯಿದಂಗೆ ಎಂದನು!

ಯಾಕೋ ನನ್ನ ಅಮೇರಿಕನ್ ಮಿತ್ರನು ಹೇಳಿದ್ದುದು ನಿಜವೇನೋ ಎನಿಸುತ್ತದೆ!

ಬೆಂಗಳೂರ ಬಾಂಬು ಮತ್ತು ಭಾರತೀಯ ಸೆಕ್ಯುಲರಿಸಮ್ಮೂ!

ಅಂತೂ ಕೊನೆಗೆ ಬೆಂಗಳೂರಿನಲ್ಲಿಯೂ ಬಾಂಬುಗಳು ಸಿಡಿದಿವೆ. ಇದು ಅಸಲೀ ಭಯೋತ್ಪಾದಕರ ಬಾಂಬುಗಳೋ, ಅಥವಾ ರಿಯಲ್ ಎಸ್ಟೇಟಿಗರು ’ಮಾಮೂಲಿ’ ಕೊಡಲಿಲ್ಲವೆಂದು ರೌಡಿ ಪಡೆಗಳು ಬಾಂಬಿಸಿದರೋ ಅಥವಾ ಬಿಜೆಪಿಗಳು ಹೇಳಿಕೊಳ್ಳುವಂತೆ ಅವರ ವಿರೋಧಿಗಳು ಸಿಡಿಸಿದರೋ ಎಂಬ ಜಿಜ್ಞಾಸೆಗಳು ಜನರಲ್ಲಿ ಮೂಡಿವೆಯೋ ಅಥವಾ ಮೂಡಿಸಿದ್ದಾರೋ! ಒಟ್ಟಾರೆ ಬೆಂಗಳೂರಿನಲ್ಲಿ ಬಾಂಬುಗಳು ಸಿಡಿದಿವೆ. ನನ್ನ ಬರಹಗಳನ್ನು ಓದಿ, ಆಗಾಗ್ಗೆ ಪ್ರತಿಕ್ರಿಯಿಸುವ ಓದುಗ ಮಿತ್ರ ನಂದಕುಮಾರ್, ಈ ವಿಷಯವಾಗಿ ಈವಾರ ಬರೆಯಿರೆಂದು ಸಲಹೆ ಕೂಡಾ ಕೊಟ್ಟಿದ್ದರು.

ಹೀಗೊಮ್ಮೆ ಯೋಚಿಸಿ ನೋಡಿ, ಈ ಭಯೋತ್ಪಾದನೆಗೆ (ವಿಶ್ವದ್ದಲ್ಲ, ಭಾರತದ ಭಯೋತ್ಪಾದನೆ) ಮೂಲ ಕಾರಣಗಳೇನು ಎಂದು!

ಯಾವುದೇ ದೇಶದ ಜನನಾಯಕರು ದೂರದೃಷ್ಟಿಯಿಲ್ಲದೇ ಹೋರಾಟ/ಕ್ರಾಂತಿಗಳನ್ನು ಭಾವುಕರಾಗಿ ಕ್ರಾಂತಿಸಿದರೆ ಆ ದೇಶದಲ್ಲಿ ಏನಾಗಬಹುದು ಎಂಬುದಕ್ಕೆ ನಮ್ಮ ಭಾರತ ಒಂದು ಉತ್ತಮ ಉದಾಹರ್‍ಅಣೆ. ನಾನು ಆಗಷ್ಟೇ ’ಕಾರ್ಪೋರೇಟ್’ ಪ್ರಪಂಚಕ್ಕೆ ಸೇರಿದ್ದೆ. ಆಗ ನನ್ನ ಬಾಸ್ ನನಗೆ ’ನೀನು ಯಾವತ್ತೂ ವ್ಯವಹಾರದಲ್ಲಿ, ಉದ್ಯೋಗದಲ್ಲಿ ಹೃದಯವನ್ನು ಇಡಬೇಡ. ಕಂಪೆನಿ ಸಂಬಳ ಕೊಡುವುದು ನಿನ್ನ ತಲೆಗೆ ಮಾತ್ರ. ಹಾಗಾಗಿ ನಿನ್ನ ಕೆಲಸದಲ್ಲಿ ಯಾವುದೇ ಭಾವನೆಗಳಿಗೂ ಅವಕಾಶ ಕೊಡದೆ ನಿಷ್ಟುರವಾಗಿ ಕೆಲಸದ/ಕಂಪೆನಿಯ ಒಳಿತಿಗೆ ನಿನ್ನ ತಲೆಯನ್ನು ಮಾತ್ರ ಉಪಯೋಗಿಸು. ನಿನ್ನ ಹೃದಯವನ್ನು ನಿನ್ನ ಕುಟುಂಬಕ್ಕೂ, ಕತೆ/ಕವನಗಳಿಗೂ ಉಪಯೋಗಿಸು’ ಎಂದು ಉಪದೇಶಿಸಿದ್ದ. ಅದು ನಮ್ಮ ರಾಷ್ಟ್ರ್‍ಅ ನಾಯಕರುಗಳಿಗೂ ಎಷ್ಟೊಂದು ಚೆನ್ನಾಗಿ ಅನ್ವಯವಾಗುತ್ತದಲ್ಲವೇ ಎಂದೆನಿಸುತ್ತದೆ. ಎಲ್ಲಿ ನಿಷ್ಟುರ, ಧೃಢನಿರ್ಧಾರಗಳನ್ನು ತೆಗೆದುಕೊಳ್ಳಬೇಕಿತ್ತೋ ಅಲ್ಲಿ ಹೃದಯವನ್ನಿಟ್ಟು ದೇಶಕ್ಕೆ ಎಷ್ಟೋ ಹಾನಿ ಮಾಡಿದ್ದಾರೆನಿಸುತ್ತದೆ!

ಇರಲಿ, ಈ ಭಯೋತ್ಪಾದನೆಯ ಮೂಲ ಪಾಕಿಸ್ತಾನವೆ? ಒಸಾಮಾ ನೆ? ಮುಸ್ಲಿಮರೇ? ಖಂಡಿತವಾಗಿಯೂ ಅಲ್ಲ. ಇದರ ಮೂಲ ಕಾರಣ ಇಂದಿನ ಮನಮೋಹನ್ ಸಿಂಗ್ ರಿಂದ ಹಿಡಿದು ಅಂದಿನ ಮೋಹನ್ ಗಾಂಧಿವರೆಗೆ ಭಾರತದ ಭೂತ/ವರ್ತಮಾನದ ಜನನಾಯಕರುಗಳು. ಎಲ್ಲಿ ಜನನಾಯಕರುಗಳು ದೂರದೃಷ್ಟಿಯಿಲ್ಲದೇ ಹೋರಾಟಗಳನ್ನೂ, ಕ್ರಾಂತಿಗಳನ್ನು ಕೇವಲ ಭಾವನೆಗಳ ಬಂಡವಾಳದ ಮೇಲೆ ನಿರೂಪಿಸುತ್ತಾರೋ, ಆ ರಾಷ್ಟ್ರಗಳು ಎಲ್ಲಾ ತರಹದ ದುರ್ಬಲತೆಗಳಿಗೆ ತೆರೆದುಕೊಂಡಿರುತ್ತದೆ ಎಂದೆನಿಸುತ್ತದೆ. ಇದು ಭಾರತವಾಗಬಹುದು, ಪಾಕಿಸ್ತಾನವಾಗಬಹುದು, ಬಾಂಗ್ಲಾ ಆಗಬಹುದು, ರಷ್ಯಾ, ಅಮೇರಿಕಾ, ಕೊರಿಯಾ, ಅಫ್ಘಾನಿಸ್ತಾನ...ಯಾವುದಾದರೂ ದೇಶವಾಗಬಹುದು.

ಅಂದು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕೇವಲ ಸ್ವಾತಂತ್ರ್ಯ ಪಡೆಯುವುದೊಂದೇ ಉದ್ದೇಶವನ್ನು ಹೊಂದಿ, ಸ್ವಾತಂತ್ರ್ಯ ಚಳುವಳಿಯನ್ನು ರೂಪಿಸಿದರೇ ಹೊರತು, ಸ್ವಾತಂತ್ರ್ಯಾನಂತರದ ಭಾರತವನ್ನು ಅವರು ಯೋಚಿಸಲೇ ಇಲ್ಲ. ಅವರಲ್ಲಿ ವಿದೇಶೀ ಗುಲಾಮಗಿರಿಯಿಂದ ಹೊರಬರಬೇಕೆಂಬ ತುಡಿತವಿತ್ತೇ ವಿನಹ ಮುಂದೇನು? ಎಂಬ ದೂರದೃಷ್ಟಿತ್ವವಿರಲಿಲ್ಲ. ’ಸ್ವಾತಂತ್ರ್ಯ ಸಿಕ್ಕಲಿ, ಆಮೇಲೆ ನೋಡಿಕೊಳ್ಳೋಣ. ಬ್ರಿಟಿಷರಿಗಿಂತ ನಾವು ಉತ್ತಮವಲ್ಲವೇ!’ ಎಂಬ ಸ್ವಪ್ರತಿಷ್ಟೆ ಕಾರಣವಾಗಿತ್ತೋ ಅಥವಾ ಆತ್ಮವಿಶ್ವಾಸ ತುಳುಕುತ್ತಿತ್ತೋ ನಾನರಿಯೇ. ಒಟ್ಟಾರೆ ಭರಪೂರ ಭಾವನೆಗಳ ಪ್ರವಾಹವಂತೂ ಅದಾಗಿತ್ತು.

ಸರಿ, ಆ ಹೋರಾಟದ ಫ಼ಲವಾಗಿ ಸ್ವಾತಂತ್ರ್ಯ ಪಡೆಯಲು ಧರ್ಮದ ಮೇಲೆ ದೇಶವನ್ನು ವಿಭಜಿಸುವ ಒಪ್ಪಂದವನ್ನು ಒಪ್ಪಿ, ಆ ಒಪ್ಪಂದವನ್ನು ಧೃಢವಾಗಿ, ನಿಷ್ಟುರವಾಗಿ ಅನುಷ್ಟಾನಗೊಳಿಸದೆ ಮತ್ತೆ ಭಾವನೆಗಳ ಪ್ರವಾಹವನ್ನು ತೆರೆದು "ಭಾರತದಲ್ಲಿನ ಭಯೋತ್ಪಾದನೆ"ಗೆ ಬೀಜ ನೆಟ್ಟಿದ್ದು ಇನ್ನೊಂದು ತಪ್ಪು. ಆ ತಪ್ಪನ್ನು ಮರೆಮಾಚಲು ಮತ್ತೆ ಭಾವುಕರಾಗಿ ಭಾರತ ಸೆಕ್ಯುಲರ್ ದೇಶ, ನಮ್ಮದು ಧರ್ಮಾಧರಿತ ರಾಷ್ಟ್ರವಲ್ಲ ಎಂದದ್ದು ಅತ್ಯುತ್ತಮವಾದ, ಉನ್ನತವಾದ ಉದ್ದೇಶವೇ ಆದರೂ ಅದರ ಅನುಷ್ಟಾನ ಹೇಗಾಯಿತು ಎಂಬುದನ್ನು ಕೊಂಚ ನಾವುಗಳು ಅವಲೋಕಿಸಬೇಕು.

ನಂತರದ ಸ್ವತಂತ್ರ ಸೆಕ್ಯುಲರ್ ಭಾರತದಲ್ಲಿ ಸಾಕಷ್ಟು ಕಾನೂನುಗಳು ಧರ್ಮಾಧರಿತವಾಗಿ ರೂಪುಗೊಂಡವು. ಉದಾ: ಹಿಂದೂ ಮ್ಯಾರೇಜ್ ಆಕ್ಟ್, ಮುಸ್ಲಿಂ ಮ್ಯಾರೇಜ್ ಆಕ್ಟ್, ಕ್ರಿಶ್ಚಿಯನ್ ಮ್ಯಾರೇಜ್ ಆಕ್ಟ್...ಇತ್ಯಾದಿ. ಪ್ರಪಂಚದ ಇನ್ಯಾವುದೇ ಸೆಕ್ಯುಲರ್ ದೇಶದಲ್ಲಿ ಧರ್ಮಾಧರಿತವಾದ ಕಾನೂನುಗಳಿಲ್ಲ! ಧರ್ಮಾಧರಿತವಾದ ಕಾನೂನುಗಳಿರುವ ದೇಶಗಳು "ಸೆಕ್ಯುಲರ್" ಅಲ್ಲವೆಂಬುದು ನಮಗೆ ಎಂದು ಅರಿವಾಗುವುದೋ!

ಸೆಕ್ಯುಲರ್ ಪದದ ಅರ್ಥವನ್ನು ಭಾರತ ’ಓಲೈಕೆ’ಗೆ ಅರ್ಥೈಸಿರುವುದು ಇಂದು ನೆನ್ನೆಯಲ್ಲ, ತನ್ನ ಸ್ವಾತಂತ್ರ್ಯ ಸಿಕ್ಕ ಘಳಿಗೆಯಲ್ಲೇ ಹಾಗೆ ವ್ಯಾಖ್ಯಾನಿಸಿದೆ. ಆ ಸೆಕ್ಯುಲರಿಸಂ, ಭಾರತದ ಮುಂದಿನ ಪೀಳಿಗೆಯ ಜನನಾಯಕರುಗಳ ಪೋಷಣೆಯಲ್ಲಿ ಹೆಮ್ಮರವಾಗಿ ಬೆಳೆಯುತ್ತಾ ಧರ್ಮಗಳಿಂದ, ಜಾತಿಗಳಿಗೆ, ಉಪಜಾತಿಗಳಿಗೆ, ಭಾಷೆಗಳಿಗೆ ಹಬ್ಬುತ್ತಾ, ಎಲ್ಲೆಲ್ಲಿ ಭಾರತೀಯ ಅರ್ಥದ ಸೆಕ್ಯುಲರಿಸಂ ಸಾಧ್ಯವೋ ಅಲ್ಲೆಲ್ಲಾ ಹಬ್ಬುತ್ತಿದೆ.

ಅಸ್ಪರ್ಶತೆಯನ್ನು ಹೋಗಲಾಡಿಸಲು, ಅಸ್ಪರ್ಶತೆ ’ರಾಷ್ಟ್ರೀಯ ಅಪರಾಧ’ವೆಂದು ಘೋಷಿಸಿ, ದೇಶದ ಎಲ್ಲಾ ಮಕ್ಕಳಿಗೂ ವಿದ್ಯಾಭ್ಯಾಸ ಕಡ್ಡಾಯವಾಗಿಸಿ, ಈ ಮಕ್ಕಳಿಗೆ ಯಾವುದೇ ಭೇಧವನ್ನು ತೋರುವವರನ್ನು ಉಗ್ರಶಿಕ್ಷೆಗೆ ಗುರಿಪಡಿಸುವ ಕಾನೂನುಗಳನ್ನು ಮಾಡದೆ, ಮೇಲ್ಜಾತಿ, ಕೆಳಜಾತಿ ಎರಡೂ ವರ್ಗಗಳನ್ನು ಓಲೈಸುವ ಕಾನೂನುಗಳನ್ನು ಮಾಡಿದ್ದುದು, ನಂತರ ದಲಿತರನ್ನು ಇನ್ನೂ ಹೆಚ್ಚಾಗಿ ಪೈಪೋಟಿಯಲ್ಲಿ ಓಲೈಸಲು ಹುಚ್ಚುಚ್ಚಾಗಿ ಕಾನೂನುಗಳನ್ನು ಮಾಡಿದ್ದುದು. ಉದಾಹರಣೆಗೆ ಜಾತಿನಿಂದನೆ ಕಾನೂನನ್ನೇ ತೆಗೆದುಕೊಳ್ಳಿ. ಇದರ ಉದ್ದೇಶ ಘನವಾದುದೇ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಕಾನೂನಿನ ಅನುಷ್ಟಾನ ಮಾತ್ರ ’ಸೆಕ್ಯುಲರ್’ ಆಗಿದೆ. ಯಾವುದೇ ಜಾತಿನಿಂದನೆಯನ್ನು ಅಪರಾಧವಾಗಿಸಬೇಕಾದ ನಮ್ಮ ಕಾನೂನು, ಕೇವಲ ದಲಿತರ ಜಾತಿನಿಂದನೆ ಮಾತ್ರ ಅಪರಾಧವೆಂದು ಪರಿಗಣಿಸುತ್ತದೆ. ಇಂದು ನೀವು ಮೇಲ್ಜಾತಿಯ ಬ್ರಾಹ್ಮಣರನ್ನು ’ಪುಳ್ಚಾರಿ’, ’ಅಯ್ಯಂಗಾರೀ’, ’ಜುಟ್ಟು’, ’ಥ್ರೆಡ್’, ಇನ್ನೂ ಏನೇನೋ ವಿಧವಾಗಿ ನಿಂದಿಸಬಹುದು. ಆದರೆ ದಲಿತರನ್ನು ಮಾತ್ರ ಜಾತಿನಿಂದನೆ ಮಾಡುವಂತಿಲ್ಲ. ಈ ಬ್ರಾಹ್ಮಣ ನಿಂದನೆ ತಮಿಳು ಸಿನಿಮಾಗಳ ಕಾಮೆಡಿ ಸೀನುಗಳಲ್ಲಿ ಭಾರೀ ಅತಿರೇಕಕ್ಕೆ ಹೋಗಿರುತ್ತದೆ. ನಮ್ಮ ಕಾನೂನುಗಳೇ ನಮ್ಮನ್ನು ಜಾತಿ/ಧರ್ಮಗಳ ಕೂಪಕ್ಕೆ ತಳ್ಳುತ್ತಿರುವಾಗ ಅದ್ಯಾವ ಪ್ರಜೆಗೆ "ರಾಷ್ಟ್ರ್‍ಈಯತೆ"ಯ ಅರಿವು ಮೂಡಲು ಸಾಧ್ಯ?

ಈ ಓಲೈಕೆಯ ದೆಸೆಯಿಂದಾಗಿ ಇಂದು ಉತ್ತರ ಭಾರತದಲ್ಲಿ ಜಾಟ್, ಬ್ರಾಹ್ಮಣ್, ಬನಿಯಾ ಎಂದೂ ದಕ್ಷಿಣದಲ್ಲಿ ವಣ್ಣಿಯಾರ್, ಚೆಟ್ಟಿಯಾರ್, ರೆಡ್ಡಿ, ಕಮ್ಮ, ಕಾಪು ಎಂದೂ, ಇನ್ನೂ ಕಂಡು ಕೇಳರಿಯದ ಜಾತಿಗಳೂ ರಾಜಕೀಯ ಪ್ರಾಧಾನ್ಯತೆಗಾಗಿ, ಓಲೈಕೆಗಾಗಿ ಬಡಿದಾಡುತ್ತಿವೆ. ಹಾಗೆಯೇ ನಮ್ಮಲ್ಲೂ ವೀರಶೈವ, ಒಕ್ಕಲಿಗ, ಕುರುಬ....ಇನ್ನೂ ಏನೇನೋ ಜಾತಿಗಳು ಪೈಪೋಟಿ ನಡೆಸುತ್ತಿವೆ. ಓಲೈಕೆಗೂ, ಭಯೋತ್ಪಾದನೆಗೂ ಏನಪ್ಪಾ ಸಂಬಂಧವೆನ್ನುವಿರಾ?

ಇನ್ನು ನೇರ ಆ ವಿಷಯಕ್ಕೆ ಬರೋಣ. ಧರ್ಮದ ಭಾವುಕ ಭಾವನೆ ಮತ್ತು ಜಗದ ಜಂಜಾಟಗಳಲ್ಲಿ ತೊಳಲುತ್ತಿದ್ದ ಕೆಲವು ಮುಸ್ಲಿಂ ಯುವಕರಿಗೆ ಹಣಕಾಸು ನೆರವು ನೀಡಿ, ಅವರುಗಳ ಧಾರ್ಮಿಕ ಭಾವನೆಗಳ ಯಶಸ್ವೀ ಶೋಷಣೆಯಾಗಿ, ಅವರನ್ನು ಭಯೋತ್ಪಾದಕರನ್ನಾಗಿಸಿರುವುದು ಕೆಲವು ವಿದೇಶೀ ಶಕ್ತಿಗಳು. ಈ ವಿದೇಶೀ ಶಕ್ತಿಗಳಿಗೂ ಮತ್ತು ಭಯೋತ್ಪಾದಕರಾಗಿರುವ ನಮ್ಮ ಭಾರತೀಯರಿಗೂ ಇರುವ ಸಾಮ್ಯತೆ ಧರ್ಮವೊಂದೇ. ಆ ಒಂದು ಸಾಮ್ಯತೆ ಹಲವಾರು ಭಾವುಕರನ್ನು ದುರ್ಬಲಗೊಳಿಸಿಬಿಡುತ್ತದೆ. ಇದು ಕೇವಲ ಧರ್ಮವಾಗಿರಬೇಕಿಲ್ಲ, ಭಾಷೆಯೂ ಆಗಬಹುದು. ಅಥವಾ ಹದಿಹರೆಯದ ಬಿಸಿರಕ್ತದ, ಏನನ್ನಾದರೂ ಡಿಫರೆಂಟಾಗಿ ಮಾಡಬೇಕೆನ್ನುವ ಯುವಕರ ದುರ್ಬಳಕೆಯೂ ಇದಾಗಬಹುದು. ಈ ಕುರಿತಾಗಿ ನನ್ನ "ಅಲ್ ಲಾಹ್ ಹು ಅಕ್ಬರ್, ಕೃಷ್ಣ ಕೃಷ್ಣ ಹರೇ ಹರೇ" ಎಂಬ ಲೇಖನವನ್ನೊಮ್ಮೆ ಓದಿ ನೋಡಿ. ಭಾಷಾ ಸಾಮ್ಯತೆಯಿರುವ ಎಲ್.ಟಿ.ಟಿ.ಇ. ಉಗ್ರರ ಕುರಿತು ಹಲವಾರು ತಮಿಳರು ಮೃದು ಧೋರಣೆಯನ್ನು ಹೊಂದಿರುತ್ತಾರೆ!

ನಿಮ್ಮನ್ನು ನೀವೇ ಪರೀಕ್ಷಿಸಿಕೊಂಡು ನೋಡಿ. ನೀವು ಮೆಚ್ಚುವ ನಟನೋ, ನಟಿಯೋ, ರಾಜಕಾರಣಿಯೋ, ಸಾಹಿತಿಯೋ, ಆಟಗಾರನೋ, ನೆರೆಮನೆಯವನೋ ನಿಮ್ಮ ಜಾತಿಯವನೆಂದು ತಿಳಿದಾಕ್ಷಣ ’ಇವ ನಮ್ಮವ’ನೆಂಬ ಸುಪ್ತ ನವಿರಾದ ಹೆಮ್ಮೆ ನಿಮ್ಮಲ್ಲುಂಟಾಗುತ್ತದೆ. ಇದು ನಮ್ಮ-ನಿಮ್ಮ ತಪ್ಪಲ್ಲ. ಇದು ನಮ್ಮ ಸ್ವತಂತ್ರ್ಯ ಭಾರತದ ಆಡಳಿತಾತ್ಮಕ/ಸಾಮಾಜಿಕ/ರಾಜಕೀಯ ವ್ಯವಸ್ಥೆ ನಮ್ಮನ್ನು ಆಧುನಿಕ ಪ್ರಪಂಚಕ್ಕೆ ಅಣಿಗೊಳಿಸಿರುವ ರೀತಿ.

ಇದು ನಮ್ಮ ರಾಜಕೀಯ/ಸಾಮಾಜಿಕ/ಆಡಳಿತಾತ್ಮಕ "ಸೆಕ್ಯುಲರಿಸಂ" ಆದರೆ, ನಮ್ಮ ವಿಚಾರವಾದಿ ಬುದ್ಧಿಜೀವಿಗಳು ಕೂಡ ಅದನ್ನು ಹೀಗೆಯೇ ವಿಶ್ಲೇಷಿಸಿಕೊಂಡಿದ್ದಾರೆ. ನೀವುಗಳು ಗಮನಿಸಿ ನೋಡಿ, ನಮ್ಮ ಬಹುಸಂಖ್ಯಾತ ಧರ್ಮದ ಒಬ್ಬ ಬುದ್ಧಿಜೀವಿ ತನ್ನ ಧರ್ಮದ ಆಚಾರ/ವಿಚಾರಗಳನ್ನು ಧಿಕ್ಕರಿಸಿ ಅವುಗಳನ್ನು ಅನಾಚಾರ/ವಿಕಾರಗಳಂತೆ ಚಿತ್ರಿಸಿ ತಮ್ಮ ನವೀನ ಚಿಂತನೆಗಳನ್ನು ಹರಿಬಿಟ್ಟಾಗ, ಆ ಚಿಂತನೆಯನ್ನು ಇತರೆ ಬುದ್ದಿಜೀವಿಗಳು ಶ್ಲಾಘಿಸಿ "ಬಂಡಾಯ ಸಾಹಿತ್ಯ"ವೆಂದು ವಿಂಗಡಿಸಿ ಕೊಂಡಾಡುತ್ತಾರೆ. ಹಾಗೆಯೇ ಅಲ್ಪಸಂಖ್ಯಾತ ಧರ್ಮದ ಬುದ್ದಿಜೀವಿಗಳು ತಮ್ಮ ಧರ್ಮದ ಅಂಧತೆಗಳನ್ನು ಉಲ್ಲೇಖಿಸಿ ಬರೆದು, ತಮ್ಮ ಧರ್ಮಾಂಧರ ಕೋಪಕ್ಕೆ ಗುರಿಯಾದಾಗ, ಬಹುಸಂಖ್ಯಾತ ಬುದ್ದಿಜೀವಿಗಳು ಅಷ್ಟಾಗಿ ಅವರ ಸಹಾಯಕ್ಕಾಗಿಯಾಗಲೀ, ಅವರ ಬೆಂಬಲಕ್ಕಾಗಿಯಾಗಲೀ ನಿಲ್ಲುವುದಿಲ್ಲ. ಉದಾಹರಣೆಗೆ, ತಸ್ಲೀಮಾ ನಸ್ರೀನ್ ಳ ಮೇಲೆ ಧರ್ಮಾಂಧರು ಆಕ್ರಮಣ ನಡೆಸಿದಾಗ ನಮ್ಮೆಲ್ಲಾ ಬುದ್ದಿಜೀವಿಗಳು ಅವಳ ಬೆಂಬಲಕ್ಕೆ ಎಷ್ಟರಮಟ್ಟಿಗೆ ನಿಂತರೆಂದು ನೀವುಗಳೇ ಮಾಧ್ಯಮಗಳ ವರದಿಯಲ್ಲಿ ನೋಡಿದ್ದೀರಿ. ಆದರೆ ಅದೇ ಬುದ್ದಿಜೀವಿ ಅಲ್ಪಸಂಖ್ಯಾತ ಕಲಾಕಾರನೊಬ್ಬ ಬಹುಸಂಖ್ಯಾತ ದೇವತೆಗಳ ಅಂಗಾಂಗಗಳ ಚಿತ್ರಿಸಿದ್ದನ್ನು ಬಹುಸಂಖ್ಯಾತರು ವಿರೋಧಿಸಿದಾಗ, ನಮ್ಮೆಲ್ಲಾ ಬುದ್ದಿಜೀವಿಗಳು ಆ ಕಲಾಕಾರನ ಬೆಂಬಲಕ್ಕೆ ನಿಂತು ಒಕ್ಕೊರಲಿನಿಂದ ಪ್ರತಿಭಟಿಸಿದರು. ಒಂದು ಧರ್ಮವನ್ನು ಖಂಡಿಸಿ ಬರೆದದ್ದು "ಬಂಡಾಯ ಸಾಹಿತ್ಯ"ವಾಗುವುದಾದರೆ, ಅದೇ ಇನ್ನೊಂದು ಧರ್ಮವನ್ನು ಖಂಡಿಸಿ ಬರೆದಿದ್ದು ಏಕೆ "ಬಂಡಾಯ"ವೆನಿಸದು? ಒಂದು ಧರ್ಮದ ಅವಹೇಳನದ ಸಾಹಿತ್ಯ "ಕ್ರಾಂತಿ"ಯೆನಿಸುವುದಾದರೆ, ಇನ್ನೊಂದು ಧರ್ಮದ ಅವಹೇಳನವೇಕೆ "ಸಮಾಜಘಾತುಕ"ವೆನಿಸಬೇಕು? ಇದು ನಮ್ಮ ಬೌದ್ಧಿಕ ವಿಕಾಸವೋ ವಿನಾಶವೋ ನಾನರಿಯೆ! ಒಟ್ಟಾರೆ ಇದು ಕೂಡ "ಭಾರತೀಯ ಸೆಕ್ಯುಲರಿಸಂ" ಎಂದು ಹೇಳಬಹುದು.

ವಿಚಾರ ಎಲ್ಲಿಂದೆಲ್ಲಿಗೋ ಹೋಗುತ್ತಿದೆ. ಇರಲಿ, ಮತ್ತೆ ಜಾತಿ/ಭಯೋತ್ಪಾದನೆಗೆ ಬರೋಣ. ಒಂದು ವೇಳೆ, ನಮ್ಮ ವೀರಶೈವ, ಒಕ್ಕಲಿಗ, ದಲಿತ, ಕುರುಬ ಅಥವಾ ಇನ್ಯಾವುದೇ ಜಾತಿಗಳಿಗೂ ಈ ರೀತಿ ತಮ್ಮ ತಮ್ಮ ಜಾತಿಯ ಬಹುಸಂಖ್ಯಾತರ ವಿದೇಶೀ ರಾಷ್ಟ್ರಗಳು ಇದ್ದು, ಪಾಕಿಸ್ತಾನದ ಮಾದರಿಯಲ್ಲೇ ಸಹಾಯಹಸ್ತ ಚಾಚಿ ಉಗ್ರರಾಗಿಸುವತ್ತ ಚಿತ್ತ ಹರಿಸಿದ್ದರೆ, ಇಂದು ಭಾರತದಲ್ಲಿ ಈ ಜಾತಿಯ ಉಗ್ರರುಗಳೂ ಇರುತ್ತಿದ್ದರೆಂದೇ ಅನಿಸುತ್ತದೆ. ಹಿಂದೊಮ್ಮೆ ಕೆಲವು ಸಿಖ್ಖರು ಉಗ್ರಗಾಮಿಗಳಾಗಿದ್ದಂತೆ! ಇಂದು ಭಾರತದ ಎಲ್ಲಾ ಜಾತಿಗಳೂ ತಮ್ಮ ತಮ್ಮ ಶಕ್ತಿಯ ಅನುಗುಣವಾಗಿ ಸಂವಿಧಾನಿಕ ಉಗ್ರವಾದವನ್ನು ರಾಜಾರೋಷವಾಗಿ ನಡೆಸುತ್ತಿವೆ. ಇದೊಂದು ರೀತಿ ’ಸಿವಿಲ್’ ಉಗ್ರವಾದವಾದರೆ, ಭಯೋತ್ಪಾದಕರದು ’ಕ್ರಿಮಿನಲ್’ ಉಗ್ರವಾದ! ಈ ಜಾತೀವಾದದ ಉಗ್ರರು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದರೆ, ಭಯೋತ್ಪಾದಕ ಉಗ್ರರು ಜನರನ್ನು ಕೊಲ್ಲುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಒಟ್ಟಾರೆ ಎರಡು ವಿಧಗಳೂ ದೇಶವನ್ನು ಅಧೋಗತಿಗೆ ಸೇರಿಸುತ್ತಿವೆ.

ಇನ್ನೂ ಬೆಂಗಳೂರಿನಲ್ಲಿ ಪ್ರಪ್ರಥಮವಾಗಿ ಬಾಂಬ್ ಸಿಡಿದಿದೆ ಎನ್ನುವಿರಾ? ಈ ಬಾಂಬ್ ನಮ್ಮ ಭರತನಹಳ್ಳಿಯಲ್ಲಿ ಎಂದೋ ಸಿಡಿದಿದೆ. ವಿಪರ್ಯಾಸವೆಂದರೆ, ಈ ಬಾಂಬನ್ನು ಸಿಡಿಸಿದವರೆಲ್ಲರನ್ನೂ ನಾವುಗಳು "ಮಹಾತ್ಮ"ರೆಂದು ಪೂಜಿಸುತ್ತಿದ್ದೇವೆ.

ಅಣಕ:

ಒಮ್ಮೆ ನನ್ನ ಬಂಧುವೊಬ್ಬರ ಹಳ್ಳಿಯ ಕ್ಷೌರಿಕ ತನ್ನ ಮಂಗಳವಾರದ ರಜಾ ಮೇಲಿದ್ದ. ಆದಿನ ಆ ಹಳ್ಳಿಯ ದಲಿತ ಪುಢಾರಿಯೊಬ್ಬ ಯಾವುದೋ ರಾಜಕೀಯ ಸಭೆಗೆ ಪಟ್ಟಣಕ್ಕೆ ಹೋಗಬೇಕಿದ್ದಿತು. ಸರಿ, ರಜಾ ಮಾಡಿದ್ದ ಕ್ಷೌರಿಕನ ಮನೆಗೆ ನೇರ ನಡೆದ. ತನಗೆ ಕ್ಷೌರ ಮಾಡೆಂದು ಪುಢಾರಿಯೂ, ನಾನು ರಜಾ ಎಂದು ಕ್ಷೌರಿಕನೂ ವಾಗ್ವಾದಿಸಿ, ಸುತ್ತಲೂ ಜನ ನೆರೆದರು. ಸರಿ, ದಲಿತ ಪುಢಾರಿ ಕ್ಷೌರಿಕನನ್ನು ’ಹಜಾಮ’ನೆಂದು ಮೂದಲಿಸಿ, ನಿನಗೆ ಪಾಠ ಕಲಿಸುತ್ತೇನೆಂದು ನಡೆದ. ಆ ದಿನ ಸಂಜೆಯ ವೇಳೆಗೆ ಪೊಲೀಸರು ಬಂದು ಕ್ಷೌರಿಕನನ್ನು ಜಾತಿನಿಂದನೆಯ ಮೇಲೆ ಬಂಧಿಸಿ, ಪಂಚಾಯಿತಿ ರಾಜೀ ನಡೆದು, ಕೊನೆಯಲ್ಲಿ ಆ ಕ್ಷೌರಿಕನು ತನ್ನ ಕ್ಷೌರವೃತ್ತಿಯನ್ನು ಸಂಪೂರ್ಣ ಖೈದು ಮಾಡಿ, ಬೇರೆ ಉದ್ಯೋಗವನ್ನು ಹುಡುಕಿಕೊಳ್ಳುವಲ್ಲಿ ಪರ್‍ಯವಸಾನಗೊಂಡಿತು.

ಇದು ನಮ್ಮ ಸೆಕ್ಯುಲರಿಸಂ ನ ಒಂದು ಸ್ಯಾಂಪಲ್ ಘಟನೆ!

ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?

ಜನಹಿತ(?!) ಪರಮಾಣು ಒಪ್ಪಂದ ಮತ್ತು ನಾವು!

ಅಂತೂ ಈ ಅಮೇರಿಕಾ-ಭಾರತದ ನಡುವಿನ ಪರಮಾಣು (ಜನಹಿತ) ಒಪ್ಪಂದ ದೇಶಾದ್ಯಂತ ಸಂಚಲನವನ್ನು ಉಂಟುಮಾಡಿ ಕ್ಷಣಕ್ಷಣಕ್ಕೂ ಇಡೀ ದೇಶವನ್ನು ಉದ್ವೇಗದಲ್ಲಿಟ್ಟು ಕಾತರಿಸುವಂತೆ ಮಾಡಿ, ಸದ್ಯಕ್ಕೆ ಚುನಾವಣಾ ಭೂತ ಧುತ್ತನೇ ಎದುರಾಗದಂತೆ ಜನಸಾಮಾನ್ಯ ನಿಟ್ಟುಸಿರು ಬಿಡುವಂತಾಗಿದೆ. ಯಾವುದೇ ಒಂದು ಜ್ಞಾನವನ್ನು ಲೋಕ ಕಲ್ಯಾಣಕ್ಕಾಗಿಯಾಗಲೀ, ಲೋಕ ವಿನಾಶಕ್ಕಾಗಿಯಾಗಲೀ ಹೇಗೆ ಬೇಕೋ ಹಾಗೆ ಬಳಸಿಕೊಳ್ಳಬಹುದು. ಆ ಜ್ಞಾನ ಯಾರ ಕೈಯಲ್ಲಿದೆ ಎಂಬುದು ಇದನ್ನು ನಿರ್ಧರಿಸುತ್ತದೆ. ಅದು ತತ್ವ ಸಿದ್ದಾಂತಗಳಿರಬಹುದು ಅಥವಾ ವೈಜ್ಞಾನಿಕ ಸಂಶೋಧನೆಗಳಿರಬಹುದು. ಹಾಗೆಯೇ ಈ ಪರಮಾಣು ವಿಜ್ಞಾನ ಕೂಡಾ. ಹಾಗಾಗಿಯೇ ಪರಮಾಣು ಸಂಬಂಧೀ ಒಪ್ಪಂದಗಳನ್ನು ಅಣ್ವಸ್ತ್ರ (ಮಿಲಿಟರಿ) ಒಪ್ಪಂದವೆಂದೂ, ಜನ ಹಿತಾಸಕ್ತಿಯ (ಸಿವಿಲಿಯನ್) ಅಣು ಒಪ್ಪಂದಗಳೆಂದೂ ವಿಂಗಡಿಸುತ್ತಾರೆ. ಹಾಗಾಗಿಯೇ ನಾನು ಇದನ್ನು ಜನಹಿತ ಅಣು ಒಪ್ಪಂದವೆಂದು ಕರೆದಿದ್ದೇನೆ.

ಏನಿದು ಈ ಒಪ್ಪಂದ? ಇದರಲ್ಲಿನ ಅನುಕೂಲ/ಪ್ರತಿಕೂಲಗಳೇನು? ನಿಮ್ಮ ವೈಯುಕ್ತಿಕ ಅಭಿಪ್ರಾಯಗಳೇನು ಎಂದು ನನ್ನ ಆತ್ಮೀಯ ಓದುಗ ಮಿತ್ರ ಅನಿಲ್ ಕೇಳಿ ಬರೆದಿದ್ದರು. ಈ ವಿಷಯವಾಗಿ ಕಳೆದ ವಾರವೇ ಬರೆಯಬೇಕೆಂದಿದ್ದರೂ ನನ್ನ ಮೀನು ಹಿಡಿಯುವಾಟ "ಬರ್ತಾ" ಎಂಬ ಚಂಡಮಾರುತ ತಟ್ಟುವ ಶಂಕೆಯಿಂದ ಹೊಯ್ದಾಡಿ, ನನ್ನನ್ನು ಮತ್ಸ್ಯಕನ್ಯೆಯರಂತಿರುವ ದಕ್ಷಿಣ ಅಮೇರಿಕಾದ ಸ್ಪಾನಿಷ್ ಸುಂದರಿಯರ ನಡುವೆ ತೊಯ್ದಾಡಿಸಿ, ಮೈಯಾಮಿ ದಡಕ್ಕೆ ಎಸೆದಿತ್ತು! ಆ ತೊಯ್ದಾಟದ ಹಸಿ(ಬಿಸಿ)ಯನ್ನು ಆರಿಸಿಕೊಳ್ಳಲು ನನ್ನ ಬರವಣಿಗೆಯ ಪ್ರಕ್ರಿಯೆಯಿಂದ ಒಂದು ವಾರದ ರಜೆಯನ್ನು ತೆಗೆದುಕೊಳ್ಳಬೇಕಾಯಿತು. ನೀವುಗಳು ಇದನ್ನರಿತು ಕ್ಷಮಿಸುತ್ತೀರೆಂದುಕೊಂಡಿದ್ದೇನೆ.

ಇರಲಿ, ಈ ಒಪ್ಪಂದದ ಕುರಿತು ನಮ್ಮ ನಾಯಕರುಗಳು, ಎಡ-ಬಲ ಬುದ್ದಿಜೀವಿಗಳು, ವಿಜ್ಞಾನಿಗಳು....ಎಲ್ಲಾ ಏನು ಹೇಳುತ್ತಾರೆ ಎಂಬುದನ್ನು ವಿಶ್ಲೇಷಿಸುವ ಮುನ್ನ ಈ ಒಪ್ಪಂದದಲ್ಲಿರುವ ಕಟ್ಟಳೆಗಳನ್ನು ನಾವು ಅವಲೋಕಿಸೋಣ. ಇದರಲ್ಲಿರುವ ಕಟ್ಟಳೆಗಳು,

೧. ಭಾರತವು ’ಇಂಟರ್ ನ್ಯಾಷನಲ್ ಅಟಾಮಿಕ್ ಎನರ್ಜಿ ಅಸೋಸಿಯೇಷನ್ (ಐ.ಎ.ಇ.ಎ)’ನ ಪರಿವೀಕ್ಷಕರುಗಳನ್ನು ತನ್ನ ಜನಹಿತ ಪರಮಾಣು ಕೇಂದ್ರಗಳ ಪರಿವೀಕ್ಷಣೆಯನ್ನು ಮಾಡಲು ತೆರೆದಿಡಬೇಕು. ಅಂದಹಾಗೆ ಈ ಐ.ಎ.ಇ.ಎ ವಿಶ್ವಸಂಸ್ಥೆಯ ಅಂಗಸಂಸ್ಥೆ. ಭಾರತವು ತನ್ನ ಇಪ್ಪತ್ತೆರಡು ಅಣು ವಿಕಿರಣ ಕೇಂದ್ರಗಳಲ್ಲಿ ಹದಿನಾಲ್ಕು ಜನಹಿತದ್ದಾಗಿವೆಯೆಂದೂ, ಈ ಹದಿನಾಲ್ಕು ಕೇಂದ್ರಗಳನ್ನು ವಿಶ್ವಸಂಸ್ಥೆಯ ಪರಿವೀಕ್ಷಕರಿಗೆ ತೆರೆದಿಡುವುದಾಗಿ ಒಪ್ಪಿಕೊಂಡಿದೆ. ಅಷ್ಟೇ ಅಲ್ಲದೆ ಮುಂದೆ ತಾನು ಕಟ್ಟಬಹುದಾದ ಯಾವುದೇ ಜನಹಿತ ಪರಮಾಣು ವಿಕಿರಣ ಕೇಂದ್ರಗಳನ್ನು ಈ ಒಡಂಬಡಿಕೆಯ ಪ್ರಕಾರ ಪರಿವೀಕ್ಷಣೆಗೆ ತೆರೆದಿಡುವುದಾಗಿ ಹೇಳಿದೆ. ಭಾರತವು ಈ ಒಪ್ಪಂದದ ಮೊದಲು ತನ್ನ ಸ್ವಂತ ಶಕ್ತಿಯಿಂದ ನಿರ್ಮಿಸಿರುವ ಅಣು ವಿಕಿರಣ ಕೇಂದ್ರಗಳು ಈ ಒಪ್ಪಂದಕ್ಕೆ ಒಳಪಡುವುದಿಲ್ಲ.

೨. ಭಾರತವು ಮೇಲಿನ ಒಪ್ಪಂದಕ್ಕೆ ಪೂರಕವಾಗಿ ಯಾವುದೇ ರೀತಿಯ ಸೇಫ್ಟಿ ಪರೀವೀಕ್ಷಣೆಗಳನ್ನು ಮಾಡಲು ವಿಶ್ವಸಂಸ್ಥೆಯೊಂದಿಗೆ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿದೆ.

೩. ಭಾರತ ತನ್ನ ತತ್ಕಾಲಿತವಾಗಿ ಸ್ಥಗಿತಗೊಳಿಸಿರುವ ಅಣ್ವಸ್ತ್ರ ಪರೀಕ್ಷೆಗಳನ್ನು ಯಥಾರೀತಿ ತತ್ಕಾಲವಾಗಿ ಸ್ಥಗಿತಗೊಳಿಸಿರುತ್ತದೆ.

೪. ಭಾರತವು ತನ್ನ ಅಣ್ವಸ್ತ್ರಗಳ ನಿರ್ಮಾಣಕ್ಕೆ ಬೇಕಾಗಬಹುದಾದ ಸಾಮಗ್ರಿಗಳನ್ನು ತಯಾರಿಸುವುದನ್ನು ಬಹಿಷ್ಕರಿಸುವ ಒಪ್ಪಂದವನ್ನು ಮುಕ್ತವಾಗಿ ಚರ್ಚಿಸಲು ಅಮೇರಿಕಾದೊಂದಿಗೆ ಅವಕಾಶವನ್ನು ಹೊಂದಿರುತ್ತದೆ.

೫. ಭಾರತವು ತನ್ನ ಪರಮಾಣು ತಂತ್ರಜ್ಞಾನವನ್ನಾಗಲೀ, ಸಾಮಗ್ರಿಗಳನ್ನಾಗಲಿ ಇತರೆ ಪರಮಾಣು ತಂತ್ರಜ್ಞಾನವಿಲ್ಲದ ದೇಶಗಳೊಂದಿಗೆ ಹಂಚಿಕೊಳ್ಳುವುದಾಗಲೀ ಮಾರುವುದಾಗಲೀ ಮಾಡಬಾರದು.

೬. ಭಾರತವು ತನ್ನ ಪರಮಾಣು ವಿಕಿರಣ ಕೇಂದ್ರಗಳನ್ನು ಕಟ್ಟುವ ಮತ್ತು ಸಾಮಗ್ರಿಗಳನ್ನು ಪೂರೈಸುವ ಕಾಂಟ್ರ್‍ಯಾಕ್ಟ್ ಅನ್ನು ಅಮೇರಿಕಾ ಕಂಪೆನಿಗಳಿಗೆ ಕೂಡ ಕೊಡಬೇಕು.

೭. ಅಮೇರಿಕಾವು ಭಾರತಕ್ಕೆ ಉಭಯ-ಬಳಕೆಯ ಪರಮಾಣು ತಂತ್ರಜ್ಞಾನ, ಯಂತ್ರ, ಸಾಮಗ್ರಿಗಳನ್ನು ಪೂರೈಸುತ್ತದೆ.

ಈ ಉಭಯ-ಬಳಕೆಯ ತಂತ್ರಜ್ಞಾನವನ್ನು ಉಪಯೋಗಿಸಿ ಭಾರತವು ಯುರೇನಿಯಮ್ ಅನ್ನು ವೃದ್ಧಿಗೊಳಿಸಿಬಹುದು ಅಥವಾ ಪ್ಲುಟೋನಿಯಮ್ ಅನ್ನು ಸಂಸ್ಕರಿಸಿ ಪರಮಾಣು ಅಸ್ತ್ರಗಳಿಗೆ ಬೇಕಾದ ಅವಶ್ಯಕ ಸಾಮಗ್ರಿಗಳನ್ನು ಕೂಡಾ ತಯಾರಿಸಿಕೊಳ್ಳಬಹುದಾಗಿದೆ. ಹಾಗಾಗಿಯೇ ಅಮೇರಿಕಾದಲ್ಲಿ ಈ ಒಪ್ಪಂದಕ್ಕೆ ಭಾರೀ ವಿರೋಧವನ್ನು ವ್ಯಕ್ತಪಡಿಸಲಾಗಿದೆ.

ಇದರಿಂದ ಭಾರತಕ್ಕೆ ಆಗುವ ಉಪಯೋಗಗಳು ಪರಮಾಣು ತಂತ್ರಜ್ಞಾನ, ಉಪಕರಣ, ಸಾಮಗ್ರಿಗಳ ಲಭ್ಯವಷ್ಟೇ ಅಲ್ಲದೆ ಅಂತರ್ರಾಷ್ಟ್ರ್‍ಈಯ ಮಟ್ಟದಲ್ಲಿ ಭಾರತಕ್ಕೆ ಮಾನ್ಯತೆ ದೊರಕುತ್ತದೆ. ಈ ಒಪ್ಪಂದವು ಭಾರತ ತನ್ನ ಪರಮಾಣು ಅಸ್ತ್ರಗಳ ಸಂಖ್ಯೆಯನ್ನು ಇಂತಿಷ್ಟೇ ಎಂದು ಸೀಮಿತಗೊಳಿಸುತ್ತಿಲ್ಲವೆಂದು ಅಂತರ್ರಾಷ್ಟ್ರೀಯ ವಲಯದಲ್ಲಿ ವಿರೋಧಗಳು ವ್ಯಕ್ತವಾಗಿವೆ. ಅಷ್ಟೇ ಅಲ್ಲದೇ ಈ ಒಪ್ಪಂದವು ಭಾರೀ ಭಾರತ ಪರವಾಗಿದೆಯೆಂದೂ ಅಮೇರಿಕಾದಲ್ಲಿ ವಿರೋಧಗಳು ವ್ಯಕ್ತವಾಗಿವೆ. ಚೀನಾವನ್ನು ಹತ್ತಿಕ್ಕಬೇಕೆಂಬ ಒಂದೇ ಉದ್ದೇಶದಿಂದ ಅಮೇರಿಕಾವು ಭಾರತಕ್ಕೆ ಭಾರೀ ಕೊಡುಗೆಯನ್ನು ನೀಡುತ್ತಿದೆ. ಇದು ಸಲ್ಲ ಎಂದೂ ಕೂಡ ವಿರೋಧಗಳು ಅಂತರ್ರಾಷ್ಟ್ರೀಯ ವಲಯದಲ್ಲಿ ವ್ಯಕ್ತವಾಗಿವೆ.

ಮತ್ತು ಯಾವುದೇ ಒಪ್ಪಂದಗಳನ್ನು ಸಂಬಂಧಿಸಿದ ಪಾರ್ಟಿಗಳು ಪರಸ್ಪರ ರದ್ದು ಮಾಡಬಹುದಾದಂತಹ ರದ್ದತಿ ಅವಕಾಶ ಕೂಡಾ ಇದರಲ್ಲಿ ಇದೆ.

ಇನ್ನು ಅಂತರ್ರಾಷ್ಟ್ರೀಯ ಮಟ್ಟದಿಂದ ನಮ್ಮ ಭಾರತದ ಪರಿಧಿಯೊಳಕ್ಕೆ ಬರೋಣ. ಈ ಒಪ್ಪಂದವನ್ನು ಶುರು ಮಾಡಿದ್ದ ಬಿಜೆಪಿ ಈಗ ಇದನ್ನು ವಿರೋಧಿಸುತ್ತಿರುವುದು ಏಕೆಂದು ಯಾರಿಗಾದರೂ ಅರ್ಥವಾಗಬಲ್ಲುದೇ ಆಗಿದೆ. ತಾವು ಶುರು ಮಾಡಿದ್ದು ಕಾಂಗ್ರೆಸ್ಸಿಗೆ ಹೆಸರು ತಂದುಕೊಟ್ಟರೆ ಹೇಗೆ ಎಂಬುದು ಬಿಜೆಪಿಯ ಕೊರಗು. ಇನ್ನು ನಮ್ಮ ಕಮ್ಯುನಿಸ್ಟರು, ವಿಶ್ವಾದ್ಯಾಂತ ಕಮ್ಯುನಿಸ್ಟ್ ಸರ್ಕಾರಗಳು ಏನಾಗಿದ್ದಾವೆಂದು ಕೊಂಚ ದೃಷ್ಟಿ ಹರಿಸಿ ನೋಡುವುದು ಉತ್ತಮ. ರಷ್ಯಾ ಛಿದ್ರಗೊಂಡು, ಕಾಂಬೋಡಿಯಾದ "ಕಿಲ್ಲಿಂಗ್ ಫೀಲ್ಡ್ಸ್" ಎಂದೇ ಪ್ರಖ್ಯಾತಗೊಂಡ ನರಮೇಧ ನಡೆದು, ಪಕ್ಕದ ಬರ್ಮಾದಲ್ಲಿ ಇನ್ನೂ ಜನ ಕೈಯಲ್ಲಿ ಜೀವ ಹಿಡಿದು ಬದುಕುತ್ತಿರುವುದು, ನಮ್ಮ ಪ್ರಜಾಪ್ರಭುತ್ವದ ಫಸಲು ಉಣ್ಣುತ್ತಿರುವ "ಲಾಲ್ ಸಲಾಮಿ" ಕಾಮ್ರೇಡರಿಗೆ ಅರಿವಾಗುತ್ತಿಲ್ಲವೇಕೋ? ಪ್ರಚಲಿತ ವಿಶ್ವಮಾನದಲ್ಲಿ ಈ ಸತ್ತ ಕಮ್ಯುನಿಸ್ಟ್ ತತ್ವಗಳು ಅಭಾಸವೆಂದು ಅರಿತೇ ಪೋಲೆಂಡ್ ಡೆಮಾಕ್ರಸಿಗೆ ಬದಲಾಯಿಸಿಕೊಂಡಿದೆ. ಹಾಗೆಯೇ ದೈತ್ಯ ಚೀನಾ ಕೂಡ ತನ್ನ ಪ್ರಜೆಗಳು ಮನೆ/ಮಠದಂತಹ ಆಸ್ತಿಗಳನ್ನು ಖರೀದಿಸಿ ಆಸ್ತಿ ಒಡೆಯರಾಗಬಹುದೆಂದು ಬದಲಾವಣೆಗಳನ್ನು ಮಾಡಿಕೊಳ್ಳುತ್ತ, ಕಾಮ್ರೇಡುಗಿರಿಯಿಂದ ಏಕ ಪಕ್ಷದ ಡೆಮಾಕ್ರಸಿಗೆ ಬದಲಾಗಿ, ನಿಧಾನವಾಗಿ ಭವಿಷ್ಯದಲ್ಲಿ ಸಂಪೂರ್ಣ ಡೆಮಾಕ್ರಸಿಯತ್ತ ನಡೆಯಲು ಮುಖ ಮಾಡಿದೆ. ಛಿದ್ರಗೊಂಡ ರಷ್ಯಾದ ದೇಶಗಳಲ್ಲಿನ ಹೈಸ್ಕೂಲು ಬಾಲೆಯರು " ಮುಂದೆ ನೀವು ಏನಾಗಬಯಸುತ್ತೀರಿ?" ಎಂಬ ಪ್ರಶ್ನೆಗೆ ತಾವು ಬೇಗನೇ "ಕಾಲ್ ಗರ್ಲ್"ಗಳಾಗಿ ಆದಷ್ಟು ಬೇಗ ದುಡಿದು ಬಡತನದಿಂದ ಪಾರಾಗುತ್ತೇವೆ ಎನ್ನುವಂತಹ ಪರಿಸ್ಥಿತಿ, ಬಹುಕಾಲ ರಷ್ಯಾವನ್ನಾಳಿದ ಕಮ್ಯುನಿಸ್ಟ್ ಪ್ರಭಾವದಿಂದಾಗಿದೆ.

ಇನ್ನು ಇದೇ ಪರಮಾಣು ಒಪ್ಪಂದ ಭಾರತ-ರಷ್ಯಾ ಅಥವಾ ಭಾರತ-ಚೀನಾ ನಡುವೆ ಇದ್ದಿದ್ದರೆ ನಮ್ಮ ಕಮ್ಯುನಿಸ್ಟರು "ಕೆಂಪು"ಹಾಸು ಹಾಸಿ ಸ್ವಾಗತಿಸುತ್ತಿದ್ದರು. ಒಂದು ವಿಶಿಷ್ಟ ಸಂಸ್ಕೃತಿಯ, ವಿಭಿನ್ನ ಜನಾಂಗದ ಒಂದು ಇಡೀ ಟಿಬೆಟ್ ದೇಶವನ್ನೇ ಆಕ್ರಮಿಸಿಕೊಂಡಿರುವ ಚೀನಾದ ವಿರುದ್ಧ ವಿಶ್ವಾದ್ಯಾಂತ ಭಾರೀ ವಿರೋಧಗಳು ವ್ಯಕ್ತವಾಗುತ್ತಿದ್ದರೂ, ಈ ನಮ್ಮ ಭಾರತೀಯ ಕಮ್ಯುನಿಸ್ಟರು ಎಂದಾದರೂ ಟಿಬೆಟ್ ನ ನರಮೇಧದ ವಿರುದ್ಧ ಉಸಿರೆತ್ತಿದ್ದಾರೆಯೇ? ಈ ಕಮ್ಯುನಿಸ್ಟರ ನಿಷ್ಟೆ ಭಾರತಕ್ಕಲ್ಲ, ಸತ್ತ ವಿದೇಶೀ ತತ್ವಗಳ ಪ್ರೇತಾತ್ಮಗಳಿಗೆ. ರಾಷ್ಟ್ರ್‍ಈಯ ಭದ್ರತೆಯ ಈ ಒಡಂಬಡಿಕೆಯ ವಿವರವಾದ ದಾಖಲೆಗಳನ್ನು, ತಮ್ಮೊಂದಿಗೆ ಸರ್ಕಾರ ಹಂಚಿಕೊಂಡಿಲ್ಲವೆಂದು ದೂರುತ್ತ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡ ಈ "ಲಾಲ್"ಗಳಿಗೆ, ರಾಷ್ಟ್ರ್‍ಈಯ ಭದ್ರತೆಯ ವಿಷಯಗಳನ್ನು ಭದ್ರವಾಗಿಡುವುದು ಕೂಡ ಪ್ರಧಾನಿಯ ಕಾರ್ಯವೆಂದು ತಿಳಿಯದೆ? ಹಾಗೇನಾದರೂ ಇವರಿಗೆ ವಿವರ ಸಿಕ್ಕಿದ್ದರೆ, ಅದರ ಕಾಪಿಯೊಂದು ಚೀನಾದ ಕೈ ಸೇರದೇ ಇರುವುದೇ?

ಸತ್ತ ತತ್ವಗಳ ಕಮ್ಯುನಿಸ್ಟರಂತೆಯೇ ನಮ್ಮ ಹಲವು ಬುದ್ಧಿಜೀವಿಗಳೂ ಕೂಡಾ ಯಾವುದೋ ಭಾವನಾಲೋಕದಲ್ಲಿ ವಿಹರಿಸುತ್ತಾ ಭಾರತದ ಕಠೋರ ಸತ್ಯದ ಅರಿವನ್ನು ಅರಿಯುವ ಪ್ರಯತ್ನವನ್ನೇ ಮಾಡಿಲ್ಲ/ಮಾಡುತ್ತಿಲ್ಲ. ಅರಿವಿದ್ದರೂ ಜಾಣ ಕುರುಡು, ಜಾಣ ಕಿವುಡು ಪ್ರದರ್ಶಿಸುತ್ತಾರೆ. ಹಲವಾರು ಬುದ್ಧಿಜೀವಿಗಳು, "ಅಂದು ಪ್ರಾಂತೀಯ ರಾಜರುಗಳು ಭಾರತವನ್ನು ತಟ್ಟೆಯಲ್ಲಿಟ್ಟು ಬ್ರಿಟಿಷರಿಗೆ ಕೊಟ್ಟಂತೆ ಇಂದು ಸರ್ಕಾರ, ಭಾರತವನ್ನು ಅಮೇರಿಕಾದ ಗುಲಾಮಗಿರಿಗೆ ಒಡ್ಡುತ್ತಿದೆ" ಎಂದೆಲ್ಲಾ ಕಾವ್ಯಮಯವಾಗಿ ವರ್ಣಿಸುತ್ತಾ ಮುಗ್ಧಜನರನ್ನು ಹಾದಿ ತಪ್ಪಿಸುತ್ತ ಜನರ ಮುಗ್ಧ ಭಾವನೆಗಳ ಶೋಷಣೆಯನ್ನೇ ಮಾಡುತ್ತಿದ್ದಾರೆ ಎನ್ನಬಹುದು. ಅಲ್ಲಾ, ಸ್ವಾತಂತ್ರ್ಯ ದೊರೆತು ನಾವುಗಳೆಲ್ಲಾ ಯಾವ ಸ್ಥಿತಿಯಲ್ಲಿಂದು ಇದ್ದೇವೆ ಎಂಬುದನ್ನು ನಮಗೆ ತಿಳಿಯದೇ? ಹಿಂದೊಮ್ಮೆ ಪಿ.ವಿ. ನರಸಿಂಹರಾಯರ ಕಾಲದಲ್ಲಿ ಒಬ್ಬ ಸಂಸದ ಒಂದು ಕೋಟಿಗೆ ಬಿಕರಿಯಾಗಿದ್ದರೆ ಇಂದು ಅದೇ ಸಂಸದ, ಆರ್ಥಿಕ ನೈಪುಣ್ಯ ಮನಮೋಹನ್ ಸಿಂಗ್ ರ ಕಾಲದಲ್ಲಿ ಮೂವತ್ತು ಕೋಟಿಗೆ ಬಿಕರಿಯಾಗುತ್ತಿದ್ದಾನೆ/ಆಗಿದ್ದಾನೆ. ಹಿಂದೊಮ್ಮೆ ಕಾಂಗ್ರೆಸ್ಸಿಗರು ಐದು ಲಕ್ಷಕ್ಕೆ ಒಬ್ಬೊಬ್ಬ ಶಾಸಕನನ್ನು ಖರೀದಿ ಮಾಡಿದ್ದರೆ, ಇಂದು ಬಿಜೆಪಿ ಹತ್ತತ್ತು ಕೋಟಿಗೆ ಖರೀದಿ ಮಾಡಿದೆ. ಇದೂ ಕೂಡಾ ಸ್ವತಂತ್ರ ಭಾರತದ ಇನ್ಫ್ಲೇಷನ್ ಮಹಿಮೆ ಇರಬಹುದು. ಅಷ್ಟೇ ಅಲ್ಲ, ಸ್ವತಂತ್ರ ಭಾರತದಲ್ಲಿ ಕೇವಲ ಇಪ್ಪತ್ತು ಸಂಸದರನ್ನಿಟ್ಟುಕೊಂಡು ಒಬ್ಬ ಪ್ರಧಾನಿಯಾಗಬಹುದು. ಪಕ್ಷೇತರನೊಬ್ಬ ಮುಖ್ಯಮಂತ್ರಿಯಾಗಬಹುದು. ರಾಜರೋಷವಾಗಿ ನಾನು ಈ ಜಾತಿ, ನನಗೆ ಇಂತಹ ಖಾತೆ ಬೇಕೆಂದು ಡಿಮ್ಯಾಂಡಿಸಬಹುದು. ನಮ್ಮ ಬುದ್ದಿಜೀವಿಗಳು ಈ ಸ್ವಾತಂತ್ರ್ಯವನ್ನು ಕೊಂಚ ಧೀರ್ಘವಾಗಿ ಅವಲೋಕಿಸುವುದು ಸೂಕ್ತ.

ಈ ಮೇಲ್ಕಾಣಿಸಿದ ಒಡಂಬಡಿಕೆಯ ಕಟ್ಟಳೆಗಳನ್ನು ನೀವೇ ಅವಲೋಕಿಸಿ ನಿರ್ಧರಿಸಿ ಇದು ಹೇಗೆ ಭಾರತವನ್ನು ಗುಲಾಮಗಿರಿಗೆ ಸಿಲುಕಿಸುತ್ತದೆಯೆಂದೂ ಮತ್ತು ಅಮೇರಿಕಾ ಹೇಗೆ ಭಾರತವನ್ನು ಆಳುತ್ತದೆಂದೂ. ಆಂದಹಾಗೆ, ಅಮೇರಿಕಾ ಚೀನಾದೊಂದಿಗೆ ಕೈಗಾರಿಕೋತ್ಪನ್ನಗಳ ಒಪ್ಪಂದವನ್ನೂ, ಜಪಾನ್/ಜರ್ಮನಿ/ಫಿಲಿಪೈನ್ಸ್....ಮುಂತಾದ ರಾಷ್ಟ್ರಗಳೊಂದಿಗೆ ತನ್ನ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿಕೊಳ್ಳುವ ಒಪ್ಪಂದವನ್ನೂ, ಪಾಕಿಸ್ತಾನದೊಂದಿಗೆ ಶಸ್ತ್ರಾಸ್ತ್ರ ಪೂರೈಕೆಯ ಒಪ್ಪಂದವನ್ನೂ.......ಹಾಗೂ ಇನ್ನೂ ಅನೇಕಾನೇಕ ರಾಷ್ಟ್ರ್‍ಅಗಳೊಂದಿಗೆ ಅನೇಕ ವಿಧದ ಒಪ್ಪಂದಗಳನ್ನು ದಶಕಗಳ ಹಿಂದೆಯೇ ಮಾಡಿಕೊಂಡಿದೆ. ಆ ರಾಷ್ಟ್ರಗಳನ್ನೇನಾದರೂ ಇಂದು ಅಮೇರಿಕಾ ಆಳುತ್ತಿದೆಯೇ ಎಂದೂ ಕೂಡ ಗಮನಿಸಿ.

ಇಂದು ಅನ್ನ, ನೀರು, ಗಾಳಿಯಂತೆಯೇ ವಿದ್ಯುಚ್ಚಕ್ತಿ ಕೂಡ ನಮ್ಮ ನಿಮ್ಮೆಲ್ಲರ ಅವಶ್ಯಕಗಳಲ್ಲೊಂದಾಗಿದೆ. ಈ ಶಕ್ತಿಗೆ ಪರ್ಯಾಯ ಮಾರ್ಗಗಳಾಗಲೀ, ಇತರೆ ಮೂಲಗಳಾಗಲೀ ನಮ್ಮಲ್ಲಿ ಇರುವವೋ, ಇಲ್ಲವೋ ನಾನರಿಯೆ. ಒಟ್ಟಾರೆ ಈ ಒಪ್ಪಂದದ ನಿಮಿತ್ತ ನಮಗೆ ವಿದ್ಯುತ್ ಕೊರತೆ ನೀಗಿದರೆ ನಮಗೆ ಸಂತಸವೆನಿಸದೇ? ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಅಮೇರಿಕಾದೊಂದಿಗಿನ ಈ ಒಪ್ಪಂದ ಮಾತ್ರ ಐತಿಹಾಸಿಕವಾದುದೇ ಸರಿ. ಈ ಒಪ್ಪಂದದಿಂದ ದೇಶದ ಹಿತಾಸಕ್ತಿಗೆ ಧಕ್ಕೆಯಾಗುತ್ತದೋ ಇಲ್ಲವೋ ಎಂಬುದನ್ನು ಸ್ವತಃ ತಾವುಗಳೇ ಪರಾಮರ್ಶಿಸಿ!

ಅಣಕ:

ಈ ಅಣು ಒಪ್ಪಂದಕ್ಕೆ ಕೆಲವು ಬುದ್ಧಿಜೀವಿಗಳು ಏಕೆ ವಿರೋಧ ವ್ಯಕ್ತಪಡಿಸುತ್ತಿರುವರು ಗೊತ್ತೆ?

ಏಕೆಂದರೆ ಅವರ ಅನೇಕ ಸಾಹಿತ್ಯಗಳು ಹುಟ್ಟುವುದೇ ಕರೆಂಟ್ ಕೈಕೊಟ್ಟು ಕತ್ತಲೆ ತುಂಬಿದಾಗ. ಸೀಮಿತ ೧೨*೧೨ ರೂಮಿನೊಳಗಿದ್ದರೂ ಆ ಗಾಢಾಂಧಕಾರ ಕತ್ತಲೆ ಅವರ ಸೀಮಿತ ಕೊಠಡಿಯನ್ನು ಅನಂತತೆಯ ಸೀಮಾತೀತ ವಿಶ್ವವಾಗಿ ಪರಿವರ್ತನೆಗೊಳಿಸಿ, ಸಾಹಿತ್ಯ ರಚನೆಯ ರಂಗುರಂಗಿನ ಭವ್ಯ ಪ್ರಪಂಚವನ್ನು ತೆರೆದಿಡುತ್ತದೆ. ಹೀಗೆ ೧೨*೧೨ ರ ಲೌಕಿಕ ಲೋಕದಿಂದ ಅನಂತತೆಯ ಅಲೌಕಿಕಕ್ಕೆ ತೇಲಿಸಿಕೊಂಡು ಹೋಗುವ ಈ ’ಪವರ್ ಕಟ್’ ಇಲ್ಲವಾದರೆ ಹೇಗೆ? ವಿಷಯ ಹೀಗಿರುವಾಗ ಈ ಜನಹಿತ ಪರಮಾಣು ಒಪ್ಪಂದ, ಭಾರತದ ಕರೆಂಟ್ ಅಭಾವವನ್ನು ನೀಗಿಸಿ ಅವರ ಕ್ರಿಯಾತ್ಮಕ ಚಟುವಟಿಕೆಯ ರಂಗಸ್ಥಳಕ್ಕೇ ಅಣ್ವಸ್ತ್ರವಾಗಿ ಬಡಿದರೆ ಹೇಗೆ?

Kalappa's Cobra (Continued)

Another time, the snake was sleeping keeping the head out in the hole of the stone revetment built on the side of the pathway by it seems. By the time Labor-Head calls out help by shouting ‘COBRA COBRA’ after spotting it, it pulled its head in and disappeared. When I asked the farm workers let us pull the stones and kill the snake, they all disagreed. The Labor-Head had made them frightened by crying out loud in front of them that the snake wouldn’t quit without killing him. Fear is like a contagious disease. Initially Teekappa was not that afraid. But the Labor-Head’s cry and the behavior of the snake had slowly started the fear in him also. Many times the snake’s appearance around the house seemed like its waiting to bite someone. By the time Teekappa yells ‘COBRA COBRA’ after spotting, it would slither somewhere and disappear.

Snakes are more in Malnad region rather than the plains. But still the deaths by the snake bites are more in plains compared to Malnad region. I haven’t seen any snake coming desperately to bite someone no matter how powerful venomous it is. They would be quick to move and hide somewhere when spotted by people. There are plenty of bushes, holes, plants to hide for them in Malnad so they don’t get into the desperate situation of bite and escape. They decide to hiss and bite only in situations where there is nowhere to escape.

Because of this snake, it became worrisome to me about Kiwi. I have already lost three or four good dogs to snakes that come around my house. It doesn’t mean that the snakes have special enmity over dogs. In fact, dogs are the ones that bother the snakes unnecessarily. Dogs have the habit of pulling any creature that tends to hide in a hole. By holding the scent they start to dig up the holes. One could see the diggings that Kiwi has dug around the house to catch bugs and insects. That’s why dogs get sacrificed to snakes due to their bad habit of digging. Since the snakes look physically weaker than them, dogs wouldn’t be afraid to put their mouth over the snakes. If its non-venomous snakes like water snakes it’s not a problem. But dogs would eventually die when the venom spreads even though they kill the venomous snakes like cobras or vipers.

By the thought of our dog’s welfare itself I was anxious to kill the snake. I didn’t know about snake charmer Yenkta at that time yet. Kiwi wouldn’t have left the snake alive if it would have spotted it. This snake was showing excellent skillfulness in escaping. The fearsome created by our Labor-Head among everyone was also helpful to the snake in escaping. Instead of quiet observation of snake’s movement and the spot of its hiding and calling for help calmly, one who spotted the snake would shout ‘Oh, COBRA COBRA’. By the time when we all get there with the stick, the snake would be out of sight slithering somewhere. Then the Labor-Head would cry out loud stating it would go away only after killing him and scare everyone.

Within one week of snake spotting, the Labor-Head almost became mentally ill. He started yelling ‘COBRA COBRA’ in his dreams. He decided that he is going to die for sure and told his family what needs to be done after his death and who should take care of the household and got ready to get into the coffin. I was convinced by seeing him wandering in pain pale faced like a bed-ridden patient that he is going to die by seeing the snake itself even if it doesn’t bite him.

On one hot summer day when I was inside the home, I heard a sound of drum beating like tin beating noise. Then followed Kiwi’s furious barking. Immediately I remembered Labor-Head’s ‘COBRA’. I got concerned hearing Kiwi’s bark thinking its end has come. Soon I heard Teekappa shouting “Oh COBRA COBRA” and yelling Kiwi to come away. I came out running wondering why he is beating the tin.

There was a tug-of-war going on between the snake and Kiwi near the bath room fire pit covered with the cloud of ashes. Couldn’t figure which is snake’s head or tail by the whipping strap looking snake. Whenever its body touches the rusted kerosene tin during its lashes it used to make the drum beating sound. Seeing me, Teekappa and the Labor-Head both yelled “Please call Kiwi back, the snake is dancing near the tin.”

Jannapura main road was getting tarred. One of the drum out of many tar drums that were rolled under a tree was broke and the tar has flown until it solidified. Teekappa had brought a seven to eight kilo ball of tar and put it in an old rusted kerosene tin so that it can be used to fill the holes of household pots and tins. So whenever the snake’s head or tail hits the tin during the lashing repetitive swings of the snake, the tin was making a sound.

By the time I could call Kiwi commandingly; Kiwi caught the snake and threw it away. The snake fell straight by the Labor-Head’s feet who was standing in the yard. Thinking that the snake came purposefully flying near him, the frightened Labor-Head couldn’t even run stood frozen.

The snake was behaving strangely on that day. Instead of usual slithering escape, it was lashing around the yard raising the dust and dancing like the cobra dancing shown in movies. No matter what I do, unwilling Kiwi was also behaving similar to that snake gone mad created more dust and the mess.

May be the Labor-Head got little courageous by seeing despite an easy prey, instead of biting him the COBRA is dancing. He looked at me and said “Bring the gun Master. Let’s give it a shot.” Teekappa ran to get the stick. Yelling “Hold Kiwi” I ran into the house to bring the gun.

It was not possible to gun down the snake due to Kiwi’s mess. Teekappa moved slowly in fear towards the snake and swung his stick. Teekappa’s swing hit the snake and broke its back. Suddenly, the Labor-Head rushed furiously to the forefront yelling “Curse to your home! Again you are driving it to the forest half harmed! It’s a crowned king cobra. See the crown on its head” cursing Teekappa, pulled the stick from him and started beating the snake repetitively. Kiwi also stepped back watching his fury. The stick got broke within three or four beatings, but it had already passed a deadly stroke to the snake.

After watching the dead snake closely, we realized why the snake was dancing strangely. After roaming surroundings of the house for many days, the snake had fallen asleep that day under the tin that Teekappa had placed the tar and thrown. During that hot afternoon, the tar had melted and leaked through the crack of the tin onto the snake’s face without its observation. Awakened by the sudden arrival of Kiwi, couldn’t being able to pull the tar ball stuck head inside; the snake was lashing its tail. When Kiwi grabbed it and thrown, despite the tar ball was off the head but still stunned by tar pasted over its eyes and mouth, the snake couldn’t figure what to do and lash danced madly all around the yard. The scene of the tar over its head made the Labor-Head to call it the crowned king cobra.

After the Labor-Head relieved by the snake’s death, I asked him what does he meant by crowned king cobra? He told me that there is a crowned king cobra living in the deep jungles by the Ghats and it stands on its tail and would strike straight into people’s head, so people passing in those jungles would tie a rock over their head to protect them.

ಗಾನ್ ಫಿಶಿಂಗ್! (ಎರಡು ವಾರ ಮಾತ್ರ)

ನನ್ನ ಸ್ನೇಹಿತ ಲೀ ಮಾವೋ ಅಧಿಕಾರದಲ್ಲಿ ಅನುಭವಿಸಿದ ಬಾಲ್ಯ, ಅವನಜ್ಜಿಯ ಕತೆಗಳ ಆರ್ಕೈವ್ ಟೋಸ್ಟ್ ಆಗಿದೆ. ಅದರೊಟ್ಟಿಗೆ ನನ್ನ ಸಾಕಷ್ಟು ಕೋಡ್ ಬ್ಯಾಕಪ್ ಸಹ. ಹಾಗಾಗಿ ಆ ಕತೆಗಳನ್ನೆಲ್ಲಾ ಮತ್ತೊಮ್ಮೆ ಮೊದಲಿನಿಂದ ಬರೆಯಬೇಕು. ಈ ಟೋಸ್ಟ್ ಆಗಲು ಕಾರಣ ಚೈನಾ ಕಾಂಸ್ಪಿರಸಿ ಇರಬಹುದೇನೋ!

ಇರಲಿ, ಸದ್ಯಕ್ಕೆ ಈಗ ರಜೆಯ ಸಮಯ.

ಇಲ್ಲಿನ ನದಿ, ಕೆರೆ, ಸರೋವರಗಳಲ್ಲಿ ನನ್ನ ಮೀನು ಹಿಡಿಯುವ (ಹಿಡಿ-ಬಿಡು) ತೀಟೆಯನ್ನು ತೀರಿಸಿಕೊಳ್ಳುತ್ತಿದ್ದ ನಾನು, ಮುಂದಿನ ಇನ್ನೆರಡು ವಾರಕ್ಕೆ ನನ್ನ ಚಟವನ್ನು ಸಮುದ್ರಕ್ಕೆ ವರ್ಗಾಯಿಸುತ್ತಿದ್ದೇನೆ. ಕನ್ನಡನಾಡಿನ ಬಂಗುಡೆ, ಮತ್ತಿ, ಕಾಣೆ, ಕಟ್ಲ, ಬೂತಾಯಿ, ಮಾತಾಯಿ ಇಷ್ಟವಾದರೂ ಇಲ್ಲಿನ ’ಸ್ವೋರ್ಡ್ ಫಿಶ್’, ನಾನು ಬಹುವಾಗಿ ಇಷ್ಟಪಟ್ಟು ತಿನ್ನುವ ಮೀನು. ಇದು ಸಮುದ್ರ ಮೀನಾದ್ದರಿಂದ ಫ್ಲೋರಿಡಾ ತೀರದ ಸಮುದ್ರದಲ್ಲಿ ಇದರ ಫಿಶಿಂಗ್ ಅತ್ಯಂತ ಮಜವಾಗಿರುತ್ತದೆ. ಹಾಗಾಗಿ ಇನ್ನು ಎರಡು ವಾರ ಈ ಮೀನು ಶಿಕಾರಿಯಲ್ಲಿ ತೊಡಗಿರುತ್ತೇನೆ. ಮೀನು, ಶಿಕಾರಿ ಎಂದೊಡನೆ ಶ್ರೀ ಪೂರ್ಣಚಂದ್ರ ತೇಜಸ್ವಿಯವರು ನೆನಪಾಗುವರಲ್ಲವೇ? ಹೌದು, ಅವರೊಂದು ಕನ್ನಡದ ಅದ್ಭುತ! ನನಗೂ ಅಷ್ಟೇ ಈ ಎಲ್ಲಾ ಪರಿಸರ ಸಂಬಂಧೀ ಚಟಗಳು ಅವರ ಅಭಿಮಾನಿಯಾದೊಡನೇ ಬಳುವಳಿಯಾಗಿ ಬಂದಿವೆ. ನನ್ನ ಅದೃಷ್ಟಕ್ಕೆ ಇಲ್ಲಿ ಬೇಟೆ ಲೀಗಲ್! ಅಷ್ಟೇ ಅಲ್ಲ, ಬೇಟೆಯೊಂದು ಪರಿಸರ ಸಂರಕ್ಷಣೆಯ ವಿಧಾನ. ಹಾಗಾಗಿ ಸದ್ಯಕ್ಕೆ ಜಿಂಕೆ, ಕಾಡುಹಂದಿ, ಟರ್ಕಿ ಬೇಟೆಗಳನ್ನು ಮಾಡಿರುವ ನಾನು ಮುಂದೊಮ್ಮೆ ಸಾಧ್ಯವಾದರೆ ಕರಡೀ ಬೇಟೆಯನ್ನು ಮಾಡಬೇಕೆಂದಿರುವೆನು. ಇರಲಿ, ತೇಜಸ್ವಿಯವರ ಕೆಲವು ಕತೆಗಳನ್ನು ಇಂಗ್ಲಿಷ್ ಗೆ ಭಾಷಾಂತರಿಸಿ, ಅಮೇರಿಕಾದಲ್ಲಿ ಅವರ ಒಂದು ಕಥಾ ಸಂಕಲನದ ಪುಸ್ತಕವನ್ನು ಪ್ರಕಟಿಸಬೇಕೆಂದು ಸಿದ್ಧನಾಗುತ್ತಿರುವೆನು. ಎಲ್ಲಾ ಕೂಡಿ ಬಂದರೆ ಬರುವ ಸೆಪ್ಟೆಂಬರ್ ನಲ್ಲಿ ನೀವು "ಅಮೆಜಾನ್.ಕಾಂ"ನಲ್ಲಿ ತೇಜಸ್ವಿಯವರ ಇಂಗ್ಲಿಷ್ ಅನುವಾದದ ಪುಸ್ತಕವೊಂದನ್ನು ಕೊಳ್ಳಬಹುದು. ಸದ್ಯಕ್ಕೆ ನಿಮ್ಮ ಮನ ತಣಿಸಲು ’ಕಾಳಪ್ಪನ ಕೋಬ್ರ’ದ ಇಂಗ್ಲಿಷ್ ಅನುವಾದವನ್ನು ಇಲ್ಲಿ ಕೊಟ್ಟಿದ್ದೇನೆ. ಮೊದಲರ್ಧ ಈ ವಾರ ಮತ್ತು ಕೊನೆಯರ್ಧ ಮುಂದಿನವಾರ. ದಯವಿಟ್ಟು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. Kalappa's Cobra Every summer, we always get snake problems. Couldn’t figure whether they were coming to catch the mice or frogs! Generally, they would appear in sunny afternoons of summer rather than all other seasons. Some people have words of appreciation for snakes, for their shiny body, texture and its hood spread, etc. But these slithering rope like cold blooded dangerous creatures give me chills. Appreciating these camouflaged biting innocents with their killer bites is impossible for me. I would kill any snake that comes close to my house with a stick. During one summer, a snake created a wave of fear among everyone in the farm. Usually I would kill or drive the snakes away and forget about them but this one made me worried too. There were some prior incidents happened are the reason why this snake made everyone concerned and shiver in fear. You wouldn’t understand why it should be so frightening unless you know these. “There is a COBRA that came into Kalappa’s house. They are doing pooja (worship) today. We are all going” said my plantation Labor-Head taking along his sons, daughters-in-law on a half day leave. Kalappa had just returned from Bombay. It was a great deal of news that Kalappa went on a job to Bombay from an unknown rundown village of Malnad. When introduced, Kalappa’s father Byrappa never forgets to make it a point about his son working in Bombay. So I knew all about Kalappa well before his return from Bombay. But I had never seen him. Once while walking to Jannapura, I saw someone riding the bullock cart wearing a chauffer’s hat and all dressed up with a leather jerkin coat, jeans and a pair of sunglasses. I was surprised to see someone riding a bullock cart wearing leathers in this unbearable summer heat. When the cart approached me, he pulled the martingale straps of the bullock cart bringing the cart to stop and jumped out of the bullock cart in a snap, and military saluted me. I couldn’t recognize this lean pale screechy voiced guy. The bullock cart rider told me that he is the one Kalappa that works in Bombay. Determined to well verse the Bombay culture to this remote rundown village folks, he was riding the bullock cart wearing leathers and sunglasses that he brought from Bombay in this hot summer. After he introduced all about himself, out of curiosity I asked him what kind of a work is he doing at Bombay. He said that he is a ballboy in a club there. When I asked what kind of a job is that he said that it is picking the balls that go out of the tennis court and returning them to the players. I was little disappointed by hearing his job description as I expected a little more dignified job description by his proud appearance. I asked why he took up such a mean job of a ballboy instead of taking care of his father’s own paddy fields. Upon hearing that I don’t have a good opinion on his job, Kalappa’s pride might have hurt. May be he is convinced that he can’t have the same effect on me as he had by telling English job title to fellow villagers. So he took some effort to explain me about the greatness about his work. “Don’t look at it as a mean club servant’s job, Sir! All great officers come to play there. I get to know them. Chief Minister, Deputy Commissioners all comes to play there. When I return the ball to them, they have tipped me, Sir! Getting the dirt all over the body is the only reward here for working in the rice fields. An income out of a mere betel leaf vendor’s plate in Bombay worth more than what my father makes in his four acres of rice fields. A whole year’s earnings here won’t come close to what I make in Bombay in a month” he said. Given the fact when I have migrated from a city to country for farming, I did not like him saying farming is meaner than of a ballboy. But still it made me concerned as he was telling me a saddening truth of India. “If we want to eat FRUITS, no FRUITS here, if we want to drink MILK, no MILK here. Why should we be here? I am on a few days of vacation here, that’s all. I will go back to Bombay after that” he said. It was amusing to hear his use of English words in his dialogues. Additionally, to show that he learnt Hindi he was starting all his conversations with ‘Achchaa’ (means Good/Well/Fine in Hindi) without differentiating all of my sayings. “Let’s ask how many saris (dresses) my father has bought for my mom by earning in the rice farming. If I bring a sari (dress) out of my tip money while coming, she gets one otherwise none. Why should we grow this BLOODY rice?” he spitted out at the rice. I thought this lean pale guy will not adjust to the hardships of farming. But it puzzled me that why this FRUITS eating and MILK drinking guy is weaker than the BLOODY rice eating villagers! Kalappa finished his talk, saluted again, jumped on the cart and squeezed the bullock’s tail to move the cart. When I heard about the COBRA’s drop into Kalappa’s house, I assumed it might be the ghost name similar to the ones I used to hear. Once in a while gods or ghosts spirits used to emerge on some people in the village. Later I realized that it’s actually cobra the snake that Kalappa referred! He was told by the priest that he must perform cobra worship since a cobra entered into his house. So they all had come to the ant (snake) hill near my farm fence, applied turmeric, kumkum, placed a snake depicting cotton garland around the ant (snake) hill and poured milk into the ant (snake) hill’s mouth as worship rituals. Humans have strange passion about new peculiar words. Now many of the villagers started calling COBRA instead of snake or other usual local lingo due to Kalappa. Likewise ant (snake) hill became COBRA hill; snake worship became COBRA worship and strange similar words. As stated by him that he will return to Bombay within few days, it never became possible for Kalappa to return. Within few days after performing COBRA worship, Kalappa’s father Byrappa died of a snake bite. He had left the snake without killing that was roaming in his house by considering the advice that the cobra is a Brahmin and one should not kill it. Cobra that was hidden by the firewood, bit Byrappa and he died. It became inevitable for Kalappa to leave to Bombay since there is no one else to take care of the household. While dieing Byrappa mentioned that he harmed a cobra accidentally with his sickle while harvesting the rice and that same snake had come into his house and bitten him out of revenge. Later when everyone searched the house to kill the snake, it was already disappeared. Byrappa’s last statement witnessed by our Labor-Head was the culprit to create fearful situation in our farm. We keep boxes of beehives here and there under the shady cool places around the farm so bees can come in and build the colony. We need to clean them up regularly by driving the bugs, rats and lizards out that are holed in them. One day, I and Teekappa went to clean up a beehive. When I opened the lid of the beehive, there was a big cobra sleeping in got disturbed lifted its head hissing in a spring action. As I was holding the lid with both of my hands, I could not do anything. After seeing Teekappa yelling ‘snake snake’ and searching for a stick, our Labor-Head came running with a stick. Teekappa and the Labor-Head both swung the sticks all around in a hurry fearsome tension. Surrounded coffee plant branches broke for their stick swinging and didn’t harm the snake. May be a swing of them would have touched the snake so the snake lifted its hood and scared us while slithering through the twigs and leaves fallen. By the time I kept the beehive lid and picked the stick, snake had already escaped. There was not enough room in the beehive for such a big snake to get in. I couldn’t understand how and from which side of the box it had got in. This cobra has appeared near our home within few days of Byrappa’s death. Everyone assumed that it’s the same snake that came into the beehive recognizing by its light blackish complexion. Thinking of Byrappa’s last statement that the snake bit him out of revenge, our Labor-Head decided that the snake had come to finish him now. He became worried telling Teekappa “There is no doubt that this time COBRA had come to finish both of us.” The snake visits around the house is common in summer every year. So, “We will beat it to death. Don’t worry” I said consistently encouraging but the fear in our Labor-Head kept multiplying. “Why would Master care? He encouragingly insists, but the death time has come to us. It’s a mistake that we went to kill the COBRA on that day” Labor-Head told Teekappa it seems. It might be the same snake at both the places that we drove out of beehive! It was sharp enough to slither in and disappear somewhere when spotted. Once it was basking in the sun right on our door steps it seems. Teekappa jumped over the steps to skip stepping over it after spotting it by a hair’s difference and hurt his feet. By the time we all got there with sticks after hearing him, the snake had disappeared. To Be Continued...

ರೈತ, ಗೊಬ್ಬರ, ಪರಿಹಾರ

ಮೊನ್ನೆ ನನ್ನ ಹೈಸ್ಕೂಲ್ ಸ್ನೇಹಿತ ರಾಜಣ್ಣನೊಡನೆ ಮಾತನಾಡುತ್ತಿದ್ದೆ. ನಮ್ಮಿಬ್ಬರಿಗೂ ರೈತಾಪಿ ಹಿನ್ನೆಲೆ ಪರೋಕ್ಷವಾಗಿ ಇರುವುದರಿಂದ ಸಹಜವಾಗಿ ಗೊಬ್ಬರದ ಕೊರತೆ, ರೈತರ ಆತ್ಮಹತ್ಯೆಗಳು ನಮ್ಮ ಚರ್ಚೆಯ ವಿಷಯವಾಯಿತು. ನಾವು ಹೈಸ್ಕೂಲಿನಲ್ಲಿದ್ದಾಗ ಒಂದು ಹಸು ಸಾಕಿದ್ದೆವು. ಹಾಗೆಯೇ ರಾಜಣ್ಣನ ಮನೆಯಲ್ಲಿ ಎಮ್ಮೆಗಳನ್ನು ಸಾಕಿದ್ದರು. ನಮ್ಮ ಹೊಲವನ್ನು ಕೋರಿಗೆ ಪಡೆದಿದ್ದ ನಮ್ಮ ರೈತ, ನಮ್ಮಗಳ ಮೇಲಿನ ಪ್ರೀತಿಯಿಂದ ತನ್ನ ಒಂದು ಹಸುವನ್ನು ತಂದು ನಮ್ಮ ಮನೆಯಲ್ಲಿ ಕಟ್ಟಿಹೋಗಿದ್ದ. ಆ ಹಸುವಿನ ಚಾಕರಿ ಮಾಡಲು ನಮ್ಮಲ್ಲಿ ಜಗಳಗಳೇ ಆಗುತ್ತಿದ್ದವು. ಆದರೆ ಈಗ ನಗರ/ಪಟ್ಟಣಗಳನ್ನು ಬಿಡಿ, ನಮ್ಮ ಹಳ್ಳಿ ಮುದಾಹದಡಿಯಲ್ಲಿಯೇ ಇಂದು ಯಾರೂ ದನಗಳನ್ನು ಸಾಕುತ್ತಿಲ್ಲ. ಮುದಾಹದಡಿಯ ರೈತರು ಕೂಡ ಇಂದು ’ನಂದಿನಿ’ ಹಾಲನ್ನೋ ಇನ್ನೊಂದು ಎಂತದೋ ’ಆರೋಕ್ಯ’ ಎಂಬ ಹಾಲನ್ನು ಕೊಂಡುಕೊಳ್ಳುತ್ತಿದ್ದಾರೆ. ಮೊದಲೆಲ್ಲ ಮನೆಯಲ್ಲೇ ಇರುತ್ತಿದ್ದ ದನಗಳ ಸಗಣಿ ಗೊಬ್ಬರ, ತಿಪ್ಪೆ ಗೊಬ್ಬರವನ್ನು ಹಾಕಿ ಬೆಳೆ ಬೆಳೆಯುತ್ತಿದ್ದವರು, ಕೆಲವೇ ಕೆಲವು ಬೆಳೆಗಳಿಗೆ ’ಸರ್ಕಾರಿ ಗೊಬ್ಬರ’ಗಳನ್ನು ಸೀಮಿತವಾಗಿ ಬಳಸುತ್ತಿದ್ದರು. ಬಹುಕಾಲ ನಾನು ಸರ್ಕಾರಿ ಗೊಬ್ಬರವೆಂದರೆ ಸರ್ಕಾರದವರು ಪುಕ್ಕಟೆ ಕೊಡುವ ಗೊಬ್ಬರವೇನೋ ಅಂದುಕೊಂಡಿದ್ದೆ. ಬೆಳೆದಂತೆ ಅದು ರಸಗೊಬ್ಬರಕ್ಕೆ ನಮ್ಮ ಕಡೆಯ ರೈತರು ಹಾಗೆ ಕರೆಯುತ್ತಾರೆಂದು ತಿಳಿಯಿತು. ಹಾಗೆಯೇ ನಮ್ಮ ಹಳ್ಳಿಯ ರೈತನೊಬ್ಬ ’ವೀರ್ಯ’ ತಗಬೇಕು, ಸ್ವಲ್ಪ ಉದ್ರಿ ಕೊಡಲು ನಿಮ್ಮ ಪರಿಚಿತ ಗೊಬ್ಬರದ ಅಂಗಡಿಯವರಿಗೆ ಹೇಳು ಬಾ ಎಂದು ಕರೆಯುತ್ತಿದ್ದನು. ಇದರಿಂದ ಗಾಬರಿ/ಆಶ್ಚರ್ಯ/ಸಂಕೋಚಗೊಂಡು ಕೊಂಚ ವಿಚಾರಿಸಿದಾಗ ’ಯೂರಿಯಾ’ವನ್ನು ಅವನು ’ವೀರ್ಯ’ ಎನ್ನುವನು ಎಂದು ತಿಳಿದೆನು. ಇದು ನನಗೂ ನನ್ನ ಸ್ನೇಹಿತ ರಾಜಣ್ಣನಿಗೂ ತಮಾಷೆಯ ವಿಷಯವಾಗಿತ್ತು. ಹಾಗೆಯೇ ಕೀಟನಾಶಕಗಳಿಗೆ ’ಎಣ್ಣೆ’ ಹೊಡಿಯುವುದು ಎಂದು ತನ್ನ ಜನಪದ ಸೊಗಡಿನಲ್ಲಿ ಎನ್ನುತ್ತಿದ್ದನು ಆ ನಮ್ಮ ಹಳ್ಳಿಯವ.

ಇರಲಿ, ಈಗ ಆ ಕಷ್ಟಜೀವಿ ರೈತನಿಲ್ಲ. ಆತನ ಮಕ್ಕಳು ತಮ್ಮ ತಮ್ಮ ಜಮೀನುಗಳನ್ನು ಬಾಡಿಗೆ ಟ್ರ್‍ಆಕ್ಟರಿನಿಂದ ಉಳುಮೆ ಮಾಡಿಸಿ, ಭತ್ತ ನೆಡುವ, ನೀರು ಕಟ್ಟುವ, ಕೀಟನಾಶಕ ಸಿಂಪಡಿಸುವ, ಗೊಬ್ಬರ ಚೆಲ್ಲುವ ಎಲ್ಲಾ ಕೃಷಿ ಕಾರ್ಯಗಳನ್ನಾದಿಯಾಗಿಯೂ ಗುತ್ತಿಗೆ ಕೊಟ್ಟು, ತಣ್ಣಗೆ ಕಟ್ಟೆ ಸೇರಿ, ಕಟ್ಟೆಪುರಾಣದಲ್ಲಿ ತೊಡಗಿದ್ದಾರೆ! ಅಲ್ಲಿ ಬೆಳೆಯುವ ಬೆಳೆಗಳೂ ಕೂಡ ತಮ್ಮ ’ಕಟ್ಟೆ ಅಡಿಕ್ಟ್’ ಧಣಿಗಳಂತೆ, ಪೇಟೆಯ ’ಡ್ರಗ್ ಅಡಿಕ್ಟ್’ ವ್ಯಸನಿಗಳಂತೆ ಈ ಕೀಟನಾಶಕ, ರಸಗೊಬ್ಬರಗಳಿಗೆ ಅಡಿಕ್ಟ್ ಆಗಿವೆ. ಏನೇ ಮಾಡಿದರೂ ಕಾಲಕಾಲಕ್ಕೆ ಇಂತಿಷ್ಟು ಎಂದು ಈ ಕೀಟನಾಶಕ/ರಸಗೊಬ್ಬರಗಳನ್ನು ಕೊಡದಿದ್ದರೆ, ಈ ಬೆಳೆಗಳು ಮಲಗೇಬಿಡುತ್ತವೆ. ಒಮ್ಮೆ ನನ್ನ ಅಕ್ಕಿ ವ್ಯಾಪಾರಿ ಮಿತ್ರನೊಬ್ಬ ನನ್ನನ್ನು ಯಾವ ರೀತಿಯ ಅಕ್ಕಿಯನ್ನು ಶಿಕಾಗೋನಲ್ಲಿ ಉಪಯೋಗಿಸುತ್ತೀಯೆಂದು ಕೇಳಿದನು. ಅದಕ್ಕೆ ನಾನು ಇತ್ತೀಚಿನ ಕೆಲ ವರ್ಷಗಳಿಂದ ನಾನು ಶ್ರೀಲಂಕಾದಿಂದ ಬರುವ ಕೆಂಪು ಅಕ್ಕಿಯನ್ನು ಉಪಯೋಗಿಸುತ್ತೇನೆಂದೂ ಮತ್ತು ಇಲ್ಲಿ ಚಿಕ್ಕಮಗಳೂರು ಕಡೆ ಸಿಗುವ ಕೆಂಪುಅಕ್ಕಿಯನ್ನೋ, ಪಾಲಿಷ್ ಕಡಿಮೆ ಇರುವ ಕಂದು ಬಣ್ಣದ ಅಕ್ಕಿಯನ್ನು ತಿನ್ನುವುದು ಒಳ್ಳೆಯದೆಂದು ಹೇಳಿದೆನು. ಅವನು ಅದಕ್ಕೆ ಅವನು "ಹಾಗೆಲ್ಲ ಇಲ್ಲಿ ಹೇಳಬೇಡ, ಪಾಲಿಷ್ ಕಡಿಮೆ ಇಟ್ಟರೆ, ಕೀಟನಾಶಕ/ರಸಗೊಬ್ಬರಗಳ ರಾಸಾಯನಿಕಗಳು ಹಾಗೆಯೇ ಉಳಿದು, ಸದ್ಯಕ್ಕೆ ಐವತ್ತಕ್ಕೆ ಸಾಯುತ್ತಿರುವ ಜನ, ಕಡಿಮೆ ಪಾಲಿಷ್ ಇರುವ ಅಕ್ಕಿ ತಿಂದು ಮೂವತ್ತಕ್ಕೆ ಸಾಯುವಂತಾಗುತ್ತದೆ. ಹಾಗಾಗಿ ಆದಷ್ಟೂ ಹೆಚ್ಚು ಪಾಲಿಶ್ ಮಾಡಿ, ರಸಾಯನಿಕಗಳನ್ನು ಹೆರೆದ ಅಕ್ಕಿಯನ್ನು ಬಳಸಬೇಕು" ಎಂದು ಹೇಳಿದನು. ಹಾಗೆಯೇ ತೆಂಗಿಗೆ ನುಸಿರೋಗಕ್ಕೆ ಯಾವುದೋ ಕೀಟನಾಶಕವನ್ನು ಬಳಸಿದ ಮರದಿಂದ ಎಳನೀರು ಕುಡಿದು ಕೆಲವರು ಸತ್ತು ಹೋದರೆಂದು ಹೇಳಿದನು. ಎಷ್ಟು ನಿಜವೋ, ಎಷ್ಟು ಗಾಳಿಸುದ್ದಿಯೋ. ಒಟ್ಟಾರೆ ನಮ್ಮ ರೈತ ಈ ರಾಸಾಯನಿಕಗಳ ಮೇಲೆ ಆಧಾರಿತನಂತೂ ಆಗಿದ್ದಾನೆ.

ಇನ್ನು ಜನನಾಯಕರೋ ಪಕ್ಷಾತೀತವಾಗಿ ಎಲ್ಲಾ ಪಕ್ಷದವರೂ ರೈತನ ಮೇಲೆ ಸವಾರಿ ಮಾಡಿ, ಶಾಶ್ವತ ಕೃಷಿ ವ್ಯವಸ್ಥೆಗಳಾದ ಮಾರುಕಟ್ಟೆ, ಬೆಲೆ ನಿಯಂತ್ರಣ, ಉಗ್ರಾಣ, ಸಾರಿಗೆಯಂತಹ ವ್ಯವಸ್ಥೆಗಳನ್ನು ಸರಿಪಡಿಸದೇ ಪರಿಹಾರಗಳನ್ನೊ, ಪ್ಯಾಕೇಜುಗಳನ್ನೋ ಘೋಷಿಸುತ್ತಿದ್ದಾರೆ. ಈ ಪರಿಹಾರಗಳ ಪರಿಣಾಮವೇ ಇಂದು ರೈತರನ್ನು ಪರಿಹಾರಕ್ಕೆ ಕೈಚಾಚುವಂತಹ ನಿಸ್ಸಹಾಯಕರನ್ನಾಗಿ ಮಾಡಿವೆ. ಹಿಂದೆ ಕೃಷ್ಣ ಸರ್ಕಾರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಒಂದು ಲಕ್ಷ ಪರಿಹಾರ ಘೋಷಣೆಯಾದಾಗ ಸಾಲುಸಾಲಾಗಿ ಲಕ್ಷಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಬಿಜೆಪಿ ಸರ್ಕಾರದಲ್ಲಿಯೂ ಕೂಡ ಮೊನ್ನೆ ಗೋಲೀಬಾರಿಗೆ ಮೃತನಾದ ರೈತನ ಸಂಸಾರಕ್ಕೆ ಸರ್ಕಾರಿ ಉದ್ಯೋಗ/ಪರಿಹಾರಗಳು ಘೋಷಣೆಯಾದದ್ದೇ ತಡ, ರೈತರು ತಮಗೂ ಕೂಡ ಈ ಪರಿಹಾರಗಳು ದೊರಕುತ್ತವೇನೋ ಎಂದುಕೊಂಡು ಸಾಲುಸಾಲಾಗಿ ಅತ್ಮಹತ್ಯೆ ಮಾಡಿಕೊಳ್ಳುತ್ತಿರುವರೇನೋ ಎನಿಸುತ್ತದೆ. ಈ ಪರಿಹಾರ ಕೇವಲ ರೈತರಿಗಷ್ಟೇ ಅಲ್ಲ, ಇನ್ಯಾತರದ್ದೇ ಪರಿಹಾರಗಳಿಗೂ ಅನ್ವಯವಾಗುತ್ತದೆ. ಪ್ರತಿಯೊಂದಕ್ಕೂ ರಾಷ್ಟ್ರ್‍ಈಯ ವಿಮೆಯನ್ನು ಮಾಡಿಸಿ, ಪರಿಹಾರವನ್ನು ಹಕ್ಕನ್ನಾಗಿಯೂ, ನಿಶ್ಚಿತವಾಗಿಯೂ ಇರುವಂತೇ ಮಾಡಿದ್ದರೆ, ಜನ ಪರಿಹಾರಕ್ಕಾಗಿ ಸಾಯದೇ, ಪರಿಹಾರಾಪೇಕ್ಷಿಗಳಾಗಿ ಹೋರಾಡದೆ ಬದುಕುವ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರೇನೋ.

ಈ ರಾಸಾಯನಿಕಗಳ ಮೇಲಿನ ಅವಲಂಬನೆ ಅನಿವಾರ್ಯವೇ? ಹಿಂದೆಲ್ಲ, ಈ ರಾಸಾಯನಿಕಗಳಿಲ್ಲದೆ ತಲತಲಾಂತರದಿಂದ ಭಾರತೀಯ ಕೃಷಿಕ ಬೇಸಾಯವನ್ನು ಮಾಡಿಯೇ ಇಲ್ಲವೆ ಅನಿಸುವಷ್ಟರ ಮಟ್ಟಿಗೆ ನಮ್ಮ ರೈತರು ಈ ರಾಸಾಯನಿಕಗಳ ಮೇಲೆ ಅವಲಂಬನೆಗೊಂಡಿದ್ದಾರೆ. ಇದ್ದುದರಲ್ಲಿ ಅನೇಕರು ಈ ರಾಸಾಯನಿಕಗಳನ್ನು ತೊರೆದು ನೈಸರ್ಗಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗುತ್ತಿರುವ ಸಂಗತಿಗಳು ಅಲ್ಲಲ್ಲಿ ಕೇಳಬರುತ್ತಿದ್ದರೂ ನಮ್ಮ ರೈತರು ಯಾಕೋ ಮನಸ್ಸು ಮಾಡುತ್ತಿಲ್ಲ. ರೈತರ ಬಗ್ಗೆ ವಸ್ತುನಿಷ್ಟ ಕಾಳಜಿಯಿದ್ದಿದ್ದರೆ ರಾಜಕೀಯ ಪಕ್ಷಗಳು ರೈತನ ಹೆಸರಿನಲ್ಲಿ ರಾಜಕೀಯಗಳನ್ನು ಮಾಡದೆ, ಈ ನೈಸರ್ಗಿಕ ಕೃಷಿಯ ಪದ್ದತಿಗಳನ್ನು ಹೆಚ್ಚು ಪ್ರಚಾರಿಸುವತ್ತ ಎಂದು ಮುಖ ಮಾಡುವರೋ?

ರೈತ ಸಂಘಗಳು/ಕೃಷಿ ಅಭಿವೃದ್ಧಿ ಹೇಗಿರಬೇಕೆಂಬುದನ್ನು ನಮ್ಮ ನೆರೆಯ ಶ್ರೀಲಂಕಾವನ್ನು ನೋಡಿದರೆ ಸಾಕು, ಸಾಕಷ್ಟು ನಾವು ಕಲಿಯಬಹುದು. ಸಿದ್ಧವಸ್ತುಗಳನ್ನು ತಯಾರಿಸಿ ಮಾರುವುದನ್ನು ಬಿಡಿ, ತಾನು ಬೆಳೆದ ಭತ್ತ/ಬೇಳೆಗಳನ್ನೇ ನಮ್ಮ ರೈತರು ’ಗ್ರೇಡಿಂಗ್’ ಮಾಡಿಸಿ ಮಾರಲಾಗದಂತಹ ಸ್ಥಿತಿ ನಮ್ಮಲ್ಲಿದೆ. ಅದೇ ಪಕ್ಕದ ಶ್ರೀಲಂಕಾದ ರೈತ ತಾನು ಬೆಳೆದ ಪ್ರತಿಯೊಂದನ್ನು ಸಂಸ್ಕರಿಸಿ, ಸಿದ್ಧವಸ್ತುಗಳನ್ನಾಗಿಸಿಯೋ ಅಥವಾ ಅರೆ-ಸಿದ್ಧವಸ್ತುಗಳನ್ನಾಗಿಸಿಯೋ ತನ್ನ ರೈತ ಸಂಘದ ಮೂಲಕ ಐ.ಎಸ್.ಓ.೯೦೦೧ ಪ್ರಾಮಾಣಿಸಿ ಮಾರುಕಟ್ಟೆಗೆ ಕಳುಹಿಸುತ್ತಾನೆ. ಶ್ರೀಲಂಕಾದಿಂದ ಬರುವ ಕೆಂಪು ಅಕ್ಕಿ, ಟಿಲ್ಡಾ/ಪೆಪ್ಸಿ/ಕೋಕ್ ಕಂಪೆನಿಗಳ ಬಾಸ್ಮತಿ ಅಕ್ಕಿಯ ದುಪ್ಪಟ್ಟು ಬೆಲೆಗೆ ಅಮೇರಿಕಾದಲ್ಲಿ ಬಿಕರಿಯಾಗುತ್ತದೆ. ಆದರೇ ಅದೇ ತರಹದ ಚಿಕ್ಕಮಗಳೂರು ಕಡೆ ಬೆಳೆಯುತ್ತಿದ್ದ ಕೆಂಪು ಅಕ್ಕಿ ನಮ್ಮಲ್ಲೇ ಕಾಣೆಯಾಗಿದೆ! ಹಾಗೆಯೇ ಶ್ರೀಲಂಕಾದ ತೆಂಗಿನ ಸೇಂದಿ (ಟಾಡಿ)ಅರ್ಜೆಂಟೀನಾದ ವೈನ್ ಗಿಂತ ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತದೆ. ನಮ್ಮಲ್ಲಿ ಸೇಂದಿಯೇ ಬ್ಯಾನ್ ಆಗಿದೆ! ಇದೆಲ್ಲವೂ ಅಲ್ಲಿನ ಕೃಷಿ ಸಹಕಾರಿ ಸಂಘಗಳು, ನಮ್ಮಲ್ಲಿನ ’ಅಗ್ಮಾರ್ಕ್’ ರೀತಿಯ ಶ್ರೀಲಂಕಾ ರಾಷ್ಟ್ರೀಯ ಸಂಸ್ಥೆಯ ಮುಖಾಂತರ ಇದೆಲ್ಲವನ್ನು ಸಾಧ್ಯವಾಗಿಸಿವೆ.

ಇನ್ನು ನಮ್ಮ ಅನೇಕ ನಾಯಕರು ರೈತರ ಉದ್ದಾರವೆಂದರೆ ಅವರು ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ರಫ್ತಾಧಾರಿತ ಸಫೇದ್ ಮುಸ್ಲಿ ತರಹದ ಬೆಳೆಗಳನ್ನು ಬೆಳೆಯಬೇಕೆಂದು ಪರಿಹಾರ ಸೂಚಿಸುತ್ತಾರೆ. ತಿನ್ನಲಿಕ್ಕೇ ಇಲ್ಲದಿದ್ದ ಮೇಲೆ ಕಾಮವರ್ಧಕ ಗೆಡ್ಡೆ ಬೆಳೆದು ಯಾರಿಗೆ ಏನನ್ನು ತಿನ್ನಿಸುವರೋ ಈ ನಾಯಕರು! ಬಹುಶಃ ಮಾನಿಕಾ ಲೆವಿನ್ಸ್ಕಿಯನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡಿರುವರೆನಿಸುತ್ತದೆ. ಇರಲಿ, ಒಂದು ವೇಳೆ ಆ ರೀತಿಯ ಬೆಳೆಗಳನ್ನು ಬೆಳೆದರೂ ಆ ರಫ್ತಿನ ಗುಣಮಟ್ಟವನ್ನು ಕಾಯ್ದುಕೊಳ್ಳುವಂಥಹ ವಾತಾವರಣ ನಮ್ಮಲ್ಲಿದೆಯೇ? ತಿಳಿಯದು.

ಆದರೆ ನಮ್ಮಲ್ಲೇ ಇರುವ ಭಾರತದ ಅಗಾಧ ಗ್ರಾಹಕ ಶಕ್ತಿಯ ಅರಿವೇ ನಮ್ಮ ನಾಯಕರಿಗಿದ್ದಂತಿಲ್ಲ. ಮೆಗಾಸಿಟಿಗಳನ್ನು ಬಿಡಿ, ಸಾಮಾನ್ಯ ಊರುಗಳಲ್ಲೇ ’ದರ್ಶಿನಿ’, ’ಹಳ್ಳಿಮನೆ’, ’ದಿಲ್ಲಿದರ್ಬಾರ್’ ಎಂಬ ಅದೆಷ್ಟು ಹೋಟೇಲುಗಳಿಲ್ಲ. ಆ ಎಲ್ಲಾ ಹೋಟೇಲುಗಳ ಗ್ರಾಹಕ ಶಕ್ತಿಯನ್ನೂ ಕೂಡಾ ಕಾಣದಷ್ಟು ಕುರುಡರಾಗಿದ್ದಾರೆ ನಮ್ಮ ನಾಯಕರು. ಈ ಅಗಾಧ ಗ್ರಾಹಕ ಶಕ್ತಿಯನ್ನು ಕಂಡೇ ತಾನೆ ಪೆಪ್ಸಿ/ಕೋಕ್/ವಾಲ್ ಮಾರ್ಟ್...ಇನ್ನಿತರೇ ವಿದೇಶೀ ಕಂಪೆನಿಗಳು ಭಾರತದತ್ತ ಮುಖ ಮಾಡಿರುವುದು. ನೀರಿನ ಒಂದು ಬಾಟಲಿಗೆ ಹತ್ತು ರೂಪಾಯಿ ಕೊಟ್ಟು ನೀರು ಕುಡಿಯುವ ನಾವು ಐದು ರೂಪಾಯಿಗೆ ಒಂದು ಎಳನೀರು ಕುಡಿಯುತ್ತೇವೆಯೇ? ಉಹೂಂ. ಮುಂದೇ ಅದೇ ಎಳನೀರು ಪೆಪ್ಸಿ/ಕೋಕ್ ಕಂಪೆನಿಗಳಿಂದ ಬಾಟಲಿ ರೂಪದಲ್ಲಿ ಬಂದರೆ ಮೂವತ್ತು ರೂಪಾಯಿ ಕೊಟ್ಟು ಕುಡಿಯುತ್ತೇವೆ. ನಮ್ಮ ರೈತ ಟೊಮ್ಯಾಟೋ/ಮೆಣಸಿನಕಾಯಿಗಳನ್ನು ಬೆಲೆಯಿಲ್ಲದೇ ರಸ್ತೆಗೆ ಸುರಿಯುತ್ತಿದ್ದರೆ, ಅದೇ ರಸ್ತೆಯ ಮೂಲೆಯಲ್ಲಿರುವ ಬೇಕರಿಯಲ್ಲಿ ’ಮ್ಯಾಗ್ಗಿ’ ಟೊಮ್ಯಾಟೋ/ಚಿಲ್ಲಿ ಸಾಸ್/ಕೆಚಪ್ ಗಳ ಬಾಟಲಿಗಳು ಮೂವತ್ತು ರೂಪಾಯಿಗೆ ಬಿಕರಿಯಾಗುತ್ತಿರುತ್ತವೆ. ಈ ಒಂದು ಸರಳ ಆರ್ಥಿಕ ಲೆಕ್ಕಾಚಾರವನ್ನರಿಯದ, ಮಣ್ಣಿನ ಮಕ್ಕಳೆನಿಸಿಕೊಳ್ಳಲು ಹಪಹಪಿಸುವ ನಾಯಕರು, ರೈತನನ್ನು ಹೇಗೆ ಉದ್ಧರಿಸಿಬೇಕೆಂದು ಕಂಡುಕೊಳ್ಳಲು ದೂರದ ಇಸ್ರೇಲಿಗೋ ಹಾಲೆಂಡಿಗೋ ಹೋಗುತ್ತಾರೆ. ಇದು ನಮ್ಮ ಆರ್ಥಿಕ ವ್ಯವಸ್ಥೆಯ ವಿಪರ್ಯಾಸ!

ಇನ್ನು ರೈತರ ಪರ ಹೋರಾಟವೆಂದರೆ, ರೈತನಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ, ಪರಿಹಾರಗಳಿಗೆ ಹೋರಾಡುವುದೇ ಎಂದು ನಾವೇಕೆ ಅಂದುಕೊಳ್ಳಬೇಕೋ? ರೈತ ಸಂಘಗಳು ಕೇವಲ ಬಂದ್/ಹೋರಾಟ/ಪರಿಹಾರಯಾಚನೆಗಳಂಥಹ ರಾಜಕೀಯ ಪಕ್ಷಗಳ ಮಾದರಿಯ ಹೋರಾಟಗಳನ್ನು ಮಾಡೀ ಮಾಡೀ ರೈತರನ್ನು ಸೋಮಾರಿಗಳನ್ನಾಗಿಸುತ್ತಿವೆ. ಯಾರು ಹೆಚ್ಚು ಸೋಮಾರಿಗಳನ್ನು ಮಾಡುವನೋ ಅಂಥವನು ರಾಜಕಾರಣಿಯಾಗಿಯೂ, ಉಳಿದವರು ಅವನ ಬಾಲಬಡುಕರಾಗಿಯೋ ಅದಕ್ಕೂ ಮಿಕ್ಕುಳಿದವರು ಮಾನಸಿಕ ಖಿನ್ನತೆಯವರಾಗಿಯೂ ಈ ರಾಜಕಾರಣಿಗಳ ಆತ್ಮಹತ್ಯೆ ಯೋಜನೆಗೆ ಕುರಿಗಳಾಗುತ್ತಾರೆ. ಈ ರೈತ ಸಂಘಗಳು ತಮ್ಮ ಸಂಘಗಳ ಮುಖಾಂತರ ರೈತರು ಬೆಳೆದ ವಸ್ತುಗಳಿಗೆ ಮಾರುಕಟ್ಟೆ/ಸಂಸ್ಕರಣೆ/ಬಹುಮಹಡೀ ಕೃಷಿಪದ್ದತಿ/ ಅನುಭವ ಹಂಚಿಕೆಯಂಥಹ ಆರ್ಥಿಕ ಅಭಿವೃದ್ಧಿಯ ಸಹಕಾರೀ ಕಾರ್ಯಗಳನ್ನು ಕೈಗೊಳ್ಳಬಾರದೇಕೆ? ಚುನಾವಣೆಗಳಲ್ಲಿ ಸ್ಪರ್ಧಿಸಿ, ರಾಜ್ಯ/ರಾಷ್ಟ್ರ್‍ಅಗಳನ್ನು ಆಳುವ ಚತುರತೆಯಿರುವ ರೈತಸಂಘದ ನಾಯಕರು, ಈ ರೀತಿ ಸಹಕಾರಿ ಉದ್ದಿಮೆಗಳನ್ನು ಕಟ್ಟಿದರೆ ರೈತರ ಉದ್ದಾರ ತನ್ನಂತಾನೇ ಆಗುತ್ತದೆ. ಒಂದು ವಿರಕ್ತೀ ರಾಮಚಂದ್ರಾಪುರದ ಮಠ, ೨೦೦ ಮಿ.ಲೀ. ಗೋಮೂತ್ರವನ್ನು ಐವತ್ತು ರೂಪಾಯಿಗೆ ಮಾರುತ್ತಿರುವಾಗ, ಸಾರ್ವಜನಿಕ ನಾಯಕರೆನಿಸಿಕೊಳ್ಳುವ ಸಂಸಾರಿಗ ರೈತ ಮುಖಂಡರು ಈ ರೀತಿಯ ಉದ್ದಿಮೆಗಳನ್ನು ಸಹಕಾರೀ ಸಂಘಗಳ ಮುಖಾಂತರ ಮಾಡಬಹುದಲ್ಲವೇ? ರೈತಸಂಘಗಳು ಹಸಿರು ಟವೆಲ್ಲಿನಿಂದಾಚೆ ಎಂದು ಯೋಚಿಸುವರೋ?

ಹಿಡಿ ಬಿತ್ತಿ, ಖಂಡುಗ ತೆಗೆಯುವ ವ್ಯವಸಾಯವನ್ನು ಕಂಡೇ ಸರ್ವಜ್ಞ "ಕೋಟಿ ವಿದ್ಯೆಯಲಿ ಮೇಟಿ ವಿದ್ಯೆಯು ಲೇಸು" ಎಂದಿರುವನೇನೋ. ಇದ ಸರಿಯಾಗಿ ಅರಿಯದ ನಮ್ಮ ರಾಜಕಾರಣಿಗಳು, "ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ, ಧೀರರೂ ಅಲ್ಲ! ಇದು ಕಾರಣ ನೆರೆ ಮೂರು ಲೋಕದ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗನವರೆತ್ತಬಲ್ಲರೋ!" ಎಂಬಂತೆ ಪರಸ್ಪರ ದೋಷಾರೋಪಗಳಲ್ಲೇ ಕಾಲ ಕಳೆಯುತ್ತಿದ್ದಾರೆಯೇ ಹೊರತು ದೇಶವನ್ನು ಸರಿದಾರಿಯಲ್ಲಿ ಎಂದು ನಡೆಸುವರೋ!

ರೈತರಿಗೆ ಬೇಕಾದ್ದು ರಸಗೊಬ್ಬರವೂ ಅಲ್ಲ, ಪರಿಹಾರವೂ ಅಲ್ಲ. ಕೇಸರಿಯೂ ಅಲ್ಲ, ಬಡವರ ತಾಯಿಯೂ ಅಲ್ಲ, ಮಣ್ಣಿನ ಮಕ್ಕಳೂ ಅಲ್ಲ, ಹಾಗೆಯೇ ಹಸಿರು/ಕೆಂಪು/ಬಿಳಿ/ಕಪ್ಪು ಟವೆಲ್ಲುಗಳೂ ಅಲ್ಲ. ಬೇಕಾದ್ದು ಪ್ರಾಮಾಣಿಕ ಸ್ವಾವಲಂಬನೆಯ ಆರ್ಥಿಕ ವ್ಯವಸ್ಥೆ. "ಅನ್ನದೇವರ ಮುಂದೆ ಇನ್ನು ದೇವರು ಉಂಟೆ, ಅನ್ನವಿರುವತನಕ ಪ್ರಾಣವು-ಜಗದೊಳಗನ್ನವೇ ದೈವ ಸರ್ವಜ್ಞ" ಎಂಬುದ ವಸ್ತುನಿಷ್ಟವಾಗಿ ಎಂದು ನಮ್ಮವರಿಗೆ ಅರಿವಾಗುವುದೋ!

ಅಣಕ:

ವೀರ್ಯ, ಸಫೇದ್ ಮುಸ್ಲಿ, ಲೆವೆನ್ಸ್ಕಿ, ರೈತ, ಗೋಲೀಬಾರ್ ಆಜ್ಞೆ ಕೊಟ್ಟಿದ್ದ್ಯಾರೆಂದು ಗೊತ್ತಿಲ್ಲದ ಸರ್ಕಾರ,ಗೊಬ್ಬರದ ಕೊರತೆಗೆ ಕೇಂದ್ರ ಕಾರಣವೆಂದು ಗೊತ್ತಿದ್ದೂ ರಾಜ್ಯ ಸರ್ಕಾರವನ್ನು ವಿರೋಧಿಸುವ ವಿರೋಧ ಪಕ್ಷಗಳು.... ಇದೆಲ್ಲಕ್ಕಿಂತ ಮಿಗಿಲಾದ ಅಣಕ ನನಗಂತೂ ಸದ್ಯಕ್ಕೆ ಹೊಳೆಯುತ್ತಿಲ್ಲ!?

ಎರಡನೇ ತಲೆಮಾರಿನ ಭಾರತೀಯ ಅಮೇರಿಕನ್ನರು!

ಕಳೆದ ವಾರ ಜಾತ್ಯಾತೀತ ಅಮೇರಿಕಾದಲ್ಲಿ ಜಾತೀಯತೆಯ ಬಗ್ಗೆ ಸೂಕ್ಷ್ಮವಾಗಿಯೇ ಬರೆದಿದ್ದೇನೆ ಎನ್ನಬೇಕು. ಏಕೆಂದರೆ ಇಲ್ಲಿನ ಭಾರತೀಯ ಭಾಷೆ/ರಾಜ್ಯಗಳ ಸಂಘಗಳಲ್ಲಿ ನಡೆಯುವ ಗೊಂದಲ, ಗೋಜಲು, ಗುಂಪುಗಾರಿಕೆಗಳು ಅತ್ಯಂತ ಸಿಲ್ಲಿಯಾಗಿಯೂ, ಸಮುದ್ರಕ್ಕೆ ಬಂದರೂ ನಮ್ಮವರು ಉಚ್ಚೆ ಹುಯ್ದುಕೊಂಡು ಅದರಲ್ಲಿ ಮೀನು ಹಿಡಿಯುವ ಪ್ರಯತ್ನವನ್ನು ಮಾಡುವುದನ್ನು ನೋಡಿದರೆ, ಇವರಿಗೆಲ್ಲ ಯಾರಪ್ಪಾ ಸ್ನಾತಕೋತ್ತರ ಪದವಿಗಳನ್ನು ಕೊಟ್ಟರೆಂದು ಹೇಸಿಗೆಯಾಗುತ್ತದೆ. ಓದುಗ ಮಿತ್ರ ರವಿ ಹೆಗಡೆಯವರು " ’ಕುವೆಂಪು’ ಹೆಸರಲ್ಲಿ ತಯಾರಿಸಿದ ಸಾಫ್ಟ್ವೇರ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ ಉಳಿದ ’ಬ್ರಾಹ್ಮಣ’ ಸಾಫ್ಟ್ವೇರ್ ಗಳ ಬಗ್ಗೆ ಕೆಸರು ಎರಚುತ್ತ ವೈಯುಕ್ತಿಕ ದ್ವೇಷ ಕಾರುತ್ತಿರುವ ಜನರು ಎಲ್ಲಿರುತ್ತಾರೋ ಅಲ್ಲಿ ಜಾತ್ಯಾತೀತತೆ ಹೇಗೆ ಸಾಧ್ಯ?" ಎಂದು ಬಹು ಮಾರ್ಮಿಕವಾಗಿ ಬರೆದು, ellakavi.wordpress.com ಎಂಬ ಲಿಂಕ್ ಅನ್ನು ಕಳುಹಿಸಿದ್ದರು. ನೀವುಗಳೂ ಒಮ್ಮೆ ಈ ಲಿಂಕ್ ಅನ್ನು ನೋಡಿ, ಪರಾಮರ್ಶಿಸಿ. ಇದಕ್ಕಿಂತ ಹೆಚ್ಚಾಗಿ ಇನ್ನೇನನ್ನೂ ಈ ಕುರಿತಾಗಿ ನಾನು ಹೇಳಲಾರೆ!

ಇರಲಿ, ಈ ಮೊದಲನೇ ಹೊಚ್ಚ ಹೊಸ ಭಾರತೀಯ ವ(ಹೊ)ಲಸೆಗಾರರ ಪೀಳಿಗೆ, ಏನೇ ಸಂಘ, ದತ್ತಿ, ಸಮ್ಮೇಳನಗಳೆಂದು ತಿಪ್ಪರಲಾಗ ಹಾಕಿದರೂ ಇವರ ಮಕ್ಕಳುಗಳ ಎರಡನೇ ಪೀಳಿಗೆ, ಇದನ್ನು ಗಂಭೀರವಾಗಿ ಪರಿಗಣಿಸದೇ "ಸಮ್ ಕಲ್ಚರಲ್ ಫೆಸ್ಟಿವಲ್’ ಅಥವಾ ’ಫ್ಯಾನ್ಸಿ ಡ್ರೆಸ್ಸಿಂಗ್’ ಎಂದು ಸಂತೋಷಿಸುತ್ತಾರೆಯೇ ಹೊರತು ಅದಕ್ಕಿಂತ ಏನನ್ನೂ ಅರ್ಥೈಸಿಕೊಳ್ಳಲಾರರು. ಈ ಮಕ್ಕಳು ಯಾವುದೇ ಜಾತಿಗಳ ಪರಿಚಯವಿಲ್ಲದೇ ಎಲ್ಲಾ ಭಾರತೀಯರನ್ನು ಒಂದೇ ಎಂದು ಪರಿಗಣಿಸುತ್ತಾರೆ. ಅಬ್ಬಬ್ಬಾ ಎಂದರೆ ಹಿಂದೂ/ಮುಸ್ಲಿಂ ಎಂದೋ, ಸಸ್ಯಹಾರೀ/ಮಾಂಸಹಾರೀ ಎಂದೋ ಹೆಚ್ಚೆಂದರೆ ಉತ್ತರ ಭಾರತೀಯ/ದಕ್ಷಿಣ ಭಾರತೀಯ ಎಂಬಲ್ಲಿಗೆ ತಮ್ಮನ್ನು ಸೀಮಿತಗೊಳಿಸುತ್ತಾರೆಯೇ ವಿನಹಾ ಯಾವುದೇ ಜಾತಿಗಳಿಂದ ಗುರುತಿಸಲಾಗದಷ್ಟರ ಮಟ್ಟಿಗೆ ಮುಗ್ಧರಾಗಿದ್ದಾರೆ.

ಇನ್ನು ಮೊದಲನೇ ಪೀಳಿಗೆ, ತಮ್ಮ ನವ್ಯ ಪೀಳಿಗೆಗೆ ತಮ್ಮ ಭಾಷೆಗಳನ್ನು ಕಲಿಸಲು ಏನೆಲ್ಲಾ ಪ್ರಯತ್ನ ಪಟ್ಟರೂ ಅದು ಅಳಿಸಿಹೋಗುತ್ತಿದೆಯೆಂದೇ ಹೇಳಬೇಕು. ಇದೇಕೆ ಹೀಗೆ ಎಂದು ನನಗೂ ಅರ್ಥವಾಗಿಲ್ಲ. ಆದರೂ ಭಾರತದಲ್ಲಿ ಅನೇಕರು ಬಹುಭಾಷಾ ಪಂಡಿತರಾಗಿರುತ್ತಾರೆ. ಮನೆಮಾತು ಬೇರೆಯದೇ ಭಾಷೆಯಿದ್ದರೂ ತಾವು ವಾಸಿಸುವ ಆಯಾ ಪ್ರದೇಶದ ಪ್ರಾದೇಶಿಕ ಭಾಷೆಯನ್ನೂ ಮಾತನಾಡಬಲ್ಲವರಾಗಿರುತ್ತಾರೆ. ಬೆಂಗಳೂರು ಸೇರುವವರೆಗೆ ಕೇವಲ ಕನ್ನಡದಲ್ಲಷ್ಟೇ ನಿರರ್ಗಳವಾಗಿ ಮಾತನಾಡಲು ಬರುತ್ತಿದ್ದ ನನಗೆ, ಕೆಲವೇ ವರ್ಷಗಳ ಬೆಂಗಳೂರು ಕೃಪೆಯಿಂದ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಕನ್ನಡದಷ್ಟೇ ನಿರರ್ಗಳವಾಗಿ ಮಾತನಾಡುವುದು ಸಾಧ್ಯವಾಯಿತು. ಇಲ್ಲಂತೂ ಕನ್ನಡದವರು, ತೆಲುಗರು, ತಮಿಳರು ನನ್ನ ಸ್ವಲ್ಪ ವಿಚಿತ್ರ ಎನ್ನುವಂತಹ ’ರವಿ ಹಂಜ್’ ಹೆಸರಿನ ದೆಸೆಯಿಂದಾಗಿ ನನ್ನ ಹಿನ್ನೆಲೆಯನ್ನು ಗುರುತಿಸಲಾಗದೆ, ನನ್ನನ್ನು ತಮ್ಮ ತಮ್ಮ ರಾಜ್ಯಗಳಲ್ಲಿ ಸೆಟ್ಲ್ ಆಗಿರುವ "ಬಡ್ಡಿ ಲೇವಾದೇವಿಯ ಮಾರ್ವಾಡಿಯವನಿರಬಹುದು" ಎಂದುಕೊಳ್ಳುತ್ತಾರೆ. ಇನ್ನು ಉತ್ತರ ಭಾರತೀಯರೋ ನನ್ನನ್ನು ತಮ್ಮವನೆಂದೇ ಪರಿಗಣಿಸುತ್ತಾರೆ. ಒಟ್ಟಾರೆ ನನ್ನ ಹೆಸರಿನ ದೆಸೆಯಿಂದಂತೂ ನಾನು ಎಲ್ಲರಿಗೂ ಸಲ್ಲುವ ಭಾರತೀಯನಾಗಿದ್ದೇನೆ!

ಇರಲಿ, ಆದರೆ ಇಲ್ಲಿನ ಬಹುತೇಕ ಭಾರತೀಯ ಮೂಲದ ಮಕ್ಕಳಿಗೆ ಮಾತ್ರ ಇಂಗ್ಲಿಷ್ ಬಿಟ್ಟರೆ ತಮ್ಮ ಮನೆಮಾತಾಗಲೀ ಇನ್ಯಾವ ಭಾಷೆಯಾಗಲಿ ಕಲಿತರೂ ಮಾತನಾಡಲಾಗದಷ್ಟು ಪರಿಣಿತಿ ಬರುವುದೇ ಇಲ್ಲ. ಇದು ಅಮೇರಿಕಾದ ಗಾಳಿ, ನೀರಿನ ಪರಿಣಾಮವೆಂದೇ ನನಗನಿಸುತ್ತದೆ. ಭಾಷಾ ಪಂಡಿತ ಪೋಷಕರಿದ್ದರೂ ಅಷ್ಟೇ, ಅನ್ಯಭಾಷಾ ತರಗತಿಗಳಿಗೆ ಕಳುಹಿಸಿದರೂ ಅಷ್ಟೇ. ಈ ಮಕ್ಕಳು ತಮ್ಮ ಮಾತೃಭಾಷೆಯನ್ನಷ್ಟೇ ಮಾತನಾಡುವವರಾಗಿದ್ದರೂ ಶಾಲೆಗೆ ಸೇರಿದೊಡನೆ ತಮ್ಮ ಮಾತೃಭಾಷೆಯನ್ನು ಕೆಲವೇ ತಿಂಗಳುಗಳಲ್ಲಿ ಮರೆತುಬಿಡುತ್ತಾರೆ. ನಂತರ ಅದು ಅಳಿಸಿಯೇ ಹೊಗುತ್ತದೆ. ಇವರು ತಮ್ಮ ಮಾತೃಭಾಷೆಯಲ್ಲಿ ಓದಲು/ಬರೆಯಲು ಕಲಿತರೂ ಅದು ಕೇವಲ ಓದಲು ಮತ್ತು ಬರೆಯುವಲ್ಲಿಗೆ ಸೀಮಿತವಾಗುತ್ತದಲ್ಲದೇ, ಅದರ ಅರ್ಥವೇ ಇವರಿಗೆ ಗೊತ್ತಾಗುವುದಿಲ್ಲ. ಅವರ ಮನೆಗಳಲ್ಲಿ ಇಂಗ್ಲಿಷ್ ಮಾತನಾಡದೇ ಅವರವರ ಮನೆಮಾತಿನಲ್ಲಿಯೇ ಅವರ ಪೋಷಕರು ಮಾತನಾಡುತ್ತಿದ್ದರೂ ಕೂಡ ಅವರುಗಳ ಮಾತೃಭಾಷೆ ಈ ಮಕ್ಕಳಿಗೆ ಅಷ್ಟಕ್ಕಷ್ಟೇ. ಇದು ಏಕೆ ಹೀಗೆಂದು ನನಗೆ ಇದುವರೆಗೂ ಅರ್ಥವಾಗದೇ ಒಂದು ರೀತಿಯ ಚಿದಂಬರ ರಹಸ್ಯವೇ ಆಗಿದೆ.

ಎರಡನೇ ಪೀಳಿಗೆಯ ವಿಷಯ ಹೀಗಿರುವಾಗ, ಮೊದಲ ಪೀಳಿಗೆಯ ಹಲವರು ಕನ್ನಡ ಪೀಠ, ತಮಿಳು ಪೀಠ, ತೆಲುಗು ಪೀಠ....ಇನ್ನಿತರೆ ಭಾಷೆಗಳ ಪೀಠಗಳನ್ನು ಇಲ್ಲಿನ ಯಾವುದಾದರೂ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲು ಪ್ರಯತ್ನಪಡುತ್ತಿರುತ್ತಾರೆ. ಮನೆಯಲ್ಲೇ ತಮ್ಮ ಮಕ್ಕಳಿಗೆ ತಮ್ಮ ಮನೆಮಾತು ಕಲಿಸಲಾಗದ ಇವರು ಪೀಠಗಳನ್ನು ಸ್ಥಾಪಿಸಿ ಅದ್ಯಾರಿಗೆ ಭಾರತೀಯ ಭಾಷೆಗಳನ್ನು ಕಲಿಸುವರೋ ನಾನರಿಯೆ! ಬಹುಶಃ ಇದು ತಾಯ್ನಾಡಿನಲ್ಲಿನ ಪ್ರಶಸ್ತಿಗಳ ಹಪಹಪಿಯೋ ಅಥವಾ ಪ್ರಚಾರಪ್ರಿಯತೆಯ ತೀಟೆಯೋ ಇರಬಹುದು.

ಈ ಮಾತೃಭಾಷೆ ಬಾರದು ಎಂಬ ಕೊರತೆಯೊಂದನ್ನು ಬಿಟ್ಟರೆ, ಈ ಮಕ್ಕಳು ಭಾರತೀಯರು ಹೆಮ್ಮೆ ಪಡಬೇಕಾದಂತಹ ಪೀಳಿಗೆ ಎಂದೇ ಹೇಳಬಹುದು. ಇಲ್ಲಿನ ಪರಿಸರ, ಶಿಕ್ಷಣ, ಮೌಲ್ಯಗಳನ್ನು (ಭಾರತದಲ್ಲಿ ಈ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಯ ಅಪಪ್ರಚಾರವೇ ಇದ್ದು, ಇಲ್ಲಿನ ಅಸಲೀ ವಿಷಯಗಳ ನೈಜ ತಿಳುವಳಿಕೆ ಅಷ್ಟಾಗಿ ಇಲ್ಲ. ಇದರ ಬಗ್ಗೆ ಮತ್ತೊಮ್ಮೆ ಬರೆಯುವೆ.) ನೋಡುತ್ತ, ಕೇಳುತ್ತ ಬೆಳೆಯುವ ಈ ಮಕ್ಕಳು ಇದ್ದುದರಲ್ಲಿ ಅತ್ಯಂತ ಬುದ್ದಿವಂತರೂ, ವಿವೇಚನೆಯಿರುವವರೂ ಮತ್ತು ಪ್ರಾಮಾಣಿಕರೂ ಆಗಿರುತ್ತಾರೆ. ಇವರ ಪೋಷಕರು ಏನೇ ಸಂಘ/ಸಮ್ಮೇಳನಗಳನ್ನು ಮಾಡಿ, ಸಂಸ್ಕೃತಿಯ ನೆಪವಾಗಿ ತಮ್ಮ ಜಾತಿಯ ಅರಿವು ಮೂಡಿಸುವ ಪ್ರಯತ್ನಗಳು ಎಳ್ಳಷ್ಟೂ ಫಲಪ್ರದವಾಗಿರುವುದನ್ನು ನಾನಂತೂ ನೋಡಿಲ್ಲ. ನನ್ನ ಕಂಪೆನಿ ಪರವಾಗಿ ಸಾಕಷ್ಟು ಕ್ಯಾಂಪಸ್ ಇಂಟರ್ವ್ಯೂಗಳನ್ನು ಮಾಡಿ, ಈ ರೀತಿಯ ಭಾರತೀಯ ಮೂಲದ ಎರಡನೇ ಪೀಳಿಗೆಯ ಅನೇಕರನ್ನು ನಮ್ಮ ಕಂಪೆನಿಗೆ ಸೇರಿಸಿಕೊಂಡಿದ್ದೇನೆ. ಹಾಗೆಯೇ ಅವರೊಂದಿಗೆ ಕೆಲಸವನ್ನೂ ಮಾಡಿದ್ದೇನೆ. ಆ ಒಂದು ಅನುಭವವಿರುವುದರಿಂದ ಮೇಲಿನ ಮಾತುಗಳನ್ನು ನಾನು ಧೃಢವಾಗಿ ಹೇಳಬಲ್ಲೆ. ಅಷ್ಟೇ ಅಲ್ಲ, ಇದೇ ರೀತಿ ಭಾರತದಲ್ಲಿಯೂ ನಮ್ಮ ಯುವಜನತೆಗೆ ಜಾತಿ ಪರಿಧಿಯ ಪರಿಮಿತಿಗೆ ಸಿಕ್ಕದಂತಹ ಮುಕ್ತ ಪರಿಸರವಿರುವಂತಿದ್ದರೆ? ಎಂದು ಇವರನ್ನು ನೋಡಿದಾಗೆಲ್ಲ ಅಂದುಕೊಳ್ಳುತ್ತೇನೆ.

ಇರಲಿ, ಭಾರತದಲ್ಲಿಯೇ ಹದಿಹರೆಯದವರು ಏನೇನೋ ಸಮಸ್ಯೆಗಳಿಗೆ ಸಿಲುಕುತ್ತಿರುವಾಗ ಅಮೇರಿಕಾದ ಸ್ವಚ್ಛಂದ ವಾತಾವರಣದಲ್ಲಿ ಈ ಯುವಕರು ಹದಿಹರೆಯದ ಸಮಸ್ಯೆಗಳಿಗೆ ಸಿಲುಕದೇ ಇರಲು ಹೇಗೆ ಸಾಧ್ಯ? ಇಲ್ಲದ್ದನ್ನೆಲ್ಲಾ ಹೇಳಬೇಡಿ ಎನ್ನುವಿರಾ? ನಾನು ಗಮನಿಸಿದಂತೆ, ಈ ಸಮಸ್ಯೆ ಭಾರತೀಯ ಮೂಲದವರನ್ನು ಅಷ್ಟಾಗಿ ಕಾಡುತ್ತಿಲ್ಲವೆಂದೇ ಅನಿಸುತ್ತದೆ. ಈ ನವಪೀಳಿಗೆ ತಮ್ಮ ಅಲ್ಪಸಂಖ್ಯಾತತೆಯ ಕಾರಣದಿಂದಲೋ ಏನೋ ಒಂದು ರೀತಿಯಲ್ಲಿ ಸದಾ ಜಾಗೃತರಾಗಿರುತ್ತಾರೆ. ನೀವು ನಂಬುತ್ತೀರೋ ಇಲ್ಲವೋ ಇಲ್ಲಿನ ಬಹುಪಾಲು ಭಾರತೀಯ ಯುವಪೀಳಿಗೆ ಬೆಂಗಳೂರಿನ ಎಮ್.ಜಿ. ರೋಡಿಗರಿಗಿಂತ ಸಭ್ಯವಾದ ಬಟ್ಟೆಗಳನ್ನು ಧರಿಸಿರುತ್ತಾರೆ! ಹಾಗೆಯೇ ಯಾರಾದರೂ ತಕ್ಷಣಕ್ಕೆ ಭಾರತೀಯರೆಂದು ಗುರುತಿಸಬಹುದಾದ ಚಹರೆಯಿಂದಾಗಿ ಈ ರೀತಿಯ ಜಾಗೃತಿ ಬೆಳೆದುಬಂದಿದೆಯೆಂದೇ ನನಗನಿಸುತ್ತದೆ! ಈ ಜಾಗೃತಿಯ ಪರಿಣಾಮದಿಂದಲೇ ಏನೋ ಅಷ್ಟಾಗಿ ಯುವ ಸಮಸ್ಯೆಗಳಿಗೆ ಸಿಲುಕದೇ ತಮ್ಮ ಹದಿಹರೆಯದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸುತ್ತ ಬಹುಪಾಲು ಯುವಜನತೆ ಯಶಸ್ವಿಯಾಗಿದ್ದಾರೆ ಮತ್ತು ಆಗುತ್ತಿದ್ದಾರೆ ಎಂದೇ ಅನಿಸುತ್ತದೆ.

’ಪ್ರತ್ಯಕ್ಷವಾಗಿ ನೋಡಿದ್ದರೂ ಪರಾಮರ್ಶಿಸಿ ನೋಡು’ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಈ ಮಕ್ಕಳು ಯಾವುದೇ ತತ್ವವನ್ನೋ, ವಿಚಾರವನ್ನೋ ಹೇಳಿದರೆ ಅದಕ್ಕೆ ನೂರೆಂಟು ಪ್ರಶ್ನೆಗಳನ್ನು ಹಾಕಿ, ಅರಿತು ನಂತರವೇ ಒಪ್ಪಿಕೊಳ್ಳುವಂತಹ ಶಾಲಾ ವಾತಾವರಣದಲ್ಲಿ ಬೆಳೆದಿರುವುದರಿಂದಲೂ ಮತ್ತು ಅವರುಗಳ ಪೋಷಕರು ತಮ್ಮ ಜಾತಿ/ಧರ್ಮಗಳ ಆಚರಣೆಗಳ ಬಗ್ಗೆ ತಿಳಿಸಿ, ಅವರುಗಳ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವ ಶಕ್ತಿಯನ್ನು ಹೊಂದಿರದ ಕಾರಣದಿಂದಲೂ, ಮತ್ತು ಪೋಷಕರು ಭಾರತದಲ್ಲಿಯ ಗದರಿಸುವಿಕೆಯ ರೀತಿ "ತಲೆಪ್ರತಿಷ್ಟೆ ಮಾಡಬೇಡ ಹೇಳಿದ್ದಷ್ಟನ್ನು ಮಾಡು" ಎಂದು ಇಲ್ಲಿನ ಪರಿಸರದಲ್ಲಿ ಹೇಳಲಾಗದ ಪರಿಣಾಮವಾಗಿಯೂ, ಈ ಯುವಶಕ್ತಿ ಜಾತಿ, ಅಂಧಶ್ರದ್ಧೆಗಳ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಪಡೆದಿರಲಾರರು ಎಂದುಕೊಂಡಿದ್ದೇನೆ.

ಒಟ್ಟಾರೆ ಈ ಭಾರತೀಯ ಅಮೇರಿಕನ್ ಯುವ ಪೀಳಿಗೆ, "ಯಾತರ ಹೂವೇನು? ನಾತವಿದ್ದರೆ ಸಾಕು, ಜಾತಿಯಲಿ ಜಾತಿಯೆನಬೇಡ ಶಿವನೊಲಿದಾತನೇ ಜಾತ ಸರ್ವಜ್ಞ" ಎಂಬಂತೆ ಜಾತಿಪರಿಧಿಯ ಪರಿವೆ ಇಲ್ಲದೆ ಒಟ್ಟಿನಲ್ಲಿ ’ಭಾರತೀಯ ಅಮೇರಿಕನ್’ ಆಗಿದ್ದಾರೆ. ಇದೇ ರೀತಿ ಭಾರತದ ನಮ್ಮ ಸಮಾಜದಲ್ಲಿಯೂ "ಎಲುವಿನಾ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ" ಎಂಬಂತಹ ಸ್ವಚ್ಛ ವಾತಾವರಣವಿದ್ದಿದ್ದರೆ ಭಾರತದಲ್ಲಿ ಇಂದು ’ಅಮೇರಿಕನ್ ಭಾರತೀಯ’ರಿರುತ್ತಿದ್ದರೋ ಏನೋ!

ಅಣಕ:

ಒಮ್ಮೆ ನನ್ನ ದೆಹಲಿ ಮೂಲದ ಸ್ನೇಹಿತ ಪೆಚ್ಚಾಗಿ ಕುಳಿತಿದ್ದ. ’ಏನಯ್ಯಾ ಸಮಾಚಾರ’ ಎಂದು ಕೇಳಿದ್ದಕ್ಕೆ, ಅವನು ತನ್ನ ಮಗನ ಹೆಸರನ್ನು ಬದಲಾಯಿಸಬೇಕೆಂದು ಯೋಚಿಸುತ್ತಿದ್ದೇನೆ ಎಂದನು. ಏಕೆ ’ಪ್ರೀಕ್ಷಿತ್’ ಎಂಬ ಸುಂದರ ಹೆಸರೇ ಇಟ್ಟಿದ್ದೀಯಲ್ಲ ಎಂದಿದ್ದಕ್ಕೆ, ಅವನು ತನ್ನ ಮಗನು ತನ್ನ ಪ್ರೀಕ್ಷಿತ್ ಎಂಬ ಹೆಸರನ್ನು ಅವನ ಅಮೇರಿಕನ್ ಸ್ನೇಹಿತರುಗಳು ಬಿಡಿಬಿಡಿಯಾಗಿ ’ಪ್ರಿಕ್ ಶಿಟ್’ ಎಂದು ಸಂಭೋದಿಸುವದನ್ನು ಬಿಡಿಬಿಡಿಯಾಗಿ ಬಿಡಿಸಿಟ್ಟಾಗ, ಹೆಸರುಗಳನ್ನು ತುಂಡರಿಸಿಕೊಳ್ಳುವ ಅವಘಡಗಳನ್ನು ನೋಡಿದ್ದ ನಾನು, ಸಂಪೂರ್ಣ ಹೆಸರುಗಳಿಂದ ಕೂಡ ಎಂತಹ ಪೇಚಿಗೆ ಸಿಲುಕಬಹುದೆಂದು ಪೆಚ್ಚಾದೆನು!

ಜಾತ್ಯಾತೀತ ಅಮೇರಿಕಾದಲ್ಲಿ ಜಾತೀಯತೆ?!

ಶೀರ್ಷಿಕೆಯನ್ನು ನೋಡಿ ಜಾತಿಗಳೇ ಇಲ್ಲದ ಅಮೇರಿಕಾದಲ್ಲಿ ಇದೇನಪ್ಪಾ? ಎಂದೋ ಅಥವಾ ದೇವೇಗೌಡ ಬೆಂಬಲಿಗರು ಅಮೇರಿಕಾದಲ್ಲಿ ಹೇಗೆ ಸೇರಿಕೊಂಡರು ಎಂದೋ ಆಶ್ಚರ್ಯಪಡುತ್ತಿರುವಿರಾ? ದೇವೇಗೌಡರ ಚೆಲುವ, ಚೆನ್ನಿಗ, ಬಿಸಿಲ್ಗುದುರೆಗಳಿಗೆ ಹೆಚ್೧ಬಿ ಸಿಕ್ಕದು ಬಿಡಿ! ಇದು ಜಾತಿಗಳಿಲ್ಲದ ಬಿಳಿ/ಕರಿಯರ ಕುರಿತಾಗಲೀ ದೇವೇಗೌಡರ ಪಟಾಲಂ ಕುರಿತಾದ ಲೇಖನವಾಗಲೀ ಅಲ್ಲ. ಆದರೆ "ಜಾತಿಗಳೇ ಎಲ್ಲಾ" ಎಂದುಕೊಂಡಿರುವ ಭಾರತೀಯ ಮೂಲದ ಅಮೇರಿಕನ್ನರ ಕುರಿತಾದುದಾಗಿದೆ!

ಸಾಮಾನ್ಯವಾಗಿ ಇಲ್ಲಿನ ಭಾರತೀಯರು ತಮ್ಮ ಅಲ್ಪಸಂಖ್ಯೆಯ ಕಾರಣದಿಂದಲೋ, ವಿಶಿಷ್ಟ ಸಂಸ್ಕೃತಿಯ ದೆಸೆಯಿಂದಲೋ ಅಷ್ಟಾಗಿ ಮುಖ್ಯವಾಹಿನಿಯಲ್ಲಿ ಬೆರೆಯದೇ ತಮ್ಮ ತಮ್ಮ ಭಾರತೀಯ ಮೂಲದ ಸ್ನೇಹಿತರುಗಳನ್ನೇ ಕಂಡುಕೊಂಡು ಸ್ನೇಹಸಂಬಂಧಗಳನ್ನು ಹೊಂದಿರುತ್ತಾರೆ. ಹಾಗೆಯೇ ನನಗೂ ಕೂಡ ಅನೇಕ ಭಾರತೀಯ ಮೂಲದ ಸ್ನೇಹಿತರಿದ್ದಾರೆ. ಅವರಲ್ಲಿ ಅನೇಕರು ಹೆಚ್ಚಿನದಾಗಿ ಆಂಧ್ರಪ್ರದೇಶದವರಾಗಿದ್ದಾರೆ. ಎಪ್ಪತ್ತರ ದಶಕ ಭಾರತೀಯ ಮೂಲದ ಡಾಕ್ಟರರುಗಳ ವಲಸೆಯ ಅಲೆಯಾದರೆ, ತೊಂಬತ್ತರ ದಶಕ ಐ.ಟಿ. ವಲಸಿಗರ ಅಲೆಯಾಯಿತು. ಈ ಅಲೆಗಳಲ್ಲಿ ಬಂದು ನೆಲೆಸಿರುವ ಭಾರತೀಯ ಮೂಲದವರು ತಮ್ಮ ತಮ್ಮ ಭಾಷೆಗಳ/ರಾಜ್ಯಗಳ ಹೆಸರಿನಲ್ಲಿ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ತಮ್ಮ ಸಂಸ್ಕೃತಿಯ ನೆನಹನ್ನು ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಾರೆ. ಹೀಗಿದ್ದ ಸಂಘ/ಸಂಸ್ಥೆಗಳಲ್ಲಿ ತಮ್ಮ ತಮ್ಮ ಪ್ರೋತ್ಸಾಹಕರ ಸಂಖ್ಯೆ ಏರಿದಂತೆ ನಿಧಾನವಾಗಿ ಭಾರತದ ಇತರೆ ಸಂಸ್ಕೃತಿಗಳಾದ ಜಾತೀಯತೆ, ಗುಂಪುಗಾರಿಕೆ, ರಾಜಕೀಯ, ಪಕ್ಷಭೇದಗಳು ಏರುತ್ತಿವೆ.

ವೈಯುಕ್ತಿಕವಾಗಿ ಇಂತಹ ಯಾವುದೇ ಸಂಘಗಳೊಂದಿಗೆ ಸಂಬಂಧವಿರದ ನನಗೆ ಪ್ರತ್ಯಕ್ಷ ಅನುಭವವಾಗಿರದಿದ್ದರೂ ಪರೋಕ್ಷವಾಗಿ ಆಗಿದೆ. ಕೆಲಸದ ನಿಮಿತ್ತ ಪ್ರತಿ ವಾರವೂ ನ್ಯೂಯಾರ್ಕ್ ನಗರಕ್ಕೆ ಹೋಗುವ ನಾನು, ಕಳೆದ ಬೇಸಿಗೆಯಲ್ಲಿ ನನ್ನ ತೆಲುಗು ಮಿತ್ರರನ್ನು ಕಾಣುವ ಎಂದು ಒಂದು ವೀಕೆಂಡ್ ಅಲ್ಲಿಯೇ ಉಳಿದುಕೊಂಡೆನು. ಅವರೆಲ್ಲ ನನ್ನನ್ನು "ಈ ದಿನ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡುಗೆ ಒಂದು ಸನ್ಮಾನವನ್ನು ಮಾಡುತ್ತಿದ್ದೇವೆ ನಡೆ ಹೋಗುವ" ಎಂದು ಕರೆದುಕೊಂಡು ಹೋದರು. ಎಲ್ಲಿ ನೋಡಿದರೂ ಹಳದಿ ವಸ್ತ್ರವನ್ನು ಹಣೆಗೆ ಕಟ್ಟಿಕೊಂಡಿದ್ದ ಜನರು ಕಾಣುತ್ತಿದ್ದರು. ಯಾವುದೋ ಒಂದು ಜಾತಿಯವರು ವೃತಗಳನ್ನೋ ಹಬ್ಬಗಳನ್ನೋ ಆಚರಿಸುವಾಗ ಹಳದಿ ಬಟ್ಟೆ ತೊಡುವುದನ್ನು ಬೆಂಗಳೂರಿನಲ್ಲಿ ನೋಡಿದ್ದೆನು. ಆ ರೀತಿಯ ವೃತವನ್ನು ಈ ಹಳದಿ ಪಟ್ಟಿ ಜನರು ಆಚರಿಸುತ್ತಿರಬಹುದೆಂದುಕೊಂಡು ಸುಮ್ಮನಾದರೂ ಅದು ನನ್ನನ್ನು ಭಾಧಿಸುತ್ತಿದ್ದಿತು. ಪಕ್ಕದಲ್ಲಿದ್ದ ನನ್ನ ಸ್ನೇಹಿತನನ್ನು ಮೆಲ್ಲಗೆ ಕೇಳಿದಾಗ ಅದು ತೆಲುಗುದೇಶಂ ಪಕ್ಷದ ಬಣ್ಣವೆಂದು ಹೇಳಿದನು! ನಂತರ ತಿಳಿದುದುದೇನೆಂದರೆ ಅದೊಂದು ತೆಲುಗು ಕಂ ದೇಶಂ ಸಭೆಯೆಂದೂ, ಚಂದ್ರಬಾಬುನಾಯ್ಡು ತಮ್ಮ ಪಕ್ಷಕ್ಕೆ ಅಮೇರಿಬೆಂಬಲಿಗರಿಂದ ಹಣ ಶೇಖರಿಸಲು ಒಂದು ತಿಂಗಳ "ಫಂಡ್ ರೈಸಿಂಗ್" ಕ್ಯಾಂಪೇನ್ ಗೆ ಬಂದಿರುವುದಾಗಿಯೂ, ಮತ್ತವರಿಗೆ ಇಲ್ಲಿ ತಿರುಗಲು ಒಬ್ಬ ಅಭಿಮಾನಿ ಚಾರ್ಟರ್ಡ್ ಫ್ಲೈಟ್ ಅನ್ನು ಇಪ್ಪತ್ತು ದಿನಗಳಿಗೆ ಕೊಡಿಸಿರುವುದಾಗಿಯೂ ಮತ್ತು ಈ ರೀತಿಯ ಸಾಕಷ್ಟು ಅಭಿಮಾನಿಗಳು ಟಿಕೇಟ್ ಆಕಾಂಕ್ಷಿಗಳಾಗಿ, ರಾಜ್ಯಪ್ರಶಸ್ತಿ ಆಕಾಂಕ್ಷಿಗಳಾಗಿ, ಇಲ್ಲವೇ ಮತ್ಯಾವುದೋ ಉದ್ದೇಶದ ಆಕಾಂಕ್ಷಿಗಳಾಗಿ ಸಾಕಷ್ಟು ಬೆಂಬಲವನ್ನು ನಾಯ್ಡುಗಳಿಗೆ ತೋರುತ್ತಾರಂತೆ! ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಒಬ್ಬ ಉದ್ಯಮಿ, ಬಹುಶಃ ಟಿಕೆಟ್ ಆಕಾಂಕ್ಷಿ ಇರಬಹುದೇನೋ, ಒಂದು ಚಿನ್ನದ ಗದೆ ಮತ್ತು ಕಿರೀಟವನ್ನು ನಾಯ್ಡುಗೆ ಅರ್ಪಿಸಿದನು.

ನಾಯ್ಡುರವರಿಗೆ ಏನೆನ್ನಿಸಿತೋ ಕೂಡಲೇ ತಮ್ಮ ಪಕ್ಕದಲ್ಲಿ ಕೂತಿದ್ದ ಎಡಿಸನ್ ಸಿಟಿ ಮೇಯರ್ ಅವರಿಗೆ ಆ ಕಿರೀಟವನ್ನು ತೊಡಿಸಿ, ಗದೆಯನ್ನು ಕೂಡ ಅವರ ಹೆಗಲಿಗೇರಿಸಿದರು! ಇದರಿಂದ ಆನಂದಗೊಂಡ ಎಡಿಸನ್ ಮೇಯರ್ ಆ ಕೊಡುಗೆಗಳನ್ನು ತನ್ನ ಮನೆಗೆ ಹೊತ್ತೊಯ್ದರೆ, ಕೊಟ್ಟ ಉದ್ಯಮಿ ಪೆಚ್ಚಾಗಿದ್ದ! ಅಂದು ನನಗೆ ಅಪ್ಪಟ ಭಾರತದ ಒಂದು ರಾಜಕೀಯ ಸಭೆಯ ಅನುಭವ ಬಹುಕಾಲದ ನಂತರ ಆಗಿತ್ತು. ಮರುದಿನ ಮೋಟಾರ್ ಸೈಕಲ್ ರ್‍ಯಾಲಿ ಕೂಡ ಇರುವುದೆಂದೂ, ರ್‍ಯಾಲಿಯ ನಂತರ ಉಚಿತ "ವೈನ್ ಅಂಡ್ ಡೈನ್" ಪಾರ್ಟಿ ಇರುವುದೆಂದನು. ಸಾಮಾನ್ಯವಾಗಿ ಮೋಟಾರ್ ಸೈಕಲ್ಲುಗಳನ್ನು ಹೊಂದಿರದ ಇಲ್ಲಿನ ಭಾರತೀಯರಲ್ಲಿ ಅದೆಷ್ಟು ಮಂದಿ ಆ ರ್‍ಯಾಲಿಗೆ ಬರುವರೋ ಎಂದು ನಾನು ಸಂದೇಹವನ್ನು ವ್ಯಕ್ತಪಡಿಸಿದ್ದಕ್ಕೆ, ನನ್ನ ಮಿತ್ರನು ರ್‍ಯಾಲಿಗಾಗಿಯೇ ಇಲ್ಲಿನ ಮೋಟಾರ್ ಸೈಕಲ್ ಕ್ಲಬ್ಬುಗಳನ್ನು ಬುಕ್ ಮಾಡಿಕೊಂಡಿದ್ದು, ಈ ರ್‍ಯಾಲಿಗೆ ಬರುವವರೆಲ್ಲಾ ಬಿಳಿ/ಕರಿಯ ಅಮೇರಿಕನ್ನರೆಂದನು! ಒಂದು ರೀತಿ ಭಾರತೀಯ ಸಿನೆಮಾಗಳಲ್ಲಿ ಬಿಳಿ ಸಹನಟ/ನಟಿಯರ ನೃತ್ಯಗಳಿರುವಂತೆ! ಭಾರತದ ಚುನಾವಣಾ ಸಮಯದಲ್ಲಿ ಹೆಂಡ, ಬಿರ್ಯಾನಿ ಹಂಚುವುದರ ಸುಧಾರಿತ ಕ್ರಮದಂತೆ, ಅಂದಿನ ಸಭೆಯಲ್ಲಿ ಕೂಡಾ ಉಚಿತ ವೈನ್ ಇದ್ದಿತು!

ಮೊನ್ನೆ ಮತ್ತದೇ ಸ್ನೇಹಿತರನ್ನು ಕಾಣಲು ಮತ್ತೆ ನ್ಯೂಜೆರ್ಸಿಗೆ ಹೋಗಿದ್ದೆನು. ಈ ಬಾರಿ ತೆಲುಗು ನಟ ಬಾಲಕೃಷ್ಣನ ’ಪಾಂಡುರಂಗ’ ಎಂಬ ಸಿನಿಮಾ ಇಲ್ಲಿಯೂ ಬಿಡುಗಡೆಯಾಗಿ ಅದರ ಪ್ರಚಾರಕ್ಕೆ ಖುದ್ದು ಬಾಲಕೃಷ್ಣ ಬಂದಿದ್ದನು. ಅವನ ಸಿನಿಮಾ ಬಿಡುಗಡೆಯ ದಿನ ಮತ್ತದೇ ಹಳದಿ ಪಟ್ಟಿಯ ಅಭಿಮಾನಿಗಳು ಹಳದಿ ಬಾವುಟಗಳನ್ನ್ಹಿಡಿದು ಬೆಂಬಲವನ್ನು ವ್ಯಕ್ತಪಡಿಸಿದರೆ, ಚಿರಂಜೀವಿ ಅಭಿಮಾನಿಗಳು ಕಪ್ಪು ಪಟ್ಟಿ, ಬಾವುಟಗಳನ್ನ್ಹಿಡಿದು ವಿರೋಧವನ್ನು ತೋರಿಸಿದ್ದರು. ವಿಚಾರಿಸಲಾಗಿ ಕಮ್ಮ ಜಾತಿಯ ಬಾಲಕೃಷ್ಣನನ್ನು ಕಾಪು ಜಾತಿಯವರು ವಿರೋಧಿಸುತ್ತಿದ್ದಾರೆ ಎಂದು ತಿಳಿಯಿತು. ಅದಕ್ಕೂ ಮುನ್ನ ಚಿರಂಜೀವಿಯ ಮುನ್ನಾಬಾಯಿಗೂ ಇದೇ ಮರ್ಯಾದೆ ಸಿಕ್ಕಿತ್ತಂತೆ! ಹಾಗೆಯೇ ’ಪಾಂಡುರಂಗ’ನಿಗೆ ಡ್ಯಾಲಸ್ ನ ಯಾವುದೋ ಪಾರ್ಕಿನಿಂದ ಥಿಯೇಟರ್ ವರೆಗೆ ಸೈಕಲ್/ಬೈಕ್ ರ್‍ಯಾಲಿಯೊಂದಿಗೆ, ಎರಡು ಸಾವಿರ ಕಾರುಗಳ ಪೆರೇಡ್ ನಡೆದು ಬಾಲಕೃಷ್ಣನ ಬರ್ತಡೇ ಆಚರಣೆ ನಡೆಯಿತಂತೆ! ಇನ್ನು ಇದು ಭಾರತೀಯ ಸಿನೆಮಾಗಳ ವಿದೇಶೀ ಬಿಡುಗಡೆಯ ಸಂಪ್ರದಾಯವಾಗಬಹುದೇನೋ?

ಇಲ್ಲಿನ ತೆಲುಗು ಸಂಘಗಳು ತಾನಾ, ಬಾನಾ ಗಾನಾಗಳೆಂದು ಕಮ್ಮ, ರೆಡ್ಡಿ, ಕಾಪು ಜಾತಿಗಳಿಗನುಗುಣವಾಗಿ ಒಂದೊಂದು ತಲೆಯೆತ್ತಿವೆ!

ಹಾಗೆಯೇ ಆಂಧ್ರದಲ್ಲಿ ಚುನಾವಣೆಗಳಾದರೆ ಇಲ್ಲಿನ ತೆಲುಗರ ಬಿ.ಪಿ ಏರುತ್ತದೆ. ಆ ಬಿ.ಪಿ.ಯನ್ನು ಇಳಿಸಲು ಹಳದಿ ಪಟ್ಟಿ ಕಟ್ಟಿಕೊಂಡು ಕ್ಯಾಲಿಫೋರ್ನಿಯಾದ ಉದ್ದಗಲಕ್ಕೂ ಸೈಕಲ್ ಹೊಡೆಯುತ್ತಾರೆ!

ಇದು ಮೇಲ್ನೋಟಕ್ಕೆ ಸಿನಿಮಾ ಅಭಿಮಾನಿಗಳಂತೆ ಕಂಡರೂ ಇಲ್ಲಿ ಜಾತಿಗಳೇ ಪ್ರಮುಖವಾಗಿವೆ. ಕಮ್ಮ ಜಾತಿಯ ಪ್ರಾಬಲ್ಯವನ್ನು ಮುರಿಯಲು ಚಿರಂಜೀವಿ ಕಾಪು ಜನಗಳನ್ನು ಬೆಂಬಲಿಸಿ ರಾಜಕೀಯ ಎಂಟ್ರ್‍ಇಯ ಸುದ್ದಿಯನ್ನು ತೇಲಿ ಬಿಡುತ್ತಿದ್ದಂತೆಯೇ ಈ ಜಾತೀಯತೆಯ ವಿಷ ಇಲ್ಲಿನ ತೆಲುಗು ಮೂಲದ ಭಾರತೀಯರನ್ನು ಬಹುವಾಗಿ ಆವರಿಸಿಕೊಂಡು ಬಿಟ್ಟಿವೆ. ಇದು ಕೇವಲ ತೆಲುಗರ ಕುರಿತಾಗಿ ಅಷ್ಟೇ ಅಲ್ಲ, ಉತ್ತರ ಭಾರತೀಯರಲ್ಲಿ ಇದು ಇನ್ನೂ ಭಯಂಕರವಾಗಿದೆ. ಅಮೇರಿಕಾದಲ್ಲಿದ್ದರೂ ಅವರು ತಮ್ಮ ರಾಜ್ಯದ ಅನ್ಯಜಾತಿಯವನಲ್ಲಿ ಸ್ನೇಹವನ್ನೂ ಮಾಡುವುದಿಲ್ಲ! ಬಿಹಾರೀ ಬ್ರಾಹ್ಮಣರು ಬನಿಯಾ ಜನಗಳನ್ನು ಸ್ವಲ್ಪ ದೂರವೇ ಇಡುತ್ತಾರೆ. ನನ್ನ ಆಪ್ತ ಬಿಹಾರೀ ಸ್ನೇಹಿತನ ಮನೆಗೆ ಅವರ ಸಂಬಂಧಿ ಶತ್ರುಘ್ನ ಸಿನ್ಹಾರವರು ಬಂದಾಗ ನಡೆದ ಗುಂಡಿನ ಪಾರ್ಟಿಯಲ್ಲಿ ಈ ವಿಷಯ ನನಗೆ ತಿಳಿಯಿತು. ಬಿಹಾರಿ ಸಂಘಗಳಲ್ಲಿ ಇದು ಇನ್ನೂ ವಿಕೋಪಕ್ಕೆ ಹೋಗುತ್ತದೆಂದು ನನ್ನ ಸ್ನೇಹಿತನು ತಿಳಿಸಿದನು.

ಇದೆಲ್ಲವನ್ನು ಅರಿಯದೇ ನೋಡುವ ಇತರೇ ಅಮೇರಿಕನ್ನರು ಈ ಭಾರತೀಯರುಗಳೇ ವಿಚಿತ್ರ ಎಂದು ಮೂಗುಮುರಿಯುತ್ತಾರೆ! ಅದಕ್ಕೆ ಇರಬೇಕು, ಅನೇಕ ವಿದೇಶೀಯರು ಭಾರತೀಯರೆಂದರೆ ಪುಂಗಿ ನುಡಿಸಿ ಹಾವಾಡಿಸುವವರು, ಕೋತಿಗಳನ್ನು ಕುಣಿಸುವವರು, ಇಲಿ ಹಿಡಿದು ತಿನ್ನುವವರು, ಕತ್ತೆ, ನಾಯಿಗಳೊಂದಿಗೆ ಮುದುವೆಯಾಗುವವರು (ಮಳೆಯಾಗಲೆಂದೋ, ಪಾಪ ಪರಿಹಾರದ ನಿಮಿತ್ತವಾಗಿಯೋ ಇರಬಹುದು) ಇನ್ನೂ ಏನೇನೋ ವಿಚಿತ್ರ ಭಾರತೀಯ ಸುದ್ದಿಗಳನ್ನು ಕೇಳಿ, ಅದಕ್ಕೆ ತದ್ವಿರುದ್ಧವಾಗಿ ಇಲ್ಲಿನ ಭಾರತೀಯರು ಶುದ್ಧ ಸಸ್ಯಾಹಾರಿಗಳಾಗಿಯೋ, ಹಂದಿ/ದನವನ್ನು ತಿನ್ನದೆಯೋ, ಕತ್ತೆ ನಾಯಿಗಳನ್ನು ಬಿಡಿ, ಇಲ್ಲಿನ ಬಿಳಿ ಹುಡುಗಿಯರನ್ನೂ ಪರಿಗಣಿಸದೇ ಭಾರತೀಯರನ್ನೇ ಮದುವೆಯಾಗುವ ಭಾರತೀಯ ಸಂಸ್ಕೃತಿಯ ಇನ್ನೊಂದು ಬಗೆಯನ್ನು ನೋಡಿ, "ಇಂಡಿಯನ್ಸ್ ಆರ್ ಕ್ರೇಜಿ" ಎನ್ನುತ್ತಾರೆ.

ಈ ಜಾತಿಯ ವಿಷಗಾಳಿ ಅಮೇರಿಕಾದ ಕನ್ನಡ ಸಂಘಗಳಲ್ಲಿ ಎಷ್ಟರಮಟ್ಟಿಗಿದೆಯೋ ಗೊತ್ತಿಲ್ಲ. ನನ್ನ ಹಲವು ಕನ್ನಡ ಸ್ನೇಹಿತರು ಹೇಳುವುದೇನೆಂದರೆ ಅಲ್ಲಿಯೂ ಕೂಡ ಇದು ಸಂಖ್ಯೆಯೇರಿದಂತೆ ನಿಧಾನವಾಗಿ ಕಾಣಿಸುತ್ತಿದೆಯೆಂದು. ಮೊದಲೆಲ್ಲಾ ಇಲ್ಲಿನ ಕನ್ನಡ ಸಂಘಗಳ ಸಭೆಗಳಲ್ಲಿ, ವನಭೋಜನಗಳಲ್ಲಿ ಕೇವಲ ಸಸ್ಯಹಾರೀ ಊಟವಿರುತ್ತಿದ್ದರೆ, ಕೆಲವರು ಪ್ರತಿಭಟಿಸಿ ಭೋಜನಗಳಲ್ಲಿ ಮಾಂಸಹಾರವೂ, ವನಭೋಜನಗಳಲ್ಲಿ ಸುಟ್ಟ ಕೋಳಿಗಳೂ (ಗ್ರಿಲ್ಡ್ ಚಿಕನ್) ಸಿಗುವಂತೆ ಮಾಡಿದ್ದಾರೆಂದೂ, ಸದ್ಯಕ್ಕೆ ಈ ವಿವಾದವನ್ನು ಸಸ್ಯಾಹಾರ-ಮಾಂಸಹಾರದವರೆಗೆ ತಂದಿದ್ದಾರಂತೆ. ಮುಂದೆ ಜಾತಿಗಳಿಗೆ ಬಂದರೂ ಬರಬಹುದೇನೋ?

ಆದರೆ ನಾನು ಗಮನಿಸಿದಂತೆ ಇದಾಗಲೇ ಜಾತಿಗಳ ಮಟ್ಟಕ್ಕೆ ಇಲ್ಲಿನ ಕನ್ನಡ ಅನಿವಾಸಿಗಳಲ್ಲಿ ಅದ್ಯಾವಾಗಲೋ ಬಂದಾಗಿದೆ. ವೀರಶೈವರೆಲ್ಲಾ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ಎಪ್ಪಂತೆಂಟರಲ್ಲೇ ಸ್ಥಾಪಿಸಿಕೊಂಡಿದ್ದರೆ, ಅಮೇರಿಕಾ ಒಕ್ಕಲಿಗರ ಪರಿಷತ್ ತೊಂಬತ್ತೊಂದರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹಾಗೆಯೇ ಹವ್ಯಕರ ಸಂಘ, ಮಾಧ್ವರ ಸಂಘ.................ಇತ್ಯಾದಿ, ಇತ್ಯಾದಿಗಳೂ ಇವೆ.

ಹಿಂದೂ, ಜೈನ, ಬೌದ್ಧರಂತೆಯೇ ವೀರಶೈವ ಕೂಡ ಒಂದು ಧರ್ಮವೆನ್ನುವ ವೀರಶೈವರು ತಮ್ಮ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ತಮ್ಮ ಧಾರ್ಮಿಕ ಆಚರಣೆ, ಸಂಸ್ಕೃತಿ, ವಚನ ಪಾಠಗಳಿಗೆ ಸೀಮಿತಗೊಳಿಸಿದ್ದರೆ, ಒಕ್ಕಲಿಗ ಪರಿಷತ್ ನೇರವಾಗಿ ’ಅಕ್ಕ’ ರಾಜಕೀಯದಲ್ಲಿ ಹೇಗೆ ತಮ್ಮ ಜನರನ್ನು ಬಲಪಡಿಸಬೇಕೆಂದು ಚರ್ಚಿಸುತ್ತದಂತೆ! ಈ ಸಂಘಗಳ ಸಭೆಗಳಿಗೆ ಹಾಜರಾಗಿದ್ದ ನನ್ನ ಕೆಲವು ಸ್ನೇಹಿತರು ಹೀಗೆ ಅಭಿಪ್ರಾಯಿಸಿದ್ದಾರೆ. ಇನ್ನಿತರೆ ಕನ್ನಡ ಮೂಲದ ಜಾತಿ ಸಂಘಗಳ ಬಗ್ಗೆ ನನಗೆ ಅಷ್ಟಾಗಿ ಪರಿಚಯವಿಲ್ಲ, ಮಿತ್ರರೂ ಇಲ್ಲ. ಹಾಗಾಗಿ ಅವುಗಳ ಬಗೆಗೆ ಏನನ್ನೂ ಹೇಳಲಾರೆ.

ಆದರೂ ನನ್ನೊಬ್ಬ ಓದುಗರು ಅಭಿಪ್ರಾಯಿಸಿದ ಪ್ರಕಾರ ಈ ಅನಿವಾಸೀ ಕನ್ನಡ ಸಂಘಗಳ ನೋಟೀಸ್ ಬೋರ್ಡ್ ಆಗಿರುವ, ಭಟ್ಟ, ಸಿಂಹ, ಜೋಷಿ, ಬೆಳಗೆರೆ, ತ್ರಿವೇಣಿ,ಶ್ರೀನಾಥ, ಶಾಮ, ರಾಮ, ದತ್ತಾತ್ರಿ ಎಂಬ ಹೆಸರುಗಳ ಬ್ರ್‍ಆಹ್ಮಣ ಅಂಕಣಕಾರರೇ ಇರುವ "ಅದಪ್ಪಾ ಕನ್ನಡ" ಎಂಬ ಕನ್ನಡ ಪೋರ್ಟಲ್, ಅನಿವಾಸಿಯರಲ್ಲಿ ಜಾತಿ ಅಜೆಂಡಾವನ್ನು ಬಿತ್ತುತ್ತಿದೆಯಂತೆ. ಇತ್ತೀಚೆಗೆ ಅನೇಕ ಮಹಿಳಾ ಓದುಗರು "ಅದಪ್ಪಾ ಕನ್ನಡ"ವನ್ನು, ಅದರಲ್ಲಿ ಹಾಕಿರುವ ಹಸಿ ಹೆಣ್ಣುಗಳ ಫೋಟೋಗಳ ದೆಸೆಯಿಂದಲೋ, ಬಿಸಿಯೇರಿಸುವ ಬ್ಯಾನರ್ ಗಳಿಂದಲೋ "ಪೋರ್ನೋ ಸೈಟ್" ಎಂದು ಪರಿಗಣಿಸಿ, ನಾನು ಬರೆಯುವ "ಅವರ್ ಕರ್ನಾಟಕ.ಕಾಮ್"ಗೆ ಸಾರಾಸಗಟಾಗಿ ವಲಸೆ ಬಂದಿದ್ದಾರೆ! ಹೀಗಂತ ಹಲವಾರು ಮಹಿಳಾ ಓದುಗರು ಇಮೈಲ್ ಕಳುಹಿಸಿ, "ಕನ್ನಡ, ಕನ್ನಡ ಎನ್ನುವ ’ಮಡಿವಂತ (ಬ್ರಾ)ಹ್ಮಣರ’ ಈ ಕನ್ನಡ ಪೋರ್ಟಲ್ ನಲ್ಲಿ ’ಬ್ರಾ’ ಇಲ್ಲದ ಹೆಣ್ಣುಗಳನ್ನು ತೋರುವ" ಬಗ್ಗೆ ಬರೆಯಿರೆಂದಿದ್ದರು. ಹಾಗಾಗಿ ಈ ವಿಷಯವನ್ನು ಸಂದರ್ಭಕ್ಕನುಗುಣವಾಗಿ ಇಲ್ಲಿ ಉಲ್ಲೇಖಿಸಿದ್ದೇನೆ.

ಇರಲಿ, ಚಿತ್ರದುರ್ಗದ ಶ್ರೀಗಳು ಭಾರತದಲ್ಲಿ ಜಾತಿ, ಕುಲ, ಗೋತ್ರಗಳಿಗೊಂದರಂತೆ "ಪೀಠ"ಗಳನ್ನು ಸ್ಥಾಪಿಸಿಕೊಡುವುದರ ಜೊತೆಗೆ, ಅಮೇರಿಕಾದಲ್ಲಿ ಕೂಡ "ಜಾತಿ ಪೀಠ"ಗಳನ್ನು ಸ್ಥಾಪಿಸಿಕೊಡುವತ್ತ ಯಾವಾಗ ಮುಖ ಮಾಡುವರೋ? ಈ ಹಿಂದೆ ಜಾತಿಪೀಠಗಳ ಕುರಿತು ನಾನು ಬರೆದ ಲೇಖನಕ್ಕೆ ಉತ್ತರವಾಗಿ ಹಲವರು ಆಗಲೇ ಇಲ್ಲಿನ ಪೀಠಗಳ ಪೀಠಾಧಿಪತಿಗಳಾಗಲು ಅರ್ಜಿಯನ್ನು ಕಳುಹಿಸಿದ್ದರು. ಒಬ್ಬ ಮಹಿಳಾ ಓದುಗರಂತೂ "ಅಕ್ಕ ಶಕ್ತಿ ಪೀಠ" ಎಂದು ತಮ್ಮ ಪೀಠದ ಹೆಸರನ್ನೂ ಸೂಚಿಸಿದ್ದಾರೆ! ದುರ್ಗದ ಶ್ರೀಗಳು ಈ ಅರ್ಜಿಗಳು ಬೇಕಿದ್ದರೆ ನನ್ನನ್ನು ಸಂಪರ್ಕಿಸಬಹುದು.

ಬಹಳ ಮಂದಿ ಅನಿವಾಸೀ ಭಾರತೀಯರು, ಸದಾ ನೀರಿನಿಂದ ಹೊರಗಿದ್ದಂತೆ ಚಡಪಡಿಸುತ್ತಾ "ಭಾರತದಲ್ಲಾಗಿದ್ದರೇ ಹಾಗಿರಬಹುದಿತ್ತು, ಹೀಗಿರಬಹುದಿತ್ತು..." ಎಂದೆಲ್ಲ ಬಡಬಡಿಸುತ್ತಾ ಭಾರತವನ್ನು ನೆನೆಯುವ, "ಇನ್ನು ಮೂರೇ ವರ್ಷ, ವಾಪಸ್ ಹೋಗಿಬಿಡುತ್ತೇವೆ" ಎಂದು ನಿತ್ಯವೂ ಕಂಡವರಲ್ಲಿ ಹೇಳಿಕೊಳ್ಳುವ ಇವರು ಯಾವತ್ತೂ ಭಾರತಕ್ಕೆ ಮರಳರು! ಈ ಬಡಬಡಿಕೆ, ಬುಡುಬುಡಿಕೆ ಎಲ್ಲಾ ಹೀಗೆ ಸುಮ್ಮನೇ ಒಂದು ಕಾಲಕ್ಷೇಪ, ಗೊಣಗಾಟ, ನರಳಾಟ. ಇಲ್ಲಿನ ಗ್ರಾಹಕ ಸ್ವಾತಂತ್ರ್ಯವನ್ನು ಶೋಷಿಸುತ್ತ, ಗಂಟುಮುಖವಿಟ್ಟು ಸೂಪರ್ ಮಾರ್ಕೆಟ್ ನ ಸಹಾಯಕರುಗಳನ್ನು ತಲೆಹರಟೆ ಪ್ರಶ್ನಿಸುತ್ತ, ಇವರ ತಲೆಹರಟೆ ಪ್ರಶ್ನೆಗಳಿಗೆ, ಆ ಸಹಾಯಕರೇನಾದರೂ ಕೊಂಚ ಅಸಡ್ಡೆ ತೋರಿದರೋ ಅಷ್ಟೇ. ಅವರನ್ನು "ವರ್ಣದ್ವೇಷಿ"ಗಳೆಂದು ಅವರುಗಳ ಮೇಲ್ವಿಚಾರಕರಿಗೆ ದೂರು ಕೊಟ್ಟು ಗೋಳು ಹುಯ್ದುಕೊಳ್ಳುತ್ತದೆ, ಈ ವರ್ಗ. ಇನ್ನು ಈ ವರ್ಗ ಭಾರತಕ್ಕೆ ಮರಳಿ, ಭಾರತದ "ಬೇಕಾದ್ರೆ ತಗಾ ಇಲ್ಲ ಅಂದ್ರೆ ತಿಗಾ ಮುಚ್ಕೊಂಡು ನಡೀತಿರು" ಎನ್ನುವ ತಾಳ್ಮೆಗೆಟ್ಟ ವ್ಯಾಪಾರಿಗಳನ್ನು ಎದುರಿಸುವುದೇ? ಈ ವರ್ಗದ ಜನಗಳು ಮಾಡುವ "ಅಮೇರಿಕಾ ಗ್ರಾಹಕ ಸ್ವಾತಂತ್ರ್ಯದ ಶೋಷಣೆ"ಯ ಬಗ್ಗೆ ಟಿ.ಎನ್. ಸೀತಾರಾಂ ರವರ ಧಾರಾವಾಹಿಗಳ ರೀತಿಯಲ್ಲಿ ಮೆಗಾಸೀರಿಯಲ್ಲುಗಳನ್ನೇ ತೆಗೆಯಬಹುದು! "ಮುಕ್ತ ಮಾಯಾಮೃಗವಾದ ಅಮೇರಿಕಾದಲ್ಲಿ ಮನ್ವಂತರಗೊಂಡವರೊಂದಿಗೆ ಮುಖಾಮುಖಿ" ಎಂದು!

ಅಮೇರಿಕಾದಲ್ಲಿದ್ದಾಗ ಇಡ್ಲಿ, ದೋಸೆ, ಭಾರತೀಯ ತಿನಿಸು ಬಿಟ್ಟರೆ ಮತ್ತಿನ್ನೊಂದನ್ನು ಮೂಸದ, ಭಾರತಕ್ಕೆ ರಜೆಗೆ ಹೋದಾಗ ಪಿಜ್ಜಾ, ಬರ್ಗರ್, ಪಾಸ್ತಾ ಎಂದೆಲ್ಲಾ ತಮ್ಮ ಸಂಬಂಧಿಗಳನ್ನು ಗೋಳು ಹುಯ್ದುಕೊಳ್ಳುವ; ಅಮೇರಿಕಾದ ಸುಡು ಬೇಸಿಗೆಯಲ್ಲಿ ದುಪ್ಪಟ್ಟಾಗಳನ್ನು ಚಳಿ ಬಂದವರಂತೇ ಹೊದ್ದು ಭಾರತೀಯ ಸಂಸ್ಕೃತಿಯ ರಾಯಭಾರಿಗಳಂತೆ ತಿರುಗುತ್ತಾ, ಬೆಂಗಳೂರಿಗೆ ಬಂದೊಡನೆ ಅಮೇರಿಕಾದ ರಾಯಭಾರಿಗಳಾಗುವ ಈ ಕನ್ಫೂಸ್ಡ್ ವರ್ಗದ ಬಗ್ಗೆ ಸರಮಾಲೆಗಳನ್ನೇ ಬರೆಯಬಹುದು. ಅನೇಕರು ಭಾರತದಿಂದಲೇ ಲೋಡುಗಟ್ಟಲೆ ಬಟ್ಟೆಗಳನ್ನು ತಂದಿರುತ್ತಾರೇನೋ! ಏಕೆಂದರೆ ಅವರುಗಳು ಹಾಕುವ ಭಾರತದ ಪ್ಯಾಂಟು, ಶರ್ಟುಗಳು ಇಲ್ಲಿ ಅಭಾಸವಾಗಿ ಕಾಣುತ್ತಿರುತ್ತವೆ. ಅದರ ಪರಿವೆಯೂ ಅವರಿಗಿರುವುದಿಲ್ಲ! "ವೆನ್ ಯು ಆರ್ ಇನ್ ರೋಮ್, ಬಿ ಲೈಕ್ ರೋಮನ್" ಎಂಬ ನಾಣ್ಣುಡಿಯನ್ನು ಇವರನ್ನು ನೋಡಿಯೇ ಸೃಷ್ಟಿಸಿದರೆಂದೆನಿಸುತ್ತದೆ!

ಇರಲಿ, ಸಾಮಾನ್ಯವಾಗಿ ಉನ್ನತ ಶಿಕ್ಷಣವನ್ನು ಪಡೆದು, ಉತ್ತಮ ಬುದ್ದಿಮತ್ತೆಯನ್ನು ಹೊಂದಿ, ಅಮೇರಿಕಾ ಸೇರಿ, ಇಲ್ಲಿನ ಪ್ರಜೆಗಳಾದರೂ ತಮ್ಮ ಸುಪ್ತ ಜಾತೀಯತೆಯನ್ನು ತೊರೆಯಲಾಗದಷ್ಟು ಜಾತಿಗಳು ನಮ್ಮನ್ನು ಆವರಿಸಿಕೊಂಡಿವೆ. ಭಾರತದಲ್ಲಿಯೂ ಕೂಡ ವಿದ್ಯಾವಂತರಾದಷ್ಟು ಜಾತಿಜಾಗೃತರಾಗುತ್ತಾರೆಯೇ ಹೊರತು ಜಾತಿಪರಿಧಿಯ ಹೊರಕ್ಕೆ ಬರುವವರು ಕಡಿಮೆಯೇ! ಇದು ಸ್ವತಂತ್ರ್ಯ ಭಾರತದ ಸಾಮಾಜಿಕತೆಯ ವಿಕಾಸವೋ ವಿಕಾರವೋ, ಅಥವಾ ಭಾರತ ಸ್ವಾತಂತ್ರ್ಯಾ ನಂತರದ ಶಿಕ್ಷಣ ಕ್ರಾಂತಿಯ ಪರಿಣಾಮವೋ ಅರಿಯೇ! ಒಟ್ಟಾರೆ ಭಾರತ ಎತ್ತಲೋ ಪ್ರಗತಿಸುತ್ತಿದೆ.

ಸಂದರ್ಭಕ್ಕನುಗುಣವಾಗಿ ಬಸವಣ್ಣನ ವಚನವೊಂದು ನೆನಪಾಗುತ್ತಿದೆ, ’ಹಲವು ಕಾಲ ಹಂಸೆಯ ಸಂಗದಲ್ಲಿದ್ದರೇನು, ಬಕ ಶುಚಿಯಾಗಬಲ್ಲುದೇ? ಗಂಗಾನದಿಯಲ್ಲಿದ್ದರೇನು, ಪಾಷಾಣ ಮೃದುವಾಗಬಲ್ಲುದೇ? ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು, ಒಣ ಕೊರ್‍ಅಡು ಕೊನರಿ ಫಲವಾಗಬಲ್ಲುದೇ? ಕಾಶೀಕ್ಷೇತ್ರದಲ್ಲಿ ಒಂದು ಶುನಕವಿದ್ದರೇನು, ಅದರ ಹಾಲು ಪಂಚಾಮೃತಕ್ಕೆ ಸಲುವುದೇ? ತೀರ್ಥದಲೊಂದು ಗಾರ್ದಭನಿದ್ದರೇನು, ಕಾರಣಿಕನಾಗಬಲ್ಲುದೇ? ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು, ಬಿಳುಹಾಗಬಲ್ಲುದೇ? ಇದ ಕಾರಣ ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು, ಸದ್ಭಕ್ತನಾಗಬಲ್ಲನೇ?’ ಅಮೇರಿಕಾದಲ್ಲಿದ್ದರೇನು ಭಾರತದಲ್ಲಿದ್ದರೇನು, ವಿದ್ಯೆಯಿದ್ದರೇನು ಅವಿದ್ಯೆಯಾದರೇನು, ಭಾರತೀಯ ಜಾತಿಮುಕ್ತನಾಗಬಲ್ಲನೇ?

ಅಣಕ:

ನೂತನ ಬಿಜೆಪಿ ಶಾಸಕರು ದೇವರುಗಳು, ರೆಡ್ಡಿ, ಎಡ್ಯೂರಪ್ಪ, ಚಿಗಪ್ಪ, ದೊಡ್ಡಪ್ಪಗಳ ಹೆಸರಿನಲ್ಲೆಲ್ಲಾ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಕೇಳಿದ್ದೀರಷ್ಟೇ.

ರಾಜ್ಯದ ಜನತೆಯೆಲ್ಲಾ ರೇಣುಕಾಚಾರ್ಯರು "ಜಯಲಕ್ಷ್ಮಿ" ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವರೆಂದು ಕಾತುರದಿಂದ ಎದುರು ನೋಡುತ್ತಿದ್ದರೆ, ಠುಸ್ಸೆನ್ನುವಂತೆ ’ಎಡ್ಯೂರಪ್ಪ’ ಹೆಸರಿನಲ್ಲಿ ಪ್ರಮಾಣ ಮಾಡಿದ್ದೇಕೋ?

ಬಹುಶಃ ಅಂತರಂಗದಲ್ಲಿ ’ಆಹ್, ಜೈಲಕ್ಷ್ಮಿ, ಆಹ್ ಜೈಲಕ್ಷ್ಮಿ’ ಎಂಬ ಅಸ್ಖಲಿತ ಪದಗಳ ಸ್ಖಲನಲೋಕದಲ್ಲಿ ವಿಹರಿಸುತ್ತಿದ್ದರೇನೋ!

Coming Next Week: An article on second generation Indian Americans.

ಮಗದೊಮ್ಮೆ ಕೆಂಪೇಗೌಡ, ವಿಮಾನ ನಿಲ್ದಾಣ!

ಮತ್ತೆ ವಿಮಾನನಿಲ್ದಾಣ ಲೇಖನದ ಕುರಿತು ಬರೆಯಬೇಕಾಗಿದೆ. ನನ್ನ ಓದುಗ ಮಿತ್ರರಾದ ಸಿಡ್ನಿಯಲ್ಲಿರುವ ಹರೀಶರವರು, ಓದುಗರ ಅಭಿಪ್ರಾಯಗಳಿಗೆ, ಮತ್ತೊಮ್ಮೆ ಮಗದೊಮ್ಮೆ ಓದಿರೆಂದು ಹೇಳುವುದಕ್ಕಿಂತ ಓದುಗರೆತ್ತಿದ ಆಕ್ಷೇಪಗಳನ್ನು ಎತ್ತಿ ನೀವು ಉತ್ತರವೀಯುವುದು ಸಮಂಜಸವೆಂದು ಅಭಿಪ್ರಾಯಿಸಿದ್ದರು. ಆದ್ದರಿಂದ ಅನಿವಾರ್ಯವಾಗಿ ಕೆಂಪೇಗೌಡ, ಓರಾಟ, ಜಾತೀಯತೆ, ಇಂದಿನ ಭಾರತವನ್ನೆಲ್ಲ ಸೇರಿಸಿಕೊಂಡು ಮತ್ತೊಮ್ಮೆ ಈ ವಿಷಯವಾಗಿ ಬರೆಯುತ್ತಿದ್ದೇನೆ.

ಕೆಂಪೇಗೌಡರ ವಿಷಯವಾಗಿ ನಾನು ಐತಿಹಾಸಿಕ ವಿಷಯಗಳನ್ನು ಮಂಡಿಸಿ, ಕೆಂಪೇಗೌಡರಿಗಿಂತ ಹೆಚ್ಚಾಗಿ ಕನ್ನಡ/ಕರ್ನಾಟಕಕ್ಕೆ ಆಗಿಹೋದ ಸರದಾರರು, ಸಾಮಂತರು, ರಾಜರುಗಳು ಮತ್ತು ಚಕ್ರವರ್ತಿಗಳ ಹೆಸರುಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚು ಸಮಂಜಸವೆಂದು ಹೇಳಿದ್ದೆ. ರಾಜ್ಯಕ್ಕೊಂದೇ ಇರುವಂತಹ ವಿಮಾನನಿಲ್ದಾಣ ಇದಾಗಿರುವುದರಿಂದ ಇಡೀ ರಾಜ್ಯ ಒಪ್ಪುವಂತಹ ಹೆಸರನ್ನು ಇಡಬೇಕೆಂಬುದು ನನ್ನ ಅಭಿಪ್ರಾಯ. ಈ ಅಭಿಪ್ರಾಯ ರಾಜ್ಯದೆಲ್ಲೆಡೆಯ ಕನ್ನಡಿಗರ ಅಭಿಪ್ರಾಯವಾಗಿರುವುದರಿಂದಲೇ ಜನ ವಿವಿಧ ಹೆಸರುಗಳನ್ನು ಸೂಚಿಸುತ್ತಿದ್ದಾರೆ. ಬಸ್ ನಿಲ್ದಾಣಗಳಂತೆ ಎಲ್ಲಾ ಊರುಗಳಲ್ಲೂ ಅಂತರ್ರಾಷ್ಟ್ರೀಯ ವಿಮಾನನಿಲ್ದಾಣಗಳಿದ್ದರೆ ಈ ಹೆಸರಿನ ಸಮಸ್ಯೆಯೇ ಬರುತ್ತಿರಲಿಲ್ಲ. ದುರದೃಷ್ಟವಶಾತ್ ಈ ಮಟ್ಟದ ವಿಮಾನನಿಲ್ದಾಣ ಒಂದೇ ಇರುವುದು!

ಇನ್ನು ಬೆಂಗಳೂರಿನ ಭದ್ರ ಬುನಾದಿಯ ಬಗ್ಗೆ ಬಿಡಿಸಿ ಹೇಳಬೇಕೆಂದರೆ ಅದನ್ನು ನನ್ನ ಲೇಖನಕ್ಕೆ ಬಂದ ಅನಾಮಧೇಯ ಈಮೈಲ್ ಗಳ ಶೈಲಿಯಲ್ಲಿ ಹೇಳುವುದಾದರೆ "ಕೃಷ್ಣದೇವರಾಯನ ಬಳಿ ತಮಗೊಂದು ಊರು ಕಟ್ಟಿಕೊಳ್ಳಲು ಐದು ಹೋಬಳಿಗಳ ಉಂಬಳಿ ಬೇಡಿ, ನಾಲ್ಕು ಗೋಪುರಗಳ ಗೂಟ ನೆಟ್ಟು, ಬೆಂದಗಾಳೂರೆಂದು ಬೋರ್ಡ್ ಕೆತ್ತಿಸಿ, ಹತ್ತಾರು ಕೆರೆಕಟ್ಟೆಗಳನ್ನು ಕಟ್ಟಿಸಿದಾಕ್ಷಣ ಕೆಂಪೇಗೌಡ ಬೆಂಗಳೂರು ನಿರ್ಮಾತೃವೇ? ಬಿಜಾಪುರದ ಆದಿಲ್ ಶಾಹಿಯ ಸೈನಿಕ ಸರದಾರ ಶಹಾಜಿ (ಛತ್ರಪತಿ ಶಿವಾಜಿಯ ತಂದೆ) ದಾಳಿಗೆ ಸೋತು ಸುಣ್ಣವಾಗಿ ಹೋದ ಕೆಂಪೇಗೌಡರೊಂದಿಗೇ ಬೆಂದಗಾಳೂರಿನ ಬೋರ್ಡು ಮುರಿದು ಬಿದ್ದಿತ್ತು." ಎಷ್ಟೋ ವರ್ಷಗಳ ನಂತರ ಮೈಸೂರು ಅರಸರು ಬೆಂದಗಾಳೂರನ್ನು ಕೊಂಡು ಅದಕ್ಕೆ ಒಂದು ಪಟ್ಟಣದ ಸ್ವರೂಪವನ್ನು ಕೊಟ್ಟು "ಬೆಂಗಳೂರು" ಎಂಬ ಭದ್ರ ಬುನಾದಿಯನ್ನು ಹಾಕುವವರೆಗೂ ಅದು ಬೆಂದಗಾಳೂರೆಂಬ ಹಳ್ಳಿಯೇ ಆಗಿದ್ದಿತು. ಹಾಗೆಯೇ ಬ್ರಿಟಿಷರು ತಮ್ಮ ಮದ್ರಾಸ್ ಪ್ರಾಂತ್ಯ ಮತ್ತು ತಮ್ಮ ಮಿತ್ರ ಮೈಸೂರು ಸಂಸ್ಥಾನದ ಮಧ್ಯದಲ್ಲಿದೆಯೆಂದೂ, ಮದ್ರಾಸಿನ ಬೇಸಿಗೆಯ ಬವಣೆಯಿಂದ ತಪ್ಪಿಸಿಕೊಳ್ಳಲೂ ಕಾರಣವಾಗಿ ಬೆಂಗಳೂರನ್ನು "ನಗರ"ವಾಗಿ ಪರಿವರ್ತಿಸಿದರು. ಒಟ್ಟಾರೆ "ಬೆಂದಗಾಳೂರು" ಎಂಬ ಹಳ್ಳಿ "ಬೆಂಗಳೂರು" ಎಂಬ ಪಟ್ಟಣ/ನಗರವಾಗಲು ಕಾರಣ ನಾಲ್ಮಡಿ ಕೃಷ್ಣರಾಜ ಒಡೆಯರ್, ಬ್ರಿಟಿಷರು ಮತ್ತು ಇತರೆ ಮೈಸೂರು ಅರಸರು. ಇನ್ನು ಕರ್ನಾಟಕ ರಾಜ್ಯ ಸ್ಥಾಪನೆಯನಂತರ ಕರ್ನಾಟಕದ ರಾಜಧಾನಿಯಾಗಿ ಇದು ಬೆಳೆದಿದ್ದನ್ನು ನಾವ್ಯಾರು ಹೇಳಬೇಕಿಲ್ಲ.

ಇನ್ನು ಇನ್ನೋರ್ವ ಓದುಗರು ಹೇಳಿರುವಂತೆ, ಹೊಯ್ಸಳನ ಸಾಹಸ, ಪುಲಕೇಶಿಯ ಧೈರ್ಯ, ಮಯೂರವರ್ಮನ ಛಲ, ಕೃಷ್ಣದೇವರಾಯನ ಸಾಹಿತ್ಯಾಸಕ್ತಿ, ಮೈಸೂರು ಅರಸರ ದೂರಗಾಮಿತ್ವ, ಚೆನ್ನಮ್ಮನ ಸ್ವಾಭಿಮಾನ, ಓಬವ್ವನ ನಿಷ್ಟೆಯಂತಹ ಕತೆಗಳಂತೇ ಅದ್ಯಾವ ಐತಿಹಾಸಿಕ ಕತೆಗಳನ್ನು ಐತಿಹಾಸಿಕ ಪುಟಗಳಿಂದ ಹೆಕ್ಕಿ ಕೆಂಪೇಗೌಡರ ಕುರಿತಾಗಿ ನಮ್ಮ ಮುಂದಿನ ಜನಾಂಗಕ್ಕೆ ಹೇಳುವುದಿದೆ?

ಸತ್ಯಾಗ್ರಹ, ಬಂದ್, ಮುಷ್ಕರಗಳು "ಸ್ವಾತಂತ್ರ್ಯ ಚಳುವಳಿಯ ಬೈಪ್ರಾಡಕ್ಟ್"ಗಳಾದರೆ, ಓಲೈಕೆ, ಜಾತೀಯತೆಗಳು "ಸ್ವಾತಂತ್ರ್ಯದ ಬೈಪ್ರಾಡಕ್ಟ್"ಗಳಾಗಿವೆ. ಮಹಾತ್ಮ ಗಾಂಧಿಯವರು ಅಂದು ಧರ್ಮಾಧರಿತ ದೇಶ ವಿಭಜನೆಗೆ ಒಪ್ಪಿಗೆ ನೀಡಿ, ನಂತರ ನಿಷ್ಟುರ ನಿರ್ಧಾರವನ್ನು ತೆಗೆದುಕೊಳ್ಳದೆ ಓಲೈಕೆಗೆ ಮುನ್ನುಡಿ ಬರೆದು ಸ್ವಾತಂತ್ರ್ಯವನ್ನಷ್ಟೇ ಅಲ್ಲದೆ, ಸ್ವಾತಂತ್ರ್ಯವನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ "ಸತ್ಯಾಗ್ರಹ"ವೆಂಬ ಅಸ್ತ್ರವನ್ನೂ ಕೊಟ್ಟು ಹೋಗಿದ್ದಾರೆ! ಅಂದಿನ ಮಹಾತ್ಮ ಗಾಂಧಿಯಿಂದ ಇಂದಿನ ಸೋನಿಯಾ ಗಾಂಧಿಯವರೆಗೆ ಆಗಿಹೋದ ಎಲ್ಲಾ ನಾಯಕರುಗಳು ಧರ್ಮಕ್ಕಷ್ಟೇ ನಿಯಮಿತವಾಗಿದ್ದ ಒಲೈಕೆಯನ್ನು ಜಾತಿಗಳಿಗೆ, ಉಪಜಾತಿಗಳಿಗೆ, ವಿವಿಧ ಸಮಾಜ ವರ್ಗಗಳಿಗೆ ವಿಂಗಡಿಸುತ್ತ ಇಂದು ಜಾತಿಗಳನ್ನು ಮತಬ್ಯಾಂಕುಗಳಾಗಿ ಪರಿವರ್ತಿಸಿದ್ದಾರೆ.

ಈ ಮತಬ್ಯಾಂಕ್ ಬಲವಾಗಿದ್ದರಷ್ಟೇ ಆಯಾ ಜಾತಿಯವರಿಗೆ ಪ್ರಾಶಸ್ತ್ಯ, ಇಲ್ಲದಿದ್ದರೆ ಕೇಳುವವರೇ ಇಲ್ಲ! ಹಾಗಾಗಿಯೇ ಇಂದು ಬೆಂಗಳೂರು ಪಟ್ಟಣದ ನಿಜ ನಿರ್ಮಾತೃ; ಬ್ರಿಟಿಷರಿಂದ "ಆಧುನಿಕ ಅಶೋಕ"; ಗಾಂಧೀಜಿಯವರಿಂದ "ರಾಜರ್ಷಿ" ಎಂದು ಕರೆಸಿಕೊಂಡಿದ್ದ, ಇಡೀ ವಿಶ್ವವೇ ಇವರೆಡೆಗೆ ಬೆರಗಾಗಿ ನೋಡುವಂತೆ ಮಾಡಿದ್ದ ನಾಲ್ಮಡಿ ಕೃಷ್ಣರಾಜ ಒಡೆಯರರ ಅಲ್ಪಸಂಖ್ಯಾತ "ಅರಸು" ಜಾತೀವರ್ಗ, ಈ ಐತಿಹಾಸಿಕ ಸಂಗತಿಯನ್ನು ಸ್ಪಷ್ಟೀಕರಿಸುವ ಪ್ರಯತ್ನಕ್ಕೆ ಕೈಹಾಕದೇ ಸುಮ್ಮನಿರುವುದು. ಸಂಖ್ಯಾಬಲವಿಲ್ಲದವರ ಕೂಗನ್ನು ಯಾರು ಕೇಳುತ್ತಾರೆ? ಸುಮ್ಮನೆ ಬೆದರಿಸಿ ಬಾಯ್ಮುಚ್ಚಿಸುವವರೇ ಎಲ್ಲ. ಅಂತಹ ಪ್ರಾಮಾಣಿಕ ಪ್ರಯತ್ನವನ್ಯಾರಾದರೂ ಮಾಡಿದರೆ ಅವರನ್ನು "ಸಮಾಜದ್ರೋಹಿ"ಗಳೆಂದು ಬ್ರ್ಯಾಂಡಿಸುವುದು, ಮುಷ್ಕರಗಳಿಂದ ಹೆದರಿಸುವುದು ಇದ್ದದ್ದೇ. ಇಂದು ಇತಿಹಾಸಕಾರ ಚಿದಾನಂದಮೂರ್ತಿಗಳನ್ನು "ಚೆಡ್ಡಿ" ಎಂದು ಬ್ರ್ಯಾಂಡಿಸಿರುವಂತೆ! ಮೂರ್ತಿಗಳು ಬ್ರಾಹ್ಮಣ ಮಹಿಳೆಯಾಗಿದ್ದರೆ "ಬ್ರಾ" ಎನ್ನುತ್ತಿದ್ದರೇನೋ!!! ಕೆಂಪೇಗೌಡರಿಗೆ ಅಂಟಿದ ಜಾತಿಯ ಬಲವಿರದಿದ್ದರೇ ಇಂದು ಕೆಂಪೇಗೌಡರನ್ನು ಕೇಳುವವರೇ ಇರುತ್ತಿರಲಿಲ್ಲ ಎಂಬುದನ್ನು ನಮ್ಮ ವಿದ್ಯಾವಂತ ಸಮಾಜ ಅರಿಯದೇ? ಈ ಬಹುಸಂಖ್ಯಾತ ಕೆಂಪೇಗೌಡರ ವರ್ಗದ ಲಾಬಿಯ ಮೇಲ್ಪಂಕ್ತಿಯನ್ನು ಅನುಕರಿಸುತ್ತ ಇಂದು ಕುರುಬ ಸಮಾಜ ಸಂಗೊಳ್ಳಿ ರಾಯಣ್ಣನನ್ನು, ವೀರಶೈವ ಉಪಜಾತಿಯ ಪಂಚಮಸಾಲೀ ಸಮಾಜ ಕಿತ್ತೂರು ಚೆನ್ನಮ್ಮನನ್ನೂ ತಮ್ಮ ತಮ್ಮ ಜಾತಿಯ ರತ್ನಗಳೆಂದು ಬಿಂಬಿಸುತ್ತ ಈ ಈರ್ವರ ಚರಿತ್ರೆಗೆ ಜಾತಿಯ ಹೊದಿಕೆಯನ್ನು ಹೊದಿಸುತ್ತಿದ್ದಾರೆ.

ಆದರೆ ಹೊಯ್ಸಳ, ಮಯೂರವರ್ಮ ಮತ್ತಿತರೇ ಕನ್ನಡ ಕಲಿಗಳ ಜಾತಿಗಳು, ಇಂದು ಪ್ರಭಾವಶಾಲೀ ಜಾತಿಗಳಾಗಿಲ್ಲದ ಕಾರಣ ಅವರುಗಳನ್ನು ಕೇಳುವವರೇ ಇಲ್ಲದೇ ಅವರುಗಳೆಲ್ಲಾ "ಬಾರ್ ಅಂಡ್ ರೆಸ್ಟೋರಂಟ್"ಗಳಲ್ಲಿ (ಅವರವರ ಹೆಸರಿನ) ತಮ್ಮ ತಮ್ಮ ಗೋಳನ್ನು ಮರೆಯುತ್ತಿದ್ದಾರೆ! ಇಂದು ಗೌರವ, ಘೋಷಣೆಗಳ ಮರ್ಯಾದೆ ಏನಿದ್ದರೂ ಅವರವರ ಜಾತಿಬಲದ ಮೇಲೆಯೇ ಹೊರತು, ಮಹಾತ್ಮರುಗಳ ಸೇವಾ ಕೊಡುಗೆಗಳ ಬಲದ ಮೇಲಲ್ಲ. ಹಾಗಾಗಿಯೇ ಈ ಹೆಸರುಗಳಲ್ಲಿ ಬಲಶಾಲಿಯಾದ ಬಸವಣ್ಣನನ್ನು "ಇವ ನಮ್ಮವ, ಇವ ನಮ್ಮವ" ಎಂದು ಹಲವು ಜಾತಿಗಳು, ಬಸವನ ಜಾತಿಯ ಕುರಿತಾಗಿ ಸಂಶೋಧನೆಗಳನ್ನೂ ಮತ್ತು ಆ ಸಂಶೋಧನೆಗಳ ವಿರುದ್ಧ ಪ್ರತಿಭಟನೆಗಳನ್ನೂ ಮಾಡುತ್ತಿವೆ. ಇತಿಹಾಸ ಪ್ರಸಿದ್ಧರನ್ನು ಬಿಡಿ, ಇತ್ತೀಚಿನವರಾದ ದಾರ್ಶನಿಕ, ಕವಿ, ಜಾತಿಗಳನ್ನು ಮೆಟ್ಟಿನಿಂತ, "ಗುಡಿ, ಚರ್ಚು, ಮಸಜೀದಿಗಳ ಬಿಟ್ಟು ಹೊರಬನ್ನಿ"ರೆಂದು ಕರೆ ನೀಡಿದ, ಮಂತ್ರಮಾಂಗಲ್ಯದ ಸರಳ ವಿವಾಹ ಸೂತ್ರವನ್ನು ಅವಿಷ್ಕಾರಿಸಿದ ಕುವೆಂಪು ಅವರನ್ನೂ ಈ ಜನ, ಜಾತಿಯ ಶಾಲು ಹೊದಿಸಿ ಸನ್ಮಾನಿಸುತ್ತಿದ್ದಾರೆ!

ನಾವುಗಳು ವಿದ್ಯಾವಂತರಾದಷ್ಟೂ ಜಾತಿ ಜಾಗೃತರಾಗುತ್ತಿದ್ದೇವೆ. ಹೆಚ್ಚು ಹೆಚ್ಚು ಜಾತಿಗಳನ್ನು ಅವುಗಳ ಉಪಜಾತಿಗಳನ್ನು ಸಂಶೋಧಿಸಿ ಪ್ರಚಾರ ಪಡಿಸುತ್ತಿದ್ದೇವೆ. ನಮ್ಮ ಸಾಮಾಜಿಕ ಶಿಕ್ಷಣ ನಮ್ಮನ್ನು ಜಾತಿಪರಿಧಿಯ ಹೊರಕ್ಕೆ ತೆಗೆಯಲಾರದಷ್ಟು ಜಡ್ಡುಗಟ್ಟಿಹೋಗಿದೆ.

ಇನ್ನು ಕೆಂಪೇಗೌಡರ ತೆಲುಗು ಮನೆಮಾತಿನವರೆಂಬ ವಿಷಯವನ್ನು ಎತ್ತಿದ್ದುದು, ಈ ಓರಾಟಗಾರರ ದೆಸೆಯಿಂದಲೇ! ಕನ್ನಡ ಹೋರಾಟವೆಂದರೆ ಅನ್ಯಭಾಷಿಗರನ್ನು ಸದೆಬಡಿಯುವುದು ಎಂದೇ ವಿಶ್ಲೇಷಿಸಿಕೊಂಡಿರುವ ಇವರ ಕುರಿತಾಗಿ ಕಳೆದ ಅಕ್ಟೋಬರ್ ೨೦೦೭ ರ ಕನ್ನಡ ಕುರಿತಾದ ನನ್ನ ಲೇಖನಗಳನ್ನೂ ಮತ್ತು "ಯೇ ಕಚ್ಚ್ರಾ ಲೋಗ್ ಹೈ", ಹೊಗೇನಕಲ್ ಕುರಿತಾದ ಲೇಖನಗಳನ್ನು ಓದಿ, ನನ್ನ ಉದ್ದೇಶ ನಿಮಗೆ ತಿಳಿಯುತ್ತದೆ. ಅದೇ ರೀತಿ ಕನ್ನಡದ ಆರು ಜ್ಞಾನಪೀಠಿಗಳಲ್ಲಿ ಮೂವರು ಅನ್ಯಭಾಷಾ ಮನೆಮಾತಿನ ಕನ್ನಡ ಸಾಹಿತಿಗಳಿದ್ದಾರೆ. ಹಾಗಂತ ಅವರೆಲ್ಲಾ ಕನ್ನಡಿಗರಲ್ಲವೆಂಬುದು ಮೂರ್ಖತನದ ಪರಮಾವಧಿಯೇ ಸರಿ. ಮರಾಠಿ ಪುಲಕೇಶಿ ಕನ್ನಡಕ್ಕೆ ಪ್ರಾಮುಖ್ಯತೆ ಕೊಟ್ಟು ಕನ್ನಡವನ್ನು ಮೆರೆಸಿದಂತೆ, ತೆಲುಗು ಮಾತೃಭಾಷೆಯ ಕೃಷ್ಣದೇವರಾಯ ಖುದ್ದು ಕನ್ನಡ ಸಾಹಿತ್ಯಾಸಕ್ತನಾಗಿ ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸಿ ಬೆಳೆಸಿದಂತಹ ಮಹತ್ವದ ಸಂಗತಿಯಂತೆ ಕನ್ನಡ/ಕರ್ನಾಟಕದ ಸಂಸ್ಕೃತಿಯ ರಾಯಭಾರಿಯಾಗಿ ದಾಖಲಿಸಲು ಕೆಂಪೇಗೌಡರ ಕುರಿತು ಯಾವುದೇ ಸಂಗತಿಗಳಿಲ್ಲ.

ಇದೆಲ್ಲಕ್ಕಿಂತ ಬಹುಮುಖ್ಯವಾಗಿ ಬೆಂಗಳೂರಿಗೆ ಈ ಮಟ್ಟದ ಒಂದು ವಿಮಾನ ನಿಲ್ದಾಣ ಬರಲು ಏಕಮಾತ್ರ ಕಾರಣ ಐ.ಟಿ. ಈ ಐ.ಟಿ. ಎಂಬುದು ಬೆಂಗಳೂರಿನಲ್ಲಿರದಿದ್ದರೆ ಹೇಗಿರುತ್ತಿತ್ತೆಂದು ನೀವೇ ಊಹಿಸಿ. ಇದಕ್ಕೆ ಮೂಲ ಕಾರಣರಾದ ಇನ್ಫೋಸಿಸ್ ನ ನಾರಾಯಣಮೂರ್ತಿಯವರ ಹೆಸರು ಕೂಡ ಸೂಕ್ತವೆನಿಸುತ್ತದೆ. ಅಥವಾ "ಕಮರ್ಷಿಯಲ್ ಬೆಂಗಳೂರಿಗರ" ರೀತಿಯಲ್ಲಿ ಯೋಚಿಸಿದರೆ ಇಂದಿನ ಬೆಂಗಳೂರು ವಿಮಾನ ನಿಲ್ದಾಣ ಅಮೇರಿಕಾದ ಕೊಡುಗೆ. ಅಮೇರಿಕಾದದಿಂದ ಹರಿದು ಬಂದ ಡಾಲರ್ ವ್ಯವಹಾರದ ಮೂಲವಾಗಿಯೇ ಈ ವಿಮಾನ ನಿಲ್ದಾಣ ನಿರ್ಮಾಣವಾದುದು. ಹಾಗಿದ್ದ ಮೇಲೆ ಅಮೇರಿಕಾ ಎಂಬ ಬೆಂಗಳೂರು ಗ್ರಾಹಕನನ್ನು ಸಂತೋಷಪಡಿಸಲು ’ಬಿಲ್ ಗೇಟ್ಸ್’ ಎಂದೋ ಕ್ಲಿಂಟನ್ ಎಂದೋ ಅಥವಾ ಮಾನಿಕಾ ಲೆವಿನ್ಸ್ಕಿ ಎಂದೂ ಕೂಡ ಹೆಸರಿಸಬಹುದಲ್ಲವೆ. ಅವರವರ ಭಾವಕ್ಕೆ, ಅವರವರ ತಾಳಕ್ಕೆ......!

ಇರಲಿ, ಬುದ್ದಿಜೀವಿಗಳು ಈ ಕರವೇ ಹೋರಾಟಗಾರರ ಕಾಲೆಳೆದು ಮೂದಲಿಸದೆ ತೆಪ್ಪಗೆ ಇವರೊಟ್ಟಿಗೆ ಅಷ್ಟೋ/ಇಷ್ಟೋ ಕೈಜೋಡಿಸಿ "ಅಳಿಲುಸೇವೆ" ಮಾಡಬೇಕೆಂದು ಕೂಡ ಕೆಲ ಓದುಗರು ಅಭಿಪ್ರಾಯಿಸಿದ್ದಾರೆ. ಕನ್ನಡ ಧ್ವಜ ಲೇಪಿತ, ಅಂಬೇಡ್ಕರ್ ಶೈಲಿಯ ಪೋಸಿನಲ್ಲಿ ನಿಂತಿರುವ ಕರವೇ ಅಧ್ಯಕ್ಷರ ಚಿತ್ರ ಲೇಪನವಿರುವ ಕರವೇ ಅಧ್ಯಕ್ಷರ ಸ್ಕಾರ್ಪಿಯೋ ವಾಹನ, ಗಾಂಧಿನಗರದ ಕಛೇರಿ ಮತ್ತು ಕನ್ನಡ ಹೋರಾಟವೇ ಫುಲ್ ಟೈಮ್ ಉದ್ಯೋಗವಾಗಿರುವ ಇವರ ಆದಾಯದ ಮೂಲ, ಕರವೇ ಸಂಸ್ಥೆಯ ಹೋರಾಟಕ್ಕೆ ಹಣ ಎಲ್ಲಿಂದ ಹರಿದು ಬರುತ್ತಿದೆ? ಕನ್ನಡಿಗರಾದ ನಾವು ನೀವೆಲ್ಲರೂ ನಮ್ಮ ತಿಂಗಳ ಸಂಬಳದಲ್ಲಿ ಒಂದು ದಿನದ ಸಂಬಳವನ್ನು ಕರವೇಗೆ ಕೊಡುತ್ತಿದ್ದೇವೆಯೇ? ಎಂದೆಲ್ಲ ಪ್ರಾಮಾಣಿಕ ತನಿಖೆಯಾದರೆ ಗಾಂಧಿನಗರದಲ್ಲಲ್ಲಾ, ಪರಪ್ಪನ ಅಗ್ರಹಾರದಲ್ಲಿರಬೇಕಾಗುತ್ತದೆ, ಸ್ವಾಮಿ! ಕನ್ನಡ/ಕರ್ನಾಟಕವೆಂಬುದು ಇವರಿಗೆ ಒಂದು ರಕ್ಷಾ ಕವಚವಷ್ಟೇ. ಈ ಹುಲುಸಾದ ಕನ್ನಡ ಬೆಳೆಯ ಸಂಕ್ರಮಣಕ್ಕಾಗಿಯೇ ಇದು ಎರಡು ಬಣವಾಗಿದ್ದೆಂದು ನಮ್ಮ ವಿದ್ಯಾವಂತ ಸಮಾಜಕ್ಕೆ ಅರಿವಿಲ್ಲವೇ? ಭಾರತದಲ್ಲಿನ ಹೋರಾಟಗಳ ವ್ಯವಹಾರಜ್ಞಾನ, ನನ್ನಂಥಹ ನಯಾಗರ ನಾಡಿನ "ಸೋಷಿಯಲ್ ಲೈಫ್" ಇಲ್ಲದೇ ಬಳಲುತ್ತಿರುವವನಿಗೇ ಕಾಣುತ್ತಿರಬೇಕಾದರೆ, ಭಾರತದಲ್ಲಿ ಸದಾ "ಸೋಷಿಯಲ್ ಲೈಫ್"ನಲ್ಲಿ ಮುಳುಗಿರುವ, ಬೆಂಗಳೂರಿನಲ್ಲೇ ವ್ಯವಹರಿಸುತ್ತ ನಿತ್ಯ ಕಾವೇರೀ ನೀರು ಕುಡಿಯುವ ಹಲವರಿಗೆ ಈ ವ್ಯವಹಾರಜ್ಞಾನ ಅರ್ಥವಾಗದಿದ್ದುದಕ್ಕೇ ಏನು ಹೇಳಬೇಕೋ ನನಗೆ ತೋಚುತ್ತಿಲ್ಲ. ಬಹುಶಃ, ವಾಹನ ಚಾಲನೆ, ಲೈಟ್ ಸ್ವಿಚ್ ಇವುಗಳೆಲ್ಲಾ ಅಮೇರಿಕಾದಲ್ಲಿ ಭಾರತದ ತದ್ವಿರುದ್ಧವಾಗಿರುವಂತೆ "ದೂರದ ಬೆಟ್ಟ, ನುಣ್ಣಗೆ" ಎಂಬ ನಮ್ಮ ನಾಣ್ಣುಡಿ ಕೂಡ ನನಗೆ ವ್ಯತಿರಿಕ್ತವಾಗಿ ದೂರದ ಸಂಗತಿಗಳನ್ನು ಭೂತಾಕಾರವಾಗಿ, ಕ್ಷಕಿರಣಗಳ ರೂಪದಲ್ಲಿ ಕಾಣಿಸುವಂತೆ ಕೆಲಸ ಮಾಡುತ್ತಿದೆಯೇನೋ!

ಇನ್ನು ಹಲವರು ಕರವೇಯ ಹದಿಮೂರು ಅಂಶಗಳಲ್ಲಿ ಕೊನೆಯದಾದ ಈ ಹೆಸರಿಸುವ ಅಂಶವನ್ನು ಬೇಕೆಂದೇ ಎತ್ತಿ ನನ್ನ ಬಾಯ್ಚಟವನ್ನು ತೀರಿಸಿಕೊಂಡು ನನ್ನನ್ನು ನಾನೇ ಒಬ್ಬ ಬುದ್ದಿಜೀವಿ ಎಂದು ಮೆರೆಸಿಕೊಂಡಿದ್ದೇನೆಂದು ಕೋಪವನ್ನು ತೋರಿದ್ದಾರೆ. ಇದನ್ನು "ಜಾಣಕುರುಡು", "ಜಾಣಕಿವುಡು" ಎನ್ನದೇ ಇನ್ನೇನು ಹೇಳಬೇಕೋ ತಿಳಿಯದು. ಕರವೇ ಹೋರಾಟದ ಕುರಿತಾಗಿ ಬಂದಿದ್ದ ಪತ್ರಿಕಾ ವರದಿಗಳನ್ನು ಓದಿ ನೋಡಿ, ಈ ಹೆಸರಿನ ವಿಷಯವನ್ನು ಯಾರು ಏಕಾಂಶವಾಗಿ ಮಾಡಿದರೆಂದು! ಅಂದು ಸದುದ್ದೇಶವೆಂದುಕೊಂಡು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ನನ್ನ ಅನೇಕ ಮಿತ್ರರು ನಂತರ ಪಾಶ್ಚಾತ್ತಾಪ ಪಟ್ಟಿದ್ದಾರೆ. "ಅಂದು ಕೆಂಪೇಗೌಡ, ಇಂದು ನಾರಾಯಣಗೌಡ" ಎಂಬ ಮುಗಿಲು ಮುಟ್ಟಿತ್ತಿದ್ದ ಅಂದಿನ ಘೋಷಣೆಗಳು ಏನು ಸಾರಿದವು? ಅದನ್ನೇ ನಾನು "ಮತ್ತೊಬ್ಬ ಒಕ್ಕಲಿಗ ನಾಯಕನ ಉದಯ" ಎಂದು ಕರೆದಿದ್ದು. ಯಾವಾಗ ತಮ್ಮ ಬಾಣ ತಮಗೇ ತಿರುಗಿ ಬರುತ್ತಿದೆಯೆಂದು ತಿಳಿಯಿತೋ ಕೂಡಲೇ ನಾರಾಯಣಗೌಡರು "ಇದೆಲ್ಲಾ ಪತ್ರಿಕೆಯವರ ಹುನ್ನಾರ"ವೆಂದು ಹೇಳಿಕೆ ಕೊಟ್ಟರು. ಅಂದರೆ ಮೇಲಿನ ಘೋಷಣೆಗಳನ್ನು ಮಾಡಿದ್ದುದು ಪತ್ರಕರ್ತರೇ? ಹಾಗಾದರೆ ಕೆಂಪೇಗೌಡರಿಗೆ ನಾರಾಯಣಗೌಡರು ಸರಿಸಮಾನರೇ? ಇದಕ್ಕೆ ಪೂರಕವಾಗಿ ನನ್ನ ಯುವ ಮಿತ್ರ ಸುಪ್ರೀತ್ ಅವರ ಅಭಿಪ್ರಾಯವನ್ನು ಗಮನಕ್ಕೆ ಇಲ್ಲಿ ಕೊಟ್ಟಿದ್ದೇನೆ. ದಯವಿಟ್ಟು ಪರಾಂಭರಿಸಿ.

ಸ್ವಾತಂತ್ರ್ಯ ಹೋರಾಟದ ಫಲಕ್ಕಿಂತ ಅದರ ಬೈಪ್ರಾಡಕ್ಟ್ ಗಳಾದ ಜಾತೀಯತೆ, ಓಲೈಕೆಗಳ ದೆಸೆಯಿಂದಾಗಿ ಭವ್ಯ ಭಾರತದ ಇತಿಹಾಸ ಕುಲಗೆಟ್ಟು ಹೋಗುತ್ತಿದೆ. ವಿದೇಶೀ ಆಳ್ವಿಕೆಯನ್ನು ವಿರೋಧಿಸಿ ಸ್ವಾತಂತ್ರ್ಯ ಗಳಿಸಿದ ಭಾರತ, ತನ್ನ ನೈಜ ಇತಿಹಾಸವನ್ನರಿಯಲು ವಿದೇಶೀ ಇತಿಹಾಸಕಾರರ ಮೊರೆ ಹೋಗಬೇಕೇನೋ!

ಅಣಕ:

ಒಂದೊಮ್ಮೆ ಬೆಂಗಳೂರಿನಲ್ಲಿದ್ದ ಡ್ಯಾನ್ಸ್ ಬಾರಿನಲ್ಲಿ ಕನ್ನಡ ಓರಾಟಗಾರರು "ಎಲ್ಲೋ ಜೋಗಪ್ಪ ನಿನ್ನರಮಾನೆ" ಎಂಬ ಕನ್ನಡ ಪಾಪಿ (ಇಂಗ್ಲಿಷ್ ಪಾಪ್ ನ ಕನ್ನಡ ರೂಪಾಂತರ) ಸಂಗೀತವನ್ನು ಕೇಳುತ್ತ ನೃತ್ಯವನ್ನು ನೋಡುತ್ತಿದ್ದರು. ಬೆಚ್ಚನೆಯ ನೃತ್ಯಕ್ಕೆ ಜಾಗೃತಗೊಂಡ ಓರಾಟಗಾರನೊಬ್ಬ ತನ್ನ ಓರಾಟದ ಧಣಿಗೆ "ಅಣ್ಣಾ, ಈ ಡ್ಯಾನ್ಸ್ ಬಾರಿಗೆ ’ಸಿಂಡ್ರೆಲ್ಲಾ’ ಅಂತ ಇಂಗ್ಲಿಸ್ ಎಸ್ರಿಟ್ಟವ್ರೇ! ಒಂದು ಸ್ಕೆಚ್ ಆಕಿ ’ನೃತ್ಯರಾಣಿ ಶಾಂತಲೆ’ ಅಂತ ಕನ್ನಡಾ ಎಸ್ರು ಮಡಗ್ಸದಾ?" ಎಂದು ಪ್ರಶ್ನಿಸಿದನು.

"ಅದ್ಯಾರ್‍ಲಾ ಶಾಂತ್ಲಾ?"

"ಯಿಷ್ಣುವರ್ಧನನ ಎಣ್ತಿ, ಒಳ್ಳೇ ಡ್ಯಾನ್ಸರ್ ಆಗಿದ್ಲಂತೆ, ಅಂಗಂತ ಯಾವ್ದೋ ಸಿನುಮಾದಾಗೆ ನೋಡಿದ್ದೆ ಕಣಣ್ಣಾ"

"ಸಾಅಸಸಿಮ್ಮ ಯಿಷ್ಣುವರ್ಧನನ ಎಣ್ತಿ, ಭಾರ್‍ತಿ ಕಣಲೇ ಅಲ್ಕ. ಅಣ್ಣಾವ್ರ ಜತೆ ಭಾರೀ ಕುಣೀತಿದ್ಲು. ಅವ್ಳೆಸ್ರಿಟ್ರೆ ಎಡವಟ್ಟಾಯ್ತದೆ."

"ಯೇ, ಅಷ್ಟೂ ಗೊತ್ತಿಲ್ವ ನಂಗೆ. ಇದು ಅವನ್ಯಾವನೊ ಯಿಷ್ಣುವರ್ಧನ ಅನ್ನ ರಾಜನಿದ್ದ್ನಂತೆ. ಅವನೆಂಡ್ತಿ"

"ಔದಾ, ಅಂಗಾರೆ ಆ ಎಸ್ರು ಮಡುಗ್ಸ್ ಬೇಕಾದ್ದೆ. ಸ್ಕೆಚ್ ರೆಡಿ ಮಾಡು"

ಸದ್ಯ, ನೃತ್ಯರಾಣಿ ಶಾಂತಲೆಯ ಅದೃಷ್ಟ, ಡ್ಯಾನ್ಸ್ ಬಾರುಗಳು ಬಂದ್ ಆಗಿವೆ!


ಸುಪ್ರೀತ್ ಅವರ ಅಭಿಪ್ರಾಯ:


"ರವಿಯವರೇ,ನಿಮ್ಮ ಹಿಂದಿನ ಲೇಖನಕ್ಕೆ ನಾನು ಬರೆದ ಪ್ರತಿಕ್ರಿಯೆಯಲ್ಲಿ ಕರವೇ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಹಾಗೆ ಮಾಡುತ್ತಿರುವ ಹೋರಾಟಗಳಲ್ಲಿ ಉಳಿದೆಲ್ಲಾ ಬೇಡಿಕೆಗಳನ್ನು ಬಿಟ್ಟು ಕೇವಲ ಕೆಂಪೇಗೌಡರ ಹೆಸರಿಡಬೇಕು ಎಂಬ ಬೇಡಿಕೆಯನ್ನು ಹಿಡಿದುಕೊಂಡು ಟೀಕಿಸಿದ್ದರ ವಿರುದ್ಧ ನನ್ನ ಅಭಿಪ್ರಾಯ ದಾಖಲಿಸಿದ್ದೆ. ಅಲ್ಲದೆ ಬಹಳಷ್ಟು ಮಂದಿ ಕನ್ನಡಿಗರು ಹೋರಾಟಗಳನ್ನು ಸಾಂಕೇತಿಕ ಎಂದು ಭಾವಿಸಿ ನಿಜವಾಗಿ ಬೀದಿಗಿಳಿಯಬೇಕಾದ ಸಂದರ್ಭದಲ್ಲೂ ಮೌನರಾಗಿರುವ ಸ್ವಭಾವದವರಾದ್ದರಿಂದ ಅವರಿಗೆ ಕರವೇಯಂಥ ಸಂಘಟನೆಗಳು ಪುಂಡರ ಗುಂಪಾಗಿ ಕಾಣುತ್ತದೆ ಎಂದು ಚಿಂತಿಸಿ ಹಾಗೆ ಬರೆದಿದ್ದೆ.ಆದರೆ ಯಾವಾಗ ಪತ್ರಿಕೆಗಳಲ್ಲಿ ಜವರೇಗೌಡರು, ಒಕ್ಕಲಿಗೆ ಮಠದ ಸ್ವಾಮೀಜಿ ಹಾಗೂ ಕರವೇ ‘ಕೆಂಪೇಗೌಡರ ಹೆಸರಿಡದಿದ್ದರೆ ನಿಲ್ದಾಣದ ಉದ್ಘಟನೆಗೆ ಬಿಡುವುದಿಲ್ಲ’ ಎಂದು ಆರ್ಭಟಿಸಿರುವ ವರದಿ ಓದಿದೆನೋ ಆಗ ನಿಮ್ಮ ಲೇಖನ ಚೆನ್ನಾಗಿ ಅರ್ಥವಾಯಿತು! ಈ ಲೇಖನದಲ್ಲಿ ನೀವು ವಿವರಿಸಿರುವ ಹಾಗೆ ಕನ್ನಡಿಗರಿಗೆ ಪ್ರಾತಿನಿಧ್ಯ ಮುಂತಾದ ಸಂಗತಿಗಳೆಲ್ಲಾ ನಡೆಯಬೇಕಾದ್ದು ಸರಕಾರದ ಮಟ್ಟದಲ್ಲಿ. ಅಲ್ಲಿ ತೆರೆ ಮರೆಯ ಕೆಲಸ ನಡೆಯುವಾಗ ಮೌನದಿಂದಿರುವ ಹೋರಾಟಗಾರರು ಭಾವುಕವಾಗಿ ಜನರನ್ನು ಕೆರಳಿಸಲು ಹೊರಡುವುದು ನಿಜಕ್ಕೂ ಆಕ್ಷೇಪಾರ್ಹ. ಸುಪ್ರೀತ್"