ಬುದ್ದಿಜೀವಿಗಳು, ನ್ಯಾಯಾಂಗವೂ ಮತ್ತು ಜನಸಾಮಾನ್ಯರೂ!

ಕಳೆದ ವಾರ, ಏಕಪತ್ನೀವೃತಸ್ಥ ಮಾಜಿ ಮುಖ್ಯಮಂತ್ರಿ, ವಿಗ್ಗಿನ ಸುಂದರಾಂಗರು ತಮ್ಮ ನೆತ್ತಿಯನ್ನು ವಿಗ್ ನಲ್ಲಿ ಮುಚ್ಚಿಟ್ಟುಕೊಂಡಂತೆ ತಮ್ಮ ಪ್ರೇಮಲೀಲೆಯನ್ನು ಮುಚ್ಚಿಟ್ಟುಕೊಂಡದ್ದು, ಮತ್ತು ವಿಗ್ಗಿಲ್ಲದ ಕಿಲಾಡಿರಂಗ ವಿಶ್ವನಾಥ್ ತಮ್ಮ ಬಕ್ಕತಲೆಯಂತೆ ಯಾವ ಎಗ್ಗಿಲ್ಲದೆ ತಮ್ಮ ಪ್ರ್‍ಏಮಲೀಲೆಯನ್ನು ಸಾದರಪಡಿಸಿಕೊಂಡದ್ದುದು, ಅವರುಗಳ ವ್ಯಕ್ತಿತ್ವ ಮತ್ತು ನೆತ್ತಿಗೆ ಹಿಡಿದ ಸಾಮ್ಯತೆಯಂತೆ ಶೀರ್ಷಿಕೆಯನ್ನು ಕೊಟ್ಟಿದ್ದೆ. ಬಹುಶಃ ಅದು ನಿಮಗೆ ಅರ್ಥವಾಗಿರಬಹುದು. ಆದರೆ ಈ ದ್ವಿಪತ್ನಿತ್ವದ ಪುಸ್ತಕ ಸಮಾರಂಭಕ್ಕೆ ಆಗಮಿಸಿದ್ದ ನಮ್ಮ ಮಾನ್ಯ ಬುದ್ದಿಜೀವಿಗಳು ಈ ಪುಸ್ತಕವನ್ನು ಓದಿ, ಅದರ ಲೇಖಕರ ರಾಜಕೀಯ ಹಿನ್ನೆಲೆ, ಅಲ್ಲವರು ಬರೆದುಕೊಂಡಿರುವ ಬಹುಪತ್ನಿತ್ವದ ವಿಷಯದಿಂದಾಗಬಹುದಾದ ಸಾಮಾಜಿಕ ದುಷ್ಪರಿಣಾಮ, ಇದ್ಯಾವುದನ್ನು ವಿಶ್ಲೇಷಿಸದೆ ಈ ಪುಸ್ತಕವನ್ನು ಬಿಡುಗಡೆಗೊಳಿಸಿ ತಮ್ಮ ಬುದ್ದಿಮತ್ತೆಯನ್ನು ಮೆರೆಸುತ್ತ ಕೊನೆಯಲ್ಲಿ ಇಲ್ಲಿ ಮಾಜಿ ಮುಖ್ಯಮಂತ್ರಿಗಳ ಸರಸದ ವಿಷಯವನ್ನು ಪ್ರಸ್ತಾಪಿಸಿದ್ದು ತಪ್ಪೆಂದು ಹೇಳುವ ಮೂಲಕ ಈ ಕೃತಿಯನ್ನು ಓದದೇ ಪ್ರತಿಭಟಿಸಿದ ಸಾಮಾನ್ಯಜೀವಿಗಳಿಗೂ ಮತ್ತು ಅದನ್ನೋದಿ ಬಿಡುಗಡೆಗೊಳಿಸಿದ ತಮ್ಮಂಥ ಬುದ್ದಿಜೀವಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂಬುದನ್ನು ಸಾಬೀತು ಪಡಿಸಿದ್ದಾರೆ. ಅದು ಜನಸಾಮಾನ್ಯನಿಗೆ ಅರ್ಥವಾಗಬೇಕು, ಅಷ್ಟೇ.

ಬಹುಶಃ ಸುರಪಾನ, ಪಲ್ಲಂಗ ಪುರಾಣ, ಪೋಲಿತನ, ಪರಸ್ತ್ರೀ ವ್ಯಾಮೋಹ....ಇತ್ಯಾದಿ ಲಂಪಟತನದ ಕಿಲಾಡಿತನಗಳು ಬುದ್ದಿಜೀವಿಗಳಿಗಿರಲೇಬೇಕಾದ ಅಘೋಷಿತ ಅರ್ಹತೆಗಳೇನೋ! ಇರಲಿ, ನಾನು ಕೂಡ ಈ ವಿಷಯಗಳಲ್ಲಿ ಪರಿಣಿತಿ ಹೊಂದಿರುವೆನಾದರೂ ಕಾನೂನು ಉಲ್ಲಂಘಿಸಿ ಬಹುಪತ್ನಿತ್ವವನ್ನು ಹೊಂದುವಷ್ಟು ನಾಯಕತ್ವದ ಗುಣವಾಗಲೀ, ಅದನ್ನು ಒಪ್ಪಿಕೊಳ್ಳುವಷ್ಟು ಬುದ್ದಿಜೀವಿಗಳ ಬುದ್ದಿಮತ್ತೆಯನ್ನಾಗಲೀ ನಾನು ಹೊಂದಿಲ್ಲ! ಕಾನೂನೇ ದೊಡ್ಡದೆಂದು ತಿಳಿದ ನಿಮ್ಮೊಳಗೊಬ್ಬ ನಾನು.

ಬಹುಶಃ ಮುಸ್ಲಿಂ / ಕ್ರಿಶ್ಚಿಯನ್ ಅಲ್ಪಸಂಖ್ಯಾತ ಸಂಬಂಧೀ ಸೂಕ್ಷ್ಮಗಳಿಗೆ ಧಕ್ಕೆ ಬರುವಂತಹ ವಿಷಯವಿದ್ದರೆ ಮಾತ್ರ ದನಿಯೆತ್ತಬೇಕೆಂದು ಭಾರತೀಯ ಬುದ್ಧಿಜೀವಿಗಳು ತಮಗೆ ತಾವೇ ವಿಧಿಸಿಕೊಂಡಿರುವ ಏಕೈಕ ಅನುಸೂಚಿಯೇನೋ? ಇವರ ಅನುಸೂಚಿಯ ಪರಿಣಾಮದಿಂದಲೇ ಇಂದು ಕಾಶ್ಮೀರದ ಕಣಿವೆಯಲ್ಲಿದ್ದ ಉಗ್ರ್‍ಅವಾದವು ಹೊನ್ನಾಳಿ, ಕಲಘಟಗಿಗೆ ಬಂದಿರುವುದು. ಇರಲಿ, ಅದಕ್ಕೆಲ್ಲಾ ಇವರಿಗೆ ’ಬುದ್ಧಿ’ ಹೇಳಲು ಭಜರಂಗ್ ದಳವೂ ಮತ್ತು ’ಹಿಮ್ಮತ್’ ಕೊಡಲು ಬುದ್ದಿಜೀವಿಗಳ ಸಂಘಗಳೂ ಇವೆ. ಅದಕ್ಕೇ ನಮ್ಮ ಇತಿಹಾಸಕಾರ ಸಂಶೋಧಕ ಪ್ರೊ: ಚಿದಾನಂದ ಮೂರ್ತಿಯವರು ಎಷ್ಟೇ ಕೊರಳೆತ್ತಿ ಪ್ರತಿಭಟಿಸಿದರೂ, ನಮ್ಮ ಬುದ್ದಿಜೀವಿಗಳು ಅಲ್ಪಸಂಖ್ಯಾತರನ್ನು ಓಲೈಸಲು ಮೂರ್ತಿಯವರ ಕೂಗನ್ನು ಕೃಷ್ಣದೇವರಾಯನ ’ಸುವ್ವರ್ ಕಾ ಬೊಮ್ಡೀ’ ಎಂದು ಹೀಗಳೆಯುತ್ತಾರೆ. ಹಾಗಾಗಿ ಈ ಕೃತಿಯಲ್ಲಿ ದ್ವಿಪತ್ನಿತ್ವದ ಅಪರಾಧವಿದ್ದರೂ ಅದು ಅಲ್ಪಸಂಖ್ಯಾತ ಸಂಬಂಧೀ ವಿಷಯವಲ್ಲವಾದ್ದರಿಂದ ಅದೊಂದು ಆಕ್ಷೇಪಾರ್ಹ ಸಂಗತಿಯಲ್ಲವೆಂದು "ಹಳ್ಳಿ ಹಕ್ಕಿಯ ಹಾಡು" ಬಿಡುಗಡೆಗೊಳಿಸಿದ ನಮ್ಮ ಬುದ್ದಿಜೀವಿಗಳು ತರ್ಕಿಸಿದರೆನಿಸುತ್ತದೆ. ಒಂದು ವೇಳೆ ವಿಶ್ವನಾಥರ ಎರಡನೇ ಪತ್ನಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಅಲ್ಪಸಂಖ್ಯಾತ ಮಹಿಳೆಯಾಗಿದ್ದರೆ, ನಮ್ಮ ಬುದ್ದಿಜೀವಿಗಳು ಹೇಗೆ ಪ್ರತಿಕ್ರಿಯಿಸುತ್ತಿದ್ದರೋ ನಾ ಕಾಣೆ.

ಇರಲಿ, ಹೀಗೆ ಕಾನೂನೇ ದೊಡ್ಡದೆಂದು ತಿಳಿದು ನಮ್ಮ ನ್ಯಾಯಾಂಗದಲ್ಲಿ ಅಪಾರ ವಿಶ್ವಾಸವನ್ನು ಹೊಂದಿದ್ದ ನನಗೆ ಮೊನ್ನೆ ನಿರಾಸೆಯಾಗುವಂತಹ ಬಹುಶಃ ನೀವು ಓದಿರದ ಸುದ್ದಿಯೊಂದನ್ನು ಓದಿದೆ. ನಮ್ಮ ಸುಪ್ರ್‍ಈಂ ಕೋರ್ಟ್ "ಇತ್ತೀಚೆಗೆ ಲಂಗು ಲಗಾಮಿಲ್ಲದೆ ಪ್ರಚಾರಕ್ಕಾಗಿ ಅನೇಕರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹೂಡುತ್ತಿದ್ದಾರೆ. ಹಾಗಾಗಿ ಅಂಥಹವರಿಗೆ ಒಂದು ಲಕ್ಷ ಜುಲ್ಮಾನೆ ಹಾಕಬೇಕು" ಎಂಬ ಪ್ರಸ್ತಾಪವನ್ನೊಡ್ಡಿದೆ.

ನನ್ನೆಲ್ಲ ಲೇಖನಗಳಲ್ಲಿ ಭಾರತಕ್ಕೆ ದೊರೆತ ಸ್ವಾತಂತ್ರ್ಯ ಹೇಗೆ ದೂರದರ್ಶಿತ್ವವಿಲ್ಲದ ರಾಜಕಾರಣಿಗಳ ದೆಸೆಯಿಂದ ಸ್ವೇಚ್ಚಾಚಾರವಾಗಿ ಮಾರ್ಪಾಟ್ಟಿದೆಯೆಂದು ಬರೆದಿದ್ದೇನೆ. ಇವೆಲ್ಲವುಗಳ ವಿರುದ್ಧ ನಮ್ಮ ನೆಲದ ಕಾನೂನಿನ ಪರಿಧಿಯೊಳಗೇ ಹೋರಾಡಲು ಈ "ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ" ಯೊಂದೇ ದಾರಿಯೆಂದು ನನಗನಿಸುತ್ತದೆ. ಉದಾಹರಣೆಗೆ ಮೇಲ್ಕಾಣಿಸಿದ ಮಾಜಿ ಮಂತ್ರಿಗಳ ದ್ವಿಪತ್ನಿತ್ವದ ಸಂಗತಿಯಲ್ಲೂ "ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ"ಯೊಂದೇ ದಾರಿ.

ಹಾಂ! ಹಾಗಂತ ನೀವುಗಳು ಪ್ರತಿಯೊಂದು ಕೋರ್ಟಿನಲ್ಲೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವಂತಿಲ್ಲ! ಅವುಗಳನ್ನು ಹೈಕೋರ್ಟಿನಲ್ಲಿ ಮಾತ್ರ ಹೂಡಬೇಕು. ಬೀದರ್ ನ ಕೊನೆಯಲ್ಲಿರುವ ಒಬ್ಬ ಜವಾಬ್ದಾರಿಯುತ ಬಡ ನಾಗರೀಕ ತನ್ನ ನಲ್ಲಿಯಲ್ಲಿ ನಿತ್ಯವೂ ಚರಂಡಿ ನೀರು ಬರುತ್ತಿರುವುದನ್ನು ಮತ್ತದನ್ನು ಸರಿಪಡಿಸದ ತನ್ನ ನಗರಸಭೆ / ನೀರು ಮಂಡಲಿಗಳ ಅನ್ಯಾಯವನ್ನು ಸರಿಪಡಿಸಲು ಈ ಮೊಕದ್ದಮೆಯನ್ನು ಹೂಡಲು ಬೆಂಗಳೂರಿಗೆ ಬರಬೇಕು. ಬೆಂಗಳೂರಿನಲ್ಲಿ ತನ್ನ ಊಟ, ವಸತಿಯ ಖರ್ಚನ್ನು ಭರಿಸಬೇಕು. ಮತ್ತು ಇದೆಲ್ಲದರೊಂದಿಗೆ ವಕೀಲರು, ಕೋರ್ಟ್ ವೆಚ್ಚಗಳು....ಇತ್ಯಾದಿ ತುಂಬಿ ತನ್ನ ಹೋರಾಟವನ್ನು ನಡೆಸಬೇಕು. ಬಡ ಭಾರತದ ಅದೆಷ್ಟು ಜನ ಈ ರೀತಿ ಹೋರಾಡಲು ಸಿದ್ಧರಿರುತ್ತಾರೆ? ಆ ಅನ್ಯಾಯವನ್ನು ನೋಡಿಕೊಂಡು ಸುಮ್ಮನಿರಲೇಬೇಕಾದ ಅನಿವಾರ್ಯತೆ ಇಂದು ಶೇಕಡ ೯೬ ರಷ್ಟು ಭಾರತೀಯರಿಗಿದೆ. ಇನ್ನು ಆ ಆರ್ಥಿಕ ಶಕ್ತಿ ಇರುವವರಲ್ಲಿ ಹೋರಾಡಬೇಕೆಂಬ ಛಲ ಇರುವವರೆಷ್ಟು ಮಂದಿ?

ಯೋಚಿಸಿ ನೋಡಿ, ಜನ ಪ್ರತಿನಿಧಿ, ಅಧಿಕಾರಿ ವರ್ಗ, ಆಡಳಿತಶಾಹಿ, ಇವೆಲ್ಲವುಗಳ ವಿರುದ್ಧ ಲಂಚ, ಭ್ರಷ್ಟಾಚಾರ, ಕುಟಿಲತೆ, ಅಸಮರ್ಪಕ ಸೇವೆ...ಇಂದು ನಮ್ಮ ಕಣ್ಣಿಗೆ ಕಾಣುವ ಪ್ರತಿಯೊಂದು ಅನ್ಯಾಯಗಳ ವಿರುದ್ಧ ಕಾನೂನಿನ ಪರಧಿಯೊಳಗೆ ಹೋರಾಡಲು ಇರುವ ಏಕೈಕ ಅಸ್ತ್ರ ಈ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ. ಈ ಮೊಕದ್ದಮೆಯನ್ನು ಹೂಡಲು ಮತ್ತು ಸಮರ್ಪಕವಾಗಿ ಆಳವಡಿಸಲು ನಮ್ಮ ನ್ಯಾಯಾಂಗವು ತ್ವರಿತವಾಗಿ ಯೋಜನೆಗಳನ್ನು ಹಾಕಿಕೊಳ್ಳಬೇಕು.

ಆದರೆ ಅದಾಗಲೇ ಸಾರ್ವಜನಿಕ ಮೊಕದ್ದಮೆಗಳನ್ನು ಹೈಕೋರ್ಟಿನಲ್ಲಿ ಮಾತ್ರವೇ ಹೂಡಬೇಕೆಂಬ ನಿಯಮವೇ ಜನಸಾಮಾನ್ಯನ ಸ್ವಾತಂತ್ರ್ಯಹರಣದ ಚರಮಗೀತೆಯಾಗಿರುವಾಗ, ಇಂತದುದರಲ್ಲಿ ನಮ್ಮ ನ್ಯಾಯಾಂಗವು ಈ ರೀತಿಯ ಸಾರ್ವಜನಿಕ ಮೊಕದ್ದಮೆಗಳನ್ನು ಹೂಡುವ ಧೈರ್ಯವನ್ನು ತೋರುವವರಿಗೆ ಪ್ರೋತ್ಸಾಹಿಸದೆ ಅವರುಗಳಿಗೆ ದಂಡದ ಮರ್ಮಾಘಾತವನ್ನು ವಿಧಿಸಬೇಕೆಂಬ ಪ್ರಸ್ತಾಪದ ಮೂಲಕ ಸ್ವಾತಂತ್ರ್ಯದ ಗೋರಿಗೆ ಅಡಿಪಾಯವನ್ನು ಹಾಕುತ್ತಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಕೊಡುವ ಕಾರಣವೇನು ಗೊತ್ತೆ? ಈ ಸಿಲ್ಲಿ ಮೊಕದ್ದಮೆಗಳು ಅಮೂಲ್ಯವಾದ ಕೋರ್ಟ್ ಸಮಯವನ್ನು ಹಾಳು ಮಾಡುತ್ತಿವೆಯಂತೆ. ರಿಚರ್ಡ್ ಗಿಯರ್ ಕಿಸ್ಸಿನ ವಿಚಾರ, ಖುಶ್ಬೂ ಕನ್ಯಾತನದ ಬಗ್ಗೆ ಮಾತನಾಡಿದ್ದು, ಮತ್ತಿನ್ನ್ಯಾವಳೋ ನಟಿ ಹಾಕಿದ್ದ ಸ್ಕರ್ಟಿನ ಅಳತೆಯ ವಿಷಯ ಇವುಗಳೆಲ್ಲಾ ಯಾರಾದರೂ ಒಪ್ಪುವಂತಹ ಸಿಲ್ಲಿ ವಿಷಯಗಳೇ. ಆದರೆ ಈ ಕೇಸುಗಳೆಲ್ಲ ಕೋರ್ಟಿನ ಫೀ ಕಟ್ಟಿಯೇ ತಾನೆ ಕಟಕಟೆಗೆ ಬಂದಿದ್ದುದು. ಹಾಗಿದ್ದಾಗ ಸಿಬ್ಬಂದಿಗಳನ್ನು ಹೆಚ್ಚಿಸಿ ತ್ವರಿತವಾಗಿ ಮೊಕದ್ದಮೆಗಳನ್ನು ವಿಲೇವಾರೀ ಮಾಡಬೇಕೇ ಹೊರತು, ಮೊಕದ್ದಮೆಗಳನ್ನೇ ತರಬೇಡಿರೆಂದರೆ ಹೇಗೆ? ಸರಿ, ಹಾಗಿದ್ದಾಗ ಕೋರ್ಟ್ ಯಾಕೆ ಖುದ್ದಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬಾರದು? ನಿತ್ಯ ದಿನಪತ್ರಿಕೆಗಳನ್ನು ಓದಿದರೇ ಸಾಕು ನಿತ್ಯವೂ ಇಪ್ಪತ್ತು ಮೊಕದ್ದಮೆಗಳನ್ನು ದಾಖಲಿಸಿಕೊಳ್ಳಬಹುದು. ಹಾಗೆ ದಾಖಲಿಸಿಕೊಂಡು ಸಂಬಂಧಪಟ್ಟವರಿಂದ ಸಮಜಾಯಿಷಿ ಕೇಳಿ ವ್ಯವಸ್ಥೆಯನ್ನು ಸ್ಥಿರಗೊಳಿಸುತ್ತ ಅರ್ಥಬದ್ಧ ಸ್ವಾತಂತ್ರ್ಯವನ್ನು ನಿರೂಪಿಸುತ್ತ ನ್ಯಾಯಾಲಯಗಳೇಕೆ ಬಲಿಷ್ಟ ಭಾರತವನ್ನು ಕಟ್ಟಬಾರದು. ಅಥವಾ ಈ ವ್ಯವಸ್ಥೆ ಕೂಡಾ ಭಾರತದ ಇತರೆ ವ್ಯವಸ್ಥೆಗಳಂತೆಯೇ ಆಗುತ್ತಿದೆಯೇ!

ಹಿಂದೊಮ್ಮೆ ಯಾವುದೋ ಕಾಲದಲ್ಲಿ ಯಾವನೋ ರಾಜನೊಬ್ಬ ತನ್ನ ಪ್ರಜೆಗಳಿಗೆ ಸುಲಭದಲ್ಲಿ ನ್ಯಾಯವು ದೊರಕಬೇಕೆಂಬ ಸದುದ್ದೇಶದಿಂದ ಒಂದು ದೊಡ್ಡ ಘಂಟೆಯನ್ನು ತನ್ನ ಅರಮನೆಯ ಮುಂದೆ ನೇತು ಹಾಕಿಸಿದ್ದನಂತೆ. ಯಾರಿಗೇ ನ್ಯಾಯ ಬೇಕಾದರೂ ಯಾವುದೇ ಹೊತ್ತಿನಲ್ಲಾದರೂ ಬಂದು ಆ ಘಂಟೆಯನ್ನು ಬಾರಿಸಿದರೇ ಕೂಡಲೇ ಅವರ ಅಹವಾಲನ್ನು ಕೇಳಿ ನ್ಯಾಯ ದೊರಕಿಸುವ ಪರಿಪಾಠವನ್ನು ಬೆಳೆಸಿದ್ದನಂತೆ. ಆ ರೀತಿ ಇಂದು ಭಾರತಕ್ಕೆ ನಮ್ಮ ನ್ಯಾಯಾಂಗವು ಘಂಟೆಯನ್ನು ಜೋಡಿಸಬೇಕಾದ ತುರ್ತು ಅನಿವಾರ್ಯತೆ ಇದೆ.

ಹೀಗೆಲ್ಲ ನನ್ನ ಸ್ವಗತ ಯೋಚನಾ ಲಹರಿ ಸಾಗುತ್ತಿರುವಾಗ " ಪಲ್ ಬರ್ ಕೆ ಲಿಯೇ ಕೋಯಿ ಹಮೇ ಪ್ಯಾರ್ ಕರಲೇ ಜೂಟಾ ಹಿ ಸಹೀ" ಎಂಬ ಹಿಂದಿ ಹಾಡು ಕೇಳಿಸಿತು. "ಇದ್ಯಾವುದಪ್ಪ ನನ್ನ ಹಳ್ಳಿ ಹಾಡು ಹಾಡುತ್ತಿರುವುದು ಅದೂ ನಾನಿಳಿದುಕೊಂಡಿದ್ದ ಶಾರ್ಲೆಟ್ ಡೌನ್ ಟೌನ್ ನ ವೆಸ್ಟಿನ್ ಹೋಟೆಲ್ಲಿನಲ್ಲಿ!" ಎಂದು ಆಶ್ಚರ್ಯದಿಂದ ನೋಡಿದಾಗ ಬಾರ್ ನ ಟೀವಿಯಲ್ಲಿ ಸಿಂಪ್ಸನ್ ಧಾರಾವಾಹಿಯ (ಭಾರತಕ್ಕೆ ಸಿಂಪ್ಸನ್ ನ ಕೆಲಸ ಔಟ್ ಸೋರ್ಸ್ ಆದ ಕಂತು) ಕೊನೆಯಲ್ಲಿ ಬಂದಂತಹ ಸಂಗೀತ ಅದಾಗಿತ್ತು. ಬಹುಶಃ ನಮ್ಮ ವ್ಯವಸ್ಥೆಗಳನ್ನು ಸರಿಪಡಿಸುವ ಶಕ್ತಿ ಇರುವ ನ್ಯಾಯಾಂಗವು ಮತ್ತು ವ್ಯವಸ್ಥೆಯ ವಿರುದ್ಧ ಜಡವಾಗಿರುವ ನಾವುಗಳೂ ದೇಶವನ್ನು ಗಾಢವಾಗಿ "ಪಲ್ ಬರ್ ಕೆ ಲಿಯೆ" ಪ್ರೀತಿಸಬೇಕೆನೋ?

ಅಣಕ:

ಒಬ್ಬ ಬುದ್ದಿಜೀವಿ ತನ್ನ ಮಿತ್ರರೊಂದಿಗೆ ಸಂಜೆಯ ಚರ್ಚಾಕೂಟವನ್ನು ಮುಗಿಸಿಕೊಂಡು ಮನೆಗೆ ಬಂದಾಗ ಅಘಾತವೊಂದು ಕಾದಿತ್ತು. ಅವನ ಹೆಂಡತಿ ’ಆಯ್ಯೋ ಈ ದಿನ ಯಾವನೋ ಮನೆಗೆ ನುಗ್ಗಿ ನನ್ನನ್ನು ಹಾಳು ಮಾಡಿಬಿಟ್ಟ’ ಎಂದು ಗೋಳಾಡಿದಳು. ಅದನ್ನು ಕೇಳಿದ ಬುದ್ದಿಜೀವಿ ಕೋಪಗೊಂಡು "ಯಾರವನು? ಹೇಗಿದ್ದ?" ಎಂದು ತನ್ನ ಹೆಂಡತಿಯನ್ನು ಕೇಳಿದ. ಅದಕ್ಕವಳು "ಮುಲ್ಲಾ ತರಹದ ಟೋಪಿ ಮತ್ತು ಕುರ್ತಾ ಹಾಕಿದ್ದ. ಗಡ್ಡ ಬಿಟ್ಟಿದ್ದ. ಸುನ್ನತಿ ಅಂತಾರಲ್ಲ ಅದು ಕೂಡಾ ಆಗಿತ್ತೆನಿಸಿತು. ಬಹುಶಃ ಸಾಬರವನೇನೋ" ಎಂದಳು. ಅದಾಗಲೇ ಅಲ್ಲಿದ್ದ ಪೊಲೀಸರನ್ನು, ಸುದ್ದಿಗಾರರನ್ನು ಗಮನಿಸಿದ್ದ ಬುದ್ದಿಜೀವಿಯ ಬುದ್ದಿ ಜಾಗೃತಗೊಂಡಿತ್ತು! ಕೂಡಲೇ ಬುದ್ದಿಜೀವಿ "ಛೇ, ಛೇ, ನಿತ್ಯವೂ ಗೋಮಾಂಸವನ್ನು ತಿನ್ನುವ ಅವನು ಹಸುವಿನಂತೆಯೇ ಸಾಧುವಾಗಿರುತ್ತಾನೆ. ಬಹುಶಃ ಈ ದಿನ ಅವನು ಹೋರಿಯ ಮಾಂಸವನ್ನು ತಿಂದಿರಬೇಕು. ಆ ಹೋರಿಯ ಮಾಂಸವೇ ಅವನಿಂದ ಈ ಕೃತ್ಯವನ್ನು ಮಾಡಿಸಿದೆ. ನಿಜದಲ್ಲಿ ಅವನು ಮುಗ್ಧ! ಹಾಗಾಗಿ ಈ ಕೃತ್ಯವನ್ನೆಸಗಿದವನನ್ನು ಕ್ಷಮಿಸಿದ್ದೇನೆ. ಅದೇ ಒಬ್ಬ ಪುಳ್ಚಾರೀ ಬ್ರಾಹ್ಮಣ ಈ ಕೃತ್ಯಕ್ಕೆ ಕೈಹಾಕಿದ್ದರೆ ಅದು ಅವನು ಜಾಗೃತ ಮನಸ್ಸಿನಿಂದಲೇ ಮಾಡಿದ ಹೇಯ ಕೃತ್ಯವಾಗಿರುತ್ತದೆ. ಅಂತಹವರು ಘೋರ ಶಿಕ್ಷೆಗೆ ಅರ್ಹರು" ಎನ್ನುತ್ತ ಪೊಲೀಸರಿಗೆ ಕೇಸಿನ ಅಗತ್ಯವಿಲ್ಲವೆಂದೂ ಮತ್ತು ಸುದ್ದಿಗಾರರಿಗೆ ದಯವಿಟ್ಟು ಈ ಸುದ್ದಿಯನ್ನು ಆದಷ್ಟೂ ಮುಂದಿನ ಪುಟಗಳಲ್ಲಿ ಹಾಕಿರೆಂದೂ ಭಿನ್ನವಿಸುತ್ತ ವಿಶಾಲ ಹೃದಯವನ್ನು ಮೆರೆದರು!

No comments: