ಭಾರತ ಒಂದು ಮರುಶೋಧನೆ - ದೀಪಾ ದೇವಕತೆ ವಿಮರ್ಶೆ

 ಲೇಖಕರಾದ ಶ್ರೀ ರವಿ ಹಂಜ್ ರವರು ಬರೆದ 'ಭಾರತ-ಒಂದು ಮರುಶೋಧನೆ' ಪುಸ್ತಕದ ಕುರಿತು ನನ್ನ ಅನಿಸಿಕೆಗಳು. 

ಕೃತಿಯು ಹೊಂದಿರುವ ಆಲೋಚನೆಗಳ spontaneity ಮತ್ತು ತಾರ್ಕಿಕವಾಗಿ ವಿಶ್ಲೇಷಿಸಿದ ರೀತಿ ವರ್ಣನೀಯ. ಬಿಡಿಯಾಗಿ ಅಧ್ಯಯನ ಮಾಡುವ ಬದಲು ಸಮಗ್ರವಾಗಿ ಹೋಲಿಕೆಯೊಡನೆ, ಪರಾಮರ್ಶನಗಳೊಂದಿಗೆ, ಸೂಕ್ತ ಪುರಾವೆಗಳನ್ನು ಸಮರ್ಥನೀಯವಾಗಿ ಚಿತ್ರಿಸಿ ಬರೆದ ಪರ್ವಗಳು ಅಧ್ಯಯನಶೀಲತೆಯೊಂದಿಗೆ ಓದಿಗೆ ಹಚ್ಚುತ್ತದೆ. 

ಈ ಪುಸ್ತಕವು ತನ್ಮಯತೆಯಿಂದ ಓದುವಂತಾಗಿ ಬೇಸರ ಉಂಟುಮಾಡದೆ, ನಾನು ಪದವಿ ಹಂತದಲ್ಲಿ ಇಂತಹ ಪಠ್ಯವನ್ನು ಓದಿದ್ದೇ ಆದರೆ ಇತಿಹಾಸದೆಡೆಗಿನ ಆಸಕ್ತಿ ಹೆಚ್ಚುತ್ತಿತ್ತು ಎನಿಸುತ್ತದೆ ಮತ್ತು ಲೇಖಕರ ಸಾಹಿತ್ಯಿಕ ಭಾಷೆಯು ಸುಂದರವೆನಿಸುವಂತಹದು. 

'ಭಾರತ ಒಂದು ಮರುಶೋಧನೆ'ಯು -

 "ಅಸಂಖ್ಯ ಆಧಾರಗಳೊಂದಿಗೆ ಭಾರತದ ಚರಿತ್ರೆಯ ಕುರಿತು ಕಾಲ - ಮನುಷ್ಯ - ವ್ಯವಸ್ಥೆಗಳನ್ನು ವಸ್ತುನಿಷ್ಠ ದೃಷ್ಠಿಕೋನದಿಂದ ನೋಡುವ ಹೊಸ ರೂಪದ ಹೊತ್ತಿಗೆ ಆಗಿದೆ."

• ಒಂದು ದೇಶದ ಚರಿತ್ರೆಯನ್ನು ಒಂದು ರಾಜವಂಶದ ದೃಷ್ಠಿಕೋನದಿಂದ ಅಧ್ಯಯನ ಮಾಡುವುದು ರೂಢಿಗತ. ಆದರೆ ಈ ಪುಸ್ತಕವು ಸಮಕಾಲೀನವಷ್ಟೇ ಅಲ್ಲದೇ, ಪ್ರಾಚೀನ ಅರಸರುಗಳು, ಆಳ್ವಿಕೆಗಳ ಪರಿಣಾಮ, ಸಂಸ್ಕೃತಿಯು ವಿಕಸನ ಹೊಂದಿದ ಹೆಜ್ಜೆಗುರುತುಗಳನ್ನು, ಸಾಧ್ಯಾಸಾಧ್ಯತೆಗಳನ್ನು ನಿರ್ದಿಷ್ಟ ಆಧಾರಗಳೊಂದಿಗೆ ಪ್ರತಿಬಿಂಬಿಸುತ್ತದೆ. 

• ವೈಜ್ಞಾನಿಕ ದೃಷ್ಟಿಕೋನದಿಂದಲೂ ಕೂಡ ಒಂದು ಜನಾಂಗದ, ಸಮುದಾಯದ ಬೆಳವಣಿಗೆಗಳನ್ನು ಸಾಹಿತ್ಯಿಕ ಆಕರಗಳು, ಪಳಯುಳಿಕೆಗಳ ಪುರಾತತ್ತ್ವ ಆಧಾರಗಳನ್ನು ಜೈವಿಕ ತಂತ್ರಜ್ಞಾನದ ಸಾಕ್ಷ್ಯಗಳೊಂದಿಗೆ ಒರೆಗೆ ಹಚ್ಚುವ ವಿಧಾನಗಳನ್ನು ಗಮನಿಸಲಾಗಿ ಇದೊಂದು ಸತ್ಯಾನ್ವೇಷಣೆಯ ಚರಿತೆಯೆನಿಸುತ್ತದೆ. 

•ಮಾನವನ ಚಿಂತನೆಗಳಿಂದಾದ ಏಕಕಾಲದ ಆವಿಷ್ಕಾರಗಳು Cosmic waveಗಳ ಮೂಲಕ mystical touch ಕೊಡುವಂತಹವುಗಳು.

ಉದಾಹರಣೆಗೆ: ಟೆಲಿಫೋನ್, ಗ್ರಾಮಫೋನ್, ಜೆಟ್ ಇಂಜಿನ್ ಇವುಗಳ ಆವಿಷ್ಕಾರಗಳು ಪರಸ್ಪರ ದೂರದ ದೇಶದಲ್ಲಿದ್ದು ಪರಿಚಯವಿಲ್ಲದ ಇವರುಗಳ ಆವಿಷ್ಕಾರಗಳಲ್ಲಿನ ಸಾಮ್ಯತೆ ಮಾತ್ರ ಅಸಾಧಾರಣವೂ ಆಶ್ಚರ್ಯಕಾರಿಯೂ ಆಗಿದ್ದುದು ಏಕಕಾಲದಲ್ಲಿ ಸಂಶೋಧಿಸಲ್ಪಟ್ಟದ್ದು ವಿಸ್ಮಯವೆನಿಸುವಂತೆ ವಿವರಣೆ ನೀಡುತ್ತದೆ ಈ ಹೊತ್ತಿಗೆ.

• ಲೇಖಕರ ಇತಿಹಾಸದ ವಿಶ್ಲೇಷಣೆಯು "ವಸುದೈವ ಕುಟುಂಬಕಂ" ಎನ್ನುವ ಉಕ್ತಿಯಂತೆ ಜಾಗತಿಕವಾಗಿ ಭಾರತವು ಹೇಗೆ ಅಸ್ತಿತ್ವವನ್ನು ಹೊಂದಿದೆ ಎಂಬುದನ್ನು ಸಮರ್ಥಿಸುವಂತಿದೆ.

• ಇತಿಹಾಸ ಅಗೋಚರ. ಆದ್ದರಿಂದ ನಿಖರವಾಗಿ ಕಾಲ ಮತ್ತು ಘಟನೆಗಳನ್ನು ಕುರಿತು ಹೇಳುವುದು ಯಾರಿಂದಲೂ ಸಾಧ್ಯವಿಲ್ಲ; ಆದಾಗ್ಯೂ ಆಧಾರಗಳ ಮಾಹಿತಿಗಳೊಂದಿಗೆ ಪ್ರಾಕಲ್ಪಿತ ಸಂಭವನೀಯ ಘಟನೆಗಳು ಮತ್ತು ಕಾಲಮಾನದ ಕುರಿತು ಮಾಹಿತಿ ಸ್ಪಷ್ಟವಾಗುತ್ತದೆ. 

• ಇತಿಹಾಸದ ಪುಟಗಳಿಂದ ದೂರ ಉಳಿದ 'ಲಲಿತಾದಿತ್ಯ ಮುಕ್ತಿಪಿದ'ನೆಂಬ ಕಾಶ್ಮೀರ ರಾಜನ ಕುರಿತು ಸ್ವಾರಸ್ಯಕರವಾಗಿ ಬರೆಯಲಾಗಿದೆ. ಲೇಖಕರು ಲಲಿತಾದಿತ್ಯನ ಭಾರತದ ಸಾಮ್ರಾಜ್ಯ ವಿಸ್ತಾರ ನೀತಿಯ ಹಿಂದೆ ಟ್ಯಾಂಗ್ ಮನೆತನದ ಸಹಾಯ ಇವೆಲ್ಲವುಗಳ ಉಲ್ಲೇಖವಿರುವ ಕಲ್ಹಣನ 'ರಾಜತರಂಗಿಣಿ'ಯ ಕುರಿತು ತಿಳಿದು, ರಾಜನು ಪರಾಕ್ರಮ-ಹೃದಯವಂತಿಕೆಯ ಕುರಿತು ಸವಿವರವಾಗಿ ವಿವರಿಸಿದ್ದು ಕೌತುಕವೆನಿಸುತ್ತದೆ. 

• ಕೆಲವು ಪರಿಕಲ್ಪನೆಗಳ ಸತ್ಯಾಂಶ, ಮೂಲಸತ್ವವನ್ನು ತರ್ಕಿಸಿದ ವಿಧಾನ ಇಲ್ಲಿಯವರೆಗಿನ ಇತಿಹಾಸದ ಅರಿವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವಂತೆ ಲೇಖಕರ ಆಧಾರಸಹಿತ ಸಮರ್ಥನೆಗಳು ಪ್ರಭಾವ ಬೀರುತ್ತವೆ.

ಉದಾಹರಣೆಗೆ: ಮಂದಗಾಮಿಗಳು ಮತ್ತು ತೀವ್ರಗಾಮಿಗಳ ಕುರಿತಾದ ನಿಜಾರ್ಥಗಳು. 

•'Carbon dating' ನಂತಹ ಪ್ರಾಚ್ಯವಸ್ತು ಅಧ್ಯಯನದ ವೈಜ್ಞಾನಿಕ ಪರಿಕಲ್ಪನೆಗಳೊಂದಿಗೆ ಸ್ಮಾರಕಗಳ(ಶಿಲ್ಪಗಳ) ಕಾಲವನ್ನು ಒರೆಗೆ ಹಚ್ಚಬಹುದೆಂಬುದರ ಲೇಖಕರ ಸತ್ಯಾನ್ವೇಷಣೆಯೆಡೆಗಿನ ತುಡಿತ ಕೃತಿಯನ್ನು ವಸ್ತುನಿಷ್ಠವಾಗಿಸುತ್ತದೆ.

•ಕೆಲವು ಪ್ರಾಕಲ್ಪಿತ ಮಾಹಿತಿಗಳು ಹೌದು/ಇಲ್ಲದಿರುವಿಕೆಗಳ ನಡುವೆ ಪ್ರಶ್ನಿಸಲ್ಪಟ್ಟಿವೆ. ಗತಿಸಿಹೋದ ಚರಿತ್ರೆಯ ಆಗುಹೋಗುಗಳನ್ನು ಸಮರ್ಥನೀಯವಾಗಿ ವಿವರಣೆ ಮಾಡಲಾಗಿದೆ. (Because 'justification' word itself meant as proves 'to be' right or reasonable.)

• ಶರಣರ ಕ್ರಾಂತಿಯ ಕುರಿತು ಸುದೀರ್ಘ ವಚನ-ವಿವರಣೆಯೊಂದಿಗೆ ೧೧ನೇ ಶತಮಾನದ ಕಲ್ಯಾಣ ಕ್ರಾಂತಿಯನ್ನು ಪುನಃ ಓದುವಂತಾಯಿತು. ವಿವರಣೆಗಿಂತ ವಚನಗಳ ಯಥಾವತ್ತಾದ ಸಮರ್ಥನೆ ಈ ಅಧ್ಯಾಯದ ವಿಶೇಷತೆಯೆನಿಸುತ್ತದೆ. ಓದುಗನಿಗೆ/ಓದುಗಳಿಗೆ ವಚನಗಳ ಆಧಾರವು ಸೂಕ್ತ ಇತಿಹಾಸದ ಕುರುಹುಗಳೆಸುತ್ತವೆ. 

• ಇತಿಹಾಸದ ನಿರೂಪಣೆಯಂತಿರುವ, ಲೇಖಕರ ವಿಶ್ಲೇಷಣೆ ಶೈಲಿಯನ್ನು ನೋಡಲಾಗಿ, ಆಯಾ ಕಾಲಘಟ್ಟದಲ್ಲಿ ಅವರಿದ್ದಲ್ಲಿ ಎಲ್ಲವನ್ನು ಸರಿಪಡಿಸಿ ಚೊಕ್ಕವಾಗಿಸುತ್ತಿದ್ದರೇನು!? ಅನ್ನಿಸುವಷ್ಟು ತೀಕ್ಷ್ಣತೆಯಿಂದ/ತನ್ಮಯತೆಯಿಂದ ಘಟನಾವಳಿಗಳನ್ನು ವಿಮರ್ಶಿಸುತ್ತಾರೆ. (ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದ ಕುರಿತು) ಅದಕ್ಕೆ ಅದನ್ನು ಗತಿಸಿದ, ಗತಕಾಲದ ಇತಿಹಾಸ ಎಂದು ಕರೆಯಲಾಗುತ್ತದೆ ಅಥವಾ ಯಾವುದನ್ನೂ ಬದಲಿಸಲಾಗದ, ಆದರೆ ಅದರಿಂದ ಪಾಠವನ್ನು ಕಲಿಯಲು ಈ ವಿಮರ್ಶೆ ದಾರಿದೀಪವೆನಿಸುತ್ತದೆ. 

•ಹ್ಯೂಯನ್ ತ್ಸಾಂಗ್ ಭಾರತೀಯ ಇತಿಹಾಸಕ್ಕೆ ನೀಡಿರುವ ಕೊಡುಗೆಗಳು ಅಪಾರ. ಅವನು ದಾಖಲಿಸಿದ ಸಂಗತಿಗಳು ಭಾರತದ ಚರಿತ್ರೆಯ ಕುರಿತು ವಸ್ತುನಿಷ್ಠವಾಗಿಯೂ, ನಿಖರವಾಗಿಯೂ, ಸ್ಥಿತಪ್ರಜ್ಞೆಯೂ ಅವನನ್ನು ವಿಶಿಷ್ಟವೆನಿಸುವ ಚೀನಿ ಯಾತ್ರಿಕ/ಇತಿಹಾಸಕಾರನನ್ನಾಗಿಸುತ್ತವೆ. ಲೇಖರು ತಮ್ಮ ಇನ್ನೆರಡು ಕೃತಿಗಳಲ್ಲಿ('ಅಗಣಿತ ಅಲೆಮಾರಿ' & 'ಹ್ಯೂಯನ್ ತ್ಸಾಂಗ್ ನ ಮಹಾಪಯಣ') ಉಲ್ಲೇಖಿಸಿದ್ದು, ಮತ್ತೆ ಪುನಃ ಓದುವಂತಾಗಿದ್ದು ಇತಿಹಾಸದ ವಿಶ್ವಸನೀಯತೆಯನ್ನು ತೋರುತ್ತದೆ.

•ಚರಿತ್ರೆಯ ಪರಿಣಾಮದಿಂದ ಪ್ರಚಲಿತ ವಿದ್ಯಮಾನಗಳು/ಪ್ರಸ್ತುತ ವ್ಯವಸ್ಥೆಯು ಹೇಗೆ ಪ್ರಭಾವಿತಗೊಳ್ಳಬಲ್ಲವು ಎಂಬುದರ ಕುರಿತು ಆಲೋಚನೆಗೆ ಹಚ್ಚುವ ವಿಶಿಷ್ಟತೆಯನ್ನು ಈ ಕೃತಿ ಹೊಂದಿದೆ.  

•ಈ ಕೃತಿಯಲ್ಲಿ ಹೇರಳವಾದ derivations ಇದ್ದು ಶಬ್ದಗಳ ಮೂಲವು ಆಸಕ್ತಿಕರ ಓದಿಗೆ ತನ್ನನ್ನು ಒಡ್ಡಿಕೊಳ್ಳುತ್ತದೆ. ಉದಾಹಣೆಗೆ: ಬಿಷ್ನಾಗರ್-ವಿಜಯನಗರ, ಯವನರು-ಗ್ರೀಕರು, ಪಹಲ್ವ-ಪಲ್ಲವ, ಶಾಕ್ಯ-ಶಕ, ಕನ್ಯಾಕುಬ್ಜ-ಕಾನ್ಪುರ, ವಿದೀಶಾ-ಸಾಂಚಿ, ಯೋನ-ಯವನ, ಭಟ್ಟೇಕಳ-ಭಟ್ಕಳ, ಜಾಂಬೂರು-ಸೊಂಡೂರು, ಯಾದಲ್ಕಾವ್-ಬಿಜಾಪುರ, ಓಜೊಮುಲ್ಲಕಾವ್-ಬಹುಮನಿ ಸುಲ್ತಾನ, ದಿಗ್ನಾಗ-ದಿಜ್ಞಾನ, ಮೆನೆಂದರ್-ಮಿಲಿಂದ ಇನ್ನೂ ಅನೇಕ ಪದಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. 


As usual whenever I read a book feel to express it in English language to know about my writing skill from the author or others. Here are my views as I have opinion on the Book 'A Rediscovery of India' by Ravi Hanj.

_*A Rediscovery of India*__ cannot be read sitting all at once but it's like a study because the author has written with studious study, reference and with the logic and scientific vision. 

When we talk of History, it's ever dealt with hopeful possibilities, hypothesis and recorded with archeological sites, documents, artifacts but here in this book reader finds resources with many derivations of peculiar words which might tell the history behind ancestral Indian populations called Aryans-Dravidian. 

As a reader, I felt as if watching to the Discovery/History channel when there is the scientific research behind it. That is the excavation in Haryana's Rakhigarhi where we find the 4500-yr-old Indus valley era's male skeleton's DNA doesn't contain genes with the Northern Indian i.e Aryans. But they proves to be Dravidian that is 'mix of two populations' that is genetic material from a central Asian countries which spread out four millenia ago(4500-yrs). 

The peculiarity of this book is it's like referential resource to study the Indian History thoroughly and logically. 

History itself is the fact that we cannot recaptulate without any queries but it seeks evidential facts. So reader can find such a vast references for each concepts, population, footprints of the human with particular era till we have got freedom which has contemporary analysis with it. 

-Felt as if narrator narrating history with the constructive criticism. Ironical facts have been analyzed with the comparison of the era where the political, lingual, social circumstances to prevailing situations.

•Ancient names of few places like Vidisha for Sanchi, Yona for Yavana , Kanyakubja for Kanpur, Bhattekala for Bhatkala, Jamburu for Sonduru, Yadalkav for Bijapur, Pahalva for Pallava, Bishnagar for Vijayanagara, Shakya for Shaka etc proves that there is diligence in writing by author.

•This rediscovery of India has been done with the enormous references with the critical analysis of the history which has an impact on present era. 

#ARediscoveryOfIndia-By-RaviHanj #LogicProvokesThinking #ZealToKnowUnknownFacts #StraightFromHeart #LongLastingHappyReading 

#DistinctVision

#comparativeAnalysisOnPastPresentAndFuture

#InnumerableGiftsByDakshaDear #SeekingForJugariCross 

#IAmThankfulToAuthorForUniqueWorkOfHistory

✍🏻ದೀಪಾ.ದೇವಕತೆ, 31-01-2021, 7:34am

No comments: