ಆಸ್ಟ್ರೇಲಿಯಾದ ಜನಾಂಗೀಯ ಅವಹೇಳನ, ಹೀಗೊಂದು ಅವಲೋಕನ

ಈಗ ಭಾರತದ ಸುದ್ದಿ ಮಾಧ್ಯಮಗಳಲ್ಲಿ ಭಾರೀ ಸುದ್ದಿ ಮಾಡುತ್ತಿರುವುದು ಅಸ್ಟ್ರೇಲಿಯಾದಲ್ಲಿ ನಡೆದಿದೆ/ನಡೆಯುತ್ತಿದೆ ಎನ್ನಲಾದ ಭಾರತೀಯ ಜನಾಂಗದ ಅವಹೇಳನ. ಸಿಡ್ನಿಯ ಕಿಂಗ್ಸ್ ಕ್ರಾಸ್ ನಲ್ಲಿ ಸುತ್ತಾಡಿ, ಅಲ್ಲಿಯ ಸುಂದರಿಯರೊಂದಿಗೆ ಸರಸ ಸಲ್ಲಾಪದ ಅನುಭವವಿರುವ ನನಗೆ ಈ ಸುದ್ದಿಗಳನ್ನು ಓದಿ ’ಛೇ, ಹೀಗೂ ಉಂಟೆ ಆಸ್ಟ್ರ್‍ಏಲಿಯಾದಲ್ಲಿ!’ ಎಂದು ಪಿಚ್ಚೆನ್ನಿಸಿತು.

ಒಮ್ಮೆ ನಾನೂ ನನ್ನ ಸಹೋದ್ಯೋಗಿ ಬ್ರೆಟ್ ಎರಡು ವಾರಗಳ ಮಟ್ಟಿಗೆ ನಮ್ಮ ಆಸ್ಟ್ರ್‍ಏಲಿಯಾ ಕಛೇರಿಗೆ ಕಾರ್ಯನಿಮಿತ್ತವಾಗಿ ಕೆಲವಾರು ತಿಂಗಳುಗಳ ಹಿಂದೆ ಭೇಟಿಸಿದ್ದೆವು. ಹದಿನಾರಕ್ಕೇ ತಂದೆಯಾಗಿ, ಮೂವತ್ತೆಂಟಕ್ಕೇ ತಾತನಾಗಿರುವ ಬ್ರೆಟ್ ಹಲವಾರು ವರ್ಷ ಸಿಡ್ನಿಯಲ್ಲೇ ವಾಸವಿದ್ದು ಅಮೇರಿಕೆಗೆ ಹಿಂದಿರುಗಿದ್ದ. ಸಿಡ್ನಿಯ ಕಿಂಗ್ಸ್ ಕ್ರಾಸಿನ ಬಗ್ಗೆ ರಸಿಕ ಕುತೂಹಲವನ್ನು ಹೊಂದಿದ್ದ ನನಗೆ, ಅಲ್ಲಿಗೆ ಕರೆದುಕೊಂಡು ಹೋಗುವುದಾಗಿ ಬ್ರೆಟ್ ಆಶ್ವಾಸಿದ್ದನು. ಸರಿ, ಒಂದು ಸಂಜೆ ಕಿಂಗ್ಸ್ ಕ್ರಾಸಿಗೆ ಸವಾರಿಸಿದೆವು. ಎಲ್ಲೆಲ್ಲೂ ಜಗಮಗಿಸುವ ಸ್ಟ್ರಿಪ್ ಕ್ಲಬ್ಬುಗಳು, ತೆರೆದೆದೆಯ ವೇಟ್ರೆಸ್ಸುಗಳು, ಕ್ರಾಸಿನುದ್ದಕ್ಕೂ ಪ್ರೇಮಪ್ರವೀಣ ಕಾಮಿನಿಯರು! ಅದರಲ್ಲೂ ವಿವಿಧ ತೆರನಾದ ಮಾನಿನಿಯರು - ತುಂಬಿದೆದೆ, ಸಪೂರ್‍ಅ, ಪರಿಪೂರ್ಣ, ಬಿಳಿ, ಕಪ್ಪು, ಕಂದು, ಸಮ್ಮಿಳಿತ....ನಿಮಗೆ ಹೇಗೆ ಬೇಕೋ, ಯಾವ ರೀತಿಯ ಸೇವೆ ಬೇಕೋ ಅದೆಲ್ಲವೂ ಸಿಗುತ್ತದೆ. ದಟ್ಸ್ ಕಿಂಗ್ಸ್ ಕ್ರಾಸ್!

ಇಂತಹ ಕಿಂಗ್ಸ್ ಕ್ರಾಸಿನಲ್ಲಿ ಸಾಕಷ್ಟು ಭಾರತೀಯರೂ ಕಾಣಸಿಗುತ್ತಾರೆ, "ಗ್ರಾಹಕರಾಗಿ"! ಎಷ್ಟೇ ಆಗಲೀ ಕಾಮಸೂತ್ರದ ನಾಡಿನವರಲ್ಲವೇ? ಈ ಜಾತ್ರೆಯಲ್ಲಿ ಸಾಗಿ ಒಂದು ಸ್ಟ್ರಿಪ್ ಕ್ಲಬ್ಬಿನೊಳಗೆ ಬ್ರೆಟ್ ಮತ್ತು ನಾನು ನುಗ್ಗಿ ಆಸ್ಥಾನ ನೃತ್ಯವನ್ನು ಆಸ್ವಾದಿಸುತ್ತ ಕುಳಿತೆವು. ಒಂದು ಮಿಂಚುಳ್ಳಿ ಚೆಲುವೆ ನಮ್ಮ ಟೇಬಲ್ಲಿಗೆ ಬಂದು "ಭಾರತೀಯರಿಗೆ ಏನು ಇಷ್ಟ ಎಂಬುದನ್ನು ನಾನು ಬಲ್ಲೆ. ಖಾಸಗಿ ರೂಮಿಗೆ ಹೋಗೋಣವೆ?" ಎಂದು ಕೇಳಿತು. ಈ ಮಾರುಕಟ್ಟೆಯಲ್ಲಿ ಭಾರತೀಯರಿಗೆ ಏನಿಷ್ಟವೆಂದು ಸುಲಭವಾಗಿ ಊಹಿಸಬಲ್ಲೆನಾದರೂ ಪ್ರಶ್ನಾರ್ಥಕವಾಗಿ ಹುಬ್ಬು ಜೋಡಿಸಿದೆನು. "ಕಮಾನ್ ಹನಿ, ಎವ್ರಿಬಡೀ ನೋಸ್ ಇಂಡಿಯನ್ಸ್ ಲೈಕ್ಸ್ ಟು ಬಿ ಕ್ಲಿಂಟನ್!" ಎಂದಳು.

ಇರಲಿ, ಇಲ್ಲೆಲ್ಲೂ ಕಾಣದ ರೇಸಿಸಮ್ಮು ಅದು ಹೇಗೆ ವಿದ್ಯಾರ್ಥೀ ವಲಯದಲ್ಲಿ ನುಸುಳಿತೋ ಕಾಣೆ! ಆದರೆ ಈ ರೇಸಿಸ್ಟ್ ಎಂಬಲಾದ ಘಟನೆಗಳನ್ನು ಗಮನಿಸಿ ನೋಡಿದಾಗ ನನಗೆ ಅನಿಸಿದ್ದು ಇವು ಮಗ್ಗಿಂಗ್/ರ್‍ಯಾಗಿಂಗ್ ಕೇಸುಗಳು ಎಂದು. ಇನ್ನೂ ಕೂಲಂಕುಷವಾಗಿ ಅವಲೋಕಿಸಿದಾಗ ಇವುಗಳೆಲ್ಲವೂ ವಿದ್ಯಾರ್ಥೀ ವಲಯದಲ್ಲಿ ನಡೆದಿರುವ ಘಟನೆಗಳು. ಇವು ವಿದ್ಯಾರ್ಥಿ ಗುಂಪುಗಾರಿಕೆ ಹಿನ್ನೆಲೆಯಲ್ಲಿ ನಡೆದ ಘಟನೆಗಳಿರಬಹುದು. ಹೊಸದಾಗಿ ವಿದೇಶಕ್ಕೆ ಬಂದ ಭಾರತೀಯ ವಿದ್ಯಾರ್ಥಿಗಳಿಗೆ ಅನೇಕ ಸಮಸ್ಯೆಗಳಿರುತ್ತವೆ. ತಮಗೆ ಅರಿವಿಲ್ಲದೆಯೋ/ಅರಿತಿದ್ದೂ ಕೆಲವೊಂದು ಆಚಾರ/ವಿಚಾರಗಳ ಅಪಚಾರಗಳು ನಡೆದಿರುತ್ತವೆ. ಉದಾಹರಣೆಗೆ ಒಬ್ಬ ಸಸ್ಯಹಾರಿ ವಿದ್ಯಾರ್ಥಿ ಮಾಂಸಹಾರವನ್ನು ಅಸಹ್ಯವೆಂಬಂತೆ ಜುಗುಪ್ಸಿಸುವುದು. ತನ್ನ ಸಂಸ್ಕೃತಿ ಸರ್ವಶ್ರೇಷ್ಟವೆಂಬಂತೆ ಚಿತ್ರಿಸುವುದು....ಈ ರೀತಿಯ ವಿದ್ಯಾರ್ಥಿದೆಸೆಯಲ್ಲಿ ನಡೆಯಬಹುದಾದ ಘಟನೆಗಳ ಹಿನ್ನೆಲೆ ಇರಬಹುದು. ಈ ರೀತಿಯ ಘಟನೆಗಳು ಯಾವುದೇ ದೇಶದ ಯಾವ ಕಾಲೇಜುಗಳಲ್ಲಿಯಾದರೂ ನಡೆಯುತ್ತಿರುತ್ತವೆ. ಅದಕ್ಕೆ ತಕ್ಕನಾಗಿ ಹೊಸ ವಿದ್ಯಾರ್ಥಿಗಳನ್ನು ತಹಬದಿಯಲ್ಲಿಡಲು (?) ರ್‍ಯಾಗಿಂಗ್ ನಡೆಯುತ್ತಿರುತ್ತದೆ. ಹಾಗಾಗಿಯೇ ಈ ಘಟನೆಗಳು ವಿದ್ಯಾರ್ಥಿವಲಯದಲ್ಲೇ ಹೆಚ್ಚಾಗಿ ನಡೆದಿವೆಯೆನಿಸುತ್ತದೆ.

ಇನ್ನು ಮಗ್ಗಿಂಗ್ (ಸುಲಿಗೆ)ಗೆ ಭಾರತೀಯರಿಗಿಂತ ಉತ್ತಮ ಮಿಕ ಇನ್ನೊಂದಿಲ್ಲವೆನಿಸುತ್ತದೆ. ಏನಿಲ್ಲವೆಂದರೂ ಜೇಬು ಭರ್ತಿ ಕ್ಯಾಷು, ಕನಿಷ್ಟ ಒಂದು ಇಪ್ಪತ್ತೆರಡು ಕ್ಯಾರೆಟ್ಟಿನ ಚೈನು ಗ್ಯಾರಂಟಿಯಾಗಿ ಸಿಗುತ್ತದೆ. ಆದರೆ ಇವುಗಳು ರೇಸಿಸ್ಟ್ ಘಟನೆಗಳೇ? ಇದನ್ನು ಅವಲೋಕಿಸಿ ಬರೆಯಬೇಕಾದ್ದು ನಮ್ಮ ಭಾರತೀಯ ಮಾಧ್ಯಮ.

ಒಮ್ಮೆ ಬೆಂಗಳೂರಿನ ಎಮ್.ಜಿ. ರಸ್ತೆಯ ಪ್ರಜಾವಾಣಿ ಕಛೇರಿಯ ಎದುರಿನಲ್ಲಿ ಸಾಗಿಬರುತ್ತಿದ್ದೆ. ನನ್ನ ಪಕ್ಕದಲ್ಲೇ ಒಬ್ಬ ಆಫ಼್ರಿಕನ್ ಯುವತಿ ನಡೆದು ಸಾಗುತ್ತಿದ್ದಳು. ಬಹುಶಃ ನೈಜೀರಿಯಾ/ಸೂಡಾನ್ ನಿಂದ ಬಂದ ವಿದ್ಯಾರ್ಥಿನಿ ಇರಬಹುದು. ಆಗ ಒಬ್ಬ ’ಅರೇ ನೀಗ್ರೋ ಹುಡುಗಿ!’ ಎಂದು ಆ ಯುವತಿಯ ಉಬ್ಬಿದ ಪೃಷ್ಠವನ್ನು ಗಟ್ಟಿಯಾಗಿ ಚಿವುಟಿ ಓಡಿದ. ಇದು ರೇಸಿಸ್ಟ್ ಧೋರಣೆಯೇ? ಹಾಗೆಯೇ ಭಾರತದ ಹಲವಾರು ಹಳ್ಳಿಗಳ ಜನ ಯಾವುದೇ ಬಿಳಿಯರನ್ನು ಕಂಡರೂ ಗಾಂಧೀ ತಾತನ ಕಾಲದ ಬ್ರ್‍ಇಟಿಷರೆಂದೇ ಬಗೆದು ಚೆನ್ನಾಗಿ ಥಳಿಸಿದ ಅದೆಷ್ಟು ಸುದ್ದಿಗಳನ್ನು ನಮ್ಮ ಭಾರತೀಯ ಮಾಧ್ಯಮವೇ ಸುದ್ದಿಸಿಲ್ಲ? ವಿದೇಶೀಯರ ಮೇಲೆ ನಡೆಯುವ ಅತ್ಯಾಚಾರ, ಸುಲಿಗೆ ಇವುಗಳನ್ನೆಲ್ಲಾ ರೇಸಿಸಮ್ ಎನ್ನಲಾಗುವುದೇ?

ಆಸ್ಟ್ರೇಲಿಯಾದ ಪೊಲೀಸರು ಒಬ್ಬ ಭಾರತೀಯ ಅಪಾದಿತನನ್ನು ವಿಚಾರಿಸಿದ್ದನ್ನೇ ರೇಸಿಸ್ಟ್ ವಿಚಾರವಾಗಿಸಿ, ಭಾರತೀಯ ಮಾಧ್ಯಮಗಳು ಸಾಮಾನ್ಯ ಹನೀಫನನ್ನು ಮಹಾತ್ಮನನ್ನಾಗಿಸಿದ್ದವು. ಭಾರತೀಯ ಪೊಲೀಸರು ತಮ್ಮ ಕಸ್ಟಡಿಯಲ್ಲಿರುವವರ ಬಾಯಿ ಬಿಡಿಸಲು ಉಪಯೋಗಿಸುವ ಎಲ್ಲಾ ತಂತ್ರಗಳಿಗೂ ಮೀರಿದ ಹಿಂಸೆಯನ್ನು, ಆಸ್ಟ್ರ್‍ಏಲಿಯಾ ಪೊಲೀಸರು ಉಪಯೋಗಿಸುತ್ತಾರೆಂಬಂತೆ ಚಿತ್ರಿಸಿದ್ದರು. ಇಂದಿನ ವಿದ್ಯುನ್ಮಾನ ಯುಗದಲ್ಲಿ ವಿದೇಶೀ ಪೊಲೀಸರು ಯಾವ ರೀತಿಯ ತಂತ್ರಗಳನ್ನು ಬಳಸುತ್ತಾರೆಂಬುದನ್ನು ಕಂಡುಕೊಳ್ಳಲು ಸಾಕಷ್ಟು ಮಾಹಿತೀಮಾರ್ಗಗಳಿದ್ದರೂ ಅದನ್ನು ಕೇವಲ ಪೋರ್ನೋ ನೋಡಲು ಮಾತ್ರ ಸೀಮಿತಗೊಳಿಸಿ, ಇಂದಿಗೂ ನಮ್ಮ ಸುದ್ದಿ ಮಾಧ್ಯಮಗಳು ಈ ರೀತಿಯ ಸಾಮಾನ್ಯ ಘಟನೆಗಳನ್ನು ಮಹಾತ್ಮ ಗಾಂಧಿಯವರ ಪ್ರಿಟೋರಿಯಾ ಘಟನೆಗಳಂತೆ ಬಿಂಬಿಸುತ್ತಿದ್ದಾರೆ. ಈ ರೀತಿಯ ಹೊಣೆಗೇಡೀ ಪ್ರವೃತ್ತಿ ಸಮಾಜದಲ್ಲಿ ಯಾವ ರೀತಿಯ ದುಷ್ಪರಿಣಾಮಗಳನ್ನು ಬೀರುತ್ತದೆಂಬುವ ಕಲ್ಪನೆ ಅವರಿಗಿದೆಯೋ ಅಥವಾ ಕಲ್ಪನೆಯಿದ್ದೂ ಮಾಡುತ್ತಿರುವ ಕುಚೋದ್ಯವೋ ತಿಳಿಯದಾಗಿದೆ. ಒಟ್ಟಾರೆ ಪ್ರತಿಸುದ್ದಿಯನ್ನೂ ರಂಜನೀಯವಾಗಿ ಟ್ಯಾಬ್ಲಾಯ್ಡ್ ಮಾಡುವತ್ತ ಸ್ಪರ್ಧಾತ್ಮಕವಾಗಿ ದಾಂಗುಡಿಯಿಡುತ್ತಿದ್ದಾರೆ.

ಇರಲಿ ಆದರೆ ನಾನು ಗಮನಿಸಿದಂತೆ ನಮ್ಮ ಭಾರತೀಯ ಸರ್ಕಾರವೇ ಅತ್ಯಂತ ಸಾರ್ವತ್ರಿಕವಾಗಿ ಒಂದು ರೇಸಿಸ್ಟ್ ಎನ್ನಬಹುದಾದಂತಹ ಪಾಲಿಸಿಯನ್ನು ಪಾಲಿಸುತ್ತಿದೆ. ನೀವುಗಳು ಯಾವುದಾದರೂ ಭಾರತೀಯ ಐತಿಹಾಸಿಕ ಸ್ಥಳಗಳಿಗೆ ಹೋಗಿ ನೋಡಿ, ಭಾರತೀಯರಿಗೆ ದರ ಹತ್ತು ರೂ ಎಂದೂ, ವಿದೇಶೀಯರಿಗೆ ದರ ನೂರು ರೂ ಎಂದೂ ಪ್ರವೇಶ ದರ ನಿಗದಿಯಾಗಿರುತ್ತದೆ. ಈ ದರಗಳ ಪಟ್ಟಿಯನ್ನು ಮಾರ್ಗದರ್ಶನವಾಗಿಸಿ, ಈ ಸ್ಥಳಗಳ ಎದುರಿನಲ್ಲಿ ಎಳನೀರು, ಆಟಿಕೆ ಇನ್ನಿತರೆ ಮಾರುವ ಮಾರ್‍ಆಟಗಾರರೂ ತಮ್ಮ ತಮ್ಮ ಛಾತಿಗೆ ತಕ್ಕಂತೆ ವಿದೇಶೀಯರನ್ನು ಸುಲಿಯುತ್ತಾರೆ. ಇದು ನಮ್ಮದೇ ಸರ್ಕಾರ ಪಾಲಿಸುತ್ತಿರುವ ರೇಸಿಸ್ಟ್ ಧೋರಣೆಯೆಂದು ವಿದೇಶೀಯರೇಕೆ ಭಾವಿಸಬಾರದು? ಟೂರಿಸಂನಿಂದ ಆದಾಯವನ್ನು ಹೆಚ್ಚಿಸಿಕೊಳ್ಳಲು ವೀಸಾ ಶುಲ್ಕ ಮತ್ತಿತರೆ ಮಾರ್ಗಗಳಿರುವಾಗ ಈ ರೀತಿಯ ಭೇಧ ದಂಡವನ್ನು ಉಪಯೋಗಿಸುವುದು ಉಚಿತವೇ? ಸರ್ಕಾರ ತನ್ನ ಈ ಪಾಲಿಸಿಯಿಂದ ತನಗರಿವಿಲ್ಲದಂತೆಯೇ ರೇಸಿಸಮ್ ಅನ್ನು ಪ್ರಸರಿಸುತ್ತಿದೆ. ಬಹುಶಃ ಮೀಸಲಾತಿಯಿಂದ ಪ್ರಭಾವಿತಗೊಂಡ ಪಾಲಿಸಿ ಇದಾಗಿರಬಹುದು.

ಮುದಾಹದಡಿಯ ಮಾಣಿ ಸಾಫ್ಟ್ವೇರ್ ಇಂಜಿನಿಯರ್ ಆಗಿ, ಮಾರೇನಹಳ್ಳಿ, ತಿಮ್ಮೇನಹಳ್ಳಿಗಳ ಜಮೀನುಗಳ ಬೆಲೆ ಸಿಲಿಕಾನ್ ವ್ಯಾಲೀ ಬೆಲೆಗಳಾಗಿ, ಬೆಂಗಳೂರು ಸಿಂಗಾಪುರವಾದಂದಿನಿಂದ ನಮ್ಮ ಪತ್ರಕರ್ತರೆಲ್ಲರೂ ಭಾರತೀಯ ಸುದ್ದಿಯನ್ನು ಬಿಟ್ಟು ವಿದೇಶೀ ಸುದ್ದಿಗೇ ಮುಗಿಬಿದ್ದಿದ್ದಾರೆ. ಇವರಿಗೆ ಒಬಾಮಾನ ಕುಟುಂಬದಲ್ಲಿ ಬಿರುಕುಂಟಾಗಿದ್ದೂ, ಹಿಲರಿ ಕುಳಿತುಕೊಳ್ಳುವಾಗ ಕಂಡ ಅವಳ ಚೆಡ್ಡಿಯ ಬಣ್ಣ ಕೆಂಪೆಂಬುದೂ ಪ್ರಮುಖ ಸುದ್ದಿಯಾಗಿ ಕಾಣಿಸುತ್ತದೆ (ಬಹುಶಃ ಡೆಮಾಕ್ರೆಟಿಕ್ ಆದ ಅವಳು, ರಿಪಬ್ಲಿಕನ್ನರ ಬಣ್ಣದ ಚೆಡ್ಡಿಯನ್ನು ಹಾಕಿಕೊಳ್ಳಬಾರದೆಂಬ ವಿತಂಡ ತರ್ಕ ನಮ್ಮ ಪತ್ರಕರ್ತರದೆನ್ನಿಸುತ್ತದೆ).

ಗಣಕ ಯುಗದ ಎಲ್ಲಾ ತಂತ್ರಗಳನ್ನೂ ಅಳವಡಿಸಿಕೊಂಡು ಆದಷ್ಟು ಶೀಘ್ರವಾಗಿ ಭಾರತ ದಾಪುಗಾಲಿಡುತ್ತಿದೆ ರಿವರ್ಸ್ ಗಿಯರಿನಲ್ಲಿ ಎನಿಸುತ್ತಿದೆ :(

ಏಕೋ ಕಿಂಗ್ಸ್ ಕ್ರಾಸಿನ ಚೆಲುವೆ ಹೇಳಿದ ಭಾರತೀಯರಿಗೆ ಕ್ಲಿಂಟನ್ ಆಗುವಾಸೆ ಎಂಬುದು ಅತ್ಯಂತ ಕ್ಲೀಷೆಯಾಗಿದೆ ಅನಿಸುತ್ತಿದೆ!

ಅಣಕ:

ಕಿಂಗ್ಸ್ ಕ್ರಾಸಿನಲ್ಲಿ ಕ್ವೀನ್ ಗಳಿಗೇನು ಕೆಲಸ, ಗೊತ್ತೆ?
.
.
.

ಕ್ರಾಸ್ ಮಾಡಿಸುವುದು!

ಧನ್ಯವಾದಗಳು...ಮತ್ತೆ ಸಿಗೋಣ.