ಅಂತೂ ಭಾರತದ ಒಂದು ಐ.ಟಿ. ಕಂಪೆನಿಯ ಪರಿಣಿತಿ ಹೊರಹೊಮ್ಮಿದೆ. ಈ ವ್ಯವಹಾರವನ್ನು ಒಬ್ಬ ಐ.ಟಿ. ಉದ್ಯೋಗಿಯಾಗಿ ತುಲನೆ ಮಾಡುವುದಕ್ಕಿಂತಲೂ ಒಬ್ಬ ಸಾಮಾನ್ಯ ಭಾರತೀಯನಾಗಿ ನಾವೆಲ್ಲರೂ ಸ್ವಯಂ ತುಲನೆ ಮಾಡಿಕೊಂಡಾಗ ನಾವೆಲ್ಲರೂ ಸತ್ಯಂ ರಾಜು ಆಗಿಯೂ, ಸತ್ಯಂ ರಾಜುರವರು ನಾವಾಗಿಯೂ ಕಾಣುತ್ತೇವೆ. ಏಕೆಂದರೆ ನಾವೆಲ್ಲರೂ ಒಂದೇ ಬಳ್ಳಿಯ ಹೂವುಗಳು!
ಈಗ ಸತ್ಯಂ ಮಾಡಿರುವ ಅಪರಾಧವನ್ನು ಸರಳೀಕರಿಸಿ ನೋಡೋಣ. ತಮ್ಮ ಕಂಪೆನಿಯ ನಿಜ ಲಾಭಾಂಶವನ್ನು ಮುಚ್ಚಿಟ್ಟು ಹೆಚ್ಚೆಚ್ಚು ಲಾಭ ಗಳಿಸಿದ್ದಾಗಿ ತಮ್ಮ ಲೆಕ್ಕಪತ್ರವನ್ನು ತೋರಿಸಿ ತಮ್ಮ ಕಂಪೆನಿಯ ಸ್ಟಾಕ್ ವ್ಯಾಲ್ಯೂ ಲಾಭದ ಅನುಗುಣವಾಗಿ ಮೇಲೇರುವಂತೆ ನೋಡಿಕೊಂಡಿರುವುದು. ಸಾಮಾನ್ಯವಾಗಿ ಅನೇಕ ಐ.ಟಿ. ಕಂಪೆನಿಗಳು ’ರೆವೆನ್ಯೂ ಬುಕಿಂಗ್’ ಎಂಬ ತತ್ವವನ್ನು ಆಳವಡಿಸಿಕೊಂಡಿರುತ್ತವೆ. ಮುಂದಿನ ಕ್ವಾರ್ಟರ್ ನಲ್ಲಿ ಬರಬಹುದಾದ ಪ್ರಾಜೆಕ್ಟೊಂದರ ಲಾಭವನ್ನು, ಆ ಪ್ರಾಜೆಕ್ಟ್ ಈ ಕ್ವಾರ್ಟರ್ ನಲ್ಲಿ ಸೇಲ್ ಆಗಿರುವುದರಿಂದ ಅದನ್ನು ಈ ಕ್ವಾರ್ಟರ್ರಿನ ಲಾಭವೆಂದು ಪರಿಗಣಿಸುವುದು, ಇಲ್ಲಾ ಈ ಕ್ವಾರ್ಟರ್ರಿನ ಲಾಭವನ್ನು ಮುಂದಿನ ಕ್ವಾರ್ಟರ್ರಿಗೆ ವರ್ಗಾಯಿಸಿಕೊಳ್ಳುವುದನ್ನು ತಮ್ಮ ಲಾಭಾಂಶದ ಟಾರ್ಗೆಟ್ಟುಗಳಿಗನುಗುಣವಾಗಿ, ಬ್ರೋಕರೇಜ್ ಫರ್ಮುಗಳ ಎಕ್ಸ್ಪೆಕ್ಟೇಷನ್ನಿಗೆ ತಕ್ಕಂತೆ ಬಳಸಿಕೊಳ್ಳುತ್ತವೆ. ಆದರೆ ಇಲ್ಲಿ ಎಡವಟ್ಟಾಗಿದ್ದು ಸತತ ಆರ್ಥಿಕತೆಯ ಹಿಂಜರಿಕೆ. ಇದು ಇನ್ನೂ ಅದೆಷ್ಟು ಐ.ಟಿ. ಕಂಪೆನಿಗಳನ್ನು ಬಾಧಿಸಲಿದೆಯೋ!
ಇರಲಿ, ಇಲ್ಲಿ ಮೂರ್ಖರಾಗಿದ್ದು ಷೇರುದಾರರು. ಅವರು ಮೂರ್ಖರಾಗಿದ್ದುದರಿಂದಲೇ ಇಂದು ಈ ರೀತಿಯ ಬಾಡಿಶಾಪುಗಳ ಸ್ಟಾಕುಗಳ ಬೆಲೆ ಈ ಪಾಟಿ ಏರಿರುವುದು. ಈ ಮೂರ್ಖತನ ಕೇವಲ ಈ ಕಂಪೆನಿಗಳಲ್ಲಿ ಬಂಡವಾಳ ಹೂಡಿದ ಷೇರುದಾರರದಷ್ಟೇ ಅಲ್ಲ, ಇಡೀ ಭಾರತೀಯ ವ್ಯವಸ್ಥೆ ಕೂಡಾ. ಕೇವಲ ಭಾರತದ ಮೂರು ಪರ್ಸೆಂಟ್ ಕೂಡಾ ಇಲ್ಲದ ಐ.ಟಿ. ಬೆಳವಣಿಗೆಯನ್ನು ಭಾರತದ ಬೆಳವಣಿಗೆಯೆಂದು ಪರಿಗಣಿಸಿ ಅಲ್ಲೋಲಕಲ್ಲೋಲವಾಗಿಸಿರುವುದು ಕೇವಲ ಸತ್ಯಂ ಸುಳ್ಳೆನಿಸುತ್ತದೆಯೇ?
ಇನ್ನು ಈ ಭಾರತೀಯ ಐ.ಟಿ. ಕಂಪೆನಿಗಳ ಮೂಲ ಬ್ಯುಸಿನೆಸ್ ಪ್ಲ್ಯಾನ್ ಆದರೂ ಏನು? ನೂರು ಪ್ರೋಗ್ರ್ಯಾಮರ್ರುಗಳು ಬೇಕೆಂದರೆ ನೂರು ಪ್ರೋಗ್ರ್ಯಾಮರ್ರುಗಳನ್ನು ಸಪ್ಲೈಸುವುದು. ಕಾಫೀ ಪ್ಲಾಂಟರ್ರುಗಳಿಗೆ ಲೇಬರ್ ಸಪ್ಲೈ ಮಾಡುವವರಂತೆ. ಆ ಕೂಲಿಗಳಿಗೆ ಕೊಡಮಾಡುವ ಕೂಲಿಯಲ್ಲಿ ತಮ್ಮ ಕಮೀಷನ್ನನ್ನು ಉಳಿಸಿಕೊಳ್ಳುವುದು. ಸೊಫಿಸ್ಟಿಕೇಟೆಡ್ ಕಾರ್ಪೋರೇಟ್ ಕಲ್ಚರ್ರಿನಲ್ಲಿ ಎಂಪ್ಲಾಯೀ, ಎಂಪ್ಲಾಯೀ ಬೆನೆಫಿಟ್ಸ್....ಎನ್ನುವ ರಂಗಿನ ಕೂಲಿಯೊಂದಿಗೆ. ಹೆಚ್ಚೆಚ್ಚು ಕೂಲಿಗಳಿದ್ದರೆ ಹೆಚ್ಚೆಚ್ಚು ಕಮೀಷನ್! ಇವುಗಳೇನಾದರೂ ತಮ್ಮದೇ ಆದ ಸಾಫ್ಟ್ವೇರ್ ಪ್ರಾಡಕ್ಟುಗಳನ್ನು ಹೊಂದಿದ್ದರೆ, ಆಗ ಇವುಗಳನ್ನು ಲಾಭದಾಯಕ ಕಂಪೆನಿಗಳು ಎನ್ನಬಹುದು. ಇಂತಹ ಕಮೀಷನ್ ಏಜೆಂಟರನ್ನೇ ಭವ್ಯ ಭಾರತದ ಆರ್ಥಿಕತೆಯ ಪೈಯೋನೀಯರ್ರುಗಳೆಂದು ಅರ್ಥೈಸಿದ್ದು ಖಂಡಿತಾ ಭಾರತದ ವಿಪರ್ಯಾಸವಲ್ಲ! ಏಕೆಂದರೆ ಸ್ವತಂತ್ರ್ಯ ಭಾರತದಲ್ಲಿ ಕಮೀಷನ್ ಏಜೆಂಟರುಗಳದೇ ದರ್ಬಾರು. ಇದು ಬಡರೈತನ ವ್ಯವಸಾಯೋತ್ಪನ್ನಗಳ ಮಾರುಕಟ್ಟೆಯಿರಬಹುದು, ಮುಂಬೈಯ ಕೆಂಪುದೀಪದ ಕಮಂಗಿಗಳಿರಬಹುದು, ಅಥವಾ ಸೈನ್ಯದ ಬೋಫೋರ್ಸ್ ಶಸ್ತ್ರಗಳಿಂದ ಸೈನಿಕರ ಶವಪೆಟ್ಟಿಗೆಗಳಾಗಿರಬಹುದು, ಒಟ್ಟಾರೆ ಕಮೀಷನ್.
ಇನ್ನು ಜನಸಾಮಾನ್ಯರುಗಳನ್ನೇ ತೆಗೆದುಕೊಳ್ಳಿ. ಪೋಷಕರು ತಮ್ಮ ಮಕ್ಕಳು ಅವರುಗಳ ಶಾಲೆಯಲ್ಲೇ ನಂಬರ್ ಒನ್ ಎಂದೂ, ಹುಡುಗ ಫೇಲಾಗಿದ್ದರೂ ಬಿ.ಇ. ಫಸ್ಟ್ ಕ್ಲಾಸೆಂದು ಮದುವೆಯಾಗುವುದರೊಂದಿಗೇ ಭಾರೀ ವರದಕ್ಷಿಣೆಯನ್ನು ಡಿಮ್ಯಾಂಡಿಸುವುದು (ಇದಕ್ಕೆ ನಮ್ಮ ಭಾರತೀಯ ತತ್ವವೇ ಪ್ರೋತ್ಸಾಹಿಸುತ್ತದೆ, ಸಾವಿರ ಸುಳ್ಳು ಹೇಳಿ ಒಂದು ಲಗ್ನ ಮಾಡಿಸು ಎಂದು)...ನೀವೇ ನಿಮ್ಮ ಸುತ್ತಮುತ್ತ ಯೋಚಿಸಿ, ರಾಜು ತರಹ ನಾವುಗಳೇ ಅದೆಷ್ಟು ಸುಳ್ಳು ಹೇಳಿದ್ದೇವೆಂದು. ಈ ನಮ್ಮ ಹುಟ್ಟುಗುಣ ಯಾರನ್ನೂ ಬಿಟ್ಟಿಲ್ಲ. ಅದು ನಮ್ಮ ಸಮಾಜಮುಖಿಗಳಾದ ಅನೇಕ ವರ್ಗದವರೇ ಇರಬಹುದು. ರಾಜಕಾರ್‍ಅಣಿಗಳಾದರೆ ಭರವಸೆಯ ಮಹಾಪೂರವನ್ನೇ ಹರಿಸುತ್ತಾರೆ. ಪತ್ರಿಕಾವಲಯವಾದರೆ ಗಾಳಿಸುದ್ದಿಗಳೇ ಪ್ರಮುಖ ಸುದ್ದಿಗಳಾಗುತ್ತವೆ. ಬುದ್ಧಿಜೀವಿಗಳಾದರೆ ಭಾರತದ ಅಲ್ಪಸಂಖ್ಯಾತರು ಹಿಟ್ಲರನ ಕಾಲದ ಯಹೂದಿಗಳಿಗಿಂತಲೂ ಕಡುಕಷ್ಟದಲ್ಲಿದ್ದಾರೆಂದು ಬೊಬ್ಬಿಡುತ್ತಾರೆ. ಇನ್ನುಳಿದಂತೆ ನಿಮ್ಮ ನಿಮ್ಮ ಚಿತ್ತಗಳಿಗೇ ಬಿಡುತ್ತೇನೆ.
ಇನ್ನು ಪ್ರತಿಯೊಂದು ಐ.ಟಿ. ಕಂಪೆನಿಗಳೂ ತಮ್ಮ ಉದ್ಯೋಗಿಯ ಕನಿಷ್ಟ ಹತ್ತು ವಿಧವಾದ ರೆಸ್ಯೂಮೆಗಳನ್ನು ಮಾಡಿಟ್ಟುಕೊಂಡಿರುತ್ತವೆ. ಸತ್ಯವಾನನ ರೆಸ್ಯೂಮೆ ಹತ್ತು ವರ್ಷ ಜಾವಾ ಎಕ್ಸ್ಪರ್ಟ್ ಎಂದು ಜಾವಾ ಬೇಕಾದವನ ಬಳಿ ಹೋದರೆ, ಅದೇ ಸತ್ಯವಾನ ಹತ್ತು ವರ್ಷ ಡಾಟ್ ನೆಟ್ ಎಕ್ಸ್ಪರ್ಟ್ ಆಗಿ ಇನ್ನೊಂದು ಕಂಪೆನಿಯಲ್ಲಿ ಕಂಗೊಳಿಸುತ್ತಿರುತ್ತಾನೆ. ಇದು ಉದ್ಯೋಗ ಬಯಸಿ ಯಾವುದೇ ವೈಯುಕ್ತಿಕ ವ್ಯಕ್ತಿ ಮಾಡುತ್ತಿರುವುದಲ್ಲ, ನಮ್ಮ ಮಹಾನ್ ಐ.ಟಿ. ಕಂಪೆನಿಗಳೇ ಮಾಡುತ್ತಿವೆ. ಇನ್ನು ಈ ಕಂಪೆನಿಗಳ ಉದ್ಯೋಗಿಗಳು ಅದೆಷ್ಟು ಪ್ರಾಮಾಣಿಕರಾಗಿರುತ್ತಾರೆ ಎಂಬುದು....!
ಇನ್ನು ರಾಷ್ಟ್ರ್‍ಅಪತಿ ಸ್ಥಾನಕ್ಕೆ ಪ್ರತಿಸ್ಪರ್ಧಿಯೆಂದು ಗಾಳಿಸುದ್ದಿಯಿದ್ದ ಪಿತಾಮಹರು ತಮ್ಮ ಕಂಪೆನಿಗೆ ಎಸ್ಸೆಸ್ಸೆಲ್ಸಿಯಿಂದ ಡಿಗ್ರಿವರೆಗೂ ಡಿಸ್ಟಿಂಕ್ಷನ್ನಿನಲ್ಲಿ ಪಾಸಾಗಿ, ಕಾಂಪೆಟೆಟಿವ್ ಟೆಸ್ಟುಗಳನ್ನು ಪಾಸಾದವರಿಗೆ ಮಾತ್ರ ಉದ್ಯೋಗಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ ಈ ಅಪರಿಮಿತ ಬುದ್ಧಿಮತ್ತೆಯ ಯುವಜನತೆ ಮಾಡುತ್ತಿರುವ ಕೆಲಸವಾದರೂ ಏನು? ಐ.ಟಿ ಗುಮಾಸ್ತಿಕೆ. ಐ.ಟಿ ಅಲ್ಲದವರಿಗೆ ಮನವರಿಕೆಯಾಗುವಂತೆ ಹೇಳುವುದಾದರೆ ನಲ್ಲಿಯವ ದಿನನಿತ್ಯ ವಾಲ್ವ್ ತಿರುಗಿಸಿ ನೀರು ಬಿಡುವುದು, ಕಡತಗಳ ಹುಡುಕಿ ರಿಪೋರ್ಟ್ ಸಿದ್ಧಪಡಿಸುವುದು....ಈ ರೀತಿಯ ಮೇಂಟೇನೆನ್ಸ್ ಕೆಲಸ. ಈ ರೀತಿಯ ಮೇಂಟೇನೆನ್ಸ್ ಕೆಲಸಗಳಿಗೆ ಈ ರೀತಿಯ ಬುದ್ದಿಮತ್ತೆ ಬೇಕೇ? ಆರ್.ಇ.ಸಿ., ಐ.ಐ.ಟಿ, ಐ. ಐ.ಎಮ್...ನಂತಹ ಪ್ರತಿಷ್ಟಿತ ಶಾಲೆಗಳಲ್ಲಿ ಕಲಿತವರ ಪ್ರತಿಭೆಯನ್ನು ಹಾಗೆಯೇ ಚಿವುಟಿ ಐ.ಟಿ. ಕೂಲಿಗಳನ್ನಾಗಿ ಮಾಡಿರುವುದು ಒಂದು ಸಾಧನೆಯೇ? ಈ ಪ್ರತಿಭೆಯನ್ನು ಉಪಯೋಗಿಸಿಕೊಂಡು ಭಾರತದಿಂದ ಈವರೆಗೂ ಒಂದಾದರೂ ಗೂಗಲ್, ಯಾಹೂ, ಮೈಕ್ರೋಸಾಫ್ಟ್ ತರಹದ ಪ್ರಾಡಕ್ಟುಗಳು ಮಾರುಕಟ್ಟೆಯಲ್ಲಿ ಇವೆಯೆ?
ಅಂದಹಾಗೆ ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್, ಒರ್‍ಯಾಕಲ್ ನ ಲ್ಯಾರಿ ಎಲ್ಲಿಸನ್ ನಿಂದ ರಿಲೈಯನ್ಸ್ ನ ಧೀರೂಬಾಯಿ ಅಂಬಾನಿಯವರ್‍ಯಾರೂ ಕಾಲೇಜು ಡಿಗ್ರಿದಾರರಾಗಿರಲಿಲ್ಲ! ಕಾಲೇಜು ಡಿಗ್ರಿ ಇರದ ಧೀರೂಬಾಯಿ ಅಂಬಾನಿ ಕಟ್ಟಿದ ಸಾಮ್ರಾಜ್ಯವನ್ನು ಐ.ಐ.ಎಮ್ ಪದವೀಧರರು ಇಭ್ಭಾಗವಾಗಿಸಿದ್ದು ನಮ್ಮ ಶಿಕ್ಷಣ ಪದವಿಗಳ ವಿಪರ್ಯಾಸ.
ಈ ರೀತಿಯ ಸುಳ್ಳು ರೆಸ್ಯೂಮೆಗಳ ಬುನಾದಿಯ ಮೇಲೆ ನಿಂತು, ಬಡ ಭಾರತದ ಆರ್ಥಿಕತೆಯ ದಿವ್ಯಶಕ್ತಿಗಳೆನಿಸಿರುವ ಈ ಕಮೀಷನ್ ಏಜೆಂಟರುಗಳ ಬಂಡವಾಳವನ್ನು ಜನ ಅದೆಂದು ಅರ್ಥೈಸಿಕೊಳ್ಳುವರೋ! ಹಾಂ, ನ್ಯೂಯಾರ್ಕನ್ನೂ ಮೀರಿಸಿರುವ ಬೆಂಗಳೂರಿನ ರಿಯಲ್ ಎಸ್ಟೇಟ್ ಬೆಲೆ, ಹತ್ತಿರ ಹತ್ತಿರ ಸಿಂಗಪೂರ್ ಸಂಬಳ, ಅದೆಲ್ಲಕ್ಕಿಂತಲೂ ಪ್ರಾಮಾಣಿಕತೆ, ಬದ್ಧತೆಯಿರದ ರೆಸ್ಯೂಮೆಗಳು ಅದೆಷ್ಟು ದಿನ ತಮ್ಮ ವಿದೇಶೀ ಗ್ರಾಹಕರನ್ನು ಸಂತುಷ್ಟಿಯಾಗಿರಿಸುವವೋ? ಏಕೆಂದರೆ ಈ ರೀತಿಯ ಹಲವಾರು ವಿದೇಶೀ ಕಂಪೆನಿಗಳಿಗೆ ಹಂಗರಿ, ಪೋಲೆಂಡ್ ಮುಂತಾದ ಯುರೋಪಿಯನ್ ರಾಷ್ಟ್ರ್‍ಅಗಳು ಹೊರಗುತ್ತಿಗೆಯ ಗಾಳ ಹಾಕುತ್ತಿವೆ. ಈ ಉದ್ದೇಶವಾಗಿ ನಾನೇ ಹಲವು ಫೀಸಿಬಿಲಿಟಿ ಸ್ಟಡಿಗಳನ್ನು ಮಾಡಿದ್ದೇನೆ.
ನಮ್ಮ ಅರೆನಗ್ನ ಮಹಾತ್ಮರು ’ಸತ್ಯ ಮೇವ ಜಯತೇ’ ಎನ್ನುತ್ತಾ ಗಳಿಸಿಕೊಟ್ಟ ಸ್ವತಂತ್ರ ಭಾರತದಲ್ಲಿ, ನಾವುಗಳು ವಸ್ತ್ರಾಭರಣಭೂಷಿತರಾಗಿಯೂ ನಗ್ನರಾಗಿದ್ದೇವೆಯೇನೋ ಎನಿಸುತ್ತದೆ. ಬಹುಶಃ ನಗ್ನಸತ್ಯ ಹೀಗಿರುತ್ತದೆಯೇನೋ!
ಅಣಕ:
ಬೆಂಗಳೂರಿಗೆ ನ್ಯೂಯಾರ್ಕ್ ಬೆಲೆ ಹೇಗೆ ಬಂತು ಗೊತ್ತೆ?
ಒಬ್ಬ ಮಾಮೂಲಿ ಮನೆ ಬ್ರೋಕರ್ ನ ಬಳಿ ಒಬ್ಬ ಬಾಂಬೆವಾಲಾ ಬಂದು, ಒಂದು ನಿವೇಶನ ಬೇಕೆಂದು ಕೇಳಿದ.
ಸರಿ, ಬ್ರೋಕರ್ ಒಂದು ನಿವೇಶನ ತೋರಿಸಿ ತನ್ನ ಹರಕು-ಮುರುಕು ಹಿಂದಿಯಲ್ಲಿ ಐನೂರು ರುಪಾಯಿ ಚದರಡಿ ಎಂಬುದಕ್ಕೆ "ಪಾಂಚ್ ಹಜಾರ್" ಎಂದ.
ಬಾಂಬೆವಾಲಾ ಕೂಡ ತನ್ನ ಪ್ರತಿಷ್ಟೆಯನ್ನು ಮೆರೆಸುತ್ತ ತನ್ನ ಹರಕು-ಮುರುಕು ಇಂಗ್ಲಿಷ್ ನಲ್ಲಿ "ಓನ್ಲೀ ಫೋರ್ ಥೌಸಂಡ್ ಫೈವ್ ಹಂಡ್ರೆಡ್" ಎಂದ.
ಅದನ್ನರಿತ ಬ್ರೋಕರ್ ಒಳಗೆ ಖುಷಿಯಾಗಿ ವ್ಯವಹಾರ ಮುಗಿಸಿದ.
ಅಂದಿನಿಂದ ಬೆಂಗಳೂರಿನ ಆ ಏರಿಯಾಕ್ಕೆ ೪೫೦೦/ಚದರಡಿ ಫಿಕ್ಸ್ ಆಯಿತು. ಅಷ್ಟೇ ಅಲ್ಲದೆ ಇಡೀ ಬೆಂಗಳೂರಿನ ಬ್ರೋಕರ್ ಮಂಡಳಿಗೆ ಈ ಬೆಲೆ ಮಾದರಿಯಾಯಿತು.
ಇಷ್ಟು ಸರಳವಾದ ಇಕನಾಮಿಕ್ಸ್ ಗೆ ಪಾಶ್ಚಿಮಾತ್ಯರು ಅದೇಕೆ ಇನಫ್ಲೇಶನ್, ಡಿಫ್ಲೇಶನ್, ರಿಸೆಷನ್ ಅಂತ ತಲೆ ಕೆರೆದುಕೊಳ್ಳುವರೋ? ಗೊತ್ತೆ?
ಮುಂಬೈ ಬರ್ನಿಂಗ್!
ಅಂತೂ ಒಂದು ಮಹಾಯುದ್ಧದ ಮುನ್ನುಡಿ ಮುಂಬೈಯಿಂದ ಶುರುವಾಗಿದೆ. ಈವರೆಗೂ ಎಲ್ಲೋ ಕಾಶ್ಮೀರದ ಕಣಿವೆಯಿಂದಲೋ, ಯಾರೂ ಅರಿಯದ ಕತ್ತಲ ಕೋಣೆಗಳಿಂದಲೋ ಆಕ್ರಮಿಸಿ ಬಾಂಬುಗಳನ್ನು ಹುಗಿದಿಟ್ಟು ಮುಗ್ಧರನ್ನು ಕೊಲ್ಲುತ್ತಿದ್ದ ಭಯೋತ್ಪಾದಕರು ಇಂದು ಮುಂಬಾಗಿಲಾದ ’ಗೇಟ್ ವೇ ಆಫ್ ಇಂಡಿಯಾ’ದಿಂದಲೇ ಆಡಿಯಿಟ್ಟು ಮುಂಬೈಯ ಮುಡಿಯೇರಿದ್ದಾರೆ. ಮುಖ್ಯ ನಮ್ಮಲ್ಲಿ ಸರಿಯಾದ ಕಾನೂನುಗಳೇ ಇಲ್ಲದಿರುವುದು. ಇದ್ದರೂ ಅವುಗಳ ಅನುಷ್ಟಾನ........?
ನಮ್ಮಲ್ಲಿ ಎಂತಹ ದ್ವಂದ್ವಗಳಿವೆಯೆಂದರೆ, ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಸಂವಿಧಾನವನ್ನು ಭೋಧಿಸುತ್ತ, ಅಪರಾಧೀ ಹಿನ್ನೆಲೆಯಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುತ್ತೇವೆ. ಆದರೆ ಇಂದಿನ ಶೇಕಡಾ ೬೦% ನಮ್ಮ ಜನಪ್ರತಿನಿಧಿಗಳು ಅಪರಾಧೀ ಹಿನ್ನೆಲೆಯವರಾಗಿದ್ದಾರೆ. ಅದರಲ್ಲೂ ಅನೇಕರು ಜೈಲಿನಲ್ಲಿ ಕುಳಿತೇ ಚುನಾವಣೆಗಳನ್ನು ಗೆದ್ದಿದ್ದಾರೆ. ಸಂವಿಧಾನದ ಅದ್ಯಾವ ತಿದ್ದುಪಡಿ ಕೊಲೆಗಡುಕರು, ರೌಡಿಗಳು, ಕಳ್ಳರನ್ನೆಲ್ಲಾ ಜನಪ್ರತಿನಿಧಿಗಳಾಗುವಂತೆ ಮಾರ್ಪಾಡಿಸಿತೋ ನಾ ಕಾಣೆ.
ಮುಂಬೈಯ ದಾಳಿಗೆ ಒಂದು ತಿಂಗಳ ಮುಂಚೆಯೇ ಜಲಮಾರ್ಗವಾಗಿ ಭಾರತದ ಮೇಲೆ ಉಗ್ರರು ದಾಳಿ ಮಾಡಬಹುದೆಂದು ಅಮೇರಿಕಾ ಸೂಚನೆ ನೀಡಿದ್ದರೂ ಅದನ್ನು ’ನಾಸ್ಟ್ರಡಾಮಸ್’ನ ಭವಿಷ್ಯವಾಣಿಯೆಂಬಂತೆ ಹಗುರವಾಗಿ ಪರಿಗಣಿಸಿದ್ದುದು, ದಾಳಿಯ ನಂತರವೂ ಪಾಕಿಸ್ತಾನದ ಐ.ಎಸ್.ಐ. ಮುಖ್ಯಸ್ಥನನ್ನು ಬಂದು ನೋಡೆಂದು ಕೇಳಿಕೊಳ್ಳುವುದು, ಸಹಾಯ ಮಾಡಲು ಬಂದ ಅಮೇರಿಕಾದ ಎಫ್.ಬಿ.ಐ.ಯನ್ನು ವಿಮಾನನಿಲ್ದಾಣದಲ್ಲೇ ಕಾಯಿಸಿದ್ದುದು ಭಾರತದ ಘನ ಸರ್ಕಾರದ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆಯೋ ಅಥವಾ ಈ ಘಟನೆಯನ್ನೂ ಕೂಡಾ ಓಲೈಕೆಗೋ, ಮತರಾಜಕೀಯಕ್ಕೋ ಅನ್ವಯಿಸಲು ಸೂತ್ರವನ್ನು ಹುಡುಕುವ ವ್ಯವಧಾನವಾಗಿದೆಯೋ ಅರಿಯೆ. ಒಂದೆಡೆ ಭ್ರಷ್ಟ ಅಧಿಕಾರೀಶಾಹಿಗಳು ದೇಶವನ್ನು ಹಿಂಡಿ ಕೋಟಿ ಕೋಟಿ ದೋಚುತ್ತಿದ್ದರೆ, ನಮ್ಮ ಅಗ್ನಿಶಾಮಕದಳದವರು ಬೂಟುಗಳಿಲ್ಲದೇ ಚಪ್ಪಲಿ ತೊಟ್ಟೇ ಬೆಂಕಿಯೊಂದಿಗೆ ಹೋರ್‍ಆಡುತ್ತಿದ್ದಾರೆ.
ನೀವು ಗಮನಿಸಿದ್ದೀರೋ ಇಲ್ಲವೋ ಅಮೇರಿಕಾದ ಮೇಲೆ ೯೧೧ ದಾಳಿಯ ನಂತರ ಇದುವರೆಗೂ ಒಂದೇ ಒಂದು ಉಗ್ರರ ದಾಳಿ ನಡೆದಿಲ್ಲ. ಆ ಒಂದು ಉಗ್ರರ ದಾಳಿಯಿಂದಾಗಿ ಅಫ್ಘಾನಿಸ್ತಾನವು ಇಂದು ಸ್ಮಶಾನವಾಗಿದೆ. ಅದೇ ಪಾಕಿಸ್ತಾನವು ಹಲವಾರು ದಶಕಗಳಿಂದಲೂ ಭಾರತದ ನೆಲದ ಮೇಲೆ ಸತತ ಉಗ್ರರ ದಾಳಿಯನ್ನು ನಡೆಸುತ್ತಿದೆ. ಇದನ್ನು ಹತ್ತಿಕ್ಕುವುದಿರಲಿ, ಈ ದಾಳಿಯನ್ನು ಕೇವಲ ಕಾಶ್ಮೀರದ ಅಂಚಿಗೆ ಸೀಮಿತಗೊಳಿಸಲು ಕೂಡಾ ಭಾರತ ಹೆಣಗುತ್ತಿದೆ. ಎಲ್ಲಿಯ ಕಾಶ್ಮೀರ ಎಲ್ಲಿಯ ಕಲಘಟಗಿ? ಕಲಘಟಗಿಯಲ್ಲಿಯೂ ಉಗ್ರರನ್ನು ಬಂಧಿಸುವಂತಾಗಿದೆ ಇಂದು. ಭಾರತ ಅದ್ಯಾವ ದಿಕ್ಕಿನಲ್ಲಿ ಮುಂದುವರಿಯುತ್ತಿದೆಯೋ! ಒಂದೆಡೆ ಭಯೋತ್ಪಾದನೆ, ತೀವ್ರ ಹಣದುಬ್ಬರ, ಐ.ಟಿ. ಬೆಳವಣಿಗೆಯನ್ನೇ ಭಾರತದ ಬೆಳವಣಿಗೆಯೆಂಬಂತೆ ತೋರಿಸುತ್ತ, ಕೇವಲ ಬೆಂಗಳೂರೊಂದರಿಂದಲೇ ರಿಯಲ್ ಎಸ್ಟೇಟ್ ರೌಡಿಗಳು ಬಿಲಿಯನ್ ಡಾಲರ್ ಟರ್ನೋವರ್ ಮಾಡುತ್ತಾ ಬುಲೆಟ್ ಪ್ರೂಫ್ ಕಾರುಗಳಲ್ಲಿ ತಿರುಗುತ್ತಿದ್ದರೆ, ಸಿಯಾಚೆನ್ ನಲ್ಲಿ ನಮ್ಮ ಯೋಧರು ಚಳಿಗೆ ಸರಿಯಾಗಿ ಹೊದಿಕೆ ಇಲ್ಲದೇ ದೇಶ ಕಾಯುವಂತಾಗಿದೆ.
ಇಂದು ಸ್ವೇಚ್ಚಾಚಾರೀ ರಾಜಕಾರಣಿಗಳಿಗೆ ಬೇಕಾದ್ದು ಏನು ಎಂಬುದು ನಮ್ಮ ಸರ್ಕಾರೀಯಂತ್ರಕ್ಕೆ ಚೆನ್ನಾಗಿ ತಿಳಿದಿದೆ. ಹಾಗಾಗಿ ಯಾವ ರಾಜಕಾರಣಿ/ಪಕ್ಷಗಳು ಅಧಿಕಾರಕ್ಕೆ ಬಂದರೇನು? ಸರ್ಕಾರೀ ಅಧಿಕಾರಿಗಳ ಸ್ಥಾನ ಖಾಯಂ ತಾನೆ? ಹಾಗಾಗಿ ಭಾರತಕ್ಕೆ ಸರಿ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿಯೇ ಇಲ್ಲವೆನ್ನಬಹುದು, ಸಿಕ್ಕಿರುವುದು "ಭಾರತೀಯ ಆಡಳಿತಶಾಹೀ ಸ್ವಾತಂತ್ರ್ಯ" ಯಾವುದೇ ರಂಗವಾದರೂ ಭ್ರಷ್ಟಾಚಾರ ತುಂಬಿ ಎಲ್ಲೆಲ್ಲೂ ಅರಾಜಕತೆ ಮೆರೆಯುತ್ತಿದೆ. ಇದು ಮಾಧ್ಯಮರಂಗವಿರಬಹುದು ಅಥವಾ ರಾಜಕೀಯರಂಗವಿರಬಹುದು.
ಪಾಪ, ಜನಸಾಮಾನ್ಯರು ಇನ್ನೇನು ಮಾಡಿಯಾರು? ಲಂಗುಲಗಾಮಿಲ್ಲದೆ ಸುದ್ದಿ ಭಿತ್ತರಿಸುವ ಟಿವಿ ಮಾಧ್ಯಮಗಳನ್ನು ನೋಡಿ, ಖಾರಪುರಿ ತಿಂದು, ಲೊಚಗುಟ್ಟುತ್ತ ಮಾತನಾಡಿಕೊಂಡು ಒಂದು ಗಾಳಿಯನ್ನು ತೆಗೆಯುತ್ತಾರೆ. ಅದೇ ರೀತಿ ನಮ್ಮಂಥಹ ಬರಹಗಾರರೂ ಕೂಡ ಒಂದು ಲೇಖನವನ್ನು ಬರೆದು ಶಹಬ್ಬಾಸ್ ಗಿಟ್ಟಿಸಿಕೊಳ್ಳುತ್ತಾರೆ. ಅದೂ ಇಂದಿನ ರಿಸೆಷನ್ ಯುಗದಲ್ಲಿ ಐ.ಟಿ. ಜನಕ್ಕೆ ಇಂಟರ್ನೆಟ್ ಲೇಖನಗಳನ್ನು ಓದಲು ಅವಕಾಶ ಸಿಕ್ಕಿದರೆ, ಇಲ್ಲದಿದ್ದರೆ ನಾವುಗಳು ನಮ್ಮೊಂದು ತೀಟೆಯನ್ನು ತೀರಿಸಿಕೊಂಡೆವೆಂದು ಸಮಾಧಾನಿಸಿಕೊಳ್ಳಬೇಕಾಗುತ್ತದೆ.
ಇದೆಲ್ಲವನ್ನೂ ಮೀರಿದ ಒಂದು ಎತ್ತರಕ್ಕೆ ಸಾಗುವ ಶಕ್ತಿ ಭಾರತಕ್ಕೆ, ಭಾರತದಲ್ಲಿ ಇದೆಯೇ? ಡೆಮಾಕ್ರಸಿಯಿಂದ ಡಿಕ್ಟೇಟರ್ಶಿಪ್, ಡಿಕ್ಟೇಟರ್ಶಿಪ್ ನಿಂದ ಡೆಮಾಕ್ರಸಿಗಳ ಮಧ್ಯೆ ಹೊಯ್ದಾಡುತ್ತಾ, ತನ್ನ ಹಲವು ಪ್ರಾಂತ್ಯಗಳ ಮೇಲೆ ಅಧಿಕಾರವೇ ಇಲ್ಲದಂತೆ ಅತ್ಯಂತ ಅರಾಜಕತೆಯಿಂದ ಕೂಡಿದ ಒಂದು ಅತಿ ಚಿಕ್ಕ ರಾಷ್ಟ್ರ್‍ಅವಾದ ಪಾಕಿಸ್ತಾನದ ಮೇಲೆ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ್‍ಅವಾದ ಭಾರತ ಕ್ರಮ ಕೈಗೊಳ್ಳಲು ಕಳೆದ ನಾಲ್ಕು ದಶಕಗಳಿಂದಲೂ ಹಿಂಜರಿಯುತ್ತಿದೆ. ನಮ್ಮಲ್ಲಿ ಇದುವರೆಗೂ ನಾಯಕತ್ವದ ಪ್ರಥಮ ಗುಣವೆಂದು ಐ.ಐ.ಎಮ್ ನಿಂದ ಹಿಡಿದು ಬಿ.ಬಿ.ಎಮ್ (ಬೀದಿ ಬದಿಯ ಮಾರಿ)ವರೆಗೂ ಎಲ್ಲರೂ ಒಪ್ಪುವ ಗುಣವಾದ "ಗಟ್ಟಿ ನಿರ್ಧರಿಸುವ (ಸ್ಟ್ರಾಂಗ್ ಡಿಸಿಷನ್ ಮೇಕಿಂಗ್)" ಗುಣವಿರುವ ಯಾವೊಬ್ಬ ನಾಯಕನೂ ದೊರೆಯದಂತಿರುವುದು ನಮ್ಮ ಸ್ವಾತಂತ್ರ್ಯದ ಕ್ರೂರ ಅಣಕ!
ಹಾಗಾಗಿಯೇ ಇತ್ತೀಚೆಗೆ ಅಂಕಣ ಲೇಖನವನ್ನು ಬರೆಯುತ್ತಿಲ್ಲ. ವರ್ತಮಾನದ ಸಾಮಾಜಿಕ ಘಟನೆಗಳನ್ನೆತ್ತಿಕೊಂಡು ಈ ಹಿಂದೆ ನಾನು ಬರೆದೆಲ್ಲಾ ಲೇಖನಗಳಲ್ಲಿ ಯಾವುದಾದರೂ ಒಂದು ಲೇಖನ ಹೊಸ ಘಟನೆಗೆ ತಾಳೆಯಾಗಿ, ಮತ್ತದನ್ನೇ ಬರೆದು ಬೋರ್ ಹೊಡೆಸಬೇಕೇ ಎನಿಸುತ್ತದಲ್ಲದೇ ಬರೆಯಲೂ ಬೋರ್ ಎನಿಸುತ್ತದೆ. ಹಾಗಾಗಿ ಇತ್ತೀಚೆಗೆ ಅದೇ ಸಮಯವನ್ನು ಒಂದು ಐತಿಹಾಸಿಕ ಅನ್ವೇಷಣೆಯ ಪುಸ್ತಕವನ್ನು ಬರೆಯಲು ವಿನಿಯೋಗಿಸುತ್ತಿದ್ದೇನೆ. ಏಳನೇ ಶತಮಾನದಲ್ಲಿ ಹುಯೆನ್ ತ್ಸಾಂಗನು ನಡೆದ ರೇಶಿಮೆಯ ಹಾದಿಯಲ್ಲಿ ಕಳೆದ ವರ್ಷ ಟ್ರೆಕ್ಕಿಂಗ್ (ಕಾರಿನಲ್ಲಿ) ಮಾಡಿದ್ದುದರ ಬಗ್ಗೆ ಸ್ವಾರಸ್ಯವಾಗಿ ರಸಿಕ ಅನುಭವಗಳನ್ನೆಲ್ಲಾ ಮುಚ್ಚುಮರೆಯಿಲ್ಲದೆ ಒಂದು ಪ್ರವಾಸಕಥನ ಬರೆಯುವಷ್ಟು ಸರಕಿದ್ದರೂ ಅದನ್ನು ಬದಿಗೊತ್ತಿ ನಾನು ಸಂಗ್ರಹಿಸಿದ ಮಾಹಿತಿ, ಪುಸ್ತಕ, ಚಿತ್ರಗಳ ಸಮೇತ ಹುಯೆನ್ ತ್ಸಾಂಗನ ಕುರಿತಾಗಿ, ಅವನು ಕಂಡ ಭಾರತದ ಕುರಿತಾಗಿ, ಅಂದಿನ ಭಾರತದ ಭೌಗೋಳೇತಿಹಾಸಿಕವನ್ನು ಅವನು ಕಂಡಂತೆಯೇ ಬರೆಯುತ್ತಿದ್ದೇನೆ. ಅತ್ಯಂತ ಕುತೂಹಲಕರ ಅಂಶವೆಂದರೆ ಅವನು ಕಂಡ ಅಂದಿನ ಭಾರತಕ್ಕೂ, ನಾವುಗಳು ಕಾಣುತ್ತಿರುವ ಇಂದಿನ ಭಾರತಕ್ಕೂ ಏನೇನೂ ವ್ಯತ್ಯಾಸವಿಲ್ಲವೆಂಬುದು!! ಇದರ ಕುರಿತಾಗಿ ಮತ್ತೊಮ್ಮೆ ಬರೆಯುತ್ತೇನೆ.
ಅಣಕ:
ಚಂದ್ರೇಗೌಡರ ’ಕಟ್ಟೇಪುರಾಣ’ದಂತಹ ಪಟ್ಟಣಿಗರ ಗುಂಪೊಂದು ’ಅಡ್ಡೇಪುರಾಣ’ದಲ್ಲಿ ತೊಡಗಿದ್ದಿತು. ಒಬ್ಬೊಬ್ಬರೂ ಒಂದೊಂದು ವಿಧವಾದ ಸಲಹೆಗಳನ್ನು ಭಯೋತ್ಪಾದನೆ ನಿವಾರಣೆಯ ಕುರಿತು ಕೊಡುತ್ತಿದ್ದರು. ಬಿಜೆಪಿ ಪ್ರೇರಿತನೊಬ್ಬ ’ಅಲ್ಲಾ, ಹಿಂದೂ ಸಾಧ್ವಿಯನ್ನು ಅನವಶ್ಯಕವಾಗಿ ಬಂಧಿಸಿದ್ದಕಾಗಿಯೇ, ಕರ್ಕರೆ ತನ್ನ ಬುಲೆಟ್ ಪ್ರೂಫ್ ಜಾಕೆಟ್ ಕುರ್ಕುರೆ ಆಗಿ ಸಾಯುವಂತಾಗಿದ್ದು’ ಎಂದು ಜೆಡಿಎಸ್ ನವರಂತೆ ಶಾಸ್ತ್ರ ಹೇಳಿದ್ದೇ ಅಲ್ಲದೇ ಸಾಧ್ವಿಯ ಶಾಪದ ಭರಕ್ಕೆ ಬುಲೆಟ್ ಪ್ರೂಫ್ ಜಾಕೆಟ್ ಚಿಂದಿಯಾಯಿತೆನ್ನುತ್ತ ಸರ್ಕಾರದ ಕಳಪೆ ಜಾಕೆಟ್ಟಿಗೆ ಜಾಕೆಟ್ ತೊಡಿಸಿದ. ಕಾಂಗ್ರೆಸ್ ಪ್ರೇರಿತನೊಬ್ಬ ’ಬಿಜೆಪಿಗಳು ಅನವಶ್ಯಕವಾಗಿ ಕೆಣಕಿ, ಕೆಣಕಿ, ಭಯೋತ್ಪಾದನೆ ಹೆಚ್ಚಿಕೊಂಡಿದೆ’ ಎಂದ. ಇನ್ನೊಬ್ಬ ಜಾತ್ಯಾತೀತ, ಧರ್ಮಾತೀತ, ಬುದ್ಧಿಜೀವಿಗಳಿಂದೆಲ್ಲಾ ಪ್ರೇರಿತನಾದವ ’ಈ ಭಯೋತ್ಪಾದನೆ ವಿಚಾರಣೆಯಲ್ಲಿ ಮುಗ್ಧರಿಗೆ ಪೊಲೀಸ್ ಬ್ರುಟಾಲಿಟಿ ತಟ್ಟದಂತೆ ಎಚ್ಚರವಹಿಸಬೇಕು’ ಎಂದ.
ಇದನ್ನೆಲ್ಲಾ ಕೇಳುತ್ತಿದ್ದ ಪ್ಯಾರೇ ಬೇಟಾ ’ಅರೆ ಇದ್ಕೆಲ್ಲಾ ನಮ್ದು ಕಾನೂನೇ ಅಡ್ಡಿ. ಬರೀ ಮದ್ವೆಗೆ ಮುಸ್ಲಿಂ ಕಾನೂನು, ಹಿಂದೂ ಕಾನೂನ್ ಅಂತ ಬೇರೆ ಮಾಡ್ಬಿಟ್ಟಿ, ಬಾಕಿದ್ಕೆಲ್ಲಾ ಒಂದೇ ಕಾನೂನ್ ಮಾಡ್ಬಿಟ್ರೆ ಆಗ್ತದೆ? ಮುಸ್ಲಿಂಗೆ ಎಲ್ಲಾ ಶರಿಯತ್ ಕಾನೂನು ಅಂತ ಮಾಡ್ಬಿಟ್ಟಿ ಕದ್ದೌನಿಗೆ ಕೈ ಕತ್ರಿಸಿ, ಮರ್ಡರ್ ಮಾಡಿದವ್ನಿಗೆ ಕತ್ತು ಕತ್ರಿಸಿ, ಕೈ ಕೊಟ್ಟೌಂಗೆ ಬೆಂಗ್ಳೂರ್‍ಲಿ ಇತ್ತೀಚ್ಗೆ ಒಬ್ಳು ’ಅದ್ನ’ ಕತ್ರಿಸ್ದಂಗೆ ಹಲಾಲ್ ಮಾಡೋ ಹಂಗೆ ಕಾನೂನ್ ಮಾಡ್ಬಿಟ್ರೆ, ಆಗ ಎಲ್ಲಾ ನಿಯತ್ತು ಇರೋ ನಮ್ ಥರ ಮುಸ್ಲಿಂ ಉಳ್ಕೊತಾರೆ, ಇಲ್ದಿರೋರು ಯಾವ್ದು ಧರ್ಮದ್ದು ಕಾನೂನು ಕಡಿಮೆ ಇದೆ ಅದ್ಕೆ ಮತಾಂತರ ಆಗೋಯ್ತರೆ’ ಎಂದು ಭಯೋತ್ಪಾದನೆಗೆ ಕಾನೂನು ಭಯೋತ್ಪಾದನೆಯೇ ಉತ್ತಮವೆಂದು ಸೂಚಿಸಿದ. ಯಾವ್ದು ಸರಿ ಅಂತೀರಾ?

Subscribe to:
Posts (Atom)