ಸರ್ಕಾರಿ ಗ್ರಂಥಾಲಯಕ್ಕೆ ರದ್ದಿ ತುಂಬುವ ಪ್ರಕಾಶನಗಳ ಬಗ್ಗೆ ಈಗ ಸುದ್ದಿಗಳಾಗುತ್ತಿವೆ. ಆ ಹಿನ್ನೆಲೆಯಲ್ಲಿ ನನಗನಿಸಿದ್ದು ಇಷ್ಟು.
ಕರ್ನಾಟಕದ 226 ತಾಲ್ಲೂಕುಗಳಲ್ಲಿರುವ ಸಾಹಿತ್ಯ ಪರಿಷತ್ತುಗಳ ಕನಿಷ್ಠ ಇಪ್ಪತ್ತು ಜನ ಒಂದೊಂದು ಪ್ರತಿ ಖರೀದಿಸಿದರೂ ಒಟ್ಟು 4520 ಪ್ರತಿಗಳು ಮಾರಾಟವಾಗುತ್ತವೆ. ಮತ್ತು ಆಯಾಯ ತಾಲ್ಲೂಕು ಪಟ್ಟಣಗಳಲ್ಲಿರುವ ಪುಸ್ತಕ ಮಾರುವ ಒಂದೊಂದು ಅಂಗಡಿಗಳಲ್ಲಿ ಐದು ಪ್ರತಿ ಮಾರಾಟ ಮಾಡಿಸಿದರೂ ಮಾರಾಟದ ಸಂಖ್ಯೆಯನ್ನು ಹತ್ತು ಸಾವಿರಕ್ಕೆ ತರಬಹುದು.
ಆದರೆ ಪುಸ್ತಕವೆಂದರೆ ಅದು ಪ್ರಕಟಯೋಗ್ಯವಾಗಿರಬೇಕು. ಅದನ್ನು ನಿರ್ಧರಿಸಲು ಸಾಕಷ್ಟು ಚಿಂತಕರ ಚಾವಡಿಯಿದ್ದು ಆ ಚಾವಡಿ ಓದಿ ಪುರಸ್ಕರಿಸಿದ ಪುಸ್ತಕಗಳನ್ನು ಮಾತ್ರ ಪ್ರಕಟಿಸುವ ಯೋಗ್ಯ ಪ್ರಕಾಶನ ಸಂಸ್ಥೆಗಳಿರಬೇಕು. ಹಾಗೆಯೇ ಮೇಲ್ಕಾಣಿಸಿದಂತೆ ಮಾರಾಟ ಮಾಡುವ ವ್ಯಾಪಾರೀ ದೃಷ್ಟಿಯನ್ನು ಕೃತಿ ಪುರಸ್ಕರಿಸುವಷ್ಟು ಮಾರುಕಟ್ಟೆ ಯೋಗ್ಯವೂ ಆಗಿರಬೇಕು.
ಆದರೆ ಅಂತಹ ಪ್ರಕಟಣೆ ಮತ್ತು ವ್ಯಾಪಾರೀ ದೃಷ್ಟಿಯ ಛಲವಂತ ಯೋಗ್ಯ ಪ್ರಕಾಶನ ಸಂಸ್ಥೆಗಳೆಷ್ಟಿವೆ?!?
ಲೈಬ್ರರಿ ಖರೀದಿಸುವುದೆಂದು ಬೇಕಾಬಿಟ್ಟಿ ಪುಸ್ತಕಗಳನ್ನು ಪ್ರಕಟಿಸಲಾಗುವುದೇ? ಇನ್ನೂರು, ಮುನ್ನೂರು ಪ್ರತಿಗಳನ್ನು ಹಾಕಿಸುವ ಲೇಖಕರುಗಳು ಬ್ಲಾಗಿನಲ್ಲಿ ಕೆತ್ತಿಕೊಂಡಿರುವುದನ್ನು ಬಿಟ್ಟು ಈ ಲೈಬ್ರರಿಗಳನ್ನು ನೆಚ್ಚಿಕೊಂಡು, ಹಣ ಹೂಡಿ "ಸಾಹಿತಿ" ಎನ್ನಿಸಿಕೊಳ್ಳುವ ತೆವಲಿಗಾದರೂ ಏಕೆ ಮರುಳಾಗಿದ್ದಾರೋ!
ಭ್ರಷ್ಟರು ಕೇವಲ ಇಲಾಖೆಯಲ್ಲಿಲ್ಲ, ಸಾಹಿತಿ ಎನ್ನಿಸಿಕೊಳ್ಳುವ ಭರದಲ್ಲಿ ಬಂಡವಾಳ ಹೂಡಿ ಭ್ರಷ್ಟರನ್ನು ಮಾಡುವ "ಸಾಹಿತಿ"ಗಳೂ ಅವರಿಗಿಂತ ಹೆಚ್ಛೇ ಇದ್ದಾರಂತೆ!
ಹಾಗಾಗಿಯೇ ಇಂದು ಕನ್ನಡದಲ್ಲಿ ಕೇವಲ ಒಂದು ಸಾವಿರ ಪ್ರತಿ ಪುಸ್ತಕ ಮಾರಾಟವಾದರೆ ಅದೇ ದಾಖಲೆಯಂತೆ!
ನರಕಕ್ಕಿಳಿಸಿ, ನಾಲಿಗೆ ಸೀಳಿಸಿ, ಬಾಯಿ ಹೊಲೆಸಿ ಹಾಕಿದರೂ ಮೂಗಿನಲ್ ಕನ್ನಡ ಪದವಾಡ್ತೀನಿ ನನ್ನ ಮನಸಾ ನೀ ಕಾಣೆ.....ಠೇರೋ ಠೇರೋ ಭಾಯ್, ಕ್ಯಾ ಹಜಾರ್ ಕಿತಾಬ್ ಬೇಚ್ ನಹೀ ಸಕ್ತೆ ಗೀತ್ ಲಿಕ್ ಲಿಕ್ಕೆ! ಕ್ಯಾ ನಾಲಿಗೆ, ಮೂಗು ಬೋಲ್ತಾ! ಮುಡ್ ಕೆ ಅಪನಿ ಪೀಚಾ ತೋ ಝರಾ ದೇಖ್ ಲೋ!
No comments:
Post a Comment