ಸಿದ್ದರಾಮೋತ್ಸವ

 ಭಾರತದ ಪ್ರಜಾಪ್ರಭುತ್ವವಾದ "ಊಳಿಗಮಾನ" ಪ್ರಜಾಪ್ರಭುತ್ವವನ್ನು ಸ್ವಾತಂತ್ಯ ತಂದುಕೊಟ್ಟು ಪ್ರಜಾಪ್ರಭುತ್ವ ಸ್ಥಾಪಿಸಿದೆವು ಎನ್ನುವ ಪಕ್ಷದಿಂದಲೇ ಮತ್ತು ಸಮಾಜವಾದಿ ಎನ್ನುವ ನಾಯಕನಿಂದಲೇ ಆತನ ಹುಟ್ಟಿನ ವಿಜೃಂಭಣೆ 'ಶಾಮನೂರು ಶಿವಶಂಕರಪ್ಪ "ಅರಮನೆ" ಮೈದಾನ' ಎನ್ನುವ ಐತಿಹಾಸಿಕವಾಗಿ "ಅರಮನೆ"ಯಿರದ ಆಧುನಿಕ ಊಳಿಗಮಾನ ಪ್ರಜಾಪ್ರಭುತ್ವದ ವ್ಯಕ್ತಿಯ ಅರಮನೆ ಹೆಸರಿನ ಮೈದಾನದಲ್ಲಿ ಯಾವ ರಾಜಪ್ರಭುತ್ವದ "ರಾಜ"ನೂ ಲಕ್ಷೋಪಲಕ್ಷ "ವಂಧಿಮಾಗದ"ರ ಸಮ್ಮುಖದಲ್ಲಿ ಅದರಲ್ಲೂ "ಭರತ" ಎಂಬ ಹೆಸರಿನ ಭಾರತ ಖಂಡದ ಅಧಿಪತಿಯೂ ಆಚರಿಸಿಕೊಳ್ಳದ ಹುಟ್ಟಿನ "ಉತ್ಸವ"ಕ್ಕೆ ಕರುನಾಡು ಸಾಕ್ಷಿಯಾಗುತ್ತದೆ!


ಪ್ರಜಾಪ್ರಭುತ್ವದ ಸಹಸ್ರಮಾನದ ಅಣಕವು ಇಂದಿನ "ಇಪ್ಪತ್ತೊಂದ"ನೇ ಶತಮಾನದಲ್ಲೂ ರಾಜಪ್ರಭುತ್ವದ ಆಶ್ರಯದಲ್ಲಿದ್ದ ಪಂಡಿತರಂತೆಯೇ ಇಂದಿನ ಬುದ್ದಿಜೀವಿಗಳ "ಬಹುಪರಾಕ್" ಜಯಜಯಕಾರದಲ್ಲಿ ಅನಾವರಣಗೊಳ್ಳುತ್ತಿರುವುದು ಕೇವಲ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ್ದಷ್ಟೇ ಅಲ್ಲ, ಅದನ್ನು ತಂದುಕೊಟ್ಟೆವು ಎಂಬ ಪಕ್ಷದ, ರಾಷ್ಟ್ರದ, ನೂರಾಮೂವತ್ತು ಕೋಟಿ ನಾಗರಿಕರ ದುರಂತ!


ವಿಶೇಷ ಸೂಚನೆ: ಭರತ ಖಂಡದ ಅಧಿಕಾರದಲ್ಲಿರುವ ಪಕ್ಷದ ರಾಜನ ಬಗ್ಗೆ ಬರೆಯಿರಿ, ಉಗಿಯಿರಿ ಎಂದು ಉಗಿಯುವ ಉತ್ಸಾಹದ "ಸಂಧಿಮಾಗದ"ರೇ, ನಾನೊಬ್ಬ ಜಾಗತಿಕವಾಗಿ ಪ್ರಚಲಿತವಿರುವ ಉದಾರವಾದದ ಅನುಯಾಯಿ. ಹಾಗಾಗಿ ನನ್ನ ಉದಾರವಾದದ ಹೆಸರನ್ನು ತಮ್ಮ ಅನೈತಿಕ ಬಸಿರಿಗೆ ಬಳಸಿಕೊಳ್ಳುವವರನ್ನು ಖಂಡಿಸುವುದು ನನ್ನ ಜನ್ಮಸಿದ್ಧ ಉದಾರ ಹಕ್ಕು, ನೆನಪಿಡಿ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: