ಕಾವ್ಯ - ಹೊಸೆಯಬೇಕಿಲ್ಲ

 ಕಾವ್ಯ.... ಹೊಸೆಯಲೇ ಬೇಕಿಲ್ಲ!

ಕಿಸಿದರೂ ಆಗುತ್ತದೆ.

ಬಿಸಿಯುಸಿರಿನ, ಹಸಿಮೈನ ಸವೆಸಿ

ಫಲವ ಪಡೆದವರಿದ್ದಾರೆ,

ಕಿಸಿಕಿಸಿದು ಬೆಸೆಬೆಸೆದು ಬೆವರ ಸುರಿಸಿ!

ಘಮಲು, ಅಮಲು, ಅಲಮೇಲು

ಪುನರಪಿ ಜನನಮಂ ಪುನರಪಿ ಮರಣಂ....


ಕಾವ್ಯ.... ಹೊಸೆಯಲೇ ಬೇಕಿಲ್ಲ!

ಕಿಸಿದರೂ ಆಗುತ್ತದೆ.

ಪ್ರಸ್ಥದ ಪ್ರಶಸ್ತಿಯೋ, ಇಂದ್ರಪ್ರಸ್ಥದ ಶಿಶುವೋ 

ಫಲವ ಪಡೆದವರಿದ್ದಾರೆ,

ಮಮತೆಯ ಅರಸಿ ಹಾಸಿ ವಿಜಯದ ಪತಾಕೆ ಹಾರಿಸಿ!

ಘಮಲು, ಅಮಲು, ಅಲಮೇಲು

ಪುನರಪಿ ಜನನಮಂ ಪುನರಪಿ ಮರಣಂ....


ಕಾವ್ಯ.... ಹೊಸೆಯಲೇ ಬೇಕಿಲ್ಲ!

ಕಿಸಿದರೂ ಆಗುತ್ತದೆ.

ಕಿಸಿಕಿಸಿದು ಸಿಗದಾಗ ಹರೆಯ ಮೀರಿದಾಗ ಬಸಿರ ಹರಿಹರಿದು

ಫಲವ ಪಡೆದವರಿದ್ದಾರೆ,

ಕತೆ ಕಟ್ಟಿ ವಿಜಯ ಮಾತೃಕೆಯ ಮೆರೆಸಿ!

ಘಮಲು, ಅಮಲು, ಅಲಮೇಲು

ಪುನರಪಿ ಜನನಮಂ ಪುನರಪಿ ಮರಣಂ....

No comments: