ಕರಣಹಸಿಗೆ

 ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,

ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ.

ಮಹಾದಾನಿ ಕೂಡಲಸಂಗಮದೇವಾ,

ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.


ಬಸವಣ್ಣನ ಈ ವಚನವನ್ನು ಜಗತ್ತು ತಪ್ಪಾಗಿ ಅರ್ಥೈಸಿಕೊಂಡಿದೆ. ಇಲ್ಲಿನ ಒರೆಯ ಕಟ್ಟುವೆ, ನಿಗಳನಿಕ್ಕುವೆ ಮೂಗ ಕೊಯಿವೆ ಎಂದರೆ ಇವುಗಳನ್ನು ತಿರಸ್ಕರಿಸುವೆ ಎಂದಿದ್ದಾನೆ ಎಂದೇ ವ್ಯಾಖ್ಯಾನಿಸಲಾಗಿದೆ. ಆದರೆ ಆತ "ಹುಟ್ಟಿನಿಂದ ಜಾತಿ"ಯಿಂದಾಗಿ ತಿರುಚಲ್ಪಟ್ಟ ವೇದ, ಶಾಸ್ತ್ರ, ತರ್ಕ, ಆಗಮಗಳನ್ನು ಸರಿಪಡಿಸುವೆ ಮತ್ತು "ಹುಟ್ಟಿನಿಂದ ಜಾತಿ" ನಿಯಮವನ್ನು ತಿರಸ್ಕರಿಸುವೆ ಎಂದಿದ್ದಾನೆ. ಆ ಕಾರಣವಾಗಿ ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ ಎಂದಿದ್ದಾನೆ.


ಆದರೆ ಇದನ್ನೆಲ್ಲ ಹೇಗೆ ಹೇಳಿದರೂ "ಕರಣ ಹಸಿಗೆ" ಎಂದರೆ "ಶರಣ ಹಾಸಿಗೆ" ಎಂದುಕೊಂಡಿರುವ ಇಂತಿಪ್ಪ ಧರ್ಮಬೀರುಗಳ ನಡುವೆ ನನ್ನಂತಹ ಅಧರ್ಮೀಯನ ಓಲಾಟದ ಓದು ಎಚ್ಚರವಿರಬಹುದಾದ ಸತ್ಯಶೋಧಕ ಕುತೂಹಲಿಗಳಿಗಾಗಿ ಈ ಬರಹವನ್ನು ಕೊಟ್ಟಿದ್ದೇನೆ.


ವೀರಶೈವರು ಪಾಲಿಸಬೇಕಾದ ಚೆನ್ನಬಸವಣ್ಣ ವಿರಚಿತ "ಕರಣ ಹಸಿಗೆ" ಗ್ರಂಥದಿಂದ:

 

ಅಕಾರವೆಂಬ ಪ್ರಣವದಲ್ಲಿ - 

ಅಗ್ನಿಶ್ಚ ಋಗ್ವೇದಸ್ತಥಾ ರುದ್ರೋಧಿದೇವತಾ | 

ಆಕಾರ ಚಯಂಯಾತಿ ಪ್ರಥಮೇ ಪ್ರಣವಾಂಶಿಕೆ|| 


ಉಕಾರನೆಂಬ ಪ್ರಣವದಲ್ಲಿ - 


ಅಂತರಿಕ್ಷೇ ಯಜುರ್ವೇದೋಭವೇತ್ ಓಂ ಈಶ್ವರೋದೇವತಾ|

ಉಕಾರೇಚ ಲಯಂಯಾತಿ ದ್ವಿತೀಯಂ ಪ್ರಣವಾಂಶಿಕೆ| 


ಮಕಾರವೆಂಬ ಪ್ರಣವದಲ್ಲಿ -

ವಿದ್ಯೇಷು ಸಾಮವೇದೋಭವೇತ್ ಓಂ ಸದಾಶಿವೋ ದೇವತಾ|

ಮಕಾರೇಚ ಲಯಂಯಾಕಿ ತೃತೀಯೇ ಪ್ರಣವಾಂಶಿಕೆ||


ಅಕಾರೇಚ ಉಕಾರೇಚ ಮಕಾರೇಚ ತೃತೀಯಕೆ|

ಇದಮೇಕಂ ಸಮುತ್ಪನ್ನಂ ಓಂ ಇತಿಜ್ಯೋತಿಃ ರೂಪಕಂ||


ಓಂಕಾರಾತ್ಪ್ರಭವಾವೇದಂ | ಓಂಕಾರಾತ್ಪ್ರಭವಾಸ್ವರಂ 

ಓಂಕಾರಾತ್ಪ್ರಭವಾ ಸರ್ವಂ | ತ್ರೈಲೋಕ್ಯಂ ಸಚರಾಚರಂ 

ಸರ್ರವ್ಯಾಪಕಮೋಂಕಾರಂ ಮಂತ್ರೋನ್ಯತ್ರ ನಶೋಭತೆ |

ಪ್ರಣವೋಹಿ ಪರಬ್ರಹ್ಮ ಪ್ರಣವಂ ಪರಮಂ ಪದಂ | 

ಓಂಕಾರಂ ನಾದರೂಪಂಚ ಓಂಕಾರಂ ಬಿಂದುರೂಪಕಂ | 

ಓಂಕಾರಂ ವ್ಯಾಪಿ ಸರ್ವತ್ರಂ ಓಂಕಾರ ಗೋಪ್ಯಮಾನಸಂ | 

ಎಂದಿದು ಪ್ರಣವದುತ್ಪತ್ತಿ. 


ಮೇಲಿನ ಅಕಾರ ಉಕಾರ ಮಕಾರ ಪ್ರಣವದ ಮೂರು ಶ್ಲೋಕಗಳ ಅರ್ಥವು - 


ಅಕಾರವೆಂದು ಹೇಳಿಸಿಕೊಳ್ಳುವ ಪ್ರಣವದ ಅಕ್ಷರದೊಳಗೆ ಅಗ್ನಿಃ ತೇಜವೆಂಬುದೊಂದು ತತ್ತ್ವವು, 

ಋಗ್ವೇದವೆಂಬ ವೇದವು, ರುದ್ರಮೂರ್ತಿಯೆಂಬುದೊಂದು ಅಧಿದೇವತೆಯು, ಇಂದ್ರಾದಿ ನಿರ್ಜರರೆಂಬ ದೇವತೆಗಳು ಉತ್ಸತ್ತಿಯಾದರು. ಉತ್ಪತ್ತಿಯಾಗಿ ಪರಶಿವನ ಸಗುಣಾನಂದ ಸೃಷ್ಟಿಯ ಲೀಲಾವಿಲಾಸ ಉಂಟಾಗಿರುವ ಪರಿಯಂತರ ಉಂಟಾಗಿರ್ದು ಲೀಲೆ ಸಾಕಾದ ಬಳಿಕ ಓಂಕಾರ ಪ್ರಣವದ ಒಂದನೇ ಅಂಶವಾದ ಅಕಾರ ಪ್ರಣವದಲ್ಲಿಯೇ ವಿಶ್ರಾಂತಿಯನ್ನು ಐದುತ್ತಿಹವು. - ಇದು ಮೇಲಿನ ಅಕಾರ ಪ್ರಣವ ಶ್ಲೋಕದ ಅರ್ಥವು. 


ಉಕಾರ ಪ್ರಣವದಲ್ಲಿ ವರ್ಣದೊಳಗಂತರಿಕ್ಸ, ಆಕಾಶ ತತ್ತ್ವ, ಯಜುರ್ವೇದ, ಈಶ್ವರನೆಂಬ ಅಧಿದೇವತೆ, ಇಂದ್ರಾದಿ ಅಪ್ಸರರೆಂಬ ದೇನತೆಗಳು ಉತ್ಪತ್ತಿಯಾದರು. ಲೀಲೆ ಸಾಕಾದ ಬಳಿಕ ಪ್ರಣವದ ಎರಡನೇ ಅಂಶವಾದ ಉಕಾರದಲ್ಲಿ ವಿಶ್ರಾಂತಿಯನ್ನು ಐದುತ್ತಿಹವು. - ಇದು ಉಕಾರ ಪ್ರಣವಡ ಶ್ಲೋಕಾರ್ಥವು.  


ಮಕಾರ ಪ್ರಣವದಲ್ಲಿ ಸುಜ್ಞಾನ ಕಲಾತ್ಮ ತತ್ತ್ವ, ಚತುಸ್ಪಷ್ಠಿ ಕಳಾವಿದ್ಯೆಗಳು,  ಸಾಮವೇದವು, ಸದಾಶಿವನೆಂಬ ಅಧಿದೇವತೆಯು ಇಂದ್ರಾದಿ ಅಷ್ಟ ದಿಕ್ಟಾಲಕರು ಉದಯವಾದರು. ಲೀಲೆ ಸಾಕಾದ ಬಳಿಕ ಪ್ರಣವದ ತೃತೀಯಾಂಶವಾದ ಮಕಾರ ಪ್ರಣವದಲ್ಲಿ ವಿಶ್ರಾಂತಿಯನ್ನು ಐದುತ್ತಿಹವು. 


ಓಂಕಾರದ ಅರ್ಥ - ಇನ್ನು ಓಂಕಾರ ಪ್ರಣವದಿಂದ ನಾಲ್ಕು ವೇದಗಳು, ನಾಲ್ಕು ಉಪ ವೇದಗಳು, ಆಗಮಗಳು, ಶಾಸ್ತ್ರ ಪುರಾಣಗಳು, ಷಡಧ್ವ ಷಡ್ಗುಣ ವಸ್ತು, ತತ್ತ್ವಪಂಚಕವು, ಸಪ್ತ ಭುವನಂಗಳು ಹುಟ್ಟಿದವು.


ನೀವೇ ನಿರ್ಧರಿಸಿ ವೀರಶೈವವು ಬಸವಪೂರ್ವವೋ ಬಸವೋತ್ತರವೋ, ಹಿಂದುವೋ ಅಹಿಂದುವೋ!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: