ಎಸ್.ಎಂ. ಕೃಷ್ಣ ಬೆಂಗಳೂರನ್ನು ಸಿಂಗಾಪುರ ಮಾಡ್ತೀನಿ ಎಂದು ರಿಯಲ್ ಎಸ್ಟೇಟ್ ಬಬಲ್ ಸೃಷ್ಟಿಗೆ ಕಾರಣರಾದರು. ಈ ಬಬಲ್ಲಿನಲ್ಲಿ ಸೋನಿಯಾ ಅಳಿಯನಷ್ಟೇ ಅಲ್ಲ, ಅರ್ಧ ಎಕರೆ ಬೋರೇಗೌಡ ಸಹ ಹೊಲ ಮಾರಿಕೊಂಡು ಲೋಲುಪ್ತನಾಗಿ ತೇಲಿದ.
ಮೋದಿ, ದೇಶದೊಳಗಿನ ಕಪ್ಪುಹಣ ಗುಡಿಸಿ ಹಾಕಬಹುದಾಗಿದ್ದ ನೋಟ್ ಬ್ಯಾನ್ ನಂತರ ಹೆಚ್ಚಿನ ಹಣ ಹಾಕಿದ ಖಾತೆಗಳ ಆಡಿಟ್ ಮಾಡಿಸದೆ ತಿಪ್ಪೆ ಸಾರಿಸಿದರು. ದೇಶವಾಗಲೇ ವಿಶ್ವಗುರು ಆಗಿದೆ ಎಂದು ಬಡ್ಡಿ ದರವನ್ನು ಈಗ ಕ್ರಮವಾಗಿ ಶೂನ್ಯಕ್ಕೆ ತರುತ್ತಿದ್ದಾರೆ. ಇದರಿಂದ ಬಂಡವಾಳ ಸೃಷ್ಟಿಯಾಗುವುದು ನಿಂತು ಮತ್ತದೇ ರಿಯಲ್ ಎಸ್ಟೇಟ್ ಬಬಲ್ ಜೊತೆಗೆ ಹಣದುಬ್ಬರ, ಬೆಲೆಯೇರಿಕೆಗಳು ಮತ್ತಷ್ಟು ಹಿಗ್ಗುತ್ತಿವೆ. ಒಟ್ಟಾರೆ ನವಕೋಟಿ ನಾರಾಯಣನೂ ಈಗ ದರಿದ್ರ ನಾರಾಯಣನಾಗುತ್ತಿದ್ದಾನೆ.
ಕೆಲವು ಆಫ್ರಿಕಾ ದೇಶಗಳಲ್ಲಿ ರದ್ದಿ ಪೇಪರ್ ಬಂಡಲ್ಲುಗಳಂತೆ ಹಣವನ್ನು ಹೊತ್ತುಕೊಂಡು ತರಕಾರಿ ತರಲು ಹೋಗುತ್ತಾರೆ. ದೂರಗಾಮಿಗಳಾದ ಪ್ರಧಾನಿಗಳು ಬಹುಶಃ
ಅದನ್ನು ಮನಗಂಡೇ ಭವಿಷ್ಯದಲ್ಲಿ ತನ್ನ ನಾಗರಿಕರು ಆ ರೀತಿ ರೂಪಾಯಿಯ ಬಂಡಲ್ಲುಗಳನ್ನು ಹೊರದಿರಲಿ ಎಂದು "ಕ್ಯಾಷ್ ಲೆಸ್" ಇಕಾನಮಿಗೆ ಒತ್ತು ಕೊಟ್ಟಿರಬಹುದು.
ಇನ್ನು ಮಾಹಿತಿ ತಂತ್ರಜ್ಞಾನದ ಗುರುವೆಂದು ಬೀಗುವ ದೇಶದ ಆಡಳಿತ, ತನ್ನ ನಾಗರೀಕರ ಆಧಾರ್ ಕಾರ್ಡನ್ನು ಫೇಸ್ಬುಕ್ಕಿನಂತಹ ಸಾಮಾಜಿಕ ಮಾಧ್ಯಮ ತಾಣದ ಖಾತೆಗೂ ಜೋಡಿಸುತ್ತಿದೆ, ಫೇಸ್ಬುಕ್ ಬೇಡವೆಂದಿದ್ದರೂ ಸಹ! ಆಧಾರ್ ಅಂತಹ ಕಾರ್ಡಿನ ಗೋಪ್ಯತೆ, ಭದ್ರತೆಯನ್ನು ಹೀಗೆ ಸಾರಾಸಗಟಾಗಿ ಬೇಡವಾದ ಕಡೆಯಲ್ಲೆಲ್ಲಾ ಜೋಡಿಸುವ ಘನ ಉದ್ದೇಶವೇನು?! ಚೈನಾ ಮಾಡುತ್ತಿರುವುದು ಸಹ ಇದೇ.
ಬಹುಪರಾಕು (ಬಲ), ಬರೀ ಪುಕಾರು (ಎಡ) ಬಿಟ್ಟು ವಾಸ್ತವಿಕವಾಗಿ ಚಿಂತಿಸಿ. Dig deep, my friends. Dig deep!
ನೀರ ಮೇಲಣ ಗುಳ್ಳೆ ಒಡೆಯುವ ಸಮಯ ಹತ್ತಿರವಿದೆಯೋ ಅಥವಾ ಬಂಡಲ್ಲುಗಳನ್ನು ಹೊರಲು ಬೆನ್ನು ಮೂಳೆಯನ್ನು ಹುರಿಗಟ್ಟಿಸಬೇಕೋ ಆ 56 ಇಂಚಿನ ಗುರುವಿನ ಗುರು ವಿಶ್ವಗುರುವೇ ಬಲ್ಲ!
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ
No comments:
Post a Comment