ಪ್ರಧಾನಿ ನಿವಾಸ, ಪರಪ್ಪನ ವಿಳಾಸ

 ಒಬ್ಬ ಸಾಮಾನ್ಯ ರೈತನ ಮಗನನ್ನು ಪ್ರಧಾನಿ ಮಾಡಿದ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಅಂಬೇಡ್ಕರ್ ವಿರಚಿತ ಸಾಂವಿಧಾನಿಕ ಗಣತಂತ್ರವು ಆತನ ಮೊಮ್ಮಗನ ಲೈಂಗಿಕ ದೌರ್ಜನ್ಯಗಳಿಗೆ ತನ್ನ ನ್ಯಾಯಾಂಗದಡಿ "ವಿಚಾರಿಸಿ" ಶಿಕ್ಷೆ ವಿಧಿಸಬಲ್ಲುದೆ?!? 

ಮೇಟಿ, ಜಾರಕಿಹೊಳಿ, ಬ್ಲೂಬಾಯ್ಸ್ ಇತ್ಯಾದಿ ಏನಾದರೆಂದು ಇಲ್ಲಿ ಪರಾಂಭರಿಸಬಹುದು.

ಭಾರತೀಯ ಸಾಂವಿಧಾನಿಕ ವ್ಯವಸ್ಥೆಯು ಯಾವ ಊಳಿಗಮಾನ ವ್ಯವಸ್ಥೆಯನ್ನು ವಿರೋಧಿಸಿ ಪ್ರಜಾಪ್ರಭುತ್ವವನ್ನು ಅಳವಡಿಸಿದ್ದೇನೆನ್ನುತ್ತದೋ ಅದೇ "ಊಳಿಗಮಾನ ವ್ಯವಸ್ಥೆ"ಯು ಪ್ರಜಾಪ್ರಭುತ್ವವನ್ನು ಕಾಸಿಗಾಗಿ ಓಟು, ವಂಶಪಾಪಂಪರಿಕ ಟಿಕೆಟ್ ಹಂಚಿಕೆ ಇತ್ಯಾದಿಯಿಂದ ತನ್ನ ಶೃಂಗಾರಾಭರಣವಾಗಿಸಿ ಈಗಾಗಲೇ ಸಾಂವಿಧಾನಿಕ ಆಶಯವನ್ನು ಅಣಕವಾಗಿಸಿದೆ. 

ಈ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆಯನ್ನು ವಿಧಿಸಿದರೂ / ವಿಧಿಸದಿದ್ದರೂ ಈ ಘಟನೆಯು ಊಳಿಗಮಾನ ಭಾರತೀಯ ಪ್ರಜಾಪ್ರಭುತ್ವದ ಮುಕುಟಕ್ಕೆ ಕೋಹಿನೂರ್ ವಜ್ರವಾಗಲಿದೆ. ಏಕೆಂದರೆ ಈಗಾಗಲೇ ಸಾಕಷ್ಟು ಅಸಂವಿಧಾನಿಕ ಬಹುಪತ್ನಿತ್ವ, ಲೈಂಗಿಕ ದೌರ್ಜನ್ಯ/ಕಿರುಕುಳ, ಕುರ್ಚಿಗಾಗಿ ಕಾಮ, ಉದ್ಯೋಗಕ್ಕಾಗಿ ಸಂಭೋಗ, ಪದೋನ್ನತಿಗಾಗಿ ರತಿದಾಸ್ಯದ ಪಕ್ಷಾತೀತ ಮಣಿಗಳು ಆಗಲೇ ಈ ಮುಕುಟಮಣಿಯನ್ನು ಅಲಂಕರಿಸಿವೆ.  ಈಗ ಒಂದೊಮ್ಮೆ ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಾನವಾದ ಪ್ರಧಾನಿ ಹುದ್ದೆಯನ್ನು ಹೊಂದಿದ ವ್ಯಕ್ತಿಯ ಮೊಮ್ಮಗನ ಪ್ರಕರಣ "Icing on the Cake" ಎನ್ನುವಂತಾಗಲಿದೆ. 

ಈ ಪ್ರಕರಣದ ಆರೋಪಿಯ ಹೆಸರಲ್ಲೇ ಊಳಿಗಮಾನ ಪದವಾದ "ಗೌಡ" ಎಂದಿರುವುದು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿನ ಗೋಮುಖವ್ಯಾಘ್ರ ಊಳಿಗಮಾನ ಪ್ರಜಾಪ್ರಭುತ್ವದ ಗಮ್ಯದ ಹೊಳಹಾಗಿದೆ. ಇದು ಹಾಸನದ ಹಾರನಹಳ್ಳಿ ಕೋಡಿಮಠದ ಹೊತ್ತುಗೆಯಲ್ಲಿಯೂ ಇದೆ. ಚೆನ್ನಬಸವಣ್ಣನ ಕಾಲಜ್ಞಾನ ವಚಗಳಲ್ಲೂ ಇದೆ.

ಓದಿ ಅರ್ಥೈಸುವ ಕಾಲಜ್ಞಾನಿ ಮಾತ್ರ ಅಲ್ಲಿಲ್ಲ, ಇಲ್ಲಿದ್ದಾನೆ!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

Ra Ta Ee Ka Review by Kaliveera Kallimani

 Ra Ta Ee Ka ......


No reader shows a great enthusiasm in reading someone's AUTOBIOGRAPHY .....declaring it neither enhances our knowledge nor gives any thrill .it is the fate of each personal account contributed by the pen individuals .

  But...RAVISHANKAR HANJAGIMUTT....affectionately trimmed as RAVI HANJ ...hailed from DAVANGERE settled in CHICAGO...  brushed off my above opinion by mustering his spriteful memories inthe form of AUTO...titled RaTa Ee Ka . ..not just the basic letters of Kannada alphabet but it symbolises the writers prolific childhood memories and the way he passes through his further journey .

  Reading someone's autobiography naturally faces a question ..why should I go through the bundle of memories of a person whom I dont know ? But Ravi made us to avoid this question adroitly and Captivate The Reader to turn the huge amount of 384 pages  with a deep curiosity . He painted the picture of erstwhile Davangere with words and all necessary lines and minute shades . So ra ta ee ka blossomed as a master piece in the frame of a highly imaginative artist of letter world .

 Ravi emerged from a modest family of Davangere city the commercial hub of Central Karnataka ,looking attractive with moderate complexion ,fair tall round shape face with no beard or hair under is nose ,he is a person with a sense of humour , connoisseur  skill and sharp power of observation , he certainly has an opinion on everything he sees around him .

 Though it is a memoir of self remorse he successively turns it to belong everyone who go  through it . As the publisher attributes ..it is a familiar story of a curious child who give up observing the fundamental aspects of society and striving to find their place within the community , much like you, me, or any average individual .

       Here are some sample lines   ...

* Never hesitate to deliver harsh punches of truth .

* only a dalit can understand a dalit's pain .

* Limited consumption is relaxing over the limit is embalming .

* The glamour ,beauty and fame that seem to permanent were merely fleeting and transient .

* Romance is the privilege of the rich not the profession of the unemployed .The poor should be practical and prosaic (Oscar Wilde's practical principle )

* Hey ayyappa definitely you have three monkeys in your a** .

* I shifted my focus from rising my muscles to raising more monkeys in my a** .

* Come into my heart and be the reincarnation of everyday truth .


Wish to get more punchings...?? Please go through it .

Thank you Ravi Sir .

Kaliveera Kallimani .

Davanagere .

ಭಾವಿ ಪ್ರಧಾನಿಗಳ "ಸಂಪತ್ತು ಮರುಹಂಚಿಕೆ"

 ಈಗ ಕಾಂಗ್ರೆಸ್ಸಿನ ಭಾವಿ ಪ್ರಧಾನಿಗಳು "ಸಂಪತ್ತು ಮರುಹಂಚಿಕೆ" ಯಾನೆ Wealth Redistribution ಬಗ್ಗೆ ಫರ್ಮಾನು ಹೊರಡಿಸಿದ್ದಾರೆ. ಇದರ ಒಂದಂಶ ಪಿತ್ರಾರ್ಜಿತ ಆಸ್ತಿಯ ನಲವತ್ತು ಚಿಲ್ಲರೆ ಭಾಗ ಸರ್ಕಾರಕ್ಕೆ ಸಲ್ಲಬೇಕು ಎನ್ನುವುದು ಅತ್ಯಂತ ಸಮಂಜಸ ಸಾಮಾಜಿಕ ನ್ಯಾಯ ಸಿದ್ಧಾಂತವಾಗಿದೆ. ಈ ಅಂಶವನ್ನು ನನ್ನದೇ ನೆರೆಹೊರೆಯ ಸ್ಯಾಮ್ ಪಿತ್ರೋಡ ಅವರ ಮೂಲಕ ಹೇಳಿಸಿದ್ದಾರೆ. ಅಮೇರಿಕಾದಲ್ಲಿ ಯಾವುದೇ ಫೆಡರಲ್ ತೆರಿಗೆ ಇಲ್ಲದೆ ಸುಮಾರು ನೂರಹತ್ತು ಕೋಟಿ ರೂಪಾಯಿಯಷ್ಟು ಪಿತ್ರಾರ್ಜಿತ ಆಸ್ತಿಯನ್ನು ಹೊಂದಬಹುದು. ಅದಕ್ಕಿಂತ ಹೆಚ್ಚಾದರೆ ತೆರಿಗೆ ಕಟ್ಟದೆ ಪಡೆದುಕೊಳ್ಳಲು ಟ್ರಸ್ಟ್ ರೂಪದ ಹಲವು ಮಾರ್ಗೋಪಾಯಗಳಿವೆ. ಇರಲಿ, ಒಟ್ಟಾರೆ ಸಾಮಾಜಿಕ ನ್ಯಾಯಕ್ಕಾಗಿ ಪಿತ್ರಾರ್ಜಿತ ಆಸ್ತಿ ತೆರಿಗೆ ಅವಶ್ಯ ಎಂದು ಕಾಂಗ್ರೆಸ್ ಪಕ್ಷ ನಿರ್ಧರಿಸಿರುವುದು ಅತ್ಯಂತ ಸ್ವಾಗತಾರ್ಹ. ಆದರ್ಶ ಉದಾರವಾದಿಯಾದ ನಾನು ಇದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.


ಇಂತಹ ಸಾಮಾಜಿಕ ನ್ಯಾಯವನ್ನು ಯಾವುದೇ ಅಧಿಕಾರವಿಲ್ಲದೆ ಕೇವಲ ಆದರ್ಶದ ಮೇಲೆ ಮಹಾತ್ಮ ಗಾಂಧಿ, ವಿನೋಬಾ ಭಾವೆ ಮುಂತಾದ ಸಾಮಾಜಿಕ ನಾಯಕರು ಜನರನ್ನು ಒಲಿಸಿ ಜನರ ಆಸ್ತಿಯನ್ನು ಸಮಾಜಕ್ಕೆ ಕೊಡಿಸಿದ ಇತಿಹಾಸವೇ ನಮ್ಮಲ್ಲಿದೆ. ಇವರ ಕರೆಗೆ ಓಗೊಟ್ಟು ಅನೇಕರು ತಮ್ಮ ಆಸ್ತಿಯನ್ನು ಸಮಾಜಕ್ಕೆ ಧಾರೆ ಎರೆದುದನ್ನು ನೀವೆಲ್ಲರೂ ಕೇಳಿದ್ದೀರಿ, ಓದಿದ್ದೀರಿ. ಭಾವೆಯವರ ಭೂದಾನ ಕರೆ ದೇಶವನ್ನೇ ಸಂಚಲಿಸಿದ್ದಿತು.


ಮಾನ್ಯ ರಾಹುಲ್ ಗಾಂಧಿಯವರು ಅಧಿಕಾರಕ್ಕೆ ಬರುತ್ತಾರೋ ಇಲ್ಲವೋ ಅದನ್ನು ಬದಿಗಿರಿಸಿ ಆ ಮಹನೀಯರುಗಳಂತೆ ಈ ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯವನ್ನು ಸ್ವಯಂ ಆಗಿ ಮತ್ತು ತಮ್ಮ ಪಕ್ಷದ ಮುಖಂಡರಲ್ಲಿ ಅಳವಡಿಸಲು ಅವರಿಗೆ ಯಾವುದೇ ಅಭ್ಯಂತರ ಇಲ್ಲ. ಅದಕ್ಕೆ ಯಾವ ಅಧಿಕಾರವೂ ಬೇಕಿಲ್ಲ.


ಹಾಗಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ತಮ್ಮ ಪಿತ್ರಾರ್ಜಿತ ಆಸ್ತಿಯ ನಲವತ್ತು ಚಿಲ್ಲರೆ ಪ್ರತಿಶತ ಭಾಗವನ್ನು ದೇಶಕ್ಕೆ ಸಮರ್ಪಿಸದಿದ್ದರೂ ಕನಿಷ್ಠ ಪಕ್ಷ ಕಾಂಗ್ರೆಸ್ ಪಕ್ಷದ ಚುನಾವಣಾ ಅಭ್ಯರ್ಥಿಗಳು ತಾವು ಘೋಷಿಸಿಕೊಂಡಿರುವ ತಮ್ಮ ಆಸ್ತಿಯ ನಲವತ್ತು ಚಿಲ್ಲರೆ ಭಾಗವನ್ನು ರಾಷ್ಟ್ರಕ್ಕೆ ಸಮರ್ಪಿಸಿ ಒಂದು ಮೇಲ್ಪಂಕ್ತಿ ಹಾಕಿದರೆ ಅವರ ಪಕ್ಷದ ಎಲ್ಲಾ ಅಭ್ಯರ್ಥಿಗಳೂ ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ. ತಮ್ಮ ಹೆಸರಿನಲ್ಲಿರುವ ಗಾಂಧಿ ಮಹಾತ್ಮರಂತೆ ರಾಹುಲ್ ಮಹಾತ್ಮರೆನಿಸಿ ತಮ್ಮ ಪಕ್ಷದ ಅಭೂತಪೂರ್ವ ಗೆಲುವಿನ ರೂವಾರಿಯಾಗುತ್ತಾರಲ್ಲದೆ ಮೋದಿ ಎಂಬ ಮಾಯೆಯ ಅಣುರೇಣುತೃಣ ಛಾಯೆಯೂ ಇರದಂತೆ ಮೋಡಿಯನ್ನು ಮಾಯವಾಗಿಸಬಲ್ಲರು.


ಅವರ ಪಕ್ಷದವರು ಹೇಳುವ "ದೇಶಕ್ಕೆ ಅಂಟಿದ ಶನಿ"ಯನ್ನು ರಾಹುಲ್ ಬಾಬಾ ತಮ್ಮ ಸಿದ್ಧಾಂತ ಬದ್ಧತೆ ಮೆರೆದು, "ನುಡಿದಂತೆ ನಡೆದ ಸರ್ಕಾರ ನಮ್ಮದು" ಎನ್ನುವ ಉದ್ಘೋಷದ ಪಕ್ಷವನ್ನು ದೆಹಲಿಯಲ್ಲಿ ಪ್ರತಿಷ್ಠಾಪಿಸಿದರೆ.....ಆಹಾ!!! ನ ಭೂತೋ ನ ಭವಿಷ್ಯತೋ....ಭಾರತ ಭಾಗ್ಯ ವಿಧಾತ ಹ!!!!


ಬಾಬಾ ಸಂಚಲಿಸುವರೋ?! ಸ್ಖಲಿಸುವರೋ?!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಹಣಕಾಸು ಆಯೋಗ ಯಾನೆ वित्त आयोग ಯಾನೆ Finance Commission

 ರಾಜ್ಯದಲ್ಲಿ ಸಂಗ್ರಹಿಸುವ GST ಯ ೫೦% ರಾಜ್ಯದ್ದಾದರೆ, ೫೦% ಕೇಂದ್ರದ್ದು. ಕೇಂದ್ರದ ಭಾಗದ ೪೨% ಭಾಗ ಎಲ್ಲಾ ರಾಜ್ಯಗಳ ಅಭಿವೃದ್ಧಿಗೆ ಹಣಕಾಸು ಆಯೋಗದ ನಿರ್ದೇಶನದಂತೆ ಒಂದು ಸಾಮೂಹಿಕ ಖಾತೆಗೆ ಹೋಗುತ್ತದೆ. ಇದನ್ನು ಹೇಗೆ ವ್ಯಯಿಸಬೇಕು ಎಂಬುದನ್ನು ನಿರ್ಧರಿಸುವುದು ಸಹ ಅದೇ ಹಣಕಾಸು ಆಯೋಗ ಯಾನೆ वित्त आयोग ಯಾನೆ Finance Commission. ಇದು ಒಂದು ಸಾಂವಿಧಾನಿಕ ಸಂಸ್ಥೆ.

 

ಅಂಬೇಡ್ಕರ್ ಹೇಗೆ ಹಿಂದುಳಿದವರಿಗೆ ಮೀಸಲಾತಿ ಕೊಟ್ಟು ಸಮಾನತೆ ತಂದರೋ, ಸಿದ್ಧರಾಮಯ್ಯ ಹೇಗೆ ಅಹಿಂದದವರಿಗೆ ಸೌಭಾಗ್ಯಗಳನ್ನು ಕೊಟ್ಟರೋ ಅದೇ ರೀತಿ ಹಣಕಾಸು ಆಯೋಗ ರಾಜ್ಯಗಳಿಗೆ ತನ್ನ "ಹಿಂದುಳಿದ/ಮುಂದುವರಿದ" ಸೂತ್ರದ ಅನ್ವಯ ಹಣ ಕೊಡಿಸುತ್ತದೆ. ಇದನ್ನು ಸಿದ್ದರಾಮಯ್ಯ ಅಂಡ್ ಕಂಪೆನಿ ಮತ್ತು ಅವರ ಪಕ್ಷದ ಭಾವಿ ಪ್ರಧಾನಿ ಎನ್ನುವ ರಾಹುಲ್ ಹೇಗೆ ರಾಜ್ಯದ ನೂರು ರುಪಾಯಿ ತೆರಿಗೆಯಲ್ಲಿ ಕೇವಲ ೧೩ ರುಪಾಯಿ ಅಷ್ಟೇ ವಾಪಸ್ ಬರುತ್ತಿದೆ ಎನ್ನುತ್ತಿದ್ದಾರೆ?!?! 


ಅಂದರೆ "ಹಿಂದುಳಿದ/ಮುಂದುವರಿದ" ಎಂದು ನೋಡದೆ ಹಣಕಾಸು ಆಯೋಗ ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಹಂಚಬೇಕು ಎನ್ನುವುದು ಇವರ ವಾದವಾದರೆ, ಅದು ಅಂಬೇಡ್ಕರ್ ಅವರ ಸಾಂವಿಧಾನಿಕ ಮೀಸಲಾತಿ ಮತ್ತು ಇವರದೇ ಪಕ್ಷದ ಸಿದ್ಧಾಂತಗಳಿಗೆ ತದ್ವಿರುದ್ಧ.


ಈ ವಾಸ್ತವಿಕ ಅಂಶದ ಮೂಲಕ ನೋಡಿದರೆ, ಯಾರು ಸಂವಿಧಾನ ವಿರೋಧಿಗಳು? ಯಾರು ಮೀಸಲಾತಿ ವಿರೋಧಿಗಳು? ಯಾರು ಅಹಿಂದ ವಿರೋಧಿಗಳು? 


ಹೀಗೆ ರಾಜಾರೋಷವಾಗಿ ಸುಳ್ಳನ್ನು ನೂರು ಬಾರಿ ಸತ್ಯವೆಂದು ಹೇಳುವ, ಬುದ್ಧಿಜೀವಿಗಳು ಹೀಯಾಳಿಸುವ "ಗೋಬೆಲ್ಸ್" ತಂತ್ರವನ್ನು ಅವರ ಆರಾಧ್ಯ ದೈವವೇ ಬಳಸಿ ಇತರರ ಮೇಲೆ ಗೂಬೆ ಕೂರಿಸುತ್ತಿರುವಾಗ,  ಇದನ್ನೆಲ್ಲಾ ವಿವರಿಸುವ ಜಾಣತನ ಬಿಜೆಪಿಗರಲ್ಲಿ ಇದೆಯೇ?!?!


ಖಂಡಿತವಾಗಿ ಇಲ್ಲ. ಏಕೆಂದರೆ ರಾಜ್ಯದ ಕಾಂಗ್ರೆಸ್ಸಿಗರು ಬಿಜೆಪಿಗರು ಎಲ್ಲರೂ ಕೇವಲ ಪಂಚಾಯಿತಿ ಸದಸ್ಯರಾಗಬಲ್ಲ ಅರ್ಹತೆ ಉಳ್ಳವರು. ಇಂಥವರು ರಾಜ್ಯದ ಮುಖ್ಯಮಂತ್ರಿ, ಮಂತ್ರಿ ಎಲ್ಲಾ ಆದರೆ ಏನಾಗುವುದೋ ಅದೇ ರಾಜ್ಯದಲ್ಲಿ ಕಳೆದ ಐವತ್ತು ವರ್ಷದಿಂದ ಆಗುತ್ತಿರುವುದು. ಇನ್ನು ಬುದ್ದಿಜೀವಿಗಳ ಗೋಬೆಲ್ಸ್, ನೆರೂಡ, ಕಾಫ್ಕಾ ಉಲ್ಲೇಖ..... ವಾಡ್ಕಾ (ವೋಡ್ಕಾ - ಅವಾರ್ಡು) ಅಂಡ್ ಸಿಲೋಡ್ಕಾ(ಮೀನು - ಪ್ರಾಧಿಕಾರ)!


ಏಕೆಂದರೆ,


ಶಿವನಿಗೈದು ಮುಖ, ಭಕ್ತನಿಗೈದು ಮುಖ.

ಆವುವಾವುವೆಂದರೆ:

ಗುರುವೊಂದು ಮುಖ, ಲಿಂಗವೊಂದು ಮುಖ, ಜಂಗಮವೊಂದು ಮುಖ,

ಪಾದೋದಕವೊಂದು ಮುಖ, ಪ್ರಸಾದವೊಂದು ಮುಖ.

ಇಂತೀ ಪಂಚಮುಖವನರಿಯದ

ವೇಶಿ, ದಾಸಿ, ಸುಂಕಿಗ, ಮಣಿಹಗಾರ, ವಿದ್ಯಾವಂತ

ಇಂತೀ ಐವರಿಗೆ ಲಿಂಗವ ಕಟ್ಟಿದಡೆ

ಗುಡಿಯ ಮುಂದಣ ಶೃಂಗಾರದ ಗಂಟೆ, ಎಮ್ಮೆಯ ಕೊರಳಗಂಟೆ

ಕೊಟ್ಟಿಯ ಮೆಳೆಯೊಳಗೆ ಇಟ್ಟು ಸಿಕ್ಕಿದ ಕಲ್ಲು !

ಲಿಂಗ ವಿಭೂತಿ ರುದ್ರಾಕ್ಷಿ ಇವ ಮಾರಾಟಕ್ಕೆ ಹೇರಿಕೊಂಡು ತಿರುಗುವ

ಎತ್ತು ಕತ್ತೆಗೆ ಮುಕ್ತಿಯುಂಟೆ ? ಕೂಡಲಚೆನ್ನಸಂಗಮದೇವಾ

--- ಚನ್ನಬಸವಣ್ಣ


ಇಷ್ಟೇ, ಇಷ್ಟೇ, ಇಷ್ಟೇ, ಭಾರತೀಯ ಪ್ರಜಾಪ್ರಭುತ್ವ!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಆಗಸ್ಟ್ ೧೫ ೧೯೪೭ ಭೌಗೋಳಿಕವಾಗಿ ದೇಶವನ್ನು ವಿಭಜಿಸಿದರೆ, ಜನವರಿ ೨೬ ೧೯೫೦ ಮಾನಸಿಕವಾಗಿ ದೇಶವನ್ನು ವಿಭಜಿಸಿದೆ.

 ಆಗಸ್ಟ್ ೧೫ ೧೯೪೭ ಭೌಗೋಳಿಕವಾಗಿ ದೇಶವನ್ನು ವಿಭಜಿಸಿದರೆ, ಜನವರಿ ೨೬ ೧೯೫೦ ಮಾನಸಿಕವಾಗಿ ದೇಶವನ್ನು ವಿಭಜಿಸಿದೆ.

ಸಾಮಾಜಿಕ ನ್ಯಾಯವನ್ನು ಅನೇಕ ದೇಶಗಳು ಸಮಾನ ಸಾಮಾಜಿಕ ನ್ಯಾಯವಾಗಿ ೧೯೫೦ಕ್ಕೂ ಮುಂಚೆಯೇ ಸಾಂವಿಧಾನಿಕವಾಗಿ ಅನುಷ್ಠಾನಗೊಳಿಸಿದ್ದವು. ಆದರೆ ಭಾರತೀಯ ಸಾಮಾಜಿಕ ನ್ಯಾಯದ ಸಾಂವಿಧಾನಿಕ ಉದ್ದೇಶದಲ್ಲಿ ವ್ಯಕ್ತಿಗತ ಉದ್ದೇಶವೇ ದೇಶದ ಸ್ವಾತಂತ್ರ್ಯದಷ್ಟೇ ವ್ಯಕ್ತಿಗತ ಉದ್ದೇಶವಾಗಿತ್ತು. ಅದ ಕಾರಣ, ದೇಶದ ಹಿತಾಸಕ್ತಿಗಿಂತ ವ್ಯಕ್ತಿಗತ ಪ್ರತಿಷ್ಠೆಯೇ ಘನವಾಗಿ ಇಂದಿನ ಎಲ್ಲಾ ಭಾರತೀಯ ಚುನಾವಣೆಗಳೂ, ಅಭ್ಯರ್ಥಿಗಳೂ, ಮತದಾರರೂ ಆಯಾ ಕಾರಣವನ್ನು ಪ್ರತಿಬಿಂಬಿಸುತ್ತಿ(ವೆ)ದ್ದಾರೆ, ವಿಜೃಂಭಿಸುತ್ತಿದ್ದಾರೆ.
ಹಾಗಾಗಿಯೇ ಇಂದು ಭಾರತದ ಪ್ರತಿಯೊಂದು ಸಾಮಾಜಿಕ ಹಂತದಲ್ಲಿ ವ್ಯಕ್ತಿಪೂಜೆಯೇ ಪ್ರಮುಖವಾಗಿರುವುದು. ಇದು ಮಹಾತ್ಮದಲ್ಲಿ, ಜೈಭೀಮದಲ್ಲಿ, ಬಡವರ ತಾಯಿಯಲ್ಲಿ, ರೈತನ ಮಗದಲ್ಲಿ, ಮೋಡಿಯಲ್ಲಿ, ರಾಜಾಹುಲಿಯಲ್ಲಿ, ಟಗರುವಿನಲ್ಲಿ, ಹೊನ್ನಾಳಿ ಹೋರಿಯಲ್ಲಿ, ಗಣಿಧಣಿಯಲ್ಲಿ, ದೀದಿಯಲ್ಲಿ, ಪುರುಚ್ಚಿ ತಲೈವಿ/ತಲೈವದಲ್ಲಿ...... ಬಿಟ್ಬಂದಹಳ್ಳಿ ಬಂಧುವಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಕಣ್ಣು ಕೋರೈಸುವುದು.
ಏಳಿ ಎದ್ದೇಳಿ........!

ಹಗಲು ಇರುಳಾಗ್ತದs, ಇರುಳು ಹಗಲಾಗ್ತದs. ತುಪ್ಪಳ ಮೈಮ್ಯಾಲಾಗ್ತದೋs

 "ಹಗಲು ಇರುಳಾಗ್ತದs, ಇರುಳು ಹಗಲಾಗ್ತದs. ತುಪ್ಪಳ ಮೈಮ್ಯಾಲಾಗ್ತದೋs ಧೋs ಉಧೋs" ಎಂದು ಗೊರವಜ್ಜ ನಿಟ್ಟುಸಿರುಯ್ದು ಮಗ್ಗಲು ಬದಲಿಸಿದ.

ಪಕ್ಕದಲ್ಲೇ ಮಲಗಿದ್ದ ಮೊಮ್ಮಗ ಮೈಲಾರಿ, "ಯಜ್ಜಾ, ಹಾಂಗಂದ್ರ ಯಾಣ!?" ಎಂದು ಪ್ರಶ್ನಿಸಿದ.
ಉತ್ತರವಾಗಿ ಗೊರವಜ್ಜ ಒಂದು ಸುಧೀರ್ಘ ನಿಟ್ಟುಸಿರು ಹೊಮ್ಮಿಸಿ ಹದವಾಗಿ ಕೆಮ್ಮಿದನಷ್ಟೇ.
ಜಾಲಿ ಮರದ ತುದಿಯಲ್ಲಿನ ಹಸಿರು ಕಂಡ ಆಡಿನಂತೆ ಉತ್ತರ ಬಾರದ ಕಾರಣ ಮೈಲಾರಿಯ ಕುತೂಹಲದ ಮಾರಿ ಮುಗಿಲ ಕಡೆ ಏರಿತ್ತು.
"ಮುತ್ಯಾ ಏನಂದನಬೇs?" ಎಂದು ಆ ತುದಿಯಲ್ಲಿ ಮಲಗಿದ್ದ ತನ್ನ ಅಜ್ಜಿಯನ್ನು ಕೇಳಿದ.
ಯಾವುದೋ ಕನಸಿನ ಬೇಗುದಿಯಲ್ಲಿ ಕೈಯಾಡಿಸುತ್ತಾ ಮಲಗಿದ್ದ ಮುದುಕಿ "ಹಾಂ ಹೂಂ" ಎಂದು ನರಳಿದಳೇ ಹೊರತು ಉತ್ತರಿಸಲಿಲ್ಲ.
ಮರುದಿನ ಎದ್ದವನೇ ಮೈಲಾರಿ, "ಯಜ್ಜಾ, ಹಗಲು ಇರುಳಾಗ್ತದs, ಇರುಳು ಹಗಲಾಗ್ತದs. ತುಪ್ಪಳ ಮೈಮ್ಯಾಲಾಗ್ತದೋs ಧೋs ಉಧೋs ಅಂದ್ಯಲ್ಲs ರಾತ್ರೆ! ಹಂಗಂದ್ರ ಯಾಣ?"
ಮುತ್ಯಾ ಏನೂ ಹೇಳಲಿಲ್ಲ. ರೊಟ್ಟಿ ಬಡಿಯುತ್ತಿದ್ದ ಮುದುಕಿ, "ನಿಮ್ಮಜ್ಜನ ಮೈಮ್ಯಾಲ ದೇವ್ರು ಬಂದು ಹಿಂಗ ಕಾರಣಿಕ ನುಡಿಸಿರ್ತಾನ. ಅದೂ ಅವಗ ನೆಪ್ಪಿರುದಿಲ್ಲ. ಹಂಗ ಬಡಬಡಿಸಿರ್ತಾನ, ಆsಳs. ಅದ್ರಾಗರ ಏನೈತಿ ಒಗಟು? ಹಗಲು ರಾತ್ರಿ ಆಗೂದs, ರಾತ್ರಿ ಹಗಲು ಆಗೂದ ಅಲ್ಲೇನ್!" ಎಂದು ಸಮಾಧಾನ ಹೇಳಿದಳು.
"ಹಾಂಗ...! ಆದ್ರ, ತುಪ್ಪಳ ಮೈಮ್ಯಾಲಾಗ್ತದೋs" ಅಂದ್ರ?
"ಏಯ್ ಅವ್ನ ದುಪ್ಪಡಿ ಜಾರಿತ್ತೇನೋ ನೆನಸ್ಕೊಂಡು ಆಂದಾನ ಆಳs" ಎಂದಳು.
ಆದರೂ ಆ ಒಗಟಿನಂತಹ ಕಾರಣಿಕ ಮೈಲಾರಿ ತಲ್ಯಾಗ ಉಳಕಂತು.
ಕಾಲ ಉರುಳಿತು.
***
ಫೆಬ್ರುವರಿಯ ಸುಡು ಬಿಸಿಲಿನ ಭಾರತದಿಂದ ಗಡಗಡ ನಡುಗುವ ಚಳಿಯ ನ್ಯೂಜೆರ್ಸಿಯಲ್ಲಿ ಇಳಿದಿದ್ದ ಮೈಲ್ಸ್ ಅವನ ಹೆಂಡತಿ ಲಿಲ್ಲಿ ತಂದಿದ್ದ ಬೆಚ್ಚನೆಯ ಸ್ವಿಸ್ ಕುರಿ ತೊಗಲಿನ ಜ್ಯಾಕೆಟ್ ಹೊದ್ದು ಮನೆಗೆ ಬಂದಿದ್ದ. ಜೆಟ್ ಲ್ಯಾಗಿನ ಪರಿಣಾಮದಿಂದ ಮಲಗಿದ್ದ ಮೈಲ್ಸ್ ದಿಢೀರನೆ, "ಹೋಲಿ ಫಕ್!" ಎನ್ನುತ್ತಾ ಎದ್ದು ಕುಳಿತ.
ಅವನ ಕನಸಲ್ಲಿ ಗೊರವಜ್ಜನ ಒಡಪು, "ಹಗಲು ಇರುಳಾಗ್ತದs, ಇರುಳು ಹಗಲಾಗ್ತದs. ತುಪ್ಪಳ ಮೈಮ್ಯಾಲಾಗ್ತದೋs ಧೋs ಉಧೋs" ಒಡೆದಿತ್ತು!
ಮೈಲಾರಿ ಮೈಲ್ಸ್ ಆಗಿದ್ದ. ಹಗಲು ರಾತ್ರಿಯಾಗಿತ್ತು. ತುಪ್ಪಳ ಮೈಮೇಲಿತ್ತು.
ದೂರದಲ್ಲಿ ಎಲ್ಲಿಂದಲೋ ಯಾರೋ, "ಛಾಂಗು ಭಲೇ ಛಾಂಗು ಭಲೇ!" ಎನ್ನುವ ದನಿ ಗಾಳಿಯಲ್ಲಿ ತೇಲಿ ಬಂದಂತಾಯಿತು.

I AM The God - ಕಾರ್ಲ್ ಮಾರ್ಕ್ಸ್ ಹೇಳಿದ್ದೇನು?

 ಯಹೂದಿ ದೇವರು - Yahweh ಅಂದರೆ “I AM!"

ಯಹೂದಿಗಳ ನಾನೂರು ವರ್ಷಗಳ ಈಜಿಪ್ಟ್ ಗುಲಾಮಿಕೆ ವಿರುದ್ಧ ಕೆಲಸ ಮಾಡಿದ್ದು ಧರ್ಮ.

ಕ್ರಿಶ್ಚಿಯನ್ ದೇವರು - I AM The God. 

ಬಡವರ ಶೋಷಣೆ ವಿರುದ್ಧ ಕೆಲಸ ಮಾಡಿದ್ದು ಧರ್ಮ.

 ಇಸ್ಲಾಂ ದೇವರು - Al Ilah ಅಂದರೆ - The God. 

ಅರಬರ ಶೋಷಣೆ ನೀಗಿಸಿ ಸಮಾನತೆ ತರಲು ಕೆಲಸ ಮಾಡಿದ್ದು ಧರ್ಮ.

ಹಿಂದೂ ದೇವರು - ಆತ್ಮಲಿಂಗ...ಅರಿವೇ ಗುರು/ವಸುಧೈವ ಕುಟುಂಬಕಂ/ಯದಾಯದಾಹಿ ಧರ್ಮ್ಯಸ್ಯದಲ್ಲಿ ಕೆಲಸ ಮಾಡಿದ್ದು ಧರ್ಮ. 

ಹೀಗೆ ಅನ್ಯಾಯದ ವಿರುದ್ಧ ಜಗತ್ತಿನಾದ್ಯಂತ ಜನಸಾಮಾನ್ಯರು ಒಂದು ಕಾಲಘಟ್ಟದಲ್ಲಿ ಸಂಘಟಿತರಾಗಿ ಎದ್ದು ನಿಂತದ್ದು ಧರ್ಮದ ಛಾಯೆಯಲ್ಲಿ!

ಹಾಗಾಗಿಯೇ ಕಾರ್ಲ್ ಮಾರ್ಕ್ಸ್ ಹೇಳಿದ್ದು: "Religion is the opium of the masses, its the hope of the hopeless world, its the distress of the distressed, its the spirit of the spiritless situation ; if you think of replacing it you will have to replace it with the same hope which religion offers them"

ನಂತರದ ಕಾಲಘಟ್ಟಗಳಲ್ಲಿ ಜನರು ಸಂಘಟಿತರಾಗಿದ್ದು ಕ್ರಾಂತಿ, ಚಿಂತನೆಯ ಪಂಥ....ನಂತರ ಅಫೀಮಿಗಿಂತ ಮಿಗಿಲಾಗಿ ಅಮಲಾದ ಪ್ರಜಾಪ್ರಭುತ್ವ. ಈಗ ಈ ಪ್ರಜಾಪ್ರಭುತ್ವದಲ್ಲಿ ಮತ್ತೆ ಧರ್ಮ ಬಂದಿದೆ, ಪುನರಪಿ ಜನನಂ ಪುನರಪಿ ಮರಣಂ ಎನ್ನುವ ಅದೇ ಧಾರ್ಮಿಕ ನಂಬುಗೆಯಂತೆ!

ಈಗ ನೀವೆಲ್ಲರೂ ಜೂಡಾಯಿಸಂನ I am ಆಗಿ ಇಸ್ಲಾಂನ The God ಆಗಿ, ಕ್ರಿಶ್ಚಿಯನ್ನರ I am The God ಆಗಿ ಹಿಂದುತ್ವದ ಅರಿವೇ ಗುರು ಯಾನೆ ಆತ್ಮಲಿಂಗ/ಸ್ವಯಂಭುಲಿಂಗವಾಗಿ ಮುಕ್ಕೋಟಿಗಳಾಗಿ ವಸುದೈವ ಕುಟುಂಬಕಂ ಅನ್ನು ಉಳಿಸಿ ಎಂಬುದೇ ಜನತಂತ್ರವಾಗಿದೆ! ಚಿಂತಿಸಿ ನಿಮ್ಮ ಮತ ಚಲಾಯಿಸಿ. ಏಕೆಂದರೆ ನಾನೇ ದೇವರು, ನಾನೇ ಮಾರ್ಗ! ಇಲ್ಲಿ ನಾನೇ ಎಂದರೆ ನಿಮ್ಮನ್ನು ನೀವೇ "ನಾನೇ" ಎಂದುಕೊಳ್ಳಿ, ಬರೆದ ರವಿ ಹಂಜ್ ಯಾ ಕೈಯೆತ್ತಿ ನಿಮ್ಮ ಕಡೆ ದೃಷ್ಟಿ ಬೀರುವ ಯಾವುದೇ ಮೂರ್ತಿ ಯಾ ಅಮೂರ್ತ ಕಲ್ಪನೆಯನ್ನಲ್ಲ.

ಅಂದ ಹಾಗೆ ಧರ್ಮಕಾರಣದ ಪಕ್ಷ ಗದ್ದುಗೆಗೆ ಏರಲು ಪ್ರಮುಖ ಕಾರಣ ಅಪಾರ ಕೈಕೆಲಸದ ಪಕ್ಷ. ಉಳಿದಂತೆ ಸಂಯುಕ್ತ ದಳ, ಜಾತ್ಯಾತೀತ ದಳ, ಆಕಾಲಿ ದಳ, ನಿಕಾಲಿ ದಳ, ಅಣ್ಣ, ಅಪ್ಪ, ಮಕ್ಕಳ್, ದೇಶಂ, ಆದಿ, ವಾದಿ, ಲೀಗು, ಲಾಗು, ಆಪು, ಹಮ್ಮು...ಇತ್ಯಾದಿ ಎಲ್ಲಾ ಚಪ್ಪನ್ನೈವತ್ತಾರು ಪಕ್ಷಗಳೂ ಈವರೆಗೆ ಇನ್ನೂ ತಮ್ಮನ್ನು ತಾವು ಸಮರ್ಥ ವಿರೋಧ ಪಕ್ಷವಾಗಿ ಸಾಬೀತು ಮಾಡಿಕೊಂಡಿಲ್ಲ. ಅವು ಸಾಬೀತು ಪಡಿಸಿಕೊಳ್ಳುವವರೆಗೆ ಧರ್ಮಕಾರಣದ ಮೋಡಿ ಅನವರತ! 

ಕ್ಯೂನ್ ಕೀ ಕಮಲೇ "ಕಮಾಲೋ"ತ್ಪತ್ತಿಹಿ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ