ಹರೇ ಹರೇ ಕೃಷ್ಣ ಕೃಷ್ಣ! ಅಲ್ ಲಾಹ್ ಹು ಅಕ್ಬರ್!

ಸುಮಾರು ಹದಿನೈದು ವರ್ಷಗಳ ಹಿಂದೆ ತಂತ್ರಜ್ಞರ ಉದ್ಯೋಗ ನಗರಿಯಾದ ಬೆಂಗಳೂರಿಗೆ ನಾನು ಆಗಷ್ಟೇ ಬಂದು ಸೇರಿದ್ದೆ. ನನ್ನ ರೂಮಿನ ಪಕ್ಕದ ಕಟ್ಟಡದ ಮಾಲೀಕರ ಮಗ ಆಗಷ್ಟೇ ಪಿ.ಯು.ಸಿ.ಗೆ ಸೇರಿದ್ದ. ಅವನು ಅವನ ಸ್ನೇಹಿತನಾದ ದರ್ಶನ್ ಎಂಬುವನೂ ನನ್ನನ್ನು ಒಂದು ರೀತಿಯಲ್ಲಿ ಹಿರಿಯ ಸ್ನೇಹಿತನಂತೆ ಕಾಣುತ್ತಿದ್ದರು. ಆಗಷ್ಟೇ ಬಾಲ್ಯದ ಪೊರೆ ಕಳಚಿ ಹದಿಹರೆಯಕ್ಕೆ ಕಾಲಿಡುತ್ತಿದ್ದ ಆ ಹುಡುಗರು ಮುಕ್ತವಾಗಿ ಹರ್‍ಅಟಲು, ಸಲಹೆ ಪಡೆಯಲು ನನ್ನನ್ನು ನಂಬಿದ್ದರು. ಸಾಧಾರಣವಾಗಿ ಇತರೆ ಹದಿಹರೆಯದ ಹುಡುಗರಂತೆಯೇ ಇದ್ದ ಈ ಹುಡುಗರು ಎರಡನೇ ಪಿ.ಯು.ಸಿಗೆ ಬರುವಲ್ಲಿಗೆ ಆಧ್ಯಾತ್ಮ, ದೇವರು, ತತ್ವಚಿಂತನೆಯಂತಹ ವಿಷಯಗಳನ್ನೆತ್ತಿ ನನ್ನೊಂದಿಗೆ ಸಂವಾದದಲ್ಲಿ ತೊಡಗುತ್ತ ನನ್ನನ್ನು ಇಸ್ಕಾನ್ ಗೆ ಬನ್ನಿ ಎನ್ನಲಾರಂಭಿಸಿದರು. ಸಾಮಾನ್ಯವಾಗಿ ಕದ್ದು ಬಿಯರ್ ಹೀರುವ, ಸಿಗರೇಟ್ ಸೇದುವ ಅಥವಾ ಆ ಹುಡುಗಿ ಈ ಹುಡುಗಿ, ಲವ್ವು ಎಂದು ಇತರೆ ಹದಿಹರೆಯದವರಂತೆ ಹರಟಬೇಕಿದ್ದ ಆ ಹುಡುಗರು ಈ ರೀತಿ ಆಧ್ಯಾತ್ಮಿಕ ವಿಷಯಗಳನ್ನೆತ್ತಿ ಸಂವಾದದಲ್ಲಿ ತೊಡಗುವುದು ಕೊಂಚ ಅಭಾಸವೆನಿಸಿತು. ಆದರೆ ಅವರ ಪೋಷಕರು ನಮ್ಮ ಹುಡುಗರು ಇತರೆಯವರಂತೆ ಕಾಲೇಜು ಕನ್ಯೆಯರಲ್ಲಿ ಅನುರಕ್ತರಾಗದೆ ದೇವರಲ್ಲಿ ಅನುರಕ್ತರಾಗಿರುವುದು ತಮ್ಮ ಪೂರ್ವಜನ್ಮದ ಪುಣ್ಯವೇ ಎಂದು ನನ್ನೊಂದಿಗೆ ಕೊಚ್ಚಿಕೊಳ್ಳತೊಡಗಿದರು.

ಈ ಹುಡುಗರೊಂದಿಗೆ ತರ್ಕಿಸುತ್ತ ನನಗೆ ಅವರುಗಳಿಗೆ ವ್ಯವಸ್ಥಿತವಾಗಿ "ಬ್ರೇನ್ ವಾಷ್" ಆಗುತ್ತಿರುವುದು ಮನದಟ್ಟಾಯಿತು. ಇವರನ್ನು ಕೊಂಚ ಪ್ರಾಕ್ಟಿಕಲ್ ದಾರಿಗೆ ತರೋಣವೆಂದು ನಾನೂ ಕೂಡ ಈ ಹುಡುಗರ ವಾದವನ್ನು ಕೊಂಚ ಆಸಕ್ತಿಯಿಂದ ಆಲಿಸತೊಡಗಿದೆನು. ಹಾಗೆಯೇ ಅವರ ಇಸ್ಕಾನ್ ಗುರುಗಳ ಭೋಧನೆಯ ಕೆಲ ಹುಳುಕುಗಳನ್ನೆತ್ತಿ ಪ್ರಶ್ನಿಸಿದಾಗ ಅವಾಕ್ಕಾಗುತ್ತಿದ್ದ ಆ ಹುಡುಗರು ಮಾರನೇ ದಿನ, ಬಹುಶಃ ಅವರ ಗುರೂಜಿಗೆ ನಾನು ಹಾಕಿದ ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆದುಕೊಂಡು ಬಂದು ಮತ್ತ ನನ್ನೊಂದಿಗೆ ವಾದದಲ್ಲಿ ತೊಡಗುತ್ತಿದ್ದರು. ಒಟ್ಟಾರೆ ಅವರ ತತ್ವಗಳು ಬದುಕು ನಶ್ವರ; ಜಗದೆಲ್ಲಾ ನೋವುಗಳಿಗೆ ಲೌಕಿಕ ಆಸೆಗಳೇ ಮೂಲ; ಮುಕ್ತಿಗೆ ಕೃಷ್ಣನೇ ದಾರಿ ಎಂದೆಲ್ಲಾ ಆಗಿರುತ್ತಿದ್ದವು. ನಾನು ಅವರ ತತ್ವಗಳನ್ನು ಒಂದೆಡೆ ಒಪ್ಪಿಕೊಳ್ಳುತ್ತ ಮತ್ತೊಂದೆಡೆ ಕೃಷ್ಣ ಸಾವಿರ ಗೋಪಿಕಾ ಸ್ತ್ರೀಯರನ್ನು ತಾನಿಟ್ಟುಕೊಂಡು ಅವನ ಭಕ್ತರಿಗೆ ಕೇವಲ ಸಂತಾನೋತ್ಪತ್ತಿ ಕಾಲದಲ್ಲಿ ಮಾತ್ರ ಕಾಮಿಸಿ ಅನ್ಯ ಕಾಲದಲ್ಲಿ ವರ್ಜಿಸಿ ಎನ್ನುವುದು ಹೇಗೆ ನ್ಯಾಯವೆಂದೋ ಅಥವಾ ಅವರ ಗುರುಗಳು ಹೇಳುವ "ಬುದ್ಧಿವಂತ ಮಾನವ ಪ್ರಾಣಿಗಳಂತೆ ಬದುಕದೆ ನಿಯಮಬದ್ಧವಾಗಿ ಬದುಕಬೇಕು" ಎಂಬುದನ್ನೇ ಪ್ರಾಣಿಗಳು ಸಂತಾನೋತ್ಪತ್ತಿಗಾಗಿ ಮಾತ್ರ ಕಾಮಕ್ರೀಡೆಯಲ್ಲಿ ತೊಡಗಿದರೆ ಬುದ್ದಿವಂತ ಮಾನವ ನಿತ್ಯವೂ ಆ ಕಾರ್ಯದಲ್ಲಿ ತೊಡಗುವುದು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ. ನಿಮ್ಮ ಗುರುಗಳು ಏನೆಲ್ಲಾ ಮಾಡಿ ಸಮಾಧಿ ಮುಕ್ತಿಯನ್ನು ಹೊಂದುತ್ತಾರೋ ಅದರ ಅನುಭವವನ್ನು ಜನಸಾಮಾನ್ಯ ಕಾಮಿಸಿ ಕ್ಷಣಿಕವಾದರೂ ನಿತ್ಯವೂ ಆ ಸಮಾಧಿಯ ಅನುಭವವನ್ನು ಅನುಭವಿಸುತ್ತಾನೆ ಎನ್ನುತ್ತ ಅವರ ಗುರುಗಳ ತತ್ವಗಳೇ ಒಂದಕ್ಕೊಂದು ಅಭಾಸವಾಗಿವೆ ಎಂದು ಅವರ ಅಂದಿನ ಇಸ್ಕಾನ್ ’ಬ್ರೇನ್ ವಾಷ್’ ಅನ್ನು ಅಳಿಸಿಬಿಡುತ್ತಿದ್ದೆ. ಮಗದೊಮ್ಮೆ "ಈರುಳ್ಳಿ / ಬೆಳ್ಳುಳ್ಳಿಯಂತೆ ಕಟು ವಾಸನೆಯಿರುವ ಎಲ್ಲಾ ತರಕಾರಿ ಆಹಾರ ಪದಾರ್ಥಗಳನ್ನು ತಿಂದರೆ ನಮ್ಮಲ್ಲಿ ಆ ಕಟು ವಾಸನೆಯ ಗುಣಗಳು ಸೇರುತ್ತವೆ. ಆವುಗಳನ್ನು ವರ್ಜಿಸಿ" ಎಂಬ ಇಸ್ಕಾನಿನ ಪಥ್ಯವನ್ನು ನಾನು ಆ ಆಹಾರ ಸಾಮಗ್ರಿಗಳು ಮನುಷ್ಯನನ್ನು ಎಲ್ಲಾ ಸಂಕಷ್ಟಗಳನ್ನೂ ದೈಹಿಕವಾಗಿ, ಮಾನಸಿಕವಾಗಿ ಸಹಿಸುವಷ್ಟು ಕಟುವಾಗಿ ಮಾಡುತ್ತವೆ ಎಂದೇಕೆ ಹೇಳಬಾರದು ಎಂದು ಕಾಲೆಳೆದು ದಿಕ್ಕೆಡಿಸಿ ಈರುಳ್ಳಿ ಬೋಂಡ ತಿನ್ನಿಸುತ್ತಿದ್ದೆನು. ಹೀಗೆಯೇ ಸುಮಾರು ತಿಂಗಳುಗಳು ಕಳೆದವು. ನಾನು ನನ್ನ ಕೆಲಸ, ಸ್ನೇಹಿತರು ಮತ್ತಿತರೆ ಸಾಮಾಜಿಕ ಲೋಕದಲ್ಲಿ ಕಳೆದು ಹೋಗಿ, ಹಲವಾರು ತಿಂಗಳುಗಳವರೆಗೆ ಈ ಹುಡುಗರೊಂದಿಗೆ ಸಂವಾದದಲ್ಲಿ ತೊಡಗಲು ಸಾಧ್ಯವಾಗಿರಲಿಲ್ಲ.

ಒಮ್ಮೆ ಸಾಯಂಕಾಲ ನಾನು ಆಫೀಸಿನಿಂದ ಬಂದು ನನ್ನ ಹೀರೋ ಪುಕ್ ನಿಲ್ಲಿಸಿದೊಡನೆ ನನ್ನ ರೂಮಿನ ಪಕ್ಕದ ಮಾಲೀಕರು ನನ್ನಲ್ಲಿಗೆ ಬಂದು ತಮ್ಮ ಮಗನೂ ಮತ್ತವನ ಸ್ನೇಹಿತ ದರ್ಶನನೂ ಇಸ್ಕಾನಿನ ಫುಲ್ ಟೈಮ್ ಸನ್ಯಾಸಿಗಳಾಗುತ್ತೇವೆಂದು ಹೋಗಿದ್ದಾರೆಂದೂ ಅವರಿಗೆ ಹೇಗಾದರೂ ಕನ್ವಿನ್ಸ್ ಮಾಡಿ ಕರೆತನ್ನಿರೆಂದೂ ಅಳುತ್ತ ಗೋಗರೆದರು. ನಾನು ಅವರನ್ನು ಸಮಾಧಾನಿಸಿ ’ನಡೀರಿ ಹೋಗಿ ಕರೆದುಕೊಂಡು ಬರೋಣ’ ಎಂದು ಅವರನ್ನು ಕರೆದುಕೊಂಡು ರಾಜಾಜಿ ನಗರದಲ್ಲಿ ಆಗಷ್ಟೆ ಚಿಕ್ಕದಾಗಿ ತಲೆಯೆತ್ತಿದ್ದ ಇಸ್ಕಾನ್ ಸಂಸ್ಥೆಗೆ ಹೋದೆನು. ಅಲ್ಲಿ ಈ ಹುಡುಗರಂತೆಯೇ ಹದಿಹರೆಯದಲ್ಲಿ "ಬ್ರೇನ್ ವಾಷ್"ಗೊಳಪಟ್ಟು ಸನ್ಯಾಸಿಗಳಾದ ಓರ್ವ ಗುರುವಿನೊಂದಿಗೆ ವಾದಿಸಿ, ಕೊನೆಗೆ ಕಾನೂನು ಸಮರ ಇಲ್ಲವೇ ದಾದಾಗಿರಿಗಳನ್ನು ಬಳಸಲು ಕೂಡ ನಾನು ಹೇಸುವುದಿಲ್ಲವೆಂದು ಬೆದರಿಸಿದ ಮೇಲೆ ಅವರ ಮಗನನ್ನು ನಮ್ಮೊಂದಿಗೆ ಕಳುಹಿಸಿದರು. ಆದರೆ ಎರಡು ದಿನಗಳ ಹಿಂದಷ್ಟೇ ಹದಿನೆಂಟು ದಾಟಿ ವಯಸ್ಕನಾಗಿದ್ದ ದರ್ಶನ್, ಅಲ್ಲಿಯೇ ಉಳಿದುಕೊಂಡ. ಅದಾದ ಕೆಲವೆರಡು ತಿಂಗಳುಗಳ ನಂತರ ಮೆಜೆಸ್ಟಿಕ್ಕಿನ ಜನತಾ ಬಜಾರ್ ಮುಂದೆ ಬೋಳಿಸಿದ ತಲೆಯ, ಕಾವಿ ಪಂಚೆ ಜುಬ್ಬಾ ತೊಟ್ಟ, ಹಣೆ ಕಣ್ಣುಗಳ ಆಜೂಬಾಜು ಗಂಧಮುದ್ರೆಗಳನ್ನೊತ್ತಿಕೊಂಡ ಯುವ ಸನ್ಯಾಸಿ ದರ್ಶನ್ ಇಸ್ಕಾನ್ ಪ್ರಭುಪಾದರ ಪುಸ್ತಕಗಳನ್ನು ಮಾರುತ್ತಿದ್ದುದನ್ನು ನೋಡಿದೆ. ಅದೇ ಕೊನೇ ಮತ್ತೆ ದರ್ಶನನ ದರ್ಶನ ನಾನಗಾಗಿಲ್ಲ. ಬಹುಶಃ ಇಸ್ಕಾನಿನ ಅಡುಗೆ ಕೋಣೆಯಲ್ಲಿ ’ಸರ್ಕಾರಿ ಶಾಲಾಮಕ್ಕಳ ಬಿಸಿಯೂಟ’ದ ಉಸ್ತುವಾರಿ ನೋಡಿಕೊಳ್ಳುತ್ತ, ಕೃಷ್ಣಜಪದಲ್ಲಿ ತೊಡಗಿರಬಹುದು! ಇಲ್ಲಾ ಬೆಂಗಳೂರಿನ ಯಾವುದಾದರೂ ಜನನಿಬಿಡ ಜಾಗದಲ್ಲಿ ಇಸ್ಕಾನ್ ಪುಸ್ತಕಗಳನ್ನು ಮಾರುತ್ತಿರಬಹುದು.

ಇತ್ತೀಚೆಗೆ ನೀವೆಲ್ಲರೂ ಹೊನ್ನಾಳಿ, ಹುಬ್ಬಳ್ಳಿಯ ಹದಿಹರೆಯದ ಸಿಮಿ ಕಾರ್ಯಕರ್ತರು / ಉಗ್ರಗಾಮಿಗಳ ಬಗ್ಗೆ ಓದಿದ್ದೀರಷ್ಟೆ! ಈಗಷ್ಟೇ ಬಾಲ್ಯದಿಂದ ಹದಿಹರೆಯಕ್ಕೆ ಕಾಲಿಡುತ್ತಿದ್ದ ಈ ಹುಡುಗರು ಕೂಡಾ ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ದರ್ಶನನಂತೆಯೇ "ಬ್ರೇನ್ ವಾಷ್"ಗೆ ಒಳಪಟ್ಟಿದ್ದಾರೆ. ಇಸ್ಕಾನ್ ಗುರು "ಲೌಕಿಕ ವಾಂಛೆಯೇ ಜಗದ ಕಷ್ಟಗಳಿಗೆ ಮೂಲ. ಇದೆಲ್ಲವನ್ನು ತೊರೆದು ಅಲೌಕಿಕದೆಡೆಗೆ ನಡೆಯಲು ಕೃಷ್ಣಜಪ ಮಾಡಿ"ರೆಂದು ಜಗದ ಅನುಭವವೇ ಇಲ್ಲದ ಅಮಾಯಕರುಗಳನ್ನು ಕಷ್ಟಾನುಕಷ್ಟಗಳನ್ನನುಭವಿಸಿದ ಸಂಸಾರಿಕರನ್ನೂ ಮೀರಿಸಿ ಸನ್ಯಾಸತ್ವ ತೊಡಿಸಿ ಆಧ್ಯಾತ್ಮದೆಡೆಗೆ ಕಳುಹಿಸಿದ್ದರೆ, ಸಿಮಿಯ ಮೌಲ್ವಿ "ಹೂಸುವ, ಉಚ್ಚೆ ಹುಯ್ಯುವ ಲೌಕಿಕ ಕನ್ಯೆಯರೇಕೆ? ಅಲೌಕಿಕದಲ್ಲಿ ದೇವರು ನಿಮಗಾಗಿ ಒಂದಲ್ಲ ಎರಡಲ್ಲ ಎಪ್ಪತ್ತೆರಡು ಹೂಸದ, ಬೆವರದ, ಸುವಾಸಿತ ಸದಾ ಅಕ್ಷತಕನ್ಯೆಯರಾದ ಹೂರಿಯಹ್ ಕನ್ಯೆಯರನ್ನು ಇಟ್ಟಿದ್ದಾರೆ. ಅವರತ್ತ ಮುಖ ಮಾಡಿ" ಎಂದು ಅಲೌಕಿಕತೆಯಲ್ಲಿ ಲೌಕಿಕ ರಸಗಳು ಇನ್ನೂ ಅದ್ಭುತವಾಗಿವೆ ಎಂದು ತೋರಿಸುತ್ತಾರೆ. ಬಹುಶಃ ಪಾರಮಾರ್ಥಿಕ ಸುಖವನ್ನು ಕಲ್ಪಿಸಿಕೊಳ್ಳದ ಯುವಕರಿಗೆ ಲೌಕಿಕತೆಯ ಈ ರೂಪದಲ್ಲಿ ಅಲೌಕಿಕತೆಯನ್ನು ಪರಿಚಯಿಸುವ ಪರಿ ಇದಾಗಿದೆಯೇನೋ?

ಏನಾದರೂ ಸಾಧನೆಯನ್ನೋ, ಕ್ರಾಂತಿಯನ್ನೋ ತೀವ್ರವಾಗಿ ಮಾಡಿಬಿಡಬೇಕೆನ್ನುವ ಹದಿಹರೆಯದ ಹುಮ್ಮಸ್ಸಿನಲ್ಲಿ ಕೆಲವರು ಪ್ರೇಮಿಸುವುದು, ಕದ್ದು ಕುಡಿಯುವುದು ಇವುಗಳನ್ನೇ ಕ್ರಾಂತಿಯೆಂದುಕೊಂಡರೆ ಕೆಲವರಿಗೆ ಈ ಪಂಥೀಯರುಗಳ ಭೋಧನೆ ಅಪ್ಯಾಯಮಾನವೆನಿಸಿಬಿಡುತ್ತದೆ. ಹಾಗಾಗಿಯೇ ನಮ್ಮಲ್ಲಿ ಸಾವಿರಾರು ಸಿನಿಮಾಗಳು ಪ್ರೇಮ, ಇಲ್ಲಾ ರೌಡಿಯಿಸಂ ಈ ಎರಡನ್ನೇ ಪ್ರಮುಖವಾಗಿ ಮಾಡಿಕೊಂಡು ಅಥವಾ ಎರಡನ್ನೂ ಕಲಸಿಕೊಂಡು ತಯಾರಾಗುತ್ತಿರುವುದು ಮತ್ತು ಸೂಪರ್ ಹಿಟ್ ಆಗುತ್ತಿರುವುದು!

ಇರಲಿ, ಒಟ್ಟಾರೆ ಈ ಪಂಥೀಯವಾದಿಗಳು ಆಗಷ್ಟೆ ಪೊರೆ ಕಳಚಿ ತರುಣಾವಸ್ಥೆಗೆ ಕಾಲಿಡುತ್ತಿರುವ ಅಮಾಯಕ ಮಿಕಗಳನ್ನು ಸರಳವಾಗಿ ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ. ತಮ್ಮ ತಮ್ಮ ನಂಬಿಕೆ, ಉದ್ದೇಶಗಳನ್ನು ಈ ಯುವ ಪೀಳಿಗೆಯ ಮೇಲೆ ಹೇರಿ, ಬೆಳೆದು ಬಾಳು ಬೆಳಗಿಸಿಕೊಳ್ಳಬೇಕಾದ ಈ ಯುವ ದೀವಿಗೆಗಳನ್ನು ಉರಿಯುವ ಮೊದಲೇ ನಂದಿಸುತ್ತಿದ್ದಾರೆ. ಇದಕ್ಕೆ ಯಾವುದೇ ಪಂಥೀಯ ಸಂಘಟನೆಗಳು ಹೊರತಾಗಿಲ್ಲ. ಅದು ಅಲ್ ಖೈದಾ, ಸಿಮಿ, ಲಷ್ಕರ್-ಇ-ತೌಯಿಬಾ, ಇಸ್ಕಾನ್, ಬ್ಲ್ಯಾಕ್ ಟ್ರೆಂಚ್ ಕೋಟ್, ಹಿಪ್ಪಿ, ನಕ್ಸಲ್, ಎಡಪಂಥೀಯ, ಬಲಪಂಥೀಯ ಅಥವಾ ಇನ್ನಾವುದೇ "ಕಲ್ಟ್" ಮಾದರಿಯ ಪಂಥೀಯರಾಗಿರಬಹುದು. ಯಾವುದೋ ಕಾಲದ ತತ್ವಕ್ಕೆ ಜೋತುಬಿದ್ದು, ಆ ತತ್ವಗಳು ವರ್ತಮಾನ ಕಾಲಘಟ್ಟದಲ್ಲಿ ಅಸಹಜ ಅಭಾಸವಾಗಿ ಅಪ್ರಸ್ತುತವಾಗಿದ್ದರೂ ಅದರ ಪರಿವೆಯಿಲ್ಲದೇ ಗತ ಲೋಕದ ಆ ಕಾಲದ ಭ್ರಮಾಲೋಕದಲ್ಲಿ ತೇಲುತ್ತಿರುವ ಈ ಹುಚ್ಚರ ಸಂಘಟನೆಗಳು ನಮ್ಮ ಇಂದಿನ ಯುವಶಕ್ತಿಯನ್ನು ಆಕರ್ಷಿಸುತ್ತಿರುವುದು ಸಾಮಾಜಿಕ ದುರಂತ!

ಈ ಅಮಾಯಕ ಯುವಕರ ತಲೆ ಸವರಿ ಇಸ್ಕಾನ್ ನಂತಹ ಸಂಘಗಳು ಮೆಜೆಸ್ಟಿಕ್ ನಲ್ಲಿ ಪುಸ್ತಕ ಮಾರಿಸುತ್ತ ಅವರನ್ನು ಸಮಾಜದೊಳಗಿದ್ದೂ ಖೈದಿಗಳಂತೆ ಬಾಳಿಸಬಹುದು; ಸಿಮಿಯಂತಹ ಸಂಘಗಳು ಆ ಯುವಕರಿಂದ ಮೆಜೆಸ್ಟಿಕ್ ನಂತಹ ಜನನಿಬಿಡ ಸ್ಥಳಗಳಲ್ಲಿ ಬಾಂಬ್ ಹಾಕಿಸಿ ಅವರನ್ನು ಹೂರಿ ಕನ್ಯೆಯರೊಂದಿಗೆ ವಿಹಾರಕ್ಕೋ ಅಥವಾ ಅವರು ಹೌಹಾರುವಂತಹ ಬಳ್ಳಾರಿ ಬಂದೀಖಾನೆಗೋ ಕಳುಹಿಸಬಹುದು; ಅಥವಾ ನಕ್ಸಲ್ ಸಂಘಟನೆಗಳಂಥಹ ಸಂಘಟನೆಗಳು ಈ ಯುವಕರುಗಳ "ಲಾಲ್ ಸಲಾಮ್" ಚರಮಗೀತೆ ಹಾಡಬಹುದು; ಒಟ್ಟಾರೆ ಹದಿಹರೆಯದ ಪ್ರಬಲ ಯುವಶಕ್ತಿಯನ್ನು ಈ ಸಂಘಟನೆಗಳು ನಾಶಮಾಡುತ್ತಿವೆ. ದೇವರ ಅನುಯಾಯಿಗಳಾಗಿಯೋ ಅಥವಾ ತತ್ವಸಿದ್ಧಾಂತವೇ ದೇವರೆನ್ನುವ ಪಂಥಿಗಳಾಗಿಯೋ ಈ ಎಲ್ಲಾ ಸಂಘಟನೆಗಳು ತಾವು ನಂಬಿದ ದೇವರುಗಳ ಸೃಷ್ಟಿಯನ್ನು ದೇವರುಗಳ ಹೆಸರಿನಲ್ಲಿಯೇ ನಾಶಮಾಡುತ್ತಿರುವುದು ಆ ದೇವರುಗಳ ವಿಪರ್ಯಾಸ!

ಕೆಲವು ಸಮಾಜದ ಕಾನೂನಿನ ದೃಷ್ಟಿಯಲ್ಲಿ ಸಮಾಜಘಾತುಕವೆನಿಸಿಕೊಳ್ಳಬಹುದು. ಇನ್ನು ಕೆಲವು ಕಾನೂನಿನ ಪರಿಧಿಯಲ್ಲಿಯೇ ಗೌರವಾನ್ವಿತವೆನಿಸಬಹುದು, ಅಷ್ಟೇ ವ್ಯತ್ಯಾಸ.

ಒಟ್ಟಾರೆ ದರ್ಶನ್ ಖಾವಿ ತೊಟ್ಟು ಹಾದಿ ಬದಿಯಲ್ಲಿ ಪುಸ್ತಕ ಮಾರಿದರೆ, ಕಫೀಲ ಕಾಣದ ಲೋಕದಲ್ಲಿ ಎಪ್ಪತ್ತೆರಡು ಹೂರಿ ಕನ್ಯೆಯರೊಂದಿಗೆ ವಿಹರಿಸುತ್ತಿದ್ದಾನೆ! ದರ್ಶನ್, ಕಫೀಲ್ ರಂತಹ ಅದೆಷ್ಟೋ ಮಕ್ಕಳನ್ನು ಕಳೆದುಕೊಂಡ ಭಾರತಮಾತೆಯ ಕಣ್ಣೊರೆಸಬೇಕಾದ ನಾಯಕರುಗಳಿಂದು ಅವಳ ಮೇಲಿನ ಅಧಿಕಾರದ ಹಂಚಿಕೆಯ ಹೊಂಚು ಹಾಕುತ್ತಿದ್ದಾರೆ.

ಅಣಕ:

ಈ ಸಾರಿಯ ಲೇಖನ ಯುವಕರಿಗೆ ಸಂಬಂಧಿಸಿದ ಲೇಖನವಾದುದರಿಂದ ಮತ್ತು ಅನೇಕರು ನನ್ನನ್ನು ಯಾಕೆ ತಂಪು ಕನ್ನಡಕವನ್ನು ಆದಷ್ಟೂ ಧರಿಸಿರುತ್ತೀಯಾ? ಎಂದು ಕೇಳುವುದಕ್ಕೆ ತುಂಟ ಉತ್ತರವಾಗಿ ಈ ಅಣಕವನ್ನು ಸ್ವಲ್ಪ ಚಿತ್ರಮಯವಾಗಿ ಕೊಟ್ಟಿದ್ದೇನೆ. ದಯಮಾಡಿ ಕೆಳಗಿನ ಚಿತ್ರವನ್ನು ಪರಾಂಭರಿಸಿ ನನ್ನ ಕನ್ನಡಕದ ಹಿಂದಿನ ಕಣ್ಣುಗಳು, ಆರೋಗ್ಯವಂತ ಯುವಕರಂತೆ ಏನು ಮಾಡುತ್ತಿರುತ್ತವೆ ಎಂಬುದನ್ನು ಕಂಡುಕೊಳ್ಳಿ.

ಹಾಂ! ಹೀಗೆ ಕನ್ನಡಕ ಧರಿಸುವುದು ನಾನೊಬ್ಬನೇ ಅಲ್ಲ ಸ್ವಾಮೀ, ಹಾಲಿವುಡ್ ನಟರುಗಳಿಂದ ಹಿಡಿದು, ದಿವಂಗತರಾಗಿರುವ ಎಂಜಿಆರ್‍, ಗುಂಡೂರಾವ್ ಅಲ್ಲದೆ ಇನ್ನೂ ಚಿರಂಜೀವಿಗಳಾಗಿರುವ ಕರುಣಾನಿಧಿ, ಬಾಲಿವುಡ್ ನಟರಾದಿಯಾಗಿ ಅನೇಕರು ಸಾರ್ವತ್ರಿಕವಾಗಿರುವಾಗಿ ತಂಪು ಕನ್ನಡಕ ಧರಿಸುತ್ತಾರೆ.

ಗಂಡಸರು ಯಾಕೆ ಹೀಗೆ ಸನ್ ಗ್ಲಾಸ್ ಹಾಕಿಕೊಳ್ಳುತ್ತಾರೆ ಎಂಬುದಕ್ಕೆ ಚಿತ್ರ ಮುಖೇನ ಉತ್ತರಿಸಿದ್ದೇನೆ. ಹೆಂಗಸರು ಯಾಕೆ ಸನ್ ಗ್ಲಾಸ್ ಧರಿಸುತ್ತಾರೆಂಬುದುರ ಬಗ್ಗೆ ನೀವು ಹೇಳಬೇಕು!

9 comments:

ಕಿರಣ್ ಜಯಂತ್ said...

ತುಂಬಾ ಅರ್ಥಗರ್ಭಿತ ಲೇಖನ. ನಾನು ಕೂಡ ಮಹಾಲಕ್ಷ್ಮಿ ಬಡಾವಣೆಯಲ್ಲಿ ಸುಮಾರು ೩ ವರುಷಗಳಿದ್ದೆ. ನನ್ನ ಜೊತೆ ಕ್ರಿಕೆಟ್ ಆಡುತ್ತಿದ್ದ ಒಬ್ಬ ಸ್ನೇಹಿತ ಇಸ್ಕಾನ್ ನಲ್ಲಿ ಸನ್ಯಾಸಿಯಾಗಿ ಹೋದ. ೨ನೇ ಪಿ.ಯು.ಸಿ ಓದುತ್ತಿದ್ದ ನಾನು ನನ್ನ ಅಮ್ಮಳಿಗೆ ಇಸ್ಕಾನ್ ಸೇರುತ್ತೇನೆಂದು emotional black mail ಮಾಡುತ್ತಿದ್ದ ದಿನಗಳೂ ನೆನಪಾದವು ನಿಮ್ಮ ಲೇಖನ ಓದಿ. ಸಿಮಿ ಗೆ ಇಸ್ಕಾನ್ ಹೋಲಿಸಿರುವುದು ಸಹ ಸಮಂಜಸವಾಗಿದೆ ಸರ್. ಹಾಂ! ಅಣಕ ಕೂಡ :)

Anonymous said...

Excellent! Agreed.

Supreeth.K.S said...

ಈ ಬಗೆಯ ಬ್ರೇನ್ ವಾಶಿಂಗ್ ಎಲ್ಲಾ ಕಾಲದಲ್ಲೂ ನಡೆಯುತ್ತಲೇ ಇದೆ. ಬೇರೆ ಬೇರೆಯ ಹೆಸರುಗಳಲ್ಲಿ.

ನನ್ನ ಅನುಭವದ ಆಧಾರದಲ್ಲಿ ಹೇಳುವುದಾದರೆ, ನಾನು ಪ್ರೈಮರಿ ಹಾಗೂ ಹೈಯರ್ ಪ್ರೈಮರಿಯನ್ನು ಓದಿದ್ದು ಸತ್ಯ ಸಾಯಿ ಬಾಬಾ ಭಕ್ತ ಸಂಘವೊಂದು ನಡೆಸುತ್ತಿದ್ದ ಶಾಲೆಯಲ್ಲಿ. ಅಲ್ಲಿದ್ದಾಗ ವಿದ್ಯಾರ್ಥಿಗಳಾದ ನಮ್ಮ ನಮ್ಮಲ್ಲೇ ಯಾರು ಹೆಚ್ಚು ಭಕ್ತಿಯನ್ನು ತೋರುತ್ತಾರೋ ಎಂದು ಸ್ಪರ್ಧೆ ನಡೆಯುತ್ತಿತ್ತು. ನಮಗೆ ಬೌದ್ಧಿಕವಾಗಿ, ವೈಚಾರಿಕವಾಗಿ ಸಿಗುತ್ತಿದ್ದ ಮಾಹಿತಿಯೆಲ್ಲಾ ಸಾಯಿ ಬಾಬಾ ಕುರಿತಾದದ್ದೇ, ಅವರ ಪವಾಡಗಳನ್ನು ಕುರಿತಾದದ್ದೇ. ಮೌಲ್ವಿ ಪ್ರಕೃತಿ ಸಹಜವಾಗಿ ಕಾಮ ಕೆರಳುವ ಯೌವನದ ಹೊಸ್ತಿಲಲ್ಲಿರುವ ಯುವಕರಿಗೆ ಕನ್ಯೆಯರ ಆಸೆ ತೋರಿಸಿದ ಹಾಗೆಯೇ ನಮಗೆ ‘ನೀವು ಭಕ್ತಿಯಿಂದ ಪ್ರಾರ್ಥಿಸಿದರೆ ಪರೀಕ್ಷೆಯಲ್ಲಿ ಫರ್ಸ್ಟ್ ರ್ಯಾಂಕ್ ಬರಬಹುದು.’ ಅಂತ ಹೇಳಿ ತಾವೇ ಸೃಷ್ಠಿಸಿದ್ದೋ ಇಲ್ಲವೇ ಯಾರೋ ಹೇಳಿದ್ದೋ ಸಾಯಿ ಬಾಬಾ ಪವಾಡದ ಕಥೆಯನ್ನು ಹೇಳುತ್ತಿದ್ದರು. ಆ ವಯಸ್ಸಿನಲ್ಲಿ ಅದನ್ನು ಎಷ್ಟು ಆಳವಾಗಿ ನಂಬುತ್ತಿದ್ದೆವೆಂದರೆ, ನಿಜಕ್ಕೂ ಚೆನ್ನಾಗಿ ಓದಿ ಫರ್ಸ್ಟ್ ರ್ಯಾಂಕ್ ಬಂದವನಿಗೂ ಸಹ ಬಾಬಾ ಪವಾಡದಿಂದಲೇ ತಾನು ರ್ಯಾಂಕ್ ಗಳಿಸಿರಬೇಕು ಎನ್ನಿಸುತ್ತಿತ್ತು. ತಮ್ಮ ಸಾಮರ್ಥ್ಯದ ಮೇಲೆ ಮಕ್ಕಳು ಇಲ್ಲವೇ ಯುವಕರು ನಂಬಿಕೆ ಕಳೆದುಕೊಳ್ಳುವುದು ಹೀಗೇ ಅಲ್ಲವೇ?

ನನ್ನ ಅದೃಷ್ಠಕ್ಕೆ ನಾನು ಹೈ ಸ್ಕೂಲ್ ಸೇರಿದಾಗ ನನಗೆ ಸಿಕ್ಕ ಅತ್ಯಂತ ಮುಕ್ತವಾದ ವಾತಾವರಣ ನನ್ನ ಬ್ರೈನಿಗೆ ಅಳಿಸಲಾಗದಷ್ಟು ವೆರೈಟಿಯ ವಿಚಾರಗಳನ್ನು ತುಂಬಿ ಯಾರೂ ವಾಶ್ ಮಾಡಲಾಗದ ಹಾಗೆ ಮಾಡಿತು. ಕೆಲವು ದಿನ ನಾಸ್ತಿಕವಾದದ ಹಿಂದೆ ಬಿದ್ದು ದೇವರೆಲ್ಲಿದ್ದಾನೆ ತೋರಿಸು ಅಂತ ಅಮ್ಮಂಗೆ ಹೇಳಿ ಆಕೆ ಕಣ್ಣಿರು ಹಾಕುವಂತೆ ಮಾಡಿದ್ದೆ. ಕೆಲವು ಕಾಲ ವೇದಗಳಲ್ಲಿ ಜಗತ್ತಿನ ರಹಸ್ಯವಿದೆ ಎಂದು ನಂಬಿಕೊಂಡು ಭ್ರಾಂತನಾಗಿ ಅಲೆದೆ ಆದರೆ ಅಲ್ಲಿನ ವಾತಾವರಣದಲ್ಲಿ ನನಗೆ ಯಾವ ವಿಚಾರಕ್ಕೂ ಸಂಘಟನೆಯ ಆಸರೆ ದೊರೆಯಲಿಲ್ಲ. ಆಗ ರೂಢಿಯಾದ ನನ್ನ ವೈಚಾರಿಕ ಅಲೆಮಾರಿತನದಿಂದಾಗಿ ನಾನು ಮತ್ತೆ ಪಿಯುಗಾಗಿ ಸಾಯಿ ಬಾಬಾರ ನೇರ ಒಡೆತನದಲ್ಲಿರುವ ಅಳಿಕೆಯ ಕಾಲೇಜಿಗೆ ಹೋದರೂ ನನ್ನತನವನ್ನು ಕಳೆದುಕೊಳ್ಳಲಿಲ್ಲ.

ನಿಮ್ಮ ಲೇಖನ ನನ್ನಲ್ಲಿ ಎಬ್ಬಿಸಿದ ನೆನಪುಗಳ ಚಿತ್ರಣವನ್ನು ಇಲ್ಲಿ ಬರೆದೆ. ತೀರಾ ವೈಯಕ್ತಿಕ ತುತ್ತೂರಿ ಎನ್ನಿಸಿದರೆ ತೆಗೆದು ಹಾಕಿ.

ಒಳ್ಳೆಯ ಲೇಖನ ಹಾಗೆಯೇ ಅಣಕ ಕೂಡ. ಕೂಲಿಂಗ್ ಗ್ಲಾಸಿನ ಮಹಿಮೆ ಮಸ್ತಾಗಿದೆ!

.........................
ನನ್ನ ಬ್ಲಾಗ್: http://uniquesupri.wordpress.com/

ಕುಕೂಊ.. said...
This comment has been removed by the author.
ಕುಕೂಊ.. said...

ಇಂತಹ ಬ್ರೈನ್ ವಾಷ್ ಮಾಡೋ ಮನೆ ಮನಮುರುಕರ ಡೊಡ್ಡ ದಂಡೇ ಇದೆ.
ಸಾಯಿಬಾಬ, ರಾಮದೇವಬಾಬ, ಶ್ರೀಶ್ರೀಶ್ರೀಶ್ರೀ ರವಿಶಂಕರ ಗುರೀಜಿ, ಎಸ್,ಎಸ್,ವೈ ಗಳ ದೊಡ್ಡ ಬಳಗವೇ ಇದೆ, ಬ್ರಹ್ಮಕುಮಾರಿ ಈಶ್ವರೀ,ಎಲ್ಲಕ್ಕಿಂತ ಅಪಾಯಕಾರಿ ಧರ್ಮಾಂತ (ಮತಾಂತರ)ದಾಹಕ್ಕೆ ಸಿಲಿಕಿರುವ ಕ್ರಿಚ್ಚಿಯನ್ ಮಿಷನರಿಗಳು.
ಶಾಲೆಯಲ್ಲಿ ಮಕ್ಕಳನ್ನ ಬ್ರೈನ್ ವಾಷ್ ಮಾಡಿ ತಂದೆ ತಾಯಿಗಳಿಂದ ಸಮಾಜದಿಂದ ಹೊರಗುಳಿಯುವಂತೆ ಮಾಡುತ್ತಿವೆ.ಶಾಲೆ ಶಾಲೆಗಳಿಗೂ ಹೋಗಿ ಹುಚ್ಚು ಹಿಡಸುವಂತ ಏಸುವಿನ ಸುಳ್ಳು ಪವಾಡಗಳಿಗೆ ಬಣ್ಣ ಬಣ್ಣದ ಕತೆ ಕಟ್ಟಿ ಹಚ್ಚಾಕಿರುವ ಪುಸ್ತಕಗಳನ್ನ ಹಂಚುತಿದ್ದಾರೆ. ಜೊತೆ ನನ್ನ ಅಮ್ಮನಿಗೆ ಕಣ್ಣಿರಲಿಲ್ಲ ಏಸುವಿನ ಧ್ಯಾನದಿಂದ ಕಣ್ಣು ಬಂದವು, ನನ್ನ ತಮ್ಮನ ಕಾಲು ಮುರಿದಿತ್ತು ಏಸುವಿನ ಕೃಪೆಯಿಂದ ಕಾಲು ಸರಿಯಾಯಿತು ಅಂತ ಹೇಳಿಸುವ ಬಾಡಿಗೆದಾರರನ್ನು ಹಳ್ಳಿ ಹಳ್ಳಿಗೆ ಕಳಿಸುತಿದ್ದಾರೆ. ಬಡವರನ್ನು ಹೊಟ್ಟೆಗಿಲ್ಲದವರನ್ನು ಈ ರೀತಿಯಾಗಿ ಬ್ರೈನ್ ವಾಷ್ ಮಾಡೋ ತಲೆಹಿಡುಕ ಕೆಲಸದಲ್ಲಿ ಸಕ್ರಿಯವಾಗಿ ಈ ಕ್ರಿಚ್ಚಿಯನ್ ಮಿಷಿನರಿಗಳು ಮುನ್ನೆಡೆಯುತ್ತಿವೆ. ಇದು ತುಂಬಾ ಆಗಂತುಕಕಾರಿ ವಿಷಯ.
ನಾನು 8 ತರಗತಿಯಲ್ಲಿ ಓದುವಾಗ ಇಂತಹದೇ ಒಂದು ಘಟನೆ ನಡೆದಿತ್ತು. ನನ್ನ ಶಾಲೆಗೆ ಬಂದು ಕಲವು ಪುಸ್ತಕ ಹಂಚಿದರು. ಓದಿದೆ. ಇಂಗ್ಲೀಷ್ ಅಷ್ಟಾಗಿ ತಲೆಗಂಟದೆ ಹೆದರಿದ್ದ ನಾನು ಈ ಪುಸ್ತಕ ಓದಿದಮೇಲೆ ಸುಲಬವಾಗಿ ಏಸುವಿನ ಪವಾಡಗಳ ಹಿಂದೆ ಬಿದ್ದೆ.ಆದರೆ ಬಹಳ ಬೇಗ ನನಗೆ ಅರಿವಾಯಿತು. ಕಂಚಿನ ಕೃಷ್ಣನ ಮೂರ್ತಿ ಮುಳುಗುತ್ತೆ ಆದರೆ ಏಸುವಿನ ಶಿಲುಬೆ ಮುಳುಗುಲ್ಲ, ನೋಡು ಈಗ ಯೋಚಿಸು ಏಸು ದೊಡ್ಡವನೋ ಕೃಷ್ಣ ದೊಡ್ಡವನೊ ಅನ್ನೋ ವಿಪರಿತ ತರ್ಕದಮೂಲಕ ನನ್ನ ಬ್ರೈನ್ ವಾಷ್ ಮಾಡಲು ನೋಡಿದರು.ಆದರೆ ನನಗೆ ಇನ್ನೊಂದು ಕುತರ್ಕ ಕ್ಷಣದಲ್ಲಿ ಅರಿವಾಯಿತು. ನಂತರ ನಾನು ಅವರಿಗೆ ಕೇಳಿದೆ ಏಸು ದೊಡ್ಡವನಾದರೆ ಬೆಂಕಿಯಲ್ಲಿ ಯಾಕೆ ಉರಿದು ಬೂದಿಯಾಗುತ್ತಾನೆ ಕೃಷ್ಣ ಯಾಕೆ ಬೂದಿಯಾಗುವುದಿಲ್ಲ?? ಅಂದಿನಿಂದ ಇಂದಿವರೆಗೆ ನಾನು ಇಂತಹ ತಲೆಹಿಡುಕೆ ಕೆಲಸ ಮಾಡುವುದು ಕಂಡಾಗ ಅವರಿಗೆ ತಕ್ಕ ಉತ್ತರ ಹೇಳಿ ಬ್ರೈನ್ ವಾಷ್ ಆದವರಿಗೂ ನನ್ನ ಕೈಲಾದ ಮಟ್ಟಿಗೆ ತಿಳಿಹೇಳಿ ಬರುತ್ತೇನೆ.ಇಸ್ಕಾನ್ ನಡೆಸುತ್ತಿರುವುದು ಒಂದು ಅಮೇರಿಕ ಸಂಸ್ಥೆ. ಅಲ್ಲಿ ಬರುವ ಹಣವನನ್ನೆಲ್ಲಾ ಅಮೇರಿಕಗೆ ಮುಂಡಮೋಚಿಕೊಂಡು ಹೊತ್ತೊಯ್ಯುತ್ತಾರೆ ಅನ್ನೋ ವಿಷಯ ನನಗೆ ಇತ್ತೀಚಿಗೆ ತಿಳಿಯಿತು. ಇಸ್ಕಾನ್ ನಲ್ಲಿ ಇರುವವರು ಯಾರು ಸನ್ಯಾಸಿಗಳಲ್ಲ. ಎಲ್ಲರು ಮಣಗಟ್ಟಲೆ ಬಂಗಾರ ಹಾಕಿಕೊಂಡು ವ್ಯಾಪಾರ ಮಾಡುವ ವ್ಯಾಪಾರಿಗಳು. ಎಲ್ಲಾತರಹದ ಅಹಿತಕಾರಿ ಕೆಲಸಗಳ ತಾಣ ಅನ್ನೋದು ಇತ್ತೀಚಿಗೆ ತಿಳಿತು.

ಇಂತಹ ಘಟನೆಗಳು ನಮ್ಮ ಮುಂದೆ ನಡೆಯುತ್ತಿದ್ದರೆ ಸುಮ್ಮನ್ನೆ ಮೂಖರಾಗಿ ನೋಡುವ ಬದಲು ತಲೆಹಿಡುಕರಿಗೆ ಎಚ್ಚರಿಗೆ ನೀಡಲು ಪ್ರಯತ್ನಿಸಿ. ಜೊತೆಗೆ ಈ ಕುಟಿಲಜಾಲ ದಲ್ಲಿ ಸಿಲಿಕಿರುವವರಿಗೆ ಸಾಂತ್ವಾನ ಹೇಳಿ ಅರ್ಥಮಾಡಿಸಲು ಮುಂದಾಗಿ ಎಂದು ನನ್ನ ವಿನಂತಿ.

ನಿಮ್ಮ ಈ ಲೇಖನ ತುಂಬಾ ಉಪಯುಕ್ತವಾಗಿದೆ. ಇಂತಹ ವಿಚಾರಪರ ಲೇಖನ ಬರೆಯುತ್ತಿರಿ.

ಧನ್ಯವಾದಗಳೊಂದಿಗೆ
ಕುಮಾರಸ್ವಾಮಿ ಕಡಾಕೊಳ್ಳ
ಪುಣೆ
30/03/08

Anonymous said...

Just say Hare Krsna, it doesn't cost you a paise.

Mr. Ravi and others who commented on the article are in very dangerous position right now.

Krsna's message for the mankind was not to become a Sannyasi, it was just to follow the Yugadharma and order of life via 4 ashramas (Bramhacharya, Grihastha, Vanaprastha, and at last Sannyasa).

Srila Prabhupada just passed on this message to us through Bhagavad-Gita and please don't make the horrible mistake of comparing Vaishnavas to Terrorists.

We think we are progressing materially, for instance we are launching rockets at the cost of millions of dollars just to find if any other planet has living entities. This information is available free of cost, that too from Vedas. Do we know there are living entities on Sun planet also.

Living entities on this planet are made of Earth (Mud) because mud is the main element used for creation of living entities. Similarly Sun has living entities made of Fire and there are living entities made of water, air, chemicals, in their respective planets.

You think progressing materially is having better facilities for Eating, Mating, Sleeping and Defending ? Animals are doing this without any problem for ages. So apart from this four dimensions of animals and humans, what is the 5th dimension ?

ISKCON has made a benchmark in simplifying the life of those who otherwise who would have been dead behind achieving materials goals.

Someone is trying to be beautiful for her husband, and husband is trying to flirt with another women, a child is pressurized to perform in the class to achieve 1st rank without the knowledge of what education means, someone is behind acquiring Maruti 800 and BMW without any knowledge that it is only a mode of transport.

Materialism = High living - Simple thinking.
Spiritualism = Simple living - High thinking.
as Srila Prabhupada puts it

In the name of teaching Yoga systems, there are organizations charging hefty fees when there is no meaning in performing this yoga in this age.

In Satya Yuga a person had 1,00,000 years to live and perform austerities to please the lord and go back to godhead.

In Treta Yuga this came down to 10,000 years.

In Dwapara Yuga this came down to 1,000 years.

In Kali Yuga it is supposed to be 100 years but even 50 years is not guaranteed.

In this 50 years, let us see what we do.
> Out of 24 hours, we sleep for 12 hours.
> Out of 12 hours, we work for 10 hours.
> Balance 2 hours, we watch TV and have sex.

So, where is the time for spiritual progression. You might ask why spiritual progression. Because this is the question only human beings can answer, not animals, sea animals, plants, stones, etc.

Added to all this, we are the most unfortunate in terms of advancing in spirituality, there are so many cheaters and people fall prey to these so called Gurus, who swindle the fortunes.

You don't have to spend a rupee in ISKCON to gain knowledge unlike other systems.

It is all about how to realize yourself and your role and goal towards Supreme Personality of Godhead. There is also explanation why Krsna is the Supreme Personality of Godhead. Until and unless your mother introduced your father you wouldn't have known who your father is, am I right ?

So, Vedas are Mother and Krsna is the father. Very simple.

Krsna Consciousness also talks about how karma (actions) that we do can bind us within this material world. So Krsna is asking us to come out of duality of Bad Karma and Good Karma also. It is all about neutralizing our karma, so that we are eligible for going back to Godhead.

Supreme Personality of Godhead is not approachable directly to our dirty minds and body. Hence there is a need to have a Guru to guide us further. Ask your parents, they will tell you that a person without a GOAL in front and a GURU behind is a dead body.

The guru parampara will have principles that needs to be adhered to by their followers;

Asking you not to take intoxicants like alcohol, coffee, tea, meat including fish and eggs, not to indulge in gambling or illicit sex by no means makes one a terrorist. Anyone ready for a 30-day challenge test to live life with diet prescribed by ISKCON and without the need to visit any of the ISKCON centers or temple. Just in your house. Follow the above and chant "Hare Krsna Hare Krsna Krsna Krsna Hare Hare - Hare Rama Hare Rama Rama Rama Hare Hare" 108 times before 6 o'clock in the morning.

Mail me for details on anantprabu@gmail.com

Anonymous said...

Interesting story. I have always been suspicious about what is going on at ISKCON. Too much commercial attitide, scandals about Akshaya Patra...
I found two other sites dealing with Madhu Pandit and his family and all their scandals. www.iskcon-bda.org and www.MadhuBandit.info.
lots of well researched and documented analysis, it seems he is not a part of the real ISKCON.

Jayanth R Rai said...
This comment has been removed by the author.
Anonymous said...

Hare Krishna

Did you know that you were systematically brain washed: To behave like a human, to learn integration by teaching you addition from you 1st standard, to live in a society by keeping you in a family. Did you know this????

There is a fine line between education and brain washing. Krishna Consciousness movement popularized by Srila Prabhupada is a science. [For proofs regarding this please refer to Bhagavad Gita, Bhagavatam and books by Srila Prabhupada.] Its a bona-fide movement, catering to what people hanker for as "rama-rajya". I can rightly tell this, that your blaspheming a science when you dont even know the basics of it. One of your friends joining was his personal choice. And a person who joins is taken as brhamachari [not sanyasis]. I think your commenting about the sweetness of honey without even obliging to try it out.
That is ok, but unfortunately you have compared an organization that is working for a peaceful and self-sustained society based on our glorious past to SIMI, a TERRORIST ORGANIZATION!!!!! Please once have a look at the congregational devotees of Iskcon. If your boss was one, i vouch that you would have just loved to work for him. That is the values and culture they have. And i can also vouch they dont blaspheme organizations without knowing them, because they are open to new ideas.

Add-on: Iskcon has given rise to great programs like Food For Life, Akshaya Patra.

@Anonymous

This person has blasphemed book-distributors. Prabhupada said "Please distribute my books". Also he is blaspheming devotees dedicated to Krsna. I know your problems but here; i humbly beg you stop slinging mud on clean walls.

All Glories To Srila Prabhupada and Gauranga