ನಾನು ನರ್ಸರಿಯಲ್ಲಿದ್ದಾಗ "ಜೇಡರಬಲೆ ಜಯಂತಿ @&@, ರಾಜ್ಕುಮಾರ್ ಕಲೆ, ನರಸಿಂಹರಾಜ ತಲೆ" ಎಂಬ ಶಿಶುಗೀತೆ ಹಾಡುತ್ತಿದ್ದೆವು.
ಮಾಸ್ಟರ್ ಡಿಗ್ರಿ ಸಮಯದಲ್ಲಿ "ಯಾರಿವಳು ಯಾರಿವಳು ಸೂಜಿಮಲ್ಲಿ t@££ವಳು, ರಾಮನಳ್ಳಿ ತೋಟದಲ್ಲಿ ಲಂಗ ಎತ್ತಿ ನಿಂತವಳು ಓ ಓ ಓ..."ಎಂದು ಹಾಡುತ್ತಿದ್ದೆವು.
ಈ ಎರಡೂ ಆಶುಅಣಕುಗಳ ನಡುವೆ ಆಗಿಹೋದ ಖ್ಯಾತ ಪದ್ಯ, ಗೀತೆಗಳ ಅಣಕಗಳು ಅಸಂಖ್ಯ! ಆ ಕಾಲದಲ್ಲಿ ಬಾಯಿಂದ ಬಾಯಿಗೆ ಹರಡಿದ್ದ ಈ ಪದ್ಯಗಳನ್ನು ಅಂದು ಫೇಸ್ಬುಕ್ ಇದ್ದಿದ್ದರೆ ಅವುಗಳನ್ನು ಆಲ್ಲಿ ಹಾಕಿಯೇ ಹಾಕುತ್ತಿದ್ದೆವು. ಹಾಂ, ಇಲ್ಲಿ ಆ ಗೀತೆಗಳ ಲೇವಡಿಯಾಗಲಿ, ವಿಡಂಬನೆಯನ್ನಾಗಲಿ ಮಾಡದೆ ಕೇವಲ ಜನಪ್ರಿಯ ಗೀತೆಯ ಧಾಟಿಯನ್ನು, ಶೈಲಿಯನ್ನು ನಕಲು ಮಾಡಲಾಗಿತ್ತು ಅಷ್ಟೇ ಎಂಬುದು ಒಂದು ಸಾಮಾನ್ಯ ತಿಳಿವಳಿಕೆ. ಅದಕ್ಕಿಂತ ಹೆಚ್ಚು ಎಂದು ನೀವು ಆಲೋಚಿಸಿದರೆ ನೀವು ಅತ್ಯಂತ ಸೃಜನಶೀಲರು!
ಹಾಗೆ ಹಾಕಿದ್ದ ಮಾತ್ರಕ್ಕೆ ನಾನು ಚುನಾವಣೆಗೆ ನಿಲ್ಲಬಾರದು, ಸಾರ್ವಜನಿಕ ಹುದ್ದೆಗೆ ನೇಮಕಾತಿ ಪಡೆಯಬಾರದು, ಅಮೆರಿಕೆಗೆ ಹೋಗುವ ಹಕ್ಕಿಲ್ಲ, ಹುಯೆನ್ ತ್ಸಾಂಗ್ ಬಗ್ಗೆ ಬರೆಯಬಾರದು, ಭಾರತ ಮರುಶೋಧನೆ ಮಾಡಬಾರದು, ಬಸವರಾಜಕಾರಣ ಕೆತ್ತಬಾರದು, ಇವನಿಗೆ ಪ್ರಶಸ್ತಿ ಕೊಡಬಾರದು ಎಂಬುದು ಎಷ್ಟು ಕ್ಷುಲ್ಲಕವೋ ಅಷ್ಟೇ ಕ್ಷುಲ್ಲಕ ನಾಡಗೀತೆಯ ಶೈಲಿಯನ್ನು ಜೋಕಾಗಿ ಬಳಸಬಾರದು. ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಪ್ರಶ್ನಾತೀತರು ಎಂದು ಷರಾ ಬರೆಯುವುದು ಸಹ. ಇವರೆಲ್ಲರೂ ಕೇವಲ ಮಾನವರು ಮತ್ತು ವಿಶ್ವಮಾನವರು ಆದರೆ ಖಂಡಿತವಾಗಿ ದೇವಮಾನವರಲ್ಲ! ದೇವರೆನಿಸಿದ ರಾಮ, ಕೃಷ್ಣ, ಶಿವ, ಯೇಸು, ಅಬ್ರಹಾಂ ಹೇಗೆ ವಿಮರ್ಶೆಗೆ ದಕ್ಕುವರೋ ಅಷ್ಟೇ ದಕ್ಕಲರ್ಹ ಬುದ್ಧ, ಬಸವ, ಅಂಬೇಡ್ಕರ್, ಮತ್ತು ಕುವೆಂಪು!
ಗಿಡ್ಡೆಗೌಡ, ಸಿಂಗಾರಿಗೌಡ ಎಂಬುವವರ ನೇಮಕಾತಿಯಲ್ಲಿ ಅವರ ಹೆಸರುಗಳನ್ನು ಬದಲಾಯಿಸಿ ಜಾತೀಯತೆ ತೋರಿದರು ಎಂಬ ಆರೋಪ ಕುವೆಂಪು ಅವರ ಮೇಲೆ ಆ ಕಾಲದಲ್ಲಿ ಬಂದಿತ್ತು. ಕ್ರಿಮಿನಲ್ ಶಿಕ್ಷೆಗೆ ಒಳಗಾಗಿರುವವರು ಚುನಾವಣೆಗೆ ನಿಲ್ಲಬಾರದೆಂಬ ಅಂಬೇಡ್ಕರರ ಸಂವಿಧಾನಕ್ಕೆ ವಿರುದ್ಧವಾಗಿ ಕ್ರಿಮಿನಲ್ಲುಗಳು ಸಾಲು ಸಾಲು ಗೆದ್ದು ಬರುತ್ತಿರುವಂತಹ ಬಹುಪತ್ನಿತ್ವದ ಶಾಸಕರು, ಅಧಿಕಾರಿಗಳ ಸಂವಿಧಾನಿಕ ದ್ವಂದ್ವಗಳು ಭಾರತೀಯ ಶಾಸಕಾಂಗ, ನ್ಯಾಯಾಂಗದೆಲ್ಲೆಡೆ ಢಾಳಾಗಿ ಕಾಣಿಸುತ್ತಿವೆ. ಬಸವಣ್ಣನ ದ್ವಂದ್ವಗಳು ಅವನ ವಚನಗಳಲ್ಲೇ ಸಾಕಷ್ಟಿವೆ. ಹೀಗಿದ್ದಾಗ ಕೇವಲ Hegemony ಕಾರಣದಿಂದ ಈಗ ಇವರುಗಳನ್ನು ದೇವರಾಗಿಸಿರುವುದು ಯಾವ ವೈಚಾರಿಕ ಉನ್ನತಿ ಎಂದು ವಿಚಾರವಂತರು ಹೇಳಬಲ್ಲರು! They came, they saw, they conquered, and they're gone! Let's move on.
ಇನ್ನು ಇಂದಿನ ಪಠ್ಯ ಪರಿಷ್ಕರಣಾ ಸಮಿತಿಯ ಅಧ್ಯಕ್ಷ porn ಬಗ್ಗೆ ಜೋಕು ಮಾಡಿದ್ದ ಎಂದು ಅವನನ್ನು ಹೀಯಾಳಿಸುವವರ ಪಡೆಯ ಅಧ್ಯಕ್ಷ ಗವ್ಡ ನಿಷೇಧಕ್ಕೊಳಪಟ್ಟ ರತಿವಿಜ್ಞಾನ ಸುರತಿಗಳನ್ನು ಫೇಸ್ಬುಕ್ಕಿನ ಮಹರ್ಷಿ ವಾತ್ಸಾಯನ ಪೇಜಿನಲ್ಲಿ ಮರುಸೃಷ್ಟಿಸಿರುವ ಮಹಾತ್ಮನಲ್ಲದೆ ಚಂದ್ರಿಕಾ, ಭಾವನಾ ಎಂದು ಹೆಸರೆತ್ತಿ ಹಲುಬುತ್ತ ಜೊಲ್ಲು ಸುರಿಸುವುದೂ ಅಷ್ಟೇ ಸತ್ಯ. ಇದಕ್ಕೆ ಲಂಕೇಶ್, ಬೆಳಗೆರೆ ಅವರಂತಹ ಪೋಲಿ ಜೋಕ್ - ಜಾಲಿ ಲೈಫ್ ಪ್ರಭಾವ ಒಂದು ಪೀಳಿಗೆಯ ಮೇಲೆ ಪ್ರಭಾವಿಸಿರುವುದೂ ಅಷ್ಟೇ ಸತ್ಯ. ಇದಕ್ಕೆ ಪುಸ್ತಕ ಪರಿಷ್ಕರಣೆ ಅಧ್ಯಕ್ಷ ಸಹ ಹೊರತಲ್ಲ ಹಾಗೆಯೇ ಅವನ ವಿರೋಧಿ ಬಣ ಸಹ. ಪರಿಷ್ಕರಣಾ ಸಮಿತಿಯ ಅಧ್ಯಕ್ಷಗಿರಿ ಯಾವುದೋ ಮಠದ ಬ್ರಹ್ಮಚಾರಿ ಪೀಠವಲ್ಲ, ಅದೊಂದು ಸರ್ವಶಕ್ತ ಸದಸ್ಯರುಗಳ ಕಮಿಟಿಯ ಅಲಂಕಾರಿಕ ಹುದ್ದೆ ಮಾತ್ರ. ಸ್ಪಷ್ಟವಾಗಿ ಹೇಳಬೇಕೆಂದರೆ ಯಾವುದೋ ಘನಂದಾರಿ ಕೆಲಸವನ್ನು ಇವರುಗಳು ಆಡಳಿತ ಪಕ್ಷಕ್ಕೆ ಮಾಡಿಕೊಟ್ಟಿದ್ದಕ್ಕೆ ಕೊಟ್ಟ ಋಣ ಸಂದಾಯ!
ವಿಪರ್ಯಾಸವೆಂದರೆ ಅಧ್ಯಕ್ಷನ ಹಳೆಯ ಪೋಸ್ಟ್ಗಳ ಕುರಿತು ಸಂಪ್ರದಾಯಬದ್ಧ ಮಡಿವಂತಿಕೆ ತೋರುತ್ತಿರುವವರು ಉದಾರವಾದದ ಮುಖವಾಡ ತೊಟ್ಟಿರುವುದು!!! ಇಂತಹ ಮುಖೇಡಿಗಳೂ ಸಹ ಸಮಾಜಕ್ಕೆ ಮೂಲಭೂತವಾದಿಗಳಷ್ಟೇ ಅಪಾಯಕಾರಿ. ಇಂತಹ ಪ್ರಚ್ಛನ್ನ ಮೂಲಭೂತವಾದಿಗಳ ಗುರಾಣಿ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಆಗಿದ್ದಾರೆ ಎಂಬುದು ಅತ್ಯಂತ ಕಳವಳಕಾರಿ ಸಂಗತಿ.
ಇರಲಿ, ಹೋರಾಟ ಸತ್ಯ, ತರ್ಕದ ಭದ್ರ ನೆಲೆಯಲ್ಲಿರಬೇಕು, ಪಂಥದ ಟ್ರೋಲಿನ ತೀಟೆಯಲ್ಲಂತೂ ಅಲ್ಲವೇ ಅಲ್ಲ!
ಮರುಳುಂಡ ಮನುಷ್ಯನ ಇರವಿನ ಪರಿಯಂತೆ,
ವಿವರವನರಿಯಬಾರದು ನೋಡಾ, ಶಿವಜ್ಞಾನ.
ಅದನರಿದೆಹೆನರಿದೆಹೆನೆಂದು ನೆನೆಯ ಹೋದರೆ, ಅದು ಮುಂದುದೋರದು.
ಮರೆದೆಹೆನೆಂದು ಭಾವಿಸ ಹೋದಡೆ ತೆರಹುಗೊಡದು!
ಗುಹೇಶ್ವರಾ, ನಿಮ್ಮ ನೆರೆ ಅರಿದ ಶರಣರು;
ನಿಸ್ಸೀಮಸುಖಿಗಳು ನೋಡಾ.
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ
No comments:
Post a Comment