ಮಾಂಸಭಕ್ಷಕ ಕ್ರೂರಮೃಗಗಳಿಂದ ಸಸ್ಯಾಹಾರಿ ಸೌಮ್ಯ ಪ್ರಾಣಿಗಳವರೆಗಿನ ಬಹುಪಾಲು ಪ್ರಾಣಿಗಳು ಪರಸ್ಪರರ ಹಿಂಬದಿ ಮೂಸಿ ಕೆಲವೊಮ್ಮೆ ಉತ್ತೇಜಿಸಿ ಮೂತ್ರಿಸುವಂತೆ ಮಾಡಿ ಆ ತಾಜಾ ಮೂತ್ರವನ್ನು ಕುಡಿಯುತ್ತವೆ. ಅದರಲ್ಲೂ ಕಾಮಕ್ರೀಡೆಯ ಸಮಯದಲ್ಲಂತೂ ಬಾಯಿಯನ್ನು ಕೀಲಿಸಿ ಹಲ್ಲುಗಳನ್ನು ತೋರುತ್ತಾ ಮೂತ್ರವನ್ನು ಸೇವಿಸುವುದನ್ನು ನೀವು ನೋಡಿರಬಹುದು. ಕೆಲವು ಪ್ರಾಣಿಗಳಂತೂ ಕಷ್ಟಪಟ್ಟು ತಮ್ಮ ದೇಹವನ್ನು ಮಣಿಸಿ ಸ್ವಮೂತ್ರಪಾನವನ್ನೇ ಮಾಡುತ್ತವೆ.
ಸುನಾಮಿ, ಭೂಕಂಪದಂತಹ ಅವಘಡಗಳನ್ನು ಮುಂದಾಗಿಯೇ ಗ್ರಹಿಸುವ ಪ್ರಾಣಿಗಳ ಹುಟ್ಟುಗುಣ ಯಾನೆ instinct ಬಗ್ಗೆ ಸಾಕಷ್ಟು ಸಂಶೋಧಕರು ಪರೀಕ್ಷಿಸಿ ಪ್ರಮಾಣಿಸಿದ್ದಾರೆ. ಹಾಗಾಗಿ ಪ್ರಾಣಿಗಳ ಮೂತ್ರಪಾನವನ್ನು ಚಕಿತರಾಗಿ ಕಂಡ ಆದಿಮರು ಸಂಶೋಧಿಸಿ ಆ ಪ್ರಾಣಿಗಳು ರೋಗಗ್ರಸ್ಥವಾಗಿದ್ದಾಗ ಔಷಧಿಯಾಗಿ ಮತ್ತು ಕಾಮೋತ್ತೇಜಕವಾಗಿ ತಾವೂ ಈ ಪದ್ಧತಿಯನ್ನು ಅಳವಡಿಸಿಕೊಂಡು ಆರೋಗ್ಯವನ್ನು ಮತ್ತು ಸೃಷ್ಟಿಜನಕ ಫಲವತ್ತತೆಯನ್ನು ಕಂಡುಕೊಂಡರು.
ಹೀಗೆ ಈ ಅನುಪಮ ಆರೋಗ್ಯದ ಚಿಲುಮೆಯ ಬಗ್ಗೆ ಸಂಗ್ರಹಕಾರ ಮತ್ತು ಪಶುಪಾಲಕ ಮೂಲಮಾನವ ಜನಾಂಗವು ಅರಿತುಕೊಂಡು ಅಂದಿನಿಂದ ಇಂದಿನ ವರ್ತಮಾನದವರೆಗೆ ಶಿಶುಗಳ ಅಪೌಷ್ಠಿಕತೆಯಿಂದ ಮುಪ್ಪಿನ ಜಡಮೂಳೆಗಳಿಗೆ ಸಂಚೇತನ ಮೂಡಿಸುವ ದಿವ್ಯ ಔಷಧವಾಗಿ ಬಳಸುತ್ತ ಬಂದಿದೆ.
ಇದು ಭಾರತೀಯ ವೈದ್ಯಪದ್ದತಿಯಲ್ಲಿ ಬಳಕೆಯಾದದ್ದು ಅತ್ಯಂತ ಕಡಿಮೆ. ಆದರೆ ಜಾಗತಿಕವಾಗಿ ಯುರೋಪ್, ರಷ್ಯಾ, ಆಫ್ರಿಕಾ, ಚೈನಾ ದೇಶಗಳಲ್ಲಿ ಹೆಚ್ಚು ಪ್ರಚಲಿತವಿದ್ದ/ವಿರುವ ವೈದ್ಯಪದ್ಧತಿ! ಅದರಲ್ಲೂ ಈ ಪದ್ಧತಿಯನ್ನು ಹೆಚ್ಚು ಅಳವಡಿಸಿಕೊಂಡವರು ರಷ್ಯನ್ ಕಾಮ್ಯುನಿಸ್ಟರು ಮತ್ತು ಆದಿಮ ಸಂಸ್ಕೃತಿಯ ಆಫ್ರಿಕನ್ ದೇಶಗಳು! ಕಮ್ಯುನಿಸ್ಟ್ ಸೈನಿಕರಂತೂ ಸ್ವಮೂತ್ರಪಾನ ಮಾಡಿ ಕಾಮೋತ್ತೇಜನಗೊಂಡು ಬೂಟುಗಳನ್ನು ಬಿಚ್ಚದೆ ಪ್ಯಾಂಟನ್ನು ಹಾಗೆಯೇ ಕೆಳಗೆ ಮಾಡಿ ರತಿಕ್ರೀಡೆಯಲ್ಲಿ ತೊಡಗಿಬಿಡುತ್ತಿದ್ದರು ಎಂದು ಸಾಕಷ್ಟು ಭೂಗತ ಕತೆಗಳು ಹೇಳುತ್ತವೆ. ಆದಿಮ ಪದ್ಧತಿಯ ಆಫ್ರಿಕಾದಲ್ಲಂತೂ ಆರೋಗ್ಯವಂತರ ಪರಮೂತ್ರವನ್ನೂ ಸೇವಿಸುತ್ತಾರೆ. ಯುರೋಪಿನಲ್ಲಿ ಮೂತ್ರಪಾನ ಕ್ಲಬ್ಬುಗಳಿವೆ.
ಹೀಗಿದ್ದಾಗ ವಿಶ್ವಗುರು ಎಂದಾದ ಭಾರತ ಇಂತಹ ಚೈತನ್ಯದ ಚಿಲುಮೆಯನ್ನು ಕಂಡುಕೊಳ್ಳಲೇಬೇಕು ತಾನೇ!?!
ಆದರೆ ವಿಚಿತ್ರವೆಂಬಂತೆ ಈ ಪದ್ಧತಿಯನ್ನು ಭಾರತೀಯ ಎಡರಂಗ, ದ್ರಾವಿಡ/ನೆಲಮೂಲ/ಆದಿಮವೆನ್ನುವ ಬುದ್ಧಿಜೀವಿಗಳು ತಮ್ಮದೇ ನೆಲಮೂಲ/ಆದಿಮ/ಕಮ್ಯುನಿಸ್ಟ್ ಮೂಲದ ವೈದ್ಯಪದ್ಧತಿಗೆ ಏಕೆ ಆರ್ಯಕೃತ್ರಿಮವೆಂದು ವಿರೋಧಿಸುತ್ತಿದೆ?!?
ಇಲ್ಲಿಯವರೆಗೆ ಇದು ತಮಾಷೆಯ ಲೇಖನ ಎಂದು ನೀವು ಓದುತ್ತಿದ್ದರೆ, ಅದು ತಪ್ಪು! ಇದು ನಗುವ ವಿಷಯ ಖಂಡಿತ ಅಲ್ಲ, ಸೀರಿಯಸ್ ಮ್ಯಾಟರ್! ಕೇವಲ ವಿಕಿಪೀಡಿಯಾದಲ್ಲಿ ನೋಡಿ, ಹೀಗಿದೆ.
https://en.m.wikipedia.org/wiki/Urine_therapy
ಇನ್ನು ಈ ವಿಷಯದ ಬಗ್ಗೆ ಐವತ್ತು ಪಿಹೆಚ್ಡಿ ಮಾಡುವಷ್ಟು ರಷ್ಯಾ, ಇಟಲಿ, ಆಫ್ರಿಕಾ, ಸ್ವೀಡನ್ ವಿಶ್ವವಿದ್ಯಾಲಯಗಳ ಶ್ವೇತಪತ್ರಗಳು ನನ್ನ ಬಳಿ ಇವೆ.
ಏಕೆಂದರೆ ಭರತಖಂಡದ ಕರುನಾಡಿನ ಕನ್ನಡ ವಿಶ್ವವಿದ್ಯಾಲಯದ ಸ್ನಾತಕೋತ್ತರ, ಪಿಹೆಚ್ಡಿ, ಪೋಸ್ಟ್ ಡಾಕ್ಟೋರಲ್ ಜನ ಕನ್ನಡ ಬಿಟ್ಟು ಸೂರ್ಯಮಂಡಲದಲ್ಲಿರುವ ಎಲ್ಲಾ ವಿಷಯಗಳಲ್ಲೂ ಪರಿಣಿತರಾಗಿದ್ದು ತಾವೇ ಅಥಾರಿಟಿ ಎಂದು ಎಲ್ಲದಕ್ಕೂ ಅರ್ಜಿ, ಪರೀಕ್ಷೆ, ಪುರಾವೆ ಕೇಳಿ ಕೊಟ್ಟ ಮೇಲೆಯೂ ಅನುತ್ತೀರ್ಣಿಸುತ್ತಾರೆ. ಹಾಗಾಗಿ ಪುರಾವೆ ಬೇಕಾದವರು ನೂರು ಡಾಲರ್ ಫೀಸು ಕಟ್ಟಿದರೆ ಮಾತ್ರ ಕೊಡಲಾಗುವುದು.
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ
No comments:
Post a Comment